ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಥಾಯ್ಲೆಂಡ್
“ಸ್ವತಂತ್ರರ ದೇಶ.” ಅದು ಥಾಯ್ಲೆಂಡ್ ಎಂಬ ಹೆಸರಿನ ಅರ್ಥವಾಗಿದೆ. ವಿಭಿನ್ನ ಧಾರ್ಮಿಕ ವಿಚಾರಗಳು, ಅದರ ಸೌಮ್ಯರಾದ, ಕಷ್ಟಪಟ್ಟು ಶ್ರಮಿಸುವ 5,70,00,000 ಕ್ಕಿಂತಲೂ ಅಧಿಕ ನಿವಾಸಿಗಳಿಂದ ಆಚರಿಸಲ್ಪಡುತ್ತವೆ. ಬೌದ್ಧ ಮತವು ಪ್ರಬಲವಾಗಿರುವುದಾದರೂ, ಈ ಆಗ್ನೇಯ ಏಷಿಯನ್ ದೇಶದಲ್ಲಿ ಕ್ರೈಸ್ತಪ್ರಪಂಚದ ಧರ್ಮಗಳನ್ನು ಕೂಡ ಆಚರಿಸಲಾಗುತ್ತದೆ. ದೇವರ ರಾಜ್ಯದ ಸುವಾರ್ತೆಯನ್ನು ಈ ಎಲ್ಲ ಜನರು ಕೇಳುವ ಅಗತ್ಯವಿದೆ.—ಮತ್ತಾಯ 24:14.a
ನಿರಾಶ್ರಿತರು ಸುವಾರ್ತೆಯನ್ನು ಕೇಳುತ್ತಾರೆ
ಮ್ಯಾನ್ಮಾರ್ ಮೇರೆಯ ಉದ್ದಕ್ಕೂ ಥಾಯ್ಲೆಂಡ್ನ ಬೆಟ್ಟಗಳಲ್ಲಿ ಹರಡಿರುವ ಗುಡಾರಗಳಲ್ಲಿ, 10,000 ಕ್ಕಿಂತಲೂ ಅಧಿಕವಾಗಿರುವ ಕರನ್ ಆಶ್ರಿತರಲ್ಲಿ ಬೈಬಲ್ ಸತ್ಯವು ಮುಂದುವರಿಯುತ್ತಿದೆ. ಆ ಪ್ರದೇಶದಲ್ಲಿ ಜೀವಿಸುತ್ತಿರುವ ಒಂದು ಕರನ್ ಕುಟುಂಬದ ಸದಸ್ಯರು ಯೆಹೋವನ ಸಾಕ್ಷಿಗಳಾಗಿದ್ದಾರೆ. ಅವರು ಆಶ್ರಿತರ ಮಧ್ಯದಲ್ಲಿ ಸುವಾರ್ತೆಯನ್ನು ಹರಡುತ್ತಿದ್ದಾರೆ. ಅವರ ಕೆಲಸವು ಹೇಗೆ ಆರಂಭಗೊಂಡಿತು?
ಹಲವಾರು ವರ್ಷಗಳ ಹಿಂದೆ, ಒಬ್ಬ ಯೌವನಸ್ಥನು ಆ್ಯಂಗ್ಲಿಕನ್ ಚರ್ಚಿನೊಂದಿಗೆ ತನ್ನ ಸಂಬಂಧಗಳನ್ನು ಕಡಿದನು ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದನು. ಅವರ ಪಾದ್ರಿಯ ಮೂಲಕ ಉದ್ರೇಕಿಸಲ್ಪಟ್ಟ ಅವನ ಸಂಬಂಧಿಕರು, ಅವನನ್ನು ವಿರೋಧಿಸಿದರು. ಹಾಗಿದ್ದರೂ, ಅವನು ತಾಳ್ಮೆಯಿಂದ ಸಹಿಸಿಕೊಂಡನು, ಮತ್ತು ಅವನ ಕುಟುಂಬದ ವಿರೋಧವು ಕ್ರಮೇಣವಾಗಿ ಶಾಂತವಾಯಿತು. ಅನೈತಿಕ ನಡತೆಯಿಂದಾಗಿ ಆ್ಯಂಗ್ಲಿಕನ್ ಚರ್ಚಿನ ಪಾದ್ರಿಗಳನ್ನು ಅವರ ಸ್ಥಾನದಿಂದ ಎರಡು ವರ್ಷಗಳ ಹಿಂದೆ ತೆಗೆದುಹಾಕುವ ತನಕ ಅವರು ತಮ್ಮ ಅಪಹಾಸ್ಯವನ್ನು ಮುಂದುವರಿಸಿದರು. ಚರ್ಚಿಗೆ ಆಗ ಒಬ್ಬ ಕುರುಬನಿಲ್ಲದೆ ಇದ್ದ ಕಾರಣ, ಸಾಕ್ಷಿಯ ಕುಟುಂಬದವರು ಮತ್ತು ಇತರ ಸಂಬಂಧಿಕರು ಗಾಬರಿಗೊಂಡರು ಮತ್ತು ದಿಕ್ಕಿಲ್ಲದವರಂತಾದರು. ಅವರಲ್ಲಿ ಹನ್ನೊಂದು ಜನರು ಚರ್ಚಿಗೆ ರಾಜಿನಾಮೆ ಕೊಟ್ಟರು ಮತ್ತು ತಮ್ಮೊಂದಿಗೆ ಅಭ್ಯಾಸ ಮಾಡುವಂತೆ ಸಾಕ್ಷಿಗಳನ್ನು ಕೇಳಿಕೊಂಡರು!
ಇತರ ಆಶ್ರಿತರು ಭಾಗವಹಿಸುವುದರೊಂದಿಗೆ, ಈ ಅಭ್ಯಾಸವು ಚೆನ್ನಾಗಿ ಪ್ರಗತಿ ಹೊಂದಿತು. ಆಶ್ರಯ ಶಿಬಿರದ ಮಧ್ಯದಲ್ಲಿ ಹರಿಯುವ ನದಿಯಲ್ಲಿ 17 ಹೊಸ ಸಾಕ್ಷಿಗಳ ದೀಕ್ಷಾಸ್ನಾನವನ್ನು ಫಲಿಸುತ್ತಾ, ಸತ್ಯವು ಬಹಳ ಬೇಗನೆ ಹರಡಿತು. ಅವರೊಂದಿಗೆ 88 ವರ್ಷ ವಯಸ್ಸಿನ ಒಬ್ಬಾಕೆ ಅಜಿಯ್ಜೂ ನಿಮಜ್ಜನ ಪಡೆದಾಗ, ಅದೆಂತಹ ಸಂತೋಷಕರ ದೃಶ್ಯವಾಗಿತ್ತು!
ವಿಡಿಯೊ ಆಸಕ್ತಿಯನ್ನು ಕೆರಳಿಸುತ್ತದೆ
ಆಶ್ರಿತರ ಮಧ್ಯದಲ್ಲಿ ಬೆಳವಣಿಗೆಗಾಗಿರುವ ಸಂಭಾವನೆಯು ಅಧಿಕವಾಗಿದೆ. ಇಸವಿ 1993 ರಲ್ಲಿ ಜರುಗಿದ ಜ್ಞಾಪಕಾಚರಣೆಯಲ್ಲಿ, 57 ಜನರು ಹಾಜರಿದ್ದರು. ಆ ವರ್ಷದ ಮೇ ತಿಂಗಳಿನಲ್ಲಿ ನಡೆದ ಸರ್ಕಿಟ್ ಮೇಲ್ವಿಚಾರಕನ ಸಂದರ್ಶನದ ಸಮಯದಲ್ಲಿ, ಅವನ ಭಾಷಣಗಳಲ್ಲಿ ಒಂದಕ್ಕೆ 67 ಜನರು ಕೂಡಿಬಂದರು. ಮತ್ತು ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದುಗಡೆಯಲ್ಲಿರುವ ಸಂಸ್ಥೆ [ಇಂಗ್ಲಿಷ್ನಲ್ಲಿ] ಎಂಬ ವಾಚ್ಟವರ್ ಸೊಸೈಟಿಯ ವಿಡಿಯೊವನ್ನು ನೋಡಲು ಸುಮಾರು 250 ಜನರು ನೆರೆದು ಬಂದರು.
ಆಶ್ರಿತ ಶಿಬಿರದಲ್ಲಿದ್ದ ಬ್ಯಾಪ್ಟಿಸ್ಟ್ ಧರ್ಮಾಧಿಕಾರಿಯ ಹೆಂಡತಿಯು, ಸಾಕ್ಷಿಗಳ ಮೂಲಕ ನಡೆಸಲ್ಪಟ್ಟ ಒಂದು ಸಾರ್ವಜನಿಕ ಬೈಬಲ್ ಭಾಷಣಕ್ಕೆ ಹಾಜರಾದಳು ಮತ್ತು ಚರ್ಚಿಸಲ್ಪಟ್ಟ ಬೈಬಲ್ ವಚನಗಳನ್ನು ಬರೆದಿಟ್ಟುಕೊಂಡಳು. ತಮ್ಮ ಚರ್ಚಿನಲ್ಲಿ ಕೇಳಲ್ಪಡುವ ಪುನರಾವೃತ್ತಿಸುವ ಪ್ರಸಂಗಗಳಿಂದ ತಾನೆಷ್ಟು ಅತೃಪಿಗ್ತೊಂಡಿದ್ದೇನೆಂದು ಆಕೆ ತನ್ನ ಗಂಡನಿಗೆ ಹೇಳಿದಳು. ಅವಳು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗುವುದಾದರೆ, ಇತರ ಎಲ್ಲ ಪ್ರಾಂತ ನಿವಾಸಿಗಳು ಸಹ ಹಿಂಬಾಲಿಸುವರೆಂದು ಹೇಳುತ್ತಾ, ಅವನು ಆಕ್ಷೇಪಿಸಿದನು. ಅವಳು ಪುನಃ ಕೂಟಗಳನ್ನು ಹಾಜರಾದಾಗ, ಒಂದು ಕತ್ತಿಯೊಂದಿಗೆ ಅವಳನ್ನು ಗಂಡನು ಬೆನ್ನಟ್ಟಿದನು ಮತ್ತು ಅವಳ ಕೂಟದ ಟಿಪ್ಪಣಿಗಳನ್ನು ಹಾಗೂ ಬೈಬಲ್ ಸಾಹಿತ್ಯವನ್ನು ಸುಟ್ಟುಬಿಟ್ಟನು. ಅದರ ಹೊರತೂ, ವಿಡಿಯೊವನ್ನು ತೋರಿಸಲಾದಾಗ, ಅವಳು ಪುನಃ ಬಂದಳು. ತದನಂತರ ಈ ಹೆಂಗಸು ಅವಳು ನೋಡಿದ್ದನ್ನು ತನ್ನ ಗಂಡನಿಗೆ ಹೇಳಿದಳು. ಒಂದು ಬದಲಾದ ಹೃದಯದೊಂದಿಗೆ ವಿಡಿಯೊವನ್ನು ನೋಡಲು ಅವನು ಬಯಸಿದನು ಮತ್ತು ಅವಳ ಟಿಪ್ಪಣಿಗಳನ್ನು ಹಾಗೂ ಬೈಬಲ್ ಸಾಹಿತ್ಯವನ್ನು ಸುಟ್ಟದ್ದಕ್ಕಾಗಿ ಅವನು ವಿಷಾದಿಸಿದನು.
ಆದುದರಿಂದ ಥಾಯ್ಲೆಂಡ್ನಲ್ಲಿ ಜನರು ಸುವಾರ್ತೆಯನ್ನು ಕೇಳುತ್ತಿದ್ದಾರೆಂಬುದು ಸತ್ಯ. ಹೀಗೆ ಅವರು “ಸ್ವತಂತ್ರರ ದೇಶ” ದಲ್ಲಿ ಆತ್ಮಿಕ ಸ್ವಾತಂತ್ರ್ಯವನ್ನೂ ಪಡೆಯುತ್ತಿದ್ದಾರೆ.—ಯೋಹಾನ 8:32.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, 1994 ಕ್ಯಾಲೆಂಡರ್ ಆಫ್ ಜಿಹೋವಾಸ್ ವಿಟ್ನೆಸಸ್ ನೋಡಿ.
[ಪುಟ 24 ರಲ್ಲಿರುವ ಚೌಕ]
ದೇಶದ ಪಾರ್ಶ್ವ ದೃಶ್ಯ ಇಸವಿ 1993ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 1,434
ಪ್ರಮಾಣ: 1 ಸಾಕ್ಷಿಗೆ 40,299
ಜ್ಞಾಪಕ ಹಾಜರಿ: 3,342
ಸರಾಸರಿ ಪಯನೀಯರ್ ಪ್ರಚಾರಕರು: 232
ಸರಾಸರಿ ಬೈಬಲ್ ಅಧ್ಯಯನಗಳು: 1,489
ದೀಕ್ಷಾಸ್ನಾನ ಪಡೆದವರು: 92
ಸಭೆಗಳ ಸಂಖ್ಯೆ: 39
ಶಾಖಾ ಆಫೀಸ್: ಬ್ಯಾಂಗ್ಕಾಕ್
[ಪುಟ 25 ರಲ್ಲಿರುವ ಚಿತ್ರ]
ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಿರುವ ರಾಜ್ಯ ಘೋಷಕರು
[ಪುಟ 25 ರಲ್ಲಿರುವ ಚಿತ್ರ]
ಪ್ರಥಮ ಶಾಖಾ ಆಫೀಸ್, 1947
[ಪುಟ 25 ರಲ್ಲಿರುವ ಚಿತ್ರ]
ಬ್ಯಾಂಗ್ಕಾಕ್ನಲ್ಲಿ ಫೆಬ್ರವರಿ 8, 1992 ರಂದು ಸಮರ್ಪಿಸಲ್ಪಟ್ಟ ಹೊಸ ಬ್ರಾಂಚ್ ಆಫೀಸಿನ ಎದುರಿನಲ್ಲಿ ಬೆತೆಲ್ ಕುಟುಂಬ