“ಯೇಸು ಕ್ರಿಸ್ತನು ಕರ್ತನಾಗಿದ್ದಾನೆ” ಹೇಗೆ ಮತ್ತು ಯಾವಾಗ?
“ಕರ್ತನು ನನ್ನ ಕರ್ತನಿಗೆ, ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದ ಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು.” ಇದು ಕಿಂಗ್ ಜೇಮ್ಸ್ ವಷನ್ಗನುಸಾರ ಕೀರ್ತನೆ 110:1ರ ಭಾಷಾಂತರವಾಗಿದೆ. ಇಲ್ಲಿ “ಕರ್ತನು” ಯಾರಾಗಿದ್ದಾನೆ, ಮತ್ತು ಆತನು ಯಾರೊಂದಿಗೆ ಮಾತಾಡುತ್ತಾನೆ?
ಹೀಬ್ರು ಮೂಲ ಪಾಠದ ಹೆಚ್ಚು ನಿಷ್ಕೃಷ್ಟ ಭಾಷಾಂತರವು ಮೊದಲ ಪ್ರಶ್ನೆಯನ್ನು ಬೇಗನೆ ಉತ್ತರಿಸುತ್ತದೆ. “ಯೆಹೋವನು ನನ್ನ ಒಡೆಯನಿಗೆ ಹೇಳುವುದು: . . . ” ಹೀಗೆ, ದಪ್ಪಕ್ಷರಗಳ “ಕರ್ತನು” ಎಂಬ ಪದವು ಸರ್ವಶಕ್ತ ದೇವರಾದ ಯೆಹೋವನನ್ನು ಸೂಚಿಸುತ್ತದೆ. ಕಿಂಗ್ ಜೇಮ್ಸ್ ವಷನ್ “ಕರ್ತನು” ಎಂಬುದನ್ನು “ಕರ್ತನು” ಎಂಬ ಪದಕ್ಕೆ ವಿರುದ್ಧವಾಗಿ ಉಪಯೋಗಿಸುವುದರ ಮೂಲಕ ದೈವಿಕ ನಾಮವನ್ನು ಒಪ್ಪಿಕೊಳ್ಳುವುದಾದರೂ, ಬಿರುದುಗಳ ಈ ಗಲಿಬಿಲಿಯನ್ನು ಹೊಂದುವುದರಲ್ಲಿ ಅದು ಮೊದಲಿನದ್ದಾಗಿರುವುದಿಲ್ಲ, ಯಾಕಂದರೆ ಹೀಬ್ರು ಭಾಷೆಯಿಂದ ಭಾಷಾಂತರಿಸಿದ, ಪ್ರಾಚೀನ ಗ್ರೀಕ್ ಸೆಪ್ಟುಎಜಿಂಟ್, ಅದರ ಅನಂತರದ ಪ್ರತಿಗಳಲ್ಲಿ ಯೆಹೋವನಿಗೆ “ಕರ್ತನು” ಎಂದು ಬಳಸಿತು. ಯಾಕೆ? ಯಾಕಂದರೆ “ಕರ್ತ” ಎಂಬ ಬಿರುದು ದೈವಿಕ ನಾಮ—יהוה ಎಂಬ ಚತುರಕ್ಷರಿ ನಾಮ—ಕ್ಕೆ ಬದಲಿಯಾಗಿ ಹಾಕಲಾಗಿತ್ತು. ಪಂಡಿತರಾದ ಏ. ಇ. ಗಾರ್ವೀ ಹೇಳುವುದು: “ಕರ್ತ [kyʹri·os] ಎಂಬ ಬಿರುದಿನ ಬಳಕೆಯು ಅತಿ ಸುಲಭವಾಗಿ ಮತ್ತು ಯೆಹೂದಿ ಆರಾಧನಾ ಮಂದಿರದಲ್ಲಿ ಶಾಸ್ತ್ರವಚನಗಳು ಓದಲ್ಪಡುತ್ತಿದ್ದಾಗ, ನಿಬಂಧನಾ ಹೆಸರಾದ [ಯೆಹೋವ] ಯಾಹೆಯ್ವ ಬದಲಿಗೆ ಆ ಬಿರುದಿನ ಬಳಕೆಯಿಂದ ಪ್ರಾಯಶಃ ವಿವರಿಸಲಾಗುತಿತ್ತು.”
ಬೈಬಲು ಯೆಹೋವನನ್ನು “ಸಾರ್ವಭೌಮ ಕರ್ತ”ನೆಂದು ಗುರುತಿಸುತ್ತದೆ. (ಆದಿಕಾಂಡ 15:2, 8; ಅ. ಕೃತ್ಯಗಳು 4:24; ಪ್ರಕಟನೆ 6:10 NW) ಆತನು “ನಿಜ ಕರ್ತ” (NW) ಮತ್ತು “ಸರ್ವಲೋಕದ ಒಡೆಯನು” ಎಂದೂ ಕರೆಯಲ್ಪಟ್ಟಿದ್ದಾನೆ. (ವಿಮೋಚನಕಾಂಡ 23:17; ಯೆಹೋಶುವ 3:13; ಪ್ರಕಟನೆ 11:4) ಹಾಗಾದರೆ, ಕೀರ್ತನೆ 110:1ರ ಇನ್ನೊಬ್ಬ “ಕರ್ತನು” ಯಾರಾಗಿದ್ದಾನೆ, ಮತ್ತು ಅವನು ಯೆಹೋವನಿಂದ “ಕರ್ತ”ನಾಗಿ ಒಪ್ಪಿಕೊಳ್ಳಲ್ಪಡುವಂತಾದದ್ದು ಹೇಗೆ?
“ಕರ್ತ”ನಾಗಿ ಯೇಸು ಕ್ರಿಸ್ತನು
ನಾಲ್ಕು ಸುವಾರ್ತೆಗಳಲ್ಲಿ, ಲೂಕ ಮತ್ತು ಯೋಹಾನದಲ್ಲಿ ಹೆಚ್ಚು ಬಾರಿ, ಯೇಸುವಿಗೆ “ಕರ್ತ”ನೆಂದು ಸಂಬೋಧಿಸಲಾಗಿದೆ. ಸಾ.ಶ. ಮೊದಲನೇ ಶತಮಾನದಲ್ಲಿ, “ಅಯ್ಯಾ” ಪದಕ್ಕೆ ಸಮಾನಾರ್ಥವುಳ್ಳ, ಗೌರವ ಮತ್ತು ಸೌಜನ್ಯದ ಬಿರುದು ಅದಾಗಿತ್ತು. (ಯೋಹಾನ 12:21; 20:15, ಕಿಂಗ್ಡಂ ಇನರ್ಟ್ಲಿನಿಯರ್) ಮಾರ್ಕನ ಸುವಾರ್ತೆಯಲ್ಲಿ “ಗುರು” ಯಾ ರಬ್ಬೊನಿ ಎಂಬ ಪದವು, ಯೇಸುವನ್ನು ಸಂಬೋಧಿಸುವಲ್ಲಿ ಹೆಚ್ಚು ವಾಡಿಕೆಯಾಗಿ ಬಳಸಲಾಗಿದೆ. (ಮಾರ್ಕ 10:51ನ್ನು ಲೂಕ 18:41ಕ್ಕೆ ಹೋಲಿಸಿ.) ದಮಸ್ಕದ ದಾರಿಯಲ್ಲಿ “ಕರ್ತನೇ, ನೀನಾರು?” ಎಂಬ ಸೌಲನ ಪ್ರಶ್ನೆಗೂ ಲಲಿತ ವಿಚಾರದ ಅದೇ ಸಾಮಾನ್ಯ ಭಾವವಿತ್ತು. (ಅ. ಕೃತ್ಯಗಳು 9:5) ಆದರೆ ಯೇಸುವಿನ ಹಿಂಬಾಲಕರು ಅವರ ಯಜಮಾನನನ್ನು ಅರಿಯುತ್ತಾ ಬರುತ್ತಿರುವಾಗ, ಸಂಬೋಧಿಸಿದ್ದ “ಕರ್ತ” ಎಂಬ ಬಿರುದಿನ ಅವರ ಬಳಕೆಯು ಸರಳ ಗೌರವಕ್ಕಿಂತ ಬಹಳಷ್ಟು ಹೆಚ್ಚಿನದ್ದಾಗಿತ್ತೆಂದು ವ್ಯಕ್ತವಾಗುತ್ತದೆ.
ತನ್ನ ಮರಣ ಮತ್ತು ಪುನರುತ್ಥಾನವನ್ನನುಸರಿಸಿ, ತನ್ನ ಸ್ವರ್ಗಾರೋಹಣದ ಮುಂಚೆ, ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು ಮತ್ತು ಈ ಚಕಿತಗೊಳಿಸುವ ಘೋಷಣೆಯನ್ನು ಮಾಡಿದನು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.” (ಮತ್ತಾಯ 28:18) ಅನಂತರ, ಪಂಚಾಶತ್ತಮ ಹಬ್ಬದ ದಿನದಂದು, ಸುರಿಸಲ್ಪಟ್ಟ ಪವಿತ್ರಾತ್ಮದ ಪ್ರಭಾವದ ಕೆಳಗೆ, ಪೇತ್ರನು ಕೀರ್ತನೆ 110:1ನ್ನು ಉಲ್ಲೇಖಿಸಿ ಅಂದದ್ದು: “ಆದದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ಒಡೆಯನನ್ನಾಗಿಯೂ [ಕರ್ತನನ್ನಾಗಿಯೂ, NW] ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ.” (ಅ. ಕೃತ್ಯಗಳು 2:34-36) ಯಾತನಾ ಕಂಬದ ಮೇಲೆ ಒಂದು ಅಪಮಾನಕರ ಮರಣದವರೆಗೂ ಅವನ ನಂಬಿಗಸ್ತಿಕೆಯ ಕಾರಣ, ಯೇಸುವನ್ನು ಪುನರುತ್ಥಾನಗೊಳಿಸಲಾಯಿತು ಮತ್ತು ಉಚ್ಚ ಬಹುಮಾನವನ್ನು ಕೊಡಲಾಯಿತು. ಅನಂತರ ಅವನು ಸ್ವರ್ಗದಲ್ಲಿ ತನ್ನ ಒಡೆತನದೊಳಗೆ ಪ್ರವೇಶಿಸಿದನು.
ದೇವರು “ಕ್ರಿಸ್ತನನ್ನು . . . ಪರಲೋಕದೊಳಗೆ ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾದಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ತನ್ನ ಬಲಗಡೆಯಲ್ಲಿ ಕೂಡ್ರಿಸಿಕೊಂಡನು” ಎಂದು ಬರೆದಾಗ, ಅಪೊಸ್ತಲ ಪೌಲನು ಪೇತ್ರನ ಮಾತುಗಳನ್ನು ದೃಢಪಡಿಸಿದನು. (ಎಫೆಸ 1:20, 21) ಯೇಸು ಕ್ರಿಸ್ತನ ಒಡೆತನವು ಎಲ್ಲಾ ಇತರ ಒಡೆತನಗಳಿಗಿಂತ ಮೇಲಿದೆ, ಮತ್ತು ಅದು ಹೊಸ ಲೋಕದೊಳಗೂ ಮುಂದುವರಿಯುವುದು. (1 ತಿಮೊಥೆಯ 6:15) ಅವನು “ಅತ್ಯುನ್ನತ ಸ್ಥಾನಕ್ಕೆ” ಏರಿಸಲ್ಪಟ್ಟನು ಮತ್ತು ಪ್ರತಿಯೊಬ್ಬರು “ಯೇಸು ಕ್ರಿಸ್ತನನ್ನು ಒಡೆಯನೆಂದು” [ಕರ್ತನೆಂದು, NW] ಒಪ್ಪಿಕೊಂಡು “ತಂದೆಯಾದ ದೇವರಿಗೆ ಘನವನ್ನು ಸಲ್ಲಿ”ಸಬೇಕೆಂದು “ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರು” ಅವನಿಗೆ ಕೊಡಲ್ಪಟ್ಟಿತು. (ಫಿಲಿಪ್ಪಿ 2:9-11) ಹೀಗೆ ಕೀರ್ತನೆ 110:1ರ ಮೊದಲ ಭಾಗವು ನೇರವೇರಿತು, ಮತ್ತು “ದೇವದೂತರೂ ಅಧಿಕಾರಿಗಳೂ ಮತ್ತು ಮಹತ್ವಗಳೂ” ಯೇಸುವಿನ ಒಡೆತನಕ್ಕೆ ಅಧೀನವಾಗಿವೆ.—1 ಪೇತ್ರ 3:22; ಇಬ್ರಿಯ 8:1.
ಹೀಬ್ರು ಶಾಸ್ತ್ರವಚನಗಳಲ್ಲಿ, “ಕರ್ತರ ಕರ್ತನು” ಎಂಬ ಅಭಿವ್ಯಕ್ತಿಯು ಯೆಹೋವನಿಗೆ ಮಾತ್ರ ಅನ್ವಯಿಸುತ್ತದೆ. (ಧರ್ಮೋಪದೇಶಕಾಂಡ 10:17; ಕೀರ್ತನೆ 136:2, 3) ಆದರೆ ಪೇತ್ರನು ಪ್ರೇರಣೆಗೊಳಗಾಗಿ ಯೇಸು ಕ್ರಿಸ್ತನ ಬಗ್ಗೆ ಅಂದದ್ದು: “ಎಲ್ಲಾ ಜನಗಳಿಗೂ ಕರ್ತನು” ಆಗಿರುವವನು [ಯಾ, “ನಮ್ಮೆಲ್ಲರ ಕರ್ತನು,” ಗುಡ್ಸ್ಪೀಡ್].” (ಅ. ಕೃತ್ಯಗಳು 10:36) ಅವನು ಕಾರ್ಯತಃ “ಸತ್ತವರಿಗೂ ಜೀವಿಸುವವರಿಗೂ ಒಡೆಯನು [ಕರ್ತನು, NW],” ಆಗಿದ್ದಾನೆ. (ರೋಮಾಪುರ 14:8, 9) ಕ್ರೈಸ್ತರು ಯೇಸು ಕ್ರಿಸ್ತನು ಕರ್ತನು ಮತ್ತು ಒಡೆಯನು ಎಂದು ಕೂಡಲೆ ಒಪ್ಪಿಕೊಳ್ಳುತ್ತಾರೆ ಮತ್ತು ಅವನ ಅತಿ ಅಮೂಲ್ಯ ರಕ್ತದಿಂದ ಕೊಂಡುಕೊಂಡ, ಅವನ ಪ್ರಜೆಗಳೋಪಾದಿ ಸ್ವಇಷ್ಟದಿಂದ ಅವನಿಗೆ ವಿಧೇಯತೆಯನ್ನು ತೋರಿಸುತ್ತಾರೆ. ಮತ್ತು ಸಾ.ಶ. 33ರ ಪಂಚಾಶತ್ತಮದಂದಿನಿಂದ ಯೇಸು ಕ್ರಿಸ್ತನು ಅವನ ಸಭೆಯ ಮೇಲೆ ಕರ್ತರ ಕರ್ತನಾಗಿಯೂ ಮತ್ತು ರಾಜರ ರಾಜನಾಗಿಯೂ ಆಳಿಕೆಯನ್ನು ನಡೆಸಿದ್ದಾನೆ. ಆದರೆ ಈಗ, 1914 ರಿಂದ, ಅವನ ವೈರಿಗಳನ್ನು ‘ಅವನ ಪಾದ ಪೀಠವನ್ನಾಗಿ’ ಇಡುವುದರೊಂದಿಗೆ ಆ ಅಧಿಕಾರದಲ್ಲಿ ಆಳಲು ಅವನಿಗೆ ಅರಸುತನದ ಅಧಿಕಾರವು ಕೊಡಲ್ಪಟ್ಟಿದೆ. ಎಲ್ಲವೂ ಕೀರ್ತನೆ 110:1, 2ರ ನೆರವೇರಿಕೆಯಲ್ಲಿ, ‘ಅವರ ಮಧ್ಯದಲ್ಲಿ ದೊರೆತನ ಮಾಡಲು,’ ಈಗ ಅವನಿಗೆ ಸಮಯವು ಪಕ್ವವಾಗಿತ್ತು.—ಇಬ್ರಿಯ 2:5-8; ಪ್ರಕಟನೆ 17:14; 19:16.
ಹಾಗಾದರೆ, “ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ” ಎಂಬ ಯೇಸುವಿನ, ಅವನ ಮರಣ ಮತ್ತು ಪುನರುತ್ಥಾನದ ಮುಂಚೆ ನುಡಿದ, ಮಾತುಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? (ಮತ್ತಾಯ 11:25-27; ಲೂಕ 10:21, 22) ಈಗಾಗಲೆ ಚರ್ಚಿಸಲ್ಪಟ್ಟವುಗಳಂತೆ ಒಂದು ವ್ಯಾಪಕವಾದಂತಹ ಹೇಳಿಕೆಯು ಇದಾಗಿಲ್ಲ. ಮತ್ತಾಯ ಮತ್ತು ಲೂಕಗಳೆರಡರಲ್ಲಿಯೂ, ಅವನು ತಂದೆಯನ್ನು ಪೂರ್ಣವಾಗಿ “ತಿಳಿದವನಾಗಿ” ಇರುವುದರಿಂದ ಅವನ ಮೂಲಕ ಪ್ರಕಟಿಸಿ, ಲೌಕಿಕ ಬುದ್ಧಿವಂತರಿಂದ ಮರೆಮಾಡಲ್ಪಟ್ಟಿರುವ ಜ್ಞಾನದ ಕುರಿತು ಯೇಸುವು ಮಾತಾಡುತ್ತಿದ್ದನೆಂದು ಪೂರ್ವಾಪರವು ತೋರಿಸುತ್ತದೆ. ಅವನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಮತ್ತು ದೇವರ ಆತ್ಮಿಕ ಪುತ್ರನಾಗಿ ಜನಿತನಾದಾಗ, ಯೇಸುವು ಪರಲೋಕದಲ್ಲಿನ ತನ್ನ ಮಾನವಪೂರ್ವದ ಅಸ್ತಿತ್ವವನ್ನು ಮತ್ತು ಅದರೊಂದಿಗಿನ ಎಲ್ಲಾ ಜ್ಞಾನವನ್ನು ಪುನಃ ನೆನಪಿಗೆ ತರಲು ಶಕ್ತನಾದನು, ಆದರೆ ಇದು ಅವನ ಅನಂತರದ ಒಡೆತನಕ್ಕಿಂತ ವಿಭಿನ್ನ ವಿಷಯವಾಗಿತ್ತು.—ಯೋಹಾನ 3:34, 35.
ಯೇಸು ಕ್ರಿಸ್ತನನ್ನು ಕರ್ತನೆಂದು ವಿಶೇಷಿಸುವುದು
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಕೆಲವು ಭಾಷಾಂತರಗಳು, “ಕರ್ತ”ನಾದ ಯೆಹೋವ ದೇವರಿಗೆ ಸ್ಪಷ್ಟವಾಗಿಗಿ ಸೂಚಿಸುವ ಉಲ್ಲೇಖಗಳನ್ನು ಹೀಬ್ರು ಶಾಸ್ತ್ರವಚನಗಳಿಂದ ಭಾಷಾಂತರಿಸುವಾಗ, ಒಂದು ಸಮಸ್ಯೆಯನ್ನೊಡ್ಡುತ್ತವೆ. ಉದಾಹರಣೆಗಾಗಿ, ಲೂಕ 4:19 ರೊಂದಿಗೆ ಯೆಶಾಯ 61:2ನ್ನು ಕಿಂಗ್ ಜೇಮ್ಸ್ ವಷನ್ನಲ್ಲಿಯಾಗಲಿ ಯಾ ನ್ಯೂ ಜೆರೂಸಲೆಮ್ ಬೈಬಲ್ನಿಂದಾಗಲಿ, ಹೋಲಿಸಿರಿ. ಯೇಸುವು ಯೆಹೋವನಿಂದ “ಕರ್ತ” ಎಂಬ ಬಿರುದನ್ನು ತೆಗೆದುಕೊಂಡನೆಂದೂ ಮತ್ತು ದೇಹದಲ್ಲಿ ನಿಜಕ್ಕೂ ಯೆಹೋವನಾಗಿದ್ದನೆಂದೂ ಕೆಲವರು ಸಮರ್ಥಿಸುತ್ತಾರೆ, ಆದರೆ ಇದೊಂದು ಶಾಸ್ತ್ರವಚನದ ಬೆಂಬಲವಿಲ್ಲದಿರುವ ವಾದಾಂಶವಾಗಿದೆ. ಯೆಹೋವ ದೇವರನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನನ್ನು, ಶಾಸ್ತ್ರವಚನದಲ್ಲಿ ಯಾವಾಗಲೂ ಒಬ್ಬನಿಂದ ಇನ್ನೊಬ್ಬನನ್ನು ಜಾಗರೂಕತೆಯಿಂದ ಪ್ರತ್ಯೇಕಿಸಲಾಗಿದೆ. ಯೇಸುವು ತನ್ನ ತಂದೆಯ ಹೆಸರನ್ನು ತಿಳಿಯಪಡಿಸಿದನು ಮತ್ತು ಆತನನ್ನು ಪ್ರತಿನಿಧಿಸಿದನು.—ಯೋಹಾನ 5:36, 37.
ಮುಂದಿನ ಉದಾಹರಣೆಗಳಲ್ಲಿ, ಹೀಬ್ರು ಶಾಸ್ತ್ರವಚನಗಳ ಉದ್ಧರಣಗಳು ಗ್ರೀಕ್ ಶಾಸ್ತ್ರವಚನಗಳಲ್ಲಿ ಕಂಡುಬರುವುದನ್ನು ಗಮನಿಸಿರಿ. ಯೆಹೋವ ದೇವರು ಮತ್ತು ಆತನ ಅಭಿಷಿಕ್ತ, ಯಾ ಮೆಸ್ಸೀಯ ಇಬ್ಬರೂ, ಕೀರ್ತನೆ 2:1, 2 ರಿಂದ ಉದ್ಧರಿಸುವ ಅ. ಕೃತ್ಯಗಳು 4:24-27 ರಲ್ಲಿ ಪ್ರಸ್ತಾಪಿಸಲ್ಪಟ್ಟಿದ್ದಾರೆ. ರೋಮಾಪುರ 11:33, 34ರ ಸನ್ನಿವೇಶವು, ಯೆಶಾಯ 40:13, 14ರ ಒಂದು ಉದ್ಧರಣೆಯೊಂದಿಗೆ, ಸ್ಪಷ್ಟವಾಗಿಗಿ ದೇವರನ್ನು ಎಲ್ಲಾ ವಿವೇಕ ಮತ್ತು ಜ್ಞಾನದ ಉಗಮನೆಂದು ಸೂಚಿಸುತ್ತದೆ. ಕೊರಿಂಥದ ಸಭೆಗೆ ಬರೆಯುತ್ತಾ, ಪೌಲನು ಆ ಉದ್ಧರಣೆಯನ್ನು ಪುನರಾವೃತ್ತಿಸುವುದು, “ಕರ್ತನ ಮನಸ್ಸನ್ನು ತಿಳುಕೊಂಡವನಾರು?” ಮತ್ತು ಕೂಡಿಸುವುದು: “ನಮಗಾದರೋ ಕ್ರಿಸ್ತನ ಮನಸ್ಸು ದೊರಕಿತು.” ಕರ್ತನಾದ ಯೇಸುವು ತನ್ನ ಹಿಂಬಾಲಕರಿಗೆ ಅನೇಕ ಪ್ರಾಮುಖ್ಯ ವಿಷಯಗಳ ಮೇಲೆ ಯೆಹೋವನ ಮನಸ್ಸನ್ನು ಪ್ರಕಟಪಡಿಸಿದನು.—1 ಕೊರಿಂಥ 2:16.
ಕೆಲವೊಮ್ಮೆ ಹೀಬ್ರು ಶಾಸ್ತ್ರವಚನಗಳಲ್ಲಿನ ಒಂದು ವಚನವು ಯೆಹೋವನನ್ನು ಸೂಚಿಸುತ್ತದೆ, ಆದರೆ ಆತನ ಶಕ್ತಿ ಮತ್ತು ಅಧಿಕಾರದ ವಹಿಸಿಕೊಡುವಿಕೆಯ ಕಾರಣದಿಂದಾಗಿ, ಅದು ಯೇಸು ಕ್ರಿಸ್ತನಲ್ಲಿ ನೆರವೇರುತ್ತದೆ. ಉದಾಹರಣೆಗಾಗಿ, ಕೀರ್ತನೆ 34:8, “ಯೆಹೋವನು ಸರ್ವೂತಮ್ತನೆಂದು ಅನುಭವದಿಂದ ತಿಳಿದುಕೊಳ್ಳಿರಿ” ಎಂದು ಆಮಂತ್ರಿಸುತ್ತದೆ. ಆದರೆ ಪೇತ್ರನು, “ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದುಕೊಂಡಿದ್ದೀರಲ್ಲವೋ?” ಎಂದು ಹೇಳುವಾಗ ಅವನು ಇದನ್ನು ಕರ್ತನಾದ ಯೇಸು ಕ್ರಿಸ್ತನಿಗೆ ಅನ್ವಯಿಸುತ್ತಾನೆ. (1 ಪೇತ್ರ 2:2) ಪೇತ್ರನು ಒಂದು ಸೂತ್ರವನ್ನು ತೆಗೆದುಕೊಳ್ಳುತ್ತಾನೆ ಮತ್ತು ಯೇಸು ಕ್ರಿಸ್ತನ ಕುರಿತೂ ಅದು ಹೇಗೆ ಸತ್ಯವಾಗಿರುವುದೆಂದು ತೋರಿಸುತ್ತಾನೆ. ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ, ಇವರಿಬ್ಬರ ಜ್ಞಾನವನ್ನು ಪಡೆದುಕೊಳ್ಳುವ ಮತ್ತು ಅದರ ಮೇಲೆ ಕಾರ್ಯ ನಡೆಸುವ ಮೂಲಕ ತಂದೆಯಿಂದಲೂ ಮತ್ತು ಆತನ ಮಗನಿಂದಲೂ ಸಮೃದ್ಧ ಆಶೀರ್ವಾದಗಳನ್ನು ಕ್ರೈಸ್ತರು ಅನುಭವಿಸಬಲ್ಲರು. (ಯೋಹಾನ 17:3) ಪೇತ್ರನ ಅನ್ವಯವು ಸಾರ್ವಭೌಮ ಕರ್ತನಾದ ಯೆಹೋವನನ್ನು ಕರ್ತನಾದ ಯೇಸು ಕ್ರಿಸ್ತನೊಂದಿಗೆ ಒಬ್ಬ ವ್ಯಕ್ತಿಯನ್ನಾಗಿ ಮಾಡುವುದಿಲ್ಲ.—1 ಪೇತ್ರ 2:3ರ ಪಾದಟಿಪ್ಪಣಿಯನ್ನು ನೋಡಿರಿ.
“ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು; ನಾವು ಆತನಿಗಾಗಿ ಉಂಟಾದೆವು. ಮತ್ತು ನಮಗೆ ಒಬ್ಬನೇ ಕರ್ತ; ಆತನು ಯೇಸು ಕ್ರಿಸ್ತನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು, ನಾವೂ ಆತನ ಮುಖಾಂತರ ಉಂಟಾದೆವು,” ಎಂದು ಹೇಳುವಾಗ, ಅಪೊಸ್ತಲ ಪೌಲನ ಮೂಲಕ ಯೆಹೋವ ದೇವರ ಮತ್ತು ಆತನ ಮಗ, ಯೇಸು ಕ್ರಿಸ್ತನ ಸಾಪೇಕ್ಷ ಸ್ಥಾನಗಳು ಅತಿ ಸ್ಪಷ್ಟ ಮಾಡಲ್ಪಟ್ಟಿವೆ. (1 ಕೊರಿಂಥ 8:6; 12:5, 6) ಎಫೆಸದಲ್ಲಿನ ಕ್ರೈಸ್ತ ಸಭೆಗೆ ಬರೆಯುತ್ತಾ ಪೌಲನು, ಯೇಸು ಕ್ರಿಸ್ತನನ್ನು ‘ಒಬ್ಬನೇ ಕರ್ತ’ನೆನ್ನುತ್ತಾ, “ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ,” ಎನ್ನುವುದರಿಂದ ತೀರಾ ಭಿನ್ನವಾಗಿ ಗುರುತಿಸಿದನು.—ಎಫೆಸ 4:5, 6.
ಯೆಹೋವನು ಎಲ್ಲರ ಮೇಲೆ ಪರಮನು
ವರುಷ 1914 ರಿಂದ, ಪ್ರಕಟನೆ 11:15ರ ಮಾತುಗಳು ನಿಜವೆಂದು ರುಜುವಾದವು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ [ಯೆಹೋವ ದೇವರು] ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ತಿಯಾಲೊಜಿ (ಸಂಪುಟ 2, ಪುಟ 514) ಹೇಳುವುದು: “ಕ್ರಿಸ್ತನು ಎಲ್ಲಾ ಶಕ್ತಿಗಳನ್ನು ಜಯಿಸಿದ ಮೇಲೆ (1 ಕೊರಿಂಥ 15:25), ಅವನು ತಂದೆಯಾದ ದೇವರಿಗೆ ತಾನೇ ಅಧೀನನಾಗುವನು. ಹೀಗೆ ಯೇಸುವಿನ ಒಡೆತನವು ಅದರ ಗುರಿಯನ್ನು ಗಳಿಸಿರುವುದು ಮತ್ತು ದೇವರು ಸರ್ವತಂತ್ರ ಸ್ವತಂತ್ರನಾಗುವನು (1 ಕೊರಿಂಥ 15:28).” ಅವನ ಸಹಸ್ರ ವರ್ಷಗಳ ಆಳಿಕೆಯ ಕೊನೆಯಲ್ಲಿ, ಕ್ರಿಸ್ತ ಯೇಸುವು ಸರ್ವಶಕ್ತ ದೇವರಾದ ತನ್ನ ತಂದೆಗೆ, ಈ ಮುಂಚೆ ವಹಿಸಿಕೊಡಲಾದ ಶಕ್ತಿ ಮತ್ತು ಅಧಿಕಾರವನ್ನು ಹಿಂದಕ್ಕೆ ಕೊಡುವನು. ಹೀಗಿರುವಲ್ಲಿ, ಎಲ್ಲಾ ಮಹಿಮೆ ಮತ್ತು ಆರಾಧನೆಯು ಯುಕ್ತವಾಗಿ ಯೆಹೋವನಿಗೆ, “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರಿಗೆ,” ಕೊಡಲ್ಪಡುವುದು.—ಎಫೆಸ 1:17.
ಈಗ ಯೇಸುವು ಕರ್ತರ ಕರ್ತನು ಆಗಿರುವುದಾದರೂ. ಅವನನ್ನೆಂದಿಗೂ ದೇವರ ದೇವರು ಎಂದು ಕರೆಯಲಾಗಿಲ್ಲ. ಯೆಹೋವನು ಎಲ್ಲರ ಮೇಲೆ ಪರಮನಾಗಿದ್ದಾನೆ. ಈ ವಿಧಾನದಲ್ಲಿ ಯೆಹೋವನು “ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” (1 ಕೊರಿಂಥ 15:28) ಯೇಸುವಿನ ಒಡೆತನವು ಅವನಿಗೆ ಕ್ರೈಸ್ತ ಸಭೆಯ ಶಿರಸ್ಸಾಗಿ ಯುಕಪ್ತೂರ್ಣ ಸ್ಥಾನವನ್ನು ಕೊಡುವುದು. ಈ ಲೋಕದಲ್ಲಿನ ಉಚ್ಚ ಸ್ಥಾನಗಳಲ್ಲಿ ಅನೇಕ ಶಕ್ತಿಯುತ “ಕರ್ತರನ್ನು” ನಾವು ನೋಡುವುದಾದರೂ, ಕರ್ತರ ಕರ್ತನಾಗಿರುವವನೊಬ್ಬನಲ್ಲಿಯೆ ನಾವು ನಮ್ಮ ಭರವಸೆಯನ್ನು ಇಡುತ್ತೇವೆ. ಆದರೂ, ಯೇಸು ಕ್ರಿಸ್ತನು, ಅವನ ಉಚ್ಚ ಹಾಗೂ ಏರಿಸಲ್ಪಟ್ಟ ಸ್ಥಾನದಲ್ಲಿ, “ದೇವರು ಎಲ್ಲರ ಮೇಲೆ ಆಳುವಂತೆ,” ತನ್ನ ತಂದೆಗೆ ಇನ್ನೂ ಅಧೀನನಾಗಿಯೆ ಉಳಿಯುವನು. (1 ಕೊರಿಂಥ 15:28, ದ ಟ್ರಾನ್ಸ್ಲೇಟರ್ಸ್ ನ್ಯೂ ಟೆಸ್ಟಮೆಂಟ್) ಯೇಸುವು ಎಂತಹ ಒಂದು ಉತ್ತಮ ದೈನ್ಯದ ಮಾದರಿಯನ್ನು, ಅವರು ಅವನನ್ನು ತಮ್ಮ ಕರ್ತನನ್ನಾಗಿ ಒಪ್ಪಿಕೊಳ್ಳುವಾಗಲೂ, ಹಿಂಬಾಲಿಸುವಂತೆ ತನ್ನ ಶಿಷ್ಯರಿಗಾಗಿ ಇಟ್ಟಿದ್ದಾನೆ!
[ಪುಟ 30 ರಲ್ಲಿರುವ ಚೌಕ]
“ಹೊಸ ಒಡಂಬಡಿಕೆಯ ಬರಹಗಾರರು ದೇವರ ಕುರಿತು ಮಾತಾಡುವಾಗ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆ ಮತ್ತು ದೇವರನ್ನು ಅರ್ಥೈಸುತ್ತಾರೆ. ಅವರು ಯೇಸು ಕ್ರಿಸ್ತನ ಕುರಿತು ಮಾತಾಡುವಾಗ, ಅವರು ಆತನ ಕುರಿತು ದೇವರೆಂದು ಹೇಳಿ ಮಾತಾಡುವುದೂ ಇಲ್ಲ, ಹಾಗೆ ಯೋಚಿಸುವುದೂ ಇಲ್ಲ. ಅವನು ದೇವರ ಮೆಸ್ಸೀಯ, ದೇವರ ಮಗ, ದೇವರ ವಿವೇಕ, ದೇವರ ವಾಕ್ಯವಾಗಿದ್ದಾನೆ. ನೈಸೀಯದ ತತ್ವಕ್ಕೆ ಅತಿ ಹತ್ತಿರ ಬರುವ, ಸಂತ ಯೋಹಾನ ಪುಸ್ತಕದ ಪೀಠಿಕೆಯು ಕೂಡ, ಆ ಸುವಾರ್ತೆಯಲ್ಲಿ ಸ್ಪಷ್ಟವಾಗಿಗಿ ಕಂಡುಬರುವ ಕ್ರಿಸ್ತನು ತಂದೆಗೆ ಅಧೀನನೆಂಬ ಬೋಧನೆಯ ಬೆಳಕಿನಲ್ಲಿ ಓದಲ್ಪಡಬೇಕು; ಮತ್ತು ಪೀಠಿಕೆಯು ಇಂಗ್ಲಿಷ್ನಲ್ಲಿ ಕಂಡುಬರುವುದಕ್ಕಿಂತ, ಗ್ರೀಕ್ನಲ್ಲಿ ಗುಣವಾಚಿಯನ್ನು ಉಪಯೋಗಿಸದೆ [the·osʹ] ಕಡಿಮೆ ಸ್ಪಷ್ಟತೆಯುಳ್ಳದ್ದಾಗಿದೆ.”—“ದ ಡಿವಿನಿಟಿ ಆಫ್ ಜೀಜಸ್ ಕ್ರೈಸ್ಟ್,” ಜಾನ್ ಮಾರ್ಟಿನ್ ಕ್ರೀಡರ ಮೂಲಕ.