ನ್ಯೂಕ್ಲಿಯರ್ ಬೆದರಿಕೆ—ಕಾಯಂ ಆಗಿ ತೆಗೆದುಹಾಕಲ್ಪಟ್ಟಿದೆ!
ವ್ಯಾಧಿಕಾರಕ ಭಯದಲ್ಲಿ ಜೀವಿಸುವುದು, ಮಾನವಕುಲಕ್ಕಾಗಿ ದೇವರು ಬಯಸುವ ಸಂಗತಿಯಲ್ಲ. “ಸಂತೋಷವುಳ್ಳ ದೇವ” ರೋಪಾದಿ, ಅವರು ಶಾಂತಿಯನ್ನು ಅನುಭವಿಸುವಂತೆ ಮತ್ತು ಭದ್ರತೆಯಲ್ಲಿ ಜೀವಿಸುವಂತೆ—ಸಂಕ್ಷೇಪದಲ್ಲಿ, ಸಂತೋಷದಿಂದಿರುವಂತೆ ಆತನು ಬಯಸುತ್ತಾನೆ. (1 ತಿಮೊಥೆಯ 1:11, NW) ನ್ಯೂಕ್ಲಿಯರ್ ಬೆದರಿಕೆಗಳಿಂದ ತುಂಬಿರುವ ಒಂದು ಲೋಕದಲ್ಲಿ, ಇದು ಸ್ಪಷ್ಟವಾಗಿಗಿ ಅಸಾಧ್ಯವಾಗಿದೆ.
“ಶಾಂತಿ ಮತ್ತು ಭದ್ರತೆ”—ಕೃತಕವಾದದ್ದು
ನ್ಯೂಕ್ಲಿಯರ್ ಬೆದರಿಕೆಯು ನಿಶ್ಚಯವಾಗಿ ತೊಲಗಿಹೋಗಿಲ್ಲ ಎಂಬುದು ಸ್ಪಷ್ಟವಾಗಿಗಿರಬೇಕು. ಆದರೂ, ರಾಜಕೀಯ, ಆರ್ಥಿಕ, ಮತ್ತು ಸಾಮಾಜಿಕ ಅಶಾಂತಿಯ ಹೊರತೂ, ರಾಷ್ಟ್ರಗಳು ಸಾಮಾನ್ಯವಾಗಿ ಆಶಾವಾದಿಗಳಾಗಿರುವಂತೆ ತೋರುತ್ತವೆ. ಇಸವಿ 1986 ರಲ್ಲಿ ಯುಎನ್ ಅಂತಾರಾಷ್ಟ್ರೀಯ ಶಾಂತಿಯ ವರ್ಷದಂದಿನಿಂದ, ಅಪಾಯವನ್ನು ನಿಷ್ಕ್ರಿಯಗೊಳಿಸುವ ಸ್ಥಿರವಾದ ಪ್ರಯತ್ನವು ಸುವ್ಯಕ್ತವಾಗಿದೆ.
ದ ಬುಲೆಟಿನ್ ಆಫ್ ದಿ ಅಟೊಮಿಕ್ ಸೈಎನ್ಟಿಸ್ಟ್ಸ್, ಕಳೆದ ದಶಕದಲ್ಲಿ ತನ್ನ ನಾಶನದಿನದ ಗಡಿಯಾರವನ್ನು—ನ್ಯೂಕ್ಲಿಯರ್ ಯುದ್ಧದ ಸಂಭವನೀಯತೆಯನ್ನು ಸೂಚಿಸುವ ಅದರ ವಿಧಾನ—ಮಧ್ಯರಾತ್ರಿಯ ಮುಂಚೆ 3 ನಿಮಿಷಗಳಿಂದ ಮಧ್ಯರಾತ್ರಿಯ ಮುಂಚೆ 17 ನಿಮಿಷಗಳಿಗೆ ಹಿಂದಕ್ಕೆ ತಿರುಗಿಸಿದೆ. “ಶಾಂತಿಭರಿತ ಯುದ್ಧ ತೀರ್ಮಾನಕ್ಕಾಗಿ ನಿರೀಕ್ಷೆಯು, II ನೆಯ ಲೋಕ ಯುದ್ಧದ ಅಂತ್ಯದಂದಿನಿಂದ ಬೇರೆ ಯಾವುದೆ ವರ್ಷಕ್ಕಿಂತಲೂ ಸಾಧಾರವುಳ್ಳದ್ದಾಗಿದೆ,” ಎಂದು 1989 ರಲ್ಲಿ ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಘವು ಗಮನಿಸಿತು.
ಇತ್ತೀಚೆಗಿನ ವರ್ಷಗಳಲ್ಲಿ ಸಂಯುಕ್ತ ರಾಷ್ಟ್ರವು ಅಂತಾರಾಷ್ಟ್ರೀಯ ತೊಂದರೆಯ ಸ್ಥಳಗಳೊಂದಿಗೆ ನಿಭಾಯಿಸುವಂತೆ ಬಲಗೊಳಿಸಲ್ಪಟ್ಟಿದೆ. ಅದರ ಯಶಸ್ಸು, ಸಂಪೂರ್ಣವಾಗಿರದಿದ್ದಾಗ್ಯೂ, ಆಶಾವಾದದ ಸಾಮಾನ್ಯ ಆತ್ಮಕ್ಕೆ ನೆರವು ನೀಡಲು ಸಾಕಾಗುವಷ್ಟಿದೆ. ಭವಿಷ್ಯವು ಪ್ರಾಯಶಃ ಹೊಸ ಮತ್ತು ಸಫಲ ಬೆಳವಣಿಗೆಗಳನ್ನು ತರುವುದು. “ಶಾಂತಿ ಮತ್ತು ಭದ್ರತೆ”ಯ ಕರೆಗಳು ಬಹುಶಃ ಗಟ್ಟಿಯಾಗಿಯೂ ಮತ್ತು ಹೆಚ್ಚು ತೀಕ್ಷೈವಾಗಿಯೂ ಆಗುವುವು. ಅವು ವಿಶ್ವಾಸವನ್ನು ಕೂಡ ಗಳಿಸಬಹುದು.
ಆದರೆ ಎಚ್ಚರಿಕೆಯಿಂದಿರ್ರಿ! “ಶಾಂತಿ ಮತ್ತು ಭದ್ರತೆ ಎಂದು ಜನರು ಹೇಳುತ್ತಿರುವಾಗಲೇ” ಬೈಬಲ್ ಎಚ್ಚರಿಸುವುದು, “ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” ಹೀಗೆ, “ಶಾಂತಿ ಮತ್ತು ಭದ್ರತೆ”ಯ ಕರೆಗಳು “[ನ್ಯೂಕ್ಲಿಯರ್ ಮತ್ತು ಬೇರೆ ರೀತಿಯ ಮಲಿನತೆಯ ಮುಖಾಂತರ ನಾಶ ಮಾಡುತ್ತಿರುವ] ಲೋಕನಾಶಕರನ್ನು . . . ನಾಶಮಾಡುವ” ದೇವರ ಸಮಯವನ್ನು ಸೂಚಿಸುವುವು.—1 ಥೆಸಲೊನೀಕ 5:3, 4 NW; ಪ್ರಕಟನೆ 11:18.
“ಶಾಂತಿ ಮತ್ತು ಭದ್ರತೆ” ಯನ್ನು ರಾಷ್ಟ್ರಗಳು ಸಾಧಿಸುವುವು ಎಂದು ಬೈಬಲ್ ಹೇಳುವುದಿಲ್ಲ ಎಂಬುದನ್ನು ಗಮನಿಸಿರಿ. ಒಂದು ಅಪೂರ್ವವಾದ ರೀತಿಯಲ್ಲಿ—ಆಶಾವಾದವನ್ನು ಮತ್ತು ಹಿಂದೆಂದೂ ಇರದಿದ್ದ ನಂಬಿಕೆಯನ್ನು ವ್ಯಕ್ತಪಡಿಸುತ್ತಾ—ಅವರು ಅದರ ಕುರಿತು ಮಾತಾಡುತ್ತಿರುವರು ಎಂಬುದು ಸುವ್ಯಕ್ತ. ಶಾಂತಿ ಮತ್ತು ಭದ್ರತೆಯನ್ನು ಗಳಿಸುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಹತ್ತಿರವಾಗಿರುವಂತೆ ಕಾಣುವುವು. ಸತತವಾಗಿರುವ ಒಂದು ನ್ಯೂಕ್ಲಿಯರ್ ಬೆದರಿಕೆಯ ಹೊರತೂ, ರಾಷ್ಟ್ರಗಳು ಭದ್ರತೆಯ ಸುಳ್ಳು ಅರಿವಿನೊಳಗೆ ವಂಚನೆಯಿಂದ ಸಂತಯಿಸಲ್ಪಡುವುವು.
ಸತ್ಯ ಕ್ರೈಸ್ತರಾದರೊ, ವಂಚಿಸಲ್ಪಡುವುದಿಲ್ಲ. ತೀವ್ರವಾದ ಆಸಕ್ತಿಯಿಂದ ಅವರು ಮಾನವ ಶಾಂತಿ ಮತ್ತು ಭದ್ರತೆಯ ಆಚೆ ಯಾವುದೊ ಉತ್ತಮವಾದ ವಿಷಯದ ಕಡೆಗೆ ಎದುರುನೋಡುವರು!
ಶಾಂತಿ ಮತ್ತು ಭದ್ರತೆ—ಯಥಾರ್ಥವಾದದ್ದು
ಕೀರ್ತನೆ 4:8 (NW)ರ ಅನುಸಾರ, ನಿಜ ಶಾಂತಿ ಮತ್ತು ಭದ್ರತೆಯು ಕೇವಲ ಯೆಹೋವ ದೇವರ ಏರ್ಪಾಡಿನೊಳಗೆ ಮಾತ್ರ ಸಿಗುವುದು: “ಶಾಂತಿಯಲ್ಲಿ ನಾನು ಮಲಗಿಕೊಂಡು ನಿದ್ದೆಮಾಡುವೆನು, ಯಾಕೆಂದರೆ ಯೆಹೋವನೇ ನೀನು ಮಾತ್ರ, ನಾನು ಭದ್ರತೆಯಲ್ಲಿ ಇರುವಂತೆ ಮಾಡುತ್ತೀ.” ಯೆಹೋವನ ರಾಜ್ಯದೇರ್ಪಾಡಿನ ರಚನೆಯ ಹೊರಗೆ ವ್ಯಕ್ತಪಡಿಸಲಾದ “ಶಾಂತಿ ಮತ್ತು ಭದ್ರತೆ”ಯ ಯಾವುದೇ ಕರೆಯು ಕೇವಲ ಕೃತಕವಾಗಿರಬಲ್ಲದು. ಶಾಶ್ವತವಾದ ಮೌಲ್ಯದ ಯಾವುದನ್ನೂ ಅದು ಗಳಿಸಸಾಧ್ಯವಿಲ್ಲ.
ದೇವರ ರಾಜ್ಯವು ಆಂಶಿಕ ಪರಿಹಾರಗಳನ್ನು ಒದಗಿಸುವುದರಲ್ಲಿ ತೃಪ್ತಿಹೊಂದದು. ದೈವಿಕ ಸರಕಾರವು ಅಣ್ವಸ್ತ್ರಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವುದು; ಅದು ಅವುಗಳನ್ನು ಮತ್ತು ಯುದ್ಧದ ಇತರ ಎಲ್ಲ ಆಯುಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು. ಕೀರ್ತನೆ 46:9 ವಾಗ್ದಾನಿಸುವುದು: “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”
ಅಂತೆಯೇ, ಸರಿಯಾಗಿ ಕೆಲಸಮಾಡದಿರುವ ನ್ಯೂಕ್ಲಿಯರ್ ರಿಆ್ಯಕ್ಟರ್ಗಳ ಮೂಲಕ ಯಾ ವಿದ್ಯುತ್ವಿಕಿರಣ ಕ್ರಿಯಾಶಕ್ತ ಹಿಪ್ಪೆಯ ಮೂಲಕ ಒಡ್ಡಲಾದ ನ್ಯೂಕ್ಲಿಯರ್ ಬೆದರಿಕೆಗಳು ಗತಕಾಲದ ವಿಷಯಗಳಾಗಿರುವುವು. ಇಲ್ಲವಾದರೆ, “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ,” ಎಂಬ ಮಾತುಗಳು ಅಸತ್ಯವಾಗಿರುವುವು. ದೇವರು ಸುಳ್ಳಾಡಸಾಧ್ಯವಿಲ್ಲ. ಆತನ ಮಾತುಗಳನ್ನು ಸಂದೇಹಿಸಲು ನಮಗೆ ಯಾವ ಕಾರಣವೂ ಇರುವುದಿಲ್ಲ.—ಮೀಕ 4:4; ತೀತ 1:2.
ನ್ಯೂಕ್ಲಿಯರ್ ಬೆದರಿಕೆಯು ಕಾಯಂ ಆಗಿ ತೆಗೆದುಹಾಕಲ್ಪಟ್ಟಿರುವ ಒಂದು ಲೋಕದಲ್ಲಿ ಜೀವಿಸುವ ಪ್ರತೀಕ್ಷೆಯನ್ನು ಹೊಂದಿರುವುದನ್ನು ನೀವು ಆನಂದಿಸುವಿರೊ? ನೀವು ಆನಂದಿಸಬಲ್ಲಿರಿ, ಯಾಕೆಂದರೆ ದೇವರ ವಾಕ್ಯವು ಆವಶ್ಯಕತೆಗಳನ್ನು ಸ್ಪಷ್ಟವಾಗಿಗಿ ಸ್ಥಾಪಿಸುತ್ತದೆ. ಅವುಗಳ ಕುರಿತು ಕಲಿಯುವ ಮೂಲಕ ಮತ್ತು ಅವುಗಳನುಸಾರವಾಗಿ ಜೀವಿಸುವ ಮೂಲಕ, ಒಂದು ದಿನ ನೆಮ್ಮದಿಯ ನಿಟ್ಟುಸಿರಿನಿಂದ “ನ್ಯೂಕ್ಲಿಯರ್ ಬೆದರಿಕೆ—ಅಂತಿಮವಾಗಿ ಕೊನೆಗೊಂಡಿದೆ!” ಎಂಬುದಾಗಿ ಹೇಳುವ ಆನಂದವು ನಿಮಗಿರಬಹುದು.
[ಪುಟ 7 ರಲ್ಲಿರುವ ಚಿತ್ರ]
ಯಾವುದೇ ನ್ಯೂಕ್ಲಿಯರ್ ಬೆದರಿಕೆಗಳಿಲ್ಲದೆ ದೇವರ ಹೊಸ ಲೋಕದಲ್ಲಿ ಶಾಂತಿಯು ಆಳುವುದು
[ಕೃಪೆ]
M. Thonig/H. Armstrong Roberts
[ಪುಟ 6 ರಲ್ಲಿರುವ ಚಿತ್ರ ಕೃಪೆ]
U.S. National Archives photo