ವಾಚಕರಿಂದ ಪ್ರಶ್ನೆಗಳು
ದಾನಿಯೇಲನ ಪ್ರವಾದನೆಗಳನ್ನು “ಕಾವಲಿನಬುರುಜು” ನಲ್ಲಿ ನಿರ್ವಹಿಸಲ್ಪಟ್ಟಂತೆ ಅಭ್ಯಸಿಸುವುದನ್ನು ನಾವು ಆನಂದಿಸಿದೆವು. ಪ್ರಕಟನೆ 11:3ರ ಮೂರುವರೆ ಕಾಲಗಳಿಗಾಗಿರುವ ತಾರೀಖುಗಳು ಏಕೆ “ಪ್ರಕಟನೆ ಮಹಾ ಪರಮಾವಧಿ” ಪುಸ್ತಕದಿಂದ ಭಿನ್ನವಾಗಿದ್ದವು?
ಹೌದು, ನವಂಬರ 1, 1993ರ ಕಾವಲಿನಬುರುಜು ಪತ್ರಿಕೆಯು, ಪ್ರಕಟನೆ 11:3ರ ಆಧುನಿಕ ನೆರವೇರಿಕೆಯ ಕಾಲ ನಿರ್ದೇಶನದ ಕುರಿತು ಒಂದು ಸಣ್ಣ ಹೊಂದಾಣಿಕೆಯನ್ನು ನೀಡಿತು. ಯಾಕೆ?
ನಾವು ಪ್ರಥಮವಾಗಿ ಪ್ರಕಟನೆ 11:2ನ್ನು ನೋಡೋಣ, ಅದರ ಕೊನೆಯಲ್ಲಿ “ನಾಲ್ವತ್ತೆರಡು ತಿಂಗಳು” ಉಲ್ಲೇಖಿಸಲ್ಪಟ್ಟಿದೆ. ನಾವು 3 ನೆಯ ವಚನದಲ್ಲಿ ಮುಂದುವರಿಸುವುದು: “ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರುವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಮಾಡುವೆನು.” ಅದು ಯಾವ ಸಮಯಕ್ಕೆ ಅನ್ವಯಿಸುತ್ತದೆ?
ಒಳ್ಳೆಯದು, ಈ ಪ್ರವಾದನೆಯು ತನ್ನ ನೆರವೇರಿಕೆಯನ್ನು ಆತ್ಮ ಅಭಿಷಿಕ್ತ ಕ್ರೈಸ್ತರಲ್ಲಿ “ಜನಾಂಗಗಳ ನೇಮಿತ ಸಮಯಗಳ” (ಅನ್ಯಜನಾಂಗಗಳ ಸಮಯ) ಅಂತ್ಯದ ತರುವಾಯ 1914 ರಲ್ಲಿ, ಕಂಡುಕೊಂಡಿತ್ತೆಂದು ಯೆಹೋವನ ಸಾಕ್ಷಿಗಳು ಬಹಳ ಹಿಂದೆಯೇ ಗುರುತಿಸಿದ್ದಾರೆ. (ಲೂಕ 21:24; 2 ಕೊರಿಂಥ 1:21, 22) ಇದರ ಕುರಿತು ಹೇಳಿಕೆಯನ್ನು ಕೊಡುತ್ತಾ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರದಲ್ಲಿದೆ!a (1988) ಪುಟ 164 ರಲ್ಲಿ ಹೇಳುವುದು: “ಇಸವಿ 1914ರ ಕೊನೆಯ ಭಾಗದಲ್ಲಿ ಮೊದಲನೆಯ ಲೋಕ ಯುದ್ಧವು ಆರಂಭಗೊಂಡಂದಿನಿಂದ 1918ರ ಆರಂಭದ ಭಾಗದ ತನಕ ಮುಂದರಿದ—ಇಲ್ಲಿ ಪ್ರವಾದಿಸಲ್ಪಟ್ಟ ಘಟನೆಗಳು ದೇವ ಜನರ ಕಠಿಣ ಅನುಭವಗಳೊಂದಿಗೆ ಹೊಂದಿಕೆಯಾದಾಗ, ಮೂರುವರೆ ವರ್ಷಗಳ ಗುರುತಿಸಲ್ಪಟ್ಟ ಅವಧಿಯೊಂದಿತ್ತು.”
ನೀಡಲ್ಪಟ್ಟ ಕಾಲ ನಿರ್ದೇಶನವು “1914ರ ಕೊನೆಯ ಭಾಗದಲ್ಲಿ ಮೊದಲನೆಯ ಲೋಕ ಯುದ್ಧವು ಆರಂಭಗೊಂಡಂದಿನಿಂದ ಹಿಡಿದು 1918ರ ಆರಂಭದ ಭಾಗದ [ತನಕ] ಇತ್ತು” ಎಂಬುದನ್ನು ಗಮನಿಸಿರಿ. ಇದು ಅನೇಕ ವೇಳೆ ಸಾದರಪಡಿಸಲಾಗುವ ಕಾಲ ನಿರ್ದೇಶನವನ್ನು ಹೋಲುತ್ತದೆ, ಉದಾಹರಣೆಗೆ “ದೆನ್ ಇಸ್ ಫಿನಿಷ್ಡ್ ದ ಮಿಸ್ಟ್ರಿ ಆಫ್ ಗಾಡ್” ಎಂಬ ಪುಸ್ತಕ ಪುಟಗಳು 261-4, (1969).*
ಹಾಗಿದ್ದರೂ, ತದನಂತರ ಪ್ರಕಟನೆಯಲ್ಲಿ ಉಲ್ಲೇಖಿಸಲಾದ 3 1⁄2 ವರ್ಷಗಳಿಗೆ ಯಾ 42 ತಿಂಗಳುಗಳಿಗೆ ಹೋಲಿಸಬಹುದಾದ ಒಂದು ಅವಧಿಯನ್ನು ಎರಡು ಬಾರಿ ಉಲ್ಲೇಖಿಸುವ ಪುಸ್ತಕವಾದ ದಾನಿಯೇಲನ ಪುಸ್ತಕದಲ್ಲಿರುವ ಪ್ರವಾದನೆಗಳ ಮೇಲೆ ಕಾವಲಿನಬುರುಜು ಪತ್ರಿಕೆಯು ಕೇಂದ್ರೀಕರಿಸಿತು. ನಿರ್ದಿಷ್ಟವಾಗಿರಲು, ದೇವರ ಪವಿತ್ರ ಜನರು “ಒಂದುಕಾಲ ಎರಡುಕಾಲ ಅರ್ಧಕಾಲ,” ಯಾ 3 1⁄2 ಕಾಲ ಪೀಡಿಸಲ್ಪಡುವರೆಂದು ದಾನಿಯೇಲ 7:25 ಹೇಳುತ್ತದೆ. ತದನಂತರ, ದಾನಿಯೇಲ 12:7 “ಒಂದುಕಾಲ ಎರಡುಕಾಲ ಅರ್ಧಕಾಲ” ಇಲ್ಲವೆ 3 1⁄2 ಕಾಲಗಳನ್ನು ಮುಂತಿಳಿಸುತ್ತದೆ, ಅದು “ದೇವರ ಜನರ ಬಲವನ್ನು ಸಂಪೂರ್ಣವಾಗಿ ಮುರಿದು” ಬಿಡುವುದರೊಂದಿಗೆ ಪರಮಾವಧಿಗೆ ಏರುವುದು.
ಆದುದರಿಂದ ದಾನಿಯೇಲ 7:25, ದಾನಿಯೇಲ 12:7, ಮತ್ತು ಪ್ರಕಟನೆ 11:2, 3, ಅಷ್ಟೇ ಅಲ್ಲದೆ ಪ್ರಕಟನೆ 13:5 ರಲ್ಲಿ ಸದೃಶವಾದ ಒಂದು ಅವಧಿಯೊಂದಿಗೆ ನಿಭಾಯಿಸುವ ಪ್ರವಾದನೆಗಳಿವೆ. ಈ ಎಲ್ಲ ಪ್ರವಾದನೆಗಳು 1914-18ರ ಅವಧಿಯಲ್ಲಿ ನೆರವೇರಿಕೆಯನ್ನು ಪಡೆದವೆಂದು ನಮ್ಮ ಪ್ರಕಾಶನಗಳು ತೋರಿಸಿವೆ. ಆದರೆ ಈ ಪ್ರವಾದನೆಗಳನ್ನು ಪ್ರತ್ಯೇಕವಾಗಿ ನಿರೂಪಿಸುವಾಗ, ಆರಂಭಕ್ಕಾಗಿ ಮತ್ತು ಅಂತ್ಯಕ್ಕಾಗಿರುವ ತಾರೀಖುಗಳು ಕೊಂಚ ಬದಲಾದವು.
ಹಾಗಿದ್ದರೂ, ನವಂಬರ 1, 1993ರ ಕಾವಲಿನಬುರುಜು ಪತ್ರಿಕೆಯು ಕೇಳಿದ್ದು: “ಈ ಎಲ್ಲಾ ಸಾದೃಶ್ಯ ಪ್ರವಾದನೆಗಳು ನೆರವೇರಿದ್ದು ಹೇಗೆ?” ಹೌದು, ದಾನಿಯೇಲ 7:25, ದಾನಿಯೇಲ 12:7, ಮತ್ತು ಪ್ರಕಟನೆ 11:3 ರಲ್ಲಿ ಉಲ್ಲೇಖಿಸಿರುವ 3 1⁄2 ಕಾಲಗಳ ಪ್ರವಾದನೆಗಳು “ಸಾದೃಶ್ಯ ಪ್ರವಾದನೆಗಳು” ಎಂದು ಗುರುತಿಸಲ್ಪಟ್ಟವು. ಆದಕಾರಣ, ಅವು ತಮ್ಮ ಆರಂಭ ಮತ್ತು ಅಂತ್ಯದ ವಿಷಯವಾಗಿ ಅನುರೂಪವಾಗಿರುವುವು.
ಅಂತ್ಯದ ಕುರಿತು, ಜೂನ್ 1918 ರಲ್ಲಿ ಜೆ.ಎಫ್. ರಥರ್‌ಫರ್ಡ ಮತ್ತು ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಇತರ ಡೈರೆಕ್ಟರುಗಳಿಗೆ “ಸುಳ್ಳು ಆರೋಪಗಳ ಮೇಲೆ ದೀರ್ಘಾವಧಿಯ ಸೆರೆಮನೆಯ ಶಿಕ್ಷೆವಿಧಿಸಲ್ಪಟ್ಟಾಗ”, ದೇವರ ಅಭಿಷಿಕ್ತ ಜನರ ಪೀಡನೆಯು (ದಾನಿಯೇಲ 7:25) ಹೇಗೆ ಪರಮಾವಧಿಗೆ ಏರಿತ್ತೆಂದು ಪತ್ರಿಕೆಯು ತೋರಿಸಿತು. ಆ ಘಟನೆಯು ಖಂಡಿತವಾಗಿಯೂ ದಾನಿಯೇಲ 12:7 ರಲ್ಲಿ ಗಮನಿಸಲಾದಂತೆ “ದೇವರ ಜನರ ಬಲವನ್ನು ಸಂಪೂರ್ಣವಾಗಿ ಮುರಿದು” ಹಾಕುವ ಘಟನೆಯಾಗಿತ್ತು.
ಜೂನ್ 1918 ರಿಂದ ಹಿಂದಕ್ಕೆ ಎಣಿಸುವುದಾದರೆ ಅದು ನಮ್ಮನ್ನು 3 1⁄2 ಕಾಲಗಳ ಆರಂಭಕ್ಕೆ ದಶಂಬರ 1914ಕ್ಕೆ ನಡೆಸುತ್ತದೆ. ಇಸವಿ 1914ರ ಆ ಕೊನೆಯ ತಿಂಗಳಿನಲ್ಲಿ, ಭೂಮಿಯ ಮೇಲಿದ್ದ ದೇವರ ಅಭಿಷಿಕ್ತ ಜನರು ಬರುವ ವರ್ಷಕ್ಕಾಗಿರುವ ಮುಖ್ಯ ವಚನವನ್ನು ಕಲಿತರು: “ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ?—ಮತ್ತಾಯ 20:20-23.” ಅದನ್ನು ಘೋಷಿಸಿದ ಲೇಖನವು ಎಚ್ಚರಿಸಿದ್ದು: “ಇಸವಿ 1915ರ ಸಮಯದಲ್ಲಿ ಕುರಿಮರಿಯ ನಿಷ್ಠಾವಂತ ಹಿಂಬಾಲಕರಿಗಾಗಿ, ಯಾವುದಾದರೂ ವಿಶೇಷವಾದ ಕಷ್ಟ, ಕಷ್ಟಾನುಭವದ ಪಾತ್ರೆ ಯಾ ಅಪಕೀರ್ತಿ ಇರಬಹುದೆಂದು ಯಾರಿಗೆ ಗೊತ್ತು!” ದಾನಿಯೇಲ 7:25 3 1⁄2 ಕಾಲಗಳ ಈ ಅವಧಿಗಾಗಿ ಮುಂತಿಳಿಸಿದಂತೆ, ‘ಪೀಡನೆಯು ಆರಂಭಿಸಿ ಸರ್ವ ಶ್ರೇಷ್ಠನ ಪವಿತ್ರ ಜನರ ವಿರುದ್ಧ ಮುಂದುವರಿಯಿತು.’ ಅನ್ಯಾಯದ ಪೀಡನೆಯನ್ನು ಮುಂದುವರಿಸಲು ಅವರಿಗೆ ಹೆಚ್ಚು ಸುಲಭವಾಗಿ ಮಾಡುತ್ತಾ, ಜನಾಂಗಗಳು ಲೋಕ ಯುದ್ಧ I ರಲ್ಲಿ ಸಿಕ್ಕಿಕೊಂಡಿದ್ದವು. ಸಮಾಪ್ತಿಯು ಹೀಗಿದೆ: ಎಲ್ಲ ಮೂರು ಸಾದೃಶ್ಯ ಪ್ರವಾದನೆಗಳು—ದಾನಿಯೇಲ 7:25, 12:7, ಮತ್ತು ಪ್ರಕಟನೆ 11:3—3 1⁄2 ವರ್ಷಗಳ, ಯಾ 42 ತಿಂಗಳುಗಳ ನೆರವೇರಿಕೆಯನ್ನು ದಶಂಬರ 1914 ರಿಂದ ಜೂನ್ 1918 ರ ವರೆಗೆ ಕಂಡುಕೊಂಡವು.
ಪ್ರಕಟನೆ 11:3ರ ನೆರವೇರಿಕೆಯ ಕಾಲ ನಿರ್ದೇಶನದಲ್ಲಿ ಅಲ್ಪವಾದ ಶುದ್ಧೀಕರಣವನ್ನು ಇದು ವಿವರಿಸುತ್ತದೆ. ಈ ಹೊಂದಾಣಿಕೆಯು, ಭವಿಷ್ಯದಲ್ಲಿ ಪ್ರಕಟನೆ ಪರಮಾವಧಿಯು ಎಂಬ ಪುಸ್ತಕವನ್ನು ನಾವು ಅಭ್ಯಾಸಿಸಿದಂತೆ ಮತ್ತು ಬಳಸಿದಂತೆ, ಮನಸ್ಸಿನಲ್ಲಿ ನಾವು ಇಡಬಲ್ಲ ಸಂಗತಿಯಾಗಿದೆ.
[ಅಧ್ಯಯನ ಪ್ರಶ್ನೆಗಳು]
a ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೂಲಕ ಪ್ರಕಾಶಿಸಲ್ಪಟ್ಟಿದ್ದು.