ಜಂಬ ಕೊಚ್ಚುವುದರ ಕುರಿತು ಎಚ್ಚರಿಕೆ
ಇಂದು ಅನೇಕರು ಜಂಬಕೊಚ್ಚುವುದನ್ನು ಒಂದು ಸದ್ಗುಣವೆಂಬಂತೆ ವೀಕ್ಷಿಸುತ್ತಾರೆ. ಒಬ್ಬನ ಬಲಗಳನ್ನು, ಕೌಶಲಗಳನ್ನು, ಮತ್ತು ಸಾಧನೆಗಳನ್ನು ಜಂಬದಿಂದ ತೋರಿಸಿಕೊಳ್ಳುವುದು ರೂಢಿಯಾಗಿದೆ. ಜಂಬಕೊಚ್ಚುವುದು ಸಾಧನೆಗೆ ಅಗತ್ಯವಾಗಿದೆ ಎಂದು ಕೆಲವರು ನಂಬುತ್ತಾರೆ. ಒಬ್ಬನ ಸ್ವಗೌರವವನ್ನು ಅದು ಹೆಚ್ಚಿಸುತ್ತದೆ ಎಂದು ಇತರರಿಗೆ ಅನಿಸುತ್ತದೆ. ಟೈಮ್ ಪತ್ರಿಕೆಯು ಗಮನಿಸುವುದು: “ಅಭಿಮಾನಮಿತಿಯ ಆದರ್ಶವು ಹಳತಾಗಿ ಹೋಗದೆ ಇರುವುದಾದರೂ, ಹಳೆಯ ರೂಢಿಯದೆಂದು ವ್ಯಕ್ತವಾಗಲು ಆರಂಭಿಸಿದೆ.” ಬರಹಗಾರ್ತಿ ಜೋಡಿ ಗೇಲಿನ ಹೇಳುವುದು: “ದುರದೃಷ್ಟದಿಂದ, ಲಜ್ಜೆಯಿಲ್ಲದ ಜಂಬಕೊಚ್ಚುವಿಕೆ . . . ಇತ್ತೀಚಿನ ರೂಢಿಯಾಗಿದೆ. ಒಬ್ಬ ಮಿತ್ರ ಯಾ ಪರಿಚಯಸ್ಥನೊಂದಿಗೆ ಸಂಭಾಷಣೆಯು, ಹೊಸದೊಂದು ಅನುಬಂಧವನ್ನು ಹೊಂದಿದೆ: ಆತ್ಮ ಪ್ರಶಂಸೆ.”
ಆದರ್ಶ ವ್ಯಕ್ತಿಗಳು ಮಟ್ಟವನ್ನು ಸ್ಥಾಪಿಸಿದ್ದಾರೆ. ಒಬ್ಬ ಮಾಜಿ ಬಾಕ್ಸಿಂಗ್ ಚ್ಯಾಂಪಿಯನ್ನ ಮಾತುಗಳನ್ನು ನೀವು ಕೇಳಿರಬಹುದು: “ಇತಿಹಾಸದ ಈ ಸಮಯದಲ್ಲಿ ಲೋಕದಲ್ಲೆಲ್ಲ ನಾನೇ ಸರ್ವಶ್ರೇಷ್ಠ ಮನುಷ್ಯನಾಗಿರುವುದು ಆಕಸ್ಮಿಕವಲ್ಲ.” ಬೀಟ್ಲ್ಸ್ ಎಂಬ ಸಂಗೀತ ಗುಂಪಿನ ಒಬ್ಬ ಸದಸ್ಯನ ಹೇಳಿಕೆ ಸಹ ಪ್ರಸಿದ್ಧವಾಗಿದೆ: “ಈಗ ನಾವು ಯೇಸು ಕ್ರಿಸ್ತನಿಗಿಂತ ಅಧಿಕ ಜನಪ್ರಿಯರಾಗಿದ್ದೇವೆ.” ಇಂತಹ ಹೇಳಿಕೆಗಳನ್ನು ಅಕೃತ್ರಿಮವಾಗಿ ಹೇಳಿದವುಗಳೆಂದು ಕೆಲವರು ವೀಕ್ಷಿಸಿದರೂ, ಇತರರು ಅವುಗಳನ್ನು ಹೇಳಿದವರನ್ನು ಅನುಕರಿಸಲು ಅರ್ಹರಾದ ಸ್ವಅಭಿವೃದ್ಧಿಯ ಆದರ್ಶ ವ್ಯಕ್ತಿಗಳೋಪಾದಿ ಪರಿಗಣಿಸಿದರು.
ಜಂಬಕೊಚ್ಚುವುದರ ವಾಡಿಕೆ ಈ ಪ್ರಶ್ನೆಯನ್ನು ಎಬ್ಬಿಸುತ್ತದೆ: ಒಬ್ಬನ ಸ್ವಂತ ಸ್ವತ್ತುಗಳ ಹಾಗೂ ಸಾಮರ್ಥ್ಯಗಳ ಕುರಿತು ಜಂಬಕೊಚ್ಚುವುದು ಆರೋಗ್ಯಕರವೊ? ಒಬ್ಬನ ಸಾಧನೆಗಳ ವಿಷಯದಲ್ಲಿ ಹೆಮ್ಮೆ ಪಡುವುದು ಮತ್ತು ಅವುಗಳನ್ನು ಹತ್ತಿರದ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದು ನಿಶ್ಚಯವಾಗಿಯೂ ಸ್ವಾಭಾವಿಕವಾಗಿದೆ. ಆದರೆ “ನೀವು ಅದನ್ನು ಹೊಂದಿರುವುದಾದರೆ, ಅದನ್ನು ಪ್ರದರ್ಶಿಸಿರಿ” ಎಂಬ ಹೇಳಿಕೆಗೆ ತಕ್ಕಂತೆ ಜೀವಿಸುವವರ ಕುರಿತು ಏನು? ಇನ್ನೂ ಹೆಚ್ಚಾಗಿ, ಮುಕ್ತವಾಗಿ ಜಂಬಕೊಚ್ಚದಿದ್ದರೂ, ತಮ್ಮ ಸಾಮರ್ಥ್ಯಗಳ ಮತ್ತು ಸಾಧನೆಗಳ ಕುರಿತು ಇತರರು ತಿಳಿಯುವಂತೆ ನವಿರಾಗಿ ದೃಢಪಡಿಸಿಕೊಳ್ಳುವವರ ಕುರಿತೇನು? ಇಂತಹ ಸ್ವಪ್ರಕಟನೆ ಆರೋಗ್ಯಕರವೊ, ಕೆಲವರು ವಾದಿಸುವಂತೆ ಅಗತ್ಯವೊ?
ಸಂಬಂಧಗಳ ಮೇಲೆ ಪರಿಣಾಮ
ಇತರರ ಜಂಬಕೊಚ್ಚುವಿಕೆಯು ನಿಮ್ಮ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸಿರಿ. ಉದಾಹರಣೆಗೆ, ಈ ಮುಂದಿನ ಹೇಳಿಕೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
“ನಾನು ಬರೆಯದೆ ಇದ್ದಂಥ ಪುಸ್ತಕಗಳು ಇತರರು ಬರೆದಿದ್ದ ಪುಸ್ತಕಗಳಿಗಿಂತ ಉತ್ತಮವಾಗಿವೆ.”—ಸುಪ್ರಸಿದ್ಧ ಗ್ರಂಥಕರ್ತ.
“ಸೃಷ್ಟಿಯ ಸಮಯದಲ್ಲಿ ನಾನು ಉಪಸ್ಥಿತನಾಗಿದ್ದರೆ, ವಿಶ್ವದ ಹೆಚ್ಚು ಉತ್ತಮ ಕ್ರಮಬದ್ಧತೆಗಾಗಿ ಕೆಲವು ಉಪಯೋಗಕಾರಿ ಸೂಚನೆಗಳನ್ನು ನಾನು ಕೊಡುತ್ತಿದ್ದೆ.”—ಮಧ್ಯಯುಗದ ರಾಜನು.
“ದೇವರೊಬ್ಬನು ಇರಲು ಸಾಧ್ಯವಿಲ್ಲ ಯಾಕೆಂದರೆ, ಹಾಗೆ ಒಬ್ಬನು ಇರುವುದಾದರೆ, ನಾನು ಆತನಾಗಿಲ್ಲ ಎಂಬುದನ್ನು ನಾನು ನಂಬುತ್ತಿರಲಿಲ್ಲ.”—19 ನೆಯ ಶತಮಾನದ ತತ್ವಜ್ಞಾನಿ.
ಅವರ ಹೇಳಿಕೆಗಳ ಮೂಲಕ ಈ ವ್ಯಕ್ತಿಗಳ ಕಡೆಗೆ ನೀವು ಆಕರ್ಷಿತರಾಗುತ್ತೀರೊ? ಅವರ ಸಹವಾಸದಲ್ಲಿ ನೀವು ಆನಂದಿಸುವಿರೆಂದು ನೀವು ನೆನಸುತ್ತೀರೊ? ಪ್ರಾಯಶಃ ಇಲ್ಲ. ಸಾಮಾನ್ಯವಾಗಿ, ಜಂಬಕೊಚ್ಚುವುದು—ಶ್ರದ್ದೆಯಿಂದಾಗಲಿ ಹಾಸ್ಯಕ್ಕಾಗಲಿ—ಇತರರು ಉದ್ವೇಗಗೊಳ್ಳುವಂತೆ, ಕೆರಳಿಸಲ್ಪಡುವಂತೆ, ಬಹುಶಃ ಅಸೂಯೆಗೊಳ್ಳುವಂತೆ ಕೂಡ ಮಾಡುತ್ತದೆ. ಕೀರ್ತನೆಗಾರನಾದ ಆಸಾಫನ ಮೇಲೆ ಅದು ಬೀರಿದ ಪರಿಣಾಮ ಹೀಗಿತ್ತು. ಅವನು ಒಪ್ಪಿಕೊಂಡಿದ್ದು: “ಜಂಬಕೊಚ್ಚುವವರ ಮೇಲೆ ಉರಿಗೊಂಡೆನು.” (ಕೀರ್ತನೆ 73:2, NW) ಖಂಡಿತವಾಗಿಯೂ, ನಮ್ಮ ಮಿತ್ರರಲ್ಲಿ ಮತ್ತು ಸಹವಾಸಿಗಳಲ್ಲಿ ಕೆಟ್ಟ ಅನಿಸಿಕೆಗಳ ಕಾರಣವು ನಾವಾಗಿರಲು ನಮ್ಮಲ್ಲಿ ಯಾರೂ ಬಯಸುವುದಿಲ್ಲ! ಮೊದಲನೆಯ ಕೊರಿಂಥ 13:4 ಹೇಳುವುದು: “ಪ್ರೀತಿಯು . . . ಹೊಗಳಿಕೊಳ್ಳುವುದಿಲ್ಲ.” ದೈವಿಕ ಪ್ರೀತಿ ಮತ್ತು ಇತರರ ಅನಿಸಿಕೆಗಳ ಕಡೆಗೆ ಸೂಕ್ಷ್ಮಗ್ರಾಹಿತ್ವವು, ನಮ್ಮ ಭಾವಿಸಿಕೊಂಡ ಕೌಶಲಗಳ ಮತ್ತು ಸ್ವತ್ತುಗಳ ಪ್ರದರ್ಶನದಿಂದ ತಡೆಯುವಂತೆ ನಮ್ಮನ್ನು ಪ್ರೇರೇಪಿಸುವುವು.
ವ್ಯಕ್ತಿಯೊಬ್ಬನು ತನ್ನನ್ನು ನಿಯಂತ್ರಿಸಿಕೊಂಡು, ಅಭಿಮಾನಮಿತಿಯಿಂದ ಮಾತಾಡುವುದಾದರೆ, ಅವನ ಸುತ್ತಲೂ ಇರುವ ಇತರರನ್ನು ಹಾಯಾಗಿರುವಂತೆ ಮತ್ತು ಸ್ವತಃ ತಮ್ಮ ಕುರಿತು ಅವರಿಗೆ ಒಳ್ಳೆಯದಾಗಿ ಅನಿಸುವಂತೆ ಅವನು ಮಾಡುತ್ತಾನೆ. “ಸಾಧ್ಯವಾದರೆ ಇತರರಿಗಿಂತ ಹೆಚ್ಚು ವಿವೇಕವುಳ್ಳವನಾಗಿರು; ಆದರೆ ಅವರಿಗೆ ಹಾಗೆಂದು ಹೇಳಬೇಡ,” ಎಂಬುದಾಗಿ ತನ್ನ ಮಗನಿಗೆ ಬುದ್ಧಿವಾದ ಹೇಳಿದ ಬ್ರಿಟಿಷ್ ರಾಜ್ಯ ನೀತಿಜ್ಞ ಲಾರ್ಡ್ ಚೆಸ್ಟರ್ಫೀಲ್ಡ್ನ ಮನಸ್ಸಿನಲ್ಲಿ ಬಹುಶಃ ಇದೇ ಇತ್ತು.
ಜನರಿಗೆ ಒಂದೇ ರೀತಿಯ ಪ್ರತಿಭೆಗಳು ಇರುವುದಿಲ್ಲ. ಒಬ್ಬ ವ್ಯಕ್ತಿಗೆ ಸರಳವಾಗಿರುವ ಸಂಗತಿಯು ಇನ್ನೊಬ್ಬನ ಸಾಮರ್ಥ್ಯವಾಗಿರುವುದೇ ಇಲ್ಲ. ತನಗೆ ಸಾಮರ್ಥ್ಯಗಳಿರುವ ಕ್ಷೇತ್ರಗಳಲ್ಲಿ, ಪ್ರತಿಭೆಯನ್ನು ಹೊಂದದೆ ಇರುವವರೊಂದಿಗೆ ಸಹಾನುಭೂತಿಯಿಂದ ನಿರ್ವಹಿಸುವಂತೆ ಪ್ರೀತಿಯು ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸುವುದು. ಬಹುಶಃ, ಆ ವ್ಯಕ್ತಿಗೆ ಇತರ ಕ್ಷೇತ್ರಗಳಲ್ಲಿ ಪ್ರತಿಭೆಗಳಿವೆ. ಅಪೊಸ್ತಲ ಪೌಲನು ನಮಗೆ ಹೇಳಿದ್ದು: “ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.”—ರೋಮಾಪುರ 12:3.
ಜಂಬಕೊಚ್ಚುವುದು ಬಲಹೀನತೆಯಿಂದ ಆರಂಭವಾಗುತ್ತದೆ
ಜಂಬಕೊಚ್ಚುವವರ ಉಪಸ್ಥಿತಿಯಲ್ಲಿ ಕೀಳರಿಮೆಯ ಅನಿಸಿಕೆಯನ್ನು ಅನುಭವಿಸುತ್ತಾ, ಕೆಲವರು ಅವರಿಂದ ಹಿಂದೆಗೆದುಕೊಳ್ಳಬಹುದಾದರೂ, ಇತರರು ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಜಂಬಕೊಚ್ಚುವವರು ಅಭದ್ರರಾಗಿದ್ದಾರೆಂದು ಅವರು ತೀರ್ಮಾನಿಸುತ್ತಾರೆ. ಜಂಬಕೊಚ್ಚುವ ವ್ಯಕ್ತಿಯು ಯಾಕೆ ಹಾಸ್ಯವ್ಯಂಗ್ಯವಾಗಿ ಇತರರ ದೃಷ್ಟಿಯಲ್ಲಿ ತನ್ನ ಗೌರವವನ್ನು ಕಡಿಮೆಗೊಳಿಸಿಕೊಳ್ಳಬಹುದೆಂದು ಬರಹಗಾರನಾದ ಫ್ರ್ಯಾಂಕ್ ಟ್ರಿಪ್ಟೆಟ್ ವಿವರಿಸುತ್ತಾನೆ: “ಜಂಬಕೊಚ್ಚುವಿಕೆ ಸಾಮಾನ್ಯವಾಗಿ ಯಾವುದೋ ವ್ಯಸನಕರ ವ್ಯಕ್ತಿಗತ ಬಲಹೀನತೆಗಳನ್ನು ಸಂಕೇತಿಸುತ್ತದೆ ಎಂದು ಎಲ್ಲರೂ ಅಂತರಂಗದಲ್ಲಿ ಬಲ್ಲವರಾಗಿದ್ದಾರೆ.” ಅನೇಕರು ಜಂಬಕೊಚ್ಚುವವನ ಮುಖವಾಡವನ್ನು ಭೇದಿಸಿ ಸ್ಪಷ್ಟವಾಗಿಗಿ ನೋಡುವುದರಿಂದ, ಪೊಳ್ಳಾದ ಆತ್ಮಸ್ತುತಿಯಿಂದ ತಡೆದುಕೊಳ್ಳುವುದು ಬುದ್ಧಿವಂತಿಕೆಯಾಗಿರುವುದಿಲ್ಲವೆ?
“ಆದರೆ ಅದು ಸತ್ಯ!”
ಕೆಲವರು ಈ ರೀತಿಯಲ್ಲಿ ಆತ್ಮ ಶ್ಲಾಘನೆಯನ್ನು ನ್ಯಾಯವೆಂದು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಕೆಲವೊಂದು ವಿಷಯಗಳಲ್ಲಿ ಅವರು ನಿಜವಾಗಿಯೂ ಪ್ರತಿಭಾವಂತರಾಗಿರುವುದರಿಂದ ಅನ್ಯಥಾ ನಟಿಸುವುದು ಕಪಟತನವಾಗಿರುವುದೆಂದು ಅವರು ಭಾವಿಸುತ್ತಾರೆ.
ಆದರೆ ಅವರ ಜಂಬಕೊಚ್ಚುವಿಕೆ ಸತ್ಯವಾಗಿದೆಯೊ? ಸಗ್ವಣ್ಯತೆಯು ಕಾಲ್ಪನಿಕ ಪ್ರವೃತ್ತಿಯುಳ್ಳದ್ದಾಗಿದೆ. ನಮ್ಮಲ್ಲಿಯೇ ಎದ್ದುಕಾಣುವ ಬಲವೆಂದು ನಾವು ಗ್ರಹಿಸುವ ಸಂಗತಿಯು ಇತರರಿಗೆ ಸಾಮಾನ್ಯವಾದ ಸಂಗತಿಯಾಗಿ ತೋರಬಹುದು. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಂತೆ ಒಬ್ಬ ವ್ಯಕ್ತಿಯು ಒತ್ತಾಯಿಸಲ್ಪಡುವ ಸಂಗತಿಯೇ, ಅವನು ಪ್ರಚಾರ ಇಲ್ಲದೆ ತನ್ನ ಸ್ವಂತ ಮೌಲ್ಯದಿಂದ ಗುರುತಿಸಲ್ಪಡುವಷ್ಟು ಬಲಿಷ್ಠನಾಗಿಲ್ಲ ಎಂಬುದನ್ನು ಸಹ ಸೂಚಿಸಬಲ್ಲದು. “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ,” ಎಂಬುದಾಗಿ ಅದು ಎಚ್ಚರಿಸುವಾಗ, ಆತ್ಮ ವಂಚನೆಯ ಕಡೆಗೆ ಇರುವ ಮಾನವ ಪ್ರವೃತ್ತಿಯನ್ನು ಬೈಬಲ್ ಅಂಗೀಕರಿಸುತ್ತದೆ.—1 ಕೊರಿಂಥ 10:12.
ವ್ಯಕ್ತಿಯೊಬ್ಬನು ವಿಶೇಷವಾದೊಂದು ಕ್ಷೇತ್ರದಲ್ಲಿ ಅಸಾಧಾರಣವಾದ ಸಾಮರ್ಥ್ಯವುಳ್ಳವನಾಗಿರುವುದಾದರೂ ಅದು ಜಂಬಕೊಚ್ಚುವುದನ್ನು ನ್ಯಾಯವೆಂದು ಸಮರ್ಥಿಸುತ್ತದೊ? ಇಲ್ಲ, ಜಂಬಕೊಚ್ಚುವಿಕೆ ಮಾನವರನ್ನು ಮಹಿಮೆಪಡಿಸುತ್ತದೆ, ಆದರೆ ನಮಗಿರುವ ಯಾವುದೇ ಸಾಮರ್ಥ್ಯಗಳು ದೇವರಿಂದ ಬಂದವುಗಳಾಗಿವೆ. ಮಹಿಮೆಯನ್ನು ಆತನು ಪಡೆಯಬೇಕು. ಯಾವುದೊ ಸಾಮರ್ಥ್ಯದೊಂದಿಗೆ ಜನಿಸಿದಕ್ಕಾಗಿ ನಾವು ಯಾಕೆ ಪ್ರಶಸ್ತಿಯನ್ನು ಪಡೆಯಬೇಕು? (1 ಕೊರಿಂಥ 4:7) ಅಲ್ಲದೆ, ನಾವು ಸಾಮರ್ಥ್ಯಗಳನ್ನು ಹೊಂದಿರುವಂತೆಯೇ, ಬಲಹೀನತೆಗಳನ್ನೂ ಹೊಂದಿದ್ದೇವೆ. ನಮ್ಮ ಕುಂದು ಹಾಗೂ ಕೊರತೆಗಳ ಕಡೆಗೆ ಗಮನವನ್ನು ಆಕರ್ಷಿಸುವಂತೆ ಪ್ರಾಮಾಣಿಕತೆಯು ಅವಶ್ಯಪಡಿಸುತ್ತದೊ? ಜಂಬಕೊಚ್ಚುವ ಕೆಲವರು ಹಾಗೆ ಯೋಚಿಸುವಂತೆ ತೋರುತ್ತಾರೆ. ರಾಜನಾದ I ನೆಯ ಹೆರೋದ ಅಗ್ರಿಪ್ಪನು ನಿಜವಾಗಿಯೂ ಪ್ರತಿಭಾವಂತ ಭಾಷಣಕರ್ತನಾಗಿದ್ದಿರಬಹುದು. ಆದರೂ ಅವನ ಅಭಿಮಾನಮಿತಿಯ ಕೊರತೆಯು ಬಹಳ ಅಹಿತಕರವಾದ ಮರಣಕ್ಕೆ ನಡೆಸಿತು. ಜಂಬವು ಅನೇಕ ಮಾನವರಿಗೆ ಇರುವಂತೆಯೇ ದೇವರಿಗೂ ಅಸಹ್ಯವಾಗಿದೆ ಎಂದು ಆ ವಿಕಾರವಾದ ಘಟನೆಯು ಪ್ರತಿಬಿಂಬಿಸುತ್ತದೆ.—ಅ. ಕೃತ್ಯಗಳು 12:21-23.
ಕೌಶಲಗಳು ಮತ್ತು ಸಾಮರ್ಥ್ಯಗಳು ಸಾಮಾನ್ಯವಾಗಿ ಅನುಚಿತವಾದ ಸ್ವಪ್ರಚಾರವಿಲ್ಲದೆಯೇ ಪ್ರಸಿದ್ಧವಾಗುತ್ತವೆ. ಇತರರು ಒಬ್ಬನ ಗುಣಗಳನ್ನು ಯಾ ಸಾಧನೆಗಳನ್ನು ಗುರುತಿಸಿ, ಪ್ರಶಂಸಿಸುವಾಗ, ಪಡೆದುಕೊಳ್ಳುವವನ ಮೇಲೆ ಅದು ಅಧಿಕ ಹಿತಕರವಾಗಿ ಪ್ರತಿಬಿಂಬಿಸಲ್ಪಡುತ್ತದೆ. ಜ್ಞಾನೋಕ್ತಿ 27:2 ಬುದ್ಧಿವಂತಿಕೆಯಿಂದ ಹೇಳುವುದು: “ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ; ಆತ್ಮಸ್ತುತಿ ಬೇಡ, ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ.”
ಸಾಧನೆಗಾಗಿ ಬೇಕಾಗಿದೆಯೊ?
ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಸಾಧನೆಗಾಗಿ ಭರವಸೆಯ ಆತ್ಮ ಪ್ರವರ್ತನೆ ಅಗತ್ಯವಾಗಿದೆ ಎಂದು ಕೆಲವರಿಗೆ ಅನಿಸುತ್ತದೆ. ಅವರು ತಮ್ಮ ಸಾಮರ್ಥ್ಯಗಳ ಪ್ರಚಾರ ಮಾಡದೆ ಮತ್ತು ಮಾತಾಡದೆ ಇರುವುದಾದರೆ, ಗಮನಿಸಲ್ಪಡದೆ, ಗಣ್ಯಮಾಡಲ್ಪಡದೆ ಹೋಗುವರೆಂದು ಅವರು ಚಿಂತಿಸುತ್ತಾರೆ. ವೋಗ್ ಪತ್ರಿಕೆಯ ಈ ಹೇಳಿಕೆಯು ಅವರ ಚಿಂತೆಯ ಪ್ರತಿನಿಧಿರೂಪವಾಗಿದೆ: “ಅಭಿಮಾನಮಿತಿಯು ಒಂದು ಸದ್ಗುಣವಾಗಿದೆ ಎಂದು ನಾವು ಪೂರ್ವದಲ್ಲಿ ಕಲಿಸಲ್ಪಟ್ಟೆವು, ಈಗ ಮಿತಭಾಷಿತ್ವವು ಒಂದು ಅನಾನುಕೂಲ್ಯವಾಗಿರಬಲ್ಲದೆಂದು ನಾವು ಕಲಿಯುತ್ತಾ ಇದ್ದೇವೆ.”
ಈ ಲೋಕದ ಮಟ್ಟಗಳನುಸಾರ ಪ್ರಗತಿಯನ್ನು ಮಾಡಲು ಬಯಸುವವರಿಗೆ, ಇದೊಂದು ಪ್ರಾಮುಖ್ಯವಾದ ಚಿಂತೆಯಾಗಿರಬಹುದು. ಆದರೆ ಒಬ್ಬ ಕ್ರೈಸ್ತನ ಸನ್ನಿವೇಶವು ಭಿನ್ನವಾಗಿದೆ. ದೀನರಾಗಿರುವವರ—ಜಂಬದವರಲ್ಲ—ಬಗ್ಗೆ ದೇವರು ಚಿಂತಿಸುತ್ತಾನೆಂದು ಮತ್ತು ಅವರ ಸಾಮರ್ಥ್ಯಗಳನ್ನು ಉಪಯೋಗಿಸಲು ಆರಿಸುತ್ತಾನೆಂದು ಅವನಿಗೆ ತಿಳಿದಿದೆ. ಆದುದರಿಂದ, ಸ್ವಾಭಿಮಾನದ ತಂತ್ರಗಳನ್ನು ಆಶ್ರಯಿಸುವ ಅಗತ್ಯವು ಕ್ರೈಸ್ತನೊಬ್ಬನಿಗೆ ಇರುವುದಿಲ್ಲ. ಬಲಯುಕ್ತವಾಗಿ ಯಾ ಕೈಚಳಕ ತೋರಿಸುವ ಮೂಲಕ ಒಬ್ಬ ಮಿತಿಮೀರಿದ ಭರವಸೆಯುಳ್ಳ ವ್ಯಕ್ತಿಯು ತಾತ್ಕಾಲಿಕ ಗೌರವವನ್ನು ಪಡೆಯಬಹುದು, ನಿಜ. ಆದರೂ ಸಕಾಲದಲ್ಲಿ ಅವನು ಬಹಿರಂಗಗೊಳಿಸಲ್ಪಡುತ್ತಾನೆ ಮತ್ತು ತಗ್ಗಿಸಲ್ಪಡುತ್ತಾನೆ, ಅಪಮಾನಗೊಳಿಸಲ್ಪಡುತ್ತಾನೆ ಸಹ. ಅದು ಯೇಸು ಕ್ರಿಸ್ತನು ಹೇಳಿದಂತಿದೆ: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಮತ್ತಾಯ 23:12; ಜ್ಞಾನೋಕ್ತಿ 8:13; ಲೂಕ 9:48.
ಅಭಿಮಾನಮಿತಿಯ ಲಾಭಗಳು
ರ್ಯಾಲ್ಫ್ ವಾಲ್ಡೊ ಎಮರ್ಸನ್ ಬರೆದದ್ದು: “ನಾನು ಭೇಟಿಯಾಗುವ ಪ್ರತಿಯೊಬ್ಬ ಮನುಷ್ಯನು ಯಾವುದಾದರೂ ವಿಧದಲ್ಲಿ ನನ್ನ ಮೇಲಿನವನಾಗಿದ್ದಾನೆ. ಆ ಕಾರಣದಿಂದ, ನಾನು ಅವನ ಕುರಿತು ಕಲಿಯುತ್ತೇನೆ.” ಅವನ ಹೇಳಿಕೆ, ಕ್ರೈಸ್ತರು “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು” ಎಣಿಸಬೇಕೆಂಬ ಅಪೊಸ್ತಲ ಪೌಲನ ದೈವಿಕವಾಗಿ ಪ್ರೇರಿತವಾದ ಬುದ್ಧಿವಾದದೊಂದಿಗೆ ಹೊಂದಿಕೆಯಲ್ಲಿದೆ. (ಫಿಲಿಪ್ಪಿ 2:3) ಅಭಿಮಾನಮಿತಿಯ ಈ ದೃಷ್ಟಿಕೋನವು ಒಬ್ಬನನ್ನು ಇತರರಿಂದ ಕಲಿಯುವ ಸ್ಥಾನದಲ್ಲಿ ಇರಿಸುತ್ತದೆ.
ನಿಮ್ಮ ಸಾಮರ್ಥ್ಯವು ನಿಮ್ಮ ಬಲಹೀನತೆಯಾಗದಂತೆ ಎಚ್ಚರವಹಿಸಿರಿ. ಜಂಬಕೊಚ್ಚುವಿಕೆಯ ಮೂಲಕ ನಿಮ್ಮ ಸಾಮರ್ಥ್ಯಗಳನ್ನು ಮತ್ತು ಸಾಧನೆಗಳನ್ನು ಕಡಮೆ ಮಾಡದಿರಿ. ನಿಮ್ಮ ಉತ್ತಮ ಗುಣಗಳಿಗೆ ಅಭಿಮಾನಮಿತಿಯೆಂಬ ಗುಣವನ್ನು ಕೂಡಿಸಿರಿ. ಇತರರ ದೃಷ್ಟಿಯಲ್ಲಿ ಒಬ್ಬನ ಗೌರವವನ್ನು ನಿಜವಾಗಲೂ ಏರಿಸುವಂಥದ್ದು ಇದೆ ಆಗಿದೆ. ಜೊತೆ ಮಾನವರೊಂದಿಗೆ ಉತ್ತಮ ಸಂಬಂಧಗಳನ್ನು ಒಬ್ಬನು ಅನುಭವಿಸುವಂತೆ ಅದು ಸಹಾಯ ಮಾಡುತ್ತದೆ ಮತ್ತು ಯೆಹೋವ ದೇವರ ಮೆಚ್ಚಿಕೆಯನ್ನು ತರುತ್ತದೆ.—ಮೀಕ 6:8; 2 ಕೊರಿಂಥ 10:18.