ನಿಮ್ಮ ಧರ್ಮ ಎಂದೂ ತೊರೆಯಬಾರದ ಒಂದು ಹಡಗೋ?
ಹಡಗೊಂದು ಚಂಡಮಾರುತವೊಂದರ ಮಧ್ಯದಲ್ಲಿದೆ. ತಮ್ಮ ಹಡಗನ್ನು ರಕ್ಷಿಸಲು ವಿಪರೀತವಾಗಿ ಒದ್ದಾಡುತ್ತಿರುವ ನಾವಿಕತಂಡವು, ಒಂದು ನಾಟಕೀಯ ನಿರ್ಣಯದೊಂದಿಗೆ ಎದುರಿಸಲ್ಪಡುತ್ತದೆ: ಹಡಗಿನಲ್ಲೇ ಇರುವದು ಇಲ್ಲವೆ ಹಡಗನ್ನು ತೊರೆದು ತಮ್ಮನ್ನು ರಕ್ಷಿಸಿಕೊಳ್ಳುವುದು. ಈ ಭಯ ಹುಟ್ಟಿಸುವ ದೃಶ್ಯವಿವರವು ಒಂದು ದೇವತಾಶಾಸ್ತ್ರೀಯ ದೃಷ್ಟಾಂತವಾಗಿ ಬಳಸಲಾಗುತ್ತಿದೆಯೆಂದು ನಿಮಗೆ ತಿಳಿದಿತ್ತೋ?
ದೇವತಾಶಾಸ್ತ್ರಜ್ಞರು, ವಿಶೇಷವಾಗಿ ಕ್ಯಾತೊಲಿಕ್ ವಿದ್ವಾಂಸರು, ಆಗಿಂದಾಗ್ಗೆ ತಮ್ಮ ಚರ್ಚನ್ನು, ಬಿರುಗಾಳಿ ಮಳೆಗೆ ಸಿಕ್ಕಿ ಸುರಕ್ಷಿತವಾಗಿ ಹೊರಬರುವ ಹಡಗೊಂದಕ್ಕೆ ಹೋಲಿಸುತ್ತಾರೆ. ಯೇಸು ಅಥವಾ ಪೇತ್ರನು ಚುಕ್ಕಾಣಿ ಚಕ್ರವನ್ನು ನಡಿಸುತ್ತಿದ್ದು, ಈ ಹಡಗು ರಕ್ಷಣೆಯ ಏಕಮಾತ್ರ ಮಾಧ್ಯಮವನ್ನು ಪ್ರತಿನಿಧೀಕರಿಸುತ್ತದೆಂದು ಅವರು ಹೇಳುತ್ತಾರೆ. ವೈದಿಕ ವರ್ಗದ ಅಭಿಪ್ರಾಯವು ಇದಾಗಿದೆ, ‘ಎಂದಿಗೂ ಹಡಗನ್ನು ತೊರೆಯಬೇಡಿರಿ. ಚರ್ಚು ಈ ಮುಂಚೆ ಗಂಭೀರ ಬಿಕ್ಕಟುಗಳನ್ನು ಅನುಭವಿಸಿದೆ, ಆದರೆ ಇತಿಹಾಸದ ಎಲ್ಲಾ ಚಂಡಮಾರುತಗಳಿಂದ ಸುರಕ್ಷಿತವಾಗಿ ಹೊರಬಂದಂತಹ ಒಂದು ಹಡಗು ಅದಾಗಿದೆ.’ ಕೆಲವರು ಹೇಳುವುದು, ‘ಕ್ಯಾತೊಲಿಕ್ ಚರ್ಚನ್ನು ಯಾಕೆ ತೊರೆಯಬೇಕು? ಬೇರೆ ಯಾವ ಪರ್ಯಾಯ ದಾರಿಗಳಿವೆ? ಹಿಂದೆ ಉಳಿದು ಅವಳನ್ನು ಪ್ರಶಾಂತ ನೀರುಗಳಿಗೆ ಹೋಗಲು ಯಾಕೆ ಸಹಾಯ ಮಾಡಬಾರದು?’
ಈ ಸಾಂಕೇತಿಕ ಭಾಷೆಗೆ ಹೊಂದಿಕೆಯಲ್ಲಿ, ಎಲ್ಲಾ ವಿಧದ ಧರ್ಮಗಳ ಅನೇಕ ಜನರು ಸಮರ್ಥಿಸುವುದು, ‘ನನ್ನ ಧರ್ಮವು ಅನೇಕ ವಿಷಯಗಳಲ್ಲಿ ತಪ್ಪಾಗಿದೆ ಎಂದು ನನಗೆ ತಿಳಿದಿದೆ, ಆದರೆ ಅದು ಬದಲಾಗುವದೆಂದು ನಾನು ನಿರೀಕ್ಷಿಸುತ್ತೇನೆ. ನಾನು ಅದನ್ನು ತೊರೆಯಲು ಬಯಸುವದಿಲ್ಲ. ಅದರ ಕಷ್ಟಗಳನ್ನು ಜಯಿಸಲು ಅದಕ್ಕೆ ಸಹಾಯ ಮಾಡುವದರಲ್ಲಿ ನನಗೆ ಒಂದು ಪಾಲಿರಲು ನಾನು ಇಷ್ಟಪಡುವೆನು.’ ಒಬ್ಬನ ಪೂರ್ವಜರ ಧರ್ಮಕ್ಕಾಗಿ ಯಥಾರ್ಥ ಒಲವು ಅಥವಾ ಅದಕ್ಕೆ “ವಿಶ್ವಾಸಘಾತ” ಮಾಡುವ ಭಯದಿಂದಲೂ ಈ ರೀತಿಯ ಸಮರ್ಥನೆಯು ನಿರ್ದೇಶಿಸಲ್ಪಡಬಹುದು.
ಒಬ್ಬ ಪ್ರಸಿದ್ಧ ಕ್ಯಾತೊಲಿಕ್ ಭಿನ್ನಮತೀಯ ದೇವತಾಶಾಸ್ತ್ರಜ್ಞ ಹಾನ್ಸ್ ಕುಂಗ್ ಇದಕ್ಕೆ ಒಂದು ಉಚಿತ ಉದಾಹರಣೆ. ಅವನು ಆಲೋಚನಾತ್ಮಕವಾಗಿ ಹೀಗೆ ಹೇಳಿದ್ದು: “ಚಂಡಮಾರುತದ ಸಮಯದಲ್ಲಿ ನಾನು ನಾವೆಯನ್ನು ತೊರೆದು, ನಾನು ಇಷ್ಟರವರೆಗೆ ಯಾರೊಂದಿಗೆ ಪ್ರಯಾಣಿಸಿದೆನೋ ಅವರನ್ನು, ಬಿರುಗಾಳಿ ಎದುರಿಸುವ ಮತ್ತು ದೋಣಿಯಿಂದ ನೀರನ್ನು ಹೊರಚೆಲ್ಲಲು ಮತ್ತು ಪ್ರಾಯಶಃ ಪಾರಾಗುವಿಕೆಗಾಗಿ ಹೋರಾಡುತ್ತಿರುವಂತೆ ಬಿಡಬೇಕೋ?” ಅವನು ಉತ್ತರಿಸಿದ್ದು: “ನಾನು ಚರ್ಚಿನೊಳಗೆ ನನ್ನ ಕಾರ್ಯಸಾಧನೆಯನ್ನು ಎಂದೂ ಬಿಟ್ಟುಬಿಡೆನು.” “ಹೆಚ್ಚು ಉನ್ನತ ಮೌಲ್ಯಗಳಿಗಾಗಿರುವ ಪ್ರೀತಿಗಾಗಿ, ಮತ್ತು ಪ್ರಾಯಶಃ ಹೆಚ್ಚು ಯಥಾರ್ಥ ಕ್ರೈಸ್ತರಾಗಿರಲಿಕ್ಕಾಗಿ, ಅದರ ಧರ್ಮಚ್ಯುತಿಯ ಕಾರಣದಿಂದಾಗಿ ಈ ಚರ್ಚಿನಿಂದ ಬೇರ್ಪಡುವುದು” ಇನ್ನೊಂದು ಪರ್ಯಾಯ ಮಾರ್ಗವಾಗಿರಸಾಧ್ಯವಿದೆ.—ಡೈ ಹಾಫ್ನಂಗ್ ಬಿವಾರೆನ್.
ಆದರೆ ದೇವರು ತನ್ನ ದಯೆಯಿಂದ ಎಲ್ಲಾ ಧರ್ಮಗಳಿಗೆ ಸುಧಾರಿಸಲು ಒಂದು ಅಸೀಮಿತ ಸಮಯಾವಧಿಯನ್ನು ಅನುಮತಿಸುವನು ಎಂಬ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಚರ್ಚಿನ ದೋಣಿಯಲ್ಲಿ ಉಳಿಯಬಲ್ಲನೊ? ಅದೊಂದು ಗಂಭೀರ ಪ್ರಶ್ನೆಯಾಗಿದೆ. ದೃಷ್ಟಾಂತದ ಮೂಲಕ ಸೂಚಿಸಲ್ಪಟ್ಟಂತೆ, ಅಸುರಕ್ಷಿತ ಪ್ರಾಣರಕ್ಷಕ ದೋಣಿಗಳನ್ನು ಹತ್ತಲಿಕ್ಕಾಗಿ ಅಪಾಯದಲ್ಲಿರುವ ಹಡಗನ್ನು ತರಾತುರಿಯಿಂದ ಬಿಡುವುದು, ಒಂದು ಮುಳುಗುತ್ತಿರುವ ಹಡಗಿನೊಳಗೆ ಉಳಿಯುವಷ್ಟೇ ಅಪಾಯಕರವಾಗಿರುವುದು. ಪರಿಸ್ಥಿತಿಯು ಏನೇ ಆಗಿರಲಿ, ಯಾವುದೇ ಬೆಲೆಯನ್ನು ತೆತ್ತು ಒಂದು ಚರ್ಚಿನಲ್ಲಿ ಉಳಿಯುವದು ವಿವೇಕಯುತವೋ? ಇಂದಿನ ಧರ್ಮಗಳು ಸುಧಾರಣೆಯ ಯಾವ ಪ್ರತೀಕ್ಷೆಗಳನ್ನು ನೀಡುತ್ತವೆ? ದೇವರು ಅವರನ್ನು ತನ್ನ ಚಿತ್ತದ ವಿರುದ್ಧವಾಗಿ ಕಾರ್ಯನಡಿಸಲು ಎಷ್ಟರ ತನಕ ಅನುಮತಿಸುವನು?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Chesnot/Sipa Press