“ಹಳೆಯ ಒಡಂಬಡಿಕೆ” ಅಥವಾ “ಹೀಬ್ರು ಶಾಸ್ತ್ರವಚನಗಳು”—ಯಾವುದು?
ಇಂದು ಕ್ರೈಸ್ತಪ್ರಪಂಚದಲ್ಲಿ ಬೈಬಲಿನ ಹೀಬ್ರು⁄ಆ್ಯರಮೇಯಿಕ್ ಮತ್ತು ಗ್ರೀಕ್ ಭಾಷೆಗಳ ಭಾಗಗಳನ್ನು ವರ್ಣಿಸಲು “ಹಳೆಯ ಒಡಂಬಡಿಕೆ” ಮತ್ತು “ಹೊಸ ಒಡಂಬಡಿಕೆ” ಯೆಂಬ ಪದಗಳನ್ನು ಬಳಸುವುದು ಒಂದು ಸಾಮಾನ್ಯ ಪದ್ಧತಿಯಾಗಿದೆ. ಆದರೆ ಇಂತಹ ಪದಗಳನ್ನು ಉಪಯೋಗಿಸಲು ಯಾವುದಾದರೂ ಬೈಬಲ್ ಆಧಾರವಿದೆಯೋ? ಮತ್ತು ಯೆಹೋವನ ಸಾಕ್ಷಿಗಳು ಯಾವ ಕಾರಣಗಳಿಗಾಗಿ ಅವುಗಳನ್ನು ತಮ್ಮ ಪ್ರಕಾಶನಗಳಲ್ಲಿ ಸಾಮಾನ್ಯವಾಗಿ ಬಳಸುವದನ್ನು ತೊರೆಯುತ್ತಾರೆ?
ಕಿಂಗ್ ಜೇಮ್ಸ್ ವರ್ಷನ್ ಮತ್ತು ಮಾರ್ಟಿನ್ ಲೂತರ್ನ ಮೊದಲ ಭಾಷಾಂತರವಾದ ಜರ್ಮನ್ ಸೆಪ್ಟಂಬರ್ಟೆಸ್ಟಾಮೆಂಟ್ (1522) ನಂತಹ ಇತರ ಹಳೆಯ ಭಾಷಾಂತರಗಳಿಗನುಸಾರ, 2 ಕೊರಿಂಥ 3:14 ಈ ಪದ್ಧತಿಯನ್ನು ಬೆಂಬಲಿಸುವಂತೆ ತೋರಬಹುದು ನಿಜ. ಕಿಂಗ್ ಜೇಮ್ಸ್ ವರ್ಷನ್ ನಲ್ಲಿ ಈ ವಚನವು ಹೀಗೆ ಓದುತ್ತದೆ: “ಆದರೆ ಅವರ ಮನಸ್ಸುಗಳು ಕುರುಡುಮಾಡಲ್ಪಟ್ಟವು; ಯಾಕಂದರೆ ಈ ದಿನದ ವರೆಗೆ ಹಳೆಯ ಒಡಂಬಡಿಕೆಯ ವಾಚನದಲ್ಲಿ ಅದೇ ಮುಸುಕು, ಕ್ರಿಸ್ತನಿಂದ ತೆಗೆಯಲ್ಪಟ್ಟಿರುವ ಆ ಮುಸುಕು ಎತ್ತಲ್ಪಡದೆ ಇದೆ.”
ಆದಾಗಲೂ, ಸಾಮಾನ್ಯವಾಗಿ “ಹಳೆಯ ಒಡಂಬಡಿಕೆ” ಯೆಂದು ಕರೆಯಲ್ಪಡುವ 39 ಪುಸ್ತಕಗಳ ಕುರಿತಾಗಿ ಅಪೊಸ್ತಲನು ಇಲ್ಲಿ ಮಾತನಾಡುತ್ತಿದ್ದನೋ? ಇಲ್ಲಿ “ಒಡಂಬಡಿಕೆ” ಯೆಂದು ಭಾಷಾಂತರಿಸಲಾದ ಗ್ರೀಕ್ ಶಬ್ದವು ಡಿಯಾತೆಕೆ ಯಾಗಿದೆ. ಪ್ರಸಿದ್ಧ ಜರ್ಮನ್ ದೇವತಾಶಾಸ್ತ್ರದ ವಿಶ್ವಕೋಶ ಟೇಓಲೊಗಿಕೆ ರೇಆಲ್ಎಂಟ್ಸ್ಯೂಕ್ಲೋಪಾಡಿ 2 ಕೊರಿಂಥ 3:14ರ ಮೇಲೆ ವ್ಯಾಖ್ಯಾನ ಮಾಡುತ್ತಾ ಹೇಳುವುದೇನಂದರೆ ಆ ವಚನದಲ್ಲಿ ‘ಹಳೆಯ ಡಿಯಾತೆಕೆಯ ವಾಚನವು’, ಮತ್ತು ಮುಂದಿನ ವಚನದಲ್ಲಿನ ‘ಮೋಶೆಯ ಪಾರಾಯಣವು’ ಒಂದೇ ಆಗಿದೆ. ಹೀಗಿರುವದರಿಂದ ಅದು ಹೇಳುವುದು ‘ಹಳೆಯ ಡಿಯಾತೆಕೆ’ ಮೋಶೆಯ ನಿಯಮಶಾಸ್ತ್ರಕ್ಕೆ, ಅಥವಾ ಹೆಚ್ಚೆಂದರೆ ಪೆಂಟಟ್ಯೂಕ್ ಪ್ರಕರಣಗಳಿಗೆ ಸೂಚಿಸುತ್ತದೆ. ಅದು ಖಂಡಿತವಾಗಿಯೂ ಕ್ರೈಸ್ತತ್ವಕ್ಕೆ ಮುಂಚಿನ ಪ್ರೇರಿತ ಶಾಸ್ತ್ರವಚನಗಳ ಇಡೀ ಭಾಗಕ್ಕೆ ಸೂಚಿಸುವುದಿಲ್ಲ.
ಅಪೊಸ್ತಲನು ಹೀಬ್ರು ಶಾಸ್ತ್ರವಚನಗಳ ಒಂದು ಭಾಗವಾಗಿರುವ, ಪೆಂಟಟ್ಯೂಕ್ನಲ್ಲಿ ಮೋಶೆಯಿಂದ ದಾಖಲಿಸಲ್ಪಟ್ಟ ಹಳೆಯ ನಿಯಮ ಒಡಂಬಡಿಕೆಗೆ ಸೂಚಿಸುತ್ತಿದ್ದನು; ಅವನು ಪೂರ್ಣ ಹೀಬ್ರು ಮತ್ತು ಅ್ಯರಮೆಯಿಕ್ ಶಾಸ್ತ್ರವಚನಗಳಿಗೆ ಸೂಚಿಸತ್ತಿರಲಿಲ್ಲ. ಇನ್ನೂ ಹೆಚ್ಚಾಗಿ, ಸಾ.ಶ. ಮೊದಲನೆಯ ಶತಮಾನದ ಪ್ರೇರಿತ ಕ್ರೈಸ್ತ ಬರಹಗಳು ಒಂದು “ಹೊಸ ಒಡಂಬಡಿಕೆಯ”ನ್ನು ರಚಿಸುತ್ತವೆಯೆಂದು ಅವನ ಅರ್ಥವಾಗಿರಲಿಲ್ಲ, ಯಾಕಂದರೆ ಈ ಪದವು ಬೈಬಲಿನಲ್ಲಿ ಎಲ್ಲಿಯೂ ಕಂಡುಬರುವದಿಲ್ಲ.
ಡಿಯಾತೆಕೆ ಎಂದು ಪೌಲನು ಇಲ್ಲಿ ಉಪಯೋಗಿಸಿದಂತಹ ಗ್ರೀಕ್ ಶಬ್ದದ ಅರ್ಥ ನಿಜವಾಗಿಯೂ “ಕರಾರು” ಎಂದಾಗಿದೆ ಎಂಬದನ್ನೂ ಗಮನಿಸಬೇಕಾಗಿದೆ. (ಹೆಚ್ಚಿನ ಮಾಹಿತಿಗಾಗಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸ್ಸ್, ಅಪೆಂಡಿಕ್ಸ್ 7E, ಪುಟ 1585ನ್ನು ನೋಡಿರಿ. ನ್ಯೂಯಾರ್ಕ್ ಇನ್ಕ್ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1984 ರಲ್ಲಿ ಪ್ರಕಾಶಿತವಾದದ್ದು.) ಆದುದರಿಂದ ಅನೇಕ ಆಧುನಿಕ ಭಾಷಾಂತರಗಳು “ಹಳೇ ಒಡಂಬಡಿಕೆ” ಗಿಂತ ಸರಿಯಾಗಿ “ಹಳೆಯ ಕರಾರು” ಎಂದು ಓದುತ್ತವೆ.
ಈ ಸಂಬಂಧದಲ್ಲಿ “ನ್ಯಾಷನಲ್ ಕ್ಯಾತೊಲಿಕ್ ರಿಪೋರ್ಟರ್” ತಿಳಿಸಿದ್ದು: “‘ಹಳೆಯ ಒಡಂಬಡಿಕೆ’ ಎಂಬ ಪದವು ಅನಿವಾರ್ಯವಾಗಿ ಕೆಳಮಟ್ಟದ ಮತ್ತು ಅರೂಢಿತನದ ಒಂದು ವಾತಾವರಣವನ್ನು ಸೃಷ್ಟಿಸುತ್ತದೆ.” ಆದರೆ ಬೈಬಲು ನಿಜವಾಗಿ ಒಂದೇ ಕೃತಿಯಾಗಿದೆ, ಮತ್ತು ಯಾವುದೇ ಭಾಗವು ರೂಢಿಯಲಿಲ್ಲದ್ದು ಅಥವಾ “ಹಳೇ” ತಾಗಿಲ್ಲ. ಅದರ ಸಂದೇಶವು ಹೀಬ್ರು ಭಾಗದಲ್ಲಿನ ಮೊದಲ ಪುಸ್ತಕದಿಂದ ಗ್ರೀಕ್ ಭಾಗದ ಕೊನೆಯ ಪುಸ್ತಕದ ತನಕ ಸುಸಂಗತವಾಗಿದೆ. (ರೋಮಾಪುರ 15:4; 2 ತಿಮೊಥೆಯ 3:16, 17) ಆದುದರಿಂದ, ತಪ್ಪಾದ ಕಲ್ಪನೆಗಳ ಮೇಲೆ ಆಧರಿತವಾದ ಈ ಪದಗಳನ್ನು ತೊರೆಯಲು ನಮಗೆ ನ್ಯಾಯವಾದ ಕಾರಣಗಳಿವೆ, ಮತ್ತು ನಾವು ಹೆಚ್ಚು ಸರಿಯಾಗಿರುವ “ಹೀಬ್ರು ಶಾಸ್ತ್ರವಚನಗಳು” ಮತ್ತು “ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು” ಎಂಬ ಪದಗಳನ್ನು ಉಪಯೋಗಿಸಲು ಇಚ್ಛಿಸುತ್ತೇವೆ.”