ಈ ತಡೆಗಟ್ಟುಗಳನ್ನು ನೀವು ಭೇದಿಸಬಲ್ಲಿರಿ!
ಒಂದು ಜಂಬೊ ವಿಮಾನವು ನೂರಾರು ಯಾತ್ರಿಕರನ್ನು ಮತ್ತು ಟನ್ನುಗಟ್ಟಲೆ ಸರಕುಗಳನ್ನು ಒಳಗೆ ಹೇರಿಕೊಳ್ಳಬಹುದು. ಅಂತಹ ಭಾರವುಳ್ಳ ವಿಮಾನವು ನೆಲದಿಂದ ಮೇಲೇರುವುದು ಹೇಗೆ? ಸರಳವಾಗಿ, ಎತ್ತಿಗೆಯ ಮೂಲಕ.
ವಿಮಾನವು ಹಾರುವ ಮೊದಲು ತನ್ನ ಪಥದಲ್ಲಿ ವೇಗದಿಂದ ಧಾವಿಸುವಾಗ, ಗಾಳಿಯು ಅದರ ವಕ್ರ ರೆಕ್ಕೆಗಳ ಮೇಲೂ ಕೆಳಗೂ ರಭಸದಿಂದ ನುಗ್ಗುತ್ತದೆ. ಇದು ಎತ್ತಿಗೆ ಎಂದು ಕರೆಯಲ್ಪಡುವ ಮೇಲಕ್ಕೆತ್ತುವ ಶಕ್ತಿಯನ್ನು ಉತ್ಪಾದಿಸುತ್ತದೆ. ಸಾಕಷ್ಟು ಎತ್ತಿಗೆ ಶಕ್ತಿಯು ನಿರ್ಮಿತವಾದಾಗ, ವಿಮಾನವು ಭೂಮಿಯ ಗುರುತ್ವಾಕರ್ಷಣ ಶಕಿಯ್ತಿಂದ ಬಿಡಿಸಿಕೊಂಡು ಹಾರಬಲ್ಲದು. ಒಂದು ಮಿತಿಮೀರಿ ಭಾರ ತುಂಬಿದ ವಿಮಾನವು ಮೇಲೆ ಹಾರಲು ಸಾಕಷ್ಟು ಎತ್ತಿಗೆಯನ್ನು ನಿರ್ಮಿಸಲಾರದು, ನಿಶ್ಚಯ.
ನಾವು ಸಹ ಮಿತಿಮೀರಿದ ಭಾರ ತುಂಬಿದವರಾಗಬಲ್ಲೆವು. ಶತಮಾನಗಳ ಹಿಂದೆ ಅರಸ ದಾವೀದನು, ಅವನ ‘ಅಪರಾಧಗಳು ಹೊರಲಾರದಷ್ಟು ಭಾರವಾದ ಹೊರೆಯಂತಿದ್ದವು’ ಎಂದು ಹೇಳಿದನು. (ಕೀರ್ತನೆ 38:4) ತದ್ರೀತಿ, ಜೀವನದ ಚಿಂತೆಗಳಿಂದ ಹೃದಯವು ಭಾರದಿಂದ ಕುಗ್ಗಿಹೋಗುವುದರ ವಿರುದ್ಧವಾಗಿ ಯೇಸು ಕ್ರಿಸ್ತನು ಎಚ್ಚರಿಕೆ ನೀಡಿದನು. (ಲೂಕ 21:34) ನಕಾರಾತ್ಮಕ ವಿಚಾರಗಳು ಮತ್ತು ಮನೋಭಾವಗಳು ಸಹ “ಮೇಲಕ್ಕೇರಲು” ಕಷ್ಟವೆಂದು ಕಾಣುವಷ್ಟರ ಮಟ್ಟಿಗೆ ನಮ್ಮನ್ನು ಕೆಳಕ್ಕೆ ಜಗ್ಗಿಸಬಲ್ಲವು. ನೀವು ಆ ರೀತಿಯಲ್ಲಿ ಕೆಳಕ್ಕೆ ಜಗ್ಗಸಲ್ಪಟ್ಟಿದ್ದೀರೊ? ಅಥವಾ ನಿಮ್ಮ ಅಧಿಕ ಆತ್ಮಿಕ ವಿಕಾಸಕ್ಕೆ ಸ್ವಲ್ಪ ತಡೆಗಟ್ಟನ್ನು ನೀವು ಅನುಭವಿಸಿದ್ದೀರೊ? ಹಾಗಿರುವಲ್ಲಿ, ಯಾವುದು ಸಹಾಯಕವಾಗಿರಬಹುದು?
ನೀವು ಬೇಸರಿಸಲ್ಪಟ್ಟಿದ್ದೀರೊ?
ಬೇಸರ—ಇಂದಿನ ಒಂದು ಸಾಮಾನ್ಯ ಗೊಣಗು—ವು ಒಂದು ಮಾನಸಿಕ ತಡೆಗಟ್ಟಾಗಿ ಪರಿಣಮಿಸಬಲ್ಲದು, ಯೆಹೋವನ ಜನರಲ್ಲಿ ಕೆಲವರಿಗೆ ಸಹ. ವಿಶೇಷವಾಗಿ ಯುವಜನರಿಗೆ ಕೆಲವು ಚಟುವಟಿಕೆಗಳನ್ನು ಬೇಸರವೆಂದು ತಳ್ಳಿಹಾಕುವ ಪ್ರವೃತ್ತಿಯಿದೆ. ಕ್ರೈಸ್ತ ಕೂಟಗಳ ವಿಷಯದಲ್ಲಿ ನಿಮಗೆ ಕೆಲವು ಸಲ ಆ ರೀತಿ ಅನಿಸುತ್ತದೊ? ಹಾಗಿರುವಲ್ಲಿ, ನಿಮ್ಮ ಕೂಟದ ಉಪಸ್ಥಿತಿಯನ್ನು ಹೆಚ್ಚು ಉತ್ತೇಜಕಗೊಳಿಸಲು ನೀವೇನು ಮಾಡಬಲ್ಲಿರಿ?
ಕೂಟಗಳಲ್ಲಿ ಒಳಗೊಳ್ಳುವುದು ಕೀಲಿ ಕೈಯಾಗಿದೆ. ಪೌಲನು ಯುವ ತಿಮೊಥೆಯನಿಗೆ ಬರೆದದ್ದು: “ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ. ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.” (1 ತಿಮೊಥೆಯ 4:7, 8) ಶಾರೀರಿಕ ಔಚಿತ್ಯದ ಪುಸ್ತಕದಲ್ಲಿ ಶಿಫಾರಸ್ಸು ಮಾಡಲ್ಪಟ್ಟಿರುವ ವ್ಯಾಯಾಮಗಳನ್ನು ನಾವು ಅನುಸರಿಸದೆ ಇದ್ದಲ್ಲಿ ಅದು ನೀರಸವೂ ಸೀಮಿತ ಮೌಲ್ಯದ್ದೂ ಆಗಿರುವುದು. ಕ್ರೈಸ್ತ ಕೂಟಗಳು ನಮ್ಮ ಮನಸ್ಸಿನ ತರಬೇತಿಗಾಗಿ ರಚಿಸಲ್ಪಟ್ಟಿವೆ ಮತ್ತು ನಾವು ತಯಾರಿಸಿ ಭಾಗವಹಿಸುವಲ್ಲಿ, ಹಾಗೆ ಮಾಡುವುವು. ಈ ಒಳಗೂಡುವಿಕೆಯು ಕೂಟಗಳನ್ನು ಹೆಚ್ಚು ಫಲದಾಯಕವೂ ಆಸಕ್ತಿಕರವೂ ಆಗಿ ಮಾಡುವುದು.
ಈ ಸಂಬಂಧದಲ್ಲಿ ಮಾರಾ ಎಂಬ ಯುವ ಕ್ರೈಸ್ತ ಸ್ತ್ರೀಯು ಅಂದದ್ದು: “ಕೂಟಗಳಿಗಾಗಿ ನಾನು ತಯಾರಿಸದಿದ್ದರೆ, ಅವುಗಳಲ್ಲಿ ಆನಂದಿಸುವುದಿಲ್ಲ. ನಾನು ಮುಂಚಿತವಾಗಿ ತಯಾರಿಸಿದರಾದರೊ, ನನ್ನ ಹೃದಯ ಮತ್ತು ಮನಗಳು ಹೆಚ್ಚು ಪ್ರತಿಕ್ರಿಯೆಯನ್ನು ತೋರಿಸುತ್ತವೆ. ಕೂಟಗಳು ಅಧಿಕ ಅರ್ಥಪೂರ್ಣವಾಗುತ್ತವೆ, ಮತ್ತು ನಾನು ಹೇಳಿಕೆಯನ್ನೀಯಲು ಮುನ್ನೋಡುತ್ತೇನೆ.”
ಕಿವಿಗೊಡಲು ಕಲಿಯುವುದು ಸಹ ಸಹಾಯಕವು. ಸುಸಂಗೀತಕ್ಕೆ ಕಿವಿಗೊಡುವುದು ಸುಲಭ ಮತ್ತು ಆ ಕೂಡಲೆ ಆನಂದಕರ. ಆದರೆ ಎಲ್ಲ ತರದ ಸಂತೃಪ್ತಿಯು ತತ್ಕ್ಷಣದಲ್ಲಿ ದೊರೆಯುವುದಿಲ್ಲ. ಹೇಳಲ್ಪಡುವುದನ್ನು ಗಮನಕೊಟ್ಟು ಕೇಳಿದರೆ ಮಾತ್ರ ಕೂಟದ ಕಾರ್ಯಕ್ರಮದಿಂದ ನಾವು ಸಂತೃಪ್ತಿಯನ್ನು ಹೊಂದುತ್ತೇವೆ. ರೇಚೆಲ್ ಎಂಬ ಕ್ರೈಸ್ತಳು ಗಮನಿಸಿದ್ದು: “ಭಾಷಣಕಾರನಲ್ಲಿ ಉತ್ಸಾಹವಿಲ್ಲದಾಗ, ಅತಿ ಶ್ರಮದಿಂದ ಏಕಾಗ್ರತೆಯನ್ನಿಡುವ ಅಗತ್ಯ ನನಗಿದೆ. ‘ಭಾಷಣವು ಕಡಿಮೆ ಸ್ವಾರಸ್ಯದ್ದಾಗಿರುವಷ್ಟೂ, ಹೆಚ್ಚಿನ ಏಕಾಗ್ರತೆಯ ಆವಶ್ಯಕತೆ ನನಗಿದೆ’ ಎಂಬುದೆ ನನ್ನ ಸೂತ್ರ. . . . ನಾನು ಶಾಸ್ತ್ರ ವಚನಗಳಿಗೆ ವಿಶೇಷ ಗಮನ ಕೊಡುತ್ತೇನೆ, ಅವುಗಳಿಂದ ಸಾಧ್ಯವಾದಷ್ಟು ಹೆಚ್ಚನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೇನೆ.” ಕಿವಿಗೊಟ್ಟು ಕೇಳುವುದಕ್ಕೆ ನಾವು ರೇಚೆಲಳಂತೆ ನಮ್ಮನ್ನು ಶಿಸ್ತುಗೊಳಿಸಿಕೊಳ್ಳುವ ಅಗತ್ಯವಿದೆ. ಜ್ಞಾನೋಕ್ತಿ ಪುಸ್ತಕವು ಹೇಳುವುದು: “ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ನನ್ನ ವಿವೇಕಬೋಧೆಗೆ ಕಿವಿಗೊಡು.”—ಜ್ಞಾನೋಕ್ತಿ 5:1.
ಕೂಟಗಳಲ್ಲಿ ಸಾದರಪಡಿಸಲ್ಪಡುವ ಕೆಲವು ನಿರ್ದಿಷ್ಟ ಮಾಹಿತಿಯು ಪುನರಾವರ್ತನವಾಗಿದ್ದೀತು. ಇದು ಆವಶ್ಯಕ! ದೇವರ ಸೇವಕರೆಲ್ಲರಿಗೆ ಮರುಜ್ಞಾಪನಗಳ ಅಗತ್ಯವಿದೆ. ಸ್ವೇಚ್ಛಾ ಪ್ರವೃತ್ತಿಗಳೂ ದುರ್ಬಲ ಸ್ಮರಣೆಯೂ ಇರುವ ಅಸಂಪೂರ್ಣ ಶರೀರಕ್ಕೆ, ದೊರೆಯಬಲ್ಲ ಎಲ್ಲ ಸಹಾಯವು ಬೇಕು. ಅಪೊಸ್ತಲ ಪೇತ್ರನು ‘ಜೊತೆ ವಿಶ್ವಾಸಿಗಳಿಗೆ—ಅವರು ಸತ್ಯವನ್ನು ತಿಳಿದವರಾಗಿ ಅದರಲ್ಲಿ ಸ್ಥಿರರಾಗಿದ್ದರೂ, ಅವುಗಳನ್ನು ಅವರಿಗೆ ಜ್ಞಾಪಕಕ್ಕೆ ತರಲು ಯಾವಾಗಲೂ ಸಿದ್ಧನಾಗಿದ್ದನು.’ (2 ಪೇತ್ರ 1:12) “ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು ಮನೇಯಜಮಾನನಿಗೆ ಹೋಲಿಕೆಯಾಗಿದ್ದಾನೆ. ಅವನು ತನ್ನ ಬೊಕ್ಕಸದೊಳಗಿಂದ [ನಿಧಿಯಿಂದ, NW] ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುತ್ತಿರುವನು” ಎಂದು ಯೇಸು ಸಹ ವಿವರಿಸಿದನು. (ಮತ್ತಾಯ 13:52) ಹೀಗೆ, ನಮ್ಮ ಕೂಟಗಳು ಚಿರಪರಿಚಿತ ಶಾಸ್ತ್ರೀಯ ವಿಚಾರಗಳನ್ನು ಅಥವಾ ‘ಹಳೇ ನಿಧಿಗಳನ್ನು’ ಹೊರಗೆ ತರುತ್ತವಾದರೂ, ನಮ್ಮನ್ನು ಹರ್ಷಗೊಳಿಸಲು ಕೆಲವು ‘ಹೊಸ ನಿಧಿಗಳು’ ಯಾವಾಗಲೂ ಇವೆ.
ಕೂಟಗಳಿಂದ ಪೂರ್ಣ ಪ್ರಯೋಜನ ಹೊಂದಲು ದೃಢ ನಿಶ್ಚಯದಿಂದಿರುವುದು ಒಂದು ನಿಜ ಆತ್ಮಿಕ ಉತ್ತೇಜನದಲ್ಲಿ ಫಲಿಸಬಲ್ಲದು. “ತಮ್ಮ ಆತ್ಮಿಕ ಹಸಿವಿನ ಪ್ರಜ್ಞೆಯುಳ್ಳವರು [ಆತ್ಮಕ್ಕಾಗಿ ಭಿಕ್ಷುಗಳಾಗಿರುವವರು] ಧನ್ಯರು” ಎಂದು ಯೇಸು ಹೇಳಿದನು. (ಮತ್ತಾಯ 5:3, ಪಾದಟಿಪ್ಪಣಿ) ಕೂಟಗಳಲ್ಲಿ ಒದಗಿಸಲ್ಪಡುವ ಅಂತಹ ಹಿತಕರವಾದ ಆತ್ಮಿಕ ಅಹಾರದೆಡೆಗೆ ಅಂತಹ ಒಂದು ಮನೋಭಾವವು ಬೇಸರವನ್ನು ತೊಲಗಿಸಿಬಿಡುವುದು.—ಮತ್ತಾಯ 24:45-47.
ಕೆಟ್ಟ ಮಾದರಿಯಿಂದ ನಿರುತ್ತೇಜಿತರೊ?
ನಿಮ್ಮ ಸಭೆಯ ಯಾರಾದರೊಬ್ಬರ ನಡವಳಿಕೆಯಿಂದ ನಿಮ್ಮ ಮನಸ್ಸು ಕೆಟ್ಟಿದೆಯೆ? ‘ಒಬ್ಬ ಸಹೋದರನು ಆ ರೀತಿ ವರ್ತಿಸುವುದು ಮತ್ತು ಇನ್ನೂ ಒಳ್ಳೇ ನಿಲುವಿನಲ್ಲಿರುವುದು ಹೇಗೆ ಸಾಧ್ಯ?’ ಎಂದು ಪ್ರಾಯಶಃ ನೀವು ಯೋಚಿಸಿರಬಹುದು. ಅಂತಹ ವಿಚಾರಗಳು ಮಾನಸಿಕ ತಡೆಗಟ್ಟಾಗಿ ಕಾರ್ಯನಡಿಸಿ, ದೇವ ಜನರೊಂದಿಗೆ ನಾವು ಹೊಂದಬಲ್ಲ ಉಲ್ಲಾಸಕರ ಸಾಹಚರ್ಯದ ಮೌಲ್ಯಕ್ಕೆ ನಮ್ಮನ್ನು ಕುರುಡರನ್ನಾಗಿ ಮಾಡಬಲ್ಲವು.—ಕೀರ್ತನೆ 133:1.
ಪ್ರಾಯಶಃ ಕೊಲೊಸ್ಸೆ ಸಭೆಯ ಕೆಲವು ಸದಸ್ಯರಿಗೆ ತದ್ರೀತಿಯ ಒಂದು ಸಮಸ್ಯೆಯಿತ್ತು, ಪೌಲನು ಅವರಿಗೆ ಪ್ರಬೋಧಿಸಿದ್ದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.” (ಕೊಲೊಸ್ಸೆ 3:13) ಕೊಲೊಸ್ಸೆಯ ಕೆಲವು ಕ್ರೈಸ್ತರು ಕೆಟ್ಟದಾಗಿ ವರ್ತಿಸಿರಬಹುದೆಂದು ಮತ್ತು ಹೀಗೆ ದೂರಿಡಲು ಇತರರಿಗೆ ನಿಜ ಕಾರಣವನ್ನು ಕೊಟ್ಟಿರಬಹುದೆಂದೂ ಪೌಲನು ಮನಗಂಡನು. ಆದುದರಿಂದ ನಮ್ಮ ಸಹೋದರ ಮತ್ತು ಸಹೋದರಿಯರಲ್ಲೊಬ್ಬರಲ್ಲಿ ಕೆಲವೊಮ್ಮೆ ಕೆಲವು ಕ್ರಿಸ್ತೀಯ ಗುಣದ ಅಭಾವವು ಇದ್ದಲ್ಲಿ, ನಾವು ಅಯುಕ್ತವಾಗಿ ಆಶ್ಚರ್ಯಪಡಬೇಕಾಗಿಲ್ಲ. ಗಂಭೀರವಾದ ಸಮಸ್ಯೆಗಳನ್ನು ಬಗೆಹರಿಸುವ ಸ್ವಸ್ಥ ಸೂಚನೆಯನ್ನು ಯೇಸು ಕೊಟ್ಟನು. (ಮತ್ತಾಯ 5:23, 24; 18:15-17) ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜೊತೆ ವಿಶ್ವಾಸಿಗಳ ಪರಿಮಿತಿಗಳನ್ನು ನಾವು ಕೇವಲ ಸಹಿಸಿಕೊಂಡು, ಅವರನ್ನು ಕ್ಷಮಿಸಬಲ್ಲೆವು. (1 ಪೇತ್ರ 4:8) ವಾಸ್ತವಿಕವಾಗಿ, ಅಂಥ ಸಮೀಪಿಸುವಿಕೆಯು ನಮ್ಮ ಸ್ವಂತ ಹಿತಕ್ಕಾಗಿ ಹಾಗೂ ಇತರರ ಹಿತಕ್ಕಾಗಿ ಇರಬಲ್ಲದು. ವಿಷಯವು ಹೀಗೇಕೆ?
“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ” ಎಂದು ಜ್ಞಾನೋಕ್ತಿ 19:11 ಹೇಳುತ್ತದೆ. ಕೋಪ ಮತ್ತು ತೀವ್ರ ಅಸಮಾಧಾನವು ಮನಸ್ಸನ್ನು ಕೊರೆಯುವಂತೆ ಬಿಡುವ ಬದಲಿಗೆ ಕ್ಷಮಿಸುವುದೆಷ್ಟು ಉತ್ತಮ! ತನ್ನ ಪ್ರೀತಿಯ ಸ್ವಭಾವಕ್ಕೆ ಖ್ಯಾತನಾದ ಸಾಲ್ವೆಡಾರ್ ಎಂಬ ಹಿರಿಯನು ಅಂದದ್ದು: “ಸಹೋದರನೊಬ್ಬನು ನನ್ನನ್ನು ಕಟುವಾಗಿ ಉಪಚರಿಸುವಾಗ ಇಲ್ಲವೆ ನಿರ್ದಯೆಯಿಂದ ಏನನ್ನಾದರೂ ಮಾತನಾಡುವಾಗ, ನಾನು ನನ್ನನ್ನು ಕೇಳಿಕೊಳ್ಳುವುದು: ‘ನನ್ನ ಸಹೋದರನಿಗೆ ನಾನು ಹೇಗೆ ಸಹಾಯಮಾಡಬಲ್ಲೆ? ಅವನೊಂದಿಗೆ ನನ್ನ ಅಮೂಲ್ಯ ಸಂಬಂಧವು ನಷ್ಟಗೊಳ್ಳುವುದನ್ನು ನಾನು ಹೇಗೆ ತಡೆಯಬಲ್ಲೆ?’ ಅಯೋಗ್ಯ ಮಾತನ್ನು ಆಡಿಬಿಡುವುದೆಷ್ಟು ಸುಲಭವೆಂದು ನಾನು ಯಾವಾಗಲೂ ತಿಳಿದಿದ್ದೇನೆ. ಒಬ್ಬನು ಅವಿಚಾರದಿಂದ ಮಾತಾಡುವಲ್ಲಿ, ಅವನಿಗಿರುವ ಸೂಕ್ತ ಪರಿಹಾರವು ತಾನು ಹೇಳಿದ್ದನ್ನು ಹಿಂದೆಗೆದು ಮರಳಿ ಹೊಸದಾಗಿ ಆರಂಭಿಸುವುದೆ. ಆದರೆ ಅದು ಅಶಕ್ಯ, ಆದುದರಿಂದ ಮುಂದಿನ ಉತ್ತಮ ಹೆಜ್ಜೆಯನ್ನು ನಾನು ತೆಗೆದುಕೊಳ್ಳುತ್ತೇನೆ, ಅಂದರೆ ಹೇಳಿಕೆಯನ್ನು ಲಕ್ಷ್ಯಕ್ಕೆ ತರುವುದಿಲ್ಲ. ಅದು ನನ್ನ ಸಹೋದರನ ಅಸಂಪೂರ್ಣ ಶರೀರದ ಕೋಪದ ಕೆರಳೇ ಹೊರತು ಅವನ ನಿಜ ವ್ಯಕ್ತಿತ್ವದ ಪ್ರತಿಫಲನವಲ್ಲವೆಂದು ನಾನು ಎಣಿಸುತ್ತೇನೆ.”
ಇದನ್ನು ಹೇಳುವುದು ಮಾಡುವುದಕ್ಕಿಂತ ಹೆಚ್ಚು ಸುಲಭವೆಂದು ನೀವು ಭಾವಿಸಬಹುದು. ಆದರೆ ನಾವು ನಮ್ಮ ಯೋಚನೆಯನ್ನು ಮಾರ್ಗದರ್ಶಿಸುವ ರೀತಿಯಲ್ಲಿ ಬಹಳ ಹೆಚ್ಚು ಆಧಾರಿಸಿದೆ. “ಯಾವಾವದು . . . ಪ್ರೀತಿಕರವೂ . . . ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ” ಎಂದು ಪೌಲನು ಸಲಹೆ ನೀಡಿದನು. (ಫಿಲಿಪ್ಪಿ 4:8) “ಪ್ರೀತಿಕರ” ಇದರ ಅಕ್ಷರಶಃ ಅರ್ಥ “ಮಮತೆ-ಪ್ರೇರಕ.” ಜನರಲ್ಲಿರುವ ಒಳ್ಳೇ ಗುಣವನ್ನು ನಾವು ಲಕ್ಷ್ಯಕ್ಕೆ ತರುವಂತೆ, ಅಸಮಾಧಾನದ ಬದಲಿಗೆ ಮಮತೆಯನ್ನು ಪ್ರೇರೇಪಿಸುವ ಆ ಗುಣಗಳ ಮೇಲೆ ಕೇಂದ್ರೀಕರಿಸುವಂತೆ ಯೆಹೋವನು ಬಯಸುತ್ತಾನೆ. ಈ ವಿಷಯದಲ್ಲಿ ಅವನು ತಾನೆ ನಮಗೆ ಶ್ರೇಷ್ಠ ಮಾದರಿಯನ್ನು ಕೊಡುತ್ತಾನೆ. ಹೀಗೆ ಹೇಳುತ್ತಾ ಕೀರ್ತನೆಗಾರನು ನಮಗೆ ಇದರ ಕುರಿತು ಜ್ಞಾಪಕ ಹುಟ್ಟಿಸುತ್ತಾನೆ: “ಕರ್ತನೇ, [ಯೆಹೋವನೇ, NW] ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?”—ಕೀರ್ತನೆ 103:12; 130:3.
ಕೆಲವೊಮ್ಮೆ ಒಬ್ಬ ಸಹೋದರನ ನಡವಳಿಕೆಯು ನಿರುತ್ತೇಜನಕರವಾಗಿದ್ದೀತು, ನಿಜ, ಆದರೆ ನಮ್ಮ ಜೊತೆ ಆರಾಧಕರಲ್ಲಿ ಅಧಿಕ ಸಂಖ್ಯಾತರು ಕ್ರಿಸ್ತೀಯ ಜೀವನದ ಅತ್ಯುತ್ತಮ ಮಾದರಿಗಳಾಗಿದ್ದಾರೆ. ದಾವೀದನಂತೆ ನಾವಿದನ್ನು ನೆನಪಿಸಿಕೊಳ್ಳುವಲ್ಲಿ, ‘ಯೆಹೋವನನ್ನು ಬಹಳವಾಗಿ ಕೊಂಡಾಡಲು ಮತ್ತು ಜನಸಮೂಹದ ಮಧ್ಯೆ ಆತನನ್ನು ಕೀರ್ತಿಸಲು’ ನಾವು ಸಂತೋಷಪಡುವೆವು.—ಕೀರ್ತನೆ 109:30.
ಸಾಕ್ಷಿಯಾಗಿರುವುದು ತೀರ ಕಷ್ಟವಾಗಿ ತೋರುತ್ತದೊ?
ಇನ್ನೊಂದು ಮಾನಸಿಕ ತಡೆಗಟ್ಟಿನ ಕಾರಣ, ಕೆಲವರು ಇನ್ನೂ ಯೆಹೋವನನ್ನು ಸುತ್ತಿಸಲು ಆರಂಭಿಸದೆ ಇರುವುದು ವಿಷಾದಕರ. ಯೆಹೋವನ ಸಾಕ್ಷಿಗಳಲ್ಲದ ಅನೇಕ ಪುರುಷರು ತಮ್ಮ ಕುಟುಂಬಕ್ಕೆ ಹೊಣೆಗಾರಿಕೆಯಿಂದ ಒದಗಿಸುತ್ತಿದ್ದಾರೆ ಮತ್ತು ಕಾರ್ಯತಃ ಶುಶ್ರೂಷೆಯಲ್ಲಿ ತಮ್ಮ ಪತ್ನಿಯರಿಗೆ ಬೆಂಬಲವನ್ನೂ ಕೊಡುತ್ತಾರೆ. ಅವರು ಸ್ನೇಹಪರರು ಮತ್ತು ಸಭೆಯಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳಬಹುದು, ಆದರೆ ದೇವರ ಸಮರ್ಪಿತ ಸೇವಕರಾಗುವುದರಿಂದ ಅವರು ಹಿಂಜರಿಯುತ್ತಾರೆ. ಅವರನ್ನು ಯಾವುದು ಹಿಮ್ಮೆಟ್ಟಿಸುತ್ತದೆ?
ಒಂದು ಸಮಸ್ಯೆಯು ಏನಾಗಿರಬಹುದೆಂದರೆ ಈ ಗಂಡಂದಿರು ತಮ್ಮ ಪತ್ನಿಯರ ಕಾರ್ಯಮಗ್ನ ದೇವಪ್ರಭುತ್ವ ಚಟುವಟಿಕೆಯನ್ನು ಗಮನಿಸಿ, ಸಾಕ್ಷಿಯಾಗಿರುವುದು ತೀರ ನಿರ್ಬಂಧಪಡಿಸುವ ಕೆಲಸವೆಂದು ಭಾವಿಸುತ್ತಾರೆ. ಅಥವಾ, ಪ್ರಾಯಶಃ ಮನೆಮನೆಯ ಸಾರುವಿಕೆಯಲ್ಲಿ ತಾವೆಂದೂ ಭಾಗವಹಿಸಶಕ್ತರಲ್ಲವೆಂದು ಅವರು ಹೆದರುತ್ತಾರೆ. ಅವರ ದೃಷ್ಟಿಕೋನದಲ್ಲಿ, ಜವಾಬ್ದಾರಿಗಳು ಆಶೀರ್ವಾದಗಳನ್ನು ಮಬ್ಬುಗವಿಸುವಂತೆ ತೋರುತ್ತವೆ. ಈ ಮಾನಸಿಕ ತಡೆಗಟ್ಟು ಏಕೆ? ಹೆಚ್ಚಿನ ಬೈಬಲ್ ವಿಧ್ಯಾರ್ಥಿಗಳು ಸತ್ಯವನ್ನು ಕಲಿತು, ಕ್ರಮೇಣ ಅವನ್ನು ಅನ್ವಯಿಸಿಕೊಳ್ಳುತ್ತಾರೆ. ಆದರೆ ಅನೇಕವೇಳೆ ಅವಿಶ್ವಾಸಿ ಗಂಡಂದಿರು ಅವನ್ನು ಸ್ವೀಕರಿಸುವ ಪ್ರೇರಣೆಯನ್ನು ಕಟ್ಟುವ ಮುಂಚೆ ಹೆಚ್ಚಾಗಿ ಕ್ರೈಸ್ತ ಜವಾಬ್ದಾರಿಯೆಲ್ಲವನ್ನು ಬಹಳಷ್ಟು ಬಲ್ಲವರು.
ಈ ಸನ್ನಿವೇಶದಲ್ಲಿದ್ದ ಮ್ಯಾನ್ವೆಲ್ ವಿವರಿಸುವುದು: “ಸುಮಾರು ಹತ್ತು ವರ್ಷಗಳ ವರೆಗೆ ನಾನು ನನ್ನ ಪತ್ನಿಯೊಂದಿಗೆ ಸಮ್ಮೇಳನಗಳಿಗೆ ಮತ್ತು ಕೂಟಗಳಿಗೆ ಹೋದೆ. ಲೋಕದ ಜನರಿಗಿಂತ ಸಾಕ್ಷಿಗಳ ಸಹವಾಸ ನನಗಿಷ್ಟವಾಗಿತ್ತೆಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ, ಮತ್ತು ನನ್ನಿಂದಾದಾಗ ಅವರಿಗೆ ನೆರವಾಗಲು ನಾನು ಸಂತೋಷಿಸಿದೆ. ಅವರ ಮಧ್ಯೆ ನೆಲೆಸಿದ ಪ್ರೀತಿಯಿಂದ ನಾನು ಪ್ರಭಾವಿತನಾದೆ. ಆದರೆ ಮನೆಯಿಂದ ಮನೆಗೆ ಹೋಗುವ ವಿಚಾರವು ನನಗೊಂದು ದೊಡ್ಡ ಅಡಚಣೆಯಾಗಿತ್ತು, ಮತ್ತು ನನ್ನ ಸಹೋದ್ಯೋಗಿಗಳು ನನಗೆ ಗೇಲಿಮಾಡಾರು ಎಂದು ನಾನು ಹೆದರಿದ್ದೆ.
“ನನ್ನ ಪತ್ನಿ ನನ್ನೊಂದಿಗೆ ಬಹಳ ತಾಳ್ಮೆಯಿಂದಿದಳ್ದು ಮತ್ತು ಬೈಬಲಧ್ಯಯನ ಮಾಡಲು ಅವಳೆಂದೂ ನನ್ನನ್ನು ಒತ್ತಾಯಿಸಲಿಲ್ಲ. ಅವಳು ಮತ್ತು ಮಕ್ಕಳು ಪ್ರಧಾನವಾಗಿ ‘ಸಾರಿದ್ದು’ ತಮ್ಮ ಒಳ್ಳೇ ಮಾದರಿಯಿಂದಲೇ. ಸಭೆಯ ಒಬ್ಬ ಹಿರಿಯರಾದ ಹೋಸೆ ಎಂಬವರು ನನ್ನಲ್ಲಿ ವಿಶೇಷ ಆಸಕ್ತಿಯನ್ನು ತೆಗೆದುಕೊಂಡರು, ಮತ್ತು ಅವರ ಉತ್ತೇಜನವೇ ಕೊನೆಗೆ ನನ್ನನ್ನು ಗಂಭೀರ ಅಭ್ಯಾಸಕ್ಕೆ ತೊಡಗುವಂತೆ ಮಾಡಿತೆಂದು ನಾನೆಣಿಸುತ್ತೇನೆ. ದೀಕ್ಷಾಸ್ನಾನ ಪಡೆದ ಬಳಿಕ, ಮುಖ್ಯ ಅಡಚಣೆಯು ನನ್ನ ಮಾನಸಿಕ ತಡೆಗಟ್ಟೇ ಹೊರತು ಬೇರೆನಲ್ಲವೆಂದು ನನಗೆ ತಿಳಿದುಬಂತು. ಯೆಹೋವನನ್ನು ಸೇವಿಸಲು ಒಮ್ಮೆ ನಿರ್ಣಯಿಸಿದ ಮೇಲೆ ನನ್ನ ಭಯಗಳನ್ನು ಹೋಗಲಾಡಿಸುವುದರಲ್ಲಿ ಆತನ ಸಹಾಯವನ್ನು ನಾನು ಅನುಭವಿಸಿದೆ.”
ಪತ್ನಿಯರು ಮತ್ತು ಕ್ರೈಸ್ತ ಹಿರಿಯರು ಮ್ಯಾನ್ವೆಲ್ನಂತಹ ಗಂಡಂದಿರ ಹೆದರಿಕೆಗಳನ್ನು ಪರಿಹರಿಸಲು ಹೇಗೆ ನೆರವಾಗಬಲ್ಲರು? ಒಂದು ಬೈಬಲ್ ಅಧ್ಯಯನವು ಗಣ್ಯತೆಯನ್ನು ಮತ್ತು ದೇವರ ಚಿತ್ತವನ್ನು ಮಾಡುವ ಅಪೇಕ್ಷೆಯನ್ನು ಕಟ್ಟಬಹುದು. ನಿಶ್ಚಯವಾಗಿ, ನಂಬಿಕೆಯನ್ನಿಡುವುದಕ್ಕೆ ಮತ್ತು ಮುಂದಿರುವ ನಿರೀಕ್ಷೆಯಲ್ಲಿ ಭರವಸವಿಡುವುದಕ್ಕೆ ಸುಸ್ಪಷ್ಟವಾಗಿದ ಶಾಸ್ತ್ರೀಯ ಜ್ಞಾನವು ಆಧಾರವಾಗಿದೆ.—ರೋಮಾಪುರ 15:13.
ಅಂತಹ ಗಂಡಂದಿರಿಗೆ ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಲು ಯಾವುದು ಉತ್ತೇಜನ ಕೊಡುವುದು? ಸಭೆಯಲ್ಲಿ ತಿಳಿವಳಿಕೆಯುಳ್ಳ ಒಬ್ಬ ಸಹೋದರನ ಸ್ನೇಹವು ಕೆಲವೊಮ್ಮೆ ಒಂದು ನಿರ್ಣಾಯಕ ಅಂಶವಾಗಿರಸಾಧ್ಯವಿದೆ. ಪ್ರಾಯಶಃ ಒಬ್ಬ ಹಿರಿಯನು ಇಲ್ಲವೆ ಇನ್ನೊಬ್ಬ ಅನುಭವಿ ಸಹೋದರನು ಆ ಗಂಡನ ಪರಿಚಯ ಮಾಡಿಕೊಳ್ಳಸಾಧ್ಯವಿದೆ. ಒಮ್ಮೆ ಸುಸಂಬಂಧವು ಸ್ಥಾಪಿತವಾಯಿತೆಂದರೆ, ಯಾರಾದರೂ ಅವನೊಂದಿಗೆ ಅಭ್ಯಾಸಿಸಲು ನೀಡಿಕೊಳ್ಳುವುದು ಮಾತ್ರ ಸಾಕಾಗಬಹುದು. (1 ಕೊರಿಂಥ 9:19-23) ಈ ಮಧ್ಯೆ, ವಿವೇಚನೆಯುಳ್ಳ ಪತ್ನಿಯು ತನ್ನ ಅವಿಶ್ವಾಸಿ ಗಂಡನೊಂದಿಗೆ, ಅವನು ಒತ್ತಡಕ್ಕೆ ಪ್ರತಿಕ್ರಿಯಿಸುವ ಸಂಭವವಿಲ್ಲವೆಂದು ಅರಿತವಳಾಗಿ, ಆತ್ಮಿಕ ತುತ್ತುಗಳಲ್ಲಿ ಪಾಲಿಗಳಾಗಬಲ್ಲಳು.—ಜ್ಞಾನೋಕ್ತಿ 19:14.
ಮ್ಯಾನ್ವೆಲ್ ಅನುಭವದಿಂದ ಕಲಿತ ಪ್ರಕಾರ, ಒಮ್ಮೆ ವ್ಯಕ್ತಿಯೊಬ್ಬನು ಆತ್ಮಿಕ ಬಲವನ್ನು ಹೊಂದುವಾಗ, ಬೆಟ್ಟದಂಥ ಅಡಿಗ್ಡಳು ಸಣ್ಣ ಮಣ್ಣುದಿಬ್ಬಗಳಾಗಿ ಪರಿಣಮಿಸುತ್ತವೆ. ತನ್ನನ್ನು ಸೇವಿಸಲು ಬಯಸುವವರನ್ನು ಯೆಹೋವನು ಚೈತನ್ಯಗೊಳಿಸುತ್ತಾನೆ. (ಯೆಶಾಯ 40:29-31) ದೇವರ ಶಕ್ತಿಯಲ್ಲಿ ಮತ್ತು ಪ್ರೌಢ ಸಾಕ್ಷಿಗಳ ಬೆಂಬಲದೊಂದಿಗೆ ತಡೆಗಟ್ಟುಗಳು ತೆಗೆದುಹಾಕಲ್ಪಡಬಹುದು. ಹೀಗೆ ಪೂರ್ಣಾತ್ಮದ ಸೇವೆಯು ಹೆಚ್ಚೆಚ್ಚಾಗಿ ಇಷ್ಟವಾಗುವಾಗ, ಮನೆಮನೆಯ ಸೇವೆಯು ಕಡಿಮೆ ಅಂಜಿಕೆಯ ಕೆಲಸವಾಗಿ ಪರಿಣಮಿಸಬಲ್ಲದು ಮತ್ತು ಸಹೋದ್ಯೋಗಿಗಳು ಕಡಿಮೆ ಹೆದರಿಸುವವರಾಗಿ ಕಂಡುಬರಸಾಧ್ಯವಿದೆ.
ಪ್ರಗತಿಯನ್ನು ಕಾಪಾಡಿಕೊಳ್ಳುವುದು
ನಾವು ಮೇಲೆ ಚರ್ಚಿಸಿದಂತಹ ಮೂರು ತಡೆಗಟ್ಟುಗಳಿಂದ ನಮ್ಮನ್ನು ಭೇದಿಸಿಕೊಳ್ಳಲು ಸಾಧ್ಯವಿದೆ. ವಿಮಾನವು ನೆಲಬಿಟ್ಟು ಮೇಲಕ್ಕೇರುವಾಗ, ಎಂಜಿನುಗಳಿಂದ ಅಧಿಕತಮ ಶಕ್ತಿ ಹಾಗೂ ವಿಮಾನ ತಂಡದ ಏಕಾಗ್ರ ಗಮನವೂ ಸಾಮಾನ್ಯವಾಗಿ ಆವಶ್ಯಕ. ಹಾರಿಕೆಯ ಬೇರೆ ಯಾವುದೆ ಅವಧಿಗಿಂತ ಹೆಚ್ಚಾಗಿ ನೆಲದಿಂದ ಮೇಲಕ್ಕೇರುವ ಸಮಯದಲ್ಲಿ ಎಂಜಿನುಗಳು ಗಮನಾರ್ಹವಾಗಿ ಹೆಚ್ಚು ಇಂಧನವನ್ನು ದಹಿಸುತ್ತವೆ. ತದ್ರೀತಿ, ನಕಾರಾತ್ಮಕ ವಿಚಾರಗಳು ಮತ್ತು ಅನಿಸಿಕೆಗಳಿಂದ ಬಿಡಿಸಿಕೊಳ್ಳುವುದಕ್ಕೆ ಅಧಿಕತಮ ಪ್ರಯತ್ನ ಮತ್ತು ಏಕಾಗ್ರತೆಯು ಆವಶ್ಯಕ. ಆರಂಭಿಸುವುದು ಅತಿ ಕಷ್ಟದ ಮೆಟ್ಟಲಾಗಿದ್ದೀತು, ಆದರೆ ಒಮ್ಮೆ ವೇಗಗತಿಯನ್ನು ಗಳಿಸಿಕೊಂಡಾಗ ಪ್ರಗತಿಯು ಸುಲಭವಾಗುತ್ತದೆ.—ಹೋಲಿಸಿ 2 ಪೇತ್ರ 1:10.
ಸತತವಾದ ಪ್ರಗತಿಯು ಶಾಸ್ತ್ರೀಯ ಪ್ರೋತ್ಸಾಹನೆಯನ್ನು ತಡವಿಲ್ಲದೆ ಪಾಲಿಸುವ ಮೂಲಕ ಕಾಪಾಡಲ್ಪಡುತ್ತದೆ. (ಕೀರ್ತನೆ 119:60) ಸಭೆಯು ಸಹಾಯ ಮಾಡಬಯಸುತ್ತದೆಂಬ ಖಾತರಿ ನಮಗಿರಬಲ್ಲದು. (ಗಲಾತ್ಯ 6:2) ಆದರೆ ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯವಾದದ್ದು, ಯೆಹೋವ ದೇವರ ಬೆಂಬಲವೇ. ದಾವೀದನು ಹೇಳಿದ ಪ್ರಕಾರ, “ಅನುದಿನವೂ ನಮ್ಮ ಭಾರವನ್ನು ಹೊರುವ ಕರ್ತನಿಗೆ [ಯೆಹೋವನಿಗೆ, NW] ಸ್ತೋತ್ರವಾಗಲಿ.” (ಕೀರ್ತನೆ 68:19) ಪ್ರಾರ್ಥನೆಯಲ್ಲಿ ನಾವು ನಮ್ಮ ಭಾರವಿಳಿಸಿಕೊಳ್ಳುವಾಗ, ನಮ್ಮ ಹೊರೆಯು ಹೆಚ್ಚು ಹಗುರವಾಗುತ್ತದೆ.
ಕೆಲವೊಮ್ಮೆ, ಒಂದು ವಿಮಾನವು ಮಳೆಯ ಮತ್ತು ಮೋಡಗವಿದ ಹವೆಯಲ್ಲಿ ಹೊರಟು, ಒಂದು ಮೋಡದ ಪದರವನ್ನು ದಾಟಿ, ಪೂರ್ಣ ಬಿಸಿಲಿನಿಂದ ಕಂಗೊಳಿಸುವ ಆಕಾಶಕ್ಕೆ ಹಾರುತ್ತದೆ. ನಾವು ಸಹ ನಕಾರಾತ್ಮಕ ಯೋಚನೆಗಳನ್ನು ಹಿಂದೆ ಬಿಟ್ಟುಬಿಡಬಲ್ಲೆವು. ದೈವಿಕ ಸಹಾಯದಿಂದ ಸಾಂಕೇತಿಕ ಮೋಡದ ಪದರವನ್ನು ಭೇದಿಸಿಕೊಂಡು ಹೋಗಿ, ಯೆಹೋವನ ಆರಾಧಕರ ಜಗದ್ವ್ಯಾಪಕ ಕುಟುಂಬದ ಬೆಳಗುವ, ಸಂತಸದ ಪರಿಸರದಲ್ಲಿ ಹಾಯಾಗಿರಬಲ್ಲೆವು.
[ಪುಟ 23 ರಲ್ಲಿರುವ ಚಿತ್ರಗಳು]
ಯೆಹೋವನ ಸಹಾಯದಿಂದ, ನಾವು ಮಾನಸಿಕ ತಡೆಗಟ್ಟುಗಳನ್ನು ಭೇದಿಸಬಲ್ಲೆವು