ನೀತಿಯು—ಒಂದು ರಾಷ್ಟ್ರವನ್ನು ಉತ್ಕರ್ಷಿಸುತ್ತದೆ
ಅನೇಕ ದಿನಗಳ ಮಳೆಯ ಅನಂತರ, ಎಚ್ಚೆತ್ತು, ಮೋಡವಿಲ್ಲದ ಆಕಾಶದಲ್ಲಿ ಸೂರ್ಯನು ಪ್ರಕಾಶಿಸುತ್ತಿರುವುದನ್ನು ನೋಡುವುದು ಎಂತಹ ಒಂದು ಸಂತೋಷವಾಗಿದೆ! ಭೂಮಿಯು ತಂಪುಗೊಳಿಸಲ್ಪಟ್ಟಿದೆ ಮತ್ತು ಸಸ್ಯವು ಈಗ ಸೊಂಪಾಗಿ ಬೆಳಯಬಲ್ಲದು. ನೀತಿವಂತ ಆಳಿಕೆಯ ಆಶೀರ್ವಾದಗಳನ್ನು ದೃಷ್ಟಾಂತಿಸಲು, ಇಂತಹ ಒಂದು ದೃಶ್ಯವನ್ನು ಯೆಹೋವನು ಒಮ್ಮೆ ಉಪಯೋಗಿಸಿದನು. ರಾಜ ದಾವೀದನಿಗೆ ಆತನು ಹೇಳಿದ್ದು: “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ ಮೋಡಗಳನ್ನು ಚದರಿಸಿಬಿಟ್ಟು ಮಳೆಬಿದ್ದ ಭೂಮಿಯಿಂದ ಹುಲ್ಲನ್ನು ಮೊಳಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.”—2 ಸಮುವೇಲ 23:3, 4.
ದಾವೀದನ ಮಗನಾದ ರಾಜ ಸೊಲೊಮೋನನ ನೀತಿಯ ಆಳಿಕೆಯ ಸಮಯದಲ್ಲಿ, ದೇವರ ಮಾತುಗಳು ಸತ್ಯವಾಗಿ ಪರಿಣಮಿಸಿದವು. ಬೈಬಲು ವರದಿಸುವುದು: “ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.”—1 ಅರಸುಗಳು 4:25.
ಪ್ರಾಚೀನ ಇಸ್ರಾಯೇಲು, ದೇವರ ಆದುಕೊಂಡ ರಾಷ್ಟ್ರವಾಗಿತ್ತು. ಆತನು ಅವರಿಗೆ ತನ್ನ ನಿಯಮಗಳನ್ನು ಕೊಟ್ಟು, ಅವರು ತನ್ನ ಮಾತಿಗೆ ವಿಧೇಯರಾದರೆ, ಅವರನ್ನು “ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ . . . ಉನ್ನತಸ್ಥಿತಿ”ಯಲ್ಲಿರಿಸುವೆನೆಂದು ಅವರಿಗೆ ಹೇಳಿದನು. (ಧರ್ಮೋಪದೇಶಕಾಂಡ 28:1) ಇಸ್ರಾಯೇಲ್ಯರನ್ನು ಉತ್ಕರ್ಷಿಸಿದ್ದು ಅವರ ಸ್ವಂತ ನೀತಿಯಲ್ಲ, ಯೆಹೋವನ ನೀತಿಯಾಗಿತ್ತು. ದೇವರು ಅವರಿಗೆ ಕೊಟ್ಟ ಆಜ್ಞೆಗಳು ಅವರ ಸುತ್ತಲೂ ಇದ್ದ ರಾಷ್ಟ್ರಗಳ ನಿಯಮಗಳಿಗಿಂತ ಎಷ್ಟೋ ಉತ್ಕೃಷ್ಟವಾಗಿದ್ದವು. ಒಂದು ಜನಾಂಗದೋಪಾದಿ, ಅವರು ಆ ಎಲ್ಲ ರಾಷ್ಟ್ರಗಳ ಜನರಂತೆಯೇ ಅಪರಿಪೂರ್ಣರಾಗಿದ್ದರು. ಆದಕಾರಣ, ರಾಷ್ಟ್ರಗಳ ಮೇಲೆ ಅವರು ಎತ್ತಲ್ಪಟ್ಟದ್ದಕ್ಕಾಗಿ, ಯೆಹೋವನ ಉತ್ಕೃಷ್ಟ ಧರ್ಮಶಾಸ್ತ್ರಕ್ಕೆ ಮತ್ತು ಅದಕ್ಕೆ ಅವರ ಕಟ್ಟುನಿಟ್ಟಿನ ಪಾಲನೆಗೆ ಪ್ರಶಸ್ತಿಯು ಸಲ್ಲುತ್ತದೆ. ಅವರು ಯೆಹೋವನ ನಿಯಮಗಳಿಗೆ ವಿಧೇಯರಾದಾಗ, ಆತನ ಅನುಗ್ರಹ ಮತ್ತು ಆಶೀರ್ವಾದವನ್ನು ಅನುಭವಿಸಿದರು. ರಾಜ ಸೊಲೊಮೋನನು ಇದನ್ನು ತನ್ನ ಪ್ರಭುತ್ವದ ಸಮಯದಲ್ಲಿ ಅನುಭವಿಸಿದನು. ಅವನು ಹೀಗೆ ಹೇಳಬಹುದಿತ್ತು: “ಒಂದು ರಾಷ್ಟ್ರವನ್ನು ಉತ್ಕರ್ಷಿಸುವಂತಹದ್ದು ನೀತಿಯಾಗಿದೆ, ಆದರೆ,” ಅವನು ಎಚ್ಚರಿಸಿದ್ದು, “ಪಾಪವು ರಾಷ್ಟ್ರೀಯ ಗುಂಪುಗಳಿಗೆ ಅಪಮಾನಕರವಾದ ವಿಷಯವಾಗಿದೆ.”—ಜ್ಞಾನೋಕ್ತಿ 14:34, NW.
ದುಃಖಕರವಾಗಿ, ಅವಿಧೇಯತೆಯ ಅನೇಕ ಕೃತ್ಯಗಳ ಮುಖಾಂತರ, ಇಸ್ರಾಯೇಲ್ ರಾಷ್ಟವ್ರು ಕೀಳಾದ ನೆಲೆಗೆ ತರಲ್ಪಟ್ಟಿತು. ಅವರು ರಾಷ್ಟ್ರೀಯ ಅಪಮಾನವನ್ನು ಅನುಭವಿಸಿದರು. ಇದು ಅಂತಿಮವಾಗಿ ಒಂದು ಹೊಸ ಆತ್ಮಿಕ ರಾಷ್ಟ್ರದ ಪರವಾಗಿ ಅವರ ಶಾಶ್ವತವಾದ ತಿರಸ್ಕಾರಕ್ಕೆ ನಡೆಸಿತು.—ಮತ್ತಾಯ 21:43.
ಆತ್ಮಿಕ ಇಸ್ರಾಯೇಲ್
ಯೆರೂಸಲೇಮಿನಲ್ಲಿ ಕ್ರೈಸ್ತ ಆಡಳಿತ ಮಂಡಳಿಯ ಕೂಟವೊಂದರಲ್ಲಿ, ಯೆಹೂದ್ಯನಾಗಿ ಜನಿಸಿದ್ದ ಯಾಕೋಬನು, ದೇವರು “ಮೊದಲಲ್ಲಿ ಅನ್ಯಜನರನ್ನು ಕಟಾಕ್ಷಿಸಿನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ”ನೆಂದು ಪ್ರೇರಣೆಯಿಂದ ಹೇಳಿದನು. (ಅ. ಕೃತ್ಯಗಳು 15:14) ಅಪೊಸ್ತಲ ಪೌಲನು ಈ ಹೊಸ ಕ್ರೈಸ್ತ ರಾಷ್ಟ್ರವನ್ನು ‘ದೇವರ ಇಸ್ರಾಯೇಲ್’ ಎಂದು ಕರೆದನು. (ಗಲಾತ್ಯ 6:16) ಅವರ ಕರೆಯುವಿಕೆಯ ಸಂಬಂಧದಲ್ಲಿ ಪೇತ್ರನು ಬರೆದುದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ದೇವರ ಆದುಕೊಂಡ ಜನರೋಪಾದಿ, ಅವರು ಲೋಕದಲ್ಲಿ ಜ್ಯೋತಿರ್ಮಂಡಲಗಳಂತೆ ಪ್ರಕಾಶಿಸಬೇಕಿತ್ತು. ಯೆಹೋವನ ನೀತಿಯು ಅವರನ್ನು ಉನ್ನತಸ್ಥಾನದಲಿಡ್ಲುತ್ತಿತ್ತು.—ಫಿಲಿಪ್ಪಿ 2:15.
ಈ ಆತ್ಮಿಕ ಇಸ್ರಾಯೇಲ್ಯರ ಆಯ್ಕೆಯನ್ನು ವಜ್ರದ ಗಣಿಕೆಲಸಕ್ಕೆ ಹೋಲಿಸಸಾಧ್ಯವಿದೆ. ಸಮೃದ್ಧವಾಗಿ ವಜ್ರವನ್ನು ಪಡೆದಿರುವ ಅದಿರನ್ನು ಮೇಲಕ್ಕೆ ತಂದಾಗ, ಪ್ರತಿ 3 ಟನ್ ಮಣ್ಣಿಗೆ ಅದು 1 ಕ್ಯಾರಟನ್ನು (200 ಮಿಲಿಗ್ರ್ಯಾಮ್ಸ್) ಮಾತ್ರ ಕೊಡಬಹುದು. ವಜ್ರಗಳನ್ನು ಬೇರ್ಪಡಿಸಲು ಒಮ್ಮೆ ಬಳಸಲ್ಪಟ್ಟ ವಿಧಾನವು, ನೀರಿನೊಂದಿಗೆ ಅದಿರನ್ನು ಬೆರಸಿ, ಮಿಶ್ರಣವನ್ನು ಕೊಬ್ಬಿನ ಮೇಜುಗಳ ಮೇಲೆ ಸುರಿಯುವುದನ್ನು ಒಳಗೊಂಡಿತ್ತು. ವಜ್ರಗಳು ನೀರನ್ನು ವಿಕರ್ಷಿಸುತ್ತವೆ ಮತ್ತು ಬೇಡವಲ್ಲದ ಸಾಮಗ್ರಿಯು ನೀರಿನಲ್ಲಿ ಹರಿದು ಹೋಗುವಾಗ, ಅವು ಕೊಬ್ಬಿಗೆ ಅಂಟಿಕೊಂಡವು. ಈ ಹಂತದಲ್ಲಿ ವಜ್ರಗಳು ಒರಟಾಗಿದ್ದವು. ಹಾಗಿದ್ದರೂ, ಕತ್ತರಿಸಿ ಮೆರುಗು ಕೊಟ್ಟಾಗ ಅವು ಎಲ್ಲ ದಿಕ್ಕುಗಳಲ್ಲಿ ಬೆಳಕನ್ನು ಪ್ರತಿಬಿಂಬಿಸಿದವು.
ತಮ್ಮ ಸುತ್ತಲೂ ಇರುವ ವಿಷಯದ ಭಾಗವಾಗಿರದ ನೀರನ್ನು ವಿಕರ್ಷಿಸುವ ವಜ್ರಗಳಂತೆ, ಯೆಹೋವನ ಜನರು ಲೋಕದಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ. (ಯೋಹಾನ 17:16) ಬೆಳಕಿಗೆ ಮೊದಲಾಗಿ ಸೆಳೆಯಲ್ಪಟ್ಟಾಗ, ಅವರಲ್ಲಿ ಕಾಂತಿಯ ಕೊರತೆ ಇದ್ದಿರಬಹುದು. ಆದರೆ ಯೆಹೋವನ ವಾಕ್ಯ ಮತ್ತು ಆತ್ಮವು ಅವರಲ್ಲಿ ಒಂದು ಹೊಸ ವ್ಯಕ್ತಿತ್ವವನ್ನು ಸೃಷ್ಟಿಸುತ್ತವೆ, ಮತ್ತು ಅವರು ಈ ಲೋಕದಲ್ಲಿ ಜ್ಯೋತಿರ್ಮಂಡಲಗಳಂತೆ ಪ್ರಕಾಶಿಸುತ್ತಾರೆ. ತಮ್ಮ ಸ್ವಂತ ನೀತಿಯ ಕಾರಣದಿಂದಲ್ಲ, ಯೆಹೋವನ ನೀತಿಯ ಕಾರಣದಿಂದ ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ ಮತ್ತು ಎಲ್ಲ ದಿಕ್ಕುಗಳಲ್ಲಿ ರಾಜ್ಯ ಸತ್ಯದ ಮಹಿಮಾಭರಿತ ಬೆಳಕನ್ನು ಪ್ರತಿಬಿಂಬಿಸುತ್ತಾರೆ.
ಆದರೂ, ಸಾ.ಶ. ಮೊದಲನೆಯ ಶತಮಾನದ ಕೊನೆಯ ಭಾಗದಿಂದ, ಧರ್ಮಭ್ರಷ್ಟತೆಯು ಸಭೆಗಳೊಳಗೆ ನುಸುಳಿತು ಮತ್ತು ಅನೇಕರನ್ನು ಪ್ರಭಾವಿಸಿತು. ಕ್ರೈಸ್ತರೆಂದು ಹೇಳಿಕೊಳ್ಳುವವರು ಲೋಕದ ರಾಷ್ಟ್ರಗಳೊಂದಿಗೆ ಸೇರಿಕೊಂಡರು ಮತ್ತು ಅವರ ಸುತ್ತಲೂ ಇದ್ದ ಲೋಕದಿಂದ ಅವರನ್ನು ವಿಂಗಡಿಸಲು ಸಾಧ್ಯವಿರಲಿಲ್ಲ.
ಇಂದು ಆತ್ಮಿಕ ಇಸ್ರಾಯೇಲ್ಯರ ನಂಬಿಗಸ್ತ ಉಳಿಕೆಯವರು ಯೆಹೋವನ ಅನುಗ್ರಹಕ್ಕೆ ಪುನಸ್ಸಾಪ್ಥಿಸಲ್ಪಟ್ಟಿದ್ದಾರೆ. ಅವರು ತಮ್ಮನ್ನು ಲೋಕದಿಂದ ಬೇರ್ಪಡಿಸಿಕೊಂಡಿದ್ದಾರೆ ಮತ್ತು ತಮ್ಮನ್ನು “ಶರೀರಾತ್ಮಗಳ ಕಲ್ಮಶ”ದಿಂದ ಶುದ್ಧಮಾಡಿಕೊಂಡಿದ್ದಾರೆ. (2 ಕೊರಿಂಥ 7:1) ಯೆಹೋವನ ಮುಂದೆ ಶುದ್ಧರಾಗಿಯೂ ಸತ್ಯವಂತರಾಗಿಯೂ ಇರುತ್ತ, ಆತನ ನೀತಿಯನ್ನು ಅವರು ಎತ್ತಿಹಿಡಿಯುತ್ತಾರೆ. ಇದು ಅವರನ್ನು ಲೋಕದ ರಾಷ್ಟ್ರಗಳ ಮೇಲೆ, ಅನುಗ್ರಹದ ಉನ್ನತ ಸ್ಥಾನಕ್ಕೆ ಎರಿಸಿದೆ. ರಾಜ್ಯದ ಸುವಾರ್ತೆಯ ತಮ್ಮ ಹುರುಪಿನ ಸಾರುವಿಕೆಯ ಮುಖಾಂತರ, ಮಹಾ ಅಂತಾರಾಷ್ಟ್ರೀಯ ಗುಂಪೊಂದು ಯೆಹೋವನ ಕಡೆಗೆ ಸೆಳೆಯಲ್ಪಟ್ಟಿದೆ ಮತ್ತು ಆತನ ಜನಾಂಗದ ಭಾಗವಾಗಿ ಪರಿಣಮಿಸಿದೆ.—ಪ್ರಕಟನೆ 7:9, 10.
ಲೋಕವು ವ್ಯತ್ಯಾಸವನ್ನು ಅವಲೋಕಿಸಬಲ್ಲದು
ಲೌಕಿಕ ಅಧಿಕಾರಿಗಳು ಕೆಲವೊಮ್ಮೆ ದೇವರ ಸೇವಕರ ನಡತೆಯನ್ನು ಹೊಗಳುತ್ತಾರೆ. ಸ್ವಲ್ಪ ಸಮಯದ ಹಿಂದೆ, ದಕ್ಷಿಣ ಆಫ್ರಿಕದ ಪ್ರಿಟೋರಿಯ ಶೋ ಗ್ರೌಂಡ್ಸ್ನ ಪ್ರಧಾನ ಭದ್ರತಾ ಅಧಿಕಾರಿಯು, ತಮ್ಮ ವಾರ್ಷಿಕ ಅಧಿವೇಶನಗಳಿಗಾಗಿ ಆ ಸೌಕರ್ಯಗಳನ್ನು ಬಳಸುವ ಎಲ್ಲ ಕುಲಗಳಿಂದ ಬರುವ, ಯೆಹೋವನ ಸಾಕ್ಷಿಗಳ ವರ್ತನೆಯ ಕುರಿತು ಹೇಳಿಕೆ ನೀಡಿದನು. ಬೇರೆ ವಿಷಯಗಳ ಜೊತೆಗೆ, ಅವನು ಬರೆದುದು: “ಪ್ರತಿಯೊಬ್ಬರೂ ವಿನಯಶೀಲರಾಗಿದ್ದರು ಮತ್ತು ವಿನಯಶೀಲರಾಗಿದ್ದಾರೆ, ಒಬ್ಬರು ಮತ್ತೊಬ್ಬರೊಂದಿಗೆ ಚೆನ್ನಾಗಿ ಮಾತಾಡುವ ಜನರು, ಕಳೆದ ಕೆಲವು ದಿನಗಳಲ್ಲಿ ಪ್ರದರ್ಶಿಸಲ್ಪಟ್ಟ ಮನೋಭಾವವು—ನಿಮ್ಮ ಸಂಸ್ಥೆಯ ಸದಸ್ಯರ ಯೋಗ್ಯತೆಗೆ ಮತ್ತು ಎಲ್ಲರು ಒಂದು ಆನಂದಿತ ಕುಟುಂಬದಂತೆ ಒಟ್ಟಿಗೆ ಜೀವಿಸುತ್ತಾರೆಂಬುದಕ್ಕೆ ಪ್ರಮಾಣವನ್ನು ನೀಡುತ್ತದೆ.”
ಯೆಹೋವನ ಜನರು ಕೇವಲ ಇಂತಹ ದೊಡ್ಡ ಒಕ್ಕೂಟಗಳಲ್ಲಿ ಮಾತ್ರವಲ್ಲ, ತಮ್ಮ ಖಾಸಗಿ ಜೀವಿತಗಳಲ್ಲಿಯೂ ಆತನ ರಾಷ್ಟ್ರದ ನೀತಿಗೆ ನೆರವಾಗಬಲ್ಲರು. ಉದಾಹರಣೆಗೆ, ವಾಚ್ ಟವರ್ ಸೊಸೈಟಿಯ ದಕ್ಷಿಣ ಆಫ್ರಿಕದ ಬ್ರಾಂಚ್, ಜೊಹನೆಸ್ಬರ್ಗ್ನಲ್ಲಿರುವ ಒಬ್ಬ ಸ್ತ್ರೀಯಿಂದ ಒಂದು ಪತ್ರವನ್ನು ಪಡೆಯಿತು. ಆಕೆ ಹೇಳಿದ್ದು: “ಕಳೆದ ವಾರ ನನ್ನ ಪರ್ಸ್ ಕಾರಿನ ಮೇಲೆ ಇದ್ದಾಗ ನಾನು ಕಾರನ್ನು ಚಲಾಯಿಸಿಕೊಂಡು ಹೋದೆ. ಅದು ಜ್ಯಾನ್ ಸ್ಮಟ್ಸ್ ಆ್ಯವಿನ್ಯೂವಿನಲ್ಲಿ ಬಿದ್ದಿತು ಮತ್ತು ನಿಮ್ಮ ಸಭೆಯ ಸದಸ್ಯರಾಗಿರುವ ಶ್ರೀ. ಆರ್—, ಅವರಿಂದ ಅದರೆಲ್ಲ ಒಳವಿಷಯಗಳೊಂದಿಗೆ ಅದು ಎತ್ತಿಕೊಳ್ಳಲ್ಪಟ್ಟಿತು. ಅವರು ಫೋನ್ ಮಾಡಿ ಅದನ್ನು ನನಗೆ ಹಿಂದಿರುಗಿಸಿದರು. . . . ಪ್ರಚಲಿತ ಸಮಯಗಳಲ್ಲಿ ಅಪರೂಪವಾಗಿ ಪರಿಣಮಿಸಿರುವ ಈ ಗುಣವಾದ ಪ್ರಾಮಾಣಿಕತೆಯನ್ನು ನಾನು ಬಹಳವಾಗಿ ಗಣ್ಯಮಾಡುತ್ತೇನೆ ಮತ್ತು ನಿಮ್ಮ ಸದಸ್ಯರು ಪಾಲಿಸುವ ತತ್ವಗಳನ್ನು ಸ್ಥಾಪಿಸಿದುದಕ್ಕಾಗಿ ನಿಮ್ಮ ಸಭೆಯನ್ನು ಪ್ರಶಂಸಿಸುತ್ತೇನೆ.”
ಹೌದು, ಯೆಹೋವನ ನೀತಿವಂತ ತತ್ವಗಳನ್ನು ಪಾಲಿಸುವ ಮೂಲಕ, ಆತನ ಜನರು ಲೋಕದಿಂದ ಭಿನ್ನರಾಗಿ ತೋರುವಂತೆ ಮಾಡಲ್ಪಡುತ್ತಾರೆ. ಇವರು ಯೆಹೋವನ ನೀತಿಯನ್ನು ಪ್ರದರ್ಶಿಸುವುದರಿಂದ, ಪ್ರಾಮಾಣಿಕ ಹೃದಯವುಳ್ಳವರು ಕ್ರೈಸ್ತ ಸಭೆಗೆ ಸೆಳೆಯಲ್ಪಡುತ್ತಾರೆ. ನಿರ್ಮಲವೂ ಶುದ್ಧವೂ ಆದ ಯಾವುದೊ ವಿಷಯಕ್ಕೆ ಆಕರ್ಷಿತರಾಗುವುದು ಸ್ವಾಭಾವಿಕವಾಗಿದೆ. ಉದಾಹರಣೆಗೆ, ಸ್ವಿಟ್ಸರ್ಲೆಂಡ್ನ ಸ್ಯೂರಿಕ್ನಲ್ಲಿ ಯೆಹೋವನ ಸಾಕ್ಷಿಗಳ ಒಂದು ಕೂಟಕ್ಕೆ, ಒಮ್ಮೆ ಒಬ್ಬ ಅಪರಿಚಿತನು ಬಂದು, ತಾನು ಸಭೆಯ ಒಬ್ಬ ಸದಸ್ಯನಾಗಲು ಬಯಸುತ್ತೇನೆಂದು ಹೇಳಿದನು. ತನ್ನ ಸಹೋದರಿಯು ಅನೈತಿಕತೆಗಾಗಿ ಬಹಿಷ್ಕರಿಸಲ್ಪಟ್ಟಿದ್ದಳೆಂದು ಅವನು ವಿವರಿಸಿದನು ಮತ್ತು “ಕೆಟ್ಟ ನಡತೆಯನ್ನು ಸಹಿಸದ” ಸಂಘಟನೆಯೊಂದನ್ನು ಸೇರಲು ತಾನು ಬಯಸುತ್ತೇನೆಂದು ಅವನು ಕೂಡಿಸಿದನು. ಯೆಹೋವನ ಸಾಕ್ಷಿಗಳು “ಲೋಕದಲ್ಲಿ ಉತ್ತಮ ನಡೆವಳಿಕೆಯನ್ನು ತೋರಿಸುವ ಗುಂಪುಗಳಲ್ಲಿ ಒಂದು,” ಗುಂಪಿನೋಪಾದಿ ಪ್ರಖ್ಯಾತರೆಂದು ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಸಹ ಅಂಗೀಕರಿಸುತ್ತದೆ.
ನೀತಿಯು ಎತ್ತಿಹಿಡಿಯುವಾಗ, ಪಾಪವು—ವಿಶೇಷವಾಗಿ ಗಂಭೀರವಾದ ತಪ್ಪು ಸಮುದಾಯದಲ್ಲಿ ವಿದಿತವಾಗುವುದಾದರೆ—ಒಬ್ಬರ ಒಳ್ಳೆಯ ಹೆಸರಿನ ಮೇಲೆ ಅಪಮಾನವನ್ನು ತರಬಲ್ಲದು. ವ್ಯಕ್ತಿಪರ ಸದಸ್ಯರು ಘೋರವಾದ ಪಾಪವನ್ನು ಗೈಯುವಾಗ, ಕ್ರೈಸ್ತ ಸಭೆಗೆ ಕೆಲವೊಮ್ಮೆ ಅದರ ಮೇಲೆ ಹೊರಿಸಲ್ಪಟ್ಟ ಅವಮಾನವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಗ್ರಾಹ್ಯವಾಗಿ, ಸಭೆಯ ನಂಬಿಗಸ್ತ ಸದಸ್ಯರು, ತಪ್ಪಿತಸ್ಥನು ದಯೆಯುಳ್ಳ ವಿಧದಲ್ಲಿ, ಅಂದರೆ ಶಾಸ್ತ್ರೀಯ ತತ್ವಗಳಿಗೆ ಹೊಂದಿಕೆಯಾಗಿ ಶಿಸ್ತುಗೊಳಿಸಲ್ಪಟ್ಟಿದ್ದಾನೆಂದು ತೋರಿಸುವ ಮೂಲಕ, ಸಭೆಯ ಒಳ್ಳೆಯ ಹೆಸರನ್ನು ರಕ್ಷಿಸಬಲ್ಲರು. ಯಾರಾದರೊಬ್ಬನು ಪಾಪವನ್ನು ಆಚರಿಸಿ, ಪಶ್ಚಾತ್ತಾಪ ಪಡದಿದ್ದರೆ, ಅವನು ಸಭೆಯಿಂದ ಹೊರಹಾಕಲ್ಪಡುವನು—ಬಹಿಷ್ಕರಿಸಲ್ಪಡುವನು.—1 ಕೊರಿಂಥ 5:9-13.
ಕೆಲವರು ಬಹಿಷ್ಕರಿಸಲ್ಪಡುವ ಕಾರಣ
ಪ್ರತಿ ವರ್ಷ ಕ್ರೈಸ್ತ ಸಭೆಯಿಂದ ಕೆಲವು ಸಾವಿರಾರು ಜನರು ಬಹಿಷ್ಕರಿಸಲ್ಪಡುವುದಾದರೂ, ಅದು ಲೋಕದಲ್ಲಿನ ಸುಮಾರು 50 ಲಕ್ಷ ಸಾಕ್ಷಿಗಳ ಒಂದು ಸಣ್ಣ ಪ್ರತಿಶತ ಮಾತ್ರವೇ ಆಗಿದೆ. ಕ್ರೈಸ್ತ ಸಭೆಯಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧವಾದರೂ ಇಂತಹ ಉಗ್ರವಾದ ಹೆಜ್ಜೆಯು ಏಕೆ ತೆಗೆದುಕೊಳ್ಳಲ್ಪಡಬೇಕು? ನಿರ್ಣಾಯಕ ಅಂಶಗಳಲ್ಲಿ ಒಂದು, ತಪ್ಪಿನ ಸ್ವರೂಪವಾಗಿದೆ. ಆದರೆ ಹೆಚ್ಚು ಪ್ರಾಮುಖ್ಯವಾದ ಅಂಶವು, ಗೈಯಲ್ಪಟ್ಟ ಗಂಭೀರ ತಪ್ಪಿನ ವಿಷಯದಲ್ಲಿ ತಪ್ಪಿತಸ್ಥನು ಯಥಾರ್ಥವಾಗಿ ಪಶ್ಚಾತ್ತಾಪ ಪಡುವವನಾಗಿದಾನ್ದೊ ಇಲ್ಲವೊ ಎಂಬುದಾಗಿದೆ. ಅವನು ನಿಜವಾಗಿಯೂ ಪರಿತಾಪ ಪಡುವುದಾದರೆ, ಯೆಹೋವನ ಕಡೆಗೆ ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ತಿರುಗಿ, ಆತನ ವಿರುದ್ಧವಾಗಿ ಗೈಯಲ್ಪಟ್ಟ ಪಾಪಕ್ಕಾಗಿ ಕ್ಷಮಾಪಣೆಯನ್ನು ಬೇಡುತ್ತಾ, ಸಭೆಯಲ್ಲಿರುವ ಜವಾಬ್ದಾರ ಪುರುಷರ ಸಹಾಯವನ್ನು ಕೋರಿರುವಲ್ಲಿ, ದೇವರ ಅನುಗ್ರಹವನ್ನು ಪುನಃ ಪಡೆಯಲು ಮತ್ತು ಸಭೆಯ ಭಾಗವಾಗಿ ಉಳಿಯಲು ಅವನು ಸಹಾಯಿಸಲ್ಪಡಬಹುದು.—ಜ್ಞಾನೋಕ್ತಿ 28:13; ಯಾಕೋಬ 5:14, 15.
ತನ್ನ ತಂದೆಯೊಂದಿಗೆ ಒಳ್ಳೆಯ, ಸ್ವಸ್ಥಕರವಾದ ಸಂಬಂಧವನ್ನು ಹೊಂದಿರುವ ಮಗನು, ತಂದೆಗೆ ದುಃಖವನ್ನು ತರುವ ಯಾವುದೊ ವಿಷಯವನ್ನು ಮಾಡುವುದಾದರೆ, ಆ ಅಮೂಲ್ಯ ಸಂಬಂಧವನ್ನು ಪುನಸ್ಸಾಪ್ಥಿಸಲು ಇಬ್ಬರೂ ತರ್ವೆಪಡಬೇಕು. ತದ್ರೀತಿಯಲ್ಲಿ, ನಮ್ಮ ಜೀವಿತಗಳನ್ನು ನಾವು ಯೆಹೋವನಿಗೆ ಸಮರ್ಪಿಸುವಾಗ, ಆತನೊಂದಿಗೆ ಒಂದು ಅತ್ಯಂತ ಅಮೂಲ್ಯವಾದ ಸಂಬಂಧದೊಳಗೆ ನಾವು ಪ್ರವೇಶಿಸುತ್ತೇವೆ. ಆದಕಾರಣ, ಆತನಿಗೆ ದುಃಖವನ್ನುಂಟುಮಾಡುವ ಯಾವುದೊ ವಿಷಯವನ್ನು ನಾವು ಮಾಡುವಾಗ, ನಮ್ಮ ಸ್ವರ್ಗೀಯ ತಂದೆಯೊಂದಿಗೆ ಆ ಸಂಬಂಧವನ್ನು ಪುನಸ್ಸಾಪ್ಥಿಸಲು ಹುಡುಕುವುದರಲ್ಲಿ ನಾವು ತ್ವರಿತವಾಗಿ ಕಾರ್ಯಮಾಡಬೇಕು.
ಸಂತೋಷಕರವಾಗಿ, ಬಹಿಷ್ಕೃತ ಸ್ಥಿತಿಯಲ್ಲಿದ್ದ ಕೆಲವರು, ದುಂದುವೆಚ್ಚ ಮಾಡಿದ ಮಗನ ದೃಷ್ಟಾಂತವನ್ನು ಹೃದಯಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲಿ ಯೆಹೋವನು, ಒಬ್ಬ ಪಶ್ಚಾತ್ತಾಪ ಪಡುವ ಪಾಪಿಯನ್ನು—ಅವನು ಮನಸ್ಸು ತಿರುಗಿಸಿ, ದೇವರ ಕ್ಷಮಾಪಣೆಯನ್ನು ಕೋರುವುದಾದರೆ—ಹಿಂದೆ ಪಡೆಯಲು ಸಿದ್ಧನಾಗಿರುವ ಒಬ್ಬ ಪ್ರೀತಿಯ ತಂದೆಗೆ ಹೋಲಿಸಲ್ಪಡುತ್ತಾನೆ. (ಲೂಕ 15:11-24) ಯಥಾರ್ಥವಾದ, ಹೃತ್ಪೂರ್ವಕ ಪಶ್ಚಾತ್ತಾಪ ಮತ್ತು ಕೆಟ್ಟದ್ದರಿಂದ ತಿರುಗಿಕೊಳ್ಳುವುದು, ಯೆಹೋವನ ಅನುಗ್ರಹಕ್ಕೆ ಮತ್ತು ಕ್ರೈಸ್ತ ಸಭೆಗೆ ಹಿಂದಿರುಗುವ ಮಾರ್ಗವಾಗಿ ಪರಿಣಮಿಸಿದೆ. ತಮ್ಮ ದೋಷದ ಹೊರೆಯಿಂದ ಜಜ್ಜಿಹೋದ ಅನಿಸಿಕೆಯುಳ್ಳವರಾದ, ಪಶ್ಚಾತ್ತಾಪ ಪಟ್ಟಿರುವ ಕೆಲವು ತಪ್ಪಿತಸ್ಥರು, ಪಶ್ಚಾತ್ತಾಪ ಪಡುವಂತೆ ಮತ್ತು ಕ್ರೈಸ್ತ ಸಭೆಯ ಪ್ರೀತಿಪರ ಪರಿಸರಕ್ಕೆ ಹಿಂದಿರುಗಲು ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಹೀಗೆ ಅವರು ಯೆಶಾಯ 57:15ರಲ್ಲಿರುವ ಯೆಹೋವನ ಮಾತುಗಳನ್ನು ಗಣ್ಯಮಾಡುವಂತಾಗಿದೆ.
ಯೆಹೋವನ ಪ್ರೀತಿಯ ಆರೈಕೆಗೆ ಹಿಂದಿರುಗುವುದರಿಂದ ವ್ಯಕ್ತಿಗಳನ್ನು ತಡೆಯಲು, ಗೈಯಲ್ಪಟ್ಟ ಪಾಪಗಳಿಗಾಗಿ ಯಾವ ಕ್ಷಮಾಪಣೆಯೂ ಇರುವುದಿಲ್ಲವೆಂದು ನಟನೆ ಮಾಡಲು ಸೈತಾನನು ಬಯಸುವನು. ಆದರೆ ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞವು, ಪಶ್ಚಾತ್ತಾಪ ಪಡುವ ಯಾವುದೇ ವ್ಯಕ್ತಿಯ ಪಾಪಗಳನ್ನು—ಹೌದು, “ಸಮಸ್ತ ಲೋಕದ” ಪಿತ್ರಾರ್ಜಿತವಾಗಿ ಪಡೆದ ಪಾಪವನ್ನು ಸಹ—ಮರೆಮಾಡಲು ಸಮರ್ಪಕವಾಗಿದೆ. (1 ಯೋಹಾನ 2:1, 2) ಪ್ರಾಯಶ್ಚಿತದ್ತ ಮೂಲಕ ಮರೆಮಾಡಲ್ಪಡದೇ ಇರುವ ಒಂದು ಪಾಪವು, ದೇವರ ಪವಿತ್ರಾತ್ಮದ ವಿರುದ್ಧವಾಗಿರುವ ಪಾಪವಾಗಿದೆ. ಇಸ್ಕರಿಯೋತ ಯೂದ ಮತ್ತು ಅನೇಕ ಶಾಸ್ತ್ರಿಗಳ ಹಾಗೂ ಫರಿಸಾಯರ ಘೋರವಾದ ಪಾಪಗಳಂತಹ, ದೇವರ ಆತ್ಮದ ಕಾರ್ಯಾಚರಣೆಯ ವಿರುದ್ಧವಾಗಿರುವ ಉದ್ದೇಶಪೂರ್ವಕ ದಂಗೆಗೆ ಅದು ಸಮಾನವಾಗಿದೆ.—ಮತ್ತಾಯ 12:24, 31, 32; 23:13, 33; ಯೋಹಾನ 17:12.
ಯೆಹೋವನ ನೀತಿಯನ್ನು ಎತ್ತಿಹಿಡಿಯುವುದು
ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರು 1919ರಲ್ಲಿ ಯೆಹೋವನ ಅನುಗ್ರಹಕ್ಕೆ ಪುನಸ್ಸಾಪ್ಥಿಸಲ್ಪಟ್ಟ ಕಾರಣ, ಸುತ್ತಲಿರುವ ಲೋಕದಿಂದ ಅವರು ಹೆಚ್ಚು ಹೆಚ್ಚಾಗಿ ಮೇಲೇರಿಸಲ್ಪಟ್ಟಿದ್ದಾರೆ. ಇದು ಅವರ ವತಿಯಿಂದಾದ ಯಾವುದೇ ಒಳ್ಳೆಯತನದಿಂದಾಗಿರುವುದಿಲ್ಲ, ಆದರೆ ಯೆಹೋವನ ನಿಯಮಗಳಿಗೆ ಮತ್ತು ಮಟ್ಟಗಳಿಗೆ ಅವರ ಇಚ್ಛಾಪೂರ್ವಕ ಅಧೀನತೆಯಿಂದಾಗಿದೆ. ಫಲಸ್ವರೂಪವಾಗಿ, ಕ್ರಿಸ್ತನ ಲಕ್ಷಾಂತರ “ಬೇರೆ ಕುರಿಗಳು,” ನಿಷ್ಠಾವಂತ ಸಂಗಡಿಗರೋಪಾದಿ ಆತ್ಮಿಕ ಇಸ್ರಾಯೇಲಿನೊಂದಿಗೆ ಸಹವಾಸಕ್ಕೆ ಸೆಳೆಯಲ್ಪಟ್ಟಿದ್ದಾರೆ. (ಯೋಹಾನ 10:16) ದೇವರ ನೀತಿವಂತ ಮಟ್ಟಗಳಿಂದ ಬಹುದೂರವಿರುವ ಲೋಕವೊಂದರಲ್ಲಿ ಈ ಜನರು ಯೆಹೋವನಿಗೆ ಮಹಿಮೆ ಹಾಗೂ ಘನತೆಯನ್ನು ತರುತ್ತಾರೆ. ಅದು ದಕ್ಷಿಣ ಆಫ್ರಿಕದ ಪತ್ರಿಕೆಯಾದ ಪರ್ಸನ್ಯಾಲಿಟಿ ಒಮ್ಮೆ ಗಮನಿಸಿದ್ದ ಹಾಗೆ ಇದೆ: “ಯೆಹೋವನ ಸಾಕ್ಷಿಗಳು ಒಳ್ಳೆಯ ಗುಣಗಳಿಂದ ತುಂಬಿ ತುಳುಕುವಂತೆ ಮತ್ತು ಕೆಟ್ಟತನದಿಂದ ಬಹುಮಟ್ಟಿಗೆ ಮುಕ್ತರಾಗಿರುವಂತೆ ತೋರುತ್ತದೆ.”
ಭಕ್ತಿಹೀನ ಲೋಕವೊಂದರಲ್ಲಿ ಈ ಉನ್ನತ ಸ್ಥಾನವನ್ನು ಕಾಪಾಡಿಕೊಳ್ಳಲು, ಕ್ರೈಸ್ತ ಸಭೆಯ ಪ್ರತಿಯೊಬ್ಬ ಸದಸ್ಯನು ಯೆಹೋವನ ಮುಂದೆ ನಿರ್ಮಲವಾದ, ಸತ್ಯವಂತ ಜೀವಿತವನ್ನು ಜೀವಿಸುವ ಅಗತ್ಯವಿದೆ. ಬೈಬಲಿನಲ್ಲಿ, ಯೆಹೋವನ ಸ್ವರ್ಗೀಯ ಸಂಸ್ಥೆಯು ನಿರ್ಮಲವಾದ ವಿಷಯಗಳಿಂದ ಚಿತ್ರಿಸಲ್ಪಟ್ಟಿದೆ. ಅದು ಸೂರ್ಯನನ್ನು ಧರಿಸಿಕೊಂಡಿರುವ ಮತ್ತು ಆಕೆಯ ಕಾಲುಗಳ ಕೆಳಗೆ ಚಂದ್ರನಿರುವ ಒಬ್ಬ ಸುಂದರ ಸ್ತ್ರೀಯಂತೆ ಕಾಣಿಸಿಕೊಳ್ಳುತ್ತದೆ. (ಪ್ರಕಟನೆ 12:1) ಹೊಸ ಯೆರೂಸಲೇಮ್, ತೋರ್ಕೆಯಲ್ಲಿ ಸುಂದರವಾಗಿದ್ದು, ಒಂದು ಪವಿತ್ರ ಪಟ್ಟಣದಂತೆ ವರ್ಣಿಸಲ್ಪಟ್ಟಿದೆ. (ಪ್ರಕಟನೆ 21:2) ಕ್ರಿಸ್ತನ ವಧು ವರ್ಗದ ನಂಬಿಗಸ್ತ ಸದಸ್ಯರಿಗೆ “ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿ”ಯು ಕೊಡಲ್ಪಟ್ಟಿದೆ. (ಪ್ರಕಟನೆ 19:8) ಮಹಾ ಸಮೂಹದವರು “ಬಿಳೀ ನಿಲುವಂಗಿಗಳನ್ನು ತೊಟ್ಟು”ಕೊಂಡಿರುವುದು ಕಂಡುಬರುತ್ತದೆ. (ಪ್ರಕಟನೆ 7:9) ನೀತಿಯ ಕಡೆಗೆ ಓಲುವ ಜನರು ನಿರ್ಮಲವಾದ ಸಂಸ್ಥೆಯ ಕಡೆಗೆ ಸೆಳೆಯಲ್ಪಡುತ್ತಾರೆ. ವ್ಯತಿರಿಕ್ತವಾಗಿ, ಸೈತಾನನ ಸಂಸ್ಥೆಯು ಹೊಲಸಾಗಿದೆ. ಅವನ ಧಾರ್ಮಿಕ ವ್ಯವಸ್ಥೆಯ ಒಬ್ಬ ಜಾರಸ್ತ್ರೀಯಂತೆ ಚಿತ್ರಿಸಲ್ಪಟ್ಟಿದೆ, ಮತ್ತು ಪವಿತ್ರ ಪಟ್ಟಣದ ಹೊರಗಿರುವವರು ಅಶುದ್ಧರೂ ಹೊಲಸಾಗಿರುವವರೂ ಆಗಿ ವರ್ಣಿಸಲ್ಪಟ್ಟಿದ್ದಾರೆ.—ಪ್ರಕಟನೆ 17:1; 22:15.
ನಿತ್ಯಜೀವವು ನೀತಿವಂತರಿಗೆ ವಾಗ್ದಾನಿಸಲ್ಪಟ್ಟಿದೆ. ಯೆಹೋವನ ನೀತಿಯನ್ನು ಎತ್ತಿಹಿಡಿಯುವ ಗುಂಪುಗೂಡಿದ ಜನರಿಗೆ ಈ ದುಷ್ಟ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಪ್ರತೀಕ್ಷೆಯಿದೆ. “ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು,” ಎಂಬುದಾಗಿ ಜ್ಞಾನೋಕ್ತಿ 1:33ರಲ್ಲಿ ದೇವರು ವಾಗ್ದಾನಿಸುತ್ತಾನೆ.
ಮಹಾ ಸೊಲೊಮೋನನಾದ ಕ್ರಿಸ್ತ ಯೇಸುವು, ಯೆಹೋವನ ಭಯದಲ್ಲಿ, ಆ ಹೊಸ ಲೋಕವನ್ನು ನೀತಿಯಲ್ಲಿ ಆಳುವಾಗ, ಅದು ಎಷ್ಟು ಹರ್ಷಕರವಾಗಿರುವುದು! (2 ಪೇತ್ರ 3:13) ಅದು ಮೋಡಗಳಿಲ್ಲದ ಮುಂಜಾನೆಯಂತೆ, ಸೂರ್ಯನು ಪ್ರಕಾಶಿಸುವಾಗ ಇರುವ ಮುಂಜಾನೆಯ ಬೆಳಕಿನಂತೆ ಇರುವುದು. ಭೂಮಿಯ ಸಕಲ ನಿವಾಸಿಗಳು, ಪ್ರತಿಯೊಬ್ಬನು ತನ್ನ ಸ್ವಂತ ದ್ರಾಕ್ಷಾಲತೆ ಮತ್ತು ಅಂಜೂರದ ಮರದ ಕೆಳಗೆ ಕುಳಿತಿರುವನೊ ಎಂಬಂತೆ, ಭದ್ರತೆಯಲ್ಲಿ ಜೀವಿಸುವರು. ನೀತಿವಂತ ಮಾನವ ಸಮಾಜವು ಭೂಮಿಯನ್ನು ಸುಂದರಗೊಳಿಸುವುದು ಮತ್ತು ನಮ್ಮ ದೇವರಾದ ಯೆಹೋವನ ಅನಂತ ಸುತ್ತಿಗೆ ವಿಶ್ವದಲ್ಲಿ ತನ್ನ ಯೋಗ್ಯವಾದ ಸ್ಥಾನವನ್ನು ವಹಿಸಿಕೊಳ್ಳುವುದು.—ಮೀಕ 4:3, 4; ಯೆಶಾಯ 65:17-19, 25ನ್ನು ಸಹ ನೋಡಿರಿ.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Garo Nalbandian