ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 2/15 ಪು. 3-4
  • ಹಿಂಸಾಕೃತ್ಯವು ಎಲ್ಲೆಡೆಯೂ ಇದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಸಾಕೃತ್ಯವು ಎಲ್ಲೆಡೆಯೂ ಇದೆ
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮನೆಯಲ್ಲಿ ಹಿಂಸಾಕೃತ್ಯ
  • ಕೆಲಸದ ಸ್ಥಳದಲ್ಲಿ ಹಿಂಸಾಕೃತ್ಯ
  • ಕ್ರೀಡೆಗಳು ಮತ್ತು ಮನೋರಂಜನೆಯಲ್ಲಿ ಹಿಂಸಾಕೃತ್ಯ
  • ಶಾಲೆಯಲ್ಲಿ ಹಿಂಸಾಕೃತ್ಯ
  • ಹಿಂಸಾತ್ಮಕವಾದ ಒಂದು ಸಂಸ್ಕೃತಿ
  • ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಗೃಹ ಜೀವನದ ಹಿಂಸಾಚಾರವನ್ನು ಯಾವುದು ಆಗಿಸುತ್ತದೆ?
    ಎಚ್ಚರ!—1993
  • ಹಿಂಸೆ
    ಎಚ್ಚರ!—2015
  • ಹಿಂಸಾಚಾರ ಮನೆಗೆ ಹೊಡೆಯುವಾಗ
    ಎಚ್ಚರ!—1993
ಇನ್ನಷ್ಟು
ಕಾವಲಿನಬುರುಜು—1996
w96 2/15 ಪು. 3-4

ಹಿಂಸಾಕೃತ್ಯವು ಎಲ್ಲೆಡೆಯೂ ಇದೆ

ತನ್ನ ಕಾರಿನಲ್ಲಿ ಕುಳಿತುಕೊಂಡು, ವಾಹನ ಸಂಚಾರದ ದೀಪವು ಬದಲಾಗುವುದಕ್ಕಾಗಿ ಕಾಯುತ್ತಿದ್ದ ಚಾಲಕನು, ಅಶ್ಲೀಲ ಮಾತುಗಳನ್ನು ಆಡುತ್ತಾ, ತನ್ನ ಮುಷ್ಟಿಯಿಂದ ಭಾವಾಭಿನಯಗಳನ್ನು ಮಾಡುತ್ತಾ, ಒಬ್ಬ ದಢೂತಿ ಮನುಷ್ಯನು ತನ್ನ ಕಡೆಗೆ ಬರುತ್ತಿರುವುದನ್ನು ತಟ್ಟನೆ ಗಮನಿಸಿದನು. ಆ ಚಾಲಕನು ತನ್ನ ಕಾರಿನ ಬಾಗಿಲುಗಳಿಗೆ ಬೀಗಹಾಕಲು ಮತ್ತು ಕಿಟಕಿಗಳನ್ನು ಮುಚ್ಚಲು ಅವಸರಿಸಿದನು, ಆದರೆ ಆ ದಢೂತಿ ಮನುಷ್ಯನು ಅವನೆಡೆಗೆ ಬರುತ್ತಾ ಇದ್ದನು. ಹತ್ತಿರ ಸಮೀಪಿಸಿದಾಗ, ಆ ಮನುಷ್ಯನು ಕಾರನ್ನು ಅಲುಗಾಡಿಸಿದನು ಮತ್ತು ಕಾರಿನ ಬಾಗಿಲನ್ನು ಎಳೆದನು. ಅಂತಿಮವಾಗಿ, ಆಶಾಭಂಗದಿಂದ ಅವನು ತನ್ನ ದೊಡ್ಡ ಮುಷ್ಟಿಯನ್ನು ಎತ್ತಿ ಮುಂದಿನ ಗಾಜಿನ ಮೇಲೆ ಅಪ್ಪಳಿಸಿ, ಅದನ್ನು ಒಡೆದು ಚೂರುಚೂರು ಮಾಡಿದನು.

ಇದು ಸಾಹಸಮಯ ಚಲನ ಚಿತ್ರದ ಒಂದು ದೃಶ್ಯವಾಗಿದೆಯೊ? ಇಲ್ಲ! ಇದು ತನ್ನ ಪ್ರಶಾಂತವಾದ, ನೆಮ್ಮದಿಯ ವಾತಾವರಣಕ್ಕಾಗಿ ಪ್ರಸಿದ್ಧವಾಗಿರುವ ಹವಾಯೀಯ ಅವಾಹೂ ದ್ವೀಪದ ಮೇಲೆ ನಡೆದ ವಾಹನ ಸಂಚಾರದ ಒಂದು ಜಗಳವಾಗಿತ್ತು.

ಮೇಲಿನ ಘಟನೆಯು ಸಂಭವಿಸಿದ್ದು ಆಶ್ಚರ್ಯಜನಕವಾಗಿಲ್ಲ. ಬಾಗಿಲುಗಳಿಗೆ ಬೀಗಗಳು, ಕಿಟಕಿಗಳಿಗೆ ಕಂಬಿಗಳು, ಕಟ್ಟಡಗಳಲ್ಲಿ ಭದ್ರತಾ ಸಿಬ್ಬಂದಿಗಳು, ಬಸ್ಸುಗಳ ಮೇಲಿನ, “ಚಾಲಕರು ಹಣವನ್ನು ಒಯ್ಯುವುದಿಲ್ಲ” ಎಂಬ ಹೇಳಿಕೆಯನ್ನು ನೀಡುವ ಸೂಚನೆಗಳು ಸಹ—ಇವೆಲ್ಲವೂ ಒಂದೇ ವಿಷಯಕ್ಕೆ ನಿರ್ದೇಶಿಸುತ್ತವೆ: ಹಿಂಸಾಕೃತ್ಯವು ಎಲ್ಲೆಡೆಯಲ್ಲೂ ಇದೆ!

ಮನೆಯಲ್ಲಿ ಹಿಂಸಾಕೃತ್ಯ

ಬಹಳ ದೀರ್ಘ ಸಮಯದಿಂದಲೂ, ಮನೆಯು ವ್ಯಕ್ತಿಯೊಬ್ಬನ ಸುರಕ್ಷಿತ ಆಶ್ರಯಸ್ಥಳದೋಪಾದಿ ಮಾನ್ಯಮಾಡಲ್ಪಟ್ಟಿದೆ. ಆದರೂ, ಮನೆಯಲ್ಲಿ ವ್ಯಕ್ತಿಯೊಬ್ಬನು ಶಾಂತಿ ಮತ್ತು ಸುರಕ್ಷಣೆಯನ್ನು ಪಡೆದುಕೊಳ್ಳಬಲ್ಲನು ಎಂಬ ಕಲ್ಪನೆಯು ತೀವ್ರಗತಿಯಿಂದ ಬದಲಾಗುತ್ತಿದೆ. ಮಕ್ಕಳ ಅಪಪ್ರಯೋಗ, ಗಂಡಹೆಂಡತಿಯರ ಹೊಡೆದಾಟ, ಮತ್ತು ನರಹತ್ಯೆಯನ್ನು ಒಳಗೊಳ್ಳುವಂತಹ ಕುಟುಂಬ ಹಿಂಸಾಕೃತ್ಯ—ಇವು ಲೋಕದಾದ್ಯಂತವಾಗಿ ವಾರ್ತಾ ಶಿರೋನಾಮಗಳಾಗಿವೆ.

ಉದಾಹರಣೆಗಾಗಿ, “ಮಕ್ಕಳು ಮನೆಯ ಹಿಂಸಾಕೃತ್ಯಕ್ಕೆ ಒಡ್ಡಲ್ಪಡುವುದರಿಂದ, ಬ್ರಿಟನಿನ ಕಡಿಮೆಪಕ್ಷ 7,50,000 ಮಕ್ಕಳು ದೀರ್ಘಾವಧಿಯ ರೋಗಾವಸ್ಥೆಯನ್ನು ಅನುಭವಿಸಬಹುದು” ಎಂದು ಮ್ಯಾಂಚೆಸ್ಟರ್‌ ಗಾರ್ಡಿಯನ್‌ ವೀಕ್ಲಿ ಹೇಳುತ್ತದೆ. “ಪ್ರಶ್ನಿಸಲ್ಪಟ್ಟ ನಾಲ್ಕು ಮಂದಿ ಸ್ತ್ರೀಯರಲ್ಲಿ ಮೂವರು, ತಮ್ಮ ಮಕ್ಕಳು ಹಿಂಸಾತ್ಮಕ ಘಟನೆಗಳನ್ನು ನೋಡಿದ್ದರೆಂದು ಹೇಳಿದರು, ಮತ್ತು ಮಕ್ಕಳಲ್ಲಿ ಬಹುಮಟ್ಟಿಗೆ ಮೂರನೇ ಎರಡು ಭಾಗದಷ್ಟು ಮಂದಿ, ತಮ್ಮ ತಾಯಂದಿರು ಹೊಡೆಯಲ್ಪಟ್ಟದ್ದನ್ನು ನೋಡಿದ್ದರು” ಎಂಬುದನ್ನು ಸಹ ಕಂಡುಕೊಂಡಂತಹ ಸಮೀಕ್ಷೆಯೊಂದರ ಮೇಲೆ ಆ ವರದಿಯು ಆಧಾರಿಸಿತ್ತು. ತದ್ರೀತಿಯಲ್ಲಿ, ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ಗನುಸಾರ, “2,000 ಮಕ್ಕಳು—ಅವರಲ್ಲಿ ಅಧಿಕಾಂಶ ಮಂದಿ 4ರ ಕೆಳಗಿನ ಪ್ರಾಯದವರು—ಪ್ರತಿ ವರ್ಷ ಹೆತ್ತವರು ಅಥವಾ ಗೃಹಪಾಲಕರ ವಶದಲ್ಲಿ ಸಾಯುತ್ತಾರೆ” ಎಂದು ಮಕ್ಕಳ ಅಪಪ್ರಯೋಗ ಮತ್ತು ಅಲಕ್ಷ್ಯದ ಕುರಿತಾದ ಯು.ಎಸ್‌. ಸಲಹಾ ಇಲಾಖೆಯು ಅಂದಾಜು ಮಾಡುತ್ತದೆ. ಇದು ವಾಹನ ಸಂಚಾರದ ಅಪಘಾತಗಳು, ಮುಳುಗುವಿಕೆಗಳು, ಅಥವಾ ಬೀಳುವಿಕೆಗಳಿಂದ ಉಂಟುಮಾಡಲ್ಪಡುವ ಅನೇಕ ಮರಣಗಳಿಗಿಂತಲೂ ಹೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ.

ಮನೆಯ ಹಿಂಸಾಕೃತ್ಯವು ಗಂಡಹೆಂಡತಿಯರ ಅಪಪ್ರಯೋಗವನ್ನೂ ಒಳಗೂಡುತ್ತದೆ; ಇದು ತಳ್ಳಲ್ಪಡುವುದು ಅಥವಾ ಕುಲುಕಾಡಿಸಲ್ಪಡುವುದರಿಂದ ಹಿಡಿದು, ಅಪ್ಪಳಿಸಲ್ಪಡುವುದು, ಒದೆಯಲ್ಪಡುವುದು, ಅದುಮಲ್ಪಡುವುದು, ಹೊಡೆಯಲ್ಪಡುವುದು, ಒಂದು ಚಾಕು ಅಥವಾ ಒಂದು ಬಂದೂಕಿನಿಂದ ಬೆದರಿಸಲ್ಪಡುವುದು ಅಥವಾ ಕೊಲ್ಲಲ್ಪಡುವ ತನಕ ವ್ಯಾಪಿಸುತ್ತದೆ. ಮತ್ತು ಇಂದು ಈ ರೀತಿಯ ಹಿಂಸಾಕೃತ್ಯವು ಪುರುಷರಿಗೂ ಸ್ತ್ರೀಯರಿಗೂ—ಇಬ್ಬರಿಗೂ—ಅನ್ವಯಿಸುತ್ತದೆ. ದಂಪತಿಗಳ ನಡುವಿನ ವರದಿಸಲ್ಪಟ್ಟ ಹಿಂಸಾಕೃತ್ಯದ ಮಧ್ಯೆ, ಸುಮಾರು ಕಾಲು ಭಾಗ ವಿದ್ಯಮಾನಗಳು ಪುರುಷರಿಂದಲೂ ಇನ್ನೊಂದು ಕಾಲು ಭಾಗ ಸ್ತ್ರೀಯರಿಂದಲೂ ಆರಂಭಿಸಲ್ಪಟ್ಟಿದ್ದವು, ಮತ್ತು ಎರಡೂ ಪಕ್ಷಗಳು ದೋಷವನ್ನು ಹಂಚಿಕೊಳ್ಳಬೇಕಾದ ಕಾದಾಟಗಳೋಪಾದಿ ಉಳಿದವುಗಳನ್ನು ಅತ್ಯುತ್ತಮವಾಗಿ ವರ್ಣಿಸಸಾಧ್ಯವಿದೆ ಎಂದು ಒಂದು ಅಧ್ಯಯನವು ಕಂಡುಕೊಳ್ಳುತ್ತದೆ.

ಕೆಲಸದ ಸ್ಥಳದಲ್ಲಿ ಹಿಂಸಾಕೃತ್ಯ

ಮನೆಯ ಹೊರಗೆ, ವ್ಯಕ್ತಿಯೊಬ್ಬನು ಕ್ರಮಬದ್ಧತೆ, ಗೌರವ, ಮತ್ತು ಮರ್ಯಾದೆಯ ಉಪಚಾರವನ್ನು ಪಡೆದುಕೊಳ್ಳುವಂತಹ ಸ್ಥಳವು, ಸಾಂಪ್ರದಾಯಿಕವಾಗಿ ಕೆಲಸದ ಸ್ಥಳವಾಗಿದೆ. ಆದರೆ ವಿಷಯವು ಇನ್ನುಮುಂದೆ ಹಾಗಿರುವಂತೆ ತೋರುವುದಿಲ್ಲ. ದೃಷ್ಟಾಂತಕ್ಕಾಗಿ, ಪ್ರತಿ ವರ್ಷ 9,70,000ಕ್ಕಿಂತಲೂ ಹೆಚ್ಚಿನ ಜನರು ಕೆಲಸದ ಸ್ಥಳದಲ್ಲಿನ ಹಿಂಸಾತ್ಮಕ ದುಷ್ಕೃತ್ಯಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಅಮೆರಿಕದ ನ್ಯಾಯ ವಿಭಾಗದಿಂದ ಹೊರಡಿಸಲ್ಪಟ್ಟ ಸಂಖ್ಯಾಸಂಗ್ರಹಣಗಳು ತೋರಿಸುತ್ತವೆ. ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸುವುದಾದರೆ, ಪ್ರೊಫೆಶನಲ್‌ ಸೇಫ್ಟಿ—ಜರ್ನಲ್‌ ಆಫ್‌ ದಿ ಅಮೆರಿಕನ್‌ ಸೊಸೈಟಿ ಆಫ್‌ ಸೇಫ್ಟಿ ಎಂಜಿನಿಯರ್ಸ್‌ನಲ್ಲಿನ ವರದಿಯೊಂದಕ್ಕನುಸಾರ, “ಪ್ರತಿ ನಾಲ್ಕು ಮಂದಿ ಕೆಲಸಗಾರರಲ್ಲಿ ಒಬ್ಬನು, ಕೆಲಸದಲ್ಲಿ ಕೆಲವೊಂದು ವಿಧದ ಹಿಂಸಾಕೃತ್ಯಕ್ಕೆ ಬಲಿಪಶುವಾಗುವ ಅವಕಾಶವನ್ನು ಹೊಂದಿರಬಹುದು.”

ಅತ್ಯಂತ ಬಾಧಕ ವಿಷಯವೇನಂದರೆ, ಕೆಲಸದ ಸ್ಥಳದ ಹಿಂಸಾಕೃತ್ಯವು, ವಾಗ್ವಾದಗಳಿಗೆ ಮತ್ತು ಅಪವಾದಗಳಿಗೆ ಸೀಮಿತವಾಗಿಲ್ಲ ಎಂಬುದೇ. “ಇತರ ನೌಕರರಿಂದ, ನಿರ್ದಿಷ್ಟವಾಗಿ ಧಣಿಗಳ ಹಾಗೂ ನೌಕರರ ವಿರುದ್ಧವಾಗಿ ನಿರ್ದೇಶಿಸಲ್ಪಡುವ ಹಿಂಸಾಕೃತ್ಯವು, ಅಮೆರಿಕದಲ್ಲಿನ ನರಹತ್ಯೆಯ ಅತ್ಯಂತ ತೀವ್ರಗತಿಯಲ್ಲಿ ವೃದ್ಧಿಯಾಗುತ್ತಿರುವ ವಿಭಾಗವಾಗಿದೆ” ಎಂದು ಅದೇ ವರದಿಯು ಹೇಳುತ್ತದೆ. 1992ರಲ್ಲಿ, ಕೆಲಸ ಸಂಬಂಧಿತವಾದ 6 ಸಾವುಗಳಲ್ಲಿ 1 ನರಹತ್ಯೆಯಾಗಿತ್ತು; ಸ್ತ್ರೀಯರಲ್ಲಿ ಆ ಸಂಖ್ಯೆಯು ಬಹುತೇಕ 2ರಲ್ಲಿ 1 ಆಗಿತ್ತು. ಈ ಹಿಂದೆ ವ್ಯವಸ್ಥಿತವಾಗಿದ್ದ ಕೆಲಸದ ಸ್ಥಳದಲ್ಲಿ ಹಿಂಸಾಕೃತ್ಯದ ಅಲೆಯು ಬೀಸಿಕೊಂಡುಹೋಗುತ್ತಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಕ್ರೀಡೆಗಳು ಮತ್ತು ಮನೋರಂಜನೆಯಲ್ಲಿ ಹಿಂಸಾಕೃತ್ಯ

ಹೆಚ್ಚು ಗಂಭೀರವಾದ ಜೀವನ ಪ್ರಯತ್ನಗಳಿಗಾಗಿ ವ್ಯಕ್ತಿಯೊಬ್ಬನನ್ನು ಪುನರ್ಚೈತನ್ಯಗೊಳಿಸುವ ಪರ್ಯಾಯ ಮಾರ್ಗ ಅಥವಾ ವಿನೋದದ ಮಾಧ್ಯಮದೋಪಾದಿ, ಕ್ರೀಡೆಗಳನ್ನು ಹಾಗೂ ಮನೋರಂಜನೆಯನ್ನು ಬೆನ್ನಟ್ಟಲಾಗಿದೆ. ಇಂದು ಮನೋರಂಜನೆಯು ಹಲವಾರು ಕೋಟಿ ಡಾಲರುಗಳ ಉದ್ಯಮವಾಗಿದೆ. ಈ ಲಾಭಕರ ವ್ಯಾಪಾರದಿಂದ ಸಾಧ್ಯವಾದಷ್ಟು ಬೃಹತ್‌ ಪ್ರಮಾಣದ ಲಾಭವನ್ನು ಪಡೆದುಕೊಳ್ಳಲಿಕ್ಕಾಗಿ, ಸರಬರಾಯಿಗಾರರು ತಮ್ಮ ಉತ್ಪನ್ನವನ್ನು ಮಾರಾಟಮಾಡಲಿಕ್ಕಾಗಿ ಯಾವುದೇ ವಿಧಾನವನ್ನು ಉಪಯೋಗಿಸಲು ಅನುತಾಪಪಡುವುದಿಲ್ಲ. ಮತ್ತು ಅಂತಹ ವಿಧಾನಗಳಲ್ಲಿ ಒಂದು ಹಿಂಸಾಕೃತ್ಯವಾಗಿದೆ.

ಉದಾಹರಣೆಗಾಗಿ, ವಿಡಿಯೊ ಆಟದ ತಯಾರಕನೊಬ್ಬನ ಬಳಿ ಜನಪ್ರಿಯವಾದ ಒಂದು ಯುದ್ಧಾಟವಿದೆ; ಅದರಲ್ಲಿ ಒಬ್ಬ ಯೋಧನು ತನ್ನ ಎದುರಾಳಿಯ ತಲೆ ಮತ್ತು ಬೆನ್ನೆಲುಬನ್ನು ಕಡಿಯುತ್ತಾನೆ; ಆಗ ಪ್ರೇಕ್ಷಕರು “ಅವನನ್ನು ಮುಗಿಸಿರಿ! ಅವನನ್ನು ಮುಗಿಸಿರಿ!” ಎಂಬುದಾಗಿ ಪಠಿಸುತ್ತಾರೆ, ಎಂದು ವಾಣಿಜ್ಯ ಪತ್ರಿಕೆಯಾದ ಫೋರ್ಬ್ಸ್‌ ವರದಿಸಿತು. ಹಾಗಿದ್ದರೂ, ಸ್ಪರ್ಧಿಸುತ್ತಿರುವ ವಿಡಿಯೊ ಆಟದ ಒಂದು ಕಂಪೆನಿಗಾಗಿ ಮಾಡಲ್ಪಟ್ಟ ಅದೇ ಆಟದ ಒಂದು ರೂಪವು, ಆ ರಕ್ತಮಯ ದೃಶ್ಯವನ್ನು ಹೊಂದಿಲ್ಲ. ಫಲಿತಾಂಶವೇನು? ಹೆಚ್ಚು ಹಿಂಸಾತ್ಮಕವಾದ ರೂಪವು ತನ್ನ ಪ್ರತಿಸ್ಪರ್ಧಿಯನ್ನು, 3ಕ್ಕೆ 2ರ ಅನುಪಾತದಲ್ಲಿ ಮಾರಲ್ಪಡುತ್ತದೆ. ಮತ್ತು ಇದು ದೊಡ್ಡ ಮೊತ್ತದ ಹಣವನ್ನು ಸೂಚಿಸುತ್ತದೆ. ಮನೆಯ ಟಿಲಿವಿಷನ್‌ಗಳಲ್ಲಿ ಉಪಯೋಗಿಸಬಹುದಾದ, ಈ ಆಟಗಳ ರೂಪಗಳು ಮಾರುಕಟ್ಟೆಗೆ ಬಂದಾಗ, ಮೊದಲ ಎರಡು ವಾರಗಳಲ್ಲಿ ಕಂಪೆನಿಗಳು ಅಂತಾರಾಷ್ಟ್ರೀಯವಾಗಿ 650 ಲಕ್ಷ ಡಾಲರುಗಳನ್ನು ಸಂಪಾದಿಸಿದವು! ಲಾಭವು ಒಳಗೊಂಡಿರುವಾಗ, ಗ್ರಾಹಕರಿಗೆ ಹಿಂಸಾಕೃತ್ಯವು ಕೇವಲ ಇನ್ನೊಂದು ಆಕರ್ಷಣೆಯಾಗಿದೆ.

ಕ್ರೀಡೆಗಳಲ್ಲಿನ ಹಿಂಸಾಕೃತ್ಯವು ತೀರ ಬೇರೆಯಾದ ವಿಷಯವಾಗಿದೆ. ಅವರು ಮಾಡಸಾಧ್ಯವಿರುವ ಹಾನಿಯಲ್ಲಿ ಆಟಗಾರರು ಅಭಿಮಾನ ಪಡುತ್ತಾರೆ. ದೃಷ್ಟಾಂತಕ್ಕಾಗಿ, 1990ರಲ್ಲಿನ ಹಾಕಿ ಆಟವೊಂದರಲ್ಲಿ 86 ಪೆನಲ್ಟಿಗಳಿದ್ದವು—ಒಂದು ಸರ್ವಕಾಲಿಕ ಉಚ್ಚಾಂಕ. ಮೂರುವರೆ ತಾಸುಗಳ ಶಾರೀರಿಕ ಹಾನಿಯಿಂದ ಆ ಆಟವು ಅಡ್ಡಯಿಸಲ್ಪಟ್ಟಿತು. ಒಬ್ಬ ಆಟಗಾರನು ಮುಖದ ಮುರಿದ ಮೂಳೆ, ಗೀರಲ್ಪಟ್ಟ ಕಾರ್ನಿಯ, ಮತ್ತು ಸೀಳುಗಾಯಕ್ಕಾಗಿ ಚಿಕಿತ್ಸೆ ಮಾಡಲ್ಪಟ್ಟನು. ಅಂತಹ ಹಿಂಸಾಕೃತ್ಯವೇಕೆ? ಒಬ್ಬ ಆಟಗಾರನು ವಿವರಿಸಿದ್ದು: “ಅನೇಕ ಹೋರಾಟಗಳಿರುವ ನೈಜವಾದ ಭಾವನಾತ್ಮಕ ಆಟವೊಂದನ್ನು ನೀವು ಗೆಲ್ಲುವಾಗ, ನೀವು ಗುರಿಮುಟ್ಟುತ್ತೀರಿ ಮತ್ತು ನೀವು ನಿಮ್ಮ ತಂಡದವರಿಗೆ ಹೆಚ್ಚು ನಿಕಟವಾದಂತೆ ನಿಮಗನಿಸುತ್ತದೆ. ಹೋರಾಟಗಳು ಅದನ್ನು ನೈಜವಾದ ಭಾವನಾತ್ಮಕ ಆಟವನ್ನಾಗಿ ಮಾಡಿದವು ಎಂದು ನಾನು ನೆನಸಿದೆ.” ಇಂದಿನ ಅನೇಕ ಕ್ರೀಡೆಗಳಲ್ಲಿ, ಹಿಂಸಾಕೃತ್ಯವು ಅಪೇಕ್ಷಿತ ಫಲಿತಾಂಶವನ್ನು ಸಾಧಿಸುವ ಒಂದು ವಿಧಾನವಾಗಿ ಪರಿಣಮಿಸಿದೆ ಮಾತ್ರವಲ್ಲ, ಹಿಂಸಾಕೃತ್ಯವು ಅಪೇಕ್ಷಿತ ಫಲಿತಾಂಶವೇ ಆಗಿದೆ ಎಂಬಂತೆ ತೋರುತ್ತದೆ.

ಶಾಲೆಯಲ್ಲಿ ಹಿಂಸಾಕೃತ್ಯ

ಎಲ್ಲಿ ಯುವ ಜನರು ಇತರ ಎಲ್ಲಾ ಚಿಂತೆಗಳನ್ನು ಹಿಂದೆಬಿಟ್ಟು, ತಮ್ಮ ಮನಸ್ಸುಗಳನ್ನೂ ದೇಹಗಳನ್ನೂ ವಿಕಸಿಸಿಕೊಳ್ಳುವುದರ ಕುರಿತು ಏಕಾಗ್ರಚಿತ್ತರಾಗಿರಸಾಧ್ಯವಿದೆಯೊ, ಅಂತಹ ಒಂದು ರಕ್ಷಣಾ ಸ್ಥಾನವಾಗಿ ಶಾಲೆಯು ಯಾವಾಗಲೂ ವೀಕ್ಷಿಸಲ್ಪಟ್ಟಿದೆ. ಹಾಗಿದ್ದರೂ, ಇಂದು ಶಾಲೆಯು ಇನ್ನುಮುಂದೆ ಅಂತಹ ಸುರಕ್ಷಿತವೂ ಭದ್ರವೂ ಆದ ಒಂದು ಸ್ಥಳವಾಗಿರುವುದಿಲ್ಲ. ಕಳೆದ ವರ್ಷ ಪಟ್ಟಿಯಲ್ಲಿ ಮೊತ್ತಮೊದಲಾಗಿದ್ದ ಹಣಕಾಸಿನ ಸಮಸ್ಯೆಯನ್ನೂ ಮೀರಿಸಿ, ಅಮೆರಿಕದಲ್ಲಿನ ಸಾರ್ವಜನಿಕ ಶಾಲೆಗಳಲ್ಲಿನ ಪ್ರಧಾನ ಸಮಸ್ಯೆಯು, ಹಿಂಸಾಕೃತ್ಯ ಮತ್ತು ಪುಂಡರ ಗುಂಪುಗಳನ್ನು ಒಳಗೊಂಡಿದೆ ಎಂದು 1994ರಲ್ಲಿನ ಒಂದು ಗ್ಯಾಲಪ್‌ ಮತಸಂಖ್ಯೆಯು ಕಂಡುಕೊಂಡಿತು. ಸನ್ನಿವೇಶವು ಎಷ್ಟೊಂದು ಕೆಟ್ಟದ್ದಾಗಿದೆ?

“ನೀವು ಎಂದಾದರೂ ಶಾಲೆಯಲ್ಲಿ ಅಥವಾ ಶಾಲೆಯ ಸುತ್ತಮುತ್ತಲೂ ಸಂಭವಿಸಿದ ಹಿಂಸಾತ್ಮಕ ಕೃತ್ಯದ ಬಲಿಪಶುಗಳಾಗಿದ್ದೀರೊ?” ಎಂಬ ಪ್ರಶ್ನೆಗೆ, ಸಮೀಕ್ಷೆಯೊಂದರಲ್ಲಿದ್ದ ಬಹುಮಟ್ಟಿಗೆ ಪ್ರತಿ 4 ವಿದ್ಯಾರ್ಥಿಗಳಲ್ಲಿ 1 ವಿದ್ಯಾರ್ಥಿಯು ಹೌದು ಎಂದು ಉತ್ತರಿಸಿದನು. ಶಿಕ್ಷಕರಲ್ಲಿ ಹತ್ತನೇ ಒಂದು ಭಾಗಕ್ಕಿಂತ ಹೆಚ್ಚಿನವರು ಸಹ ಹೌದೆಂದು ಉತ್ತರಿಸಿದರು. ಒಂದಲ್ಲ ಒಂದು ಸಮಯದಲ್ಲಿ ತಾವು ಶಾಲೆಗೆ ಒಂದು ಆಯುಧವನ್ನು ಕೊಂಡೊಯ್ದಿದ್ದೇವೆಂದು ವಿದ್ಯಾರ್ಥಿಗಳಲ್ಲಿ 13 ಪ್ರತಿಶತ ಮಂದಿ—ಹುಡುಗರು ಮತ್ತು ಹುಡುಗಿಯರು—ಒಪ್ಪಿಕೊಂಡರು ಎಂದು ಅದೇ ಸಮೀಕ್ಷೆಯು ಕಂಡುಕೊಂಡಿತು. ಇತರರನ್ನು ಪ್ರಭಾವಿಸಲಿಕ್ಕಾಗಿ ಅಥವಾ ಸ್ವತಃ ತಮ್ಮನ್ನು ರಕ್ಷಿಸಿಕೊಳ್ಳಲಿಕ್ಕಾಗಿ ತಾವು ಹಾಗೆ ಮಾಡಿದೆವೆಂದು ಅವರಲ್ಲಿ ಅಧಿಕಾಂಶ ಮಂದಿ ಪ್ರತಿಪಾದಿಸಿದರು. ಆದರೆ 17 ವರ್ಷ ಪ್ರಾಯದ ವಿದ್ಯಾರ್ಥಿಯೊಬ್ಬನ ಬಂದೂಕನ್ನು ತೆಗೆದುಕೊಳ್ಳಲು ಶಿಕ್ಷಕನು ಪ್ರಯತ್ನಿಸಿದಾಗ, ಅವನು ತನ್ನ ಶಿಕ್ಷಕನ ಎದೆಗೆ ಗುಂಡಿಟ್ಟು ಕೊಂದನು.

ಹಿಂಸಾತ್ಮಕವಾದ ಒಂದು ಸಂಸ್ಕೃತಿ

ಹಿಂಸಾಕೃತ್ಯವು ಇಂದು ಎಲ್ಲೆಡೆಯಲ್ಲೂ ಇದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಮನೆಯಲ್ಲಿ, ಉದ್ಯೋಗಸ್ಥಳದಲ್ಲಿ, ಶಾಲೆಯಲ್ಲಿ, ಮತ್ತು ಮನೋರಂಜನೆಯಲ್ಲಿ ನಾವು ಹಿಂಸಾತ್ಮಕವಾದ ಸಂಸ್ಕೃತಿಯನ್ನು ಎದುರಿಸುತ್ತೇವೆ. ಅದಕ್ಕೆ ದಿನಾಲೂ ಒಡ್ಡಲ್ಪಟ್ಟವರಾಗಿದ್ದು, ಅನೇಕರು ಅದನ್ನು ಸಹಜವೆಂಬಂತೆ ಅಂಗೀಕರಿಸಿದ್ದಾರೆ—ಅವರು ಬಲಿಪಶುಗಳಾಗಿಸಲ್ಪಡುವ ತನಕ ಮಾತ್ರ. ಆಗ ಅವರು, ಇದು ಎಂದಾದರೂ ಕೊನೆಗೊಳ್ಳುವುದೊ? ಎಂದು ಕೇಳುತ್ತಾರೆ. ಇದಕ್ಕೆ ಉತ್ತರವನ್ನು ತಿಳಿದುಕೊಳ್ಳಲು ನೀವು ಸಹ ಇಷ್ಟಪಡುತ್ತೀರೊ? ಹಾಗಾದರೆ ದಯವಿಟ್ಟು ಮುಂದಿನ ಲೇಖನವನ್ನು ಓದಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ