ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 3/15 ಪು. 3
  • ನಿಜ ಗೆಳೆಯರ ಅಗತ್ಯ ನಮಗಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಜ ಗೆಳೆಯರ ಅಗತ್ಯ ನಮಗಿದೆ
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮಗೆ ನಿಜ ಗೆಳೆಯರ ಅಗತ್ಯವಿರುವ ಕಾರಣ
  • ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನೀವು ಬಾಳುವ ಗೆಳೆತನಗಳನ್ನು ಅನುಭವಿಸಬಲ್ಲಿರಿ
    ಕಾವಲಿನಬುರುಜು—1996
  • ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಫ್ರೆಂಡ್‌ಶಿಪ್‌ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಕಾವಲಿನಬುರುಜು—1996
w96 3/15 ಪು. 3

ನಿಜ ಗೆಳೆಯರ ಅಗತ್ಯ ನಮಗಿದೆ

ಜೆನಿ ಮತ್ತು ಸೂ ಹುರುಪಿನಿಂದ ಸಂಭಾಷಿಸುತ್ತಿದ್ದಾರೆ. ನಸುನಗೆಗಳು ಹೊಮ್ಮುತ್ತವೆ, ಕಣ್ಣುಗಳು ಹೊಳೆಯುತ್ತವೆ—ಅವರ ವರ್ತನೆಯಲ್ಲಿನ ಪ್ರತಿಯೊಂದು ವಿಷಯವು ಬೇರೆ ವ್ಯಕ್ತಿಗೆ ಏನು ಹೇಳಲಿದೆಯೊ ಅದರಲ್ಲಿ ತೀವ್ರವಾದ ಆಸಕ್ತಿಯನ್ನು ಪ್ರಕಟಪಡಿಸುತ್ತದೆ. ಭಿನ್ನ ಹಿನ್ನೆಲೆಗಳವರಾಗಿದ್ದರೂ, ಅವರಲ್ಲಿ ಅನೇಕ ಸಂಗತಿಗಳು ಸಾಮಾನ್ಯವಾಗಿವೆ ಮತ್ತು ಒಬ್ಬರು ಇನ್ನೊಬ್ಬರಿಗಾಗಿ ತುಂಬ ಗೌರವವನ್ನು ಹೊಂದಿರುತ್ತಾರೆ ಎಂಬುದು ಸ್ಫುಟ.

ಬೇರೊಂದು ಕಡೆಯಲ್ಲಿ, ಎರಿಕ್‌ ಮತ್ತು ಡೆನಿಸ್‌ ಒಂದು ಕಾರ್ಯಯೋಜನೆಯಲ್ಲಿ—ಹಲವಾರು ವರ್ಷಗಳಾವಧಿಯಲ್ಲಿ ಅವರು ಕೆಲಸ ಮಾಡಿರುವ ಅನೇಕ ಕಾರ್ಯಯೋಜನೆಗಳಲ್ಲಿ ಒಂದು—ಜೊತೆಯಾಗಿ ಕೆಲಸಮಾಡುತ್ತಿದ್ದಾರೆ. ಅವರು ಬಿಗುಪಿಲ್ಲದೆ ಇದ್ದಾರೆ, ಮತ್ತು ಸುಲಭವಾಗಿ ನಗುತ್ತಾರೆ. ಸಂಭಾಷಣೆಯು ಗಂಭೀರ ವಿಷಯಗಳ ಕಡೆಗೆ ಬದಲಾದಂತೆ, ಅವರು ಬಿಚ್ಚುಮನದಿಂದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅವರು ಒಬ್ಬರು ಇನ್ನೊಬ್ಬರನ್ನು ಗೌರವಿಸುತ್ತಾರೆ. ಜೆನಿ ಮತ್ತು ಸೂರಂತೆ, ಎರಿಕ್‌ ಮತ್ತು ಡೆನಿಸ್‌ ನಿಜ ಗೆಳೆಯರಾಗಿದ್ದಾರೆ.

ನಿಮ್ಮ ಸ್ವಂತ ಗೆಳೆಯರ ಕುರಿತಾಗಿ ನೀವು ಯೋಚಿಸುವಂತೆ ಮಾಡುತ್ತಾ, ಈ ವರ್ಣನೆಗಳು ನಿಮ್ಮನ್ನು ಹೃದಯೋಲ್ಲಾಸಗೊಳಿಸಬಹುದು. ಮತ್ತೊಂದು ಕಡೆಯಲ್ಲಿ, ಅಂತಹ ಗೆಳೆತನಗಳಿಗಾಗಿ ನೀವು ಹಾತೊರೆಯುವಂತೆ ಅವು ಮಾಡಬಹುದು. ನೀವೂ ಅವುಗಳನ್ನು ಹೊಂದಬಲ್ಲಿರಿ!

ನಮಗೆ ನಿಜ ಗೆಳೆಯರ ಅಗತ್ಯವಿರುವ ಕಾರಣ

ಸ್ವಸ್ಥ ಗೆಳೆತನಗಳು ನಮ್ಮ ಮಾನಸಿಕ ಮತ್ತು ಶಾರೀರಿಕ ಹಿತಕ್ಕಾಗಿ ಅತ್ಯಾವಶ್ಯಕವಾಗಿವೆ. ಆದಾಗಲೂ, ನಮಗೆ ಒಂಟಿತನದ ಅನಿಸಿಕೆಯಾಗುವಾಗ, ನಮ್ಮೊಂದಿಗೆ ಏನೋ ದೋಷವಿದೆಯೆಂಬುದನ್ನು ಅದು ಅರ್ಥೈಸುವುದಿಲ್ಲ. ಒಂಟಿತನವು—ಒಂದು ಹಸಿವು—ನಮಗೆ ಸಾಂಗತ್ಯದ ಅಗತ್ಯವಿದೆಯೆಂಬ ಒಂದು ಸ್ವಾಭಾವಿಕ ಸೂಚಕವೆಂದು ಕೆಲವು ಸಂಶೋಧಕರು ಹೇಳುತ್ತಾರೆ. ಹೇಗಾದರೂ, ಆಹಾರವು ಹಸಿವನ್ನು ಕಡಿಮೆಗೊಳಿಸುವಂತೆ ಅಥವಾ ತೆಗೆದುಹಾಕುವಂತೆಯೇ, ಯೋಗ್ಯ ರೀತಿಯ ಗೆಳೆತನಗಳು ಒಂಟಿತನವನ್ನು ಕುಂದಿಸಬಹುದು ಅಥವಾ ಅದು ಇಲ್ಲದೇ ಹೋಗುವಂತೆಯೂ ಮಾಡಬಲ್ಲವು. ಇನ್ನೂ ಹೆಚ್ಚಾಗಿ, ನಮ್ಮನ್ನು ಅಮೂಲ್ಯರೆಂದೆಣಿಸುವ ಒಳ್ಳೇ ಗೆಳೆಯರನ್ನು ಹೊಂದುವುದು ಅಪ್ರಾಪ್ಯವಾದ ಒಂದು ಭೋಗದ ಸಂಗತಿಯಲ್ಲ.

ಸಾಂಗತ್ಯಕ್ಕಾಗಿರುವ ಒಂದು ಅಗತ್ಯದೊಂದಿಗೆ ಮನುಷ್ಯರನ್ನು ಸೃಷ್ಟಿಸಲಾಯಿತು. (ಆದಿಕಾಂಡ 2:18) ಒಬ್ಬ ನಿಜ ಗೆಳೆಯ, ಅಥವಾ ಸಂಗಾತಿ, “ಆಪತ್ತಿನಲ್ಲಿ ಸಾರ್ಥಕ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 17:17) ಆದುದರಿಂದ, ಸಹಾಯದ ಅಗತ್ಯವಿರುವಾಗ, ನಿಜ ಗೆಳೆಯರು ಒಬ್ಬರು ಇನ್ನೊಬ್ಬರಿಗೆ ಅದನ್ನು ಕೇಳಶಕ್ತರಾಗಿರಬೇಕು. ಆದರೆ ಗೆಳೆತನವೆಂದರೆ, ಕೇವಲ ಸಹಾಯವನ್ನು ಕೋರಲು ಯಾರಾದರೂ ಇರುವುದು ಅಥವಾ ಕೆಲಸ ಯಾ ಆಟದಲ್ಲಿ ಒಂದು ಸಂಗಾತಿಯಾಗಿರುವುದಕ್ಕಿಂತ ಹೆಚ್ಚನ್ನು ಅರ್ಥೈಸುತ್ತದೆ. ಒಳ್ಳೇ ಗೆಳೆಯರು ಒಬ್ಬರು ಇನ್ನೊಬ್ಬರಲ್ಲಿರುವ ಅತ್ಯುತ್ತಮ ಗುಣಗಳನ್ನು ಪರಿಣಾಮಕಾರಿಯಾಗಿ ಬೆಳೆಸುತ್ತಾರೆ. ಜ್ಞಾನೋಕ್ತಿ 27:17 ಹೇಳುವುದು: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” ಅದೇ ಲೋಹದಿಂದ ಮಾಡಲ್ಪಟ್ಟ ಒಂದು ಬ್ಲೇಡನ್ನು ಹರಿತಗೊಳಿಸಲು ಕಬ್ಬಿಣದ ಒಂದು ತುಂಡನ್ನು ಉಪಯೋಗಿಸಸಾಧ್ಯವಿರುವಂತೆ, ಒಬ್ಬ ಗೆಳೆಯನು ಇನ್ನೊಬ್ಬನ ಬೌದ್ಧಿಕ ಮತ್ತು ಆತ್ಮಿಕ ಸ್ಥಿತಿಯನ್ನು ಹರಿತಗೊಳಿಸುವುದರಲ್ಲಿ ಯಶಸ್ವಿಯಾಗಬಹುದು. ವಿಫಲತೆಗಳು ನಮ್ಮನ್ನು ಖಿನ್ನರಾಗಿಸುವಲ್ಲಿ, ಒಬ್ಬ ಗೆಳೆಯನ ಅನುಭೂತಿಯ ನೋಟ ಮತ್ತು ಶಾಸ್ತ್ರೀಯ ಉತ್ತೇಜನವು ತುಂಬ ಬಲಗೊಳಿಸುವಂತಹದ್ದಾಗಿರಸಾಧ್ಯವಿದೆ.

ಬೈಬಲಿನಲ್ಲಿ ಗೆಳೆತನವು, ಪ್ರೀತಿ, ಸಲಿಗೆ, ಗೋಪ್ಯತೆ, ಮತ್ತು ಸಾಂಗತ್ಯದೊಂದಿಗೆ ಸಂಬಂಧಿಸಲ್ಪಟ್ಟಿದೆ. ಗೆಳೆತನಗಳು, ನೆರೆಯವರನ್ನು, ಕೆಲಸದ ಸಂಗಾತಿಗಳೇ ಮುಂತಾದವರನ್ನು ಒಳಗೂಡಬಹುದು. ಕೆಲವರು ನಿರ್ದಿಷ್ಟ ಸಂಬಂಧಿಕರನ್ನು ಸಹ ತಮ್ಮ ಅತಿ ಆಪ್ತ ಗೆಳೆಯರನ್ನಾಗಿ ಪರಿಗಣಿಸುತ್ತಾರೆ. ಆದಾಗಲೂ ಇಂದು ಅನೇಕರಿಗೆ, ನಿಜ ಗೆಳೆಯರನ್ನು ಕಂಡುಕೊಳ್ಳುವುದು ಮತ್ತು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಇದು ಯಾಕೆ ಹೀಗೆ? ನೀವು ನಿಜವಾದ ಮತ್ತು ಬಾಳುವ ಗೆಳೆತನಗಳನ್ನು ಅನುಭವಿಸಬಲ್ಲಿರೊ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ