ಪೂರ್ವಕಲ್ಪಿತ ಅಭಿಪ್ರಾಯದ ಒಬ್ಬ ಬಲಿಯು ನೀವಾಗಿದ್ದೀರೊ?
ಕುಲ ಸಂಬಂಧವಾದ ಹಿಂಸಾಕೃತ್ಯ, ಜಾತಿವಾದ, ಭೇದಭಾವ, ಬೇರ್ಪಡಿಸುವಿಕೆ, ಮತ್ತು ಕುಲಸಂಹಾರದಲ್ಲಿ ಯಾವ ವಿಷಯವು ಸಾಮಾನ್ಯವಾಗಿದೆ? ಅವುಗಳೆಲ್ಲವು ಒಂದು ವ್ಯಾಪಕವಾದ ಮಾನವ ಪ್ರವೃತ್ತಿ—ಪೂರ್ವಕಲ್ಪಿತ ಅಭಿಪ್ರಾಯದ ಪರಿಣಾಮಗಳಾಗಿವೆ!
ಪೂರ್ವಕಲ್ಪಿತ ಅಭಿಪ್ರಾಯ ಎಂದರೇನು? ಒಂದು ವಿಶ್ವಕೋಶವು ಅದನ್ನು, “ನ್ಯಾಯವಾಗಿ ತೀರ್ಮಾನಿಸಲು ಬೇಕಾದ ಸಮಯ ಅಥವಾ ಆಸಕ್ತಿಯನ್ನು ತೆಗೆದುಕೊಳ್ಳದೆ ಕಲ್ಪಿಸಿಕೊಂಡ ಒಂದು ಅಭಿಪ್ರಾಯ” ಎಂಬುದಾಗಿ ವಿಶದೀಕರಿಸುತ್ತದೆ. ಅಪರಿಪೂರ್ಣ ಮಾನವರೋಪಾದಿ ನಾವು ಒಂದಿಷ್ಟು ಮಟ್ಟಿಗೆ ಪೂರ್ವಕಲ್ಪಿತ ಅಭಿಪ್ರಾಯಾತ್ಮಕರಾಗಿರುವ ಒಲವುಳ್ಳವರಾಗಿದ್ದೇವೆ. ಬಹುಶಃ ಎಲ್ಲ ನಿಜತ್ವಗಳಿಲ್ಲದೆ ಒಂದು ತೀರ್ಪನ್ನು ನೀವು ಮಾಡಿದ ಸಂದರ್ಭಗಳ ಕುರಿತು ನೀವು ಯೋಚಿಸಸಾಧ್ಯವಿದೆ. ಬೈಬಲು ಇಂತಹ ಪೂರ್ವಕಲ್ಪಿತ ಅಭಿಪ್ರಾಯಾತ್ಮಕ ಪ್ರವೃತ್ತಿಗಳನ್ನು, ಯೆಹೋವ ದೇವರು ತೀರ್ಪು ಮಾಡುವ ವಿಧದೊಂದಿಗೆ ವ್ಯತ್ಯಾಸ ತೋರಿಸುತ್ತದೆ. ಅದು ಹೇಳುವುದು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”—1 ಸಮುವೇಲ 16:7.
ಪೂರ್ವಕಲ್ಪಿತ ಅಭಿಪ್ರಾಯವು ನೋವನ್ನುಂಟುಮಾಡಬಲ್ಲದು
ಪ್ರತಿಯೊಬ್ಬರೂ ಯಾರಾದರೊಬ್ಬರಿಂದ ಯಾವುದೊ ಒಂದು ಸಮಯದಲ್ಲಿ ತಪ್ಪಾಗಿ ತೀರ್ಮಾನಿಸಲ್ಪಟ್ಟಿದ್ದಾರೆಂಬುದು ನಿಸ್ಸಂದೇಹ. (ಹೋಲಿಸಿ ಪ್ರಸಂಗಿ 7:21, 22.) ಸಾಮಾನ್ಯ ಅರ್ಥದಲ್ಲಿ, ನಾವೆಲ್ಲರೂ ಪೂರ್ವಕಲ್ಪಿತ ಅಭಿಪ್ರಾಯದ ಬಲಿಗಳಾಗಿದ್ದೇವೆ. ಹಾಗಿದ್ದರೂ, ಕ್ಷಿಪ್ರವಾಗಿ ತೊಲಗಿಸಲ್ಪಟ್ಟಾಗ, ಪೂರ್ವಕಲ್ಪಿತ ಆಲೋಚನೆಗಳು ಕಡಿಮೆ ಅಥವಾ ಯಾವ ನೋವನ್ನೂ ಉಂಟುಮಾಡದಿರುವುದು ಸಂಭವನೀಯ. ಅಂತಹ ಆಲೋಚನೆಗಳ ಪೋಷಣೆಯೇ ಹಾನಿಯಲ್ಲಿ ಫಲಿಸಸಾಧ್ಯವಿರುವ ವಿಷಯವಾಗಿದೆ. ಅದು ಒಂದು ಅಸತ್ಯವನ್ನು ನಂಬುವಂತೆ ನಮ್ಮನ್ನು ವಂಚಿಸಬಲ್ಲದು. ಉದಾಹರಣೆಗೆ, ಪೂರ್ವಕಲ್ಪಿತ ಅಭಿಪ್ರಾಯದ ಪ್ರಭಾವದ ಕೆಳಗೆ, ಒಬ್ಬ ವ್ಯಕ್ತಿಯು ಕೇವಲ ಒಂದು ನಿರ್ದಿಷ್ಟವಾದ ಧಾರ್ಮಿಕ, ಕುಲ ಸಂಬಂಧಿತ, ಅಥವಾ ರಾಷ್ಟ್ರೀಯ ಗುಂಪಿಗೆ ಸೇರಿರುವುದರಿಂದಾಗಿ, ಲೋಭಿಯೂ, ಸೋಮಾರಿಯೂ, ಮೂರ್ಖನೂ ಅಥವಾ ಅಹಂಕಾರಿಯೂ ಆಗಿರಬಲ್ಲನೆಂಬುದನ್ನು ಕೆಲವು ಜನರು ನಿಜವಾಗಿಯೂ ನಂಬುತ್ತಾರೆ.
ಅನೇಕ ವಿದ್ಯಮಾನಗಳಲ್ಲಿ ಇಂತಹ ತಪ್ಪಾದ ತೀರ್ಮಾನವು, ಇತರರ ನ್ಯಾಯವಲ್ಲದ, ನಿಂದಾತ್ಮಕ, ಅಥವಾ ಹಿಂಸಾತ್ಮಕವೂ ಆದ ಉಪಚಾರಕ್ಕೆ ನಡೆಸುತ್ತದೆ. ಲಕ್ಷಾಂತರ ಜನರು ಕಗ್ಗೊಲೆಗಳಲ್ಲಿ, ಕುಲಸಂಹಾರಗಳಲ್ಲಿ, ಕುಲ ಸಂಬಂಧವಾದ ಕೊಲ್ಲುವಿಕೆಗಳಲ್ಲಿ ಮತ್ತು ವಿಪರೀತ ಪೂರ್ವಕಲ್ಪಿತ ಅಭಿಪ್ರಾಯದ ಇತರ ಬಗೆಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ.
ಲೋಕವ್ಯಾಪಕವಾಗಿ, ಸ್ವಾತಂತ್ರ್ಯ, ಭದ್ರತೆ ಮತ್ತು ಸಮಾನತೆಯ ಅಲಂಘ್ಯ ಹಕ್ಕನ್ನು ನ್ಯಾಯಬದ್ಧವಾಗಿ ಖಚಿತಪಡಿಸುವ ಮೂಲಕ, ಸರಕಾರಗಳು ಪೂರ್ವಕಲ್ಪಿತ ಅಭಿಪ್ರಾಯದ ವಿರುದ್ಧ ಹೋರಾಡಿವೆ. ನೀವು ನಿಮ್ಮ ದೇಶದ ಸಂವಿಧಾನ ಅಥವಾ ಪ್ರಧಾನ ನಿಯಮಗಳ ಸಂಗ್ರಹವನ್ನು ಓದುವುದಾದರೆ, ಎಲ್ಲ ಪೌರರ—ಅವರ ಜಾತಿ, ಲಿಂಗ, ಅಥವಾ ಧರ್ಮವು ಏನೇ ಆಗಿರಲಿ—ಹಕ್ಕುಗಳನ್ನು ಸಂರಕ್ಷಿಸಲಿಕ್ಕಾಗಿ ರಚಿಸಲ್ಪಟ್ಟಿರುವ ಒಂದು ಷರತ್ತನ್ನು ಅಥವಾ ಒಂದು ತಿದ್ದುಪಡಿಯನ್ನು ನೀವು ನಿಸ್ಸಂದೇಹವಾಗಿ ಕಂಡುಕೊಳ್ಳುವಿರಿ. ಆದರೂ, ಪೂರ್ವಕಲ್ಪಿತ ಅಭಿಪ್ರಾಯ ಮತ್ತು ಭೇದಭಾವವು ಲೋಕವ್ಯಾಪಕ ಪ್ರಮಾಣದಲ್ಲಿ ಹಬ್ಬಿವೆ.
ಪೂರ್ವಕಲ್ಪಿತ ಅಭಿಪ್ರಾಯದ ಒಬ್ಬ ಬಲಿಯು ನೀವಾಗಿದ್ದೀರೊ? ಕೇವಲ ನಿಮ್ಮ ಜಾತಿ, ವಯಸ್ಸು, ಲಿಂಗ, ರಾಷ್ಟ್ರೀಯತೆ, ಅಥವಾ ಧಾರ್ಮಿಕ ನಂಬಿಕೆಗಳ ಕಾರಣ, ನೀವು ಲೋಭಿಗಳು, ಸೋಮಾರಿಗಳು, ಮೂರ್ಖರು ಅಥವಾ ಅಹಂಕಾರಿಗಳೋಪಾದಿ ಗುರುತಿಸಲ್ಪಟ್ಟಿದ್ದೀರೊ? ಪೂರ್ವಕಲ್ಪಿತ ಅಭಿಪ್ರಾಯದ ಕಾರಣ, ನಿಮಗೆ ಯೋಗ್ಯವಾದ ಶಿಕ್ಷಣ, ಉದ್ಯೋಗ, ಮನೆಯೊದಗಿಸುವಿಕೆ, ಹಾಗೂ ಸಾಮಾಜಿಕ ಸೇವೆಗಳ ಸದವಕಾಶಗಳು ನಿರಾಕರಿಸಲಾಗುತ್ತಿವೆಯೊ? ಹಾಗಿರುವಲ್ಲಿ, ನೀವು ಹೇಗೆ ನಿಭಾಯಿಸಬಲ್ಲಿರಿ?
[ಪುಟ 3 ರಲ್ಲಿರುವ ಚಿತ್ರ]
ಪೂರ್ವಕಲ್ಪಿತ ಅಭಿಪ್ರಾಯವನ್ನು ಪೋಷಿಸುವುದು, ಜಾತೀಯ ದ್ವೇಷವನ್ನು ಕೆರಳಿಸುತ್ತದೆ
[ಕೃಪೆ]
Nina Berman/Sipa Press