ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 6/15 ಪು. 3
  • ಬೈಬಲ್‌—ಒಂದು ಅಸದೃಶ ಗ್ರಂಥ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌—ಒಂದು ಅಸದೃಶ ಗ್ರಂಥ
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ತನ್ನ ಉದ್ದೇಶಗಳ ಕುರಿತು ದೇವರು ನಮಗೆ ಅರುಹುತ್ತಾನೆ
    ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
  • ಬೈಬಲನ್ನು ನಿಜವಾಗಿಯೂ ದೇವರೇ ಬರೆಸಿದ್ದಾ?
    ಎಚ್ಚರ!—2017
  • ‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಶ್ರೇಷ್ಠ ವಿವೇಕದ ಅದ್ವಿತೀಯ ಮೂಲ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
ಇನ್ನಷ್ಟು
ಕಾವಲಿನಬುರುಜು—1997
w97 6/15 ಪು. 3

ಬೈಬಲ್‌—ಒಂದು ಅಸದೃಶ ಗ್ರಂಥ

ಇದು ಲೋಕದ ಅತ್ಯಂತ ಜನಪ್ರಿಯ ಗ್ರಂಥವೆಂದು ಕರೆಯಲ್ಪಟ್ಟಿದೆ, ಮತ್ತು ಸೂಕ್ತವಾಗಿಯೇ ಇದು ಅಷ್ಟು ಜನಪ್ರಿಯವಾಗಿದೆ. ಇನ್ನಾವುದೇ ಗ್ರಂಥಕ್ಕಿಂತಲೂ ಹೆಚ್ಚಾಗಿ ಬೈಬಲನ್ನು ಓದಲಾಗುತ್ತದೆ ಹಾಗೂ ಅದಕ್ಕೆ ಮಾನ್ಯತೆಯು ಕೊಡಲ್ಪಡುತ್ತದೆ. ಇಂದಿನ ವರೆಗೆ, ಅದರ ಹಂಚುವಿಕೆಯು (ಇಡೀ ಅಥವಾ ಭಾಗಶಃ), 2,000ಕ್ಕಿಂತಲೂ ಅಧಿಕ ಭಾಷೆಗಳಲ್ಲಿ, 400 ಕೋಟಿ ಪ್ರತಿಗಳು ಎಂದು ಅಂದಾಜುಮಾಡಲ್ಪಟ್ಟಿದೆ.

ಹಾಗಿದ್ದರೂ, ಬೈಬಲಿನ ವಿತರಣೆಗಿಂತಲೂ ಅತ್ಯಧಿಕವಾಗಿ ಆಸಕ್ತಿಕರವಾದ ವಿಷಯವು ಯಾವುದೆಂದರೆ, ಅದು ದೈವಿಕ ಕರ್ತೃತ್ವವನ್ನು ಹೊಂದಿರುತ್ತದೆಯೆಂಬ ಅದರ ಪ್ರತಿಪಾದನೆಯೇ. “ಪ್ರತಿಯೊಂದು ಶಾಸ್ತ್ರವೂ ದೈವಪ್ರೇರಿತವಾಗಿದೆ” ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:16, NW) ಇದರ ಅರ್ಥವೇನು? “ದೈವಪ್ರೇರಿತ” (ಗ್ರೀಕ್‌, ಥಿಯೋನ್ಯೂಸ್ಟಾಸ್‌) ಎಂಬ ವಾಕ್ಸರಣಿಯ ಅಕ್ಷರಾರ್ಥವು, “ದೇವರು ಜೀವಶ್ವಾಸ ನೀಡಿದ್ದು” ಎಂದಾಗಿದೆ. ಇದಕ್ಕೆ ಸಂಬಂಧಿಸಿದ ನ್ಯೂಮಾ ಎಂಬ ಗ್ರೀಕ್‌ ಶಬ್ದದ ಅರ್ಥ “ಆತ್ಮ” ಎಂದಾಗಿದೆ. ಆದುದರಿಂದ, ಅಂತಿಮ ಫಲವು ಮನುಷ್ಯನ ವಾಕ್ಯವೆಂಬುದಾಗಿ ಕರೆಯಲ್ಪಡದೆ, ಸತ್ಯವಾಗಿಯೂ ದೇವರ ವಾಕ್ಯವೆಂಬುದಾಗಿ ಕರೆಯಲ್ಪಡಸಾಧ್ಯವಾಗುವಂತೆ, ಸಾಂಕೇತಿಕವಾಗಿ ಹೇಳುವುದಾದರೆ, ದೇವರ ಪವಿತ್ರಾತ್ಮವು ಮಾನವ ಬರಹಗಾರರ ಮೇಲೆ ಜೀವಶ್ವಾಸವನ್ನು ಊದಿ, ಅವರನ್ನು ಪ್ರಚೋದಿಸಿತೆಂಬುದೇ ಪ್ರತಿಪಾದನೆಯಾಗಿದೆ. ವಾಸ್ತವವಾಗಿ, ಬೈಬಲನ್ನು ಅಭ್ಯಾಸಿಸಿರುವ ಅನೇಕರು, ಅದರ ಆದ್ಯಂತವಾದ ಸಾಮರಸ್ಯ, ಅದರ ವೈಜ್ಞಾನಿಕ ನಿಷ್ಕೃಷ್ಟತೆ, ಅದರ ಬರಹಗಾರರ ಪ್ರಾಮಾಣಿಕತೆ ಹಾಗೂ ಯಥಾರ್ಥತೆ, ಮತ್ತು ಅತ್ಯಂತ ಪ್ರಾಮುಖ್ಯವಾಗಿ ಅದರ ನೆರವೇರಿದ ಪ್ರವಾದನೆಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಇದೆಲ್ಲವೂ, ಆಲೋಚನಾಪರರಾದ ಕೋಟಿಗಟ್ಟಲೆ ವಾಚಕರಿಗೆ, ಈ ಪುಸ್ತಕವು ಮನುಷ್ಯನಿಗಿಂತಲೂ ಅತ್ಯುತ್ಕೃಷ್ಟವಾದ ಒಂದು ಮೂಲದಿಂದ ಬಂದದ್ದಾಗಿದೆ ಎಂಬುದನ್ನು ಮನಗಾಣಿಸಿದೆ.a

ಆದರೆ ಬೈಬಲಿನ ಬರಹವನ್ನು ದೇವರು ಎಷ್ಟು ಕಟ್ಟುನಿಟ್ಟಾಗಿ ಮಾರ್ಗದರ್ಶಿಸಿದನು? ಆತನು ಬೈಬಲನ್ನು ಪದಶಃ ಹೇಳಿ ಬರೆಸಿದನೆಂದು ಕೆಲವರು ಹೇಳುತ್ತಾರೆ. ಆತನು ಬೈಬಲಿನಲ್ಲಿರುವ ಶಬ್ದಗಳನ್ನಲ್ಲ, ಬದಲಾಗಿ ಅದರಲ್ಲಿ ಕಂಡುಬರುವ ವಿಚಾರಗಳನ್ನು ಮಾತ್ರವೇ ಪ್ರೇರೇಪಿಸಿದನು ಎಂದು ಇನ್ನಿತರರು ಹೇಳುತ್ತಾರೆ. ಆದರೂ, ವಾಸ್ತವವಾಗಿ, ದೈವಪ್ರೇರಣೆಯನ್ನು ಒಂದೇ ಒಂದು ಕಾರ್ಯವಿಧಾನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ದೇವರು “ಪುರಾತನಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಬಾಯಿಂದ . . . ವಿಧವಿಧವಾಗಿ” ಮಾತಾಡಿದನು. (ಓರೆಅಕ್ಷರಗಳು ನಮ್ಮವು.) (ಇಬ್ರಿಯ 1:1; ಹೋಲಿಸಿರಿ 1 ಕೊರಿಂಥ 12:6.) ಮುಂದಿನ ಲೇಖನದಲ್ಲಿ, ಬೈಬಲನ್ನು ಬರೆದ ಸುಮಾರು 40 ಮಂದಿ ಮಾನವ ಬರಹಗಾರರೊಂದಿಗೆ ದೇವರು ಮಾತಾಡಿದ ವಿಧಗಳನ್ನು ನಾವು ಪರೀಕ್ಷಿಸುವೆವು.

[ಪಾದಟಿಪ್ಪಣಿ]

a ಇನ್ನೂ ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತವಾದ, ಬೈಬಲ್‌—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದ, 53-4 ಹಾಗೂ 98-161ನೆಯ ಪುಟಗಳನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ