ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 7/15 ಪು. 24
  • ಕಡಿದಾದ ಬೆಟ್ಟಬಂಡೆಗಳ ದೊಂಬರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಡಿದಾದ ಬೆಟ್ಟಬಂಡೆಗಳ ದೊಂಬರು
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಕಾಡುಕುರಿ [“ಕಾಡುಮೇಕೆ,” NW]ಗಳಿಗೆ ಉನ್ನತವಾದ ಪರ್ವತಗಳು”
  • ‘ಕಾಡುಮೇಕೆಗಳಿಗೆ ಯಾವಾಗ ಮರಿಗಳಾಗುತ್ತವೆಂದು ನಿಮಗೆ ಗೊತ್ತೊ?’
  • “ಮನೋಹರವಾದ ಜಿಂಕೆ . . . ಅಂದವಾದ ದುಪ್ಪಿ [“ಕಾಡುಮೇಕೆ,” NW]”
  • ‘ಬೆಟ್ಟಗಳಿಗಿಂತಲೂ ತೇಜೋಮಯನು ನೀನು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಕಾವಲಿನಬುರುಜು—1997
w97 7/15 ಪು. 24

ಕಡಿದಾದ ಬೆಟ್ಟಬಂಡೆಗಳ ದೊಂಬರು

ಲವಣ ಸಮುದ್ರದ ಪಶ್ಚಿಮ ತೀರದಲ್ಲಿ, ಏಂಗೆದೀ ಎಂದು ಕರೆಯಲ್ಪಟ್ಟ ಪುರಾತನ ನಗರವಿದ್ದು, ಅದರ ಸುತ್ತಲೂ ಅರಣ್ಯವಿತ್ತು. ಈ ಪ್ರದೇಶದ ಬಂಡೆತುಂಬಿದ ಕಣಿವೆಗಳೂ ಪ್ರಪಾತಗಳೂ ಇಲ್ಲಿ ಕಾಣುವುದನ್ನು ಹೋಲುವ, ವಾಗ್ದತ್ತ ದೇಶದ ಕಾಡುಮೇಕೆಗೆ ಅನುಕೂಲವಾದ ಬೀಡನ್ನೊದಗಿಸುತ್ತವೆ.

ಈ ಸುರಕ್ಷಿತ ಪಾದಗಳಿರುವ ಪ್ರಾಣಿಯು ಆಶ್ಚರ್ಯಕರವಾದ ಮೃಗಸೃಷ್ಟಿಗಳಲ್ಲಿ ಒಂದು. ನಾವು ಬೈಬಲನ್ನು ತೆರೆದು ಈ ಆಕರ್ಷಕವಾದ ಪ್ರಾಣಿಯನ್ನು ನಿಕಟವಾಗಿ ನೋಡೋಣ.

“ಕಾಡುಕುರಿ [“ಕಾಡುಮೇಕೆ,” NW]ಗಳಿಗೆ ಉನ್ನತವಾದ ಪರ್ವತಗಳು”

ಕೀರ್ತನೆಗಾರನು ಹಾಗೆಂದು ಹಾಡಿದನು. (ಕೀರ್ತನೆ 104:18) ಕಾಡುಮೇಕೆಗಳು ಎತ್ತರ ಪ್ರದೇಶಗಳಲ್ಲಿ ಜೀವಿಸಲು ಸುಸಜ್ಜಿತವಾಗಿರುವಂತೆ ರೂಪಿಸಲ್ಪಟ್ಟಿವೆ! ಅವು ತೀರ ಚಳಕವುಳ್ಳವುಗಳಾಗಿದ್ದು, ಕಗ್ಗಾಡುಗಳಲ್ಲಿ ಭಾರೀ ಆತ್ಮವಿಶ್ವಾಸ ಮತ್ತು ವೇಗದಿಂದ ಚಲಿಸುತ್ತವೆ. ಇದು ಆಂಶಿಕವಾಗಿ ಅವುಗಳ ಗೊರಸುಗಳ ರಚನೆಯ ಕಾರಣದಿಂದಲೇ. ಗೊರಸಿನಲ್ಲಿರುವ ಬಿರುಕು ಆ ಮೇಕೆಯ ಭಾರದಿಂದಾಗಿ ಅಗಲವಾಗಿ, ಅದು ಕಿರಿದಾದ ಬಂಡೆಯ ಚಾಚುಗಳ ಮೇಲೆ ನಿಂತಿರುವಾಗ ಅಥವಾ ಚಲಿಸುವಾಗ ಆ ಪ್ರಾಣಿಗೆ ಬಲವಾದ ಹಿಡಿತವನ್ನು ಕೊಡುತ್ತದೆ.

ಕಾಡುಮೇಕೆಗಳಿಗೆ ಅಸಾಧಾರಣವಾದ ದೈಹಿಕ ಸಮತೆಯೂ ಇದೆ. ಅವು ಬಹು ದೂರ ಎಗರಬಲ್ಲವು ಮತ್ತು ನಾಲ್ಕು ಪಾದಗಳನ್ನಿಡಲು ಕೂಡ ದೊಡ್ಡದಾಗಿಲ್ಲವೆಂದು ಕಾಣುವ ಬಂಡೆಯ ಚಾಚಿನ ಮೇಲೆ ಇಳಿಯಬಲ್ಲವು. ಜೀವಶಾಸ್ತ್ರಜ್ಞ ಡಗ್ಲಸ್‌ ಚ್ಯಾಡ್ವಿಕ್‌ ಒಮ್ಮೆ, ಇನ್ನೊಂದು ಜಾತಿಯ ಕಾಡುಮೇಕೆ, ತನಗೆ ತಿರುಗಲು ತೀರ ಚಿಕ್ಕದಾಗಿರುವ ಬಂಡೆಯ ಚಾಚಿನ ಮೇಲೆ ಇಳಿದು, ಸಿಕ್ಕಿಬೀಳದಿರುವಂತೆ ತನ್ನ ಸಮತೆಯನ್ನು ಉಪಯೋಗಿಸುವುದನ್ನು ಕಂಡರು. ಅವರು ಹೇಳುವುದು: “ಸುಮಾರು 120 ಮೀಟರುಗಳಷ್ಟು ಕೆಳಗಿದ್ದ ಮುಂದಿನ ಚಾಚಿನ ಮೇಲೆ ಕಣ್ಣೋಡಿಸಿದ ಮೇಲೆ, ಆ ಮೇಕೆ ತನ್ನ ಮುಂಪಾದಗಳನ್ನೂರಿ, ಅದು ಚಕ್ರಲಾಗ ಹೊಡೆಯುತ್ತದೊ ಎಂಬಂತೆ ಬಂಡೆಯ ಮುಖದ ಮೇಲೆ ತನ್ನ ಹಿಂಭಾಗವನ್ನು ಅದರ ತಲೆಯ ಮೇಲಿರುವಂತೆ ನಡೆಸಿತು. ನಾನು ಉಸಿರು ಹಿಡಿದುಕೊಂಡಿದ್ದಾಗ ಆ ಮೇಕೆ, ಅದರ ಹಿಂಪಾದಗಳು ಕೆಳಗೆ ಬಂದು ಅದು ಬಂದಿದ್ದ ದಿಕ್ಕಿಗೆ ಮುಖ ತಿರುಗಿಸುವ ತನಕ ಹಾಗೆ ಮಾಡುತ್ತ ಹೋಯಿತು.” (ನ್ಯಾಷನಲ್‌ ಜೀಅಗ್ರ್ಯಾಫಿಕ್‌) ಕಾಡುಮೇಕೆಗಳನ್ನು “ಕಡಿದಾದ ಬೆಟ್ಟಬಂಡೆಗಳ ದೊಂಬರು” ಎಂದು ಕರೆಯಲಾಗಿರುವುದು ಆಶ್ಚರ್ಯವಲ್ಲ!

‘ಕಾಡುಮೇಕೆಗಳಿಗೆ ಯಾವಾಗ ಮರಿಗಳಾಗುತ್ತವೆಂದು ನಿಮಗೆ ಗೊತ್ತೊ?’

ಕಾಡುಮೇಕೆಗಳು ತೀರ ಅಂಜುಬುರುಕ ಪ್ರಾಣಿಗಳು. ಅವು ಮನುಷ್ಯನಿಂದ ಪ್ರತ್ಯೇಕವಾಗಿ ಜೀವಿಸಲು ಇಷ್ಟಪಡುತ್ತವೆ. ಹೌದು, ಅವುಗಳ ವನ್ಯ ಸ್ಥಿತಿಯಲ್ಲಿ, ಜನರಿಗೆ ಅವುಗಳನ್ನು ನೋಡಲು ಸಾಕಷ್ಟು ಹತ್ತಿರ ಹೋಗುವುದು ಸಹ ಕಷ್ಟವಾಗುತ್ತದೆ. ಆದಕಾರಣ, “ಗುಡ್ಡಗಳಲ್ಲಿರುವ ಸಾವಿರಾರು ಪಶುಗಳ” ಧಣಿಯು ಯೋಬನನ್ನು, “ಬೆಟ್ಟದ ಮೇಕೆಗಳು ಈಯುವ [“ಮರಿಹಾಕುವ,” NW] ಸಮಯವನ್ನು ತಿಳಿದುಕೊಂಡಿದ್ದೀಯೋ?” ಎಂದು ನ್ಯಾಯವಾಗಿಯೇ ಕೇಳಸಾಧ್ಯವಿತ್ತು.—ಕೀರ್ತನೆ 50:10; ಯೋಬ 39:1.

ದೇವದತ್ತ ಹುಟ್ಟರಿವು ಹೆಣ್ಣು ಕಾಡುಮೇಕೆಗೆ ಮರಿಹಾಕುವ ಸಮಯವನ್ನು ತಿಳಿಸುತ್ತದೆ. ಅದು ಸುರಕ್ಷಿತವಾದ ಸ್ಥಳವೊಂದನ್ನು ಹುಡುಕಿ, ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿಯೊ ಜೂನ್‌ ತಿಂಗಳಿನಲ್ಲಿಯೊ, ಒಂದೊ ಎರಡೊ ಮರಿಗಳನ್ನು ಹಾಕುತ್ತದೆ. ಕೆಲವೇ ದಿವಸಗಳೊಳಗೆ, ಹೊಸದಾಗಿ ಹುಟ್ಟಿದ ಮರಿಗಳು ಹೆಜ್ಜೆಯಿಡುವುದರಲ್ಲಿ ದೃಢತೆಯನ್ನು ಪಡೆಯುತ್ತವೆ.

“ಮನೋಹರವಾದ ಜಿಂಕೆ . . . ಅಂದವಾದ ದುಪ್ಪಿ [“ಕಾಡುಮೇಕೆ,” NW]”

ವಿವೇಕಿ ರಾಜನಾದ ಸೊಲೊಮೋನನು ಗಂಡಂದಿರಿಗೆ ಪ್ರೋತ್ಸಾಹಿಸಿದ್ದು: “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ [“ಕಾಡುಮೇಕೆಯ,” NW] ಹಾಗೆ ಇರುವಳಲ್ಲಾ.” (ಜ್ಞಾನೋಕ್ತಿ 5:18, 19) ಸ್ತ್ರೀಯರನ್ನು ಕೀಳೈಸುವ ಅರ್ಥದಲ್ಲಿ ಇದನ್ನು ಹೇಳಲಾಗಿಲ್ಲ. ಈ ಪ್ರಾಣಿಗಳ ಚೆಲುವು, ಸೌಷ್ಟವ ಮತ್ತು ಇತರ ಪ್ರಮುಖ ಗುಣಗಳನ್ನು ಸೊಲೊಮೋನನು ಸೂಚಿಸುತ್ತಿದ್ದನೆಂಬುದು ಸ್ಪಷ್ಟ.

ಕಾಡುಮೇಕೆಯು ಸೃಷ್ಟಿಕರ್ತನ ವಿವೇಕಕ್ಕೆ ಅಧಿಕ ಮೊತ್ತದ ಸಾಕ್ಷಿಯನ್ನು ಕೊಡುವ ಅಸಂಖ್ಯಾತ “ಜೀವಜಂತುಗಳ”ಲ್ಲಿ ಒಂದಾಗಿದೆ. (ಆದಿಕಾಂಡ 1:24, 25) ದೇವರು ನಮ್ಮನ್ನು ಇಷ್ಟೊಂದು ಆಕರ್ಷಕ ಜೀವಿಗಳಿಂದ ಸುತ್ತುವರಿಸಿರುವುದಕ್ಕೆ ನಾವು ಸಂತೋಷವುಳ್ಳವರಾಗಿರುವುದಿಲ್ಲವೊ?

[ಪುಟ 24 ರಲ್ಲಿರುವ ಚಿತ್ರ ಕೃಪೆ]

Courtesy of Athens University

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ