ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 2/15 ಪು. 3-4
  • ಕೃತಜ್ಞರಾಗಿರಬೇಕು ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೃತಜ್ಞರಾಗಿರಬೇಕು ಏಕೆ?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೃತಘ್ನತೆಯ ವಿರುದ್ಧವಾಗಿ ಕಾಪಾಡಿಕೊಳ್ಳಿರಿ
  • “ಕೃತಜ್ಞತೆಯುಳ್ಳವರಾಗಿರ್ರಿ”
  • ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಿರಿ
    ಕಾವಲಿನಬುರುಜು—1998
  • “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅವಕಾಶವನ್ನು ಉಪಯೋಗಿಸುವಿರೇ?
    2014 ನಮ್ಮ ರಾಜ್ಯದ ಸೇವೆ
  • ಕೃತಜ್ಞತೆ
    ಎಚ್ಚರ!—2016
ಇನ್ನಷ್ಟು
ಕಾವಲಿನಬುರುಜು—1998
w98 2/15 ಪು. 3-4

ಕೃತಜ್ಞರಾಗಿರಬೇಕು ಏಕೆ?

ಬೆನ್ನುಹುರಿಯ ಶಸ್ತ್ರಚಿಕಿತ್ಸೆಯು, ಹಾರ್ಲೀ ತನ್ನ ವೃತ್ತಿಯನ್ನು ಯಂತ್ರಚಾಲಕ ಹುದ್ದೆಯಿಂದ ಗುಮಾಸ್ತ ಹುದ್ದೆಗೆ ಬದಲಾಯಿಸುವಂತೆ ಮಾಡಿತು. ಈ ಬದಲಾವಣೆಯಿಂದಾಗಿ ಅವನಿಗೆ ಹೇಗನಿಸಿತೆಂಬುದಾಗಿ ಕೇಳಿದಾಗ, ಹಾರ್ಲೀ ಹೇಳಿದ್ದು: “ನನಗೆ ಯಂತ್ರಗಳೊಟ್ಟಿಗೆ ಕೆಲಸಮಾಡಲು ಇನ್ನೂ ಇಷ್ಟವಿದೆ. ಆದರೆ ನಿಜ ಹೇಳಬೇಕೆಂದರೆ, ನಾನು ನನ್ನ ಹಿಂದಿನ ಕೆಲಸಕ್ಕಿಂತ ಈಗಿರುವ ಕೆಲಸದಲ್ಲಿ ಹೆಚ್ಚು ಸಂತುಷ್ಟನಾಗಿದ್ದೇನೆ.”

ಅವನ ಸಂತೃಪ್ತಿಗೆ ಒಂದು ಕಾರಣವನ್ನು ಕೊಡುತ್ತಾ, ಹಾರ್ಲೀ ಹೇಳುವುದು: “ನಾನು ಯಾರೊಂದಿಗೆ ಕೆಲಸಮಾಡುತ್ತಿದ್ದೇನೋ ಆ ಜನರ ಮನೋಭಾವವು ಕಾರಣವಾಗಿದೆ. ನಾನು ಹಿಂದೆ ಕೆಲಸಮಾಡುತ್ತಿದ್ದ ಉದ್ಯೋಗ ಸ್ಥಳದ ಜನರಿಗೆ ಅಸದೃಶವಾಗಿ, ಈಗಿರುವ ನನ್ನ ಮೇಲ್ವಿಚಾರಕರು ಮತ್ತು ಜೊತೆಕೆಲಸಗಾರರು ನಾನು ಏನನ್ನು ಮಾಡುತ್ತೇನೋ ಅದನ್ನು ಮೆಚ್ಚುತ್ತಾರೆ, ಮತ್ತು ಶ್ಲಾಘಿಸುವುದರಲ್ಲಿ ಹಿಂದುಮುಂದು ನೋಡುವುದಿಲ್ಲ. ಇದು ಒಂದು ದೊಡ್ಡ ವ್ಯತ್ಯಾಸವನ್ನು ಮಾಡಿದೆ.” ತನ್ನಿಂದ ಪ್ರಯೋಜನವಿದೆ ಹಾಗೂ ತನ್ನ ಅಗತ್ಯವಿದೆ ಎಂಬುದನ್ನು ತಿಳಿದವನಾಗಿ, ಈಗ ಹಾರ್ಲೀ ಒಬ್ಬ ಸಂತುಷ್ಟ ಕೆಲಸಗಾರನಾಗಿದ್ದಾನೆ.

ಯೋಗ್ಯವಾಗಿರುವಾಗ ನೀಡುವ, ಶ್ಲಾಘನೆಯ ಹಾಗೂ ಕೃತಜ್ಞತೆಯ ನುಡಿಗಳು ನಿಜವಾಗಿಯೂ ಹೃದಯೋಲ್ಲಾಸಗೊಳಿಸುವ ವಿಷಯವಾಗಿರುತ್ತವೆ. ಮತ್ತೊಂದು ಕಡೆಯಲ್ಲಿ, ಕೃತಘ್ನತೆಯ ಪರಿಣಾಮವು ಶೇಕ್ಸ್‌ಪಿಯರ್‌ ಹೇಳಿದಂತೆ ನಿರುತ್ಸಾಹಗೊಳಿಸುವಂತಹದ್ದಾಗಿ ಇರಸಾಧ್ಯವಿದೆ: “ಬೀಸು, ಶಿಶಿರಮಾರುತವೇ ಬೀಸು, ಮಾನವ ಕೃತಘ್ನತೆಯಷ್ಟು ನೀನಲ್ಲ ನಿರ್ದಯಿ.” ವಿಷಾದಕರವಾಗಿ, ಅನೇಕರು ಅಂಥ ನಿರ್ದಯೆಯ ಗ್ರಾಹಕರಾಗಿದ್ದಾರೆ.

ಕೃತಘ್ನತೆಯ ವಿರುದ್ಧವಾಗಿ ಕಾಪಾಡಿಕೊಳ್ಳಿರಿ

ಇಂದಿನ ಲೋಕದಲ್ಲಿ ಕೃತಜ್ಞತೆಯ ನಿಷ್ಕಪಟ ಅಭಿವ್ಯಕ್ತಿಗಳು ಕಣ್ಮರೆಯಾಗುತ್ತಿವೆ. ಉದಾಹರಣೆಗೆ, ಒಬ್ಬ ಲೇಖಕನು ಒಂದು ಪ್ರಶ್ನೆಯನ್ನು ಹಾಕಿದನು: “ಒಬ್ಬ ವಧು, 200 ವಿವಾಹ ಕರೆಯೋಲೆಗಳಿಗೆ ವಿಳಾಸವನ್ನು ಬರೆಯಲು ಸಮಯವನ್ನು ಕಂಡುಕೊಳ್ಳುವುದಾದರೆ, ಕೊಡುಗೆ ನೀಡಿದ 163 ಜನರಿಗೆ ಚಿಕ್ಕ ಥ್ಯಾಂಕ್‌ ಯೂ ಪತ್ರಗಳನ್ನು ಬರೆಯಲು ಸಮಯವನ್ನು ಏಕೆ ಕಂಡುಕೊಳ್ಳಸಾಧ್ಯವಿಲ್ಲ?” “ಉಪಕಾರ” ಎಂಬ ಸರಳವಾದ ಪದವು ಸಹ ಅನೇಕವೇಳೆ ಹೇಳಲ್ಪಡದೆ ಹೋಗುತ್ತದೆ. ಕೃತಜ್ಞತೆಯು, ನಾ-ಮೊದಲು ಎಂಬ ಮನೋಭಾವದಿಂದ ಹೆಚ್ಚೆಚ್ಚಾಗಿ ಸ್ಥಾನಭರ್ತಿಯಾಗುತ್ತಿದೆ. ಈ ಪರಿಸ್ಥಿತಿಯು ಕಡೇ ದಿವಸಗಳ ಗುರುತಿನ ಚಿಹ್ನೆಗಳಲ್ಲಿ ಒಂದು ಚಿಹ್ನೆಯಾಗಿದೆ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಕಡೇ ದಿವಸಗಳಲ್ಲಿ ಸಮಯಗಳು ಬಹಳ ಅಪಾಯಕಾರಿಯಾಗಿರುವವು ಎಂಬುದನ್ನು ನೀವು ಗ್ರಹಿಸತಕ್ಕದ್ದು. ಮನುಷ್ಯರು ತೀರ ಸ್ವಾರ್ಥಿಗಳಾಗುವರು . . . ಅವರಲ್ಲಿ ಕೃತಜ್ಞತೆಯ ವಿಪರೀತ ಕೊರತೆಯಿರುವುದು.”—2 ತಿಮೊಥೆಯ 3:1, 2, ಫಿಲಿಪ್ಸ್‌.

ಇತರ ವಿದ್ಯಮಾನಗಳಲ್ಲಿ, ಕೃತಜ್ಞತೆಯು ಮುಖಸ್ತುತಿಯಿಂದ ಸ್ಥಾನಭರ್ತಿಯಾಗುತ್ತದೆ. ಕೃತಜ್ಞತೆಯ ಅಭಿವ್ಯಕ್ತಿಗಳು ಯಾವುದೇ ವೈಯಕ್ತಿಕ ಲಾಭದ ಕುರಿತಾಗಿ ಯೋಚಿಸದೆ ಅಂತರಂಗದಿಂದ ಮಾಡಲ್ಪಡುತ್ತವೆ. ಆದರೆ ಮುಖಸ್ತುತಿಯು, ಸಾಮಾನ್ಯವಾಗಿ ಕಪಟವೂ ಅತಿಶಯಿಸಿ ಹೇಳಲ್ಪಟ್ಟಂಥದ್ದೂ ಆಗಿರುತ್ತದೆ. ಇದು ಬಡ್ತಿಗಾಗಿ ಅಥವಾ ನಿರ್ದಿಷ್ಟ ವೈಯಕ್ತಿಕ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂಬ ಗುಪ್ತ ಹೇತುವಿನಿಂದ ಉಂಟಾಗಬಹುದು. (ಯೂದ 16) ಅಂಥ ನಯನುಡಿಗಳು, ಮುಖಸ್ತುತಿಯನ್ನು ಪಡೆದುಕೊಳ್ಳುವ ಮೋಡಿಹಾಕುವುದಲ್ಲದೆ, ದುರಭಿಮಾನ ಹಾಗೂ ಗರ್ವದ ಫಲವಾಗಿ ಬಂದವುಗಳಾಗಿರಬಲ್ಲವು. ಹಾಗಾದರೆ, ಕಪಟತನದ ಮುಖಸ್ತುತಿಗೆ ಬಲಿಯಾಗಲು ಯಾರು ತಾನೇ ಇಷ್ಟಪಡುವರು? ಆದರೆ ಯಥಾರ್ಥವಾದ ಕೃತಜ್ಞತೆಯು ನಿಜವಾಗಿಯೂ ಉಲ್ಲಾಸದಾಯಕವಾಗಿರುತ್ತದೆ.

ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಯು ಹಾಗೆ ಮಾಡುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಹೃದಯದಾಳದಿಂದ ಕೃತಜ್ಞನಾಗಿರುವ ಕಾರಣ ಅವನು ಅನುಭವಿಸುವ ಹೃದಯೋಲ್ಲಾಸವು, ಅವನ ಸಂತೋಷ ಹಾಗೂ ಶಾಂತಿಗೆ ನೆರವನ್ನೀಡುತ್ತದೆ. (ಜ್ಞಾನೋಕ್ತಿ 15:13, 15ನ್ನು ಹೋಲಿಸಿರಿ.) ಮತ್ತು ಕೃತಜ್ಞತೆಯು ಒಂದು ಸಕಾರಾತ್ಮಕ ಗುಣವಾಗಿರುವುದರಿಂದ, ಅದು ಕೋಪ, ಹೊಟ್ಟೆಕಿಚ್ಚು ಹಾಗೂ ಅಸಮಾಧಾನದಂಥ ನಕಾರಾತ್ಮಕ ಭಾವನೆಗಳಿಂದ ಅವನನ್ನು ಕಾಪಾಡುತ್ತದೆ.

“ಕೃತಜ್ಞತೆಯುಳ್ಳವರಾಗಿರ್ರಿ”

ಕೃತಜ್ಞತೆಯ ಅಥವಾ ಉಪಕಾರಭಾವದ ಒಂದು ಮನೋಭಾವವನ್ನು ವಿಕಸಿಸಿಕೊಳ್ಳಲು ಬೈಬಲು ನಮ್ಮನ್ನು ಪ್ರಚೋದಿಸುತ್ತದೆ. ಪೌಲನು ಬರೆದುದು: “ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ.” (1 ಥೆಸಲೊನೀಕ 5:18) ಮತ್ತು ಪೌಲನು ಕೊಲೊಸ್ಸೆಯವರಿಗೆ ಸಲಹೆನೀಡಿದ್ದು: “ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ; . . . ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ.” (ಕೊಲೊಸ್ಸೆ 3:15) ಹಲವಾರು ಕೀರ್ತನೆಗಳು ಉಪಕಾರದ ಅಭಿವ್ಯಕ್ತಿಗಳನ್ನು ಒಳಗೊಂಡಿವೆ. ಹೃತ್ಪೂರ್ವಕ ಕೃತಜ್ಞತೆಯು ಒಂದು ದೈವಿಕ ಗುಣವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. (ಕೀರ್ತನೆ 27:4; 75:1) ಸ್ಫುಟವಾಗಿ, ಜೀವಿತದ ಪ್ರತಿದಿನದ ವಿಷಯಗಳಲ್ಲಿ ನಾವು ಉಪಕಾರಭಾವವನ್ನು ತೋರಿಸುವಾಗ ಯೆಹೋವ ದೇವರು ಪ್ರಸನ್ನನಾಗುತ್ತಾನೆ.

ಆದರೆ ಈ ಅಪಕಾರಭಾವದ ಲೋಕದಲ್ಲಿ ನಾವು ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಲು ಯಾವ ಅಂಶಗಳು ಕಷ್ಟಕರವನ್ನಾಗಿ ಮಾಡುತ್ತವೆ? ದೈನಂದಿನ ಜೀವಿತದಲ್ಲಿ ಉಪಕಾರಭಾವದ ಮನೋಭಾವವನ್ನು ನಾವು ಹೇಗೆ ತೋರಿಸಬಹುದು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ