ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 6/15 ಪು. 6-8
  • ಭೂಮಿ—ಏಕೆ ಇಲ್ಲಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭೂಮಿ—ಏಕೆ ಇಲ್ಲಿದೆ?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಏನು ಹೇಳುತ್ತದೆ?
  • ದೇವರ ಉದ್ದೇಶವು ಅಡ್ಡಯಿಸಲ್ಪಟ್ಟಿತು, ಆದರೆ ಬದಲಾಗಿಲ್ಲ
  • ಜೀವಿತಕ್ಕೆ ಒಂದು ಮಹಾ ಉದ್ದೇಶವಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ದೇವರ ಉದ್ದೇಶವೇನು?
    ಎಚ್ಚರ!—1999
  • ಶಾಂತಿಭರಿತ ಹೊಸ ಲೋಕದಲ್ಲಿ ಜೀವನ
    ಶಾಂತಿಭರಿತ ಹೊಸ ಲೋಕದಲ್ಲಿ ಜೀವನ
  • ಸೃಷ್ಟಿಕರ್ತನಿಂದ ಒಂದು ಶಾಶ್ವತ ಕೊಡುಗೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು—1998
w98 6/15 ಪು. 6-8

ಭೂಮಿ—ಏಕೆ ಇಲ್ಲಿದೆ?

ನೀವು ಪರಿಗಣಿಸತಕ್ಕ ಪ್ರಶ್ನೆಯೊಂದಿದೆ: ನಮ್ಮ ಸುಂದರವಾದ ಭೂಗ್ರಹವು, ಭೂಮಿಗಾಗಿ ಮತ್ತು ಅದರಲ್ಲಿರುವ ಮನುಷ್ಯರಿಗಾಗಿ ಒಂದು ಉದ್ದೇಶವನ್ನು ಹೊಂದಿರುವ ಒಬ್ಬ ಬುದ್ಧಿವಂತ ಸೃಷ್ಟಿಕರ್ತನಿಂದ ಉಂಟುಮಾಡಲ್ಪಟ್ಟಿತೊ? ನಿಮಗೆ ತೃಪ್ತಿಯನ್ನು ನೀಡುವ ರೀತಿಯಲ್ಲಿ ಆ ವಿವಾದಾಂಶವನ್ನು ಬಗೆಹರಿಸುವುದರಿಂದ, ನಮ್ಮ ಭೂಗ್ರಹಕ್ಕೆ ಭವಿಷ್ಯತ್ತಿನಲ್ಲಿ ಏನು ಕಾದಿದೆಯೆಂಬುದನ್ನು ನೀವು ಗ್ರಹಿಸುವಂತೆ ಸಹಾಯಮಾಡುವುದು.

ವಿಶ್ವವನ್ನು ಮತ್ತು ನಮ್ಮ ಭೂಮಿಯನ್ನು ಗಹನವಾಗಿ ಅಧ್ಯಯನ ಮಾಡಿರುವ ಅನೇಕ ವಿಜ್ಞಾನಿಗಳು, ಒಬ್ಬ ಸೃಷ್ಟಿಕರ್ತನ ಅಸ್ತಿತ್ವಕ್ಕೆ ಕೈತೋರಿಸುವ ಮತ್ತು ದೇವರು ಅದಕ್ಕೆ ಕಾರಣನೆಂದು ತೋರಿಸುವ ರುಜುವಾತುಗಳನ್ನು ನೋಡಿದ್ದಾರೆ. ಕೇವಲ ಒಬ್ಬ ವಿಜ್ಞಾನಿಯ ಹೇಳಿಕೆಗಳನ್ನು ಪರಿಗಣಿಸಿರಿ:

ದೇವರ ಮನಸ್ಸು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಪ್ರೊಫೆಸರ್‌ ಪಾಲ್‌ ಡೇವಿಸ್‌ ಬರೆಯುವುದು: “ಸ್ಥಿರ, ಸುಸಂಘಟಿತ, ಸಂಕೀರ್ಣವಾದ ರಚನೆಗಳನ್ನು ಹೊಂದಿರುವ ಒಂದು ವ್ಯವಸ್ಥಿತ, ಹೊಂದಾಣಿಕೆಯಿರುವ ವಿಶ್ವದ ಅಸ್ತಿತ್ವಕ್ಕೆ, ಅತಿ ವಿಶೇಷ ರೀತಿಯ ನಿಯಮಗಳು ಮತ್ತು ಪರಿಸ್ಥಿತಿಗಳು ಆವಶ್ಯಕ.”

ಜ್ಯೋತಿರ್ಭೌತ ವಿಜ್ಞಾನಿಗಳು ಮತ್ತು ಇತರ ವಿಜ್ಞಾನಿಗಳು ಗಮನಿಸಿರುವ ಹಲವಾರು “ಕಾಕತಾಳೀಯಗಳನ್ನು” ಚರ್ಚಿಸಿದ ಬಳಿಕ, ಪ್ರೊಫೆಸರ್‌ ಡೇವಿಸ್‌ ಕೂಡಿಸುವುದು: “ಈ ಎಲ್ಲ ಕಾಕತಾಳೀಯಗಳನ್ನು ಒಬ್ಬನು ಒಟ್ಟಾಗಿ ಪರಿಗಣಿಸುವಾಗ, ನಮಗೆ ತಿಳಿದಿರುವಂತೆ, ಜೀವವು ಭೌತಶಾಸ್ತ್ರದ ನಿಯಮಗಳ ಮೇಲೆ, ಮತ್ತು ನಿಸರ್ಗವು ವಿಭಿನ್ನ ಕಣ ರಾಶಿಗಳ, ಬಲ, ತ್ರಾಣ ಮತ್ತು ಇತ್ಯಾದಿಗಳಿಗಾಗಿ ಆರಿಸಿಕೊಂಡಿರುವ ಆಕಸ್ಮಿಕವೆಂದು ತೋರುವ ಸಂಭವಗಳ ಮೇಲೆ ಅತಿ ಸೂಕ್ಷ್ಮವಾಗಿ ಅವಲಂಬಿಸಿದೆಯೆಂಬ ಭಾವೋತ್ಪಾದಕ ರುಜುವಾತನ್ನು ಇವು ಕೊಡುತ್ತವೆ. . . . ನಾವು ದೇವರ ಪಾತ್ರವನ್ನು ವಹಿಸಿ, ಗುಬಟುಗಳನ್ನು ಹುಚ್ಚುಹುಚ್ಚಾಗಿ ತಿರುಗಿಸುವ ಮೂಲಕ ಈ ಪರಿಮಾಣಗಳಿಗಾಗಿ ಮೌಲ್ಯಗಳನ್ನು ಆರಿಸಿಕೊಳ್ಳಲು ಸಾಧ್ಯವಿರುತ್ತಿದ್ದಲ್ಲಿ, ಬಹುಮಟ್ಟಿಗೆ ಎಲ್ಲ ಗುಬಟು ಜೋಡಣೆಗಳು ವಿಶ್ವವನ್ನು ಜೀವಿಸಲು ಅನರ್ಹವನ್ನಾಗಿ ಮಾಡುತ್ತಿದ್ದವು ಎಂಬುದನ್ನೇ ನಾವು ಕಂಡುಕೊಳ್ಳುತ್ತಿದ್ದೆವು ಎಂದು ಹೇಳುವುದೇ ಸಾಕು. ಜೀವವು ಅಭಿವೃದ್ಧಿ ಹೊಂದುವಂತಹ ರೀತಿಯಲ್ಲಿ ವಿಶ್ವವು ಇರಬೇಕಾದರೆ, ಕೆಲವೊಂದು ವಿದ್ಯಮಾನಗಳಲ್ಲಿ, ವಿಭಿನ್ನ ಗುಬಟುಗಳು ಅಪಾರ ನಿಷ್ಕೃಷ್ಟತೆಯಿಂದ ಅನುಗೊಳಿಸಲ್ಪಡಬೇಕೆಂದು ತೋರುತ್ತದೆ. . . . ಈಗಿರುವ ವ್ಯವಸ್ಥೆಯಲ್ಲಿ ಚಿಕ್ಕ ಬದಲಾವಣೆಗಳು ಕೂಡ, ಮಾನವರು ವಿಶ್ವವನ್ನು ನೋಡಲಸಾಧ್ಯವಾದದ್ದಾಗಿ ಮಾಡಬಹುದಾದ ವಾಸ್ತವಾಂಶವು, ನಿಶ್ಚಯವಾಗಿಯೂ ತೀರ ಭಾವಗರ್ಭಿತವಾದ ವಾಸ್ತವಾಂಶವಾಗಿದೆ.”

ವಿಶ್ವದ ಉಳಿದ ಭಾಗದೊಂದಿಗೆ ನಮ್ಮ ಭೂಮಿಯು, ಉದ್ದೇಶವುಳ್ಳ ಒಬ್ಬ ಸೃಷ್ಟಿಕರ್ತನಿಂದ ಉಂಟಮಾಡಲ್ಪಟ್ಟಿತು ಎಂಬುದನ್ನು ಈ ಮೇಲಿನ ಕಂಡುಹಿಡಿತಗಳು ಅನೇಕರಿಗೆ ಸೂಚಿಸುತ್ತವೆ. ಆತನೇ ಅದನ್ನು ಸೃಷ್ಟಿಸಿರುವಲ್ಲಿ, ಆತನು ಭೂಮಿಯನ್ನು ಸೃಷ್ಟಿಸಿದ್ದೇಕೆಂಬುದನ್ನು ನಾವು ಪ್ರಥಮವಾಗಿ ಕಂಡುಹಿಡಿಯುವ ಅಗತ್ಯವಿದೆ. ಸಾಧ್ಯವಿರುವಲ್ಲಿ ನಾವು ಭೂಮಿಗಾಗಿ ಆತನ ಉದ್ದೇಶವೇನು ಎಂಬುದನ್ನು ಸಹ ಖಚಿತವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಈ ಸಂಬಂಧದಲ್ಲಿ, ಒಂದು ವಿಚಿತ್ರ ಅಸಂಬದ್ಧತೆಯು ಕಂಡುಬರುತ್ತದೆ. ನಾಸ್ತಿಕತೆಯ ವ್ಯಾಪಕವಾದ ಜನಪ್ರಿಯತೆಯ ಎದುರಿನಲ್ಲೂ, ಆಶ್ಚರ್ಯಗೊಳಿಸುವಷ್ಟು ಸಂಖ್ಯೆಯ ಜನರು ಈಗಲೂ ಒಬ್ಬ ಬುದ್ಧಿವಂತ ಸೃಷ್ಟಿಕರ್ತನನ್ನು ನಂಬುತ್ತಾರೆ. ಕ್ರೈಸ್ತಪ್ರಪಂಚದ ಹೆಚ್ಚಿನ ಚರ್ಚುಗಳು, ಹೆಸರಿಗೆ ಮಾತ್ರ ಒಬ್ಬ ಸರ್ವಶಕ್ತ ದೇವರು ಮತ್ತು ನಮ್ಮ ವಿಶ್ವದ ಸೃಷ್ಟಿಕರ್ತನ ಕುರಿತು ಮಾತಾಡುತ್ತವೆ. ಆದರೆ ಇವುಗಳಲ್ಲಿನ ಯಾವುದೇ ಧರ್ಮವು, ದೇವರ ಉದ್ದೇಶದಲ್ಲಿ ಭೂಮಿಗಾಗಿರುವ ಭವಿಷ್ಯತ್ತಿನ ಕುರಿತಾಗಿ ದೃಢವಿಶ್ವಾಸ ಮತ್ತು ಮನಗಾಣಿಕೆಯಿಂದ ಮಾತಾಡುವುದೇ ಅಪರೂಪ.

ಬೈಬಲ್‌ ಏನು ಹೇಳುತ್ತದೆ?

ಸೃಷ್ಟಿಕರ್ತನಿಂದ ಬಂದಿರುವುದಾಗಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವ ಮಾಹಿತಿಯ ಮೂಲದ ಕಡೆಗೆ ನೋಡುವುದು ತರ್ಕಬದ್ಧವಾದ ವಿಷಯವಾಗಿದೆ. ಆ ಮೂಲವು ಬೈಬಲ್‌ ಆಗಿದೆ. ನಮ್ಮ ಭೂಮಿಯ ಕುರಿತಾದ ತೀರ ಸರಳ ಮತ್ತು ಅತಿ ಸ್ಪಷ್ಟವಾದ ಹೇಳಿಕೆಗಳಲ್ಲಿ ಒಂದು, ಪ್ರಸಂಗಿ 1:4ರಲ್ಲಿ ಕಂಡುಬರುತ್ತದೆ. ನಾವು ಓದುವುದು: “ಒಂದು ತಲಾಂತರವು ಗತಿಸುವದು, ಇನ್ನೊಂದು ತಲಾಂತರವು ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.” ಯೆಹೋವ ದೇವರು ಭೂಮಿಯನ್ನು ಏಕೆ ಸೃಷ್ಟಿಸಿದನೆಂಬುದನ್ನು ಬೈಬಲ್‌ ಮುಚ್ಚುಮರೆಯಿಲ್ಲದೆ ವಿವರಿಸುತ್ತದೆ. ಆತನು ಭೂಮಿಯನ್ನು ವಿಶ್ವದಲ್ಲಿ ಸರಿಯಾದ ಸ್ಥಾನದಲ್ಲಿಟ್ಟನು, ಮತ್ತು ಭೂಮಿಯಲ್ಲಿರುವ ಜೀವವನ್ನು ಪೋಷಿಸಲಿಕ್ಕಾಗಿ ನಮ್ಮನ್ನು ಸೂರ್ಯನಿಂದ ಸಾಕಷ್ಟು ದೂರದಲ್ಲಿಟ್ಟನೆಂಬುದನ್ನೂ ಅದು ತೋರಿಸುತ್ತದೆ. ಪುರಾತನ ಪ್ರವಾದಿಯಾದ ಯೆಶಾಯನು ಹೀಗೆ ಬರೆಯುವಂತೆ ಸರ್ವಶಕ್ತನಾದ ದೇವರು ಪ್ರೇರಿಸಿದನು: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.”—ಯೆಶಾಯ 45:18.

ಆದರೆ ಭೂಮಿಯಲ್ಲಿರುವ ಎಲ್ಲ ಜೀವವನ್ನು ನಾಶಮಾಡಲಿಕ್ಕಾಗಿ ಮನುಷ್ಯನು ಮಾಧ್ಯಮಗಳನ್ನು ನಿರ್ಮಿಸಿಕೊಳ್ಳುತ್ತಿರುವುದರ ಕುರಿತಾಗಿ ಏನು? ಮಾನವಕುಲವು ನಮ್ಮ ಭೂಗ್ರಹದಲ್ಲಿರುವ ಎಲ್ಲ ಜೀವವನ್ನು ನಾಶಗೊಳಿಸಸಾಧ್ಯವಿರುವ ಮುಂಚೆಯೇ ತಾನು ಹಸ್ತಕ್ಷೇಪಮಾಡುವೆನೆಂದು ದೇವರು ತನ್ನ ಅತುಲ್ಯ ವಿವೇಕದಿಂದಾಗಿ ಘೋಷಿಸುತ್ತಾನೆ. ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯಲ್ಲಿರುವ ಈ ಪುನರಾಶ್ವಾಸನೀಯ ವಾಗ್ದಾನವನ್ನು ಗಮನಿಸಿರಿ: “ಜನಾಂಗಗಳು ಕೋಪಿಸಿಕೊಂಡವು, ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯ ಬಂದದೆ; ನೀನು ನಿನ್ನ ದಾಸರಾದ ಪ್ರವಾದಿಗಳಿಗೂ ದೇವಜನರಿಗೂ ನಿನ್ನ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು ಲೋಕನಾಶಕರನ್ನು ನಾಶಮಾಡುವಿ.”—ಪ್ರಕಟನೆ 11:18.

ಭೂಮಿಯನ್ನು ಸುತ್ತುತ್ತಿದ್ದ ಒಬ್ಬ ಗಗನಯಾತ್ರಿಯು ಈ ಭೂಮಿಯನ್ನು ಅಂತರಿಕ್ಷದಲ್ಲಿರುವ ರತ್ನ ಎಂದು ವರ್ಣಿಸಿದನು. ಇದನ್ನು ಸೃಷ್ಟಿಸುವುದರಲ್ಲಿ ತನ್ನ ಮೂಲ ಉದ್ದೇಶವೇನಾಗಿತ್ತೆಂಬುದನ್ನು ಯೆಹೋವನು ನಮಗೆ ಪ್ರಕಟಪಡಿಸುತ್ತಾನೆ. ಅದು ಒಂದು ಭೌಗೋಲಿಕ ಪ್ರಮೋದವನವಾಗಿದ್ದು, ಮಾನವರು—ಸ್ತ್ರೀಪುರುಷರು—ಅದರಲ್ಲಿ ನೆಮ್ಮದಿಯಿಂದ ವಾಸಿಸಿ, ಎಲ್ಲರೂ ಶಾಂತಿ ಮತ್ತು ಸಾಮರಸ್ಯದಿಂದ ಜೀವಿಸಬೇಕೆಂದು ದೇವರು ಉದ್ದೇಶಿಸಿದನು. ಪ್ರಥಮ ಮಾನವ ಜೋಡಿಯು ಸಂತಾನವನ್ನು ಉತ್ಪಾದಿಸುವಂತೆ ಅನುಮತಿಸುವ ಮೂಲಕ ಭೂಗ್ರಹವನ್ನು ಕ್ರಮೇಣವಾಗಿ ತುಂಬಿಸಲು ಆತನು ಏರ್ಪಾಡು ಮಾಡಿದನು. ಪ್ರಥಮ ಮಾನವ ದಂಪತಿಗಳ ಸುಖಸಂತೋಷಕ್ಕಾಗಿ, ಯೆಹೋವನು ಭೂಮಿಯ ಒಂದು ಚಿಕ್ಕ ಭಾಗವನ್ನು ಪ್ರಮೋದವನವನ್ನಾಗಿ ಮಾಡಿದ್ದನು. ಮಾನವ ಕುಟುಂಬಗಳ ಉತ್ಪತ್ತಿಯು ಹಲವಾರು ವರ್ಷಗಳು ಮತ್ತು ಶತಮಾನಗಳ ವರೆಗೂ ಮುಂದುವರಿದಂತೆ, “ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂಬ ಆದಿಕಾಂಡ 1:28ರ ಮಾತುಗಳು ನೇರವೇರುವ ತನಕ, ಏದೆನ್‌ ತೋಟವು ಕ್ರಮೇಣವಾಗಿ ವಿಸ್ತರಿಸಲ್ಪಡಲಿಕ್ಕಿತ್ತು.

ಭೂಮಿಯ ಮತ್ತು ಅದರ ನಿವಾಸಿಗಳ ವಿಷಾದಕರ ಸ್ಥಿತಿಯನ್ನು ಇಂದು ನಾವು ನೋಡುತ್ತಿರುವಾಗ, ಭೂಮಿಗಾಗಿದ್ದ ದೇವರ ಮೂಲ ಉದ್ದೇಶವು ವಿಫಲವಾಗಿದೆಯೆಂಬುದನ್ನು ಇದು ಅರ್ಥೈಸುತ್ತದೊ? ಅಥವಾ ಆತನು ತನ್ನ ಉದ್ದೇಶವನ್ನು ಬದಲಾಯಿಸಿ, ಮಾನವಕುಲದ ಮೊಂಡುತನದಿಂದಾಗಿ ಭೂಮಿಯು ಸಂಪೂರ್ಣವಾಗಿ ನಾಶವಾಗಿ, ಪುನಃ ಹೊಸತಾಗಿ ಆರಂಭಗೊಳ್ಳುವಂತೆ ಅನುಮತಿಸಲು ನಿರ್ಣಯಿಸಿದ್ದಾನೊ? ಇಲ್ಲ, ಇವುಗಳಲ್ಲಿ ಯಾವುದೇ ಸಂಗತಿಯು ನಿಜವಲ್ಲವೆಂದು ನಾವು ನಿಶ್ಚಿತರಾಗಿರಬಲ್ಲೆವು. ಯೆಹೋವನು ಏನನ್ನೇ ಉದ್ದೇಶಿಸಲಿ ಅದು ಕೊನೆಗೆ ನಿಜವಾಗಲೇಬೇಕು, ಆತನು ಏನನ್ನೇ ನಿರ್ಣಯಿಸಲಿ ಅದನ್ನು ಯಾವುದೇ ವ್ಯಕ್ತಿಯಾಗಲಿ ಅಥವಾ ಯಾವುದೇ ಅನಿರೀಕ್ಷಿತ ಘಟನೆಯಾಗಲಿ ತಡೆಯಲಾರದೆಂದು ಬೈಬಲು ನಮಗೆ ಹೇಳುತ್ತದೆ. ಆತನು ನಮಗೆ ಆಶ್ವಾಸನೆ ಕೊಡುವುದು: “ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.

ದೇವರ ಉದ್ದೇಶವು ಅಡ್ಡಯಿಸಲ್ಪಟ್ಟಿತು, ಆದರೆ ಬದಲಾಗಿಲ್ಲ

ಆದಾಮ ಹವ್ವರ ಕರ್ತವ್ಯತ್ಯಾಗ ಮತ್ತು ಏದೆನ್‌ ತೋಟದಿಂದ ಅವರ ಉಚ್ಚಾಟನೆಯಿಂದಾಗಿ, ಪ್ರಮೋದವನ ಭೂಮಿಯ ಸಂಬಂಧದಲ್ಲಿನ ದೇವರ ಉದ್ದೇಶವು, ಅವರಿಲ್ಲದೆಯೇ ನೆರವೇರಿಸಲ್ಪಡುವುದೆಂಬುದು ಸ್ಪಷ್ಟವಾಯಿತು. ಆದಾಗಲೂ, ಅವರ ಸಂತಾನದವರಲ್ಲಿಯೇ ಕೆಲವರು ತನ್ನ ಆಜ್ಞೆಯನ್ನು ಪೂರೈಸುವರೆಂಬುದನ್ನು ಯೆಹೋವನು ಅಲ್ಲಿಯೇ ತತ್‌ಕ್ಷಣ ಸೂಚಿಸಿದನು. ನಿಜ, ಇದಕ್ಕೆ ಸಮಯ—ಅನೇಕ ಶತಮಾನಗಳೂ—ಬೇಕಾಗುತ್ತಿದ್ದರೂ, ಆದಾಮ ಹವ್ವರಿಬ್ಬರೂ ಪರಿಪೂರ್ಣತೆಯಲ್ಲಿ ಜೀವಿಸುತ್ತಾ ಮುಂದುವರಿಯುತ್ತಿದ್ದಿದ್ದರೂ, ಆ ಮೂಲ ಆಜ್ಞೆಯನ್ನು ಪೂರೈಸುವುದಕ್ಕೆ ಎಷ್ಟು ಸಮಯ ತಗಲುತ್ತಿತ್ತು ಎಂಬುದರ ಕುರಿತಾದ ಸೂಚನೆಯಿರಲಿಲ್ಲ. ಕ್ರಿಸ್ತ ಯೇಸುವಿನ ಸಹಸ್ರ ವರ್ಷದಾಳಿಕೆಯ ಅಂತ್ಯದೊಳಗೆ—ಇಂದಿನಿಂದ ಒಂದು ಸಾವಿರ ವರ್ಷಗಳ ಸ್ವಲ್ಪ ಸಮಯದ ನಂತರ—ಏದೆನಿನ ಪ್ರಮೋದವನೀಯ ಪರಿಸ್ಥಿತಿಗಳು ಭೂವ್ಯಾಪಕವಾಗಿ ಪಸರಿಸಿರುವವು ಮತ್ತು ಭೂಗ್ರಹವು ಪ್ರಥಮ ಮಾನವ ಜೋಡಿಯ ಶಾಂತಿಭರಿತ ಮತ್ತು ಸಂತೋಷದಾಯಕ ಸಂತತಿಯಿಂದ ತುಂಬಲಿರುವುದು ಎಂಬುದು ವಾಸ್ತವಾಂಶವಾಗಿದೆ. ತಪ್ಪಿಬೀಳದ ಉದ್ದೇಶಕನೋಪಾದಿ ಯೆಹೋವನ ಸಾಮರ್ಥ್ಯವು ಎಲ್ಲ ಕಾಲಕ್ಕೂ ಸಮರ್ಥಿಸಲ್ಪಡುವುದು ನಿಶ್ಚಯ!

ದೇವರು ಬಹಳ ಸಮಯದ ಹಿಂದೆ ಪ್ರೇರಿಸಿದಂತಹ ಉದ್ರೇಕಕಾರಿ ಪ್ರವಾದನೆಗಳು ಆಗ ಪೂರೈಸಲ್ಪಡುವವು. ಯೆಶಾಯ 11:6-9ರಂತಹ ಶಾಸ್ತ್ರವಚನಗಳು ಮಹಿಮಾಭರಿತವಾಗಿ ನೆರವೇರುವವು: “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು. ಹಸುವು ಕರಡಿಯು ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”

ನ್ಯೂನ ಆರೋಗ್ಯ ಮತ್ತು ಮಾರಕ ರೋಗಗಳು, ಮತ್ತು ಅಷ್ಟೇಕೆ, ಮರಣವು ಸಹ ಗತಕಾಲದ ಸಂಗತಿಯಾಗಿರುವುದು. ಬೈಬಲಿನ ಕೊನೆಯ ಪುಸ್ತಕದಲ್ಲಿ ಕಂಡುಬರುವ ಈ ಸರಳವಾದ ಮಾತುಗಳಿಗಿಂತ ಹೆಚ್ಚು ಸ್ಪಷ್ಟವಾದ ಇನ್ನಾವುದೇ ಸಂಗತಿಯು ಇರಸಾಧ್ಯವೊ? “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.

ಹೌದು, ನಾವು ಧೈರ್ಯ ತಂದುಕೊಳ್ಳಬಹುದು—ನಮ್ಮ ಸುಂದರವಾದ ಭೂಗ್ರಹವು ಸ್ಥಿರವಾಗಿ ಉಳಿಯುವುದು. ನಮ್ಮ ಅಪೇಕ್ಷೆಯೇನೆಂದರೆ, ಈ ದುಷ್ಟ ವಿಷಯಗಳ ವ್ಯವಸ್ಥೆಯಿಂದ ಹಾಗೂ ಭೂಮಿಯನ್ನು ನಾಶಗೊಳಿಸುವ ಅದರ ಎಲ್ಲಾ ಕೃತ್ಯಗಳಿಂದ ಪಾರಾಗಿಉಳಿಯುವುದು ನಿಮ್ಮ ಸುಯೋಗವಾಗಿರಲಿ. ದೇವರ ರಚನೆಯ ಸ್ವಚ್ಛ ಹೊಸ ಲೋಕವು ಈಗ ಅತಿ ಹತ್ತಿರದಲ್ಲಿದೆ. ಅನೇಕ ಪ್ರಿಯ ಜನರು ಪುನರುತ್ಥಾನದ ಅದ್ಭುತಕಾರ್ಯದ ಮೂಲಕ ಮರಣದಿಂದ ಎಬ್ಬಿಸಲ್ಪಡುವರು. (ಯೋಹಾನ 5:28, 29) ನಿಜವಾಗಿಯೂ ನಮ್ಮ ಭೂಮಿಯು ಸ್ಥಿರವಾಗಿ ಉಳಿಯುವುದು, ಮತ್ತು ನಾವು ಅದರೊಂದಿಗೆ ಉಳಿದುಕೊಂಡು, ಅದರಲ್ಲಿ ಆನಂದಿಸಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ