ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 9/15 ಪು. 28
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅನುರೂಪ ಮಾಹಿತಿ
  • ದೇವರು ಯಾರ ಆರಾಧನೆಯನ್ನು ಅಂಗೀಕರಿಸುತ್ತಾನೆ?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಕ್ರೈಸ್ತರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಪವಿತ್ರಾತ್ಮದ ಮಾರ್ಗದರ್ಶನೆ ಏಕೆ ಅತ್ಯಾವಶ್ಯಕ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 9/15 ಪು. 28

ವಾಚಕರಿಂದ ಪ್ರಶ್ನೆಗಳು

ಯೆಹೋವನನ್ನು “ಆತ್ಮದಿಂದ” ಆರಾಧಿಸಬೇಕು ಎಂಬುದರ ಅರ್ಥವೇನು?

ಸುಖರೆಂಬ ಊರಿನ ಹತ್ತಿರವಿರುವ ಯಾಕೋಬನ ಬಾವಿಯಿಂದ ನೀರನ್ನು ತೆಗೆದುಕೊಂಡು ಹೋಗಲು ಬಂದಿದ್ದ ಸಮಾರ್ಯದ ಸ್ತ್ರೀಗೆ ಯೇಸು ಕ್ರಿಸ್ತನು ಸಾಕ್ಷಿಕೊಡುತ್ತಿದ್ದಾಗ, ಅವನು ಹೇಳಿದ್ದು: “ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು.” (ಯೋಹಾನ 4:​24, ಪರಿಶುದ್ಧ ಬೈಬಲ್‌a) ಸತ್ಯಾರಾಧನೆ “ಸತ್ಯದಿಂದ” ಅರ್ಪಿಸಲ್ಪಡಬೇಕು, ಅಂದರೆ ಅದು ಯೆಹೋವ ದೇವರು ಬೈಬಲಿನಲ್ಲಿ ತನ್ನ ಕುರಿತಾಗಿ ಮತ್ತು ತನ್ನ ಉದ್ದೇಶಗಳ ಕುರಿತಾಗಿ ಏನನ್ನು ವ್ಯಕ್ತಪಡಿಸಿದ್ದಾನೋ ಅದಕ್ಕನುಸಾರವಾಗಿ ಇರಬೇಕು. ದೇವರಿಗಾಗಿರುವ ನಮ್ಮ ಸೇವೆಯು ಆವೇಶವುಳ್ಳದ್ದಾಗಿ ಇರಬೇಕು, ಅಥವಾ ಹುರುಪುಳ್ಳದ್ದಾಗಿ, ಪ್ರೀತಿ ಮತ್ತು ನಂಬಿಕೆ ತುಂಬಿದ ಹೃದಯದಿಂದ ಪ್ರಚೋದಿಸಲ್ಪಟ್ಟದ್ದಾಗಿರಬೇಕು. (ತೀತ 2:14) ಆದರೂ, ‘ದೇವರನ್ನು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸಬೇಕು’ ಎಂಬ ಯೇಸುವಿನ ಹೇಳಿಕೆಯು, ನಾವು ಯೆಹೋವನನ್ನು ಯಾವ ಮಾನಸಿಕ ಸ್ಥಿತಿಗತಿಯೊಂದಿಗೆ ಸೇವಿಸುತ್ತೇವೋ ಅದಕ್ಕಿಂತ ಹೆಚ್ಚಿನದ್ದನ್ನು ಒಳಪಡಿಸುತ್ತದೆ ಎಂಬುದನ್ನು ಪೂರ್ವಾಪರ ವಚನಗಳು ಸೂಚಿಸುತ್ತವೆ.

ಬಾವಿಯ ಹತ್ತಿರ ಆ ಸ್ತ್ರೀಯೊಂದಿಗೆ ಯೇಸು ಮಾಡಿದ ಚರ್ಚೆಯು, ಆರಾಧನೆಯಲ್ಲಿ ಕಟ್ಟಾಸಕ್ತಿಯಿರುವುದರ ಅಥವಾ ಅದರ ಕೊರತೆಯ ಕುರಿತಾಗಿ ಇರಲಿಲ್ಲ. ಸುಳ್ಳಾರಾಧನೆಯನ್ನು ಕೂಡ ಹುರುಪು ಮತ್ತು ಭಕ್ತಿಯೊಂದಿಗೆ ಮಾಡಲಾಗುತ್ತದೆ. ಇದಕ್ಕೆ ಬದಲಾಗಿ, ತಂದೆಯು ಭೂಸ್ಥಳಗಳಾದ ಸಮಾರ್ಯದಲ್ಲಿರುವ ಬೆಟ್ಟದಲ್ಲೋ ಅಥವಾ ಯೆರೂಸಲೇಮಿನಲ್ಲಿರುವ ಆಲಯದಲ್ಲೋ ಆರಾಧಿಸಲ್ಪಡುವುದಿಲ್ಲ ಎಂಬುದನ್ನು ಹೇಳಿದ ನಂತರ, ದೇವರ ನಿಜವಾದ ಸ್ವರೂಪದ ಮೇಲೆ ಆಧಾರಿಸಿರುವ ಹೊಸ ಆರಾಧನಾ ರೀತಿಯ ಕಡೆಗೆ ಸೂಚಿಸಿದನು. (ಯೋಹಾನ 4:21) ಅವನು ಹೇಳಿದ್ದು: “ದೇವರು ಆತ್ಮಸ್ವರೂಪನು.” (ಯೋಹಾನ 4:24) ದೇವರು ದೈಹಿಕ ರೂಪವುಳ್ಳವನಲ್ಲ ಮತ್ತು ಆತನನ್ನು ನೋಡಲು ಅಥವಾ ಸ್ಪರ್ಶಿಸಲು ಸಾಧ್ಯವಿಲ್ಲ. ಆತನ ಆರಾಧನೆಯನ್ನು ಭೂಮಿಯ ಮೇಲಿನ ಒಂದು ಆಲಯದಲ್ಲಿ ಅಥವಾ ಒಂದು ಬೆಟ್ಟದಲ್ಲೇ ಮಾಡಬೇಕೆಂದಿಲ್ಲ. ಆದುದರಿಂದ, ಪ್ರತ್ಯಕ್ಷವಾದ ವಿಷಯಗಳಿಗಿಂತ ಹೆಚ್ಚಿನದ್ದನ್ನು ಒಳಪಡಿಸುವ ಆರಾಧನೆಯ ಒಂದು ಅಂಶವನ್ನು ಯೇಸು ಸೂಚಿಸಿದನು.

ಸತ್ಯದಿಂದ ಅರ್ಪಿಸಲ್ಪಡುವುದರ ಜೊತೆಯಲ್ಲಿ, ಅಂಗೀಕಾರಾರ್ಹವಾದ ಆರಾಧನೆಯು ಪವಿತ್ರಾತ್ಮದಿಂದ ಅಂದರೆ ದೇವರ ಅಸದೃಶ ಕಾರ್ಯಕಾರಿ ಶಕ್ತಿಯಿಂದ ಮಾರ್ಗದರ್ಶಿಸಲ್ಪಟ್ಟದ್ದಾಗಿರಬೇಕು. “ಆ [ಪವಿತ್ರ] ಆತ್ಮವು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುತ್ತದೆ,” ಎಂಬುದಾಗಿ ಪೌಲನು ಬರೆದನು. ಅವನು ಕೂಡಿಸಿದ್ದು: “ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” (1 ಕೊರಿಂಥ 2:8-12, NW) ದೇವರನ್ನು ಅಂಗೀಕಾರಾರ್ಹ ರೀತಿಯಲ್ಲಿ ಆರಾಧಿಸಲು, ನಮಗೆ ಆತನ ಆತ್ಮವು ಮತ್ತು ಅದರ ಮಾರ್ಗದರ್ಶನೆಯು ಬೇಕಾಗಿದೆ. ಮಾತ್ರವಲ್ಲದೆ, ನಮ್ಮ ಆತ್ಮವು ಅಥವಾ ಮಾನಸಿಕ ಸ್ಥಿತಿಗತಿಯು, ಅಧ್ಯಯನ ಮತ್ತು ಆತನ ವಾಕ್ಯದ ಅಳವಡಿಸುವಿಕೆಯ ಮೂಲಕ ದೇವರ ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿರಬೇಕಾದ ಜರೂರಿಯಿದೆ.

[ಪಾದಟಿಪ್ಪಣಿ]

a Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

[ಪುಟ 28ರಲ್ಲಿರುವ ಚಿತ್ರ]

ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸಬೇಕು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ