ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 11/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅನುರೂಪ ಮಾಹಿತಿ
  • ಅಬ್ರಹಾಮನಿಗಿದ್ದಂತಹ ನಂಬಿಕೆ ನಿಮಗಿದೆಯೊ?
    ಕಾವಲಿನಬುರುಜು—1999
  • ಅಬ್ರಹಾಮ—ದೇವರ ಸ್ನೇಹಿತ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 11/1 ಪು. 31

ವಾಚಕರಿಂದ ಪ್ರಶ್ನೆಗಳು

ಯೆಹೋವನು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯನ್ನು ಊರ್‌ನಲ್ಲಿ ಮಾಡಿದನೋ ಅಥವಾ ಖಾರಾನ್‌ನಲ್ಲಿ ಮಾಡಿದನೋ?

ಅಬ್ರಹಾಮನೊಂದಿಗೆ ಯೆಹೋವನು ಮಾಡಿದ ಒಡಂಬಡಿಕೆಯ ಕುರಿತಾದ ಆರಂಭದ ವೃತ್ತಾಂತವು, ಆದಿಕಾಂಡ 12:1-3ರಲ್ಲಿ ಕಂಡುಬರುತ್ತದೆ. ಅದು ಹೀಗೆ ಹೇಳುತ್ತದೆ: ‘ಯೆಹೋವನು ಅಬ್ರಾಮನಿಗೆ​—ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು . . . ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.’a ಅಬ್ರಹಾಮನು ಊರ್‌ ಪಟ್ಟಣದಲ್ಲಿದ್ದಾಗ ಯೆಹೋವನು ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿದನು ಮತ್ತು ಅಬ್ರಹಾಮನು ಖಾರಾನ್‌ ಪಟ್ಟಣದಲ್ಲಿದ್ದಾಗ ಅದನ್ನು ಪುನಃ ದೃಢೀಕರಿಸಿದ್ದಿರಬಹುದು.

ಅಬ್ರಹಾಮನು ಕಾನಾನ್‌ಗೆ ಹೋಗಬೇಕೆಂದು ಯೆಹೋವನು ಕೊಟ್ಟ ಆಜ್ಞೆಯ ಕುರಿತು ಸ್ತೆಫನನು ಮೊದಲನೆಯ ಶತಮಾನದಲ್ಲಿ ಉಲ್ಲೇಖಿಸಿದನು. ಮಹಾಸಭೆಯನ್ನು ಸಂಬೋಧಿಸುತ್ತಾ ಅವನಂದದ್ದು: “ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವಸ್ವರೂಪನಾದ ದೇವರು ಅವನಿಗೆ ಕಾಣಿಸಿಕೊಂಡು​—ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು.” (ಅ. ಕೃತ್ಯಗಳು 7:2, 3, ಓರೆ ಅಕ್ಷರಗಳು ನಮ್ಮವು.) ಮೂಲತಃ ಅಬ್ರಹಾಮನು ಊರ್‌ ಪಟ್ಟಣದವನಾಗಿದ್ದನು, ಮತ್ತು ಸ್ತೆಫನನು ಸೂಚಿಸಿದಂತೆ, ಊರ್‌ನಲ್ಲಿದ್ದಾಗಲೇ ಅವನು ಕಾನಾನ್‌ ದೇಶಕ್ಕೆ ಹೋಗುವಂತೆ ದೇವರು ನೀಡಿದ ಆಜ್ಞೆಯನ್ನು ಮೊದಲ ಬಾರಿ ಕೇಳಿಸಿಕೊಂಡನು. (ಆದಿಕಾಂಡ 15:7; ನೆಹೆಮೀಯ 9:7) ಅಬ್ರಹಾಮನೊಂದಿಗಿನ ದೇವರ ಒಡಂಬಡಿಕೆಯ ಕುರಿತು ಸ್ತೆಫನನು ಏನನ್ನೂ ತಿಳಿಸಲಿಲ್ಲವಾದರೂ, ಆದಿಕಾಂಡ 12:1-3ರಲ್ಲಿರುವ ಆ ಒಡಂಬಡಿಕೆಯು ಕಾನಾನ್‌ ದೇಶಕ್ಕೆ ಹೋಗುವಂತೆ ಕೊಡಲ್ಪಟ್ಟ ಆಜ್ಞೆಗೆ ಸಂಬಂಧಿಸಿದ್ದಾಗಿದೆ. ಆದುದರಿಂದ, ಯೆಹೋವನು ಅಬ್ರಹಾಮನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡದ್ದು ಊರ್‌ ಪಟ್ಟಣದಲ್ಲೇ ಎಂದು ನಂಬುವುದು ಸಮಂಜಸವಾದದ್ದಾಗಿದೆ.

ಆದರೂ, ಆದಿಕಾಂಡದ ದಾಖಲೆಯನ್ನು ಹೆಚ್ಚು ಗಮನಕೊಟ್ಟು ಓದುವುದಾದರೆ, ಸಮಯಾನಂತರ ಯೆಹೋವನು ಹೇಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾನಾನ್‌ ದೇಶದಲ್ಲಿ ಈ ಒಡಂಬಡಿಕೆಯ ಕುರಿತಾದ ಅನೇಕ ಅಂಶಗಳನ್ನು ಪುನರಾವರ್ತಿಸಿ, ಅವುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದನೋ, ಅದೇ ರೀತಿಯಲ್ಲಿ ಆತನು ತನ್ನ ಒಡಂಬಡಿಕೆಯನ್ನು ಖಾರಾನಿನಲ್ಲಿ ಪುನಃ ದೃಢೀಕರಿಸಿದನು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. (ಆದಿಕಾಂಡ 15:5; 17:1-5; 18:​18, 19ಎ; 22:16-18) ಆದಿಕಾಂಡ 11:31, 32ಕ್ಕನುಸಾರ, ಅಬ್ರಹಾಮನ ತಂದೆಯಾಗಿದ್ದ ತೆರಹನು ಕಾನಾನ್‌ಗೆ ಹೋಗಲಿಕ್ಕಾಗಿ ಊರ್‌ನಿಂದ ಹೊರಟನು. ಅವನ ಜೊತೆಯಲ್ಲಿ ಅಬ್ರಹಾಮ, ಸಾರಾ ಮತ್ತು ಲೋಟರು ಇದ್ದರು. ಅವರು ಖಾರಾನ್‌ ಪಟ್ಟಣಕ್ಕೆ ಬಂದು, ತೆರಹನ ಮರಣದ ತನಕ ಅಲ್ಲಿಯೇ ಉಳಿದರು. ಅಬ್ರಹಾಮನು ಖಾರಾನ್‌ನಲ್ಲಿ ಇದ್ದಷ್ಟು ಸಮಯ ಸಾಕಷ್ಟು ಐಶ್ವರ್ಯವನ್ನು ಸಂಪಾದಿಸಿಕೊಳ್ಳಲು ಸಾಧ್ಯವಾಯಿತು. (ಆದಿಕಾಂಡ 12:5) ಮತ್ತು ಒಂದು ಸಂದರ್ಭದಲ್ಲಿ ಅಬ್ರಹಾಮನ ಸಹೋದರನಾದ ನಾಹೋರನು ಕೂಡ ಅಲ್ಲಿಗೆ ಬಂದು ಸೇರಿದನು.

ತೆರಹನ ಮರಣದ ಬಗ್ಗೆ ದಾಖಲಿಸಿದ ಬಳಿಕ, ಅಬ್ರಹಾಮನಿಗೆ ಯೆಹೋವನ ಮಾತುಗಳನ್ನು ಬೈಬಲು ವರದಿಸುತ್ತಾ ಮುಂದುವರಿಯುತ್ತದೆ: “ಯೆಹೋವನು ಹೇಳಿದ ಮೇರೆಗೆ ಅಬ್ರಾಮನು ಹೊರಟುಹೋದನು.” (ಆದಿಕಾಂಡ 12:4) ಆದುದರಿಂದ, ಆದಿಕಾಂಡ 12:​1-3ರಲ್ಲಿರುವ ಮಾತುಗಳನ್ನು ಯೆಹೋವನು ತೆರಹನ ಮರಣಾನಂತರ ನುಡಿದನು ಎಂಬ ಬಲವಾದ ಅಭಿಪ್ರಾಯವನ್ನು ಆದಿಕಾಂಡ 11:​31–12:4 ನೀಡುತ್ತದೆ. ಹಾಗಿರುವಲ್ಲಿ, ಅಬ್ರಹಾಮನು ಆಗಷ್ಟೇ ಕೇಳಿಸಿಕೊಂಡ ಹಾಗೂ ಕೆಲವು ವರ್ಷಗಳ ಹಿಂದೆ ಊರ್‌ ಪಟ್ಟಣದಲ್ಲಿದ್ದಾಗ ಮೊದಲ ಬಾರಿ ಕೇಳಿಸಿಕೊಂಡಿದ್ದ ಯೆಹೋವನ ಆಜ್ಞೆಗೆ ಪ್ರತಿಕ್ರಿಯಿಸುತ್ತಾ, ಖಾರಾನ್‌ ಪಟ್ಟಣವನ್ನು ಬಿಟ್ಟು ಯೆಹೋವನು ಸೂಚಿಸಿದಂಥ ದೇಶಕ್ಕೆ ಸ್ಥಳಾಂತರಿಸಿದನು.

ಆದಿಕಾಂಡ 12:1ಕ್ಕನುಸಾರ, “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು” ಹೋಗು ಎಂದು ಯೆಹೋವನು ಅಬ್ರಹಾಮನಿಗೆ ಆಜ್ಞಾಪಿಸಿದನು. ಒಂದು ಕಾಲದಲ್ಲಿ ಊರ್‌ ಪಟ್ಟಣವು ಅಬ್ರಹಾಮನ “ಸ್ವದೇಶ”ವಾಗಿತ್ತು, ಮತ್ತು ಅವನ ತಂದೆಯ “ಮನೆ” ಅಲ್ಲಿತ್ತು. ಆದರೂ, ಅಬ್ರಹಾಮನ ತಂದೆ ಅವನ ಮನೆವಾರ್ತೆಯನ್ನು ಖಾರಾನ್‌ ಪಟ್ಟಣಕ್ಕೆ ಸ್ಥಳಾಂತರಿಸಿದನು, ಮತ್ತು ಅಬ್ರಹಾಮನು ಆ ಸ್ಥಳವನ್ನು ತನ್ನ ಸ್ವದೇಶವೆಂದು ಕರೆಯಲಾರಂಭಿಸಿದನು. ಅನೇಕ ವರ್ಷಗಳ ವರೆಗೆ ಕಾನಾನ್‌ ದೇಶದಲ್ಲಿ ವಾಸಿಸಿದ ನಂತರ, ಇಸಾಕನಿಗೆ ಒಂದು ಹೆಣ್ಣನ್ನು ಕಂಡುಕೊಳ್ಳಲಿಕ್ಕಾಗಿ ‘ತನ್ನ ಸ್ವದೇಶಕ್ಕೂ ತನ್ನ ಬಂಧುಗಳ ಬಳಿಗೂ’ ತನ್ನ ಸೇವಕನನ್ನು ಕಳುಹಿಸಿದನು. ಆ ಸೇವಕನು, ‘ನಾಹೋರನು ವಾಸಿಸಿದ ಊರಿಗೆ’ (ಇದು ಖಾರಾನ್‌ ಅಥವಾ ಅಕ್ಕಪಕ್ಕದ ಊರಾಗಿರಬಹುದು) ಹೋದನು. (ಆದಿಕಾಂಡ 24:​3, 4, 10) ಅಲ್ಲಿ ಆ ಸೇವಕನು ಅಬ್ರಹಾಮನ ಬಂಧುಬಳಗದವರ ನಡುವೆ, ನಾಹೋರನ ದೊಡ್ಡ ಕುಟುಂಬದಲ್ಲಿ ರೆಬೆಕ್ಕಳನ್ನು ಕಂಡುಕೊಂಡನು.​—ಆದಿಕಾಂಡ 22:20-24; 24:15, 24, 29, 30; 27:42, 43.

ಮಹಾಸಭೆಗೆ ತಾನು ಕೊಟ್ಟ ಭಾಷಣದಲ್ಲಿ ಸ್ತೆಫನನು ಅಬ್ರಹಾಮನ ಕುರಿತಾಗಿ ಹೇಳಿದ್ದು: “ಅವನ ತಂದೆ ಸತ್ತ ಮೇಲೆ ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು.” (ಅ. ಕೃತ್ಯಗಳು 7:4) ಇದು ಯೆಹೋವನು ಖಾರಾನ್‌ನಲ್ಲಿ ಅಬ್ರಹಾಮನೊಂದಿಗೆ ಸಂವಾದವನ್ನು ಮಾಡಿದನು ಎಂಬುದನ್ನು ಸೂಚಿಸುತ್ತದೆ. ಆದಿಕಾಂಡ 12:​1-3ರಲ್ಲಿ ದಾಖಲಿಸಲ್ಪಟ್ಟಿರುವಂತೆ ಆ ಸಂದರ್ಭದಲ್ಲಿ ಯೆಹೋವನು ಅಬ್ರಹಾಮನೊಂದಿಗಿನ ತನ್ನ ಒಡಂಬಡಿಕೆಯನ್ನು ಪುನರುಚ್ಚರಿಸಿನು ಎಂಬುದಾಗಿ ನಂಬುವುದು ನ್ಯಾಯಸಮ್ಮತ. ಏಕೆಂದರೆ ಅಬ್ರಹಾಮನು ಕಾನಾನ್‌ಗೆ ಬಂದು ತಲಪಿದ ನಂತರವೇ ಆ ಒಡಂಬಡಿಕೆಯು ಕಾರ್ಯರೂಪಕ್ಕೆ ತರಲ್ಪಟ್ಟಿತು. ಆದುದರಿಂದ, ಎಲ್ಲ ವಾಸ್ತವಾಂಶಗಳನ್ನು ಪರಿಗಣಿಸುವಾಗ, ಅವು ಈ ತೀರ್ಮಾನಕ್ಕೆ ನಡೆಸುತ್ತವೆ: ಯೆಹೋವನು ಊರ್‌ನಲ್ಲಿ ಅಬ್ರಹಾಮನೊಂದಿಗೆ ಒಡಂಬಡಿಕೆಯನ್ನು ಮಾಡಿರಬಹುದು ಮತ್ತು ಖಾರಾನ್‌ನಲ್ಲಿ ಅದನ್ನು ಪುನಃ ದೃಢೀಕರಿಸಿದ್ದಿರಬಹುದು.

[ಪಾದಟಿಪ್ಪಣಿ]

a ಅಬ್ರಹಾಮನು 99 ವರ್ಷ ಪ್ರಾಯದವನಾಗಿದ್ದಾಗ, ಕಾನಾನ್‌ ದೇಶದಲ್ಲಿ ಯೆಹೋವನು ಅಬ್ರಾಮನ ಹೆಸರನ್ನು ಅಬ್ರಹಾಮ ಎಂದು ಬದಲಾಯಿಸಿದನು.​—ಆದಿಕಾಂಡ 17:1, 5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ