ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w02 6/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅನುರೂಪ ಮಾಹಿತಿ
  • ಆತ್ಮಹತ್ಯೆ—ಯುವ ಜನತೆಯನ್ನು ಕಾಡಿಸುತ್ತಿರುವ ಒಂದು ಪಿಡುಗು
    ಎಚ್ಚರ!—1998
  • ಶವಸಂಸ್ಕಾರಗಳ ಕುರಿತಾದ ಕ್ರಿಸ್ತೀಯ ನೋಟ
    ಕಾವಲಿನಬುರುಜು—1998
  • ಆತ್ಮಹತ್ಯೆ—ಮರೆಯಲ್ಲಿದ್ದು ಕಾಡುತ್ತಿರುವ ಪಿಡುಗು
    ಎಚ್ಚರ!—2000
  • ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
w02 6/15 ಪು. 30-31

ವಾಚಕರಿಂದ ಪ್ರಶ್ನೆಗಳು

ಯಾವನಾದರೂ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ, ಕ್ರೈಸ್ತ ಶುಶ್ರೂಷಕನೊಬ್ಬನು ಶವಸಂಸ್ಕಾರದ ಭಾಷಣವನ್ನು ಕೊಡುವುದು ಉಚಿತವೊ?

ಆತ್ಮಹತ್ಯೆ ಮಾಡಿಕೊಂಡಿರುವಂತೆ ತೋರಿಬರುವ ಒಬ್ಬನ ಶವಸಂಸ್ಕಾರದಲ್ಲಿ ಶುದ್ಧಾಂತಃಕರಣದಿಂದ ಭಾಷಣವನ್ನು ಕೊಡಬಹುದೊ ಕೊಡಬಾರದೊ ಎಂಬುದನ್ನು ಪ್ರತಿಯೊಬ್ಬ ಕ್ರೈಸ್ತ ಶುಶ್ರೂಷಕನು ತಾನೇ ನಿರ್ಣಯಿಸಬೇಕು. ಅವನು ನಿರ್ಣಯಿಸುವಾಗ, ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸಬೇಕು: ಯೆಹೋವನು ಆತ್ಮಹತ್ಯೆಯನ್ನು ಹೇಗೆ ದೃಷ್ಟಿಸುತ್ತಾನೆ? ಆ ಮರಣವು ನಿಜವಾಗಿಯೂ ಸ್ವಯಂಕೃತ ಕೊಲೆಯಾಗಿದೆಯೊ? ಮಾನಸಿಕ ಅಥವಾ ಭಾವಾವೇಶದ ಅಸ್ವಸ್ಥತೆಯು ಆತ್ಮಹತ್ಯೆಗೆ ಕಾರಣವಾಗಿತ್ತೊ? ಆ ಸಮುದಾಯದಲ್ಲಿ ಆತ್ಮಹತ್ಯೆಯನ್ನು ಹೇಗೆ ವೀಕ್ಷಿಸಲಾಗುತ್ತದೆ?

ಕ್ರೈಸ್ತರೋಪಾದಿ ನಮಗೆ, ಯೆಹೋವನು ಆತ್ಮಹತ್ಯೆಯನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದರ ಕುರಿತು ಆಸಕ್ತಿಯಿದೆ. ಯೆಹೋವನಿಗೆ ಮಾನವ ಜೀವವು ಅಮೂಲ್ಯವೂ ಪವಿತ್ರವೂ ಆಗಿದೆ. (ಆದಿಕಾಂಡ 9:5; ಕೀರ್ತನೆ 36:9) ಒಬ್ಬನು ತನ್ನನ್ನು ಉದ್ದೇಶಪೂರ್ವವಾಗಿ ಕೊಂದುಕೊಳ್ಳುವುದು ತಾನಾಗಿಯೇ ಮಾಡಿಕೊಂಡ ಕೊಲೆಯಾಗಿರುವುದರಿಂದ, ಅದು ಯೆಹೋವನ ದೃಷ್ಟಿಯಲ್ಲಿ ಅಪ್ರಿಯ ವಿಷಯವಾಗಿದೆ. (ವಿಮೋಚನಕಾಂಡ 20:13; 1 ಯೋಹಾನ 3:15) ಈ ನಿಜತ್ವವು ಆತ್ಮಹತ್ಯೆ ಮಾಡಿಕೊಂಡವನೊಬ್ಬನ ಶವಸಂಸ್ಕಾರದಲ್ಲಿ ಭಾಷಣ ಕೊಡುವುದನ್ನು ಪ್ರತಿಬಂಧಿಸುತ್ತದೆಯೆ?

ಇಸ್ರಾಯೇಲಿನ ರಾಜ ಸೌಲನ ದೃಷ್ಟಾಂತವನ್ನು ತೆಗೆದುಕೊಳ್ಳಿರಿ. ಫಿಲಿಷ್ಟಿಯರ ಎದುರಾಗಿ ನಡೆದ ಅಂತಿಮ ಕದನದಲ್ಲಿ ತಾನು ಬದುಕೆನೆಂದು ಅವನಿಗೆ ತಿಳಿದುಬಂದಾಗ, ವೈರಿಗಳು ಅವನನ್ನು ಪೀಡಿಸುವಂತೆ ಬಿಡುವುದಕ್ಕೆ ಬದಲಾಗಿ, “ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು.” ಫಿಲಿಷ್ಟಿಯರಿಗೆ ಅವನ ಹೆಣವು ಸಿಕ್ಕಿದಾಗ ಅವರು ಅದನ್ನು ಬೇತ್‌ಷೆಯಾನ್‌ ಪಟ್ಟಣದ ಗೋಡೆಗೆ ನೇತುಹಾಕಿದರು. ಫಿಲಿಷ್ಟಿಯರು ಏನು ಮಾಡಿದರೆಂಬುದು ಯಾಬೆಷ್‌ಗಿಲ್ಯಾದಿನ ಜನರಿಗೆ ತಿಳಿದುಬಂದಾಗ, ಅವರು ಆ ಹೆಣವನ್ನು ತೆಗೆದು ಸುಟ್ಟುಬಿಟ್ಟರು. ಬಳಿಕ ಅವರು ಅವನ ಎಲುಬುಗಳನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಅವರು ಏಳು ದಿನಗಳ ವರೆಗೆ ಉಪವಾಸವನ್ನೂ ಮಾಡಿದರು. ಇದು ಇಸ್ರಾಯೇಲ್ಯರ ಮಧ್ಯೆ ಸಾಂಪ್ರದಾಯಿಕ ಶೋಕಸೂಚನೆಯ ಸಂಸ್ಕಾರವಾಗಿತ್ತು. (1 ಸಮುವೇಲ 31:4, 8-13; ಆದಿಕಾಂಡ 50:10) ಯೆಹೋವನ ಅಭಿಷಿಕ್ತನಾದ ದಾವೀದನಿಗೆ ಯಾಬೆಷ್‌ಗಿಲ್ಯಾದಿನ ನಿವಾಸಿಗಳು ಮಾಡಿದ ಸಂಗತಿಯು ತಿಳಿದುಬಂದಾಗ, ಅವನು ಹೇಳಿದ್ದು: “ನೀವು ಕರುಣೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಆಶೀರ್ವಾದವುಂಟಾಗಲಿ. ಆತನ ಕೃಪಾಸತ್ಯತೆಗಳು ನಿಮ್ಮೊಂದಿಗಿರಲಿ.” (2 ಸಮುವೇಲ 2:5, 6) ಯಾಬೆಷ್‌ಗಿಲ್ಯಾದಿನ ನಿವಾಸಿಗಳು ರಾಜನಾಗಿದ್ದ ಸೌಲನ ಶವಸಂಸ್ಕಾರವೆಂದೆಣಿಸಬಹುದಾದ ಕೆಲಸವನ್ನು ಮಾಡಿದುದಕ್ಕಾಗಿ ಖಂಡಿಸಲ್ಪಟ್ಟರೆಂದು ದೈವಿಕ ದಾಖಲೆಯು ಸೂಚಿಸುವುದಿಲ್ಲ. ಇದನ್ನು, ತಪ್ಪು ಕೆಲಸಗಳ ಕಾರಣ ಹೂಣಿಡಲ್ಪಟ್ಟಿರದವರ ವಿದ್ಯಮಾನದೊಂದಿಗೆ ಹೋಲಿಸಿರಿ. (ಯೆರೆಮೀಯ 25:32, 33) ಆತ್ಮಹತ್ಯೆ ಮಾಡಿಕೊಂಡವನ ಸಂಬಂಧದಲ್ಲಿ ಶವಸಂಸ್ಕಾರದ ಭಾಷಣವನ್ನು ಕೊಡಬಹುದೊ ಎಂದು ನಿರ್ಣಯಿಸುವಾಗ ಕ್ರೈಸ್ತ ಶುಶ್ರೂಷಕನೊಬ್ಬನು ಸೌಲನ ಕುರಿತಾದ ವೃತ್ತಾಂತವನ್ನು ಪರಿಗಣಿಸಬಹುದು.

ಶುಶ್ರೂಷಕನು ಶವಸಂಸ್ಕಾರದ ಭಾಷಣವನ್ನು ಕೊಡುವ ಉದ್ದೇಶವನ್ನೂ ಪರಿಗಣಿಸಬಹುದು. ಆತ್ಮದ ಅಮರತ್ವವನ್ನು ನಂಬುವ ಜನರಂತೆ, ಮೃತನನ್ನು ಇನ್ನೊಂದು ಲೋಕಕ್ಕೆ ಕಳುಹಿಸಿಕೊಡುವ ತಪ್ಪು ವಿಚಾರದಿಂದ ಯೆಹೋವನ ಸಾಕ್ಷಿಗಳು ಶವಸಂಸ್ಕಾರವನ್ನು ನಡೆಸುವುದಿಲ್ಲ. ಸತ್ತವನಿಗೆ ಪ್ರಯೋಜನ ದೊರಕಿಸುವ ಬದಲಾಗಿ, ಈ ಸ್ಮಾರಕ ಭಾಷಣದ ಮುಖ್ಯ ಉದ್ದೇಶವು, ವಿಯೋಗಿಗಳಿಗೆ ದುಃಖಶಮನಮಾಡುವುದೂ ಉಪಸ್ಥಿತರಿರುವವರಿಗೆ ಮೃತಾವಸ್ಥೆಯ ಬಗ್ಗೆ ಸಾಕ್ಷಿ ಕೊಡುವುದೂ ಆಗಿದೆ. (ಪ್ರಸಂಗಿ 9:5, 10; 2 ಕೊರಿಂಥ 1:3-5) ಶವಸಂಸ್ಕಾರ ಭಾಷಣದ ಇನ್ನೊಂದು ಮುಖ್ಯ ಕಾರಣವು, ಉಪಸ್ಥಿತರೆಲ್ಲರೂ ಜೀವನದ ಕಿಂಚಿತ್‌ ಕಾಲದ ಕುರಿತು ಚಿಂತಿಸುವಂತೆ ಸಹಾಯಮಾಡುವುದೇ ಆಗಿದೆ. (ಪ್ರಸಂಗಿ 7:2) ಆತ್ಮಹತ್ಯೆ ಮಾಡಿಕೊಂಡವನ ಶವಸಂಸ್ಕಾರದ ಭಾಷಣವನ್ನು ಕೊಡುವ ಮೂಲಕ ಈ ಉದ್ದೇಶಗಳು ಪೂರೈಸಲ್ಪಡುವವೊ?

ನಿಜ, ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಜೀವವನ್ನು ಕಳೆದುಕೊಂಡನೆಂದೂ, ಯೆಹೋವನಿಗೆದುರಾಗಿ ಪಾಪ ಮಾಡುತ್ತಿದ್ದೇನೆಂಬುದು ಅವನಿಗೆ ಪೂರ್ಣವಾಗಿ ತಿಳಿದಿತ್ತೆಂದೂ ಕೆಲವರು ಎಣಿಸಬಹುದು. ಆದರೆ ಆ ಅನಿಸಿಕೆಯನ್ನು ಬೆಂಬಲಿಸಲು ಯಾವಾಗಲೂ ಸಾಧ್ಯವಿದೆಯೊ? ಅದು ಹಿಂದೆಮುಂದೆ ನೋಡದೆ, ಇದ್ದಕ್ಕಿದ್ದ ಹಾಗೆ ಮಾಡಿದ ಕೃತ್ಯವಾಗಿರಸಾಧ್ಯವಿದೆಯೊ? ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿದ ಕೆಲವರು ತಮ್ಮ ಮನಸ್ಸನ್ನು ಬದಲಾಯಿಸಿ ಹಾಗೆ ಮಾಡುವುದನ್ನು ನಿಲ್ಲಿಸುತ್ತಾರೆ. ಒಬ್ಬ ವ್ಯಕ್ತಿಯು ಸತ್ತುಹೋದ ನಂತರ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪಪಡಲಾರನು.

ಅನೇಕ ಆತ್ಮಹತ್ಯೆಗಳಲ್ಲಿ ಅಡಗಿರುವ ಇನ್ನೊಂದು ಪ್ರಮುಖ ಕಾರಣವು, ಮಾನಸಿಕ ಮತ್ತು ಭಾವನಾತ್ಮಕ ಕಾಯಿಲೆಗಳೇ. ಇಂಥವರನ್ನು ನಿಜವಾಗಿಯೂ ಆತ್ಮಹತ್ಯೆಯ ಬಲಿಗಳೆಂದು ಕರೆಯಸಾಧ್ಯವಿದೆ. ಕೆಲವು ಸಂಖ್ಯಾಸಂಗ್ರಹಣಗಳಿಗನುಸಾರ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ 90 ಪ್ರತಿಶತ ಜನರಿಗೆ ಒಂದಲ್ಲ ಒಂದು ರೀತಿಯ ಮಾನಸಿಕ, ಭಾವನಾತ್ಮಕ ಅಥವಾ ದುಶ್ಚಟದ ಸಮಸ್ಯೆಯಿರುತ್ತದೆ. ಇಂತಹ ಮಾನಸಿಕ ಸ್ಥಿತಿಯಲ್ಲಿರುವ ಜನರು ತಾವಾಗಿಯೇ ಕೊಲೆಯನ್ನು ಮಾಡಿಕೊಳ್ಳುವಾಗ ಯೆಹೋವನು ಕ್ಷಮಿಸಾನೊ? ಯೆಹೋವನ ದೃಷ್ಟಿಯಲ್ಲಿ ಆ ಮೃತನು ಅಕ್ಷಮ್ಯವಾದ ಪಾಪವನ್ನು ಮಾಡಿದನೊ ಇಲ್ಲವೊ ಎಂದು ತೀರ್ಪುಮಾಡುವ ಸ್ಥಾನದಲ್ಲಿ ನಾವಿಲ್ಲ. ಆತ್ಮಹತ್ಯೆ ಮಾಡಿಕೊಂಡವನ ಶವಸಂಸ್ಕಾರದ ಭಾಷಣವನ್ನು ಕೊಡಬೇಕೊ ಇಲ್ಲವೊ ಎಂಬುದನ್ನು ಪರಿಗಣಿಸುವಾಗ ಕ್ರೈಸ್ತ ಶುಶ್ರೂಷಕನೊಬ್ಬನು, ಆ ಮೃತನ ಪರಿಸ್ಥಿತಿಗಳನ್ನು ಮತ್ತು ಅವನ ವೈದ್ಯಕೀಯ ಚರಿತ್ರೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಪರಿಗಣಿಸಬೇಕಾದ ಇನ್ನೊಂದು ವಿಷಯವೂ ಇದೆ: ಆ ಸಮಾಜದಲ್ಲಿರುವ ಜನರು ಆತ್ಯಹತ್ಯೆಯನ್ನು ಮತ್ತು ಆ ವ್ಯಕ್ತಿಯ ಮರಣವನ್ನು ಹೇಗೆ ಪರಿಗಣಿಸುತ್ತಾರೆ? ಇದು ವಿಶೇಷವಾಗಿ ಹಿರಿಯರು ಚಿಂತಿಸಬೇಕಾದ ವಿಷಯವಾಗಿದೆ. ಏಕೆಂದರೆ ಅವರಿಗೆ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಒಳ್ಳೆಯ ಹೆಸರಿನ ಬಗ್ಗೆ ಆಸಕ್ತಿಯಿದೆ. ಆ ವಠಾರದಲ್ಲಿ ಆತ್ಮಹತ್ಯೆಯ ಬಗ್ಗೆ ಮತ್ತು ವಿಶೇಷವಾಗಿ ಈ ಆತ್ಮಹತ್ಯೆಯ ಬಗ್ಗೆ ಜನರ ಸಾಮಾನ್ಯ ಮನೋಭಾವದ ಮೇಲೆ ಹೊಂದಿಕೊಂಡು, ಹಿರಿಯರು ಇಂತಹ ಶವಸಂಸ್ಕಾರವನ್ನು ಬಹಿರಂಗವಾಗಿ ಅನುಮೋದಿಸದೆ ಇರಬಹುದು ಅಥವಾ ಆ ಭಾಷಣವು ರಾಜ್ಯ ಸಭಾಗೃಹದಲ್ಲಿ ನಡೆಯಲು ಒಪ್ಪಿಗೆ ಕೊಡದೆ ಇರಬಹುದು.

ಆದರೂ, ಇತರರು ಏರ್ಪಡಿಸಿರುವ ಒಂದು ಶವಸಂಸ್ಕಾರದಲ್ಲಿ ಭಾಷಣವನ್ನು ಕೊಡುವಂತೆ ಒಬ್ಬ ಕ್ರೈಸ್ತ ಶುಶ್ರೂಷಕನು ಕೇಳಿಕೊಳ್ಳಲ್ಪಡುವಲ್ಲಿ, ಸಭೆಯ ಪ್ರತಿನಿಧಿಯಾಗಿ ಅಲ್ಲ, ಬದಲಾಗಿ ತಾನು ಖಾಸಗಿಯಾಗಿ ಅದನ್ನು ಕೊಡಬಲ್ಲೆನೆಂದು ಅವನು ಎಣಿಸಬಹುದು. ಅವನು ಹಾಗೆ ಮಾಡಲು ನಿರ್ಣಯಿಸುವಲ್ಲಿ, ಆ ವ್ಯಕ್ತಿಯ ಪುನರುತ್ಥಾನದ ಸಾಧ್ಯತೆಗಳ ವಿಷಯದಲ್ಲಿ ಅವನು ಯಾವುದೇ ನಿಶ್ಚಿತ ಹೇಳಿಕೆಗಳನ್ನು ಮಾಡದಂತೆ ಜಾಗರೂಕತೆಯನ್ನು ವಹಿಸಬೇಕು. ಏಕೆಂದರೆ ಮೃತನ ಯಾವುದೇ ಭಾವೀ ಪ್ರತೀಕ್ಷೆಯು ಯೆಹೋವನ ಕೈಯಲ್ಲಿದೆ, ಮತ್ತು ಆ ಮೃತನಿಗೆ ಪುನರುತ್ಥಾನವಾಗುತ್ತದೊ ಇಲ್ಲವೊ ಎಂದು ಹೇಳುವ ಸ್ಥಾನದಲ್ಲಿ ಯಾವನೂ ಇಲ್ಲ. ಶುಶ್ರೂಷಕನು ಮರಣದ ಸಂಬಂಧದಲ್ಲಿರುವ ಬೈಬಲ್‌ ಸತ್ಯಗಳ ಕುರಿತು ಮಾತಾಡಿ, ವಿಯೋಗಿಗಳಿಗೆ ಉಪಶಮನವನ್ನು ಕೊಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ