ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 10/1 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • “ಸತ್ತವರು ಎಬ್ಬಿಸಲ್ಪಡುವರು”
    ಕಾವಲಿನಬುರುಜು—1998
  • ಪುನರುತ್ಥಾನದ ನಿರೀಕ್ಷೆಗೆ ಶಕ್ತಿಯಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 10/1 ಪು. 29

ವಾಚಕರಿಂದ ಪ್ರಶ್ನೆಗಳು

ಸತ್ತುಹೋದವರಿಗಾಗಿ ದೀಕ್ಷಾಸ್ನಾನ ಎಂದರೇನು?

ಸ್ವರ್ಗೀಯ ಪುನರುತ್ಥಾನದ ಕುರಿತು ಬರೆಯುವಾಗ ಅಪೊಸ್ತಲ ಪೌಲನು, ಅತ್ಯಂತ ಆಸಕ್ತಿಕರವಾದಂಥ ಒಂದು ಭಾಗವನ್ನು ದಾಖಲಿಸಿದನು. ಸತ್ಯವೇದ ಬೈಬಲ್‌ನಲ್ಲಿ ನಾವು ಓದುವುದು: “ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದುಬರುವದೇ ಇಲ್ಲವೆಂಬದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ?” ಮತ್ತು ಪರಿಶುದ್ಧ ಬೈಬಲ್‌a ಈ ಭಾಗವನ್ನು ಹೀಗೆ ತರ್ಜುಮೆಮಾಡುತ್ತದೆ: “ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?”​—1 ಕೊರಿಂಥ 15:29.

ದೀಕ್ಷಾಸ್ನಾನ ಮಾಡಿಸಿಕೊಳ್ಳದೇ ಸತ್ತವರಿಗೋಸ್ಕರ, ಬದುಕಿರುವ ಜನರು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಪೌಲನು ಇಲ್ಲಿ ಸೂಚಿಸುತ್ತಿದ್ದನೋ? ಈ ಭಾಷಾಂತರಗಳಿಂದ ಹಾಗೂ ಇನ್ನಿತರ ಬೈಬಲ್‌ ಭಾಷಾಂತರಗಳಿಂದ ಇದು ಹೀಗೆ ತೋರಬಹುದು. ಆದರೆ, ಶಾಸ್ತ್ರವಚನಗಳನ್ನು ಹಾಗೂ ಪೌಲನಿಂದ ಉಪಯೋಗಿಸಲ್ಪಟ್ಟ ಮೂಲ ಗ್ರೀಕ್‌ ಅನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವಾಗ, ಬೇರೆ ತೀರ್ಮಾನಕ್ಕೆ ಬರಸಾಧ್ಯವಿದೆ. ಇಲ್ಲಿ ಪೌಲನು, ಕ್ರಿಸ್ತನಂತೆಯೇ ಸಮಗ್ರತೆಯ ಮರಣಕ್ಕೆ ನಡಿಸುವಂಥ ಒಂದು ಜೀವನಮಾರ್ಗಕ್ಕೆ ಅಭಿಷಿಕ್ತ ಕ್ರೈಸ್ತರ ದೀಕ್ಷಾಸ್ನಾನವಾಗುತ್ತದೆ ಅಥವಾ ನಿಮಜ್ಜನಮಾಡಲಾಗುತ್ತದೆ ಎಂದು ಅರ್ಥೈಸಿದನು. ತದನಂತರ ಅವರು ಕ್ರಿಸ್ತನಂತೆಯೇ ಆತ್ಮಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು.

ಶಾಸ್ತ್ರವಚನಗಳು ಈ ವಿವರಣೆಗೆ ಆಧಾರ ನೀಡುತ್ತವೆ. ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಬರೆದುದು: “ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?” (ರೋಮಾಪುರ 6:3) ಫಿಲಿಪ್ಪಿಯವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಸ್ವತಃ ತನ್ನ ಕುರಿತು ಹೇಳುತ್ತಾ, “[ಕ್ರಿಸ್ತನ] ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳುಕೊಂಡು ಆತನ ಮರಣದ ವಿಷಯದಲ್ಲಿ ಆತನಿಗೆ ಸರೂಪ”ನಾಗುವುದರ ಬಗ್ಗೆ ಮಾತಾಡಿದನು. “ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನವು ನನಗೆ ಒದಗಿಬಂದೀತು” ಎಂದು ಅವನು ಹೇಳಿದನು. (ಫಿಲಿಪ್ಪಿ 3:10, 11) ಕ್ರಿಸ್ತನ ಅಭಿಷಿಕ್ತ ಹಿಂಬಾಲಕನೊಬ್ಬನ ಜೀವನಮಾರ್ಗದಲ್ಲಿ, ಪರೀಕ್ಷೆಯ ಕೆಳಗೂ ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ಮಾರ್ಗಕ್ರಮ, ಪ್ರತಿ ದಿನ ಮರಣವನ್ನು ಎದುರಿಸುವುದು, ಮತ್ತು ಅಂತಿಮವಾಗಿ ಯಥಾರ್ಥತೆಯುಳ್ಳವನಾಗಿ ಸಾಯುವುದು ಹಾಗೂ ನಂತರ ಸ್ವರ್ಗೀಯ ಪುನರುತ್ಥಾನವನ್ನು ಹೊಂದುವುದು ಒಳಗೂಡಿದೆ ಎಂಬುದನ್ನು ಪೌಲನು ಸೂಚಿಸುತ್ತಿದ್ದನು.

ದೀಕ್ಷಾಸ್ನಾನ ಹೊಂದಿರುವವರ ಸಂಬಂಧದಲ್ಲಿ ಮರಣದ ಕುರಿತು ನೇರವಾಗಿ ಪ್ರಸ್ತಾಪಿಸುವ ಈ ಶಾಸ್ತ್ರವಚನಗಳು ಮತ್ತು ಇನ್ನಿತರ ಶಾಸ್ತ್ರವಚನಗಳು, ಈಗಾಗಲೇ ದೀಕ್ಷಾಸ್ನಾನ ಮಾಡಿಸಿಕೊಂಡಿರುವಂಥ ಸಜೀವ ವ್ಯಕ್ತಿಗಳಿಗೆ ಹೊರತು ಈಗಾಗಲೇ ಯಾರು ಸತ್ತುಹೋಗಿದ್ದಾರೋ ಅವರಿಗೆ ಸೂಚಿಸುತ್ತಿಲ್ಲ ಎಂಬುದು ಗಮನಾರ್ಹ. ಪೌಲನು ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಹೀಗೂ ಹೇಳಿದನು: “ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟದ್ದರಿಂದಲೇ ಆ ಸುನ್ನತಿಯನ್ನು ಹೊಂದಿದಿರಿ. ಇದಲ್ಲದೆ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಸಾಮರ್ಥ್ಯದಲ್ಲಿ ನಂಬಿಕೆಯಿಡುವದರ ಮೂಲಕ ಅದರಲ್ಲಿ ಆತನ ಕೂಡ ಎದ್ದು ಬಂದಿರಿ.”​—ಕೊಲೊಸ್ಸೆ 2:12.

ಬೇರೆ ಬೇರೆ ಬೈಬಲ್‌ ಭಾಷಾಂತರಗಳಲ್ಲಿ 1 ಕೊರಿಂಥ 15:29ರಲ್ಲಿರುವ “ಅವರಿಗೋಸ್ಕರ” ಎಂಬುದನ್ನು ಸೂಚಿಸಲಿಕ್ಕಾಗಿ ಭಾಷಾಂತರಿಸಲ್ಪಟ್ಟಿರುವ ಹೈಪರ್‌ ಎಂಬ ಗ್ರೀಕ್‌ ಉಪಸರ್ಗವು, “ಉದ್ದೇಶಕ್ಕಾಗಿ” ಎಂಬುದನ್ನೂ ಅರ್ಥೈಸಬಲ್ಲದು. ಆದುದರಿಂದ, ಇತರ ಬೈಬಲ್‌ ಮೂಲಪಾಠಗಳಿಗೆ ಹೊಂದಿಕೆಯಲ್ಲಿ, ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲು ಈ ವಚನವನ್ನು ಸರಿಯಾಗಿ ತರ್ಜುಮೆಮಾಡುತ್ತದೆ: “ಸತ್ತವರಾಗಿರುವ ಉದ್ದೇಶಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದುಬರುವದೇ ಇಲ್ಲವಾದರೆ ಅವರು ಅಂಥವರಾಗಿರುವ ಉದ್ದೇಶಕ್ಕಾಗಿ ಯಾಕೆ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ?”

[ಪಾದಟಿಪ್ಪಣಿ]

a Taken from the HOLY BIBLE: Kannada EASY-TO-READ VERSION ©1997 by World Bible Translation Center, Inc. and used by permission.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ