ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w05 9/15 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಅನುರೂಪ ಮಾಹಿತಿ
  • ನಾನು ಕಂಪ್ಯೂಟರ್‌ ಅಥವಾ ವಿಡಿಯೊ ಆಟಗಳನ್ನು ಆಡಬೇಕೊ?
    ಎಚ್ಚರ!—1996
  • ನಾನು ಇಲೆಕ್ಟ್ರಾನಿಕ್‌ ಗೇಮ್ಸ್‌ ಆಡಬಹುದೋ?
    ಎಚ್ಚರ!—2008
  • ವಿಡಿಯೋ ಗೇಮ್ಸ್‌ ಆಡೋದು ತಪ್ಪಾ?
    ಯುವಜನರ ಪ್ರಶ್ನೆಗಳು
  • ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
w05 9/15 ಪು. 29

ವಾಚಕರಿಂದ ಪ್ರಶ್ನೆಗಳು

ಹಿಂಸಾತ್ಮಕ ಕಂಪ್ಯೂಟರ್‌ ಆಟಗಳನ್ನು ಆಡುವುದು ಯೆಹೋವನೊಂದಿಗಿನ ಒಬ್ಬನ ಸಂಬಂಧವನ್ನು ಬಾಧಿಸಬಲ್ಲದೊ?

ಪುರಾತನ ಇಸ್ರಾಯೇಲಿನ ರಾಜ ದಾವೀದನು ಬರೆದದ್ದು: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು [ನಿಸ್ಸಂದೇಹವಾಗಿಯೂ] ದ್ವೇಷಿಸುತ್ತಾನೆ.” (ಕೀರ್ತನೆ 11:⁠5) ‘ದ್ವೇಷ’ ಎಂಬುದಕ್ಕಾಗಿರುವ ಮೂಲಭಾಷೆಯ ಪದವು “ವೈರಿ” ಎಂಬ ಅರ್ಥವನ್ನು ಹೊಂದಿದೆ. ಆದುದರಿಂದ, ಹಿಂಸಾಕೃತ್ಯವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ. ಹಾಗಾದರೆ ನಾವು ಪರಿಗಣಿಸಬೇಕಾದ ಪ್ರಶ್ನೆ ಏನೆಂದರೆ, ಹಿಂಸಾಕೃತ್ಯಗಳ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಮ್ಮನ್ನು ಕೆಲವು ಕಂಪ್ಯೂಟರ್‌ ಆಟಗಳು ಪ್ರಚೋದಿಸಬಲ್ಲವೊ?

ಹಿಂಸಾತ್ಮಕ ಕಂಪ್ಯೂಟರ್‌ ಆಟಗಳು ಶಸ್ತ್ರಾಸ್ತ್ರಗಳ ಉಪಯೋಗವನ್ನು ಉತ್ತೇಜಿಸುತ್ತವೆ. ಅಂಥ ಆಟಗಳನ್ನು ಆಡುವವರನ್ನು ಅದು ಅನೇಕವೇಳೆ ಯುದ್ಧ ಕಲೆಯಲ್ಲಿ ತರಬೇತಿಗೊಳಿಸುತ್ತದೆ. ಅರ್ಥಶಾಸ್ತ್ರಜ್ಞ (ಇಂಗ್ಲಿಷ್‌) ಎಂಬ ಪತ್ರಿಕೆಯು ತಿಳಿಸುವುದು: “ಅಮೆರಿಕದ ಮಿಲಿಟರಿಯು ತರಬೇತನ್ನು ನೀಡುವ ಸಾಧನಗಳಾಗಿ ಕಂಪ್ಯೂಟರ್‌ ಆಟಗಳನ್ನು ಉಪಯೋಗಿಸುತ್ತದೆ. ಮಿಲಿಟರಿಯು ಉಪಯೋಗಿಸುವ ಕಂಪ್ಯೂಟರ್‌ ಆಟಗಳಲ್ಲಿ ಕೆಲವು ಜನಸಾಮಾನ್ಯರಿಗೆ ಮಾರುಕಟ್ಟೆಗಳಲ್ಲಿ ದೊರಕುವ ಆಟಗಳಾಗಿವೆ.”

ಹಿಂಸಾತ್ಮಕ ಕಂಪ್ಯೂಟರ್‌ ಆಟಗಳನ್ನು ಆಡುವವರು ನೈಜ ವ್ಯಕ್ತಿಗಳಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ ಎಂಬುದು ಸತ್ಯ. ಆದರೆ, ಮನೋರಂಜನೆಯ ಈ ಆಯ್ಕೆಯು ಅವರ ಹೃದಯಗಳನ್ನು ಯಾವುದು ಪ್ರಭಾವಿಸುತ್ತಿರಬಹುದು ಎಂಬುದನ್ನು ಸೂಚಿಸುತ್ತದೆ? (ಮತ್ತಾಯ 5:​21, 22; ಲೂಕ 6:45) ಒಬ್ಬ ಕಾಲ್ಪನಿಕ ವ್ಯಕ್ತಿಯನ್ನು ತಿವಿಯುವುದನ್ನು, ಶೂಟ್‌ಮಾಡುವುದನ್ನು, ಅಂಗಹೀನಗೊಳಿಸುವುದನ್ನು ಮತ್ತು ಕೊಲ್ಲುವುದನ್ನು ಆನಂದಿಸುವ ಒಬ್ಬ ವ್ಯಕ್ತಿಯ ಬಗ್ಗೆ ನೀವು ಯಾವ ನಿರ್ಧಾರಕ್ಕೆ ಬರುತ್ತೀರಿ? ಈ ವ್ಯಕ್ತಿಯು ಪ್ರತಿವಾರ ತಾಸುಗಟ್ಟಲೆ ಸಮಯವನ್ನು ಹಿಂಸಾತ್ಮಕ ಕಲ್ಪನೆಗಳಲ್ಲಿ ಕಳೆದು, ಅಂಥ ಆಟಗಳ ಚಟಕ್ಕೆ ಬಲಿಯಾದರೆ ಆಗೇನು? ಅಶ್ಲೀಲ ವಿಷಯಗಳನ್ನು ನೋಡುವ ಒಬ್ಬನು ಹೇಗೆ ತನ್ನಲ್ಲಿ ಅನೈತಿಕ ಇಚ್ಛೆಗಳನ್ನು ಬೆಳೆಸಿಕೊಳ್ಳುತ್ತಾನೊ ಅದೇ ರೀತಿಯಲ್ಲಿ ಈ ವ್ಯಕ್ತಿಯು ತನ್ನಲ್ಲಿ ಹಿಂಸಾಚಾರಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಿದ್ದಾನೆ ಎಂಬ ತೀರ್ಮಾನಕ್ಕೆ ನೀವು ಬರುವಿರಿ.​—⁠ಮತ್ತಾಯ 5:​27-29.

ಹಿಂಸಾಚಾರವನ್ನು ಪ್ರೀತಿಸುವ ಒಬ್ಬನನ್ನು ಯೆಹೋವನು ಎಷ್ಟು ತೀವ್ರವಾಗಿ ದ್ವೇಷಿಸುತ್ತಾನೆ? ದಾವೀದನು ಹೇಳಿದಂತೆ, ಯೆಹೋವನು ಅಂಥವನನ್ನು “ನಿಸ್ಸಂದೇಹವಾಗಿಯೂ ದ್ವೇಷಿಸುತ್ತಾನೆ.” ನೋಹನ ದಿನದಲ್ಲಿ, ಹಿಂಸಾಚಾರವನ್ನು ಪ್ರೀತಿಸುತ್ತಿದ್ದವರ ಕಡೆಗೆ ತನಗಿದ್ದ ತೀವ್ರವಾದ ದ್ವೇಷವನ್ನು ಯೆಹೋವನು ವ್ಯಕ್ತಪಡಿಸಿದನು. ಯೆಹೋವನು ನೋಹನಿಗೆ ಹೇಳಿದ್ದು: “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ [“ಹಿಂಸಾಕೃತ್ಯಗಳಿಂದ,” NW] ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವದೆಲ್ಲವನ್ನೂ ಅಳಿಸಿ ಬಿಡುತ್ತೇನೆ.” (ಆದಿಕಾಂಡ 6:13) ಸತ್ಯ ದೇವರು ಇಡೀ ಮಾನವಕುಲವನ್ನು ಅವರ ಹಿಂಸಾತ್ಮಕ ಮಾರ್ಗಗಳಿಗಾಗಿ ನಾಶಮಾಡಿದನು. ಹಿಂಸಾಕೃತ್ಯವನ್ನು ಪ್ರೀತಿಸದ ಎಂಟು ಮಂದಿಯನ್ನು ಅಂದರೆ, ಕೇವಲ ನೋಹ ಮತ್ತು ಅವನ ಕುಟುಂಬವನ್ನು ಪಾರುಗೊಳಿಸಿದನು.​—⁠2 ಪೇತ್ರ 2:⁠5.

ಯೆಹೋವನ ಸ್ನೇಹಿತರಾಗಬೇಕೆಂದಿರುವ ಜನರು “ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.” ಹಿಂಸಾಕೃತ್ಯವನ್ನು ಪ್ರೀತಿಸುವ ಬದಲಿಗೆ ಅವರು ‘ಯುದ್ಧಾಭ್ಯಾಸವನ್ನು ನಡೆಸುವುದಿಲ್ಲ.’ (ಯೆಶಾಯ 2:⁠4) ದೇವರ ವೈರಿಗಳಾಗದೆ ಆತನ ಸ್ನೇಹಿತರಾಗಿಯೇ ಉಳಿಯಲು ನಾವು “ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡ”ಬೇಕು. ನಾವು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡಬೇಕು.​—⁠1 ಪೇತ್ರ 3:11.

ಈಗಾಗಲೇ ನಾವು ಹಿಂಸಾತ್ಮಕ ವಿಡಿಯೋ ಆಟಗಳನ್ನು ಆಡುತ್ತಿರುವುದಾದರೆ ಆಗೇನು? ಹಾಗಿರುವಲ್ಲಿ ನಾವು ಯೆಹೋವನು ಹಗೆಮಾಡುವ ಕೆಟ್ಟದ್ದನ್ನು ಬಿಟ್ಟು ಆತನನ್ನು ಮೆಚ್ಚಿಸಲು ದೃಢನಿರ್ಧಾರವನ್ನು ಮಾಡಬೇಕು. ಆಧ್ಯಾತ್ಮಿಕವಾಗಿ ಹಾನಿಕಾರಕವಾಗಿರುವ ಈ ದುಶ್ಚಟವನ್ನು ನಿಲ್ಲಿಸಿಬಿಡಲು ದೇವರ ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ಸಮಾಧಾನ, ಉಪಕಾರ ಮತ್ತು ಶಮೆದಮೆ ಈ ಮುಂತಾದ ಗುಣಗಳು ನಮ್ಮ ಜೀವನದಲ್ಲಿ ದೈವಿಕ ಪ್ರಭಾವವನ್ನು ಬೀರುವಂತೆ ನಾವು ಅನುಮತಿಸುವುದಾದರೆ, ಅಂಥ ದುಶ್ಚಟವನ್ನು ನಿಲ್ಲಿಸಿಬಿಡಬಲ್ಲೆವು.​—⁠ಲೂಕ 11:13; ಗಲಾತ್ಯ 5:​22, 23.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ