ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 7/1 ಪು. 24-25
  • ಕುಟುಂಬ ಜೀವನದ ಕುರಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬ ಜೀವನದ ಕುರಿತು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿವಾಹದ ಕುರಿತ ಯಾವ ನೋಟ ಸುಖೀ ಸಂಸಾರಕ್ಕೆ ದಾರಿಮಾಡುತ್ತದೆ?
  • ದೇವರ ಮೇಲಣ ಪ್ರೀತಿ ಕುಟುಂಬವನ್ನು ಸಂತೋಷವಾಗಿರಿಸುತ್ತದೆ ಏಕೆ?
  • ಪತಿಪತ್ನಿ ಪರಸ್ಪರರನ್ನು ಸಂತೋಷವಾಗಿರಿಸಲು ಏನು ಮಾಡಬೇಕು?
  • ಯೇಸುವಿಗೆ ಮಕ್ಕಳ ಮೇಲಿದ್ದ ಪ್ರೀತಿಯಿಂದ ಹೆತ್ತವರು ಏನು ಕಲಿಯಬಲ್ಲರು?
  • ಮಕ್ಕಳು ಯೇಸುವಿನಿಂದ ಏನನ್ನು ಕಲಿಯಬಲ್ಲರು?
  • ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಿಮ್ಮ ಕುಟುಂಬದಲ್ಲಿ ದೇವರಿಗೆ ಪ್ರಥಮ ಸ್ಥಾನವಿದೆಯೆ?
    ಕಾವಲಿನಬುರುಜು—1995
  • ಗಂಡಂದಿರೇ, ಕ್ರಿಸ್ತನ ತಲೆತನವನ್ನು ಒಪ್ಪಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಇತರರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 7/1 ಪು. 24-25

ಯೇಸುವಿನಿಂದ ಕಲಿಯುವುದು . . .

ಕುಟುಂಬ ಜೀವನದ ಕುರಿತು

ವಿವಾಹದ ಕುರಿತ ಯಾವ ನೋಟ ಸುಖೀ ಸಂಸಾರಕ್ಕೆ ದಾರಿಮಾಡುತ್ತದೆ?

ಮದುವೆ ಒಂದು ಪವಿತ್ರ ಬಂಧ. ವಿವಾಹ ವಿಚ್ಛೇದನ ಸಮ್ಮತವೋ ಎಂದು ಕೆಲವರು ಯೇಸುವನ್ನು ಕೇಳಿದಾಗ ಅವನಂದದ್ದು: “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ? ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ. . . . ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.” (ಮತ್ತಾಯ 19:4-6, 9) ದಂಪತಿಗಳು ಯೇಸುವಿನ ಈ ಸಲಹೆಯನ್ನು ಪಾಲಿಸಿ ಒಬ್ಬರಿಗೊಬ್ಬರು ನಂಬಿಗಸ್ತರಾಗಿ ಉಳಿಯುವಲ್ಲಿ ಕುಟುಂಬವು ಸುರಕ್ಷತೆ, ಸಂತೋಷದ ನೆಲೆಯಾಗಿರುತ್ತದೆ.

ದೇವರ ಮೇಲಣ ಪ್ರೀತಿ ಕುಟುಂಬವನ್ನು ಸಂತೋಷವಾಗಿರಿಸುತ್ತದೆ ಏಕೆ?

ಯೇಸು ಹೇಳಿದ್ದು: “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ.” ಎರಡನೆಯ ಅತಿ ದೊಡ್ಡ ಆಜ್ಞೆ ಯಾವುದು? ಯೇಸು ಅಂದದ್ದು: “ನಿನ್ನ ನೆರೆಯವನನ್ನು [ನಿಮ್ಮೊಂದಿಗೆ ವಾಸಿಸುವ ಕುಟುಂಬದವರೂ ಸೇರಿದ್ದಾರೆ] ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:37-39) ಹಾಗಾದರೆ ದೇವರೊಂದಿಗಿನ ಸುಸಂಬಂಧವೇ ಕುಟುಂಬ ಸಂತೋಷದ ಒಳಗುಟ್ಟು. ಏಕೆಂದರೆ ಆತನ ಮೇಲಿರುವ ಪ್ರೀತಿ ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ.

ಪತಿಪತ್ನಿ ಪರಸ್ಪರರನ್ನು ಸಂತೋಷವಾಗಿರಿಸಲು ಏನು ಮಾಡಬೇಕು?

ಗಂಡಂದಿರು ಯೇಸುವಿನ ಮಾದರಿಯನ್ನು ಅನುಸರಿಸುವಾಗ ತಮ್ಮ ಹೆಂಡತಿಯರನ್ನು ಸಂತೋಷವಾಗಿರಿಸುತ್ತಾರೆ. ಯೇಸು ತನ್ನ ಸಾಂಕೇತಿಕ ಪತ್ನಿಯಾದ ಕ್ರೈಸ್ತ ಸಭೆಗೆ ಸ್ವತ್ಯಾಗದ ಪ್ರೀತಿ ತೋರಿಸಿದನು. (ಎಫೆಸ 5:25) ಅವನು ಹೇಳಿದ್ದು: ‘ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೆ ಬಂದನು.’ (ಮತ್ತಾಯ 20:28) ಯೇಸು ತನ್ನ ಆರೈಕೆಯಡಿಯಲ್ಲಿ ಇದ್ದವರ ಮೇಲೆ ದಬ್ಬಾಳಿಕೆ ನಡೆಸಲಿಲ್ಲ ಇಲ್ಲವೆ ಕಠೋರವಾಗಿ ವರ್ತಿಸಲಿಲ್ಲ. ಅವನ ಒಡನಾಟ ಅವರಿಗೆ ಚೈತನ್ಯಕರವಾಗಿತ್ತು. (ಮತ್ತಾಯ 11:28) ಅಂತೆಯೇ ಗಂಡಂದಿರು ಕುಟುಂಬದಲ್ಲಿರುವ ಎಲ್ಲರ ಪ್ರಯೋಜನಾರ್ಥವಾಗಿ ದಯಾಪೂರ್ವಕವಾಗಿ ತಮ್ಮ ಅಧಿಕಾರವನ್ನು ಚಲಾಯಿಸಬೇಕು.

ಯೇಸುವಿನ ಮಾದರಿ ಹೆಂಡತಿಯರಿಗೂ ಉಪಯುಕ್ತ. “ಕ್ರಿಸ್ತನಿಗೆ ದೇವರು ತಲೆ” ಎನ್ನುತ್ತದೆ ಬೈಬಲ್‌. ಮಾತ್ರವಲ್ಲ ಅದನ್ನುವುದು: “ಸ್ತ್ರೀಗೆ ಪುರುಷನು ತಲೆ.” (1 ಕೊರಿಂಥ 11:3) ದೇವರಿಗೆ ಅಧೀನತೆ ತೋರಿಸುವುದರಿಂದ ತನ್ನ ಮರ್ಯಾದೆ ಕಡಿಮೆಯಾಗುತ್ತದೆಂದು ಯೇಸು ನೆನಸಲಿಲ್ಲ. ಅವನಿಗೆ ತನ್ನ ತಂದೆಯ ಮೇಲೆ ಅಪಾರ ಗೌರವವಿತ್ತು. ‘ನಾನು ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ’ ಎಂದನು ಯೇಸು. (ಯೋಹಾನ 8:29) ದೇವರ ಮೇಲಿನ ಪ್ರೀತಿ, ಗೌರವದಿಂದ ಗಂಡನ ತಲೆತನಕ್ಕೆ ಅಧೀನಳಾಗುವ ಪತ್ನಿ ತನ್ನ ಕುಟುಂಬದ ಸಂತೋಷವನ್ನು ಹೆಚ್ಚಿಸುವದರಲ್ಲಿ ವಹಿಸುವ ಪಾತ್ರ ದೊಡ್ಡದು.

ಯೇಸುವಿಗೆ ಮಕ್ಕಳ ಮೇಲಿದ್ದ ಪ್ರೀತಿಯಿಂದ ಹೆತ್ತವರು ಏನು ಕಲಿಯಬಲ್ಲರು?

ಯೇಸು ಮಕ್ಕಳೊಂದಿಗೆ ಸಮಯ ಕಳೆದನು. ಅವರ ವಿಚಾರಗಳು ಮತ್ತು ಭಾವನೆಗಳಲ್ಲಿ ಆಸಕ್ತನಾಗಿದ್ದನು. ಬೈಬಲ್‌ ಹೀಗನ್ನುತ್ತದೆ: “ಯೇಸು ಆ ಮಕ್ಕಳನ್ನು ತನ್ನ ಬಳಿಗೆ ಕರೆದು, ‘ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ’ . . . ಎಂದನು.” (ಲೂಕ 18:15-17) ಒಂದು ಸಂದರ್ಭದಲ್ಲಿ ಕೆಲವು ಬಾಲಕರು ಯೇಸುವಿನಲ್ಲಿ ತಮಗಿದ್ದ ನಂಬಿಕೆಯನ್ನು ಬಹಿರಂಗವಾಗಿ ಪ್ರಕಟಿಸುತ್ತಿದ್ದದ್ದನ್ನು ನೋಡಿ ಜನರು ಟೀಕಿಸಿದರು. ಯೇಸುವಾದರೋ ಆ ಬಾಲಕರನ್ನು ಪ್ರಶಂಸಿಸಿ ಟೀಕಾಕಾರರಿಗೆ ಹೀಗಂದನು: “‘ಶಿಶುಗಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ಸ್ತುತಿಯನ್ನು ಸಿದ್ಧಿಗೆ ತಂದಿದ್ದೀ’ ಎಂಬುದನ್ನು ನೀವು ಎಂದೂ ಓದಲಿಲ್ಲವೇ?”—ಮತ್ತಾಯ 21:15, 16.

ಮಕ್ಕಳು ಯೇಸುವಿನಿಂದ ಏನನ್ನು ಕಲಿಯಬಲ್ಲರು?

ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತರಾಗಿರುವುದರ ಬಗ್ಗೆ ಯೇಸು ಮಕ್ಕಳಿಗೆ ಉತ್ತಮ ಮಾದರಿಯನ್ನಿಟ್ಟನು. ಅವನು 12 ವರ್ಷದವನಾಗಿದ್ದಾಗ ‘ದೇವಾಲಯದಲ್ಲಿ ಬೋಧಕರ ಮಧ್ಯೆ ಕುಳಿತುಕೊಂಡು ಅವರಿಗೆ ಕಿವಿಗೊಡುತ್ತಾ ಪ್ರಶ್ನೆ ಕೇಳುತ್ತಾ ಇದ್ದನು.’ ಫಲಿತಾಂಶ? “ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರೂ ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಡುತ್ತಾ ಇದ್ದರು.” (ಲೂಕ 2:42, 46, 47) ಯೇಸುವಿಗೆ ಅಷ್ಟು ಜ್ಞಾನವಿದ್ದರೂ ಅಹಂಕಾರಿಯಾಗದೆ ತನ್ನ ಹೆತ್ತವರಿಗೆ ಗೌರವ ತೋರಿಸಿದನು. ಬೈಬಲ್‌ ಅನ್ನುವುದು: “ಅವನು . . . ಅವರಿಗೆ ಅಧೀನನಾಗಿ ಮುಂದುವರಿದನು.”—ಲೂಕ 2:51. (w09-E 11/01)

ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? a ಪುಸ್ತಕದ ಅಧ್ಯಾಯ 14 ನೋಡಿ.

[ಪಾದಟಿಪ್ಪಣಿ]

a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ