ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತಾ?
ದೇವರ ಮೆಚ್ಚಿಗೆಯನ್ನು ಪಡೆಯೋದು ಅಷ್ಟೇನು ಕಷ್ಟ ಅಲ್ಲ
ನಾವೆಲ್ಲರು ಪಾಪಿಗಳು ಅಂತ ಬೈಬಲ್ ಹೇಳುತ್ತೆ. ಮೊದಲ ವ್ಯಕ್ತಿಯಾದ ಆದಾಮನಿಂದ ಪಾಪ ನಮಗೂ ಬಂದಿದೆ. ಹಾಗಾಗಿ ನಾವು ಕೆಲವೊಮ್ಮೆ ತಪ್ಪು ವಿಷಯಗಳನ್ನ ಮಾಡಿ ಆಮೇಲೆ ಪಶ್ಚಾತ್ತಾಪ ಪಡುತ್ತೇವೆ. ನಮ್ಮನ್ನ ಪಾಪದಿಂದ ಬಿಡಿಸೋಕೆ ದೇವರ ಮಗನಾದ ಯೇಸು ಬಿಡುಗಡೆಯ ಬೆಲೆಯನ್ನ ಕೊಟ್ಟಿದ್ದಾನೆ. ಇದು ನಮಗೆ ದೇವರಿಂದ ಸಿಕ್ಕ ಉಡುಗೊರೆ.—ರೋಮನ್ನರಿಗೆ 3:23, 24 ಓದಿ.
ಕೆಲವರು ಗಂಭೀರ ತಪ್ಪುಗಳನ್ನ ಮಾಡಿ, ದೇವರು ನಮ್ಮನ್ನ ಕ್ಷಮಿಸುತ್ತಾನೆ ಅಂತ ಯೋಚನೆ ಮಾಡುತ್ತಾರೆ. ‘ಆತನ (ದೇವರ) ಮಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ’ ಅಂತ ದೇವರ ವಾಕ್ಯ ಹೇಳುತ್ತೆ. (1 ಯೋಹಾನ 1:7) ನಾವು ಮನಸಾರೆ ಪಶ್ಚಾತ್ತಾಪ ಪಡೋದಾದ್ರೆ ಯೆಹೋವನು ನಮ್ಮ ಗಂಭೀರ ತಪ್ಪುಗಳನ್ನ ಕ್ಷಮಿಸೋಕೆ ಸಿದ್ಧನಾಗಿರುತ್ತಾನೆ.—ಯೆಶಾಯ 1:18 ಓದಿ.
ಕ್ಷಮೆ ಸಿಗಬೇಕಂದರೆ ನಾವೇನು ಮಾಡಬೇಕು?
ಯೆಹೋವನ ಕ್ಷಮೆ ನಮಗೆ ಸಿಗಬೇಕಂದರೆ ನಾವು ಆತನ ಬಗ್ಗೆ ಕಲಿಬೇಕು. ಅಂದರೆ ಆತನ ಮಾರ್ಗಗಳು, ಸಲಹೆಗಳು ಮತ್ತು ಆತನು ನಮ್ಮಿಂದ ಏನು ಬಯಸುತ್ತಾನೆ ಅಂತ ನಾವು ತಿಳಿದುಕೊಳ್ಳಬೇಕು. (ಯೋಹಾನ 17:3) ತಪ್ಪು ನಡತೆಯನ್ನು ಸರಿ ಮಾಡಿಕೊಂಡು ಪಶ್ಚಾತ್ತಾಪ ಪಡೋದಾದ್ರೆ ಯೆಹೋವನು ಉದಾರವಾಗಿ ಕ್ಷಮಿಸುತ್ತಾನೆ.—ಅಪೊಸ್ತಲರ ಕಾರ್ಯ 3:19 ಓದಿ.
ದೇವರ ಮೆಚ್ಚಿಗೆಯನ್ನು ಪಡೆಯೋದು ಅಷ್ಟೇನು ಕಷ್ಟ ಅಲ್ಲ. ಯಾಕಂದರೆ ಆತನು ನಮ್ಮ ಬಲಹೀನತೆಗಳನ್ನ ಅರ್ಥ ಮಾಡಿಕೊಳ್ಳುತ್ತಾನೆ. ಆತನು ದಯೆ ಮತ್ತು ಕರುಣಾಮಯಿ ದೇವರಾಗಿದ್ದಾನೆ. ಇಂಥ ಗುಣಗಳಿರೋ ದೇವರನ್ನ ಹೇಗೆ ಮೆಚ್ಚಿಸೋದು ಅಂತ ಕಲಿಯೋಕೆ ನೀವು ಇಷ್ಟಪಡುತ್ತೀರಾ?—ಕೀರ್ತನೆ 103:13, 14 ಓದಿ.