ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 7/1 ಪು. 16
  • ಬೈಬಲ್‌ ಕೊಡುವ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಕೊಡುವ ಉತ್ತರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಅನುರೂಪ ಮಾಹಿತಿ
  • ಕೆಟ್ಟಸಂಗತಿಗಳು ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ?
    ದೇವರಿಂದ ನಿಮಗೊಂದು ಸಿಹಿಸುದ್ದಿ!
  • ದೇವರು ಕೆಟ್ಟತನ, ಕಷ್ಟಸಂಕಟ ಇರುವಂತೆ ಯಾಕೆ ಬಿಡುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಈ ಲೋಕ ಯಾರ ಕೈಯಲ್ಲಿದೆ?
    ಈ ಲೋಕ ಯಾರ ಕೈಯಲ್ಲಿದೆ?
  • ಯಾಕಿಷ್ಟು ಕಷ್ಟ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 7/1 ಪು. 16

ಬೈಬಲ್‌ ಕೊಡುವ ಉತ್ತರ

ಈ ಲೋಕವನ್ನು ನಿಜವಾಗಿಯೂ ಯಾರು ಆಳುತ್ತಿದ್ದಾರೆ?

ಯುದ್ಧ, ಅಪರಾಧ, ಹಿಂಸೆ ಮತ್ತು ವಿಪತ್ತಿನ ದೃಶ್ಯಗಳು

ದೇವರೇ ಈ ಲೋಕವನ್ನು ಆಳುತ್ತಿದ್ದಿದ್ದರೆ ಈ ಲೋಕದಲ್ಲಿ ಇಷ್ಟೊಂದು ಕಷ್ಟಸಂಕಟಗಳು ಇರುತ್ತಿದ್ದವಾ?

ದೇವರೇ ಈ ಲೋಕವನ್ನು ಆಳುತ್ತಿದ್ದಾನೆಂದು ಅನೇಕರು ನಂಬುತ್ತಾರೆ. ಒಂದುವೇಳೆ ಅದು ನಿಜವಾಗಿದ್ದರೆ, ಈ ಲೋಕದಲ್ಲಿ ಇಷ್ಟೊಂದು ಕಷ್ಟಸಂಕಟಗಳು ಇರುತ್ತಿದ್ದವಾ? (ಧರ್ಮೋಪದೇಶಕಾಂಡ 32:4, 5) ಈ ಲೋಕವು ಒಬ್ಬ ಕೆಡುಕನ ವಶದಲ್ಲಿದೆ ಎಂದು ಬೈಬಲ್‌ ಹೇಳುತ್ತದೆ.—1 ಯೋಹಾನ 5:19 ಓದಿ.

ಮಾನವಕುಲ ಒಬ್ಬ ಕೆಡುಕನ ವಶಕ್ಕೆ ಬಂದದ್ದಾದರೂ ಹೇಗೆ? ಮಾನವ ಇತಿಹಾಸದ ಆರಂಭದಲ್ಲಿ, ಒಬ್ಬ ದೇವದೂತನು ದೇವರ ವಿರುದ್ಧ ದಂಗೆ ಎದ್ದನು. ಅಷ್ಟು ಮಾತ್ರವಲ್ಲದೆ, ಮೊದಲ ಮಾನವ ದಂಪತಿ ಕೂಡ ದೇವರ ವಿರುದ್ಧ ದಂಗೆ ಏಳುವಂತೆ ಮಾಡಿದನು. (ಆದಿಕಾಂಡ 3:1-6) ಈ ಮೊದಲ ಮಾನವರು ದಂಗೆಕೋರ ದೇವದೂತನಿಗೆ ವಿಧೇಯರಾದರು. ಹೀಗೆ ಅವರು ಆ ದಂಗೆಕೋರನನ್ನೇ ತಮ್ಮ ಅಧಿಕಾರಿಯನ್ನಾಗಿ ಆರಿಸಿಕೊಂಡರು. ಆದರೆ ಸರ್ವಶಕ್ತ ದೇವರೇ ನಿಜವಾದ ಹಕ್ಕುಳ್ಳ ಅಧಿಕಾರಿ. ಹಾಗಿದ್ದರೂ ಜನರು ತನ್ನ ಮೇಲಿನ ಪ್ರೀತಿಯಿಂದ ತನ್ನ ಆಳ್ವಿಕೆಯನ್ನು ಆರಿಸಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. (ಧರ್ಮೋಪದೇಶಕಾಂಡ 6:6; 30:16, 19) ಆದರೆ ಮೊದಲ ದಂಪತಿ ಮಾಡಿದ ಅದೇ ತಪ್ಪನ್ನು ಇಂದಿನ ಜನರೂ ಮಾಡುವಂತೆ ದಂಗೆಕೋರ ಸೈತಾನನು ಹೆಚ್ಚಿನವರನ್ನು ಪ್ರೇರೇಪಿಸಿದ್ದಾನೆ.—ಪ್ರಕಟನೆ 12:9 ಓದಿ.

ಮಾನವರ ಸಮಸ್ಯೆಗಳನ್ನು ಯಾರು ಸರಿಪಡಿಸುತ್ತಾರೆ?

ಸೈತಾನನ ಈ ಆಳ್ವಿಕೆ ಹೀಗೆಯೇ ಮುಂದುವರಿಯಲು ದೇವರು ಬಿಡುತ್ತಾನಾ? ಖಂಡಿತವಾಗಿಯೂ ಇಲ್ಲ. ಸೈತಾನನು ಸೃಷ್ಟಿಸಿರುವ ಕೆಟ್ಟ ವಿಷಯಗಳನ್ನು ದೇವರು ಯೇಸುವಿನ ಮೂಲಕ ಸರ್ವನಾಶ ಮಾಡುತ್ತಾನೆ.—1 ಯೋಹಾನ 3:8 ಓದಿ.

ದೇವರಿಂದ ಶಕ್ತಿ, ಅಧಿಕಾರವನ್ನು ಪಡೆದ ಯೇಸು ಸೈತಾನನನ್ನು ನಿರ್ನಾಮ ಮಾಡುತ್ತಾನೆ. (ರೋಮನ್ನರಿಗೆ 16:20) ಅದಾದನಂತರ ಸ್ವತಃ ದೇವರೇ ಮಾನವರನ್ನು ಆಳುತ್ತಾನೆ. ಮಾನವರು ಶಾಂತಿ ಮತ್ತು ಸಂತೋಷದಿಂದಿರಬೇಕೆಂಬ ತನ್ನ ಉದ್ದೇಶವನ್ನು ಆಗ ನೆರವೇರಿಸುತ್ತಾನೆ.—ಪ್ರಕಟನೆ 21:3-5 ಓದಿ. (w14-E 05/01)

ಹೆಚ್ಚಿನ ಮಾಹಿತಿ ಈ ಪುಸ್ತಕದ ಅಧ್ಯಾಯ 3⁠ರಲ್ಲಿ ಸಿಗುತ್ತದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ಇದನ್ನು www.jw.orgನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ