ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 4/1 ಪು. 3
  • ಭ್ರಷ್ಟ ಸರಕಾರಗಳ ಅಟ್ಟಹಾಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭ್ರಷ್ಟ ಸರಕಾರಗಳ ಅಟ್ಟಹಾಸ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ದೇವರ ಸರಕಾರ​—⁠ಭ್ರಷ್ಟಾಚಾರವಿಲ್ಲದ ಸರಕಾರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಭ್ರಷ್ಟಾಚಾರವಿಲ್ಲದ ಒಂದು ಲೋಕದ ವಾಗ್ದಾನ
    ಕಾವಲಿನಬುರುಜು—1995
  • ಪವಿತ್ರಾತ್ಮದ ಕತ್ತಿಯಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಇಷ್ಟೊಂದು ಭ್ರಷ್ಟಾಚಾರ ಏಕೆ ಇದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 4/1 ಪು. 3
ಲಂಚ ತೆಗೆದುಕೊಳ್ಳುತ್ತಿರುವ ಭ್ರಷ್ಟ ಪೊಲೀಸ್‌

ಮುಖಪುಟ ಲೇಖನ | ಭ್ರಷ್ಟಾಚಾರಕ್ಕೆ ಕೊನೆ ಇದೆಯಾ?

ಭ್ರಷ್ಟ ಸರಕಾರಗಳ ಅಟ್ಟಹಾಸ

ಸರಕಾರದ ಅಧಿಕಾರಿಗಳು ಸ್ವಂತ ಲಾಭಕ್ಕಾಗಿ ತಮ್ಮ ಅಧಿಕಾರವನ್ನು ತಪ್ಪಾಗಿ ಬಳಸಿಕೊಳ್ಳುವುದನ್ನು ಭ್ರಷ್ಟ ಆಡಳಿತ ಎನ್ನುತ್ತಾರೆ. ಭ್ರಷ್ಟಾಚಾರವೆಂಬ ಸಮಸ್ಯೆ ಇತ್ತೀಚೆಗೆ ತಲೆ ಎತ್ತಿದ್ದಲ್ಲ, ಸುಮಾರು 3,500 ವರ್ಷಗಳ ಹಿಂದೆಯೇ ಬೈಬಲಿನಲ್ಲಿ ಇದನ್ನು ತಿಳಿಸಲಾಗಿತ್ತು. ನ್ಯಾಯ ವಿಚಾರಣೆ ಮಾಡುವಾಗ ಲಂಚ ತೆಗೆದುಕೊಳ್ಳಬಾರದು ಎಂಬ ನಿಯಮ ಆಗಲೇ ಇತ್ತು. (ವಿಮೋಚನಕಾಂಡ 23:8) ಭ್ರಷ್ಟಾಚಾರ ಅಂದರೆ ಲಂಚ ತೆಗೆದುಕೊಳ್ಳುವುದು ಮಾತ್ರ ಅಲ್ಲ. ಅಧಿಕಾರಿಗಳು ವಸ್ತುಗಳನ್ನು ಕದಿಯುವುದು, ತಮಗಿರುವ ಸೌಲಭ್ಯಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳುವುದು, ಸರಕಾರದ ಹಣವನ್ನು ದೋಚಿಕೊಳ್ಳುವುದು ಸಹ ಭ್ರಷ್ಟಾಚಾರವೇ. ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಿಸುತ್ತಾ ತಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಸರಕಾರಿ ಸೌಲಭ್ಯಗಳನ್ನು ಕೊಡಿಸುವುದು ಸಹ ಇದರಲ್ಲಿ ಸೇರಿದೆ.

ಸರಕಾರದಲ್ಲೇ ಅಲ್ಲ, ಎಲ್ಲಾ ಸಂಸ್ಥೆಗಳಲ್ಲೂ ಭ್ರಷ್ಟಾಚಾರ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸರಕಾರದಲ್ಲಿ ಇತರ ಎಲ್ಲಾ ಸಂಸ್ಥೆಗಳಿಗಿಂತ ಹೆಚ್ಚು ಭ್ರಷ್ಟಾಚಾರ ಕಾಣಸಿಗುತ್ತದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆ ಭ್ರಷ್ಟಾಚಾರದ ಕುರಿತು 2013⁠ರಲ್ಲಿ ಒಂದು ಆಸಕ್ತಿಯ ವಿಷಯವನ್ನು ವರದಿಸಿತು. ಅದೇನೆಂದರೆ, ಜನರ ಅಭಿಪ್ರಾಯಕ್ಕನುಸಾರ ರಾಜಕೀಯ ಪಕ್ಷಗಳು, ಪೊಲೀಸ್‌ ಇಲಾಖೆಗಳು, ಸರಕಾರಿ ಕೆಲಸದಲ್ಲಿರುವವರು, ಶಾಸಕರು, ನ್ಯಾಯಾಧೀಶರು ಮತ್ತು ವಕೀಲರೇ ಹೆಚ್ಚು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಎಷ್ಟು ಹರಡಿದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ:

  • ಆಫ್ರಿಕಾ: 2013⁠ರಲ್ಲಿ, ಭ್ರಷ್ಟಾಚಾರದ ಆರೋಪದಡಿಯಲ್ಲಿ ಬರೋಬ್ಬರಿ 22,000 ಸರಕಾರಿ ಅಧಿಕಾರಿಗಳ ಮೇಲೆ ಕೇಸು ದಾಖಲಿಸಲಾಯಿತು.

  • ದಕ್ಷಿಣ ಅಮೆರಿಕ: 2012⁠ರಲ್ಲಿ ಬ್ರೆಸಿಲ್‌ನ 25 ಮಂದಿ, ತಮ್ಮ ರಾಜಕೀಯ ಪಕ್ಷಕ್ಕೆ ಬೆಂಬಲ ಪಡೆಯಲು ಸರಕಾರದ ಹಣವನ್ನೇ ಉಪಯೋಗಿಸಿದರು ಎಂಬ ವಿಷಯ ಬೆಳಕಿಗೆ ಬಂತು. ಮಂತ್ರಿ ಮಂಡಲಿಯ ಅಧ್ಯಕ್ಷನೂ ಅವರಲ್ಲೊಬ್ಬನಾಗಿದ್ದನು. ಇವನಿಗೆ ಆ ಇಡೀ ದೇಶದಲ್ಲಿ, ಎರಡನೆಯ ಅಧಿಕಾರ ಸ್ಥಾನ ಇರುತ್ತದೆ.

  • ಏಷ್ಯಾ: 1995⁠ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ ಎಂಬಲ್ಲಿ ಒಂದು ದೊಡ್ಡ ಕಟ್ಟಡ ಕುಸಿದು ಬಿದ್ದ ಕಾರಣ 502 ಜನ ಅಮಾಯಕರು ಮೃತಪಟ್ಟರು. ಕಳಪೆ ಗುಣಮಟ್ಟದ ಸಿಮೆಂಟ್‌ ಉಪಯೋಗಿಸಿ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ಆ ಕಟ್ಟಡವನ್ನು ಕಟ್ಟಲಾಗಿತ್ತು. ಕಟ್ಟಡ ಕಟ್ಟುವ ಕಾಂಟ್ರಾಕ್ಟರ್‌ಗಳಿಂದ ಅಧಿಕಾರಿಗಳು ಲಂಚ ಪಡೆದು ಕಡಿಮೆ ಗುಣಮಟ್ಟದ ಕಟ್ಟಡ ಕಟ್ಟಲು ಅನುಮತಿ ನೀಡಿದ್ದರು ಎಂದು ಹೆಚ್ಚಿನ ತನಿಖೆ ನಡೆಸಿದಾಗ ತಿಳಿದು ಬಂತು.

  • ಯುರೋಪ್‌: ‘ಯುರೋಪ್‌ನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರನೇ. ಇದನ್ನು ನೋಡಿದರೆ ಆಘಾತವೇ ಆಗುತ್ತದೆ. ಭ್ರಷ್ಟಾಚಾರವನ್ನು ತೆಗೆದುಹಾಕುತ್ತೇವೆ ಅಂತ ಸರಕಾರಗಳು ಮಾತು ಕೊಡುತ್ತವೆ. ಆದರೆ ಆ ಮಾತನ್ನು ಉಳಿಸಿಕೊಳ್ಳಲು ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ’ ಎಂದು ಯುರೋಪಿಯನ್‌ ಕಮಿಷನ್‌ ಗೃಹ ವ್ಯವಹಾರಗಳ ಆಯುಕ್ತರಾಗಿರುವ ಸಿಸೀಲ್ಯಾ ಮಾಲ್ಮ್‌ಸ್ಟ್ರೋಮ್‌ತಿಳಿಸಿದ್ದಾರೆ.

ರಾಜಕೀಯದಲ್ಲಿ ಭ್ರಷ್ಟಾಚಾರ ಬೇರೂರಿ ಬಿಟ್ಟಿದೆ. ಭ್ರಷ್ಟಾಚಾರ ತಡೆಯಲು “ಮುಖ್ಯವಾಗಿ ಸರಕಾರ ಕಾರ್ಯ ನಡೆಸುವ ವಿಧಾನದಲ್ಲೇ ಬದಲಾವಣೆಯಾಗಬೇಕು” ಎಂದು ಭ್ರಷ್ಟಾಚಾರ ವಿರೋಧಿ ನೀತಿಯ ತಜ್ಞರಾದ ಪ್ರೊಫೆಸರ್‌ ಸೂಸನ್‌ ರೋಸ್‌ ಅಕರ್ಮನ್‌ರು ಬರೆದರು. ಈಗಿನ ಪರಿಸ್ಥಿತಿ ನೋಡಿದರೆ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಕಿತ್ತೆಸೆಯಲು ಸಾಧ್ಯವಾಗುವುದೇ ಇಲ್ಲ ಎಂದನಿಸಬಹುದು. ಆದರೆ ಬೈಬಲ್‌ ಒಂದು ಸಂತೋಷದ ಸುದ್ದಿಯನ್ನು ತಿಳಿಸುತ್ತದೆ. ಅದೇನೆಂದರೆ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೆಸೆಯಲು ಸಾಧ್ಯ! ಅದು ಹೇಗೆ ಸಾಧ್ಯ ಎಂದು ಮುಂದಿನ ಲೇಖನ ತಿಳಿಸುತ್ತದೆ. (w15-E 01/01)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ