ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಡಿಸೆಂಬರ್‌ ಪು. 18
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಚಿಂತೆಮಾಡಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ನಿಮ್ಮ ಹೆತ್ತವರು ಮಾದರಿಯಾಗಿಲ್ಲ ಅಂದ್ರೂ ನೀವು ಯೆಹೋವನ ಸೇವೆ ಮಾಡಬಹುದು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಡಿಸೆಂಬರ್‌ ಪು. 18

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಮತ್ತಾಯ 18:15-17⁠ರಲ್ಲಿ ಯೇಸು ಯಾವ ರೀತಿಯ ಪಾಪದ ಬಗ್ಗೆ ಸಲಹೆ ಕೊಟ್ಟನು?

ಇಲ್ಲಿ ಯೇಸು ಇಬ್ಬರು ಕ್ರೈಸ್ತರು ತಾವಾಗಿಯೇ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದಾನೆ. ಆದರೆ ಕೆಲವೊಂದು ಪಾಪಗಳು ಗಂಭೀರವಾಗಿದ್ದರೆ ಅಂಥವರನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಉದಾಹರಣೆಗೆ, ಸುಳ್ಳು ಅಪವಾದ, ವಂಚನೆ ಇತ್ಯಾದಿ.—ಕಾವಲಿನಬುರುಜು16.05, ಪು. 6-7.

ಬೈಬಲ್‌ ಓದುವಿಕೆಯಿಂದ ಪ್ರಯೋಜನ ಪಡೆಯಲು ನೀವು ಏನು ಮಾಡಬಹುದು?

ತೆರೆದ ಮನಸ್ಸಿಂದ ಓದುತ್ತಾ ಯಾವ ಪಾಠಗಳನ್ನು ಕಲಿಯಬಹುದು ಎಂದು ನೋಡಿ; ‘ಇದನ್ನು ಬೇರೆಯವರಿಗೆ ಸಹಾಯವಾಗುವಂತೆ ಹೇಗೆ ಉಪಯೋಗಿಸಲಿ?’ ಎಂಬಂಥ ಪ್ರಶ್ನೆಗಳನ್ನು ಕೇಳಿಕೊಳ್ಳಿ; ನೀವು ಓದಿದ ವಿಷಯದ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ.—ಕಾವಲಿನಬುರುಜು16.05, ಪು. 24-26.

ಯಾರಾದರೂ ತೀರಿಹೋದರೆ ಅವರನ್ನು ಪುನಃ ನೋಡಲು ಸಾಧ್ಯ ಎಂದು ಕ್ರೈಸ್ತರಿಗೆ ಗೊತ್ತಿರುವುದರಿಂದ ದುಃಖಪಡುವುದು ತಪ್ಪಾ?

ಸತ್ತವರು ಪುನಃ ಬದುಕುತ್ತಾರೆ ಎಂದು ಕ್ರೈಸ್ತರಿಗೆ ಗೊತ್ತಿದ್ದರೂ ಯಾರಾದರೂ ತೀರಿಕೊಂಡಾಗ ತುಂಬ ದುಃಖ, ನೋವು ಆಗುವುದು ಸಹಜ. ಅಬ್ರಹಾಮ ತನ್ನ ಹೆಂಡತಿ ಸತ್ತಾಗ ಗೋಳಾಡಿದ್ದನು. (ಆದಿ. 23:2) ಆದರೆ ಸಮಯ ಹೋಗುತ್ತಾ ಹೋಗುತ್ತಾ ಸಾವಿನ ನೋವು ಕಡಿಮೆ ಆಗುತ್ತದೆ.—ಕಾವಲಿನಬುರುಜು16.3, ಪು. 4.

ಯೆಹೆಜ್ಕೇಲ 9⁠ನೇ ಅಧ್ಯಾಯದಲ್ಲಿ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷ ಯಾರು? ಮತ್ತು ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯಾರು?

ಇವರು ಯೆಹೆಜ್ಕೇಲನ ಸಮಯದಲ್ಲಿ ಯೆರೂಸಲೇಮಿನ ನಾಶನದಲ್ಲಿ ಪಾಲ್ಗೊಂಡ ಮತ್ತು ಅರ್ಮಗೆದೋನಿನಲ್ಲಿ ಸೈತಾನನ ಈ ದುಷ್ಟ ಲೋಕವನ್ನು ನಾಶ ಮಾಡುವುದರಲ್ಲಿ ಪಾಲ್ಗೊಳ್ಳುವ ಸ್ವರ್ಗೀಯ ಸೈನ್ಯವನ್ನು ಪ್ರತಿನಿಧಿಸುತ್ತಾರೆ. ಆಧುನಿಕ ದಿನದ ನೆರವೇರಿಕೆಯಲ್ಲಿ, ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು ಪಾರಾಗಲಿರುವ ಜನರಿಗೆ ಗುರುತು ಹಾಕುವ ಯೇಸು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ.—ಕಾವಲಿನಬುರುಜು16.06, ಪು. 16-17.

ನಮ್ಮ ಜೀವನವನ್ನು ಸರಳಮಾಡುವ ಕೆಲವು ವಿಧಗಳು ಯಾವುವು?

ಅಗತ್ಯವಿರುವ ವಸ್ತುಗಳನ್ನು ಪಟ್ಟಿಮಾಡಿ, ಅಗತ್ಯವಿಲ್ಲದ ವಸ್ತುಗಳಿಗೆ ಹಣ ಸುರಿಯಬೇಡಿ, ಏನು ಖರೀದಿಸಬೇಕು ಮತ್ತು ಎಷ್ಟೆಷ್ಟು ಖರ್ಚುಮಾಡಬೇಕು ಎಂದು ಮೊದಲೇ ನಿರ್ಣಯಿಸಿ, ಬಳಸದ ವಸ್ತುಗಳನ್ನು ಮಾರಿ ಅಥವಾ ಬಿಸಾಡಿಬಿಡಿ, ಸಾಲ ಇದ್ದರೆ ಬೇಗ ತೀರಿಸಿ, ಪಾರ್ಟ್‌ ಟೈಮ್‌ ಕೆಲಸ ಮಾಡಿದರೆ ಸಾಕಾ ಎಂದು ಯೋಚಿಸಿ, ಹೆಚ್ಚು ಸೇವೆ ಮಾಡಲು ಯೋಜನೆ ಮಾಡಿ.—ಕಾವಲಿನಬುರುಜು16.07, ಪು. 10.

ಬೈಬಲ್‌ ಯಾವುದನ್ನು ಚಿನ್ನಕ್ಕಿಂತ ಅಮೂಲ್ಯ ಎಂದು ಹೇಳುತ್ತದೆ?

ದೈವಿಕ ವಿವೇಕ “ಚೊಕ್ಕ ಬಂಗಾರ”ಕ್ಕಿಂತಲೂ ಅಮೂಲ್ಯ ಎಂದು ಯೋಬ 28:12, 15 ಹೇಳುತ್ತದೆ. ನಾವು ವಿವೇಕವನ್ನು ಪಡೆಯಬೇಕಾದರೆ ದೀನರಾಗಿರಬೇಕು ಮತ್ತು ಬಲವಾದ ನಂಬಿಕೆ ಹೊಂದಿರಬೇಕು.—ಕಾವಲಿನಬುರುಜು16.08, ಪು. 18-19.

ಸಹೋದರರು ಗಡ್ಡ ಬಿಡಬಹುದಾ?

ಕೆಲವು ಸ್ಥಳಗಳಲ್ಲಿ ನೀಟಾಗಿ ಟ್ರಿಮ್‌ ಮಾಡಿರುವ ಗಡ್ಡ ಬಿಡುವುದು ತಪ್ಪಿಲ್ಲದೆ ಇರಬಹುದು ಮತ್ತು ಇಂಥ ವ್ಯಕ್ತಿ ಸುವಾರ್ತೆ ಸಾರಿದಾಗ ಜನರಿಗೆ ಏನೂ ಕಷ್ಟ ಆಗದಿರಬಹುದು. ಆದರೂ ಅಲ್ಲಿನ ಸಹೋದರರು ಗಡ್ಡ ಬಿಡುವುದು ಬೇಡ ಎಂದು ತೀರ್ಮಾನಿಸಬಹುದು. (1 ಕೊರಿಂ. 8:9) ಇನ್ನು ಕೆಲವು ಸ್ಥಳಗಳಲ್ಲಿ ಗಂಡಸರು ಗಡ್ಡ ಬಿಡುವುದಿಲ್ಲ. ಅಂಥ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ಗಡ್ಡ ಬಿಡುವುದಿಲ್ಲ.—ಕಾವಲಿನಬುರುಜು16.09, ಪು. 21.

ದಾವೀದ ಗೊಲ್ಯಾತರ ಯುದ್ಧ ನಿಜವಾಗಲೂ ನಡೆದಿತ್ತಾ?

ನಮ್ಮ ಈ ದಿನಗಳಲ್ಲಿ ಅತೀ ಎತ್ತರದ ವ್ಯಕ್ತಿ ಎಂದು ದಾಖಲಾಗಿರುವ ವ್ಯಕ್ತಿಗಿಂತ ಗೊಲ್ಯಾತ ಕೇವಲ 15 ಸೆಂಟಿಮೀಟರ್‌ ಹೆಚ್ಚು ಎತ್ತರವಿದ್ದ. ಭೂಅಗೆತಶಾಸ್ತ್ರಜ್ಞರಿಗೆ ‘ದಾವೀದನ ಮನೆತನದ’ ಬಗ್ಗೆ ತಿಳಿಸುವ ಒಂದು ಶಾಸನ ಸಿಕ್ಕಿದೆ. ಅಲ್ಲದೆ, ಯೇಸುವಿನ ಮಾತುಗಳು ಸಹ ದಾವೀದ ನಿಜವಾಗಿ ಇದ್ದನು ಎಂದು ತೋರಿಸುತ್ತದೆ. ಅವರು ಬದುಕಿದ್ದ ಸ್ಥಳಗಳು ಈಗಲೂ ಇವೆ.—ಕಾವಲಿನಬುರುಜು16.4, ಪು. 13.

ಪ್ರಾಯೋಗಿಕ ವಿವೇಕ ಎನ್ನುವುದು ಜ್ಞಾನ ಮತ್ತು ತಿಳುವಳಿಕೆಗಿಂತ ಹೇಗೆ ಭಿನ್ನವಾಗಿದೆ?

ಜ್ಞಾನ ಇರುವ ವ್ಯಕ್ತಿ ಮಾಹಿತಿಯನ್ನು, ವಿಷಯಗಳನ್ನು ಸಂಗ್ರಹಿಸುತ್ತಾನೆ. ತಿಳುವಳಿಕೆ ಇರುವ ವ್ಯಕ್ತಿ ಆ ಮಾಹಿತಿ ಅಥವಾ ವಿಷಯಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಅಂತ ನೋಡುತ್ತಾನೆ. ವಿವೇಕ ಇರುವ ವ್ಯಕ್ತಿ ಜ್ಞಾನ ಮತ್ತು ತಿಳುವಳಿಕೆಯನ್ನು ಬಳಸಿ ಹೇಗೆ ಅದನ್ನು ಕಾರ್ಯರೂಪಕ್ಕೆ ಹಾಕುತ್ತಾನೆ.—ಕಾವಲಿನಬುರುಜು16.10, ಪು. 18.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ