ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp18 ನಂ. 1 ಪು. 8-9
  • 1 ಸಮಸ್ಯೆಗಳಿಂದ ದೂರವಿರಲು ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 ಸಮಸ್ಯೆಗಳಿಂದ ದೂರವಿರಲು ಸಹಾಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕುಡಿತ
  • ಅನೈತಿಕತೆ
  • ಚೆಲ್ಲಾಟ ಆಡೋದು (Flirting) ಸರೀನಾ?
    ಯುವಜನರ ಪ್ರಶ್ನೆಗಳು
  • ಪ್ರಣಯಚೇಷ್ಟೆ ಮಾಡುವುದರಲ್ಲಿ ತಪ್ಪೇನಿದೆ?
    ಎಚ್ಚರ!—1998
  • ಕುಡಿಯೋದ್ರ ಬಗ್ಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ
    ಸುಖೀ ಸಂಸಾರಕ್ಕೆ ಸಲಹೆಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
wp18 ನಂ. 1 ಪು. 8-9
ಒಬ್ಬ ಮಹಿಳೆ ತುಂಬ ಕುಡಿಯುತ್ತಿದ್ದಾಳೆ, ಸ್ವಲ್ಪ ಸಮಯ ನಂತರ ಬೈಬಲ್‌ ತತ್ವಗಳ ಬಗ್ಗೆ ಅಧ್ಯಯನಮಾಡುತ್ತಿದ್ದಾಳೆ

1 ಸಮಸ್ಯೆಗಳಿಂದ ದೂರವಿರಲು ಸಹಾಯ

ಬೈಬಲಿನ ಸಲಹೆ ದೇವರಿಂದ ಬಂದದ್ದಾಗಿದೆ ಮತ್ತು “ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ . . . ಉಪಯುಕ್ತವಾಗಿದೆ” ಎಂದು ಬೈಬಲೇ ತಿಳಿಸುತ್ತದೆ. (2 ತಿಮೊಥೆಯ 3:16) ಆದರೆ ಅದು ನಿಜನಾ? ಜೀವನದ ಕೆಲವು ದೊಡ್ಡ ಸಮಸ್ಯೆಗಳಿಂದ ದೂರವಿರಲು ಬೈಬಲಿನ ವಿವೇಕ ಕೆಲವರಿಗೆ ಹೇಗೆ ಸಹಾಯ ಮಾಡಿದೆ ಎಂದು ಗಮನಿಸಿ.

ಕುಡಿತ

ಹಿಂದಿನ ಲೇಖನದಲ್ಲಿ ತಿಳಿಸಲಾದ ಡೆಲ್ಫಿನ್‌ಗೆ, ತನ್ನ ಚಿಂತೆಗಳಿಂದಾಗಿ ಕುಡಿಯುವುದನ್ನು ಜಾಸ್ತಿ ಮಾಡಿದ್ದೇನೆ ಎಂದು ಅನಿಸಿತು. ಹಿತಮಿತವಾಗಿ ಕುಡಿಯುವುದು ತಪ್ಪೆಂದು ಬೈಬಲ್‌ ಹೇಳುವುದಿಲ್ಲವಾದರೂ “ಕುಡುಕರಲ್ಲಿ . . . ಸೇರದಿರು” ಎನ್ನುತ್ತದೆ. (ಜ್ಞಾನೋಕ್ತಿ 23:20) ಅತಿಯಾಗಿ ಕುಡಿಯುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತವೆ, ಸಂಬಂಧಗಳು ಮುರಿದು ಹೋಗುತ್ತವೆ ಅಥವಾ ಹಾಳಾಗುತ್ತವೆ. ಪ್ರತಿ ವರ್ಷ ಕುಡಿತದಿಂದಾಗಿ ಲಕ್ಷಗಟ್ಟಲೆ ಜನ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಜನರು ಬೈಬಲಿನ ವಿವೇಕಯುತ ಸಲಹೆಯನ್ನು ಪಾಲಿಸಿದರೆ ಈ ಸಮಸ್ಯೆಗಳಿಂದ ದೂರವಿರಬಹುದು.

ಡೆಲ್ಫಿನ್‌ ಬೈಬಲಿನ ಸಲಹೆಯನ್ನು ಪಾಲಿಸಿದಳು. “ಮದ್ಯದಿಂದ ನನ್ನ ಚಿಂತೆ ಪರಿಹಾರ ಆಗ್ತಾ ಇಲ್ಲ ಅಂತ ನನಗೆ ಗೊತ್ತಾಯಿತು. ಫಿಲಿಪ್ಪಿ 4:6, 7​ರಲ್ಲಿರುವ ವಿವೇಕಯುತ ಸಲಹೆಯನ್ನು ಅನ್ವಯಿಸಿಕೊಂಡೆ. ಅಲ್ಲಿ, ‘ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ . . . ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ’ ಅಂತ ಇದೆ. ಪ್ರತಿ ರಾತ್ರಿ ನನ್ನ ಚಿಂತೆ ಹೆಚ್ಚಾಗ್ತಿದೆ, ತಲೆಯಲ್ಲಿ ಏನೇನೋ ಯೋಚನೆ ಓಡ್ತಿದೆ ಅಂತ ಅನಿಸಿದಾಗೆಲ್ಲ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದೆ. ನನ್ನ ಕೋಪ, ನೋವು, ದುಃಖ, ದಿಕ್ಕೇ ಕಾಣದ ಸ್ಥಿತಿ, ಹೀಗೆ ನನ್ನೆಲ್ಲಾ ಭಾವನೆಗಳನ್ನು ಆತನಲ್ಲಿ ತೋಡಿಕೊಳ್ಳುತ್ತಿದ್ದೆ. ಸಕಾರಾತ್ಮಕವಾಗಿ ಯೋಚಿಸುವುದು ಹೇಗೆ ಅಂತ ತಿಳಿದುಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಬೇಡ್ತಿದ್ದೆ. ಬೆಳಗ್ಗೆ, ಆ ಭಾವನೆಗಳು ನನ್ನಲ್ಲಿ ಬರದಂತೆ ಜಾಗ್ರತೆ ವಹಿಸುತ್ತಿದ್ದೆ. ನನ್ನತ್ರ ಏನಿಲ್ಲವೋ ಅದರ ಮೇಲಲ್ಲ, ಬದಲಿಗೆ ಏನಿದೆಯೋ ಅದರ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸಲು ಪ್ರಾರ್ಥನೆಮಾಡುವ ಈ ರೂಢಿಯಿಂದಾಗಿ ಸಾಧ್ಯವಾಯಿತು. ಇನ್ನು ಯಾವತ್ತೂ ಕುಡಿಯಬಾರದು ಅಂತ ನಿರ್ಧಾರ ಮಾಡಿದೆ. ಯಾಕೆಂದರೆ, ಈಗ ನನಗೆ ಸಿಕ್ಕಿರುವ ನೆಮ್ಮದಿ ತುಂಬ ಅಮೂಲ್ಯ, ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಲು ಬಯಸಲ್ಲ.”

ಅನೈತಿಕತೆ

ತೀವ್ರ ನೋವು ಮತ್ತು ಕಷ್ಟಗಳಿಗೆ ಒಂದು ಪ್ರಮುಖ ಕಾರಣ ಅನೈತಿಕತೆ. ಅನೈತಿಕತೆಗೆ ನಡೆಸುವಂಥ ವಿಷಯಗಳು, ಉದಾಹರಣೆಗೆ ಚೆಲ್ಲಾಟ ಮತ್ತು ಅಶ್ಲೀಲ ಸಾಹಿತ್ಯಗಳಿಂದ ದೂರವಿರಲು ಬೈಬಲ್‌ ತತ್ವಗಳು ಸಹಾಯಮಾಡುತ್ತವೆ. “ಚೆಲ್ಲಾಟವಾಡುವುದು ತುಂಬ ಸುಲಭವಾಗಿತ್ತು” ಎನ್ನುತ್ತಾನೆ ಸ್ಯಾಮ್ವೇಲ್‌ ಎಂಬ ಯುವಕ. ಅವನು ಮುಂದೆ ಹೇಳಿದ್ದು: “ಕೆಲವೊಮ್ಮೆ ಒಬ್ಬ ವ್ಯಕ್ತಿಯ ಕಡೆಗೆ ನಾನು ಆಕರ್ಷಿತನಾಗಿರದಿದ್ದರೂ ಅವರಿಗೆ ನಾನು ಇಷ್ಟ ಅಂತ ಗೊತ್ತಾದಾಗ ಅವರ ಜೊತೆ ಚೆಲ್ಲಾಟವಾಡುವುದು ಖುಷಿ ಕೊಡುತ್ತಿತ್ತು.” ಚೆಲ್ಲಾಟವಾಡುವ ಯೋಚನೆಯೇ ಇಲ್ಲದಿದ್ದಾಗಲೂ ಚೆಲ್ಲಾಟವಾಡುತ್ತಾನೆಂಬ ಆರೋಪವನ್ನು ಅನೇಕ ಸಲ ಸ್ಯಾಮ್ವೇಲ್‌ ಮೇಲೆ ಹಾಕಲಾಯಿತು. ಹಾಗಾಗಿ ಅವನು ಬೇಕುಬೇಕೆಂದೇ ಚೆಲ್ಲಾಟವಾಡಲು ನಿರ್ಧರಿಸಿದನು. ಆದರೆ ಅವನ ಮನಸ್ಸಾಕ್ಷಿ ಚುಚ್ಚಲಾರಂಭಿಸಿತು. “ಚೆಲ್ಲಾಟವಾಡುವುದು ಹಾನಿಕರ, ಯಾಕೆಂದರೆ ಅದರಿಂದ ತುಂಬ ಸ್ವಾರ್ಥ ಮನೋಭಾವ ಬೆಳೆಯುತ್ತೆ” ಅಂತ ಅವನು ಈಗ ಹೇಳುತ್ತಾನೆ.

ಯುವಜನರಿಗಾಗಿ jw.org ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಲೇಖನವನ್ನು ಸ್ಯಾಮ್ವೇಲ್‌ ಓದಿದನು. ಅವನು ಜ್ಞಾನೋಕ್ತಿ 20:11​ರ ಬಗ್ಗೆ ಯೋಚಿಸಿದನು. “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು” ಅಂತ ಅಲ್ಲಿದೆ. ಇದರಿಂದ ಸ್ಯಾಮ್ವೇಲ್‌ಗೆ ಹೇಗೆ ಸಹಾಯವಾಯಿತು? ಚೆಲ್ಲಾಟವಾಡುವುದು ಶುದ್ಧವೂ ಅಲ್ಲ, ಸತ್ಯವೂ ಅಲ್ಲ ಅಂದರೆ ಸರಿಯಾದದ್ದಲ್ಲ ಅಂತ ಅವನಿಗೆ ಅರ್ಥವಾಯಿತು. “ಚೆಲ್ಲಾಟವಾಡುವ ಯುವ ವ್ಯಕ್ತಿಯಲ್ಲಿ ಕೆಟ್ಟ ಗುಣಗಳು ಬೆಳೆಯುತ್ತವೆ. ಇದರಿಂದ ಮುಂದೆ ಅವರು ಒಳ್ಳೇ ವಿವಾಹ ಸಂಗಾತಿ ಆಗಲ್ಲ. ಮುಂದೆ ನಾನು ಮದುವೆಯಾದಾಗ ಬೇರೊಬ್ಬ ಸ್ತ್ರೀಯೊಟ್ಟಿಗೆ ಚೆಲ್ಲಾಟವಾಡುವುದನ್ನು ನನ್ನ ಹೆಂಡತಿ ನೋಡಿದರೆ ಅವಳಿಗೆ ಹೇಗನಿಸಬಹುದು ಅಂತ ಯೋಚಿಸಲು ಆರಂಭಿಸಿದೆ. ಈ ಅಭ್ಯಾಸದಿಂದ ಹಾನಿ ಇದೆ ಅಂತ ಆಗ ಅರ್ಥ ಆಯ್ತು. ಚೆಲ್ಲಾಟ ಆಡೋದು ಸುಲಭ ಅಂದಮಾತ್ರಕ್ಕೆ ಅದು ಸರಿಯಾಗಿದೆ ಎಂದೇನಿಲ್ಲ.” ಸ್ಯಾಮ್ವೇಲ್‌ ಬದಲಾದನು. ಚೆಲ್ಲಾಟವಾಡುವುದರಿಂದ ದೂರವಿರುವುದು ಅವನಿಗೆ ಅನೈತಿಕತೆಯಿಂದ ದೂರವಿರಲು ಸಹಾಯ ಮಾಡಿದೆ.

ಆ್ಯಂಟೊನ್ಯೊ ಎಂಬವನಿಗೆ ಅನೈತಿಕತೆ ನಡೆಸುವ ಅಪಾಯ ಇನ್ನೂ ಹೆಚ್ಚಿತ್ತು. ಯಾಕೆಂದರೆ ಅವನಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ಇತ್ತು. ಅವನು ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದರೂ ಈ ಚಟ ಬಿಡಲಿಕ್ಕಾಗುತ್ತಿರಲಿಲ್ಲ. ಪದೇಪದೇ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದನು. 1 ಪೇತ್ರ 5:8​ರ ಬಗ್ಗೆ ಯೋಚಿಸುವುದರಿಂದ ಸಹಾಯವಾಯಿತು ಎಂದು ಅವನು ಹೇಳುತ್ತಾನೆ. ಅಲ್ಲಿ, “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಅಂತ ತಿಳಿಸಲಾಗಿದೆ. ಆ್ಯಂಟೊನ್ಯೊ ಹೇಳುವುದು: “ಈ ಲೋಕದಲ್ಲಿ ಎಲ್ಲಾ ಕಡೆ ಅಶ್ಲೀಲ ಚಿತ್ರಗಳಿವೆ. ಅವುಗಳನ್ನು ನಮ್ಮ ಮನಸ್ಸಿನಿಂದ ಅಳಿಸಿಹಾಕುವುದು ತುಂಬ ಕಷ್ಟ. ಈ ಪ್ರಲೋಭನೆಯ ಹಿಂದೆ ಯಾರ ಕೈಯಿದೆ ಎಂದು ಯೋಚಿಸಲು ಆ ವಚನ ನನಗೆ ಸಹಾಯ ಮಾಡಿತು. ಅಶ್ಲೀಲ ಚಿತ್ರಗಳ ಮೂಲನು ಪಿಶಾಚನು ಎಂದು ಅವು ಕಣ್ಣಿಗೆ ಬಿದ್ದಾಕ್ಷಣ ನೆನಪಿಸಿಕೊಳ್ಳಲು ನಾನು ಕಲಿಯಬೇಕಾಯಿತು. ‘ಸ್ವಸ್ಥಚಿತ್ತನಾಗಿದ್ದು, ಎಚ್ಚರವಾಗಿರಲು’ ನನಗೆ ಯೆಹೋವನು ಮಾತ್ರ ಸಹಾಯ ಮಾಡಬಲ್ಲನು ಎಂದು ನನಗೀಗ ಗೊತ್ತು. ಇದರಿಂದ ನನ್ನ ಮನಸ್ಸಿನ ಮೇಲೆ, ಹೃದಯದ ಮೇಲೆ, ನನ್ನ ವಿವಾಹ ಜೀವನದ ಮೇಲೆ ಆಗುತ್ತಿರುವ ಆಕ್ರಮಣಗಳ ವಿರುದ್ಧ ಹೋರಾಡಿ ಗೆಲ್ಲಬಲ್ಲೆ.” ಆ್ಯಂಟೊನ್ಯೊ ಬೇಕಾದ ಸಹಾಯ ಪಡೆದುಕೊಂಡನು ಮತ್ತು ಕೊನೆಗೂ ಈ ಕೆಟ್ಟ ಚಟ ಬಿಟ್ಟುಬಿಟ್ಟನು. ಇನ್ನೂ ಹೆಚ್ಚಿನ ಸಮಸ್ಯೆಗಳು ಆಗದಂತೆ ಅವನಿಗೆ ಇದು ಸಹಾಯ ಮಾಡಿದೆ.

ಗಂಭೀರ ಸಮಸ್ಯೆಗಳಿಂದ ದೂರವಿರಲು ಬೈಬಲ್‌ ಉತ್ತಮ ಸಲಹೆ ನೀಡುತ್ತದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಈಗಾಗಲೇ ಸಮಸ್ಯೆಗಳು ಬಂದು ಬಲವಾಗಿ ಬೇರೂರಿದ್ದರೆ ಏನು ಮಾಡಬಹುದು? ಈ ವಿಷಯದಲ್ಲಿ ಬೈಬಲ್‌ ನಮಗೆ ಹೇಗೆ ಸಹಾಯ ಮಾಡುತ್ತದೆಂದು ಈಗ ನೋಡೋಣ.

ಬೈಬಲಿನ ಮಾರ್ಗದರ್ಶನ ನಮಗೆ ಕೆಲವು ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುತ್ತದೆ

ಒಬ್ಬ ಮಹಿಳೆ ಮದ್ಯವನ್ನಲ್ಲ, ಬೇರೆ ಪಾನೀಯ ಕುಡಿಯುತ್ತಿದ್ದಾಳೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ