ಪೀಠಿಕೆ
ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ?
ಒಂದು ವಿಪತ್ತು ಸಂಭವಿಸುವಾಗ ಅಥವಾ ಜನರು ನರಳಿ ಸಾಯುವಾಗ, ದೇವರು ಇದನ್ನೆಲ್ಲಾ ನೋಡುತ್ತಾನಾ ಅಥವಾ ಆತನಿಗೆ ಇದರ ಬಗ್ಗೆ ಚಿಂತೆ ಇದೆಯಾ ಎಂಬ ಸಂಶಯ ನಮಗೆ ಬರಬಹುದು. ಆದರೆ ಬೈಬಲ್ ಹೀಗನ್ನುತ್ತದೆ:
“ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ; ಆದರೆ ಯೆಹೋವನ ಮುಖವು ಕೆಟ್ಟದ್ದನ್ನು ಮಾಡುವವರ ವಿರುದ್ಧವಾಗಿದೆ.”—1 ಪೇತ್ರ 3:12.
ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ದೇವರು ನಮಗೆ ಹೇಗೆ ಸಹಾಯ ಮಾಡುತ್ತಾನೆ ಮತ್ತು ಆತನು ಎಲ್ಲ ಕಷ್ಟಗಳನ್ನು ತೆಗೆದುಹಾಕಲು ಏನು ಮಾಡಲಿದ್ದಾನೆ ಎಂದು ತಿಳಿಸುತ್ತದೆ.