ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಏಪ್ರಿಲ್‌ ಪು. 32
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅನುರೂಪ ಮಾಹಿತಿ
  • ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಆವೃತ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಎ3 ನಮಗೆ ಬೈಬಲ್‌ ಹೇಗೆ ಸಿಕ್ತು?
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಎ1 ಬೈಬಲ್‌ ಭಾಷಾಂತರದ ಹಿಂದಿರೋ ತತ್ವಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಏಪ್ರಿಲ್‌ ಪು. 32

ವಾಚಕರಿಂದ ಪ್ರಶ್ನೆಗಳು

“ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ”ದ 2013​ರ ಪರಿಷ್ಕೃತ ಆವೃತ್ತಿಯಲ್ಲಿ* ಕೀರ್ತನೆ 144:12-15​ರಲ್ಲಿರುವ ಮಾತುಗಳನ್ನು ದೇವಜನರಿಗೆ ಅನ್ವಯಿಸಲಾಗಿದೆ. ಆದರೆ ಹಿಂದಿನ ಆವೃತ್ತಿಯಲ್ಲಿ ಇದನ್ನು 11​ನೇ ವಚನದಲ್ಲಿ ತಿಳಿಸಲಾಗಿರುವ ದುಷ್ಟ ಅನ್ಯಜನಗಳಿಗೆ ಅನ್ವಯಿಸಿ ಮಾತಾಡಲಾಗಿತ್ತು. ಈ ಬದಲಾವಣೆ ಮಾಡಲು ಕಾರಣವೇನು?

  1. ಪದದ ಅರ್ಥ ಮತ್ತು ವ್ಯಾಕರಣದ ಮೇಲಾಧರಿಸಿ ಬದಲಾವಣೆ ಮಾಡಲಾಗಿದೆ. ಕೀರ್ತನೆ 144:12-15 ಮತ್ತು ಅದರ ಹಿಂದಿನ ವಚನಗಳನ್ನು ಜೋಡಿಸುವ 12​ನೇ ವಚನದ ಮೊದಲನೇ ಪದಕ್ಕಿರುವ ಅರ್ಥದ ಕಡೆ ನಾವು ಗಮನಕೊಡಬೇಕು. ಅಲ್ಲಿ ಬಳಸಲಾಗಿರುವ ಹೀಬ್ರು ಪದ ಅಶೆರ್‌. ಈ ಪದವನ್ನು ಅನೇಕ ವಿಧಗಳಲ್ಲಿ ಭಾಷಾಂತರಿಸಬಹುದು. ಉದಾಹರಣೆಗೆ, ಇದನ್ನು ಪದಗಳ ಮಧ್ಯೆಯಿರುವ ಸಂಬಂಧವನ್ನು ಸೂಚಿಸುವ ಸರ್ವನಾಮವಾಗಿ ಅಂದರೆ “ಅವರು” ಅಥವಾ “ಅವರಿಗೆ” ಎಂದು ಭಾಷಾಂತರಿಸಬಹುದು. ನಾವು ಹಿಂದೆ ಈ ಅರ್ಥದಲ್ಲಿ ಭಾಷಾಂತರ ಮಾಡಿದ್ದೆವು. ಈ ಕಾರಣದಿಂದ 12-14​ನೇ ವಚನಗಳಲ್ಲಿರುವ ಒಳ್ಳೇ ವಿಷಯಗಳನ್ನು ಹಿಂದಿನ ವಚನಗಳಲ್ಲಿ ತಿಳಿಸಲಾಗಿರುವ ದುಷ್ಟ ಅನ್ಯಜನಗಳಿಗೆ ಅನ್ವಯಿಸಲಾಗಿತ್ತು. ಆದರೆ ಅಶೆರ್‌ ಪದವನ್ನು ಪರಿಣಾಮ ಅಥವಾ ಫಲಿತಾಂಶವನ್ನು ಸೂಚಿಸುವ ರೀತಿಯಲ್ಲಿ ಸಹ ಬಳಸಬಹುದು. ಅಂದರೆ “ಹಾಗಾದರೆ” “ಹಾಗಾಗಿ” ಅಥವಾ “ಆಗ” ಎಂಬರ್ಥ ಕೊಡುವ ರೀತಿಯಲ್ಲಿ ಭಾಷಾಂತರಿಸಬಹುದು. ಆದ್ದರಿಂದ 2013​ರ ಆವೃತ್ತಿಯಲ್ಲಿ “ಆಗ” ಎಂದು ಭಾಷಾಂತರಿಸಲಾಗಿದೆ.

  2. ಬದಲಾವಣೆ ಮಾಡಿರುವುದರಿಂದ ಈ ಕೀರ್ತನೆಯಲ್ಲಿ ಮುಂದೆ ಕೊಡಲಾಗಿರುವ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. 12​ನೇ ವಚನದಲ್ಲಿ “ಆಗ” ಎಂಬ ಪದವನ್ನು ಬಳಸಿರುವುದರಿಂದ 12​​ರಿಂದ 14​ನೇ ವಚನಗಳಲ್ಲಿ ತಿಳಿಸಲಾಗಿರುವ ಆಶೀರ್ವಾದಗಳು ಒಳ್ಳೇ ಜನರಿಗೆ ಸಿಗುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ಒಳ್ಳೆ ಜನರು, ತಮ್ಮನ್ನು ದುಷ್ಟರ “ಕೈಯಿಂದ . . . ಬಿಡಿಸಿ ಕಾಪಾಡು” ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. (ವಚನ 11) ಇದರಿಂದಾಗಿ 15​ನೇ ವಚನವನ್ನು ಅರ್ಥಮಾಡಿಕೊಳ್ಳುವ ವಿಧವೂ ಬದಲಾಗಿದೆ. ಈ ವಚನದಲ್ಲಿರುವ “ಧನ್ಯರು” “ಭಾಗ್ಯವಂತರು” ಅನ್ನುವ ಎರಡು ಪದಗಳನ್ನೂ ಈಗ ಸಕಾರಾತ್ಮಕ ಅರ್ಥದಲ್ಲಿ, ಒಂದನ್ನೊಂದು ಬೆಂಬಲಿಸುವ ರೀತಿಯಲ್ಲಿ ಕೊಡಲಾಗಿದೆ. ಅಂದರೆ ಧನ್ಯರು ಮತ್ತು ಭಾಗ್ಯವಂತರು ಬೇರೆ ಬೇರೆ ಜನರಲ್ಲ, “ಯಾರಿಗೆ ಯೆಹೋವನು ದೇವರಾಗಿರುತ್ತಾನೋ” ಆ ಜನರನ್ನೇ ಈ ಎರಡೂ ಪದಗಳು ಸೂಚಿಸುತ್ತವೆ. ಹೀಬ್ರು ಮೂಲಪ್ರತಿಯಲ್ಲಿ ಉದ್ಧರಣ ಚಿಹ್ನೆ ಇರಲಿಲ್ಲ ಅನ್ನುವುದನ್ನು ಸಹ ಮನಸ್ಸಲ್ಲಿಡಿ. ಆದ್ದರಿಂದ ಭಾಷಾಂತರ ಮಾಡುವವರು ಹೀಬ್ರು ಪದ್ಯರೂಪ, ವಚನದ ಪೂರ್ವಾಪರ ಮತ್ತು ಅದಕ್ಕೆ ಸಂಬಂಧಿಸಿದ ಬೇರೆ ವಚನಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಸರಿಯಾಗಿ ಭಾಷಾಂತರಿಸಬೇಕು.

  3. ಈ ಬದಲಾವಣೆಯು ದೇವರ ನಂಬಿಗಸ್ತ ಜನರಿಗೆ ಆಶೀರ್ವಾದ ಸಿಗುತ್ತದೆ ಎಂದು ತಿಳಿಸುವ ಬೇರೆ ವಚನಗಳಿಗೆ ಸಹಮತದಲ್ಲಿದೆ. ಅಶೆರ್‌ ಪದವನ್ನು ಈಗ ಇನ್ನೊಂದು ಅರ್ಥದಲ್ಲಿ ಹಾಕಿರುವುದರಿಂದ ದಾವೀದನಲ್ಲಿ ಎಷ್ಟು ಬಲವಾದ ನಂಬಿಕೆ ಇತ್ತೆಂದು ಗೊತ್ತಾಗುತ್ತದೆ. ದೇವರು ಇಸ್ರಾಯೇಲ್‌ ಜನಾಂಗವನ್ನು ಅವರ ವೈರಿಗಳಿಂದ ಬಿಡಿಸಿದ ಬಳಿಕ ಅವರಿಗೆ ಸಂತೋಷ, ಸಮೃದ್ಧಿಯನ್ನು ಕೊಡುವನೆಂದು ದಾವೀದನು ನಂಬಿದ್ದನು. (ಯಾಜ. 26:9, 10; ಧರ್ಮೋ. 7:13; ಕೀರ್ತ. 128:1-6) ಧರ್ಮೋಪದೇಶಕಾಂಡ 28:4 ಕೂಡ ದೇವಜನರಿಗೆ ಸಿಗುವ ಆಶೀರ್ವಾದದ ಬಗ್ಗೆ ಮಾತಾಡುತ್ತಾ “ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವದು” ಎಂದು ಹೇಳುತ್ತದೆ. ಈ ವಿಷಯ ದಾವೀದನ ಮಗ ಸೊಲೊಮೋನನ ಸಮಯದಲ್ಲೇ ನೆರವೇರಿತು. ಜನರು ಆಗ ತುಂಬ ಶಾಂತಿ, ಸಂತೃಪ್ತಿಯಿಂದ ಜೀವನ ನಡೆಸಿದರು. ಇದು ಎಷ್ಟು ಚೆನ್ನಾಗಿತ್ತೆಂದರೆ, ಸೊಲೊಮೋನನ ಆಳ್ವಿಕೆಯನ್ನು ಮುಂದೆ ಬರಲಿರುವ ಮೆಸ್ಸೀಯನ ಆಳ್ವಿಕೆಯ ಮುನ್‌ಛಾಯೆಯಾಗಿ ಮಾತಾಡಲಾಗುತ್ತದೆ.—1 ಅರ. 4:20, 21; ಕೀರ್ತ. 72:1-20.

ಕೀರ್ತನೆ 144​ರಲ್ಲಾಗಿರುವ ಬದಲಾವಣೆಯು ಬೈಬಲ್‌ ಬೋಧನೆಗಳನ್ನು ನಾವು ಅರ್ಥಮಾಡಿಕೊಂಡಿರುವ ರೀತಿಯನ್ನು ಬದಲಾಯಿಸುವುದಿಲ್ಲ. ಬದಲಿಗೆ ದೇವರು ದುಷ್ಟಜನರನ್ನು ತೆಗೆದುಹಾಕಿ ಒಳ್ಳೆಯವರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಕೊಡುವ ವಿಷಯದ ಬಗ್ಗೆ ಮಾತಾಡುತ್ತದೆ. ಆ ಸಮಯಕ್ಕಾಗಿ ಯೆಹೋವನ ಸೇವಕರಾದ ನಾವೆಲ್ಲರೂ ತುಂಬ ಆಸೆಯಿಂದ ಕಾಯುತ್ತಿದ್ದೇವೆ.—ಕೀರ್ತ. 37:10, 11.

[ಪುಟ 32​ರಲ್ಲಿರುವ ಚಿತ್ರ]

* ಇದಿನ್ನೂ ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ