ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 2 ಪು. 8-9
  • ಸಂಗಾತಿಯು ದ್ರೋಹಬಗೆದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಗಾತಿಯು ದ್ರೋಹಬಗೆದಾಗ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು
  • ಸಂಕಷ್ಟದಲ್ಲಿರುವವರಿಗೆ ಸಾಂತ್ವನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಬದುಕು ಬದಲಾದ ವಿಧ
    2011ರ ಇಂಗ್ಲಿಷ್‌ ಕಾವಲಿನಬುರುಜುವಿನ ಲೇಖನ
  • 3 ಸಮಸ್ಯೆಗಳನ್ನು ತಾಳಿಕೊಳ್ಳಲು ಸಹಾಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಕುಟುಂಬ ಸಮಸ್ಯೆಗಳ ಕುರಿತು ಚಿಂತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 2 ಪು. 8-9
ಒಬ್ಬ ಸ್ತ್ರೀ ಪ್ರಾರ್ಥಿಸುತ್ತಿದ್ದಾಳೆ

ಸಂಗಾತಿಯು ದ್ರೋಹಬಗೆದಾಗ

“ನನ್ನ ಗಂಡ ನನಗಿಂತ ಚಿಕ್ಕ ವಯಸ್ಸಿನ ಸ್ತ್ರೀ ಸಿಕ್ಕಿದಳೆಂದು ನನ್ನನ್ನು ಬಿಟ್ಟುಹೋಗುವುದಾಗಿ ಹೇಳಿದಾಗ ನನಗೆ ಸಾಯಬೇಕೆಂದು ಅನಿಸಿತು. ಇದು ಅನ್ಯಾಯ ಅಂತ ಅನಿಸಿತು. ಅದರಲ್ಲೂ ಅವರಿಗಾಗಿ ನಾನು ಮಾಡಿದ ತ್ಯಾಗಗಳನ್ನು ನೆನಪಿಸಿಕೊಂಡಾಗ ತುಂಬನೇ ಅನ್ಯಾಯ ಅನಿಸುತ್ತಿತ್ತು.”—ಸ್ಪೇನಿನ ಮರಿಯ.

“ನನ್ನ ಹೆಂಡತಿ ನನ್ನನ್ನು ಬಿಟ್ಟುಹೋದಾಗ ನನ್ನ ದೇಹದ ಒಂದು ಭಾಗವೇ ಸತ್ತುಹೋದಂತೆ ಅನಿಸಿತು. ನಮ್ಮ ಕನಸುಗಳು, ಆಸೆ, ಮತ್ತು ನಮ್ಮ ಯೋಜನೆಗಳು ಎಲ್ಲಾ ನುಚ್ಚುನೂರಾದವು. ಕೆಲವೊಮ್ಮೆ, ನಾನು ಇದರ ಬಗ್ಗೆ ಚಿಂತೆ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಅಂತ ಅನಿಸುತ್ತಿತ್ತು. ಆದರೆ ಮರುಕ್ಷಣವೇ ಚಿಂತೆಯಲ್ಲಿ ಮುಳುಗಿರುತ್ತಿದ್ದೆ.”—ಸ್ಪೇನಿನ ಬಿಲ್‌.

ಸಂಗಾತಿ ದ್ರೋಹಬಗೆದಾಗ ಹೃದಯ ಒಡೆದು ಮಾತಿನಲ್ಲಿ ಹೇಳಲಾಗದಷ್ಟು ನೋವಾಗುತ್ತದೆ. ಕೆಲವರು ತಮ್ಮ ಸಂಗಾತಿ ಪಶ್ಚಾತ್ತಾಪಪಟ್ಟು ತಿರುಗಿ ಬಂದಾಗ ಅವರನ್ನು ಕ್ಷಮಿಸಿ ಒಂದಾಗಿದ್ದಾರೆ.a ಅದೇನೇ ಆದರೂ ಸಂಗಾತಿ ದ್ರೋಹ ಮಾಡಿದ್ದಾರೆಂದು ಗೊತ್ತಾದಾಗ ತೀವ್ರ ನೋವಾಗುತ್ತದೆ. ಹೀಗೆ ಮನಸ್ಸು ಛಿದ್ರವಾದರೂ ತಾಳಿಕೊಂಡು ಹೋಗುವುದು ಹೇಗೆ?

ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು

ಸಂಗಾತಿ ದ್ರೋಹಬಗೆದಾಗ ಹೃದಯದಲ್ಲಿ ತಿವಿದಂತಾದರೂ ಅನೇಕರು ಬೈಬಲ್‌ ವಚನಗಳಿಂದ ಸಾಂತ್ವನ ಪಡೆದಿದ್ದಾರೆ. ದೇವರು ಅವರ ಕಣ್ಣೀರನ್ನು ನೋಡುತ್ತಾನೆ ಮತ್ತು ಅವರಿಗೆ ನೋವಾಗುವಾಗ ಆತನಿಗೂ ನೋವಾಗುತ್ತದೆ ಎಂದು ಅವರು ಕಲಿತಿದ್ದಾರೆ.—ಮಲಾಕಿಯ 2:13-16.

“ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:19.

“ಈ ವಚನ ಓದುವಾಗ, ನೋವಿನಲ್ಲಿರುವ ನನ್ನನ್ನು ಯೆಹೋವನು ಪ್ರೀತಿಯ ತಂದೆಯಂತೆ ಮೃದುವಾಗಿ ಸಂತೈಸುತ್ತಿರುವ ಹಾಗೆ ಚಿತ್ರಿಸಿಕೊಂಡೆ” ಎಂದು ಬಿಲ್‌ ನೆನಪಿಸಿಕೊಳ್ಳುತ್ತಾನೆ.

“ನೀನು ನಿಷ್ಠಾವಂತನೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತೀ.” —ಕೀರ್ತನೆ 18:25, NW.

ಕಾರ್ಮನ್ನಳ ಗಂಡ ಅನೇಕ ತಿಂಗಳುಗಳವರೆಗೆ ಅನೈತಿಕ ಜೀವನ ನಡೆಸಿ ನಂಬಿಕೆ ದ್ರೋಹ ಮಾಡಿದ್ದರು. ಆಕೆ ಹೀಗೆ ಹೇಳುತ್ತಾಳೆ: “ನನ್ನ ಗಂಡ ನನಗೆ ನಿಷ್ಠನಾಗಿರಲಿಲ್ಲ. ಆದರೆ ಯೆಹೋವನು ನಿಷ್ಠನಾಗಿರುತ್ತಾನೆ ಎಂಬ ಭರವಸೆ ನನಗಿದೆ. ಆತನು ಯಾವತ್ತೂ ನನ್ನ ಕೈಬಿಡುವುದಿಲ್ಲ.”

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ . . . ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”—ಫಿಲಿಪ್ಪಿ 4:6, 7.

“ನಾನು ಈ ವಚನವನ್ನು ಪುನಃ ಪುನಃ ಓದಿದೆ. ನಾನು ಹೆಚ್ಚೆಚ್ಚು ಪ್ರಾರ್ಥಿಸಿದಂತೆ ದೇವರು ನನಗೆ ಶಾಂತಿ, ನೆಮ್ಮದಿಯನ್ನು ನೀಡಿದರು” ಎನ್ನುತ್ತಾಳೆ ಸಾಶ.

ಮೇಲೆ ತಿಳಿಸಲಾದ ಎಲ್ಲರೂ ಕೆಲವೊಮ್ಮೆ ತುಂಬ ನಿರಾಶರಾಗಿದ್ದರು. ಆದರೆ ಅವರು ಯೆಹೋವ ದೇವರ ಮೇಲೆ ಭರವಸೆ ಇಟ್ಟು ಆತನ ವಾಕ್ಯದಿಂದ ಬಲ ಪಡೆದುಕೊಂಡರು. ಬಿಲ್‌ ಹೀಗೆ ಹೇಳುತ್ತಾನೆ: “ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಾಗ ನನ್ನ ನಂಬಿಕೆಯೇ ನನ್ನ ಜೀವನಕ್ಕೆ ಅರ್ಥ ನೀಡಿತು. ಸ್ವಲ್ಪ ಕಾಲ ನಾನು ‘ಕಾರ್ಗತ್ತಲಿನ ಕಣಿವೆಯಲ್ಲಿ’ ನಡೆಯಬೇಕಾಗಿ ಬಂದರೂ ದೇವರು ನನ್ನೊಂದಿಗಿದ್ದನು.”—ಕೀರ್ತನೆ 23:4.

a ಸಂಗಾತಿಯನ್ನು ಕ್ಷಮಿಸಬೇಕಾ ಕ್ಷಮಿಸಬಾರದಾ ಎನ್ನುವುದರ ಕುರಿತು ಮಾಹಿತಿಗಾಗಿ ಏಪ್ರಿಲ್‌ 22, 1999​ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ “ವೆನ್‌ ಎ ಮೇಟ್‌ ಇಸ್‌ ಅನ್‌ಫೇಯ್ತ್‌ಫುಲ್‌” ಎಂಬ ಲೇಖನ ನೋಡಿ.

ಅನೇಕರಿಗೆ ಸಹಾಯ ಮಾಡಿದ ವಿಷಯಗಳು

ಸಂತೈಸುವಂಥ ಬೈಬಲ್‌ ವಚನಗಳ ಬಗ್ಗೆ ಯೋಚಿಸಿ.

“ನಾನು ಯೋಬ ಮತ್ತು ಕೀರ್ತನೆ ಪುಸ್ತಕಗಳನ್ನು ಓದಿದೆ. ನನ್ನ ಪರಿಸ್ಥಿತಿಗೆ ಅನ್ವಯಿಸುವಂಥ ವಿಷಯಗಳಿಗೆ ಅಡಿಗೆರೆ ಹಾಕಿದೆ. ಬೈಬಲಿನ ಈ ಪುಸ್ತಕಗಳಲ್ಲಿ ಕಂಡುಬರುವ ವ್ಯಕ್ತಿಗಳು ಸಹ ನಾನು ಅನುಭವಿಸಿದಂಥ ನೋವು ಮತ್ತು ಚಿಂತೆಯನ್ನು ಅನುಭವಿಸಿದ್ದರು ಎಂದು ನನಗೆ ಗೊತ್ತಾಯಿತು” ಎಂದು ಬಿಲ್‌ ಹೇಳುತ್ತಾನೆ.

ಸಂಗೀತದಿಂದ ಸಮಾಧಾನ ಪಡೆಯಿರಿ.

“ರಾತ್ರಿಯಲ್ಲಿ ನಿದ್ದೆ ಬರದಿದ್ದಾಗ ನಾನು ಸಂಗೀತ ಕೇಳಿಸಿಕೊಳ್ಳುತ್ತಿದ್ದೆ. ಇದರಿಂದ ತುಂಬ ಸಾಂತ್ವನ ಸಿಗುತ್ತಿತ್ತು” ಎಂದು ಕಾರ್ಮನ್‌ ಹೇಳುತ್ತಾಳೆ. ಡ್ಯಾನಿಯೆಲ್‌ ಹೀಗೆ ಹೇಳುತ್ತಾನೆ: “ನಾನು ಗಿಟಾರನ್ನು ನುಡಿಸಲು ಕಲಿತೆ ಮತ್ತು ಈ ಸಂಗೀತ ನನಗೆ ಮನಶ್ಶಾಂತಿ ನೀಡಿತು.”

ನಿಮಗೆ ಹೇಗನಿಸುತ್ತಿದೆ ಎಂದು ಹೇಳಿ.

“ನನಗೆ ನನ್ನ ಭಾವನೆಗಳನ್ನು ಹೇಳಿಕೊಳ್ಳುವ ರೂಢಿ ಇರಲಿಲ್ಲ. ಆದರೆ ನನಗೆ ಕೆಲವು ಒಳ್ಳೇ ಸ್ನೇಹಿತರಿದ್ದರು. ನಾನು ಪ್ರತಿದಿನ ಅವರೊಂದಿಗೆ ಮಾತಾಡಿದೆ. ನನ್ನ ಭಾವನೆಗಳನ್ನೆಲ್ಲಾ ಬರೆದು ಅಥವಾ ಮಾತಿನ ಮೂಲಕ ಅವರ ಹತ್ತಿರ ತೋಡಿಕೊಂಡೆ. ಅದರಿಂದ ನನಗೆ ತುಂಬ ಸಹಾಯವಾಯಿತು” ಎನ್ನುತ್ತಾನೆ ಡ್ಯಾನಿಯೆಲ್‌. ಸಾಶ ಹೀಗೆ ಹೇಳುತ್ತಾಳೆ: “ನನಗೆ ನನ್ನ ಕುಟುಂಬದ ಸಹಾಯ ತುಂಬ ಮುಖ್ಯವಾಗಿತ್ತು. ಅಮ್ಮ ಯಾವಾಗಲೂ ನನ್ನ ಸಹಾಯಕ್ಕೆ ಸಿದ್ಧರಿದ್ದರು. ಏನಾದರೂ ಹೇಳಿಕೊಳ್ಳಬೇಕು ಎಂದೆನಿಸಿದಾಗೆಲ್ಲಾ ಅಮ್ಮ ಕೇಳಿಸಿಕೊಳ್ಳಲು ಸಿದ್ಧರಿರುತ್ತಿದ್ದರು. ಅಪ್ಪ ಸಹ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮತ್ತು ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ನೀಡಿದರು.”

ಬಿಡದೆ ಪ್ರಾರ್ಥಿಸಿ.

“ನಾನು ಯಾವಾಗಲೂ ಬಿಡದೆ ಪ್ರಾರ್ಥಿಸಿದೆ. ಇದರಿಂದ ದೇವರು ನನ್ನ ಜೊತೆಯಲ್ಲೇ ಇದ್ದಾರೆ, ನನಗೆ ಕಿವಿಗೊಡುತ್ತಾರೆ ಮತ್ತು ಸಹಾಯ ಮಾಡುತ್ತಾರೆ ಎಂದು ಅನಿಸಿತು. ಈ ಕಷ್ಟದ ಸಮಯದಲ್ಲಿ ನಾನು ದೇವರಿಗೆ ಆಪ್ತಳಾದೆ” ಎನ್ನುತ್ತಾಳೆ ಕಾರ್ಮನ್‌.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ