ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 2 ಪು. 10-11
  • ಗಂಭೀರ ಕಾಯಿಲೆಗೆ ತುತ್ತಾದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗಂಭೀರ ಕಾಯಿಲೆಗೆ ತುತ್ತಾದಾಗ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅನೇಕರಿಗೆ ಸಹಾಯ ಮಾಡಿದ ವಿಷಯಗಳು
  • ನಾನೇಕೆ ಇಷ್ಟು ಅಸ್ವಸ್ಥನಾಗಿರಬೇಕು?
    ಎಚ್ಚರ!—1997
  • ಕುಟುಂಬ ಸದಸ್ಯನೊಬ್ಬನು ಅಸ್ವಸ್ಥನಾಗಿರುವಾಗ
    ಕುಟುಂಬ ಸಂತೋಷದ ರಹಸ್ಯ
  • ನೀವು ಯೆಹೋವನಿಗೆ ಅಮೂಲ್ಯರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 2 ಪು. 10-11

ಗಂಭೀರ ಕಾಯಿಲೆಗೆ ತುತ್ತಾದಾಗ

“ನನಗೆ ಶ್ವಾಸಕೋಶ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್‌ ಇದೆ ಎಂದು ಡಾಕ್ಟರ್‌ ಹೇಳಿದಾಗ ನಾನು ಖಂಡಿತ ಸತ್ತು ಹೋಗುತ್ತೇನೆ ಅಂತ ಅನಿಸಿತು. ಆದರೆ ಅಲ್ಲಿಂದ ಮನೆಗೆ ಬಂದ ನಂತರ ನಾನು, ‘ಇಂಥ ಕಾಯಿಲೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ನಿಜ, ಆದರೂ ಇದನ್ನು ನಾನು ಎದುರಿಸಬೇಕು’ ಅಂತ ಯೋಚಿಸಿದೆ.”—71 ವಯಸ್ಸಿನ ಲಿಂಡ.

“ನರಗಳಿಗೆ ಸಂಬಂಧಿಸಿದ ಕಾಯಿಲೆಯು ನನ್ನ ಮುಖದ ಎಡಭಾಗವನ್ನು ಬಾಧಿಸಿದೆ. ತುಂಬಾ ನೋವು ಕಾಣಿಸಿಕೊಳ್ಳುವುದರಿಂದ ಒಂದು ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ. ಅನೇಕ ಸಾರಿ ನನಗ್ಯಾರೂ ಇಲ್ಲ ಅಂತ ಅನಿಸಿದೆ, ಆತ್ಮಹತ್ಯೆ ಮಾಡಿಕೊಳ್ಳಲು ಸಹ ಪ್ರಯತ್ನಿಸಿದ್ದೇನೆ.”—49 ವಯಸ್ಸಿನ ಎಲೀಸ.

ರೋಗಿಯೊಬ್ಬನು ಪ್ರಿಯರ ಮಧ್ಯದಲ್ಲಿ ವೀಲ್‌ಚೇರಿನಲ್ಲಿ ಕೂತಿದ್ದಾನೆ

ನಿಮಗೋ ನಿಮ್ಮ ಪ್ರಿಯರಿಗೋ ಮಾರಣಾಂತಿಕ ಕಾಯಿಲೆ ಇರುವುದಾದರೆ ಅದರಿಂದ ಎಷ್ಟು ಕಷ್ಟವಾಗುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಆ ಕಾಯಿಲೆಯನ್ನು ಮಾತ್ರವಲ್ಲ, ಭಾವನೆಗಳಲ್ಲಾಗುವ ಏರುಪೇರನ್ನೂ ಎದುರಿಸಬೇಕಾಗುತ್ತದೆ. ಆತಂಕ ಹುಟ್ಟಿಸುವ ವೈದ್ಯಕೀಯ ಭೇಟಿಗಳು, ಚಿಕಿತ್ಸೆಯ ಖರ್ಚು ಮತ್ತು ಔಷಧಿಗಳಿಂದಾಗುವ ದುಷ್ಪರಿಣಾಮಗಳಿಂದಾಗಿ ಭಯ, ಚಿಂತೆ ಹೆಚ್ಚಾಗುತ್ತಾ ಹೋಗಬಹುದು. ಗಂಭೀರ ಕಾಯಿಲೆಯಿಂದಾಗಿ ತೀವ್ರ ಮಾನಸಿಕ ಒತ್ತಡ ಇರಬಹುದು.

ಇಂಥ ಸಮಯದಲ್ಲಿ ಸಹಾಯ ಎಲ್ಲಿ ಸಿಗುತ್ತದೆ? ದೇವರಿಗೆ ಪ್ರಾರ್ಥಿಸುವ ಮೂಲಕ ಆತನ ಮೇಲೆ ಭಾರ ಹಾಕಿ ಮತ್ತು ಬೈಬಲಿನಲ್ಲಿರುವ ಸಾಂತ್ವನ ನೀಡುವ ಭಾಗಗಳನ್ನು ಓದಿ. ಇದರಿಂದ ತುಂಬ ಸಾಂತ್ವನ ಸಿಗುತ್ತದೆ ಎಂದು ಅನೇಕರು ತಮ್ಮ ಅನುಭವಗಳಿಂದ ತಿಳಿಸುತ್ತಾರೆ. ಕುಟುಂಬದವರ ಮತ್ತು ಸ್ನೇಹಿತರ ಪ್ರೀತಿ ಹಾಗೂ ಬೆಂಬಲ ಸಹ ತುಂಬ ಸಹಾಯ ಮಾಡುತ್ತದೆ.

ಅನೇಕರಿಗೆ ಸಹಾಯ ಮಾಡಿದ ವಿಷಯಗಳು

“ದೇವರ ಮೇಲೆ ನಿಮಗಿರುವ ನಂಬಿಕೆಯ ಸಹಾಯದಿಂದ ಕಾಯಿಲೆಯನ್ನು ಎದುರಿಸಿ. ಆಗ ಆತನು ನಿಮಗೆ ಕಾಯಿಲೆಯನ್ನು ತಾಳಿಕೊಳ್ಳಲು ಸಹಾಯ ಮಾಡುವನು. ಯೆಹೋವನಿಗೆ ಪ್ರಾರ್ಥಿಸಿ. ನಿಮಗೆ ಹೇಗನಿಸುತ್ತಿದೆ ಎಂದು ಹೇಳಿ. ಬಲ ಕೊಡುವಂತೆ ಕೇಳಿಕೊಳ್ಳಿ. ಕುಟುಂಬಕ್ಕೆ ಧೈರ್ಯ ತುಂಬಲು ಬೇಕಾದ ಬಲ ಕೊಡುವಂತೆ ಮತ್ತು ಕಾಯಿಲೆಯಿಂದ ಬಳಲುತ್ತಿದ್ದರೂ ಸಮಾಧಾನದಿಂದ ಇರಲು ಸಹಾಯ ಮಾಡುವಂತೆ ಕೇಳಿಕೊಳ್ಳಿ” ಎಂದು 58 ವಯಸ್ಸಿನ ರಾಬರ್ಟ್‌ ಹೇಳುತ್ತಾರೆ.

“ಕುಟುಂಬದವರು ನಿಮಗೆ ಭಾವನಾತ್ಮಕವಾಗಿ ಬೆಂಬಲ ನೀಡುವಾಗ ತುಂಬ ಸಹಾಯವಾಗುತ್ತದೆ. ನನಗೆ ಪ್ರತಿದಿನ ಒಬ್ಬಿಬ್ಬರಾದರೂ ಫೋನ್‌ ಮಾಡಿ ‘ಹೇಗಿದ್ದೀರಾ?’ ಅಂತ ಕೇಳುತ್ತಾರೆ. ಬೇರೆ ಬೇರೆ ಸ್ಥಳಗಳಲ್ಲಿನ ನನ್ನ ಸ್ನೇಹಿತರು ನನಗೆ ಪ್ರೋತ್ಸಾಹ ಕೊಡುತ್ತಾರೆ. ಅವರು ಕೊಡುವ ಬಲದಿಂದ ನನಗೆ ತಾಳಿಕೊಂಡು ಹೋಗಲು ಸಹಾಯವಾಗುತ್ತದೆ” ಎನ್ನುತ್ತಾರೆ ರಾಬರ್ಟ್‌.

ನೀವು ಕಾಯಿಲೆಯಲ್ಲಿರುವವರನ್ನು ಭೇಟಿ ಮಾಡಲು ಹೋಗುವುದಾದರೆ ಲಿಂಡ ಹೇಳುವ ಈ ವಿಷಯಗಳನ್ನು ನೆನಪಿನಲ್ಲಿಡಿ: “ಹುಷಾರಿಲ್ಲದ ವ್ಯಕ್ತಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರಂತೆ ಸಹಜ ಜೀವನ ಮಾಡಲು ಬಯಸುತ್ತಾರೆ. ಯಾವಾಗಲೂ ಕಾಯಿಲೆಯ ಬಗ್ಗೆ ಮಾತಾಡಲು ಬಯಸದಿರಬಹುದು. ಹಾಗಾಗಿ, ನೀವು ಸಾಮಾನ್ಯವಾಗಿ ಮಾತಾಡುವ ವಿಷಯಗಳ ಬಗ್ಗೆ ಮಾತಾಡಿ.”

ಗಂಭೀರ ಕಾಯಿಲೆ ಬಂದರೂ, ಜೀವನ ಸಾರ್ಥಕ ಎಂಬ ಭರವಸೆಯನ್ನು ಕಳೆದುಕೊಳ್ಳದೇ ಮುಂದೆ ಸಾಗಲು ಸಾಧ್ಯ. ಇದನ್ನು ಮಾಡಲು, ದೇವರು ಕೊಡುವ ಬಲ, ಬೈಬಲಿನಿಂದ ಸಿಗುವ ಸಾಂತ್ವನ ಮತ್ತು ಪ್ರೀತಿಯ ಕುಟುಂಬ ಹಾಗೂ ಸ್ನೇಹಿತರ ಬೆಂಬಲದಿಂದ ಸಹಾಯ ಸಿಗುತ್ತದೆ.

ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು

ದೇವರ ಮೇಲೆ ಆತುಕೊಳ್ಳಿ.

‘ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿದನು.’ —ಕೀರ್ತನೆ 34:4, 6.

ಹಿಂದೆ ತಿಳಿಸಲಾದ ಲಿಂಡ ಹೀಗೆ ಹೇಳುತ್ತಾಳೆ: “ನಾನು ಯಾವತ್ತೂ ‘ನನ್ನ ಕಾಯಿಲೆ ಗುಣಮಾಡಪ್ಪಾ’ ಅಂತ ಪ್ರಾರ್ಥಿಸುವುದಿಲ್ಲ. ಬದಲಿಗೆ, ‘ಧೈರ್ಯದಿಂದ ಇರಲು ಮತ್ತು ಕಾಯಿಲೆಯನ್ನು ತಾಳಿಕೊಳ್ಳಲು ಸಹಾಯ ಮಾಡು’ ಅಂತ ಪ್ರಾರ್ಥಿಸುತ್ತೇನೆ.”

ದೇವರ ವಾಕ್ಯದಿಂದ ಬಲ ಪಡೆಯಿರಿ.

“ಚೀಯೋನಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

ಭವಿಷ್ಯದ ಬಗ್ಗೆ ದೇವರು ಕೊಟ್ಟಿರುವ ಮಾತಿನ ಕುರಿತು ಧ್ಯಾನಿಸಿ. ಆ ನಿರೀಕ್ಷೆಯು ನಿಮಗೆ ತಾಳಿಕೊಳ್ಳಲು ಬಲ ನೀಡುತ್ತದೆ.

ಕುಟುಂಬದವರ ಮತ್ತು ಸ್ನೇಹಿತರ ಸಹಾಯ ಪಡೆಯಿರಿ.

“ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.

ಹಿಂದೆ ತಿಳಿಸಲಾದ ಎಲೀಸ ಹೀಗೆ ಹೇಳುತ್ತಾಳೆ: “ನೀವು ಏಕಾಂಗಿಯಾಗಿ ಇರಬೇಡಿ. ಸ್ನೇಹಿತರು ನಿಮಗೆ ಸಹಾಯ ಮಾಡಲು ಬಿಟ್ಟುಕೊಡಿ. ಕೆಲವೊಮ್ಮೆ ನಿಮಗ್ಯಾರೂ ಇಲ್ಲ ಎಂದೆನಿಸಬಹುದು, ದೇವರು ನಿಮಗೆ ಕಿವಿಗೊಡುತ್ತಾನೆ ಎನ್ನುವುದನ್ನೂ ಮರೆತುಹೋಗಬಹುದು. ಆದರೂ ನೀವೊಬ್ಬರೇ ಇದ್ದು ಬಿಡಬೇಡಿ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ