ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 3 ಪು. 12-13
  • ಉತ್ತಮ ಜೀವನ ಸಾಧ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ತಮ ಜೀವನ ಸಾಧ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಭೂಮಿಯಲ್ಲಿ ನಮ್ಮ ಜೀವನ ಹೇಗಿರಬೇಕು ಅಂತ ದೇವರು ಬಯಸಿದ್ದನೋ ಹಾಗೇ ಮಾಡುತ್ತೇನೆಂದು ಆತನೇ ಮಾತು ಕೊಟ್ಟಿದ್ದಾನೆ
  • ಮಾನವಕುಲಕ್ಕಾಗಿ ಒಳ್ಳೇ ವಿಷಯಗಳನ್ನು ಮಾಡುತ್ತೇನೆಂದು ಯೇಸು ಭೂಮಿಯಲ್ಲಿದ್ದಾಗ ತೋರಿಸಿದ
  • ಉತ್ತಮ ಜೀವನಕ್ಕೆ ನಡೆಸುವ ದಾರಿ
  • ಉತ್ತಮ ಜೀವಕ್ಕೆ ನಡೆಸುವ ದಾರಿಯಲ್ಲಿ ನಡೆಯಲು ಶುರುಮಾಡಿ
  • ದೇವರನ್ನು ಆರಾಧಿಸುವ ಸರಿಯಾದ ರೀತಿ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವರು ಏನು ಮಾಡುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಯೇಸುವಿನ ಮಾತನ್ನ ಕೇಳುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ದೇವರು ಒಪ್ಪುವ ಆರಾಧನೆ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 3 ಪು. 12-13
ಒಬ್ಬ ವಿಜ್ಞಾನಿ ಬೈಬಲ್‌ ಓದುತ್ತಿದ್ದಾನೆ

ಉತ್ತಮ ಜೀವನ ಸಾಧ್ಯ

ಇಂದು ನಮ್ಮೆಲ್ಲರ ಬದುಕು ದೇವರು ಇಷ್ಟಪಟ್ಟ ಹಾಗೆ ಇಲ್ಲ. ಒಂದುವೇಳೆ ದೇವರ ಇಷ್ಟಪಟ್ಟ ಹಾಗೆ ಇದ್ದಿದ್ರೆ, ಭೂಮಿ ತುಂಬಾ ಒಳ್ಳೇ ಜನರೇ ಇರುತ್ತಿದ್ದರು! ಆ ಒಳ್ಳೇ ಜನರು ಸೃಷ್ಟಿಕರ್ತನೇ ತಮ್ಮನ್ನು ಆಳಬೇಕೆಂದು ಇಷ್ಟಪಡುತ್ತಿದ್ದರು, ಆತನ ನಿಯಮಗಳನ್ನು ಪಾಲಿಸುತ್ತಿದ್ದರು, ದೇವರಂತೆ ಪ್ರೀತಿ ಮತ್ತು ಬೇರೆ ಅದ್ಭುತ ಗುಣಗಳನ್ನು ತೋರಿಸುತ್ತಿದ್ದರು. ಅಷ್ಟೇ ಅಲ್ಲ, ಕುಟುಂಬದಲ್ಲಿ ಅನ್ಯೋನತೆ, ಸಂತೋಷ ಇರುತ್ತಿತ್ತು. ಎಲ್ಲರು ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದರು. ಜೊತೆಗೆ, ಇಡೀ ಭೂಮಿಯನ್ನು ಸುಂದರ ತೋಟದಂತೆ ಮಾಡುತ್ತಿದ್ದರು.

ಭೂಮಿಯಲ್ಲಿ ನಮ್ಮ ಜೀವನ ಹೇಗಿರಬೇಕು ಅಂತ ದೇವರು ಬಯಸಿದ್ದನೋ ಹಾಗೇ ಮಾಡುತ್ತೇನೆಂದು ಆತನೇ ಮಾತು ಕೊಟ್ಟಿದ್ದಾನೆ

  • ‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’—ಕೀರ್ತನೆ 46:9.

  • ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸುವ ನೇಮಿತ ಸಮಯವು ಬರುತ್ತದೆ.’—ಪ್ರಕಟನೆ 11:18.

  • “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

  • “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:22.

ದೇವರ ಈ ಮಾತುಗಳು ಹೇಗೆ ನೆರವೇರುತ್ತೆ? ದೇವರು, ತನ್ನ ಮಗನಾದ ಯೇಸು ಕ್ರಿಸ್ತನನ್ನು ಈ ಭೂಮಿಯನ್ನು ಆಳಲು ನೇಮಿಸಿದ್ದಾನೆ. ಯೇಸು ಸ್ವರ್ಗದಿಂದ ಭೂಮಿಯನ್ನು ಆಳುವಾಗ ಈ ಮಾತುಗಳು ನೆರವೇರುತ್ತೆ. ಬೈಬಲ್‌ ಈ ಆಳ್ವಿಕೆಯನ್ನು ದೇವರ ರಾಜ್ಯ ಎಂದು ಕರೆಯುತ್ತೆ. (ದಾನಿಯೇಲ 2:44) ‘ದೇವರು ಸಿಂಹಾಸನವನ್ನು ಕೊಡುವನು ಮತ್ತು ಅವನು ರಾಜನಾಗಿ ಆಳುವನು’ ಎಂದು ಸಹ ಬೈಬಲ್‌ ಹೇಳುತ್ತೆ.—ಲೂಕ 1:32, 33.

ಯೇಸು ಭೂಮಿಯಲ್ಲಿದ್ದಾಗ, ತಾನು ಮುಂದೆ ಆಳಲಿರುವ ರಾಜ್ಯದಲ್ಲಿ ಮಾನವರ ಜೀವನ ಹೇಗಿರುತ್ತೆ ಅನ್ನೋದನ್ನು ಅನೇಕ ಅದ್ಭುತಗಳನ್ನು ಮಾಡುವ ಮೂಲಕ ತೋರಿಸದ.

ಮಾನವಕುಲಕ್ಕಾಗಿ ಒಳ್ಳೇ ವಿಷಯಗಳನ್ನು ಮಾಡುತ್ತೇನೆಂದು ಯೇಸು ಭೂಮಿಯಲ್ಲಿದ್ದಾಗ ತೋರಿಸಿದ

  • ಎಲ್ಲಾ ರೀತಿಯ ರೋಗಗಳನ್ನು, ಮಾನವರಿಂದ ವಾಸಿಮಾಡಲು ಆಗದ ರೋಗಗಳನ್ನೂ ತಾನು ವಾಸಿ ಮಾಡುತ್ತೇನೆಂದು ತೋರಿಸಿದ.—ಮತ್ತಾಯ 9:35.

  • ಸಮುದ್ರವನ್ನು ಶಾಂತಗೊಳಿಸುವ ಮೂಲಕ, ಪ್ರಕೃತಿ-ವಿಕೋಪಗಳಿಂದ ಮಾನವರನ್ನು ರಕ್ಷಿಸಲು ತನ್ನಿಂದ ಸಾಧ್ಯ ಎಂದು ತೋರಿಸಿದ.—ಮಾರ್ಕ 4:36-39.

  • ಸಾವಿರಾರು ಜನರಿಗೆ ಊಟ ಕೊಡುವ ಮೂಲಕ, ಜನರಿಗೆ ಬೇಕಾಗುವ ಮೂಲಭೂತ ಅಗತ್ಯಗಳನ್ನು ತಾನು ಒದಗಿಸಬಲ್ಲೆ ಎಂದು ತೋರಿಸಿದ.—ಮಾರ್ಕ 6:41-44.

  • ಒಂದು ಮದುವೆಯಲ್ಲಿ ನೀರನ್ನು ದ್ರಾಕ್ಷಾಮದ್ಯವಾಗಿ ಮಾಡುವ ಮೂಲಕ, ಜನರಿಗೆ ಸಂತೋಷದ ಜೀವನ ನಡೆಸಲು ತಾನು ಸಹಾಯ ಮಾಡುತ್ತೇನೆಂದು ತೋರಿಸಿದ.—ಯೋಹಾನ 2:7-11.

ದೇವರು ಈ ರೀತಿಯ ಜೀವನ ಮಾನವರಿಗೆ ಸಿಗಬೇಕೆಂದು ಇಷ್ಟಪಟ್ಟನು. ಹಾಗಾದರೆ, ನಿಮಗೆ ಈ ರೀತಿಯ ಜೀವನ ಸಿಗಬೇಕಾದರೆ ನೀವೇನು ಮಾಡಬೇಕು? ಅದಕ್ಕೆಂದೇ ಒಂದು “ದಾರಿ” ಇದೆ. ಅದು ‘ಜೀವಕ್ಕೆ ನಡಿಸುವ ದಾರಿ‘ ಮತ್ತು ‘ಅದನ್ನು ಕಂಡುಕೊಳ್ಳುವವರು ಕೊಂಚವೇ’ ಎಂದು ಬೈಬಲ್‌ ಹೇಳುತ್ತೆ.—ಮತ್ತಾಯ 7:14.

ಉತ್ತಮ ಜೀವನಕ್ಕೆ ನಡೆಸುವ ದಾರಿ

ಉತ್ತಮ ಜೀವನಕ್ಕೆ ನಡೆಸುವ ದಾರಿ ಅಂದರೇನು? ಇಲ್ಲಿ, ‘ದಾರಿ’ ಅಂದ್ರೆ ದೇವರು ಹೇಳಿದಂತೆ ನಡೆಯುವುದು. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ” ಎಂದು ದೇವರು ಹೇಳುತ್ತಾನೆ. (ಯೆಶಾಯ 48:17) ದೇವರು ಹೇಳಿದಂತೆ ನಡೆದರೆ, ಉತ್ತಮ ಜೀವನ ನಡೆಸಲು ಸಾಧ್ಯ.

“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಎಂದು ಯೇಸು ಹೇಳಿದನು. (ಯೋಹಾನ 14:6) ಯೇಸುವಿನ ಮಾದರಿಯನ್ನು ಅನುಕರಿಸಿ, ಆತನು ಹೇಳಿದಂತೆ ನಡೆದರೆ ನಾವು ದೇವರಿಗೆ ಹತ್ತಿರವಾಗುತ್ತೇವೆ. ಇದರಿಂದ ನಮ್ಮ ಜೀವನ ಉತ್ತಮವಾಗುತ್ತೆ.

ಉತ್ತಮ ಜೀವಕ್ಕೆ ನಡೆಸುವ ದಾರಿಯನ್ನು ಹೇಗೆ ಕಂಡುಹಿಡಿಯುವುದು? “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು” ಎಂದು ಯೇಸು ಎಚ್ಚರಿಸಿದ್ದಾನೆ. (ಮತ್ತಾಯ 7:21) ಇದರ ಅರ್ಥ, ಎಲ್ಲಾ ರೀತಿಯ ಆರಾಧನೆ ಉತ್ತಮ ಜೀವನಕ್ಕೆ ನಡೆಸುವುದಿಲ್ಲ. ಯಾಕೆಂದರೆ ಧರ್ಮಗಳು ಹಲವಾರಿವೆ. ಆದರೆ, ಉತ್ತಮ ಜೀವನಕ್ಕೆ ನಡೆಸುವ ಆರಾಧನೆ ಯಾವುದು ಎಂದು “ಅವರ ಫಲಗಳಿಂದಲೇ (ಕ್ರಿಯೆಗಳಿಂದ)” ನಾವು ಗುರುತಿಸಬಹುದು ಎಂದು ಯೇಸು ಹೇಳಿದ್ದಾನೆ. (ಮತ್ತಾಯ 7:16) ಯಾವ ರೀತಿಯ ಆರಾಧನೆ ಸರಿ ಎಂದು ಗುರುತಿಸಲು ಬೈಬಲ್‌ ಸಹ ನಿಮಗೆ ಸಹಾಯ ಮಾಡುತ್ತದೆ.—ಯೋಹಾನ 17:17.

ಉತ್ತಮ ಜೀವಕ್ಕೆ ನಡೆಸುವ ದಾರಿಯಲ್ಲಿ ನಡೆಯುವುದು ಹೇಗೆ? ಇದಕ್ಕಾಗಿ, ನಮ್ಮ ಸೃಷ್ಟಿಕರ್ತನ ಬಗ್ಗೆ ತಿಳಿದುಕೊಳ್ಳಬೇಕು. ಅವನು ಯಾರು? ಅವನ ಹೆಸರೇನು? ಅವನು ಯಾವ ರೀತಿಯ ವ್ಯಕ್ತಿ? ನಮ್ಮ ಒಳ್ಳೇದಕ್ಕಾಗಿ ಏನಾದ್ರೂ ಮಾಡುತ್ತಿದ್ದಾನಾ? ನಾವು ಏನು ಮಾಡಬೇಕೆಂದು ಅವನು ಬಯಸುತ್ತಾನೆ?a

ನಾವು ಬರೀ ತಿನ್ನುತ್ತಾ, ಕುಡಿಯುತ್ತಾ, ಕೆಲಸ ಮಾಡುತ್ತಾ, ಜೀವನ ನಡೆಸಬೇಕು ಅಂತ ದೇವರು ಬಯಸುವುದಿಲ್ಲ. ಬದಲಿಗೆ ದೇವರು, ತನ್ನ ಬಗ್ಗೆ ತಿಳಿದುಕೊಳ್ಳುವ ಮತ್ತು ತನ್ನ ಸ್ನೇಹಿತರಾಗುವ ಅವಕಾಶವನ್ನೂ ಕೊಟ್ಟಿದ್ದಾನೆ. ದೇವರಿಗೆ ಇಷ್ಟವಾಗುವುದನ್ನು ಮಾಡುವ ಮೂಲಕ ಆತನನ್ನು ಪ್ರೀತಿಸುತ್ತೇವೆಂದು ತೋರಿಸಬಹುದು. ಯೇಸು ಹೇಳಿದ್ದು ‘ಒಬ್ಬನೇ ಸತ್ಯ ದೇವರಾಗಿರುವ ನಿನ್ನ . . . ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ’.—ಯೋಹಾನ 17:3.

ದೇವರು, ಉತ್ತಮ ಜೀವನಕ್ಕೆ ನಡೆಸುವ “ವೃದ್ಧಿಮಾರ್ಗವನ್ನು” ಬೈಬಲ್‌ ಮೂಲಕ ನಮಗೆ ಕಲಿಸುತ್ತಾನೆ.—ಯೆಶಾಯ 48:17

ಉತ್ತಮ ಜೀವಕ್ಕೆ ನಡೆಸುವ ದಾರಿಯಲ್ಲಿ ನಡೆಯಲು ಶುರುಮಾಡಿ

ದೇವರು ನಮ್ಮಿಂದ ಏನು ಬಯಸುತ್ತಾನೆ ಅಂತ ತಿಳಿದುಕೊಂಡಾಗ, ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತೆ. ಇದು ಸ್ವಲ್ಪ ಕಷ್ಟ ಅನಿಸಬಹುದು. ಆದರೆ ನಾವು ಈ ದಾರಿಯಲ್ಲಿ ನಡೆಯಲು ಶುರುಮಾಡಿದ್ರೇನೇ ನಮ್ಮ ಜೀವನ ಉತ್ತಮ ಆಗಲು ಸಾಧ್ಯ. ದೇವರ ಬಗ್ಗೆ ಬರುವ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಯೆಹೋವನ ಸಾಕ್ಷಿಗಳು ಸಹಾಯ ಮಾಡುತ್ತಾರೆ. ನಿಮಗೆ ಅನುಕೂಲವಾದ ಸ್ಥಳ ಮತ್ತು ಸಮಯದಲ್ಲಿ, ಉಚಿತವಾಗಿ ಬೈಬಲ್‌ ಬಗ್ಗೆ ಕಲಿಸುತ್ತಾರೆ. www.jw.org ವೆಬ್‌ಸೈಟ್‌ ಮೂಲಕಾನೂ ನಮ್ಮನ್ನು ಸಂಪರ್ಕಿಸಬಹುದು.

a ನಂ.1 2019​ರ ಕಾವಲಿನಬುರುಜು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ