ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಜನವರಿ ಪು. 31
  • ಆಡಳಿತ ಮಂಡಲಿಯ ಹೊಸ ಸದಸ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಲಿಯ ಹೊಸ ಸದಸ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅನುರೂಪ ಮಾಹಿತಿ
  • ಆಡಳಿತ ಮಂಡಲಿಯ ಹೊಸ ಸದಸ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಆಡಳಿತ ಮಂಡಲಿಯ ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಆಡಳಿತ ಮಂಡಲಿಯ ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಜನವರಿ ಪು. 31
ಕೆನೆತ್‌ ಕುಕ್‌ ಮತ್ತು ಜೇಮಿ ಕುಕ್‌

ಕೆನೆತ್‌ ಕುಕ್‌ ಮತ್ತು ಅವರ ಪತ್ನಿ ಜೇಮಿ

ಆಡಳಿತ ಮಂಡಲಿಯ ಹೊಸ ಸದಸ್ಯ

2018, ಜನವರಿ 24​ರ ಬುಧವಾರದಂದು ಕೆನಡ ಮತ್ತು ಅಮೆರಿಕದ ಬೆತೆಲ್‌ ಕುಟುಂಬಗಳಿಗೆ ಒಂದು ವಿಶೇಷ ಪ್ರಕಟಣೆಯನ್ನು ಮಾಡಲಾಯಿತು. ಸಹೋದರ ಕೆನೆತ್‌ ಕುಕ್‌ ಅವರನ್ನು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ನೇಮಿಸಲಾಗಿದೆ ಎಂದು ಪ್ರಕಟಿಸಿದಾಗ ಎಲ್ಲರಿಗೂ ಸಂತೋಷವಾಯಿತು.

ಸಹೋದರ ಕುಕ್‌ ಹುಟ್ಟಿ ಬೆಳೆದದ್ದು ಅಮೆರಿಕದ ಪೆನ್ಸಿಲ್ವೇನಿಯದಲ್ಲಿ. ಅವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಅವರ ಜೊತೆ ಓದುತ್ತಿದ್ದ ಹುಡುಗನಿಂದ ಸತ್ಯ ಸಿಕ್ಕಿತು. ನಂತರ 1980​ರ ಜೂನ್‌ 7​ರಂದು ದೀಕ್ಷಾಸ್ನಾನ ಪಡೆದರು. 1982​ರ ಸೆಪ್ಟೆಂಬರ್‌ 1​ರಂದು ರೆಗ್ಯುಲರ್‌ ಪಯನೀಯರರಾಗಿ ಪೂರ್ಣ ಸಮಯದ ಸೇವೆ ಆರಂಭಿಸಿದರು. ಎರಡು ವರ್ಷ ಪಯನೀಯರ್‌ ಸೇವೆ ಮಾಡಿದ ಮೇಲೆ ಅವರನ್ನು ಬೆತೆಲಿಗೆ ಕರೆಯಲಾಯಿತು. 1984​ರ ಅಕ್ಟೋಬರ್‌ 12​ರಂದು ನ್ಯೂಯಾರ್ಕ್‌ನ ವಾಲ್‌ಕಿಲ್‌ನಲ್ಲಿ ಅವರು ಬೆತೆಲ್‌ ಸೇವೆ ಆರಂಭಿಸಿದರು.

ಅಂದಿನಿಂದ 25 ವರ್ಷ ಸಹೋದರ ಕುಕ್‌, ಪ್ರಿಂಟರಿ ಮತ್ತು ಬೆತೆಲ್‌ ಆಫೀಸ್‌ನಲ್ಲಿ ಬೇರೆ-ಬೇರೆ ಕೆಲಸ ಮಾಡಿದರು. 1996​ರಲ್ಲಿ ಸಹೋದರಿ ಜೇಮಿಯನ್ನು ಮದುವೆಯಾದರು. ಸಹೋದರಿ ಜೇಮಿ ವಾಲ್‌ಕಿಲ್‌ಗೆ ಬಂದು ಸೇವೆ ಮಾಡಿದರು. 2009​ರ ಡಿಸೆಂಬರ್‌ನಲ್ಲಿ ನ್ಯೂಯಾರ್ಕ್‌ನ, ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್‌ ಶಿಕ್ಷಣ ಕೇಂದ್ರಕ್ಕೆ ಅವರಿಬ್ಬರನ್ನೂ ಕಳುಹಿಸಲಾಯಿತು. ಅಲ್ಲಿ ಸಹೋದರ ಕುಕ್‌ ರೈಟಿಂಗ್‌ ಕರೆಸ್ಪಾಂಡೆನ್ಸ್‌ ಇಲಾಖೆಯಲ್ಲಿ ಕೆಲಸ ಮಾಡಿದರು. ಸ್ವಲ್ಪ ಸಮಯಕ್ಕೆ ಕುಕ್‌ ದಂಪತಿಯನ್ನು ವಾಲ್‌ಕಿಲ್‌ಗೆ ಪುನಃ ನೇಮಿಸಲಾಯಿತು. ನಂತರ 2016​ರ ಏಪ್ರಿಲ್‌ನಲ್ಲಿ ಅವರನ್ನು ಬ್ರೂಕ್ಲಿನ್‌ಗೆ ವರ್ಗಾಯಿಸಲಾಯಿತು. ಐದು ತಿಂಗಳಾದ ಮೇಲೆ ಅವರು ನ್ಯೂಯಾರ್ಕ್‌ನ ವಾರ್ವಿಕ್‌ನಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ಬಂದರು. 2017​ರ ಜನವರಿಯಲ್ಲಿ ಸಹೋದರ ಕುಕ್‌ ಅವರನ್ನು ಆಡಳಿತ ಮಂಡಲಿಯ ರೈಟಿಂಗ್‌ ಕಮಿಟಿಯ ಸಹಾಯಕರಾಗಿ ನೇಮಿಸಲಾಯಿತು.

ಈಗ ಆಡಳಿತ ಮಂಡಲಿಯಲ್ಲಿ ಎಂಟು ಅಭಿಷಿಕ್ತ ಸಹೋದರರು ಇದ್ದಾರೆ:

ಆ್ಯಂಟನಿ ಮಾರಿಸ್‌; ಕೆನೆತ್‌ ಕುಕ್‌; ಗೆರಿಟ್‌ ಲಾಶ್‌; ಜೆಫ್ರೀ ಜ್ಯಾಕ್ಸನ್‌; ಡೇವಿಡ್‌ ಸ್ಪ್ಲೇನ್‌; ಮಾರ್ಕ್‌ ಸ್ಯಾಂಡರ್‌ಸನ್‌; ಸ್ಟೀಫನ್‌ ಲೆಟ್‌; ಸ್ಯಾಮ್ಯೆಲ್‌ ಹರ್ಡ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ