ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಫೆಬ್ರವರಿ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅನುರೂಪ ಮಾಹಿತಿ
  • ಯೆಹೂದ್ಯರ ಸಭಾಮಂದಿರ ಯೇಸು ಮತ್ತು ಆತನ ಶಿಷ್ಯರು ಸಾರಿದ ಸ್ಥಳ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಸಭೆಯಾಗಿ ಕೂಡಿಬರುವುದನ್ನು ಬಿಟ್ಟು ಬಿಡಬೇಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವವು ಹಬ್ಬುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಫೆಬ್ರವರಿ ಪು. 31

ನಿಮಗೆ ಗೊತ್ತಿತ್ತಾ?

ಸಭಾಮಂದಿರ ಯಾವಾಗ ಶುರುವಾಯಿತು?

ಗಾಮ್ಲಾ ಎಂಬ ಸ್ಥಳದಲ್ಲಿ ಒಂದನೇ ಶತಮಾನದ ಸಭಾಮಂದಿರ

ಒಂದನೇ ಶತಮಾನದ ಸಭಾಮಂದಿರ: ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕಿನಲ್ಲಿ ಸುಮಾರು 10 ಕಿ.ಮೀ. ದೂರದಲ್ಲಿರುವ ಗಾಮ್ಲಾ ಎಂಬ ಸ್ಥಳದಲ್ಲಿ ಒಂದನೇ ಶತಮಾನದ ಸಭಾಮಂದಿರ ಸಿಕ್ಕಿದೆ. ಅದರ ಕೆಲವು ವೈಶಿಷ್ಟ್ಯಗಳನ್ನು ಆಧರಿಸಿ ಈ ಚಿತ್ರವನ್ನು ಬಿಡಿಸಲಾಗಿದೆ. ಹಿಂದಿನ ಕಾಲದ ಸಭಾಮಂದಿರ ಹೇಗಿದ್ದಿರಬಹುದು ಎಂದು ಇದರಿಂದ ಗೊತ್ತಾಗುತ್ತದೆ

“ಸಭಾಮಂದಿರ” ಎನ್ನುವ ಪದ “ಕೂಟ” ಅಥವಾ “ಒಟ್ಟಿಗೆ ಸೇರಿಬರುವುದು” ಎಂಬ ಅರ್ಥ ಇರುವ ಗ್ರೀಕ್‌ ಪದದಿಂದ ಬಂದಿರುವ ಪದವಾಗಿದೆ. ಸಭಾಮಂದಿರಕ್ಕೆ ಈ ಅರ್ಥ ಸೂಕ್ತವಾಗಿದೆ. ಯಾಕೆಂದರೆ ತುಂಬ ಹಿಂದಿನ ಕಾಲದಿಂದಲೂ ಮಾರ್ಗದರ್ಶನೆಗಾಗಿ ಮತ್ತು ಆರಾಧನೆಗಾಗಿ ಯೆಹೂದಿ ಸಮುದಾಯ ಸಭಾಮಂದಿರಕ್ಕೆ ಕೂಡಿಬರುತ್ತಿತ್ತು. ಹೀಬ್ರು ಶಾಸ್ತ್ರಗ್ರಂಥದಲ್ಲಿ ಸಭಾಮಂದಿರದ ಬಗ್ಗೆ ಸ್ಪಷ್ಟವಾದ ಉಲ್ಲೇಖವಿಲ್ಲ. ಆದರೆ ಕ್ರಿ.ಶ. ಒಂದನೇ ಶತಮಾನದ ಮುಂಚೆಯೇ ಇಂಥ ಸಭಾಮಂದಿರಗಳು ಇದ್ದವು ಎಂದು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಯೆಹೂದಿಗಳು ಬಾಬೆಲಿಗೆ ಬಂಧಿವಾಸಿಗಳಾಗಿ ಹೋದ ಸಮಯದಲ್ಲಿ ಸಭಾಮಂದಿರಗಳು ಶುರುವಾದವು ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಸಭಾಮಂದಿರ ಯಾಕೆ ಶುರುವಾಯಿತು ಎನ್ನುವ ಕಾರಣವನ್ನು ಎನ್‌ಸೈಕ್ಲೊಪೀಡಿಯ ಜುಡೈಕ ಹೀಗೆ ತಿಳಿಸುತ್ತದೆ: “ಅವರು ಬಂಧಿವಾಸಿಗಳಾಗಿದ್ದರು, ಆರಾಧನೆಗಾಗಿ ಯಾವುದೇ ದೇವಾಲಯ ಇರಲಿಲ್ಲ, ಅವರು ಇದ್ದದ್ದು ಪರದೇಶದಲ್ಲಿ. ಅವರಿಗೆ ಸಾಂತ್ವನದ ಅಗತ್ಯವಿತ್ತು, ಆಗಾಗ ಒಬ್ಬರನ್ನೊಬ್ಬರು ಭೇಟಿ ಮಾಡುವ ಅಗತ್ಯವಿತ್ತು, ಅದರಲ್ಲೂ ಸಬ್ಬತ್‌ಗಳಲ್ಲಿ ಒಟ್ಟಿಗೆ ಸೇರಬೇಕಿತ್ತು ಮತ್ತು [ದೇವರ ವಾಕ್ಯವನ್ನು] ಓದಬೇಕಿತ್ತು.” ಯೆಹೂದಿಗಳಿಗೆ ಬಾಬೆಲಿಂದ ಬಿಡುಗಡೆ ಸಿಕ್ಕಿದ ಮೇಲೂ ಅವರು ಪ್ರಾರ್ಥನೆ ಮಾಡಲಿಕ್ಕಾಗಿ, ದೇವರ ವಾಕ್ಯವನ್ನು ಓದಲಿಕ್ಕಾಗಿ ಒಟ್ಟಾಗಿ ಕೂಡಿಬರುವುದನ್ನು ಮುಂದುವರಿಸಿದರು ಎಂದು ತೋರುತ್ತದೆ. ಹಾಗಾಗಿ ಅವರು ಎಲ್ಲೆಲ್ಲಿ ಹೋಗಿ ನೆಲೆಸಿದರೋ ಅಲ್ಲೆಲ್ಲ ಸಭಾಮಂದಿರಗಳನ್ನು ಸ್ಥಾಪಿಸಿದರು.

ಕ್ರಿ.ಶ. ಒಂದನೇ ಶತಮಾನದಷ್ಟರೊಳಗೆ ಸಭಾಮಂದಿರಗಳು ಯೆಹೂದಿಗಳ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮುಖ್ಯ ಕೇಂದ್ರಗಳಾಗಿಬಿಟ್ಟವು. ಈ ಸಭಾಮಂದಿರಗಳು ಇಸ್ರೇಲ್‌ ಸೇರಿ ಮೆಡಿಟರೇನಿಯನ್‌ ಸಮುದ್ರದ ಸುತ್ತಮುತ್ತ ಇದ್ದ ಪ್ರದೇಶಗಳು, ಮಧ್ಯಪೂರ್ವ ದೇಶಗಳಲ್ಲೆಲ್ಲಾ ಸ್ಥಾಪನೆಯಾಗಿದ್ದವು. “[ಸಭಾಮಂದಿರಗಳಲ್ಲಿ] ಜನ ಅಧ್ಯಯನ ಮಾಡುತ್ತಿದ್ದರು, ಹಬ್ಬಗಳ ಸಮಯದಲ್ಲಿ ಊಟ ಮಾಡುತ್ತಿದ್ದರು, ನ್ಯಾಯವಿಚಾರಣೆ ಮಾಡುತ್ತಿದ್ದರು, ಸಮಾಜಕಲ್ಯಾಣ ಯೋಜನೆಗಳಿಗೆ ಬೇಕಾದ ಹಣವನ್ನು ಕೂಡಿಡುತ್ತಿದ್ದರು, ರಾಜಕೀಯ ಅಥವಾ ಸಾಮಾಜಿಕ ಕೂಟಗಳನ್ನೂ ನಡೆಸುತ್ತಿದ್ದರು” ಎಂದು ಜೆರೂಸಲೇಮ್‌ನಲ್ಲಿರುವ ಹೀಬ್ರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಲೀ ಲವಿನ್‌ ಹೇಳುತ್ತಾರೆ. “ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಧಾರ್ಮಿಕ ಆಚರಣೆಗಳು ಅಲ್ಲಿ ನಡೆಯುತ್ತಿದ್ದವು” ಎಂದವರು ಹೇಳುತ್ತಾರೆ. ಹಾಗಾಗಿ ಯೇಸು ಯಾಕೆ ಆಗಾಗ ಸಭಾಮಂದಿರಕ್ಕೆ ಹೋಗುತ್ತಿದ್ದನು ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. (ಮಾರ್ಕ 1:21; 6:2; ಲೂಕ 4:16) ಸಭಾಮಂದಿರದಲ್ಲಿ ಯೇಸು ಅಲ್ಲಿಗೆ ಬಂದವರಿಗೆ ಬೋಧಿಸುತ್ತಿದ್ದನು, ಬುದ್ಧಿ ಹೇಳುತ್ತಿದ್ದನು ಮತ್ತು ಪ್ರೋತ್ಸಾಹಿಸುತ್ತಿದ್ದನು. ಅದೇ ರೀತಿ ಅಪೊಸ್ತಲ ಪೌಲನು ಕ್ರೈಸ್ತ ಸಭೆ ಸ್ಥಾಪನೆಯಾದ ನಂತರ ಸಭಾಮಂದಿರಗಳಲ್ಲೇ ಹೆಚ್ಚು ಸುವಾರ್ತೆ ಸಾರಿದನು. ಯಾಕೆಂದರೆ ದೇವರ ಬಗ್ಗೆ ಕಲಿಯುವುದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದವರೇ ಅಲ್ಲಿಗೆ ಬರುತ್ತಿದ್ದರು. ಹಾಗಾಗಿ ಪೌಲನು ಸಾಮಾನ್ಯವಾಗಿ ಒಂದು ಪಟ್ಟಣವನ್ನು ಪ್ರವೇಶಿಸಿದಾಗ ಮೊದಲಿಗೆ ಸಭಾಮಂದಿರಕ್ಕೆ ಹೋಗುತ್ತಿದ್ದನು ಮತ್ತು ಅಲ್ಲಿ ಸಾರುತ್ತಿದ್ದನು.—ಅ. ಕಾ. 17:1, 2; 18:4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ