ಸುವಾರ್ತೆಯನ್ನು ನೀಡುವದು-ಧೈರ್ಯದಿಂದ ಚಂದಾ ನೀಡುವ ಮೂಲಕ
1 ವಾಚ್ಟವರ್ ಭೂಮಿಯಲ್ಲಿರುವ ಅತ್ಯುತ್ತಮ ಬೈಬಲಧ್ಯಯನ ಪತ್ರಿಕೆಯೆಂಬದು ನಿಸ್ಸಂಶಯ! ಇದು ನಿಜವೆಂಬ ಖಾತ್ರಿ ನಿಮಗಿದೆಯೇ? ಹಾಗಿದ್ದರೆ, ಅದಕ್ಕೆ ಚಂದಾ ಮಾಡುವಂತೆ ಪ್ರತಿಯೊಬ್ಬನಿಗೆ ಸಂದರ್ಭ ಕೊಡಬಾರದೇ?
2 ವಾಚ್ಟವರ್ ನ್ನು ಓದುವ ಮೂಲಕ ನಿಮಗೆ ವೈಯಕ್ತಿಕವಾಗಿ ಹೇಗೆ ಸಹಾಯವಾಗಿದೆ? ಆ ಪತ್ರಿಕೆಯು ನಮಗೆ ಸಹಾಯ ಮಾಡಿರುವ ವಿಧಾನಗಳನ್ನು ನಾವು ಪ್ರತಿಯೊಬ್ಬರು ತಿಳಿಸಬಲ್ಲೆವು. ನಾವು ಜೀವಿಸುವ ಸಮಯದ ಅರ್ಥವೇನೆಂದು ಎಚ್ಚರಗೊಳಿಸಿದರಲ್ಲಿ ಅದು ಮುಖ್ಯ ಸಾಧನವೆಂದು ಕೆಲವರು ಹೇಳಬಹುದು. ಅಥವಾ ಇಂದು ಮಾನವರನ್ನು ಕಳವಳಕ್ಕೆ ಗುರಿಪಡಿಸಿದ “ಅಂತ್ಯಕಾಲದ ಸೂಚನೆ” ಯ ನಿಜಾರ್ಥವನ್ನು ಕಲಿಯಲು ಅದು ನಮಗೆ ಸಹಾಯ ಮಾಡಿದೆ. (ಮತ್ತಾ. 16:3) ತಮ್ಮ ಜತೆ ಮಾನವರನ್ನು ದಬ್ಬುವ ಜನರನ್ನು ದೇವರ ರಾಜ್ಯವು ಬೇಗನೇ ನಾಶಮಾಡಲಿದೆ ಎಂಬ ಸುವಾರ್ತೆಯಿಂದ ತಾವು ಸಂತೈಸಲ್ಪಟ್ಟೆವೆಂದು ಕೆಲವರು ಹೇಳುತ್ತಾರೆ. ವಾಚ್ಟವರ್ ಆ ವಿಚಾರವನ್ನು ಸುಮಾರು 110 ವರ್ಷಗಳ ಹಿಂದೆ ತನ್ನ ಅತ್ಯಾರಂಭದಿಂದಲೇ ಮುಂದಕ್ಕೆ ತಂದಿರುತ್ತದೆ. ನಿಸ್ಸಂದೇಹವಾಗಿ ಈ ಗಮನಾರ್ಹ ಬೈಬಲ್ ಪತ್ರಿಕೆಯು ಅಸಂಪೂರ್ಣ ಮಾನವರಿಗೆ ನಿತ್ಯಜೀವದ ಸಂಧಿಯನ್ನು ಕೊಡುವ ವಿಮೋಚನಾ ಒದಗಿಸುವಿಕೆಯಲ್ಲಿ ನಮ್ಮ ನಂಬಿಕೆಯನ್ನು ಕಟ್ಟಲು ಸಹಾಯ ಮಾಡಿದೆ. ಇತರರು ಈ ಸತ್ಯವನ್ನು ಕಲಿಯುವ ಅಗತ್ಯವಿದೆ.
ಸಕಾರಾತ್ಮಕ ಹೊರನೋಟವಿಡಿರಿ
3 ವಾಚ್ಟವರ್ ಒತ್ತಿಹೇಳುವುದು ದೇವರ ಜ್ಞಾನವನ್ನೇ ಹೊರತು ಮಾನವ ವಿವೇಚನೆಯನ್ನಲ್ಲ. (ಯೆಶಾ. 55:8, 9) ಅಂತಹ ಜ್ಞಾನವು ಇಂದು ಪ್ರತಿಯೊಬ್ಬನಿಗೆ ಅತ್ಯಾವಶ್ಯಕವಾಗಿ ಬೇಕು. ಅದು ಜೀವಿತಗಳನ್ನು ಪ್ರಗತಿಗೊಳಿಸುತ್ತದೆ ಮತ್ತು ಯೋಗ್ಯ ಹೇತುಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. “ಬದುಕಿ ಬಾಳಲು” ಇದು ಅತ್ಯಾವಶ್ಯಕ. (ಜ್ಞಾನೋ. 9:1-6) ಹೀಗೆ, ಖಾತ್ರಿಯನ್ನು ಪಡೆದವರಾಗಿ ನಾವು ಚಂದಾವನ್ನು ಸಕಾರಾತ್ಮಕ ಭಾವದಿಂದ ನೀಡುವೆವು ಯಾಕೆಂದರೆ ಇತರರಿಗೆ ಏನು ಅವಶ್ಯವೋ ಅದು ನಮ್ಮಲ್ಲಿದೆ ಎಂದು ನಮಗೆ ಗೊತ್ತಿದೆ. ಮನೆಯವರಿಗೆ ಸಹಾಯಕವೆಂದು ನೀವು ನಂಬುವ ಹೇಳಿಕೆಗಳಿಗಾಗಿ ಪ್ರತಿಯೊಂದು ಸಂಚಿಕೆಯನ್ನು ಜಾಗ್ರತೆಯಿಂದ ಹುಡುಕಿ ನೋಡಿರಿ. ಅಂತಹ ಪೂರ್ವ ತಯಾರಿಯು ನಿಮ್ಮ ಶುಶ್ರೂಷೆಯಲ್ಲಿ ಈ ಪತ್ರಿಕೆಗಳನ್ನು ನೀಡುವಾಗ ಸಕಾರಾತ್ಮ ಭಾವವನ್ನು ತೋರಿಸಲು ಸಹಾಯ ಮಾಡುವುದು.
4 ಚಂದಾ ನೀಡುವ ಕುರಿತಾಗಿ ಕೆಲವರಿಗೆ ನಕಾರಾತ್ಮಕ ಭಾವವಿದೆ. ಅವರು ಮನೆಯವರನ್ನು ಸಂಭಾಷಣೆಗೆ ತೊಡಗಿಸುತ್ತಾರೆ, ಸಂಭಾಷಣೆಗಾಗಿ ವಿಷಯವನ್ನೂ ಚರ್ಚಿಸುತ್ತಾರೆ, ಅದರೆ ಅನಂತರ ಚಂದಾ ನೀಡುವ ಬದಲಾಗಿ ಎರಡು ಪತ್ರಿಕೆಗಳನ್ನು ಮತ್ತು ಒಂದು ಬ್ರೊಷರನ್ನು 7 ರೊಪೈಗೆ ನೀಡಿ ಹೋಗಿಬಿಡುತ್ತಾರೆ. ಏಕೆ? ಬೆಲೆ ಹೆಚ್ಚೆಂದೋ? ಹಾಗಿದ್ದರೆ, ಅದು ವ್ಯಾವಹಾರ್ಯ ವಿವೇಚನೆಯಲ್ಲ. ಐಹಿಕ ಪ್ರಕಾಶನಗಳಿಗೆ ತುಲನೆ ಮಾಡುವಲ್ಲಿ ನಮ್ಮ ಚಂದಾದರವು ಅತ್ಯಲ್ಪ, ಮೂಲ್ಯತೆಯ ತುಲನೆಯಲ್ಲಾದರೋ ವಾಚಕನಿಗೆ ಅದು ಅತ್ಯಮೂಲ್ಯವು. ಆದ್ದರಿಂದ ಸಕಾರಾತ್ಮಕ ಭಾವದಿಂದ ವಾಚ್ಟವರ್ ಚಂದಾವನ್ನು ಬರೇ 40 ರೂಪಾಯಿಗೆ, ಅಥವಾ ಎವೇಕ್! ಜೊತೆಯಲ್ಲಿ ನೀಡುವುದಾದರೆ ಕೇವಲ 80 ರೂಪಾಯಿಗೆ ಕೊಡಿರಿ.
5 ಚಂದಾಗಳನ್ನು ನೀಡಲೇ ಬೇಕೆಂಬ ನಿರ್ಧಾರವನ್ನು ಸಹೋದರಿಯೊಬ್ಬಳು ಮಾಡಿದಳು ಮತ್ತು ಎರಡು ತಿಂಗಳಿಗೆ 50 ಚಂದಾಗಳ ಗುರಿಯನ್ನಿಟ್ಟಳು. ಮೊದಲ ತಿಂಗಳಲ್ಲಿ ಅವಳಿಗೆ 31 ಚಂದಾಗಳು ಸಿಕ್ಕಿದವು ಮತ್ತು ಎರಡು ತಿಂಗಳಲ್ಲಿ ಒಟ್ಟಿಗೆ 50 ದೊರೆತವು. ಕೆಲವರಲ್ಲಿ ಹಣವಿರಲ್ಲಿಲ್ಲ ಅದರೆ ಚಂದಾ ಅವರಿಗೆ ಬೇಕಿತ್ತು, ಆದ್ದರಿಂದ ಮನೆಯವರು ಹಣವನ್ನು ಒಟ್ಟುಸೇರಿಸುವ ತನಕ 3-4 ಸಾರಿ ಅವರನ್ನು ತಾನು ಸಂದರ್ಶಿದೆನೆಂದು ಆಕೆ ಹೇಳಿದಳು. (ವ.ಪು.89, ಪುಟ 60-1; 1990 ವರ್ಷ ಪುಸ್ತಕ ಪುಟ 47-9 ನ್ನೂ ನೋಡಿ.) ಎಲ್ಲಿ ವಾರ್ಷಿಕ ಚಂದಾವು ಸುಮಾರು 235 ರೂಪಾಯಿಗೆ ಸಮಾನವೋ ಆ ಜಾಪಾನ್ ದೇಶದಲ್ಲಿ ಸಹೋದರರು ಒಕ್ಟೋಬರದಲ್ಲಿ 71,600 ಚಂದಾಗಳನ್ನು ನೀಡಿದರು, ಇದು ಕಳೆದ ವರ್ಷ ಅದೇ ತಿಂಗಳಲ್ಲಿ ನೀಡಿದ ಚಂದಾಕ್ಕಿಂತ 57 ಸೇಕಡಾ ವೃದ್ಧಿಯು ಮತ್ತು ಹೊಸ ಉನ್ನತ ಸಂಖ್ಯೆ.
ಧೈರ್ಯದಿಂದ ಮುಂದರಿಯಿರಿ
6 ಶುಶ್ರೂಷೆಯಲ್ಲಿ ಧೈರ್ಯದಿಂದಿರಲು ನಮಗೆ ಸಕಾರಣವದೆ—ಯೆಹೋವನ ಬೆಂಬಲವು ನಮಗಿದೆ. (ಅಪೋ. 14:3) ಸುವಾರ್ತೆಯನ್ನು ಹಬ್ಬಿಸಲು ಯೆಹೋವನು ಇಂದು ಬಳಸುತ್ತಿರುವ ಒಂದು ಪ್ರಧಾನ ಉಪಕರಣವು ವಾಚ್ಟವರ್ ಆಗಿದೆ. ನಾವು ಚಂದಾಗಳನ್ನು ನೀಡಿದರೆ ಮತ್ತು ನಂತರ ಪುನರ್ಭೇಟಿ ಮಾಡಿ ಅದನ್ನೋದಲು ಉತ್ತೇಜನ ಕೊಟ್ಟರೆ ನಮ್ಮ ಪರಿಶ್ರಮದ ಪ್ರಯತ್ನವು ಜನರ ಜೀವವನ್ನು ರಕ್ಷಿಸಬಹುದು. ಆದ್ದರಿಂದ, ನಮ್ಮ ಪರಿಚಯದ ಎಲ್ಲರಿಗೆ ಮತ್ತು ಕ್ಷೇತ್ರದಲ್ಲಿ ನಮಗೆ ಸಿಗುವವರಿಗೆ ಚಂದಾಗಳನ್ನು ಉತ್ಸಾಹದಿಂದಲೂ ಧೈರ್ಯದಿಂದಲೂ ನಾವು ನೀಡುವವರಾಗುವ.