ಬೈಬಲ್ ವಿದ್ಯಾರ್ಥಿಗಳು ಪ್ರಗತಿಮಾಡುವಂತೆ ಪ್ರೋತ್ಸಾಹಿಸಿರಿ
1 ಲೋಕವು ಪ್ರಗತಿಯ ಕುರಿತು ಯೋಚಿಸುವುದು ಮುಖ್ಯವಾಗಿ ತಂತ್ರಜ್ಞಾನ ಮತ್ತು ಪ್ರಾಪಂಚಿಕ ದೃಷ್ಟಿಕೋನದಿಂದಲೇ. ಆದರೆ ಯೆಹೋವನ ಜನರು ಆ ರೀತಿಯವರಲ್ಲ. ಬದಲಿಗೆ, ನಾವು ಆತ್ಮಿಕವಾಗಿ ಪ್ರಗತಿಪರರಾಗುವಂತೆ ಪರಿಶ್ರಮ ವಹಿಸುತ್ತೇವೆ. ಕ್ರಿಸ್ತನ ಸಕ್ರಿಯ ಮತ್ತು ಫಲಭರಿತ ಶಿಷ್ಯರಾಗುವಂತೆ ನಮ್ಮನ್ನು ನಡಿಸಲು ದೊರೆತ ಆ ಪ್ರೋತ್ಸಾಹನೆಗಾಗಿ ನಾವೆಲ್ಲರೂ ಸಂತೋಷಿಸುತ್ತೇವೆ.—ಯೋಹಾ. 15:8; 2 ಪೇತ್ರ 1:5-8.
2 ಸುವಾರ್ತೆಗಳಲ್ಲಿ “ಶಿಷ್ಯ” ಎಂಬ ಶಬ್ದವು ಮುಖ್ಯವಾಗಿ ಕ್ರಿಸ್ತನ ಬೋಧನೆಗಳನ್ನು ನಂಬುವವರಿಗೆ ಮಾತ್ರವೇ ಅಲ್ಲ ಅವನ್ನು ನಿಕಟವಾಗಿ ಪಾಲಿಸುವವರಿಗೂ ಅನ್ವಯಿಸುತ್ತದೆ. (ಮತ್ತಾ. 28:19, 20) ಆ ನಿಜತ್ವವನ್ನು ಬೈಬಲ್ ವಿದ್ಯಾರ್ಥಿಗಳು ಗಣ್ಯಮಾಡುತ್ತಾರೋ? ಶಿಷ್ಯರಾಗಿ ಪರಿಣಮಿಸುವುದರಲ್ಲಿ ಪ್ರಗತಿಮಾಡುವಂತೆ ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?
ಆಸಕ್ತಿಯನ್ನು ಸಂಸ್ಥೆಯೆಡೆಗೆ ನಡಿಸಿರಿ
3 ವಿದ್ಯಾರ್ಥಿಯ ಪ್ರಗತಿಯು ನಿಶ್ಚಯವಾಗಿಯೂ ಯೆಹೋವನ ಸಂಸ್ಥೆಗಾಗಿ ಅವನಿಗಿರುವ ಗಣ್ಯತೆಯೊಂದಿಗೆ ಜೋಡಿಸಲ್ಪಟ್ಟಿದೆ. ಆದಕಾರಣ, ದೇವರ ಸಂಸ್ಥೆಯ ಕಡೆಗೆ ವಿದ್ಯಾರ್ಥಿಯ ಆಸಕ್ತಿಯನ್ನು ಮಾರ್ಗದರ್ಶಿಸುವುದು ಶಿಕ್ಷಕರಾದ ನಮ್ಮ ಜವಾಬ್ದಾರಿಯ ಒಂದು ಭಾಗ. ಸಂಸ್ಥೆಯ ಕುರಿತಾಗಿ ಏನಾದರೊಂದು ವಿಷಯವನ್ನು ವಿವರಿಸುವಂತೆ ಪ್ರತಿಯೊಂದು ಬೈಬಲ್ ಅಭ್ಯಾಸದ ಸಮಯದಲ್ಲಿ 5-10 ನಿಮಿಷಗಳನ್ನು ಉಪಯೋಗಿಸುವಂತೆ ವರ್ಷಗಳಿಂದ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಜೆಹೋವ ವಿಟ್ನೆಸಸ್ ಯುನೈಟೆಡ್ಲೀ ಡುಯಿಂಗ್ ಗಾಡ್ಸ್ ವಿಲ್ಲ್ ವರ್ಲ್ಡ್ವೈಡ್ ಬ್ರೋಷರ್ ಇದನ್ನು ಮಾಡಲು ಒಂದು ಉತ್ತಮ ಚೌಕಟ್ಟನ್ನು ಒದಗಿಸಿದೆ. ನಿಮ್ಮ ಬೈಬಲ್ ವಿದ್ಯಾರ್ಥಿಯೊಂದಿಗೆ ಇದರ ಪ್ರತಿಯು ಇದೆಯೋ? ಇಲ್ಲದಿದ್ದರೆ, ಬಲುಬೇಗನೇ ಅವನು ಅದನ್ನು ಪಡೆಯವಂತೆ ನೋಡಿರಿ. ಅದನ್ನೋದುವಂತೆ ಅವನನ್ನು ಉತ್ತೇಜಿಸಿರಿ. ಮತ್ತು ಪ್ರತಿ ಅಧ್ಯಯನದಲ್ಲಿ ಅದರ ಒಂದು ಚಿಕ್ಕ ವಿಭಾಗಕ್ಕೆ ನೀವು ಗಮನಕೊಡಲಿದ್ದೀರೆಂದು ವಿವರಿಸಿರಿ.
4 ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷರಿನ 14 ಮತ್ತು 15 ಪುಟದಲ್ಲಿರುವ ಸಮಾಚಾರವು ಪ್ರತಿಯೊಂದು ಸಭಾಕೂಟಗಳಿಗೆ ಗಣ್ಯತೆ ಕಟ್ಟುವಂತಹ ವಿಧದಲ್ಲಿ ರೂಪಿಸಲಾಗಿದೆ. ಪ್ರತಿವಾರ ಒಂದು ಯಾ ಎರಡು ಪಾರಾಗಳನ್ನು ಯಾಕೆ ಆವರಿಸಕೂಡದು? ಒಂದು ನಿರ್ದಿಷ್ಟ ಅವಶ್ಯಕತೆಯನ್ನು ಪೂರೈಸಲು ಪ್ರತಿಯೊಂದು ಕೂಟವು ಹೇಗೆ ತರಬೇತಿ ಮತ್ತು ಉಪದೇಶವನ್ನು ಕೊಡುತ್ತದೆ ಎಂದು ವಿವರಿಸಿರಿ. ನಾವು “ಸಭೆಯಾಗಿ ಕೂಡಿಕೊಳ್ಳುವುದರ” ಫಲವಾಗಿ ಆತ್ಮಿಕ ಬೆಳವಣಿಗೆ ಉಂಟಾಗುತ್ತದೆಂದು ವಿದ್ಯಾರ್ಥಿಯು ಕಾಣುವಂತೆ ಮಾಡಿರಿ. (ಇಬ್ರಿ. 10:24, 25) ರಾಜ್ಯಗೃಹದಲ್ಲಿ ನಮ್ಮೊಂದಿಗೆ ಜತೆಗೂಡುವಂತೆ ಹುರುಪಿನಿಂದ ಅವನನ್ನು ಉತ್ತೇಜಿಸಿರಿ. ಯೆಹೋವನ ಸಭೆಸೇರಿದ ಜನರೋಪಾದಿ ನಾವು ಸಂತೋಷಿಸುವ ಐಕ್ಯತೆ ಮತ್ತು ಪ್ರೀತಿಯನ್ನು ಅವನು : ಅನುಭವಿಸುವನು.—ಕೀರ್ತ.133:1; ಯೋಹಾ. 13:35.
ಆತ್ಮಿಕ ಬೆಳವಣಿಗೆಯನ್ನು ಚೇತರಿಸಿರಿ
5 ಹೊಸಬರು ದೇವರ ವಾಕ್ಯದ ನಿಜ ವಿದ್ಯಾರ್ಥಿಗಳಾಗಿ ಜ್ಞಾನ, ತಿಳುವಳಿಕೆ, ಮತ್ತು ಅದರ ತತ್ವಗಳನ್ನು ಅನ್ವಯಿಸುವುದರಲ್ಲಿ ಬೆಳೆಯುವ ಅಗತ್ಯವಿದೆ. ಈ ಕಾರಣದಿಂದ ನಾವು ಲಿವ್ವ್ ಫಾರೆವರ್ ಮತ್ತು ಯುನೊಯಿಟೆಡ್ ಇನ್ ವರ್ಶಿಪ್ ಅಥವಾ ಟ್ರು ಪೀಸ್ ಪುಸ್ತಕಗಳನ್ನು, ವಿದ್ಯಾರ್ಥಿಯು ಅವನ್ನು ಮುಗಿಸುವ ಮುಂಚೆ ದೀಕ್ಷಾಸ್ನಾನ ಪಡೆದರೂ ಕೂಡ ಅಭ್ಯಸಿಸುತ್ತಾ ಮುಂದರಿಯುವೆವು. ಎರಡನೇ ಪುಸ್ತಕದ ಅಭ್ಯಾಸ ಆರಂಭಿಸ ಸಿದ್ಧನಾಗಲು ಅವನಿಗಿನ್ನೂ ಹಲವಾರು ತಿಂಗಳುಗಳಿರುವದಾದರೂ ವಿದ್ಯಾರ್ಥಿಯು ಈ ಪುಸ್ತಕಗಳ ಪ್ರತಿಗಳನ್ನು ಪಡಕೊಳ್ಳಬಹುದು. ಇದು ಅವನ ಆತ್ಮಿಕ ರುಚಿಯನ್ನು ಹೆಚ್ಚಿಸಿ, ಅಧಿಕ ವಾಚನಕ್ಕೆ ಪ್ರಚೋದಿಸಿ, ಅವನ ಪ್ರಗತಿಯನ್ನು ತರ್ವೆಗೊಳಿಸುವುದು. ಅದಲ್ಲದೆ, ವಾಚ್ಟವರ್ ಮತ್ತು ಎವೇಕ್! ಗೆ ಚಂದಾ ಮಾಡುವ ಮೂಲಕ ಹಾಗೂ ಸೊಸೈಟಿಯ ಇತರ ಪ್ರಕಾಶನಗಳನ್ನು ಪಡಕೊಂಡು “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು” ಸೇವಿಸುವ ಮೂಲ್ಯತೆಯನ್ನು ನಾವು ತಿಳಿಸಬಹುದು. (ಲೂಕ 12:42) ಹೀಗೆ ಮಾಡುವವರು ನಂಬಿಕೆಯಲ್ಲಿ ಬೇರೂರಿ, ಬಲಗೊಂಡು, ಸ್ಥಿರಗೊಳ್ಳುವರು. —ಕೊಲೊ. 2:7.
6 ಯೆಹೋವನ ಭಾವೀ ಜತೆ ಸಾಕ್ಷಿಗಳೋಪಾದಿ ಬೈಬಲ್ ವಿದ್ಯಾರ್ಥಿಗಳು ಪಕ್ವತೆಗೆ ಬೆಳೆಯ ಬೇಕಾದರೆ ಅವರಿಗೆ ನಮ್ಮ ಸಹಾಯ ಬೇಕು. (ಇಬ್ರಿ. 5:14) ಪ್ರಗತಿಯನ್ನು ಪ್ರೋತ್ಸಾಹಿಸಲು ನಾವು ತಕ್ಕದಾದ ಪ್ರಶಂಸೆಯನ್ನು ನೀಡತಕ್ಕದ್ದು. (ಫಿಲಿ. 3:16) ತಾನು ಕಲಿಯುತ್ತಿರುವ ವಿಷಯಗಳನ್ನು ಕುಟುಂಬಕ್ಕೆ ಯಾ ಪರಿಚಿತರಿಗೆ ಅವನು ತಿಳಿಸುತ್ತಾನೋ? ಯೋಗ್ಯತೆ ಪಡೆದಿದ್ದಲ್ಲಿ, ದೇವಪ್ರಭುತ್ವ ಶುಶ್ರೂಷೆ ಶಾಲೆಯನ್ನು ಸೇರಿದ್ದಾನೋ? ಸುವಾರ್ತೆಯ ಪ್ರಚಾರಕನಾಗುವ ಅಪೇಕ್ಷೆಯನ್ನು ಅವನು ತೋರಿಸುತ್ತಾನೋ?
7 ಶಿಕ್ಷಕರಾದ ನಾವು ನಮ್ಮ ಪಾಲನ್ನು ಮಾಡುವದಾದರೆ ಯೆಹೋವನ ಹೇರಳ ಆಶೀರ್ವಾದವನ್ನು ನಾವು ಮುನ್ನೋಡ ಸಾಧ್ಯವಿದೆ. (2 ಕೊರಿ. 9:6) ಬೈಬಲ್ ವಿದ್ಯಾರ್ಥಿಗಳಿಗಾಗಿ ಮಾಡುವ ಪ್ರಾರ್ಥನೆಯ ಬಲವನ್ನು ನಾವೆಂದೂ ಮರೆಯಬಾರದು. ತಾವು ಕಲಿಯುವ ವಿಷಯಗಳ ಕಡೆಗೆ ಪ್ರತಿಕ್ರಿಯಿಸಲು ಅವರನ್ನು ನಡಿಸುವಂತೆ ಯೆಹೋವನನ್ನು ಬೇಡಿರಿ. (1 ಕೊರಿ. 3:6, 7) ಹೀಗೆ, ಸಭೆಯೊಂದಿಗೆ ಆಸಕ್ತಿಯಿಂದ ಜತೆಗೂಡಿ, ಯೆಹೋವನ ನಾಮಕ್ಕೆ ಇನ್ನಷ್ಟು ಸ್ತುತಿ, ಮಹಿಮೆಯನ್ನು ತರುವಂತೆ ಅವರು ಕ್ರಿಯಾಶೀಲ ನಿರ್ಣಯವನ್ನು ಮಾಡುವಂತಾಗಲಿ.