ಸುವಾರ್ತೆಯನ್ನು ನೀಡುವದು ಪ್ರಾರ್ಥನಾಪರ ರೀತಿಯಲ್ಲಿ
1 “ನನ್ನಲ್ಲಿ ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅಪೊಸ್ತಲ ಪೌಲನು ಫಿಲಿಪ್ಪಿಯವರಿಗೆ ಪ್ರೋತ್ಸಾಹಿಸುತ್ತಾ ಬರೆದನು. (ಫಿಲಿ. 4:13) ಸುವಾರ್ತೆಯನ್ನು ಧೈರ್ಯದಿಂದ ನೀಡಲು ಬಲಕ್ಕಾಗಿ ನಾವು ಯೆಹೋವನಲ್ಲಿ ಪೂರ್ಣವಾಗಿ ಆತುಕೊಳ್ಳುವ ಅಗತ್ಯವಿದೆ. ನಾವಿದನ್ನು ಮಾಡುವುದು ಹೇಗೆ?
2 “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುವ” ಅಗತ್ಯವನ್ನು ಯೇಸು ಒತ್ತಿಹೇಳಿದನು. (ಲೂಕ 18:1) “ಎಡೆಬಿಡದೆ ಪ್ರಾರ್ಥನೆ ಮಾಡಿರಿ” ಎಂದು ಪೌಲನು ಬೋಧಿಸಿದ್ದಾನೆ. (1 ಥೆಸ. 5:17) ಹೌದು, ಪ್ರಾರ್ಥನೆಯಿಂದ ಬಲವು ಸಿಗುತ್ತದೆ. ಸುವಾರ್ತೆಯನ್ನು ಪ್ರಾರ್ಥನಾಪರ ಭಾವದಿಂದ ನೀಡುವ ಅಗತ್ಯವಿದೆ ನಮಗಿದೆ. ಇತರರಿಗೆ ಸಾಕ್ಷಿಕೊಡುವ ಸಂದರ್ಭಗಳಿಗಾಗಿ, ಮನೆಮನೆಯ ಸೇವೆಯಲ್ಲಿ ವಿವೇಕ ಮತ್ತು ವಿವೇಚನೆಗಾಗಿ ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳ ಹೃದಯಗಳನ್ನು ತಲಪುವದರಲ್ಲಿ ಸಾಫಲ್ಯಕ್ಕಾಗಿ ನಾವು ಪ್ರಾರ್ಥಿಸಬಹುದು. ಅಂತ್ಯವು ಬರುವ ಮುಂಚೆ ರಾಜ್ಯದ ಸುವಾರ್ತೆಯನ್ನು ಸಾರಿ ಮುಗಿಸುವ ಜರೂರಿಯ ಅಗತ್ಯವಿರಲಾಗಿ, ಲೋಕವ್ಯಾಪಕ ರಾಜ್ಯಾಭಿರುಚಿಗಳಿಗಾಗಿ ಪ್ರಾರ್ಥಿಸುವ ಅಗತ್ಯವೂ ನಮಗಿದೆ. (ಮತ್ತಾ. 24:14) ಆತ್ಮಿಕ ತೂಕಡಿಸುವಿಕೆಯನ್ನು ತಪ್ಪಿಸಲು ನಾವು ಪ್ರಾರ್ಥನೆಯಲ್ಲಿ ‘ಎಚ್ಚರವಾಗಿರ’ ಬೇಕು ಮತ್ತು ಯೆಹೋವನ ಉದ್ದೇಶಗಳ ಕುರಿತು ಇತರರರಿಗೆ ಹೇಳುವ ಸುಯೋಗಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸಬೇಕು.—ಕೊಲೊ. 4:2; w62 ಪುಟ 497.
ಬೈಬಲಭ್ಯಾಸಗಳಲ್ಲಿ
3 ಒಂದು ಬೈಬಲಭ್ಯಾಸ ನಡಿಸುವಾಗ ಪ್ರಾರ್ಥನೆಯು ಏಕೆ ಅಷ್ಟು ಮಹತ್ವವು? ಅಭ್ಯಾಸವನ್ನು ಪ್ರಾರ್ಥನೆಯಿಂದ ಪ್ರಾರಂಭಿಸುವುದು ನಮ್ಮನ್ನು ಯೋಗ್ಯ ಮನೋ ಚೌಕಟ್ಟಿನಲ್ಲಿ ಹಾಕುತ್ತದೆ ಮತ್ತು ಹೇಳಲ್ಪಡುವ ವಿಷಯಗಳ ಮಹತ್ವವನ್ನು ಮನಗಾಣುವಂತೆ ಅದು ವಿದ್ಯಾರ್ಥಿಗೆ ಸಹಾಯ ಮಾಡುವುದು. ಅವನು ಮಾರ್ಗದರ್ಶನೆಗಾಗಿ ಯೆಹೋವನ ಕಡೆಗೆ ನೋಡಲು ಕಲಿಯುವನು. ಹೇಗೆ ಪ್ರಾರ್ಥಿಸಬೇಕೆಂಬದನ್ನೂ ವಿದ್ಯಾರ್ಥಿಯು ನಮ್ಮ ಮಾದರಿಯಿಂದ ಕಲಿಯುವನು.—ಲೂಕ 11:1.
4 ಮನೆ ಬೈಬಲಭ್ಯಾಸಗಳಲ್ಲಿ ಪ್ರಾರ್ಥಿಸುವಾಗ ಸೇರಿಸುವ ಕೆಲವು ತಕ್ಕದಾದ್ದ ವಿಷಯಗಳು ಯಾವುವು? ಯೇಸುವಿನ ಮಾದರಿ ಪ್ರಾರ್ಥನೆ ಮತ್ತು ಪೌಲನು ಫಿಲಿಪ್ಪಿಯರ ಪರವಾಗಿ ಮಾಡಿದ ಪ್ರಾರ್ಥನೆ ಅತ್ಯುತ್ತಮ ಮಾದರಿಗಳು. (ಮತ್ತಾ. 6:9-13; ಫಿಲಿ. 1:9-11) ನಮ್ಮ ಪ್ರಾರ್ಥನೆಯು ಉದ್ದವಾಗಿರಬೇಕಾದ ಅಗತ್ಯವಿಲ್ಲ, ಆದರೆ ವಿಶಿಷ್ಟ ವಿಷಯಗಳು ಅದರಲ್ಲಿ ಸೇರಿರಬೇಕು. ಯೆಹೋವನ ಅಸಂಖ್ಯಾತ ಅತ್ಯುತ್ತಮ ಕಾರ್ಯಗಳಿಗಾಗಿ ಸ್ತುತಿಯ ತಕ್ಕದಾದ್ದ ನುಡಿಗಳನ್ನು ನಾವು ಸೇರಿಸುವುದು ಮಹತ್ವದ್ದು. ಆತನ ಮಹೋನ್ನತೆ, ಮಹಿಮೆ ಮತ್ತು ಪರಿಪೂರ್ಣ ಗುಣಗಳ ಅಂಗೀಕಾರವನ್ನು ನಾವು ವ್ಯಕ್ತಪಡಿಸಬೇಕು. (ಕೀರ್ತ. 145:3-5) ಬೈಬಲ್ ವಿದ್ಯಾರ್ಥಿಯ ಹೆಸರನ್ನು ಹೇಳಿ, ಪ್ರಾಯಶಃ ಅವನ ಪರಿಸ್ಥಿತಿಗಳನ್ನು ನೆನಪಿಗೆ ತಂದು, ಅವನು ಆತ್ಮಿಕವಾಗಿ ಪ್ರಗತಿ ಮಾಡುವಂತೆ ಪ್ರಾರ್ಥಿಸುವುದು ಪ್ರಯೋಜನಕಾರಿ. ಅವನು ಪ್ರಗತಿ ಮಾಡಿದಷ್ಟಕ್ಕೆ, ಕೂಟಗಳಿಗೆ ಹಾಜರಾಗುವ ಮತ್ತು ಕಲಿತ ಸತ್ಯವನ್ನು ಇತರರಿಗೆ ತಿಳಿಸುವ ಅವನ ಪ್ರಯತ್ನದ ಮೇಲೆ ಯೆಹೋವನ ಆಶೀರ್ವಾದವನ್ನು ಕೇಳಬಹುದು. ಲೋಕವ್ಯಾಪಕ ಸಾರುವ ಕಾರ್ಯದ ಮೇಲೆ ಯೆಹೋವನ ಆಶೀರ್ವಾದಕ್ಕಾಗಿಯೂ ವಿನಂತಿಗಳನ್ನು ಸೇರಿಸಿರಿ.
ನಮ್ಮ ಸಹೋದರ ಮತ್ತು ಸಹೋದರಿಯರಿಗಾಗಿ
5 ಯೆಹೋವನ ಜನರೆಲ್ಲರೂ ನಮ್ಮ ಜತೆ ಕೆಲಸಗಾರರು. (1 ಕೊರಿ. 3:9) ಆದ್ದರಿಂದ, ಐಹಿಕ ಅಧಿಕಾರಿಗಳು ಸುವಾರ್ತೆ ಸಾರುವ ಕಾರ್ಯಕ್ಕೆ ತಡೆಮಾಡಲು ಹುಡುಕುವಾಗ, “ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ” ಪ್ರಾರ್ಥಿಸಲು ನಾವು ಪ್ರೇರಿಸಲ್ಪಡುತ್ತೇವೆ. ಯಾವ ಉದ್ದೇಶಕ್ಕಾಗಿ? “ನಮಗೆ ಸುಖ ಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿ ಮತ್ತು ಗೌರವದಿಂದ ಕಾಲಕ್ಷೇಪ” ಮಾಡುವಂತೆಯೇ. (1 ತಿಮೊ. 2:1, 2) ಅಂಥ ಪ್ರಾರ್ಥನೆಯು ಕಾರ್ಯಥ ಭೂಸುತ್ತಲೂ ಇರುವ ನಮ್ಮ ಸಹೋದರರ ಪರವಾಗಿ ಇವೆ. ಅಧಿಕಾರಿಗಳು ನಮ್ಮ ಕಾರ್ಯದ ಕಡೆಗೆ ಅನುಗ್ರಹ ಭಾವವನ್ನು ತೋರಿಸುವಂತೆ ನಾವು ಪ್ರಾರ್ಥಿಸುತ್ತೇವೆ.
6 ಪ್ರಾರ್ಥನೆಯ ಮೂಲಕವಾಗಿ, ಕಷ್ಟದ ಪರಿಸ್ಥಿತಿಗಳ ಕೆಳಗೆ ಸಾರುವ ನಮ್ಮ ಸಹೋದರರಿಗಾಗಿ ಮತ್ತು ಆತ್ಮಿಕವಾಗಿ ರೋಗಿಗಳಾಗಿರುವವರಿಗೆ ಅವರು ಶುಶ್ರೂಷೆಯಲ್ಲಿ ಪೂರ್ಣ ಭಾಗಿಗಳಾಗುವ ಹಾಗೆ ವಿನಂತಿಸಬಲ್ಲೆವು. (2 ಥೆಸ. 3:1, 2) ಸಭಾ ಹಿರಿಯರಿಗಾಗಿ, ಸರ್ಕಿಟ್ ಮೇಲ್ವಿಚಾರಕರಿಗಾಗಿ ಮತ್ತು ಆಡಳಿತಾ ಮಂಡಲಿಗಾಗಿ—“ನಿಮ್ಮಲ್ಲಿ ಪ್ರಯಾಸಪಟ್ಟು ಕಾರ್ಯ ನಡಿಸುವ” ಎಲ್ಲರಿಗಾಗಿ ಪ್ರಾರ್ಥಿಸುವುದೂ ಒಳ್ಳೆಯದು.—1 ಥೆಸ. 5:12.
7 ಎಲ್ಲಾ ಸಮಯಗಳಲ್ಲಿ ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವ ಅಗತ್ಯ ನಮಗಿದೆ. (ಕೀರ್ತ. 55:2; 1 ಪೇತ್ರ 5:7) ನಾವು ದೇವರ ಚಿತ್ತಾನುಸಾರ ಏನೇ ಬೇಡಿಕೊಳ್ಳಲಿ, ಆತನದನ್ನು ಲಾಲಿಸುತ್ತಾನೆಂಬ ಆಶ್ವಾಸನೆ ನಮಗೆ ನಮಗಿದೆ. (1 ಯೋಹಾ. 5:14) ಆದ್ದರಿಂದ, ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸುವುದರಲ್ಲಿ ಸಹಾಯಕ್ಕಾಗಿ ನಾವು ಯೆಹೋವನಿಗೆ ಪ್ರಾರ್ಥಿಸಿದ್ದಲ್ಲಿ, ಆತನು ಕಿವಿಗೊಡುವನು ಮತ್ತು ನಮ್ಮ ದಾರಿಯನ್ನು ಸಫಲ ಮಾಡುವನು ಎಂಬ ಭರವಸ ನಮಗೆ ಇರಬೇಕು.—2 ತಿಮೊ. 4:5.