ಅತ್ಯಂತ ಮಹಾನ್ ಪುರುಷನ ಬಗ್ಗೆ ಕಲಿಯುವಂತೆ ಇತರರಿಗೆ ಸಹಾಯ ಮಾಡಿರಿ
1 ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಓದಿರುವಂಥ ಅನೇಕರು ಅದು ತಮ್ಮ ಜೀವಿತಗಳ ಮೇಲೆ ಬೀರಿರುವ ಪರಿಣಾಮಕ್ಕಾಗಿ ಯಥಾರ್ಥ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಬರೆದದ್ದು: “ನಾನು ಪುಸ್ತಕದ ಸಮಾಪ್ತಿಗೆ ಬಂದಾಗ, ನಾನು ಯೇಸುವಿನಿಂದ ಅವನೊಂದಿಗೆ ಸಹವಸಿಸಲು, ಅವನ ಜೊತೆಯಲ್ಲಿ ಜೀವಿಸಲು, ಅವನ ಬಾಧೆಗಳನ್ನು, ಮನೋಭಾವಗಳನ್ನು, ಅವನ ಶುಶ್ರೂಷೆಯ ಪ್ರತಿಯೊಂದು ರೂಪವನ್ನು ಹಂಚಿಕೊಳ್ಳಲು, ಆಮಂತ್ರಿಸಲ್ಪಟ್ಟಿರುವಂತೆ ನನಗೆ ಅನಿಸಿತು. . . . ಪುಸ್ತಕವನ್ನು ಓದುವುದು ಯೇಸುವಿನ ಜೀವನದ ಬಗ್ಗೆ ಒಂದು ಚಲಚಿತ್ರವನ್ನು ವೀಕ್ಷಿಸುವಂತಿದೆ.”
2 ಅತ್ಯಂತ ಮಹಾನ್ ಪುರುಷ ಪುಸ್ತಕವು ನಾವು ಯೇಸುವಿನೊಂದಿಗೆ ಮಾತ್ರವಲ್ಲ ಯೆಹೋವನೊಂದಿಗೂ ಕೂಡ ಒಳ್ಳೆಯ ಪರಿಚಯ ಮಾಡಿಕೊಳ್ಳುವಂತೆ ಸಹಾಯ ನೀಡುತ್ತದೆ. (ಯೋಹಾ. 14:9) ಪುಸ್ತಕದ ಬಗ್ಗೆ ಒಬ್ಬ 12 ವರ್ಷ ವಯಸ್ಸಿನ ಮಗು ಹೇಳಿದ್ದು: “ಅದು ನನ್ನನ್ನು ಎಷ್ಟು ಸಾಂತ್ವನಗೊಳಿಸಿತ್ತೆಂದರೆ, ಅದನ್ನು ಓದಿದ ಕೂಡಲೇ ನಾನು ಯೆಹೋವನಿಗೆ ಆನಂದದ ಕಣ್ಣೀರಿನೊಂದಿಗೆ ಪ್ರಾರ್ಥಿಸಿದೆ. ಹೃದಯದ ಆಳದಲ್ಲಿ, ಯೆಹೋವನು ಮತ್ತು ಯೇಸು ನಮ್ಮ ಮೇಲೆ ಗಮನ ಇಡುತ್ತಿದ್ದಾರೆಂದು ಅರಿಯಲು ನನಗೆ ಮತ್ತೆ ಭರವಸೆ ಕೊಡಲ್ಪಟ್ಟಿತು.” ಯೋಹಾನ 17:3 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೆಹೋವನು ಮತ್ತು ಆತನ ಮಗನ ಬಗ್ಗೆ ಅರಿಯುವುದೇ ನಮಗೆ ನಿತ್ಯಜೀವದ ಅರ್ಥದಲ್ಲಿರುವುದೆಂದು ಯೇಸು ಹೇಳಿದನು. ಯೇಸುವಿನ ಜೀವನದ ಕುರಿತು ಈ ಪುಸ್ತಕವನ್ನು ಅಭ್ಯಾಸಿಸುವುದು ನಮಗೆ ಯೆಹೋವನ ವ್ಯಕ್ತಿತ್ವದ ವಿಶೇಷ ಒಳನೋಟವನ್ನು ಕೊಡುತ್ತದೆ ಯಾಕಂದರೆ ಯೇಸು “ಆತನ ತತ್ವದ ಮೂರ್ತಿ” ಯಾಗಿದ್ದಾನೆ.—ಇಬ್ರಿ. 1:3.
3 ಅತ್ಯಂತ ಮಹಾನ್ ಪುರುಷ ಪುಸ್ತಕದ ಒಂದು ಕೋಟಿ, 90 ಲಕ್ಷಕ್ಕಿಂತಲೂ ಅಧಿಕ ಪ್ರತಿಗಳು 70 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಮುದ್ರಿಸಲಾಗಿವೆ. ಪುಸ್ತಕವು ಎಷ್ಟು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಲ್ಪಡುತ್ತಿದೆ ಎಂದು ಇದು ತೋರಿಸುತ್ತದೆ. ಅನೇಕರು ಅದನ್ನು ಪಡೆದ ಕೂಡಲೇ ಸಂಪೂರ್ಣ ಪುಸ್ತಕವನ್ನು ಓದುತ್ತಾರೆ. ಒಬ್ಬ ಅಭಿರುಚಿಯುಳ್ಳ ಮನುಷ್ಯನು ಅದನ್ನು ಪಡೆದ ಎರಡು ವಾರಗಳಲ್ಲಿಯೇ ಓದಿ ಮುಗಿಸಿದನು. ಪುಸ್ತಕವನ್ನು ಸ್ವೀಕರಿಸಿದ ಒಬ್ಬ ಪಾದ್ರಿಯು ವರದಿಸಿದ್ದು: “ನನಗೆ ಪುಸ್ತಕವನ್ನು ಕೆಳಗೆ ಇಡಲು ಆಗುವದೇ ಇಲ್ಲ. ನಾವು ಮಲಗುವ ಮೊದಲು ಪ್ರತಿ ರಾತ್ರಿ ಅದರಲ್ಲಿನ ಕೆಲವು ವಿಷಯಗಳನ್ನು ನನ್ನ ಹೆಂಡತಿ ಮತ್ತು ನಾನು ಓದುತ್ತೇವೆ.”
4 ಅನೌಪಚಾರಿಕ ಸಾಕ್ಷಿಕಾರ್ಯ: ಒಬ್ಬ ಸಹೋದರನು ತನ್ನ ಉದ್ಯೋಗದ ಸ್ಥಳದಲ್ಲಿರುವ ಜನರಿಗೆ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ತೋರಿಸಿದನು. ಅವನಲ್ಲಿ ಈ ಪುಸ್ತಕವಿದೆ ಎಂಬ ಮಾತು ಹರಡಿತು ಮತ್ತು ಅದು ಏನನ್ನು ಒಳಗೊಂಡಿದೆ ಎಂಬ ವರದಿಗಳು ಪ್ರಸರಿಸಲ್ಪಟ್ಟವು. ಅವನ ಜೊತೆಕೆಲಸಗಾರರು ಪುಸ್ತಕದ ಒಂದು ಪ್ರತಿಯನ್ನು ಪಡೆಯ ಬೇಕೆನ್ನುವವರ ಒಂದು ಪಟ್ಟಿಯನ್ನು ಮಾಡಿದರು. ಅವನು 461 ಪುಸ್ತಕಗಳನ್ನು ನೀಡಿದನು! ಅದನ್ನು ಪಡೆದವರಲ್ಲಿ ಐದು ಜನ ಅಭ್ಯಾಸಮಾಡುತ್ತಿದ್ದಾರೆ. ಒಬ್ಬಾಕೆ ಸಹೋದರಿಯು, ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ, ಒಬ್ಬ ಹೊಸ ಕ್ಯಾತೊಲಿಕ್ ಕಾರ್ಡಿನಲನ ದೀಕ್ಷೆಗೆ ಹಾಜರಾಗಲು ಹೋಗುತ್ತಿದ ಒಬ್ಬ ಪಾದ್ರಿಗೆ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡಿದಳು. ಪಾದ್ರಿಯು ವ್ಯಾಟಿಕನ್ನಲ್ಲಿ 40 ವರ್ಷಗಳ ವರೆಗೆ ಜೀವಿಸಿದ್ದನು. ಈ ಪುಸ್ತಕವನ್ನು ಇತರರಿಗೆ ಶಿಫಾರಸು ಮಾಡುವ ಅವಕಾಶಗಳ ಪೂರ್ಣ ಪ್ರಯೋಜನವನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು.
5 ಯುವಕರು ಅದನ್ನು ಗಣ್ಯಮಾಡುತ್ತಾರೆ: ಯೌವನಸ್ಥರು ಪುಸ್ತಕದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಒಂಬತ್ತು ವರ್ಷ ಪ್ರಾಯದವನೊಬ್ಬನು ಬರೆದದ್ದು: “ನಾನು ಅದರಿಂದ ಹೆಚ್ಚಿನದನ್ನು ಕಲಿತಿದರ್ದಿಂದ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ನನ್ನ ನೆಚ್ಚಿನ ಪ್ರಕಾಶನವಾಗಿದೆ.” ನಾವು ಕ್ಷೇತ್ರ ಸೇವೆಯಲ್ಲಿ ಯುವ ಜನರನ್ನು ಭೇಟಿಯಾದಾಗ, ಅವರ ಹೆತ್ತವರು ಒಪ್ಪುವದಾದರೆ, ಈ ಯುವಕರಿಗೆ ಪುಸ್ತಕವನ್ನು ತೋರಿಸಲು ಮತ್ತು ಅದರ ಕೆಲವೊಂದು ಮುಖ್ಯಾಂಶಗಳನ್ನು ಮತ್ತು ಕಲಾಕೃತಿಯನ್ನು ಪರಾಮರ್ಶಿಸಲು ಸಮಯವನ್ನು ತೆಗೆದುಕೊಳ್ಳಬೇಕು. ಈ ಯೌವನಸ್ಥರೊಂದಿಗೆ ಪುಸ್ತಕಗಳನ್ನು ನೀಡಲು ನಾವು ಶಕ್ತರಾಗಬಹುದು. ಯೇಸುವಿನ ಕುರಿತು ಅರಿಯಲು ಅವಕಾಶ ಕೊಡಲ್ಪಟ್ಟಾಗ, ಯುವ ಜನರು ಅವನೊಂದಿಗೆ ಒಂದು ಸಂಬಂಧವನ್ನು ಬೆಳೆಸಬಹುದು. ಯೇಸು ಸಮೀಪಿಸಲು ಶಕ್ಯನಾದ ಒಬ್ಬ ವ್ಯಕ್ತಿಯಾಗಿದ್ದನು.—ಮತ್ತಾ. 19:14, 15.
6 ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಓದುವುದು ಜನರ ಜೀವಿತಗಳನ್ನು ಬದಲಾಯಿಸಬಹುದು. ನಿಮ್ಮಿಂದ ಸಾಧ್ಯವಾಗುವಷ್ಟು ಜನರಿಗೆ ಅದರ ಒಳ ವಿಷಯದೊಂದಿಗೆ ಪರಿಚಯಿಸಲು ಪ್ರಯತ್ನಿಸಿರಿ. ಪುಸ್ತಕದ ಪೀಠಿಕೆಯ ಕೊನೆಯ ಪುಟದಲ್ಲಿ, “ಅವನ ಕುರಿತು ಕಲಿಯುವದರಿಂದ ಪ್ರಯೋಜನ” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಉಪಯೋಗಿಸಿರಿ. ಪುಸ್ತಕವನ್ನು ಓದುವದರಿಂದ ಅವರು ಏನನ್ನು ಗಳಿಸಬಹುದು ಎಂಬುದರ ಮೇಲೆ ಜನರು ಗಮನ ಕೊಡಲು ಈ ವಿಷಯವು ಸಹಾಯ ಮಾಡುವುದು. ನಿಮ್ಮ ಟೆರಿಟೊರಿಯಲ್ಲಿರುವ ಅನೇಕರು, ಪುಸ್ತಕವನ್ನು ಓದಿದ ಅನಂತರ ವ್ಯಕ್ತಿಯೊಬ್ಬನು ಮಾಡಿದಂತೆ, ಹೀಗೆಂದು ಘೋಷಿಸಬಹುದು: “ನಾನು ಓದಿದಂಥ ಪುಸ್ತಕಗಳಲ್ಲಿಯೇ ಇದು ಅತ್ಯುತ್ತಮ ಪುಸ್ತಕವಾಗಿದೆ! ನನ್ನ ಜೀವಿತವನ್ನು ಅದು ಬದಲಾಯಿಸಿದೆ.”