ಎಳೆಯರಿಗೆ ಒಂದು ಒಳ್ಳೆಯ ಮಾದರಿಯ ಅಗತ್ಯವಿದೆ
1 ‘ಯೆಹೋವನ ನಾಮವನ್ನು ಸ್ತುತಿಸು’ ತ್ತಿರುವ ಯುವ ಜನರ ವೃದ್ಧಿಯಾಗುತ್ತಿರುವ ಒಂದು ಸಂಖ್ಯೆಯು ನಮ್ಮೊಂದಿಗಿರುವಲ್ಲಿ ನಾವು ಸಂತೋಷಿಸುತ್ತೇವೆ. (ಕೀರ್ತ. 148:12, 13) ಅವರಲ್ಲಿ ಅನೇಕರು ಪ್ರಾಯದಲ್ಲಿ ಇನ್ನೂ ತೀರ ಎಳೆಯರಾಗಿದ್ದಾರೆ. ತಮ್ಮ ಹೆತ್ತವರಿಂದ ಮತ್ತು ಸಭೆಯಲ್ಲಿರುವ ಇತರ ಹಿರಿಯರಿಂದ ಒದಗಿಸಲ್ಪಟ್ಟ ಮಾದರಿ ಮತ್ತು ತರಬೇತಿಯ ಮೂಲಕ ಅವರ ಪ್ರಗತಿಯು ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ. ಹಾಗಿದ್ದರೂ, ಇತರ ಯುವ ಜನರಿಂದ—ವಿಶೇಷವಾಗಿ ಹಿರಿಯ ಹದಿವಯಸ್ಕರು ಮತ್ತು ಯುವ ವಯಸ್ಕರು—ಹಾಕಲ್ಪಡುವ ಪ್ರಭಾವವು ಅಲಕ್ಷಿಸಲ್ಪಡಬಾರದು. ಈ ವಯೋವರ್ಗದಲ್ಲಿ ನೀವಿರುವುದಾದರೆ, ಈ ಹೇಳಿಕೆಗಳು ನಿಮಗೆ ಪ್ರಯೋಜನ ನೀಡಬಹುದು.
2 ಹದಿಪ್ರಾಯದಲ್ಲಿರುವ ಯುವ ಜನರು ಹಿರಿಯ ಹದಿವಯಸ್ಕರನ್ನು ಅನುಕರಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಅವರು ಪ್ರಶಂಸಿಸುವ ನಿಕಟ ಸಹವಾಸಿಗಳಂತಾಗುವ ಸ್ವಾಭಾವಿಕ ಅಪೇಕ್ಷೆಯು ಅವರಿಗಿದೆ. ಅವರು ಕೊಂಚಮಟ್ಟಿಗೆ ಹಿರಿಯರಾಗಿರುವ ಮತ್ತು ಬುದ್ಧಿವಂತರಾಗಿರುವ ಮತ್ತು ಹೆಚ್ಚು ಪ್ರೌಢ ತೋರಿಕೆಯನ್ನು ಕೊಡುವ ಇತರ ಯುವಜನರನ್ನು ಪ್ರಶಂಸಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಫಲಿತಾಂಶವಾಗಿ, ಅವರು ನಿಮ್ಮ ಮಾತು ಮತ್ತು ನಡೆವಳಿಕೆಯನ್ನು ಹಾಗೂ ಆತ್ಮಿಕ ಮೌಲ್ಯಗಳಿಗಾಗಿ ನಿಮ್ಮ ಗಣ್ಯತೆಯನ್ನು ಮತ್ತು ಸಭಾ ಚಟುವಟಿಕೆಗಳಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಅನುಕರಿಸಬಹುದು.
3 ಒಬ್ಬ ಹಿರಿಯ ಹದಿವಯಸ್ಕರೋಪಾದಿ, ನಿಮಗೆ ಒಂದು ಸುಯೋಗವಿದೆ ಹಾಗೂ ಒಂದು ಪ್ರಾಮುಖ್ಯವಾದ ಜವಾಬ್ದಾರಿಯಿದೆ. ಈಗಾಗಲೇ ನಿಮ್ಮ ಮಾದರಿಯು ನಿಮ್ಮ ಎಳೆಯ ಸಹವಾಸಿಗಳನ್ನು ಪ್ರಭಾವಿಸುತ್ತಿರುವುದು ಸಂಭವನೀಯ. ‘ಎಳೆಯರ ಮೇಲೆ ಯಾವ ರೀತಿಯ ಪ್ರಭಾವವನ್ನು ನಾನು ಪ್ರಯೋಗಿಸುತ್ತೇನೆ? ಮೂರ್ಖತನವನ್ನು ಮತ್ತು ‘ಯೌವನದ ತಪ್ಪು ಇಚ್ಛೆಗಳನ್ನು’ ದೂರಮಾಡುತ್ತಾ, ನಾನು ಗಂಭೀರ ಮನಸ್ಸಿನವನಾಗಿದ್ದೇನೊ? ನನ್ನ ಹೆತ್ತವರು, ಹಿರಿಯರು, ಮತ್ತು ಇತರ ಹಿರಿಯ ವ್ಯಕ್ತಿಗಳ ಕಡೆಗೆ ವಿಧೇಯತೆ ಮತ್ತು ಗೌರವವನ್ನು ನಾನು ತೋರಿಸುತ್ತೇನೊ?’ ಎಂದು ನಿಮ್ಮನ್ನು ಕೇಳಿಕೊಳ್ಳಿರಿ. (2 ತಿಮೊ. 2:22; ಕೊಲೊ. 3:20) ನೀವು ಹೇಳುವುದು ಮತ್ತು ಮಾಡುವುದು, ನಿಮ್ಮ ಕ್ರಿಯೆಗಳನ್ನು ಗಮನಿಸುವ ಇತರ ಎಳೆಯರ ಆತ್ಮಿಕ ಪ್ರಗತಿಯಲ್ಲಿ ಒಂದು ಪ್ರಮುಖ ಅಂಶವಾಗಿರಬಹುದು.
4 ರಾಜ್ಯ ಸಂದೇಶವನ್ನು ಸಾರುವುದು ಸಭೆಯ ಪ್ರಮುಖ ಕೆಲಸವಾಗಿದೆ. ನಿಮ್ಮ ಮನಃಪೂರ್ವಕವಾದ ಮತ್ತು ಕ್ರಮವಾದ ಭಾಗವಹಿಸುವಿಕೆಯು ನಿಮ್ಮ ಸಹವಾಸಿಗಳು ಹೆಚ್ಚು ಸಕ್ರಿಯರಾಗಿರುವಂತೆ ಉತ್ತೇಜಿಸಬಲ್ಲದು. ನೀವು ಪಯನೀಯರ್ ಸೇವೆಯನ್ನು ಪ್ರವೇಶಿಸಲು ಶಕ್ತರಾಗಿರುವಲ್ಲಿ, ನಿಮ್ಮ ಸ್ನೇಹಿತರು ತದ್ರೀತಿಯಲ್ಲಿ ಪ್ರಚೋದಿಸಲ್ಪಡುವರು. ಕೂಟಗಳಲ್ಲಿ ಹೇಳಿಕೆ ನೀಡುವುದು ಮತ್ತು ರಾಜ್ಯ ಸಭಾಗೃಹದ ಅಗತ್ಯವಾದ ಕೆಲಸಗಳಲ್ಲಿ ನಿಮ್ಮ ಸಹಾಯವನ್ನು ಸ್ವಯಂ ನೀಡಿಕೊಳ್ಳುವುದು ಸಹ ಒಂದು ಒಳ್ಳೆಯ ಮಾದರಿಯನ್ನು ಇಡಬಹುದು.
5 ಪೌಲನು ಹಿಂಬಾಲಿಸುವ ಬುದ್ಧಿವಾದವನ್ನು ತಿಮೊಥೆಯನಿಗೆ ಕೊಟ್ಟಾಗ ಅವನು ಇನ್ನು ಮುಂದೆ ಹದಿಪ್ರಾಯದವನಾಗಿಲ್ಲದ್ದಿದಾಗ್ಯೂ, ನೀವು—ಹದಿವಯಸ್ಕರು—ಅದನ್ನು ಅನ್ವಯಿಸಿಕೊಳ್ಳಬಲ್ಲಿರಿ: “ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.” (1 ತಿಮೊ. 4:12) ಯೆಹೋವನ ಸೇವೆಯಲ್ಲಿ ನಿಮ್ಮ ಉತ್ಸಾಹದ ಮತ್ತು ಮನಃಪೂರ್ವಕವಾದ ಭಾಗವಹಿಸುವಿಕೆಯು, ಆತ್ಮಿಕವಾಗಿ ಪರಿಪೂರ್ಣರಾಗಿ ಬೆಳೆದ ವ್ಯಕ್ತಿಗಳಾಗಿ ಪರಿಣಮಿಸಲಿಕ್ಕಾಗಿ ಪ್ರಗತಿಯನ್ನು ಮಾಡುವಂತೆ ಅವರಿಗೆ ಸಹಾಯಮಾಡುತ್ತಾ, ನಿಮ್ಮ ಸಹವಾಸಿಗಳನ್ನು ಮತ್ತು ಎಳೆಯ ಪ್ರೇಕ್ಷಕರನ್ನು ಒಂದು ಸಕಾರಾತ್ಮಕವಾದ ರೀತಿಯಲ್ಲಿ ಪ್ರಭಾವಿಸಬಲ್ಲದು. (ಎಫೆ. 4:13) ಈಗ ತಾನೇ ಅಧ್ಯಯನ ಮಾಡಲು ಆರಂಭಿಸಿರುವ ಕುಟುಂಬಗಳ ಭಾಗವಾಗಿರುವ ಹದಿವಯಸ್ಕರು, ನಿಮ್ಮಲ್ಲಿ ಏನನ್ನು ಕಾಣುತ್ತಾರೋ ಅದರಿಂದ ಬಹುಶಃ ಸತ್ಯಕ್ಕೆ ಆಕರ್ಷಿತರಾಗುತ್ತಾರೆ.
6 ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ದಿವ್ಯ ಗುಣಗಳನ್ನು ಪ್ರದರ್ಶಿಸುವುದರಲ್ಲಿ ನಿಮ್ಮ ಕಾರ್ಯತತ್ಪರತೆಯು ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಘನತೆಯನ್ನು ತರುತ್ತದೆ. (ಜ್ಞಾನೋ. 27:11) ನಿಮ್ಮ ಮತ್ತು ಲೋಕದ ಯುವ ಜನರ ನಡುವೆ ಗಮನಾರ್ಹ ವೈದೃಶ್ಯವನ್ನು ಕಂಡು ಪ್ರಾಮಾಣಿಕರಾದ ಪ್ರೇಕ್ಷಕರು ಆಶ್ಚರ್ಯಗೊಳ್ಳುವರು. ಆದುದರಿಂದ ಯೆಹೋವನ ಸ್ತುತಿಯಲ್ಲಿ ಒಂದು ಅಮೂಲ್ಯವಾದ ದಾನವನ್ನು ನೀವು ಮಾಡುತ್ತಿರುವಾಗ ನಿಮ್ಮ ಎಳೆಯರಿಗೆ ಸಹಾಯ ಮಾಡಲು ಒಂದು ಅಪೂರ್ವವಾದ ಅವಕಾಶವು ನಿಮಗಿದೆ.—ಕೀರ್ತ. 71:17.