ಬೆತೆಲ್ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
1 ಈ ಕಡೆಯ ದಿವಸಗಳಲ್ಲಿ ಯೆಹೋವನು ಮಾಡುತ್ತಿರುವ ಮಹಾನ್ ಕಾರ್ಯವನ್ನು ನೋಡಲು ನಾವು ರೋಮಾಂಚಗೊಳ್ಳುತ್ತೇವೆ. ಈ ಸಮಯದಲ್ಲಿ ದೇವರ ಜನರ ಪ್ರಮುಖವಾದ ಗುಣವು, ರಾಜ್ಯ ಸೇವೆಯಲ್ಲಿ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯನ್ನು ತೆಗೆದುಕೊಳ್ಳುವ ಅವರ ಮನಃಪೂರ್ವಕತೆಯಾಗಿರುತ್ತದೆ ಎಂದು ಕೀರ್ತನೆ 110:3 ಸೂಚಿಸುತ್ತದೆ. ರಾಜ್ಯದ ಸುವಾರ್ತೆಯು ಸಾರಲ್ಪಡುವಂತೆ ಮಾಡಲಿಕ್ಕಾಗಿ ಭೂವ್ಯಾಪಕವಾಗಿ ಯೆಹೋವನ ಜನರು ತಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಘೋಷಕರು (ಇಂಗ್ಲಿಷ್) ಪುಸ್ತಕವು 295ನೆಯ ಪುಟದಲ್ಲಿ ಹೇಳುವುದು: “ಕೆಲವರು ಭೌಗೋಲಿಕ ಬೆತೆಲ್ ಕುಟುಂಬದ ಸದಸ್ಯರೋಪಾದಿ ಸೇವೆಸಲ್ಲಿಸುತ್ತಾರೆ. ಬೈಬಲ್ ಸಾಹಿತ್ಯವನ್ನು ಸಿದ್ಧಗೊಳಿಸಿ, ಪ್ರಕಾಶಿಸುವುದರಲ್ಲಿ, ಅಗತ್ಯವಿರುವ ಆಫೀಸ್ ಕೆಲಸವನ್ನು ನೋಡಿಕೊಳ್ಳುವುದರಲ್ಲಿ, ಮತ್ತು ಅಂತಹ ಕಾರ್ಯಾಚರಣೆಗಳಿಗಾಗಿ ಸಹಾಯಕ ಸೇವೆಗಳನ್ನು ಒದಗಿಸುವುದರಲ್ಲಿ, ತಮಗೆ ನೇಮಿಸಲ್ಪಡಬಹುದಾದ ಯಾವುದೇ ಕೆಲಸವನ್ನು ಮಾಡಲಿಕ್ಕಾಗಿ ಸ್ವಯಂ ನೀಡಿಕೊಂಡಿರುವ, ಪೂರ್ಣ ಸಮಯದ ಶುಶ್ರೂಷಕರ ಒಂದು ಸಿಬ್ಬಂದಿ ವರ್ಗವು ಇದಾಗಿದೆ. ಇದು ಅವರು ವೈಯಕ್ತಿಕ ಪ್ರಾಧಾನ್ಯವನ್ನು ಅಥವಾ ಪ್ರಾಪಂಚಿಕ ಸಂಪತ್ತುಗಳನ್ನು ಗಳಿಸುವಂತಹ ಕೆಲಸವಲ್ಲ. ಯೆಹೋವನನ್ನು ಗೌರವಿಸುವುದು ಅವರ ಬಯಕೆಯಾಗಿದೆ ಮತ್ತು ಆಹಾರ, ವಸತಿ, ಹಾಗೂ ವೈಯಕ್ತಿಕ ಖರ್ಚುಗಳಿಗಾಗಿ ಮಿತವಾದ ಪ್ರತಿದಾನದ ರೂಪದಲ್ಲಿ ಅವರಿಗಾಗಿ ಮಾಡಲ್ಪಡುವ ಒದಗಿಸುವಿಕೆಗಳಿಂದ ಅವರು ಸಂತೃಪ್ತರಾಗಿರುತ್ತಾರೆ.” ನೀವು ಬೆತೆಲನ್ನು ಸಂದರ್ಶಿಸಿರುವುದಾದರೆ, ಅಲ್ಲಿ ಮಾಡಲ್ಪಡುವ ಕೆಲಸದೊಂದಿಗೆ ನೀವು ಈಗಾಗಲೆ ಸ್ವಲ್ಪಮಟ್ಟಿಗೆ ಪರಿಚಿತರಾಗಿದ್ದೀರಿ. ಹಾಗಿದ್ದರೂ, ಈ ಅಪೂರ್ವ ಸೇವಾ ಸುಯೋಗದ ಕಡೆಗಿರುವ ನಿಮ್ಮ ಗಣ್ಯತೆಯನ್ನು ವರ್ಧಿಸಲಿಕ್ಕಾಗಿಯೂ ನೀವು ಸೊಸೈಟಿಯ ಅಗತ್ಯಗಳ ಅರಿವುಳ್ಳವರಾಗಿರುವಂತೆ ಮಾಡಲಿಕ್ಕಾಗಿಯೂ, ನಾವು ಹೆಚ್ಚಿನ ಮಾಹಿತಿಯನ್ನು ಒದಗಿಸಲು ಬಯಸುತ್ತೇವೆ.
2 ಬೆತೆಲ್ ಸೇವೆ ಮತ್ತು ಅದರ ಸಮೃದ್ಧ ಪರಂಪರೆಯ ಅರ್ಥಗರ್ಭಿತತೆಯನ್ನು ಯಥಾದೃಷ್ಟಿಯಲಿಡ್ಲಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಇತಿಹಾಸ—ಕೊಂಚಮಟ್ಟಿಗೆ ಪುರಾತನ ಮತ್ತು ಕೊಂಚಮಟ್ಟಿಗೆ ಆಧುನಿಕ—ವನ್ನು ಕೊಂಚಮಟ್ಟಿಗೆ ನೋಡೋಣ. ಸುಮಾರು 19 ವರ್ಷಗಳ ವರೆಗೆ, ವಾಚ್ ಟವರ್ ಸೊಸೈಟಿಗೆ ಅದರ ಮುಖ್ಯಕಾರ್ಯಾಲಯವು, ಪೆನ್ಸಿಲ್ವೇನಿಯ, ಎಲಿಗೆನಿಯ 56-60 ಆರ್ಚ್ ಸ್ಟ್ರೀಟ್ನಲ್ಲಿರುವ ನಾಲ್ಕು ಅಂತಸ್ತಿನ ಇಟ್ಟಿಗೆ ಕಟ್ಟಡವೊಂದರಲ್ಲಿ ಇತ್ತು. ಅದು ಬೈಬಲ್ ಗೃಹವೆಂದು ಕರೆಯಲ್ಪಟ್ಟಿತ್ತು. ಆದರೂ, 1908ರಷ್ಟಕ್ಕೆ, ಬೈಬಲ್ ಗೃಹ ಕುಟುಂಬ ಅಥವಾ ಸೊಸೈಟಿಯ ಮುಖ್ಯಕಾರ್ಯಾಲಯದ ಸಿಬ್ಬಂದಿ ವರ್ಗವು 30ಕ್ಕಿಂತಲೂ ಹೆಚ್ಚು ಸದಸ್ಯರಿಗೆ ಏರಿತ್ತು. ವಿಸ್ತರಿಸಲು ಸಮಯವು ಅದಾಗಿತ್ತು. ದೈವಿಕ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ ಬಳಿಕ, ಆ ಕಾರ್ಯಕ್ಕಾಗಿ ಬ್ರೂಕ್ಲಿನ್ ಅತ್ಯಂತ ಸೂಕ್ತವಾದ ಕೇಂದ್ರವಾಗಿರುವುದೆಂದು ಸಹೋದರರು ನಿರ್ಧರಿಸಿದರು. ಆದುದರಿಂದ ಸೊಸೈಟಿಯ ಆಫೀಸುಗಳು ಮತ್ತು ಒಂದು ಸಭಾಂಗಣಕ್ಕೆ ತಕ್ಕ ಸ್ಥಳವನ್ನು ಒದಗಿಸಲಿಕ್ಕಾಗಿ, ಬ್ರೂಕ್ಲಿನ್ನ 13-17 ಹೀಕ್ಸ್ ಸ್ಟ್ರೀಟ್ನಲ್ಲಿ ಕಟ್ಟಡವೊಂದನ್ನು ಖರೀದಿಸಲಾಯಿತು. ಈ ಆಫೀಸುಗಳು 1909, ಜನವರಿ 31ರಂದು ತೆರೆಯಲ್ಪಟ್ಟವು, ಆದರೆ ಈ ಹೀಕ್ಸ್ ಸ್ಟ್ರೀಟ್ ಕಟ್ಟಡದಲ್ಲಿ ವಸತಿ ಸೌಕರ್ಯಗಳಿರಲಿಲ್ಲ. ಆರಂಭದಲ್ಲಿ, ವಾಸದ ಸೌಕರ್ಯಗಳನ್ನು ಬಾಡಿಗೆಗೆ ತೆಗೆದುಕೊಳ್ಳಸಾಧ್ಯವಿದೆಯೆಂದು ನೆನಸಲಾಯಿತು. ಆದಾಗಲೂ, ಬ್ರೂಕ್ಲಿನ್ ಹೈಟ್ಸ್ ಕ್ಷೇತ್ರದಲ್ಲಿದ್ದ ನಿವಾಸಗಳಲ್ಲಿ ಯಾವ ನಿವಾಸಗಳೂ ಬಾಡಿಗೆಗೆ ಲಭ್ಯವಿರಲಿಲ್ಲ. ವಿಷಯಗಳು ಬದಲಾದಂತೆ, ಅವರ ಆಶ್ಚರ್ಯ ಮತ್ತು ಆನಂದಕ್ಕೆ, ಸಹೋದರರು 124 ಕೊಲಂಬಿಯ ಹೈಟ್ಸ್ನಲ್ಲಿದ್ದ ನಾಲ್ಕು ಅಂತಸ್ತಿನ ಕಂದುಕಲ್ಲಿನ ಕಟ್ಟಡ, ಹೆನ್ರಿ ವಾರ್ಡ್ ಬೀಚರ್ನ ಹಿಂದಣ ನಿವಾಸವನ್ನು “ಒಂದು ಅಗವ್ಗಾದ ಬೆಲೆ”ಗೆ ಖರೀದಿಸಲು ಶಕ್ತರಾಗಿದ್ದರು. ಹಾಗೂ, 126 ಕೊಲಂಬಿಯ ಹೈಟ್ಸ್ ಕಟ್ಟಡವು ಲಭ್ಯವಾಯಿತು. 1909, ಮಾರ್ಚ್ 1ರ ವಾಚ್ ಟವರ್ ಪತ್ರಿಕೆಯು ಹರ್ಷಭರಿತವಾಗಿ ಪ್ರಕಟಿಸಿದ್ದು: “ಬೈಬಲ್ ಗೃಹ” ಎಂಬ ಪಿಟ್ಸ್ಬರ್ಗ್ ಶಬ್ದವನ್ನು ತೆಗೆದುಹಾಕಿ, “ಹೊಸ ಗೃಹವನ್ನು ನಾವು ಬೆತೆಲ್ ಎಂದು ಕರೆಯುವೆವು.” ಆದುದರಿಂದ 1909ರ ಎಪ್ರಿಲ್ ತಿಂಗಳಲ್ಲಿ, ಬೆತೆಲ್ ಕಾರ್ಯನಡಿಸಲಾರಂಭಿಸಿತು, ಮತ್ತು ಕುಟುಂಬವು ತನ್ನ ಹೊಸ ಗೃಹಕ್ಕೆ ಸ್ಥಳಾಂತರಿಸಿತು. 86 ವರ್ಷಗಳಿಂದ ಬ್ರೂಕ್ಲಿನ್ ಬೆತೆಲ್ ಇದೇ ಸ್ಥಳದಲ್ಲಿದೆ.
3 ಸೊಸೈಟಿಯ ಮುಖ್ಯಕಾರ್ಯಾಲಯಕ್ಕೆ ಬೆತೆಲ್ ಎಂಬುದು ಒಂದು ಸೂಕ್ತವಾದ ಹೆಸರಾಗಿತ್ತೊ? ಆ ಹೆಸರಿನ ಕುರಿತ ಬೈಬಲ್ ಸಂಬಂಧಿತ ಮೂಲವನ್ನು ಹಾಗೂ ಅದರ ಸಂಬಂಧಗಳನ್ನು ಪರಿಗಣಿಸಿರಿ. 3,700 ವರ್ಷಗಳಿಗೆ ಹಿಂದೆ ಹೋಗುವಾಗ, ಆದಿಕಾಂಡ 28ನೆಯ ಅಧ್ಯಾಯವು, 77 ವರ್ಷ ಪ್ರಾಯದ ಅವಿವಾಹಿತ ಯಾಕೋಬನ ಅನುಭವವನ್ನು ವಿವರಿಸುತ್ತದೆ. ಯಾಕೋಬನು ಪವಿತ್ರ ವಿಷಯಗಳನ್ನು ಗಣ್ಯಮಾಡಿದರೂ, ಅವನು ತನ್ನ ಅವಳಿ ಸಹೋದರನಾದ ಏಸಾವನಿಂದ ದ್ವೇಷಿಸಲ್ಪಟ್ಟಿದ್ದನು. ತನ್ನ ತಂದೆಯಾದ ಇಸಾಕನ ಮಾರ್ಗದರ್ಶನಕ್ಕನುಸಾರ, ಯಾಕೋಬನು ಬೇರ್ಷೆಬದಿಂದ ಪಲಾಯನಗೈದನು ಮತ್ತು ಯಾಕೋಬನು ಯಾರ ನಡುವೆ ಒಬ್ಬ ಹೆಂಡತಿಯನ್ನು ಕಂಡುಕೊಳ್ಳಲು ಉದ್ದೇಶಿಸಿದನೊ, ಆ ಅಬ್ರಹಾಮನ ಸಂಬಂಧಿಕರ ದೇಶ—ಉತ್ತರ ಭಾಗ—ಕ್ಕೆ ಹೋದನು. ಸುಮಾರು 62 ಮೈಲುಗಳಷ್ಟು ಪ್ರಯಾಣಿಸಿದ ಬಳಿಕ, ಯಾಕೋಬನು ಯೂದಾಯದ ಬೆಟ್ಟಗಳಲ್ಲಿದ್ದ ಲೂಜ್ ಎಂಬುದಾಗಿ ಕರೆಯಲ್ಪಟ್ಟ ಒಂದು ಸ್ಥಳದಲ್ಲಿ ಆ ರಾತ್ರಿ ವಿಶ್ರಾಂತಿಸಲಿಕ್ಕಾಗಿ ನಿಂತನು. ಯೆಹೋವನು ಯಾಕೋಬನಿಗೆ ದೈವಿಕ ಬೆಂಬಲದ ಸಂಪೂರ್ಣ ಆಶ್ವಾಸನೆಯನ್ನು ಹೇಗೆ ಕೊಟ್ಟನೆಂಬುದರ ಕುರಿತ ಆಕರ್ಷಕ ವಿವರಗಳನ್ನು ಆದಿಕಾಂಡ 28:10-19ರಲ್ಲಿ ನಾವು ಓದುತ್ತೇವೆ. ಒಂದು ಕನಸಿನಲ್ಲಿ, ಒಂದು ಏಣಿಯು ಭೂಮಿಯಿಂದ ಆಕಾಶದ ವರೆಗೆ ವಿಸ್ತರಿಸಲ್ಪಟ್ಟಿರುವುದನ್ನು ಯಾಕೋಬನು ಕಂಡನು. ಏಣಿಯ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇರುವುದರಲ್ಲಿ ಮಗ್ನರಾಗಿದ್ದರು, ಮತ್ತು ಯೆಹೋವನು ಅದರ ಮೇಲೆ ನಿಂತಿದ್ದನು. ಆಗ, ಒಂದು ಸಂತತಿಯ ಕುರಿತಾಗಿ ಅಬ್ರಹಾಮನಿಗೆ ಮಾಡಲ್ಪಟ್ಟ ವಾಗ್ದಾನವು ಯಾಕೋಬನಿಗೂ ದಾಟಿಸಲ್ಪಡುತ್ತದೆ ಮತ್ತು ಯೆಹೋವನು ಅವನನ್ನು ತೊರೆಯುವುದಿಲ್ಲವೆಂಬುದನ್ನು ದೃಢಪಡಿಸುತ್ತಾ, ಯೆಹೋವನು ಮಾತಾಡಿದನು. ಆತ್ಮಿಕ ಮನಸ್ಸಿನವನಾಗಿದ್ದ ಯಾಕೋಬನಿಗೆ ಎಂತಹ ಒಂದು ಭಯಪ್ರೇರಕ ಅನುಭವ! ಇದು ಅವನ ದೃಷ್ಟಿಯಲ್ಲಿ ಅತ್ಯಂತ ವಿಶೇಷ ಸ್ಥಳವಾಗಿ ಪರಿಣಮಿಸಿತೆಂಬುದು ಆಶ್ಚರ್ಯಕರವಾಗಿದೆಯೆ? ಅವನಿಗೆ ಈ ಸ್ಥಳವು “ದೇವರ ಮನೆ” ಅಥವಾ ಹೀಬ್ರು ಭಾಷೆಯಲ್ಲಿ ಬೆಹ್ತ್-ಎಲ್ ಆಗಿತ್ತು, ಬೆಹ್ತ್ನ ಅರ್ಥ “ಮನೆ” ಮತ್ತು ಎಲ್ನ ಅರ್ಥ “ದೇವರು.”—ಆದಿ. 28:19, ಪಾದಟಿಪ್ಪಣಿ, NW.
4 ಹೀಗೆ, ಬೆತೆಲ್ ಎಂಬ ಹೆಸರಿಗೆ ಒಂದು ವಿಶೇಷವಾದ ಐತಿಹಾಸಿಕ ಹಿನ್ನೆಲೆಯಿದೆ ಮತ್ತು ಯೆಹೋವನ ಜನರ ಲೋಕ ಮುಖ್ಯಕಾರ್ಯಾಲಯಕ್ಕೆ ಸೂಕ್ತವಾಗಿದೆ. ಇಂದು ದೇವರ ಸೇವಕರು ದೈವಿಕವಾಗಿ ಪ್ರೇರಿತವಾದ ಕನಸುಗಳನ್ನು ಕಾಣುವುದಿಲ್ಲ. ದೇವದೂತರು ಬೆತೆಲಿನಿಂದ ಸ್ವರ್ಗಕ್ಕೆ ಏಣಿಯೊಂದರ ಮೇಲೆ ಹತ್ತುತ್ತಾ ಇಳಿಯುತ್ತಾ ಇರುವುದು ಕಂಡುಬರುವುದಿಲ್ಲ. ಸಹೋದರರು ದರ್ಶನಗಳನ್ನು ಪಡೆದುಕೊಳ್ಳುತ್ತಿಲ್ಲ ಅಥವಾ ದೇವರ ವಾಣಿಯನ್ನು ನೇರವಾಗಿ ಕೇಳುತ್ತಿಲ್ಲ. ಆದರೂ, ಸಹೋದರ ರಸಲ್ರ ಕಾಲದಿಂದ ಇಂದಿನ ವರೆಗೆ, ಬೆತೆಲಿನಲ್ಲಿ ಕಳೆದ 86 ವರ್ಷಗಳಲ್ಲಿ ಸಂಭವಿಸಿರುವ ಎಲ್ಲ ವಿಷಯಗಳನ್ನು ನೀವು ಪರಿಗಣಿಸುವಾಗ, ಬೆತೆಲಿನಲ್ಲಿ, ಅಬ್ರಹಾಮನ ಆತ್ಮಿಕ ಸಂತತಿಯ ಭಾಗವಾಗಿರುವ ತನ್ನ ಅಭಿಷಿಕ್ತ ಸೇವಕರೊಂದಿಗೆ ಯೆಹೋವನ ಅಭಯಹಸ್ತವು ಇತ್ತು ಎಂಬುದರಲ್ಲಿ ಸಂದೇಹವಿಲ್ಲ. ಯೆಹೋವನ ಆಧುನಿಕ ದಿನದ ಸಾಕ್ಷಿಗಳ ಇತಿಹಾಸದಲ್ಲಿನ ಅನೇಕ ಪ್ರಮುಖ ಘಟನೆಗಳು, ಬ್ರೂಕ್ಲಿನ್ ಬೆತೆಲ್ನೊಂದಿಗೆ ನಿಕಟವಾಗಿ ಸಂಬಂಧಿಸಿವೆ! ಕೆಲವು ಮುಖ್ಯವಿಷಯಗಳನ್ನು ಪರಿಗಣಿಸಿರಿ:
◼ 1914, ಅಕ್ಟೋಬರ್ 2ರಂದು, ಸಹೋದರ ರಸಲ್, ಬೆತೆಲ್ನ ಭೋಜನಶಾಲೆಯನ್ನು ಪ್ರವೇಶಿಸಿದಂತೆ, ಅವರು ನಿಖರವಾಗಿ ಪ್ರಕಟಿಸಿದ್ದು: “ಅನ್ಯಜನಾಂಗಗಳ ಸಮಯಗಳು ಅಂತ್ಯವಾಗಿವೆ; ಅವುಗಳ ರಾಜರ ದಿನಗಳು ಸಂದಿವೆ.”
◼ 1920ಗಳ ಆದಿ ಭಾಗದಲ್ಲಿ, ಬೆಳಗ್ಗಿನ ಆರಾಧನೆಯಲ್ಲಿ, ಸೊಸೈಟಿಯ ಸಂಪಾದಕೀಯ ಸಿಬ್ಬಂದಿ ವರ್ಗದ ಸದಸ್ಯರೊಬ್ಬರು “ದೇವರ ಸಂಸ್ಥೆ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಿದರು. ಇದು ಸಹೋದರರ ಆಲೋಚನೆಯನ್ನು ಎಷ್ಟು ಪ್ರಚೋದಿಸಿತೆಂದರೆ, 1925ರಷ್ಟಕ್ಕೆ ಅವರು ಭಿನ್ನವಾದ ಮತ್ತು ವಿರೋಧಾತ್ಮಕವಾದ ಎರಡು ಸಂಸ್ಥೆ—ಯೆಹೋವನದ್ದು ಮತ್ತು ಸೈತಾನನದ್ದು—ಗಳಿವೆಯೆಂಬುದನ್ನು ಅವಲೋಕಿಸಲಾರಂಭಿಸಿದ್ದರು.—w85 3/15 ಪು. 10.
◼ 1931ರಲ್ಲಿ ಒಂದು ದಿನ ಮುಂಜಾವಿನ ತಾಸುಗಳಲ್ಲಿ, ಕೊಲಂಬಸ್, ಓಹಾಯೊದಲ್ಲಿನ ಅಧಿವೇಶನಕ್ಕೆ ಸ್ವಲ್ಪ ಮುಂಚೆ, ಸೊಸೈಟಿಯ ಅಧ್ಯಕ್ಷರಾದ ಸಹೋದರ ರಥರ್ಫರ್ಡ್ ವಿವೇಚಿಸಿದ್ದೇನಂದರೆ, ಯೆಹೋವನ ಸಾಕ್ಷಿಗಳು ಎಂಬ ಹೆಸರು ನಿಜವಾಗಿಯೂ ದೇವರ ಜನರನ್ನು ಮತ್ತು ಅವರು ಈಗಾಗಲೆ ಮಾಡುತ್ತಿದ್ದ ಕೆಲಸವನ್ನು ವರ್ಣಿಸಿತು ಮತ್ತು ಅವರು ಆತನ ಸಾಕ್ಷಿಗಳೋಪಾದಿ ಗುರುತಿಸಲ್ಪಡಬೇಕು.—yb75 ಪು. 151.
◼ 1935ರ ಆದಿ ಭಾಗದಲ್ಲಿ, “ಮಹಾ ಸಮೂಹ” ಅಥವಾ “ಮಹಾ ಜನಸಮುದಾಯ”ದವರು ಯಾರಾಗಿದ್ದಾರೆ ಎಂಬುದರ ಕುರಿತು ಪ್ರಶ್ನೆಗಳು ಎಬ್ಬಿಸಲ್ಪಟ್ಟವು. (ಪ್ರಕ. 7:9; KJ) ಆ ಸಮಯದಲ್ಲಿ ತಮ್ಮನ್ನು ವ್ಯಕ್ತಪಡಿಸಿಕೊಂಡವರ ನಡುವೆ ಕೆಲವರು, ಅವರು ಐಹಿಕ ವರ್ಗದವರಾಗಿದ್ದಾರೆ ಎಂದು ಸೂಚಿಸಿದರು. 1935ರ ಮೇ 31ರಂದು, ವಾಷಿಂಗ್ಟನ್, ಡಿ.ಸಿ., ಅಧಿವೇಶನದಲ್ಲಿ ಒಂದು ಸಂತೃಪ್ತಿಕರವಾದ ವಿವರಣೆಯು ಕೊಡಲ್ಪಟ್ಟಿತು.—jv ಪು. 166.
5 ಈ ಕೆಲವು ಉದಾಹರಣೆಗಳು, ಹೇಗೆ ಯೆಹೋವನು ಬೆತೆಲಿನಲ್ಲಿರುವ ತನ್ನ ನಂಬಿಗಸ್ತ ಅಭಿಷಿಕ್ತ ಸೇವಕರಿಗೆ ತನ್ನ ಪವಿತ್ರಾತ್ಮದ ಮೂಲಕ ಮಾರ್ಗದರ್ಶನೆ ಮತ್ತು ಬೆಂಬಲವನ್ನು ಒದಗಿಸಿದ್ದಾನೆ ಎಂಬುದನ್ನು ದೃಷ್ಟಾಂತಿಸುತ್ತವೆ. ಮತ್ತು ದೇವದೂತರ ಕುರಿತಾಗಿ ಏನು? ನಮ್ಮ ವಿರೋಧಿಗಳಿಂದ ಬಂದ ಎಲ್ಲ ತೀವ್ರ ವಿರೋಧವನ್ನು ಮತ್ತು ಸಂಪನ್ಮೂಲಗಳು ದುರ್ಲಭವಾಗಿದ್ದ ಕಷ್ಟಕರ ವರ್ಷಗಳನ್ನು ನೀವು ಪರಿಗಣಿಸುವಾಗ, ದೇವದೂತರ ಸಂರಕ್ಷಣೆ ಮತ್ತು ಸಹಾಯವಿಲ್ಲದೆ ಬೆತೆಲ್ ಈ ಎಲ್ಲಾ ವರ್ಷಗಳಲ್ಲಿ ಇಷ್ಟೊಂದು ಗಮನಾರ್ಹವಾಗಿ ಕಾರ್ಯನಡಿಸಲು ಸಾಧ್ಯವಾಗುತ್ತಿರಲಿಲ್ಲವೆಂಬುದರಲ್ಲಿ ಸಂದೇಹವಿಲ್ಲ.
6 ಅಮೆರಿಕದಲ್ಲಿರುವ ಮುಖ್ಯಕಾರ್ಯಾಲಯ ಸಿಬ್ಬಂದಿ ವರ್ಗವಲ್ಲದೆ, ಲೊನಾವ್ಲದಲ್ಲಿರುವ ಬ್ರಾಂಚ್ನಂತಹ, 100 ಬ್ರಾಂಚ್ಗಳಲ್ಲಿರುವ ಬೆತೆಲ್ ಕುಟುಂಬಗಳು ಲೋಕದಾದ್ಯಂತವಾಗಿ ಚೆದರಿಸಲ್ಪಟ್ಟಿವೆ. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 116ನೆಯ ಪುಟವು ಹೇಳುವುದು: “ಬೆತೆಲ್ . . . ದೇವಪ್ರಭುತ್ವ ಚಟುವಟಿಕೆಯ ಈ ಕೇಂದ್ರಗಳಿಗೆ ಈ ಹೆಸರು ನಿಶ್ಚಯವಾಗಿಯೂ ತಕ್ಕದ್ದಾಗಿದೆ.” ಬೆತೆಲ್ ಸ್ವಯಂಸೇವಕರು ಯಾವ ರೀತಿಯ ಕೆಲಸವನ್ನು ಮಾಡುವಂತೆ ನೇಮಿಸಲ್ಪಡುತ್ತಾರೆ?
7 ವಿವಿಧ ರೀತಿಯ ಕೆಲಸಗಳು: ಬೆತೆಲ್ ಕುಟುಂಬದ ಸದಸ್ಯರಿಗೆ ಕೊಡಲ್ಪಡುವ ಕಾರ್ಯ ನೇಮಕಗಳು ವಿಭಿನ್ನವಾಗಿವೆ. ಬ್ರೂಕ್ಲಿನ್ನಲ್ಲಿ ಮತ್ತು ಭಾರತವನ್ನು ಒಳಗೊಂಡು ಅನೇಕ ಬ್ರಾಂಚ್ಗಳಲ್ಲಿ, ಲೋಕವ್ಯಾಪಕ ವಿತರಣೆಗಾಗಿ ಪುಸ್ತಕಗಳು, (ಮತ್ತು ಕೆಲವು ಬ್ರಾಂಚ್ಗಳಲ್ಲಿ ಬೈಬಲುಗಳು,) ಪತ್ರಿಕೆಗಳು, ಬ್ರೋಷರ್ಗಳು, ಮತ್ತು ಕಿರುಹೊತ್ತಗೆಗಳನ್ನು ಮುದ್ರಿಸುವ ಮುದ್ರಣಾಲಯಗಳಲ್ಲಿ ಕೆಲವು ಸಹೋದರರು ಕೆಲಸ ಮಾಡುತ್ತಾರೆ. ಇತರರು ಬೈಬಲುಗಳು ಮತ್ತು ಪುಸ್ತಕಗಳ ಬೈಂಡಿಂಗ್ನಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ಇನ್ನೂ ಇತರರ ಕೆಲಸವು ಲೋಕದಾದ್ಯಂತ ಇರುವ ಸಭೆಗಳಿಗೆ ಈ ಪ್ರಕಾಶನಗಳನ್ನು ರವಾನಿಸು (ಷಿಪ್ಪಿಂಗ್)ವುದನ್ನು ಒಳಗೊಂಡಿದೆ. ಅನೇಕರು ಸಾಮಾನು ಸರಂಜಾಮು ಮತ್ತು ಕಟ್ಟಡಗಳನ್ನು ನೋಡಿಕೊಳ್ಳುವಂತೆ ನೇಮಿಸಲ್ಪಡುತ್ತಾರೆ. ಬೆತೆಲ್ ಗೃಹದಲ್ಲಿ, ಕುಟುಂಬದ ಪರಾಮರಿಕೆ ಮಾಡುವುದರಲ್ಲಿ ಬಹಳ ಕೆಲಸವು ಒಳಗೊಂಡಿದೆ. ಉದಾರಹಣೆಗಾಗಿ, ಬ್ರೂಕ್ಲಿನ್ ಬೆತೆಲ್ನಲ್ಲಿ, 12 ಭೋಜನಶಾಲೆಗಳಲ್ಲಿರುವ ಸರಿಸುಮಾರು 3,700 ಜನರಿಗೆ 20 ನಿಮಿಷಗಳೊಳಗೆ ಬೆಳಗ್ಗಿನ ಉಪಾಹಾರವು ಸರಬರಾಯಿ ಮಾಡಲ್ಪಡುತ್ತದೆ. ಲಾಂಡ್ರಿಯಲ್ಲಿ, ಸಹೋದರ ಸಹೋದರಿಯರು ಪ್ರತಿ ವಾರ, 13,000 ಶರ್ಟುಗಳನ್ನು ಒಳಗೊಂಡು 16,000 ಕಿಲೋಗಳಷ್ಟು ತೂಕದ ಬಟ್ಟೆಗೆಳನ್ನು ಒಗೆಯುತಾರ್ತೆ. ಇದಕ್ಕೆ ಕೂಡಿಸಿ, ಗೃಹಕಾರ್ಯ ನಿರ್ವಾಹಕರು ಬ್ರೂಕ್ಲಿನ್ನಲ್ಲಿರುವ 21 ನಿವಾಸ ಕಟ್ಟಡಗಳಲ್ಲಿ ಅತ್ಯುತ್ತಮ ಮಟ್ಟದ ಶುಚಿತ್ವವನ್ನು ಕಾಪಾಡುತ್ತಾರೆ ಮತ್ತು ಅತ್ಯಗತ್ಯವಾದ ಅನೇಕ ಇತರ ಕರ್ತವ್ಯಗಳನ್ನು ನೋಡಿಕೊಳ್ಳುತ್ತಾರೆ. ಭಾರತದಲ್ಲಿರುವ ಬೆತೆಲ್ ಕುಟುಂಬದ 230 ಸದಸ್ಯರಿಗೆ ಅದೇ ರೀತಿಯ ಸೌಕರ್ಯಗಳು ಒದಗಿಸಲ್ಪಡುತ್ತವೆ.
8 ಅರ್ಹತೆಗಳು ಮತ್ತು ಆವಶ್ಯಕತೆಗಳು: ಈ ಕೆಲಸದಲ್ಲಿ ಹೆಚ್ಚಿನವುಗಳಿಗೆ ಅಗತ್ಯವಿರುವ ಶಾರೀರಿಕ ದಾರ್ಢ್ಯ ಮತ್ತು ಬಲದ ದೃಷ್ಟಿಯಲ್ಲಿ, ಪ್ರಸ್ತುತವಾಗಿ ಆರೋಗ್ಯವಂತ ಅವಿವಾಹಿತ ಯೌವನಸ್ಥರ ಆವಶ್ಯಕತೆಯಿದೆ. ಬೆತೆಲ್ ಸೇವೆಗೆ ಅರ್ಜಿ ಹಾಕಲಿಕ್ಕಾಗಿ ಒಬ್ಬ ಯೌವನಸ್ಥನು ಸಮರ್ಪಿತನೂ ಕಡಿಮೆಪಕ್ಷ ಒಂದು ವರ್ಷದಿಂದ ದೀಕ್ಷಾಸ್ನಾನಿತನೂ ಆಗಿರತಕ್ಕದ್ದು. ಅವನು ದೃಢನಿಷ್ಠೆಯುಳ್ಳ ಆತ್ಮಿಕ ವ್ಯಕ್ತಿಯಾಗಿರಬೇಕು. ಹಾಗೂ, ಕಷ್ಟದ ಕೆಲಸವನ್ನು ಮಾಡಲು ಇಷ್ಟಪಡುವವನಾಗಿರತಕ್ಕದ್ದು. ಇಂದಿನ ಲೋಕದಲ್ಲಿ ಅನೇಕ ಜನರು, ಕಷ್ಟದ ಕೆಲಸವನ್ನು ವರ್ಜಿಸಬೇಕಾದ ಒಂದು ವಿಷಯದಂತೆ ವೀಕ್ಷಿಸುತ್ತಾರೆ. ಆದುದರಿಂದ ಬೆತೆಲ್ ಸೇವೆಗೆ ಅರ್ಜಿ ಹಾಕುವ ಯೌವನಸ್ಥನು, ಎಷ್ಟರ ಮಟ್ಟಿಗೆ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕೆಂದರೆ, ತನ್ನ ಕೈಗಳಿಂದ ಒಳ್ಳೆಯ ಕೆಲಸವನ್ನು ಮಾಡುತ್ತಾ, ಅವನು ಕಷ್ಟದ ಕೆಲಸವನ್ನು ಮಾಡಲು ಬಯಸಬೇಕಾದ ಅಗತ್ಯವಿದೆ. (ಎಫೆಸ 4:28ನ್ನು ಹೋಲಿಸಿ.) ಅಂದರೆ ಅವನು ವೈಯಕ್ತಿಕ ಸುಖಾನುಭವಗಳು, ವಿನೋದ, ಅಥವಾ ಮನೋರಂಜನೆಯ ಬೆನ್ನಟ್ಟುವಿಕೆಯ ಮೇಲೆ ತನ್ನ ಮನಸ್ಸನ್ನು ಇಟ್ಟಿರುವಂತಹ ಒಬ್ಬ ವ್ಯಕ್ತಿಯಾಗಿರಬಾರದು. ಬೆತೆಲ್ ಸೇವೆಯನ್ನು ಪರಿಗಣಿಸುವಾಗ, ಅವನು ಈಗಾಗಲೆ ಅಂತಹ ಯೌವನಾವಸ್ಥೆಯ ಸ್ವಭಾವ ಲಕ್ಷಣಗಳನ್ನು ದೂರಮಾಡಿದಿರ್ದಬೇಕು. 1 ಕೊರಿಂಥ 13:11ರಲ್ಲಿರುವ ಪೌಲನ ಮಾತುಗಳು ಸೂಕ್ತವಾಗಿ ಅನ್ವಯಿಸುತ್ತವೆ: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.”
9 ನೀವು 19 ಮತ್ತು 35ರ ನಡುವಣ ಪ್ರಾಯದವರಾಗಿದ್ದೀರೊ? ನೀವು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಒಳ್ಳೆಯ ಆರೋಗ್ಯವನ್ನು ಅನುಭವಿಸುತ್ತೀರೊ? ಕಡಿಮೆಪಕ್ಷ ಸ್ವಲ್ಪ ಇಂಗ್ಲಿಷನ್ನಾದರೂ ಮಾತಾಡಲು ನೀವು ಶಕ್ತರಾಗಿದ್ದೀರೊ? ನೀವು ಯೆಹೋವನಿಗಾಗಿ ಮತ್ತು ಆತನ ಸಂಸ್ಥೆಗಾಗಿ ಗಾಢವಾದ ಪ್ರೀತಿಯಿರುವ ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದೀರೊ? ಬೆತೆಲಿಗೆ ಕರೆಯಲ್ಪಟ್ಟಲ್ಲಿ, ನಿಮಗೆ ಕೊಡಲ್ಪಡುವ ಯಾವುದೇ ಉದ್ಯೋಗದಲ್ಲಿ ಕೆಲಸ ಮಾಡುತ್ತಾ, ಆ ಸೇವೆಯಲ್ಲಿ ಕಡಿಮೆಪಕ್ಷ ಒಂದು ವರ್ಷವಾದರೂ ನಂಬಿಗಸ್ತಿಕೆಯಿಂದ ನೀವು ಉಳಿಯುವಿರೊ? ಈ ಪ್ರಶ್ನೆಗಳಿಗೆ ಹೌದೆಂದು ನೀವು ಉತ್ತರಿಸಬಲ್ಲಿರಾದರೆ, ಬೆತೆಲ್ ಸೇವೆಯ ಅಪೂರ್ವ ಸುಯೋಗವನ್ನು ಪರಿಗಣಿಸುವುದು ನಿಮಗೆ ಒಳ್ಳೆಯದಾಗಿರುವುದು. ಆಶೀರ್ವಾದಗಳು ಹೇರಳವಾಗಿವೆ.
10 ಬೆತೆಲ್ ಸೇವೆಯ ಆಶೀರ್ವಾದಗಳು: 1994, ಜೂನ್ 15ರ ಕಾವಲಿನಬುರುಜು ಪತ್ರಿಕೆಯಲ್ಲಿನ “‘ದೇವರ ಗೃಹ’ವನ್ನು ಗಣ್ಯತೆಯಿಂದ ಕಾಣುವುದು” ಎಂಬ ಲೇಖನವು ಗಮನಿಸಿದ್ದು: “ಒಂದು ಸಮ್ಮೇಳನವನ್ನು ಹಾಜರಾಗುವಾಗ, ಯೆಹೋವನ ಸಂತುಷ್ಟ ಆರಾಧಕರಿಂದ ನೀವು ಸುತ್ತುವರಿಯಲ್ಪಟ್ಟ ಕಾರಣ, ಆಳವಾದ ಸಂತೃಪ್ತಿಯನ್ನು ನೀವು ಅನುಭವಿಸುತ್ತೀರೊ? ಕೇವಲ ಊಹಿಸಿ, ಒಬ್ಬ ಬೆತೆಲ್ ಕೆಲಸಗಾರನಿಗೆ ಪ್ರತಿದಿನ ಸಹೋದರರ ಗುಂಪಿನ ಮಧ್ಯೆ ಯೆಹೋವನನ್ನು ಸೇವಿಸುವ ಸುಯೋಗವಿದೆ! (ಕೀರ್ತನೆ 26:12) ಆತ್ಮಿಕ ಬೆಳವಣಿಗೆಗಾಗಿ ಎಂತಹ ಅತ್ಯುತ್ತಮ ಪ್ರತೀಕ್ಷೆಗಳನ್ನು ಅದು ನೀಡುತ್ತದೆ! ತನ್ನ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುವಂತೆ ಬೇರೆ ಕಡೆಯಲ್ಲಿ ಮೂರು ವರ್ಷಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದ್ದನ್ನು ಬೆತೆಲಿನಲ್ಲಿ ಒಂದು ವರ್ಷದೊಳಗೆ ಕಲಿತನೆಂದು ಒಬ್ಬ ಸಹೋದರನು ಹೇಳಿದನು. ಯಾಕೆ? ಯಾಕೆಂದರೆ ಇಷ್ಟೊಂದು ಪ್ರೌಢ ಕ್ರೈಸ್ತ ವ್ಯಕ್ತಿತ್ವಗಳನ್ನು ಗಮನಿಸುವ ಮತ್ತು ನಂಬಿಕೆಯನ್ನು ಅನುಕರಿಸುವ ಅವಕಾಶ ಅವನಿಗೆ ಬೇರೆಲಿಯ್ಲೂ ಇರಲಿಲ್ಲ.” (ಜ್ಞಾನೋ. 13:20) ವಾಸ್ತವವಾಗಿ, ಇದು ಬೆತೆಲ್ ಸೇವೆಯ ಅಪೂರ್ವ ಆಶೀರ್ವಾದಗಳಲ್ಲಿ ಒಂದಾಗಿದೆ.
11 ಬೆತೆಲಿನಲ್ಲಿ, ಸ್ವಯಂಸೇವಕರು ಬ್ರಾಂಚ್ ಕಮಿಟಿಯ ಸದಸ್ಯರೊಂದಿಗೆ ಹಾಗೂ ದೀರ್ಘಸಮಯದಿಂದ ನಂಬಿಗಸ್ತರಾಗಿರುವ ಇತರ ಸಹೋದರರೊಂದಿಗೆ ನಿಕಟ ಸಹವಾಸದಲ್ಲಿ ಆನಂದಿಸುತ್ತಾರೆ. ಒಬ್ಬನಿಗೆ ಯಾವುದೇ ರೀತಿಯ ಕೆಲಸದ ನೇಮಕವಿರಲಿ, ಅಂತಹ ನಂಬಿಗಸ್ತ, ನಿಷ್ಠಾವಂತ ಸಂಗಡಿಗರೊಂದಿಗೆ ಐಕ್ಯದಿಂದ ಕೆಲಸ ಮಾಡುವುದು ಒಂದು ಆಶೀರ್ವಾದವಾಗಿದೆ. ಸೇವೆಯ ಈ ಅಮೂಲ್ಯ ಸುಯೋಗದಲ್ಲಿ ಒಂದು ಪಾಲನ್ನು ಹೊಂದಿರುವವರ ಭಾವನೆಗಳನ್ನು ಪ್ರತಿಬಿಂಬಿಸುವ, ಬ್ರೂಕ್ಲಿನ್ ಬೆತೆಲ್ ಕುಟುಂಬದ ಸದಸ್ಯರಿಂದ ಕೊಡಲ್ಪಟ್ಟ ಕೆಲವು ಹೇಳಿಕೆಗಳು ಇಲ್ಲಿವೆ:
◼ ಗತವರ್ಷಗಳಲ್ಲಿ ವಿವಿಧ ನೇಮಕಗಳಲ್ಲಿ ಕೆಲಸ ಮಾಡಿದ್ದು, 62 ವರ್ಷಗಳ ಬೆತೆಲ್ ಸೇವೆಯನ್ನು ಮಾಡಿರುವ ಒಬ್ಬ ಸಹೋದರರು, ಬೆತೆಲ್ನಲ್ಲಿ ಅಸ್ತಿತ್ವದಲ್ಲಿರುವ ಸ್ಫೂರ್ತಿಯ ಕುರಿತು ಹೇಳಿಕೆಯನ್ನಿತ್ತದ್ದು: “ನಾವೆಲ್ಲರೂ ಒಂದು ಕುಟುಂಬವಾಗಿದ್ದೇವೆ; ನಾವೆಲ್ಲರೂ ಸಹೋದರರಾಗಿದ್ದೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ನಮಗೆಲ್ಲರಿಗೆ ನಮ್ಮ ನೇಮಕಗಳಿವೆ. ಸಹೋದರರು ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡುವುದು ಅದ್ಭುತಕರ; ಅವರು ಪ್ರಯೋಗಿಸುವ ಪ್ರಯತ್ನವನ್ನು ನೀವು ನೋಡಬಲ್ಲಿರಿ. ನೆಲವನ್ನು ಗುಡಿಸುವ ಸಹೋದರರು ಇದ್ದಾರೆ. ನೀವು ಸ್ಥಳವನ್ನು ಸ್ವಚ್ಛವಾಗಿಡುವಾಗ, ನೀವು ಕುಟುಂಬವನ್ನು ಆರೋಗ್ಯಕರವಾಗಿಡುತ್ತೀರಿ. ನೀವು ಕುಟುಂಬವನ್ನು ಆರೋಗ್ಯಕರವಾಗಿಡುವಾಗ, ಕುಟುಂಬವು ಉತ್ಪನ್ನಕರವಾಗಿರುತ್ತದೆ. ಇದು ಅಗತ್ಯವಾಗಿದೆ. ಆಫೀಸಿನಲ್ಲಿ ಜನರಿರುವುದು ಪ್ರಾಮುಖ್ಯವಾಗಿದೆ. ನಾವೆಲ್ಲರೂ ಒಟ್ಟಿಗೆ ಫಲಿತಾಂಶವನ್ನು ಉತ್ಪಾದಿಸುತ್ತೇವೆ—ಲೋಕವ್ಯಾಪಕ ರಾಜ್ಯ ಸಾಕ್ಷಿಯೇ. ಯೆಹೋವನನ್ನು ಸೇವಿಸುವುದನ್ನು ಜೀವನದ ಮಾರ್ಗವನ್ನಾಗಿ ಮಾಡಲು, ಇದು ಲೋಕದಲ್ಲಿ ಅತ್ಯುತ್ತಮವಾದ ಸ್ಥಳವಾಗಿದೆ. ನೀವು ಪೂರ್ಣ ಸಮಯದ ಸೇವೆಯಲ್ಲಿರಲು ಬಯಸುವುದಾದರೆ, ನೀವು ಅದನ್ನು ಇಲ್ಲಿಯೇ ಅತ್ಯುತ್ತಮವಾಗಿ ಮಾಡಬಲ್ಲಿರಿ. ಪ್ರತಿಯೊಂದೂ ನಿಮಗೆ ದೊರೆಯುತ್ತದೆ. ನಾವು ಇಲ್ಲಿ ಹೆಚ್ಚಿನ ವಿಷಯಗಳಲ್ಲಿ ಆನಂದಿಸುತ್ತೇವೆ. ಇದು ನೀವು ಸಂಸ್ಥೆಯನ್ನು ನೋಡುವಂತೆ ಮಾಡುತ್ತದೆ, ಏಕೆಂದರೆ ನೀವು ಭೂಮಿಯ ಎಲ್ಲಾ ದಿಕ್ಕುಗಳಿಂದ ವಿಷಯಗಳನ್ನು ಕೇಳುತ್ತೀರಿ.”
◼ ಸುಮಾರು 48 ವರ್ಷಗಳ ಹಿಂದೆ, ಯಾರ ಪ್ರಥಮ ನೇಮಕವು ಬುಕ್ಬೈಂಡರಿಯಲ್ಲಿತ್ತೊ, ಆ 75 ವರ್ಷ ಪ್ರಾಯದ ಅಭಿಷಿಕ್ತ ಸಹೋದರರು ಗಮನಿಸಿದ್ದು: “ಯೆಹೋವನ ಸಮರ್ಪಿತ, ಸ್ನಾನಿತ ಸೇವಕರ ನಡುವೆ ಜೀವಿಸುವುದು ಒಂದು ಸುಂದರವಾದ ಅನುಭವವಾಗಿದೆ. ಒಬ್ಬ ಯೌವನಸ್ಥನು ಬೆತೆಲಿಗೆ ಬರುತ್ತಿರುವುದನ್ನು ನಾನು ಅವಲೋಕಿಸುವಾಗ, ನನ್ನ ಹೃದಯವು ಯೆಹೋವನಿಗಾಗಿ ಕೃತಜ್ಞತೆಯಿಂದ ಉಕ್ಕುತ್ತದೆ, ಏಕೆಂದರೆ ಈ ಮನುಷ್ಯನು ಬೆತೆಲಿನಲ್ಲಿ ಒಂದು ಸಂತೋಷಭರಿತ ಜೀವನವನ್ನು ಅನುಭವಿಸಲಿದ್ದಾನೆ ಎಂದು ನನಗೆ ತಿಳಿದಿದೆ.” ಬೆತೆಲಿನ ಕುರಿತು ತಾವು ಅಮೂಲ್ಯವೆಂದು ಭಾವಿಸುವ ವಿಷಯದ ಬಗ್ಗೆ ಅವರು ಕೂಡಿಸಿದ್ದು: “ನಾನು ಅದರ ಜನರನ್ನು ಪ್ರೀತಿಸುತ್ತೇನೆ. ಅವರು ಸುಂದರರೆಂದು ನಾನು ನೆನಸುತ್ತೇನೆ. ಭೂಮಿಯ ಹೊರಮೈಯ ಮೇಲೆ ಇತರ ಯಾವುದೇ ಸ್ಥಳದಲ್ಲಿ ನೀವು ಕಂಡುಕೊಳ್ಳದಂತಹ ಯಾವುದೋ ವಿಷಯವು, ಅನೇಕ ವರ್ಷಗಳಿಂದ ಬೆತೆಲಿನಲ್ಲಿರುವ ಸಹೋದರರಲ್ಲಿದೆ. ಅಲ್ಲಿ, ಆದರಣೆ, ವಿವೇಚನೆ, ಮತ್ತು ವಿವೇಚನೆಗಿಂತ ಮಿಗಿಲಾದ ಐಕ್ಯವು ಇದೆ.”
◼ 62ಕ್ಕಿಂತಲೂ ಹೆಚ್ಚು ವರ್ಷಗಳಿಂದ ಬೆತೆಲ್ ಸೇವೆಯಲ್ಲಿದ್ದಂತಹ ಇನ್ನೊಬ್ಬ ಸಹೋದರರು, ಪಡೆದುಕೊಂಡಂತಹ ಹೆಚ್ಚಿನ ಪ್ರಯೋಜನಗಳ ಕುರಿತು ಹೇಳಿಕೆ ನೀಡಿದ್ದು: “ಬೆತೆಲಿಗೆ ಬರುವುದು ನಿಮ್ಮನ್ನು ಪ್ರಕಾಶಕ ಕ್ಷೇತ್ರದಲ್ಲಿ ವಿಶಿಷ್ಟೀಕೃತ ಶಿಕ್ಷಣವನ್ನು ಪಡೆದುಕೊಳ್ಳಲು ಶಕ್ತರನ್ನಾಗಿ ಮಾಡುತ್ತದೆ. . . . ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಲೋಕದಲ್ಲಿ ನೀವು ಎಲ್ಲಿಯೇ ಕಳುಹಿಸಲ್ಪಡಲಿ, ಅಲ್ಲಿ ನೀವು ಯೆಹೋವ ದೇವರ ಯೋಗ್ಯ ಪ್ರತಿನಿಧಿಯಾಗಿರುವಂತೆ ಬೈಬಲ್ ಶಿಕ್ಷಣವು ನಿಮ್ಮನ್ನು ಸಿದ್ಧಗೊಳಿಸುತ್ತದೆ.”
◼ ಈಗ 92 ವರ್ಷ ಪ್ರಾಯದವರಾಗಿರುವ, ಆಡಳಿತ ಮಂಡಳಿಯ ಸದಸ್ಯರೊಬ್ಬರು, ಬೆತೆಲಿನಲ್ಲಿ 58 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಬೆತೆಲ್ ಸೇವೆಯ ಕುರಿತು ಅವರೇನನ್ನು ನೆನಸುತ್ತಾರೆ? “ಇಲ್ಲಿ ಮತ್ತು ಲೋಕವ್ಯಾಪಕವಾಗಿರುವ ಬೆತೆಲ್ ಕುಟುಂಬವು, ದೃಢ ನಿಷ್ಠೆಯುಳ್ಳ ಜನರ ಒಂದು ಅದ್ಭುತಕರವಾದ ಏರ್ಪಾಡಾಗಿದೆ.”
◼ ಕೆಲವು ತಿಂಗಳುಗಳ ಹಿಂದೆ ಆಡಳಿತ ಮಂಡಳಿಯ ಸದಸ್ಯರೊಬ್ಬರು, 98 ವರ್ಷಗಳ ಪ್ರಾಯದಲ್ಲಿ ತಮ್ಮ ನೇಮಕದಲ್ಲಿ ನಂಬಿಗಸ್ತರಾಗಿ ಸತ್ತರು. ಅವರು ಈ ರೀತಿಯಲ್ಲಿ ತಮ್ಮನ್ನು ವ್ಯಕ್ತಪಡಿಸಿಕೊಂಡರು: “ಬೆತೆಲಿನಲ್ಲಿ ಸೇವೆ ಮಾಡಲು ನಾನು ಬಹಳ ಇಷ್ಟಪಡುತ್ತೇನೆ. ಇದು ಸೂರ್ಯನ ಕೆಳಗಿರುವ ಅತ್ಯುತ್ತಮವಾದ ಸ್ಥಳವಾಗಿದೆ.”
◼ ಬೆತೆಲ್ ಸೇವೆಯ ಕುರಿತಾಗಿ ಒಬ್ಬ ಯೌವನಸ್ಥನ ವೀಕ್ಷಣವೇನು? ಇತ್ತೀಚೆಗೆ ಒಬ್ಬ ಯುವ ಸಹೋದರನು ಬರೆದುದು: “ಯೇಸು ಹೇಳಿದಂತೆ ‘ಕೊಡುವುದು ಹೆಚ್ಚು ಮಹತ್ತಾದ ಸಂತೋಷವನ್ನು ತರುತ್ತ’ದಾದುದರಿಂದ, ನಾನು ಎಂದಾದರೂ ನೋಡಿರುವ ಸ್ಥಳಗಳಲ್ಲಿ ಅತ್ಯಂತ ಸಂತೋಷಭರಿತ ಸ್ಥಳವು ಬೆತೆಲ್ ಆಗಿದೆ.” ಅವನು ಬೆತೆಲಿನ ಸ್ಫೂರ್ತಿಯನ್ನು ಸೆರೆಹಿಡಿದಿದ್ದಾನೆ—ಕೊಡುವಿಕೆ.
◼ ಪೂರ್ಣ ಸಮಯದ ಸೇವೆಯಲ್ಲಿ 51 ವರ್ಷಗಳನ್ನು ಕಳೆದಿರುವ ಒಬ್ಬ ಸಹೋದರರು, ಹೀಗೆ ಹೇಳುವ ಮೂಲಕ ವಿಷಯಗಳನ್ನು ಚೆನ್ನಾಗಿ ಸಂಗ್ರಹಾನುವಾದ ಮಾಡಿದರು: “ಬೆತೆಲ್ ಸೇವೆಯು ನಿಜವಾಗಿಯೂ ಅಪೂರ್ವವಾಗಿದೆ. ಭೂಮಿಯ ಮೇಲೆ ಯೆಹೋವನ ಉದ್ದೇಶದ ಮುಗಿಸುವಿಕೆಯಲ್ಲಿ ಇದು ಒಂದು ಅತ್ಯಾವಶ್ಯಕ ಭಾಗವಾಗಿದೆ. ಆದುದರಿಂದ ಬೆತೆಲಿನಲ್ಲಿ ಸೇವೆ ಮಾಡುವ ಸುಯೋಗವಿರುವ ಯಾರಾದರೊಬ್ಬರು ಅದನ್ನು ತೀರ ಉತ್ಕೃಷ್ಟವಾಗಿ ಪರಿಗಣಿಸಬೇಕು. ನಿಜವಾಗಿಯೂ, ದಿವ್ಯಭಕ್ತಿಯ ಜೀವನವೊಂದಕ್ಕೆ ಸಂಪೂರ್ಣ ಅಭಿವ್ಯಕ್ತಿಯನ್ನು ಕೊಡುವಂತೆ ಬೆತೆಲ್ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.”
12 ದೈನಂದಿನ ನಿಯತಕ್ರಮ: ಬೆತೆಲ್ ಕುಟುಂಬದ ಸದಸ್ಯನೊಬ್ಬನ ದೈನಂದಿನ ನಿಯತಕ್ರಮವು, ಅವನನ್ನು ರಾಜ್ಯ ಚಟುವಟಿಕೆಯ ಜೀವನವೊಂದರಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿರಿಸುತ್ತದೆ. ಸೋಮವಾರದಿಂದ ಶನಿವಾರದ ವರೆಗೆ, 7 ಗಂಟೆಗೆ ನಮ್ಮ ಭೋಜನಶಾಲೆಗಳಲ್ಲಿ ಬೆಳಗ್ಗಿನ ಆರಾಧನೆಯು ಆರಂಭಗೊಳ್ಳುತ್ತದೆ. ಕುಟುಂಬದ ಸದಸ್ಯರಿಂದ ದಿನದ ವಚನದ ಮೇಲೆ ಹೇಳಿಕೆಗಳು ಕೊಡಲ್ಪಡುತ್ತವೆ, ಮತ್ತು ಬ್ರಾಂಚ್ ಕಮಿಟಿಯ ಸದಸ್ಯರೊಬ್ಬರಿಂದ ಅಥವಾ ಅನೇಕ ವರ್ಷಗಳಿಂದ ಪೂರ್ಣ ಸಮಯದ ಸೇವಾನುಭವವಿರುವ ಇನ್ನೊಬ್ಬ ಸಹೋದರರಿಂದ ಸಾರಾಂಶವು ನೀಡಲ್ಪಡುತ್ತದೆ, ಅದನ್ನು ಹಿಂಬಾಲಿಸಿ ಬೆಳಗ್ಗಿನ ಪ್ರಾರ್ಥನೆಯಾಗುತ್ತದೆ. ಈ ಕಾರ್ಯಕ್ರಮವು ಆ ದಿನದ ಚಟುವಟಿಕೆಗಾಗಿ ಕುಟುಂಬವನ್ನು ಆತ್ಮಿಕವಾಗಿ ಬಲಪಡಿಸುತ್ತದೆ. ಅದು ದಿನದ ಮುಖ್ಯವಿಷಯವಾಗಿದೆಯೆಂದು ಬೆತೆಲ್ ಕುಟುಂಬದ ಸದಸ್ಯರು ನಿಮಗೆ ಹೇಳುವರು. ಪುಷ್ಕಳವಾದ ಬೆಳಗ್ಗಿನ ಉಪಾಹಾರದ ಬಳಿಕ, ಬೆತೆಲ್ ಕುಟುಂಬದ ಸದಸ್ಯರು ತಮ್ಮ ಕೆಲಸದ ವಿವಿಧ ನೇಮಕಗಳಿಗೆ ಉತ್ಸುಕರಾಗಿ ಹೋಗುತ್ತಾರೆ. ಸೋಮವಾರದಿಂದ ಶುಕ್ರವಾರದ ವರೆಗಿನ ಕೆಲಸದ ದಿನವು 8 ಗಂಟೆಯಿಂದ 5:10ರ ತನಕ ವಿಸ್ತರಿಸುತ್ತದೆ, ಮಧ್ಯಾಹ್ನದ ಊಟಕ್ಕಾಗಿ ಒಂದು ತಾಸು ಬದಿಗಿರಿಸಲ್ಪಡುತ್ತದೆ. ಶನಿವಾರದಂದು ಸಹ ಕೆಲಸವು 8 ಗಂಟೆಯಿಂದ 11:55ರ ವರೆಗೆ ಶೆಡ್ಯೂಲ್ ಮಾಡಲ್ಪಟ್ಟಿದೆ. ಸಾಯಂಕಾಲಗಳಲ್ಲಿ, ಶನಿವಾರ ಮಧ್ಯಾಹ್ನಗಳಂದು ಮತ್ತು ಆದಿತ್ಯವಾರದಂದು, ಬೆತೆಲಿಗರು ತಮ್ಮ ಕೂಟಗಳಿಗೆ ಹೋಗುತ್ತಾರೆ, ಮನೆಯಿಂದ ಮನೆಯ ಅಥವಾ ಬೈಬಲ್ ಅಭ್ಯಾಸದ ಕಾರ್ಯಚಟುವಟಿಕೆಯಲ್ಲಿ ಪಾಲುತೆಗೆದುಕೊಳ್ಳುತ್ತಾರೆ, ಅಥವಾ ವೈಯಕ್ತಿಕ ಜವಾಬ್ದಾರಿಗಳ ಕಾಳಜಿ ವಹಿಸುತ್ತಾರೆ. ವೈಯಕ್ತಿಕ ಅಭ್ಯಾಸ ಅಥವಾ ಕೂಟಗಳಿಗೆ ತಯಾರಿ ಮಾಡಲಿಕ್ಕಾಗಿ ಅವರು ಬೆತೆಲ್ ಗ್ರಂಥಾಲಯದ ಸೌಕರ್ಯಗಳನ್ನು ಉಪಯೋಗಿಸಬಹುದು. ಓಹ್, ಹೌದು, ಅಲ್ಲಿ ಅಗತ್ಯವಿರುವ ವಿಶ್ರಾಂತಿ ಮತ್ತು ವಿಶ್ರಮಿಸುವಿಕೆಗಾಗಿ ಸಮಯವಿದೆ. (ಮಾರ್ಕ 6:31, 34) ಈ ಸಂಕ್ಷಿಪ್ತ ವಿವರಣೆಯಿಂದ, ಈ ಹಳೆಯ ವಿಷಯಗಳ ವ್ಯವಸ್ಥೆಯ ಅಪಕರ್ಷಣೆಗಳಿಂದ ಸ್ವತಂತ್ರನಾಗಿ, ಪವಿತ್ರ ಸೇವೆಗಾಗಿ ಪ್ರತಿದಿನ ತನ್ನ ಅಧಿಕ ಪ್ರಮಾಣದ ಸಮಯವನ್ನು ಮೀಸಲಾಗಿಡುವಂತೆ, ಬೆತೆಲ್ ಸೇವೆಯು ಒಬ್ಬ ವ್ಯಕ್ತಿಗೆ ಅನುಮತಿಸುತ್ತದೆ ಎಂಬುದನ್ನು ನಾವು ಸುಲಭವಾಗಿ ಅವಲೋಕಿಸಸಾಧ್ಯವಿದೆ.
13 ಸಭಾ ಚಟುವಟಿಕೆಗಳು: ಬ್ರೂಕ್ಲಿನ್ ಬೆತೆಲ್ ಕುಟುಂಬದ ಸದಸ್ಯರು, ನ್ಯೂ ಯಾರ್ಕ್ ಸಿಟಿ ಕ್ಷೇತ್ರದಲ್ಲಿರುವ 350ಕ್ಕಿಂತಲೂ ಹೆಚ್ಚಿನ ಸಭೆಗಳಿಗೆ ನೇಮಕ ಮಾಡಲ್ಪಟ್ಟಿರುವಂತೆಯೇ, ಲೊನಾವ್ಲದಲ್ಲಿರುವ ಬೆತೆಲ್ ಕುಟುಂಬದ ಸದಸ್ಯರು ಮೂರು ಸಭೆಗಳಿಗೆ ನೇಮಕ ಮಾಡಲ್ಪಟ್ಟಿದ್ದಾರೆ. ತಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಸ್ಥಳಿಕ ಸಭೆಯ ಪಾತ್ರವನ್ನು ಅವರು ಅಮೂಲ್ಯವೆಂದೆಣಿಸುತ್ತಾರೆ. ಹೀಗೆ, ಅವರು ಐದು ಕೂಟಗಳಿಗೆ ಹಾಜರಾಗುತ್ತಾ, ಕ್ಷೇತ್ರ ಶುಶ್ರೂಷೆಯಲ್ಲಿ ತಮ್ಮ ಸಹೋದರರೊಂದಿಗೆ ಕ್ರಮವಾಗಿ ಪಾಲುತೆಗೆದುಕೊಳ್ಳುತ್ತಾ, ಅವರ ಸಭೆಯೊಂದಿಗೆ ಚಟುವಟಿಕೆಯುಳ್ಳವರಾಗಿದ್ದಾರೆ. ಸಭಾ ಕೂಟಗಳ ಜೊತೆಗೆ, ಸೋಮವಾರ ಸಾಯಂಕಾಲಗಳಂದು ಬೆತೆಲಿನ ಕುಟುಂಬಕ್ಕೆ ತನ್ನ ಸ್ವಂತ ಕಾವಲಿನಬುರುಜು ಅಭ್ಯಾಸವಿದೆ; ಎಲ್ಲರ ಪ್ರಯೋಜನಕ್ಕಾಗಿ ಹೇಳಿಕೆಗಳನ್ನು ಮಾಡುವಂತೆ ಬೆತೆಲಿಗರು ಸರದಿಗಳ ಪ್ರಕಾರ ನೇಮಿಸಲ್ಪಡುತ್ತಾರೆ. ಬೆತೆಲ್ನ ಶೆಡ್ಯೂಲ್ ಆತ್ಮಿಕ ವಿಷಯಗಳಿಗೆ ಪ್ರಾಧಾನ್ಯವನ್ನು ಕೊಡುವುದರಿಂದ, ಅದು ಯೆಹೋವನಿಗೆ ಸೇವೆಯ ಒಂದು ಸಂತೋಷಭರಿತ, ಆನಂದಕರ ಜೀವನದಲ್ಲಿ ಫಲಿಸುತ್ತದೆ.—1 ಕೊರಿಂ. 15:58.
14 ಬೆತೆಲ್ ಸೇವೆಗಾಗಿ ಸಿದ್ಧತೆ: ಬೆತೆಲ್ ಸೇವೆಗಾಗಿ ಸಿದ್ಧರಾಗಲು ತಾವೇನು ಮಾಡಸಾಧ್ಯವಿದೆಯೆಂದು ಯೌವನಸ್ಥರು ಅನೇಕಾವರ್ತಿ ಕೇಳುತ್ತಾರೆ. ಪರ್ಸನೆಲ್ (ಸಿಬ್ಬಂದಿ) ಕಮಿಟಿಯಲ್ಲಿ ಸೇವೆಸಲ್ಲಿಸುತ್ತಿರುವ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದು: “ನೀವು ಬೆತೆಲಿಗೆ ಬರುವಾಗ, ಸೇವೆ ಮಾಡಿಸಿಕೊಳ್ಳಲು ಅಲ್ಲ, ಸೇವೆ ಮಾಡಲು ಬನ್ನಿ. ನೀವು ಸೇವೆ ಮಾಡಲು ಹೆಚ್ಚು ಕಲಿತಂತೆ, ನಿಮ್ಮ ಸಂತೋಷವು ಹೆಚ್ಚು ಮಹತ್ತರವಾಗಿರುವುದು. ತೆಗೆದುಕೊಳ್ಳಲು ಅಲ್ಲ, ಕೊಡಲು ಕಲಿಯಿರಿ. ಸಭ್ಯರಾಗಿರ್ರಿ, ನಮ್ರರಾಗಿರ್ರಿ. ಆತ್ಮದ ಫಲದಲ್ಲಿಯೇ ನಿಜವಾದ ಕ್ರೈಸ್ತತ್ವವು ನೆಲೆಗೊಂಡಿದೆ.” ಹೌದು, ನಿಮ್ಮ ಆತ್ಮಿಕತೆಯನ್ನು ಮತ್ತು ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ವಿಕಸಿಸಿಕೊಳ್ಳುವುದು—ಬೆತೆಲ್ನಲ್ಲಿನ ಯಶಸ್ಸಿಗೆ ಕೀಲಿ ಕೈಗಳಾಗಿವೆ. ಆದುದರಿಂದಲೇ ಬೆತೆಲ್ಗಾಗಿ ಹೊಸ ಸ್ವಯಂಸೇವಕರು ಆರಿಸಲ್ಪಡುವಾಗ, ಅನೇಕವೇಳೆ ಪಯನೀಯರರು ಆರಿಸಲ್ಪಡುತ್ತಾರೆ. ಒಬ್ಬನು ಸಾರುತ್ತಾ, ಕಲಿಸುತ್ತಾ, ಇತರರಿಗೆ ಕೊಡುತ್ತಾ ಹಾಗೂ ತನ್ನನ್ನು ಪೋಷಿಸಿಕೊಳ್ಳಲು ಅಗತ್ಯವಿರುವ ಕೆಲಸಕ್ಕೆ ಸಮಯವನ್ನು ಒದಗಿಸುತ್ತಾ, ತಿಂಗಳಿಗೆ 90 ತಾಸುಗಳನ್ನು ವ್ಯಯಿಸಲು ಒಂದು ಕಾಲಾವಧಿಯಲ್ಲಿ ತನ್ನನ್ನು ಶಿಸ್ತಿಗೊಳಪಡಿಸಿಕೊಂಡಿರುವಾಗ, ಅವನು ಬೆತೆಲ್ ಸೇವೆಗೂ ಅದರ ಕ್ರಮಬದ್ಧ ಜೀವನ ರೀತಿಗೂ ಒಂದು ಉತ್ತಮ ಆತ್ಮಿಕ ಅಸ್ತಿವಾರವನ್ನು ಹಾಕಿದ್ದಾನೆ. ಹಾಗಿದ್ದರೂ, ಬೆತೆಲ್ ಸೇವೆಯು ಪಯನೀಯರ್ ಸೇವೆಯನ್ನು ಮಾಡುತ್ತಿರುವವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ಮೂಲಭೂತ ಆವಶ್ಯಕತೆಗಳನ್ನು ತಲಪುವ ಯಾರಾದರೂ ಅರ್ಜಿ ಹಾಕಸಾಧ್ಯವಿದೆ.
15 ಇದಕ್ಕೆ ಕೂಡಿಸಿ, ಯೌವನಸ್ಥರು ತಮ್ಮ ಕೈಗಳಿಂದ ಹೇಗೆ ಕೆಲಸ ಮಾಡಬೇಕೆಂಬುದನ್ನು ಕಲಿಯುವುದು ಒಳಿತಾಗಿದೆ. ಈ ಹಳೆಯ ವಿಷಯಗಳ ವ್ಯವಸ್ಥೆಯಲ್ಲಿ ಕೈ ದುಡಿಮೆಯು ಮೆಚ್ಚಿಕೆಯ ಭಾವನೆಯಿಂದ ಪರಿಗಣಿಸಲ್ಪಡುವುದಿಲ್ಲ. ಸ್ವಪ್ರೀತಿಯು, ಕಡಿಮೆ ಪಯತ್ನವನ್ನು ಅಗತ್ಯಪಡಿಸುವಂತಹ ಅಥವಾ ಪ್ರತಿಷ್ಠೆಯ ಹೊರತೋರಿಕೆಯನ್ನು ಕೊಡುವಂತಹ ಕೆಲಸವನ್ನು ಅಪೇಕ್ಷಿಸುವಂತೆ ಅನೇಕ ಜನರನ್ನು ಪ್ರಚೋದಿಸುತ್ತದೆ. ಆದರೂ, ವಿವಿಧ ಉಪಕರಣಗಳು ಮತ್ತು ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ತಿಳಿದುಕೊಂಡಿರುವುದು, ಬಹಳ ಪ್ರಾಯೋಗಿಕವೂ ಪ್ರಯೋಜನಕಾರಿಯೂ ಆದದ್ದಾಗಿದೆ. (ಜ್ಞಾನೋ. 22:29) ಅನೇಕವೇಳೆ, ಯೌವನಸ್ಥರು ಕೈ ಕೌಶಲಗಳನ್ನು ತಮ್ಮ ಹೆತ್ತವರಿಂದ ಅಥವಾ ರಾಜ್ಯ ಸಭಾಗೃಹದ ಸುತ್ತಲಿನ ವಿವಿಧ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡುವ ಅನುಭವಸ್ಥ ಹಿರಿಯ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ಅಥವಾ ವೃದ್ಧರಿಗೆ ಅವರ ಮನೆಗಳಿಗೆ ಅಗತ್ಯವಿರುವ ದುರಸ್ತಿಕಾರ್ಯದೊಂದಿಗೆ ನೆರವನ್ನೀಯುವ ಮೂಲಕ ಕಲಿಯಸಾಧ್ಯವಿದೆ.
16 “ಬೆತೆಲ್ ಸೇವೆಗೆ ಅರ್ಹನಾಗಲಿಕ್ಕಾಗಿ ನಾನು ಹೆಚ್ಚಿನ ಲೌಕಿಕ ತರಬೇತನ್ನು ಪಡೆದುಕೊಳ್ಳಬೇಕೊ?” ಎಂದು ಕೆಲವೊಮ್ಮೆ ಯುವ ಜನರು ಪ್ರಶ್ನಿಸುತ್ತಾರೆ. ಐಹಿಕ ತರಬೇತಿಯು ತಾನೇ ವ್ಯಕ್ತಿಯೊಬ್ಬನನ್ನು ಬೆತೆಲ್ ಸೇವೆಗಾಗಿ ಅರ್ಹನನ್ನಾಗಿ ಮಾಡುವುದಿಲ್ಲ. ಆತ್ಮಿಕ ಗುಣಗಳು ಪರಮಪ್ರಧಾನವಾಗಿವೆ ಮತ್ತು ಆಮಂತ್ರಿಸಲ್ಪಡುವವರೆಲ್ಲರಿಂದ ಅವು ಅಗತ್ಯಪಡಿಸಲ್ಪಡುತ್ತವೆ. ಇನ್ನೂ ಶಾಲಾ ವಯಸ್ಸಿನವರಾಗಿರುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ, 1993, ಫೆಬ್ರವರಿ 1ರ ಕಾವಲಿನಬುರುಜುವಿನ 15ರಿಂದ 21ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ, ಐಹಿಕ ಶಿಕ್ಷಣದ ಕುರಿತಾದ ಸಮತೂಕ ವೀಕ್ಷಣವನ್ನು ಜಾಗರೂಕವಾಗಿ ಪರಿಗಣಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಲೌಕಿಕ ಶಿಕ್ಷಣದ ಕುರಿತಾದ ಒಂದು ನಿರ್ಣಯವು ವೈಯಕ್ತಿಕ ವಿಷಯವಾಗಿದೆ. ವ್ಯಕ್ತಿಯೊಬ್ಬನು ಯಾವುದೇ ನಿರ್ಣಯವನ್ನು ಮಾಡಲಿ, ಯೆಹೋವನ ಜನರ ಪ್ರಮುಖ ಕೆಲಸ, ಸತ್ಯಕ್ಕೆ ಸಾಕ್ಷಿ ನೀಡುವ ಕೆಲಸದ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸುವ ಮೂಲಕ, ತನ್ನ ಆತ್ಮಿಕ ಪ್ರಗತಿಯನ್ನು ಕಾಪಾಡಿಕೊಳ್ಳಲು ತಾನು ಶಕ್ತನಾಗಿದ್ದೇನೆಂದು ಅವನು ಖಚಿತಪಡಿಸಿಕೊಳ್ಳಬೇಕು.
17 ಒಬ್ಬನು ಯಾವ ರೀತಿಯ ಐಹಿಕ ತರಬೇತಿಯನ್ನು ಪಡೆದುಕೊಳ್ಳುತ್ತಾನೆಂಬುದು ಪ್ರಾಮುಖ್ಯವಲ್ಲ, ಹೇಗೆ ಆಲೋಚಿಸಬೇಕೆಂಬುದನ್ನು ಕಲಿಯುವುದು ಹೆಚ್ಚು ಅಮೂಲ್ಯವೆಂದು ಎಣಿಸಲ್ಪಡುತ್ತದೆ. ಬೈಬಲು ಆಲೋಚನಾ ಸಾಮರ್ಥ್ಯ ಮತ್ತು ಪ್ರಾಯೋಗಿಕ ವಿವೇಕವನ್ನು ಪ್ರಶಂಸಿಸುತ್ತದೆ. (ಜ್ಞಾನೋ. 1:4; 3:21) ಆಲೋಚಿಸುವುದನ್ನು ಮತ್ತು ಮಾಹಿತಿಯನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ವಿಧವನ್ನು ಕಲಿಯುವುದು, ನಿಮಗೆ ಮತ್ತು ಯೆಹೋವನ ಲೋಕವ್ಯಾಪಕ ಸಂಸ್ಥೆಗೆ ಪ್ರಯೋಜನಕರವಾಗಿರುವ ಜ್ಞಾನ ಮತ್ತು ಕೌಶಲಗಳನ್ನು ಗಳಿಸುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡುವುದು. ಕೊನೆಯದಾಗಿ, ಒಬ್ಬನಿಗೆ ಯಾವುದೇ ಕೌಶಲಗಳಿರಲಿ, ಇತರರೊಂದಿಗೆ ಹೊಂದಿಕೊಂಡುಹೋಗಲು ಶಕ್ತನಾಗಿರುವುದು ಬಹಳ ಪ್ರಾಮುಖ್ಯವಾಗಿದೆ. ಕೆಲಸವನ್ನು ಪೂರೈಸಲಿಕ್ಕಾಗಿ ಬೆತೆಲ್ ಸ್ವಯಂಸೇವಕರು ಒಂದು ತಂಡದೋಪಾದಿ ನಿಕಟವಾಗಿ ಒಟ್ಟಿಗೆ ಕೆಲಸ ಮಾಡಬೇಕು. ಹೀಗೆ, ಸ್ವತಂತ್ರ ಅಥವಾ ಸ್ಪರ್ಧಾತ್ಮಕ ಮನೋಭಾವವು, ದೇವಪ್ರಭುತ್ವ ಮಾರ್ಗದರ್ಶನಕ್ಕೆ ಅಧೀನರಾಗುವ ಮನಃಪೂರ್ವಕತೆ ಮತ್ತು ಸಹಕಾರಾತ್ಮಕ ಹಾಗೂ ಪ್ರೀತಿಪರ ಪ್ರವೃತ್ತಿಯಿಂದ ಸ್ಥಾನಾಂತರಿಸಲ್ಪಡಬೇಕು.—ಎಫೆಸ 4:16ನ್ನು ಹೋಲಿಸಿ.
18 ಯೆಹೋವನ ಸಂಸ್ಥೆಯಲ್ಲಿರುವ ಯುವ ಜನರಿಗೆ, ಮೇಲೆ ಪ್ರಸ್ತಾಪಿಸಲ್ಪಟ್ಟಿರುವ ಸಾಮರ್ಥ್ಯಗಳನ್ನು ವಿಕಸಿಸಿಕೊಳ್ಳುವುದರಲ್ಲಿ ಕೆಲಸ ನಡಿಸಲು ಅಪೂರ್ವ ಸಂದರ್ಭವಿದೆ. ಆದುದರಿಂದ, ಬೆತೆಲಿನಲ್ಲಿ ಸೇವೆ ಮಾಡಲು ಆಮಂತ್ರಿಸಲ್ಪಟ್ಟಲ್ಲಿ, ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲು ಯೆಹೋವನ ಸಂಸ್ಥೆಯಿಂದ ತರಬೇತುಗೊಳಿಸಲ್ಪಡಲಿಕ್ಕಾಗಿ ಅವರು ಸುಸ್ಥಿತಿಯಲ್ಲಿರುವರು. ಈ ವಿಷಯವನ್ನು ನಿಮ್ಮ ಯುವ ಜನರ ಮುಂದೆ ಇಡುವುದನ್ನು ಮುಂದುವರಿಸುವಂತೆ, ಕ್ರೈಸ್ತ ಹೆತ್ತವರಿಗೆ ಮತ್ತು ಹಿರಿಯರಾದ ನಿಮ್ಮನ್ನು ನಾವು ಪ್ರಚೋದಿಸುತ್ತೇವೆ. ಕ್ರಮವಾಗಿ ಬೆತೆಲನ್ನು ಸಂದರ್ಶಿಸುವಂತೆ ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಕರೆತರುತ್ತಾರೆ, ಇದರಿಂದ ಅಲ್ಲಿ ಮಾಡಲ್ಪಡುವ ಕೆಲಸದೊಂದಿಗೆ ಅವರು ಪರಿಚಿತರಾಗುತ್ತಾರೆ. ಇದು ಅನೇಕರು ತಮ್ಮ ಶಿಕ್ಷಣವನ್ನು ಮುಗಿಸಿದ ಬಳಿಕ ಬೆತೆಲಿಗೆ ಬರುವಂತೆ ಮಾಡಿದೆ.
19 ಅನುಭವಸ್ಥರು: ಅನೇಕ ಸಂದರ್ಭಗಳಲ್ಲಿ, ಬೆತೆಲಿಗೆ ಅಗತ್ಯವಾಗಿರುವ ತರಬೇತು ಮತ್ತು ಕೌಶಲಗಳಿರುವ, ಕೊಂಚಮಟ್ಟಿಗೆ 35ಕ್ಕಿಂತ ಹೆಚ್ಚಿನ ಪ್ರಾಯದವರಾಗಿರುವ ಒಬ್ಬ ಸಹೋದರ ಅಥವಾ ಸಹೋದರಿಗೆ ಪ್ರವೇಶ ದೊರೆಯುತ್ತದೆ. ಪ್ರಸ್ತುತದಲ್ಲಿ ಸೊಸೈಟಿಯು ಮಾಡುತ್ತಿರುವ ಹೆಚ್ಚಿನ ಕೆಲಸವು, “ಪರಿಣತನೊಂದಿಗೆ ಕಲಿಯುವವ”ರೂ ತರಬೇತುಗೊಳಿಸಲ್ಪಡಸಾಧ್ಯವಿರುವವರೂ ಆಗಿರುವ, ಗಟ್ಟಿಮುಟ್ಟಾದ ಸಮರ್ಥ ಯೌವನಸ್ಥರೊಂದಿಗೆ ಕಾರ್ಯನಡಿಸುವ ಅನುಭವಸ್ಥರನ್ನು ಅಗತ್ಯಪಡಿಸುತ್ತದೆ.—1 ಪೂರ್ವ. 25:8, NW.
20 ಇಂದಿನ ಕೆಲಸದ ಅಧಿಕಾಂಶ ಪ್ರಮಾಣವು, ಇಲೆಕ್ಟಾನ್ರಿಕ್ಸ್ನಲ್ಲಿ ಹಿನ್ನೆಲೆಯಿರುವ ಅಥವಾ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ನ ಅನುಭವವಿರುವವರನ್ನು ಅಗತ್ಯಪಡಿಸುತ್ತದೆ. ಸೊಸೈಟಿಗೆ ಅಕ್ಷರಶಃ ನೂರಾರು ಫೋಟೊಕಾಪಿ ಮಷೀನುಗಳು, ಲೇಸರ್ ಪ್ರಿಂಟರ್ಗಳು, ಮತ್ತು ಪರ್ಸನಲ್ ಕಂಪ್ಯೂಟರ್ಗಳು ಇವೆ; ಇವೆಲ್ಲವುಗಳಿಗೆ ದುರಸ್ತಿಯ ಅಗತ್ಯವಿದೆ. ಇಂಜಿನಿಯರಿಂಗ್, ಪ್ಲಂಬಿಂಗ್, ಇಲೆಕ್ಟಿಕ್ರಲ್, ಮತ್ತು ಏರ್ಕಂಡಿಷನಿಂಗ್ಗಳಂತಹ ವಿವಿಧ ನಿರ್ಮಾಣ ಉದ್ಯಮಗಳಲ್ಲಿ ಕೌಶಲವಿರುವವರು ಉಪಯೋಗಿಸಲ್ಪಡಸಾಧ್ಯವಿದೆ. ಸಮಗ್ರವಾದ ಅಕೌಂಟಿಂಗ್ ಹಿನ್ನೆಲೆಯಿರುವ ಪ್ರೌಢ ಸಹೋದರರು, ವಿಶೇಷವಾಗಿ ಪ್ರಮಾಣೀಕೃತ ಅಕೌಂಟೆಂಟ್ಗಳು ಸಹಾಯಕಾರಿಗಳಾಗಿರಸಾಧ್ಯವಿದೆ. ದರಗಳನ್ನು ಕಡಿಮೆಗೊಳಿಸಲಿಕ್ಕಾಗಿ, ಸಾಗಣೆಗಾಗಿ ಮತ್ತು ಸಾಹಿತ್ಯವನ್ನು ರವಾನಿಸಲು ಸೊಸೈಟಿಗೆ ತನ್ನ ಸ್ವಂತ ವಾಹನಗಳ ತಂಡವಿದೆ. ಆದುದರಿಂದ, ಅನುಭವಸ್ಥ ಚಾಲಕರು ಮತ್ತು ಯಂತ್ರಿಗರ ಅಗತ್ಯವಿದೆ.
21 ನಮ್ಮ ಅತ್ಯಂತ ದೊಡ್ಡ ಅಗತ್ಯವು, ದೀಕ್ಷಾಸ್ನಾನಿತರಾದ ಅವಿವಾಹಿತ ಸಹೋದರರು ಮತ್ತು ವಿಶೇಷ ಕೌಶಲಗಳಿರುವವರಿಗಾಗಿದ್ದು, ಅವರಲ್ಲಿ ಕೆಲವರು ವಿವಾಹಿತರೂ ಆಗಿರಬಹುದು. ಅಧಿವೇಶನವೊಂದರಲ್ಲಿ, ಬೆತೆಲ್ ಸೇವೆಯಲ್ಲಿ ಆಸಕ್ತರಾಗಿರುವವರಿಗಾಗಿ ನಡೆಸಲ್ಪಡುವ ವಿಶೇಷ ಕೂಟದಲ್ಲಿ ಬೆತೆಲಿನ ಅರ್ಜಿಗಳನ್ನು ನೀವು ಪಡೆದುಕೊಳ್ಳಬಹುದು, ಅಥವಾ Watch Tower Society, Post Bag 10, Lonavla, MAH 410 401 ಇವರಿಗೆ ನೀವು ಬರೆಯಬಹುದು. ನೀವು ವಿವಾಹಿತರಾಗಿರುವಲ್ಲಿ, ನಿಮ್ಮ ಸಂಗಾತಿಯು ಸಹ ಆತ್ಮಿಕವಾಗಿ, ಭಾವನಾತ್ಮಕವಾಗಿ, ಮತ್ತು ಶಾರೀರಿಕವಾಗಿ ಬೆತೆಲ್ ಸೇವೆಗೆ ಅರ್ಹವಾಗಿರಬೇಕೆಂಬುದನ್ನು ಮನಸ್ಸಿನಲ್ಲಿಡಿರಿ. ಈ ಹಿಂದೆ ಪ್ರಸ್ತಾಪಿಸಲ್ಪಟ್ಟಿರುವ ಕ್ಷೇತ್ರಗಳಲ್ಲಿ ಒಂದರಲ್ಲಿ ನೀವು ತರಬೇತು ಮತ್ತು ಅನುಭವವನ್ನು ಹೊಂದಿರುವುದಾದರೆ, ದಯವಿಟ್ಟು ಒಂದು ಸವಿಸ್ತಾರವಾದ ಸಾರಾಂಶವನ್ನು ಬರೆದು, ಅದನ್ನು ನಿಮ್ಮ ಬೆತೆಲ್ ಅರ್ಜಿಗೆ ಲಗತಿಸ್ತಿರಿ.
22 ಒಂದು ತುರ್ತಿನ ಕರೆಗೆ ನೀವು ಓಗೊಡಬಲ್ಲಿರೊ? ಬೆತೆಲ್ ಸ್ವಯಂಸೇವಕರಿಗಾಗಿ ಒಂದು ತುರ್ತಿನ ಅಗತ್ಯವಿದೆ. ಬೆತೆಲ್ ಸೇವೆಗಾಗಿರುವ ಆವಶ್ಯಕತೆಗಳನ್ನು ನೀವು ತಲಪುವುದಾದರೆ, ಈ ತುರ್ತಿನ ಕರೆಗೆ ಉತ್ತರವಾಗಿ ಒಂದು ಬೆತೆಲ್ ಅರ್ಜಿಯನ್ನು ಹಾಕುವಂತೆ ನಾವು ನಿಮ್ಮನ್ನು ಬಲವಾಗಿ ಪ್ರೋತ್ಸಾಹಿಸುತ್ತೇವೆ. ಈಗಲೇ ನೀವು ಆಮಂತ್ರಿಸಲ್ಪಡದಿರುವಲ್ಲಿ ನಿರಾಶೆಗೊಳ್ಳಬೇಡಿರಿ. ನೀವು ನಿಮ್ಮ ಅರ್ಜಿಗಳನ್ನು ವಾರ್ಷಿಕವಾಗಿ ನವೀಕರಿಸಸಾಧ್ಯವಿದೆ. ಇದು ನಿಮ್ಮ ಲಭ್ಯತೆಯ ಕುರಿತಾದ ಸದ್ಯದ ಮಾಹಿತಿಯನ್ನು ನಮಗೆ ಒದಗಿಸುತ್ತದೆ.
23 ಪ್ರವಾದಿಯಾದ ಯೆಶಾಯನಿಗೆ ಕೇಳುವಂತೆ ಯೆಹೋವನು ಪ್ರಶ್ನಿಸಿದ್ದು: ‘ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?’ ಯಾವ ಹಿಂಜರಿಕೆಯೂ ಇಲ್ಲದೆ ಯೆಶಾಯನು ಪ್ರತ್ಯುತ್ತರಿಸಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” ಹೀಗೆ, ಯೆಶಾಯನು ದೇವರ ಪ್ರವಾದಿಯೋಪಾದಿ ಗಮನಾರ್ಹವಾದ ಜೀವನಪಥವೊಂದನ್ನು ಪ್ರಾರಂಭಿಸಿದನು. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ನೀವು ಹೇಳಬಲ್ಲಿರೊ? “ದೇವರ ಮನೆ”ಯಲ್ಲಿ, ಬೆತೆಲಿನಲ್ಲಿ, ಸೇವೆ ಮಾಡಲು ನೀವು ಕರೆಯಲ್ಪಟ್ಟಲ್ಲಿ, ನಿಮಗಾಗಿ ಅನೇಕ ಆಶೀರ್ವಾದಗಳು ಕಾದಿವೆ.—ಯೆಶಾ. 6:8.