“ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ”
1 ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನಿಶ್ಚಯವಾಗಿ ನಮಗೆ ದೇವಪ್ರಭುತ್ವ ಚಟುವಟಿಕೆಗಳ ಒಂದು ಕಾರ್ಯಮಗ್ನ ಕಾಲತಖ್ತೆಯನ್ನು ಎದುರುನೋಡಲಿಕ್ಕಿದೆ! ಎಪ್ರಿಲ್ 14 ರಂದು ನಾವು ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವೆವು. ಆ ಪ್ರಾಮುಖ್ಯ ಸಂದರ್ಭಕ್ಕೆ ಉಪಸ್ಥಿತರಿರುವಂತೆ ಸಾಧ್ಯವಿದ್ದಷ್ಟು ಅನೇಕ ಜನರನ್ನು ಉತ್ತೇಜಿಸಬೇಕಾಗಿದೆ: ವ್ಯಾಪಾರಿ ಪರಿಚಯಸ್ಥರು, ಅವಿಶ್ವಾಸಿ ಸಂಬಂಧಿಕರು, ಶಾಲಾಸ್ನೇಹಿತರು, ಹೊಸತಾಗಿ ಆಸಕ್ತರಾದ ವ್ಯಕ್ತಿಗಳು, ಮತ್ತು ಬೈಬಲ್ ವಿದ್ಯಾರ್ಥಿಗಳು. ಯಾರೂ ತಪ್ಪದಂತೆ, ನೀವು ಆಮಂತ್ರಿಸಲು ಯೋಜಿಸುತ್ತಿರುವವರ ಒಂದು ಪಟ್ಟಿಯನ್ನು ಮಾಡಿರಿ.
2 ಜ್ಞಾಪಕಕ್ಕೆ ಹಾಜರಾದವರೆಲ್ಲರು, ಮುಂದಿನ ವಾರದಲ್ಲಿ “ಸುಳ್ಳು ಧರ್ಮದ ಅಂತ್ಯವು ಹತ್ತಿರವಿದೆ” ಎಂಬ ವಿಷಯದ ಮೇಲೆ ಎಪ್ರಿಲ್ 23 ರಂದಿನ ವಿಶೇಷ ಬಹಿರಂಗ ಭಾಷಣವನ್ನು ಕೇಳುವಂತೆ ನಾವು ಉತ್ತೇಜಿಸುವೆವು. ಈ ನೇರವಾದ ಸಂದೇಶವನ್ನು ಕೇಳುವ ಅನೇಕ ಆಸಕ್ತ ಜನರು, ಕೇವಲ ವಿಶೇಷವಾದ ಸಂದರ್ಭಗಳಲ್ಲಿ ಮಾತ್ರವಲ್ಲ, ಸಭೆಯೊಂದಿಗೆ ಕ್ರಮವಾಗಿ ಸಹವಾಸಿಸುವ ಅಗತ್ಯವನ್ನು ಕಾಣುವರೆಂದು ನಿರೀಕ್ಷಿಸಲಾಗಿದೆ.
3 ವಿಶೇಷ ರಾಜ್ಯ ವಾರ್ತೆಯು ಬಿಡುಗಡೆಗೊಳಿಸಲ್ಪಡಲಿದೆ: ಎಪ್ರಿಲ್ 23 ರಂದಿನ ಕೂಟದ ಒಂದು ಮುಖ್ಯಾಂಶವು, ಮೇ 14 ರಂದು ವ್ಯಾಪಕವಾದ ವಿತರಣೆಯು ಕೊಡಲ್ಪಡಲಿರುವ ಸಮಯೋಚಿತವಾದ ನಾಲ್ಕು ಪುಟಗಳ ರಾಜ್ಯ ವಾರ್ತೆ ನಂಬ್ರ. 34ರ ಬಿಡುಗಡೆಯಾಗಿದೆ. ಈ ಜ್ಞಾಪಕದ ಸಮಯದಲ್ಲಿ “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿ” ರುವುದೆಂದು ನೀವು ಒಪ್ಪುವದಿಲ್ಲವೋ?—1 ಕೊರಿಂ. 15:58, NW.
4 ಪ್ರತಿಯೊಂದು ಸಭೆಗೆ ರಾಜ್ಯ ವಾರ್ತೆಯ ಒಂದು ಸಂಗ್ರಹವನ್ನು ರವಾನಿಸಲಾಗುವುದು. ರಾಜ್ಯ ವಾರ್ತೆ ಇರುವ ಕಾರ್ಟನ್ಗಳನ್ನು ಒಂದು ಸುರಕ್ಷಿತವಾದ ಜಾಗದಲ್ಲಿ ಇಡಬೇಕು ಮತ್ತು ಎಪ್ರಿಲ್ 23 ರಂದು ನಡೆಯುವ ಕಾರ್ಯಕ್ರಮದ ಸಮಾಪ್ತಿಯ ವರೆಗೆ ಅವು ತೆರೆಯಲ್ಪಡಬಾರದು. ಆ ಸಮಯದಲ್ಲಿ ರಾಜ್ಯ ವಾರ್ತೆಯು ಸಹೋದರರಿಗೆ ಮತ್ತು ಸಾರ್ವಜನಿಕರಿಗೆ ವಿತರಣೆಗಾಗಿ ಲಭ್ಯವಾಗುವುದು. ಎಪ್ರಿಲ್ 23 ರಂದಿನ ಸಭಾ ಕೂಟಗಳು, ಸರ್ಕಿಟ್ ಸಮ್ಮೇಳನಗಳು, ಅಥವಾ ವಿಶೇಷ ಸಮ್ಮೇಳನ ಕಾರ್ಯಕ್ರಮಗಳ ಸಮಾಪ್ತಿಯಲ್ಲಿ, ಅದರ ಒಳವಿಷಯದೊಂದಿಗೆ ಪರಿಚಿತರಾಗುವಂತೆ ಮತ್ತು ಅದರ ವಿತರಣೆಗೆ ಸನ್ನದ್ಧರಾಗಿರುವಂತೆ ಉಪಸ್ಥಿತರಿದ್ದವರೆಲ್ಲರಿಗೆ ಒಂದು ಪ್ರತಿಯನ್ನು ಕೊಡಲಾಗುವುದು.
5 ಹಿರಿಯರಿಗೆ ಮಾಡಲು ಬೇಕಾದುಷ್ಟಿರುವುದು: ಈ ವಿಶೇಷ ಕ್ಯಾಂಪೇನಿನ ವಿವರಗಳನ್ನು ಚರ್ಚಿಸಲು ಹಿರಿಯರ ಮಂಡಳಿಯು ಈ ತಿಂಗಳ ಆರಂಭದಲ್ಲಿ ಒಟ್ಟುಗೂಡಬೇಕು. ತಮ್ಮ ನೇಮಿತ ಟೆರಿಟೊರಿಯೆಲ್ಲವನ್ನು ಆವರಿಸಲು ಸಭೆಗಳು ಪ್ರಯತ್ನಿಸಬೇಕು. ಕ್ಯಾಂಪೇನ್ ಅಂತ್ಯಗೊಳ್ಳುವ ಮುಂಚೆ, ಕಳೆದ ಆರು ತಿಂಗಳುಗಳಿಂದ ಆವರಿಸಲ್ಪಟ್ಟಿರದ ಟೆರಿಟೊರಿಗಳಲ್ಲಿ ಕೆಲಸಮಾಡಲು ವಿಶೇಷ ಪ್ರಯತ್ನವನ್ನು ಮಾಡಿರಿ. ಕೆಲಸದ ಪ್ರಮುಖತೆಯ ನೋಟದಲ್ಲಿ, ಶುಶ್ರೂಷೆಗಾಗಿ ಸಾಧ್ಯವಿದ್ದಷ್ಟು ಸಮಯವನ್ನು ನಾವು ಬದಿಗಿರಿಸಬೇಕಾಗುವುದು. ಎಂದಿಗಿಂತಲೂ ಹೆಚ್ಚು ಪ್ರಚಾರಕರು ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವರೆಂಬದು ನಿಸ್ಸಂದೇಹ. ಅನೇಕ ಬೈಬಲ್ ವಿದ್ಯಾರ್ಥಿಗಳು ಹೊಸತಾಗಿ ಒಪ್ಪಲ್ಪಟ್ಟ ಅಸ್ನಾನಿತ ಪ್ರಚಾರಕರಾಗಿ ನಮ್ಮ ಜೊತೆ ಸೇರುವರೆಂಬದು ಸಂಭಾವ್ಯ. ಕರ್ತನ ಕೆಲಸದಲ್ಲಿ ನಾವು ಜೊತೆಯಾಗಿ ದುಡಿದಂತೆ ನಮಗೆ ಎಷ್ಟೊಂದು ಆನಂದಕರವಾದ ಸಮಯವಿರುವುದು!
6 ಸಭಾ ಪುಸ್ತಕ ಅಭ್ಯಾಸ ಚಾಲಕರು, ಶನಿವಾರಗಳು ಮತ್ತು ಆದಿತ್ಯವಾರಗಳಂದು ಗುಂಪು ಸಾಕ್ಷಿಗಾಗಿ ಖಚಿತ ಏರ್ಪಾಡುಗಳನ್ನು ಮಾಡಬೇಕು. ಎಲ್ಲರೂ ಒಂದು ಸಕ್ರಿಯ ಪಾಲನ್ನು ಹೊಂದುವಂತೆ ಉತ್ತೇಜಿಸಲ್ಪಡಬೇಕು. ವಾರಾಂತ್ಯದ ಚಟುವಟಿಕೆಗೆ ಕೂಡಿಸಿ, ಕ್ಯಾಂಪೇನಿನ ಸಮಯದಲ್ಲಿ ವಾರದಲ್ಲಿ ಕಡಿಮೆ ಪಕ್ಷ ಒಂದು ಸಲವಾದರೂ ಸಂಜಾ ಸಾಕ್ಷಿಕಾರ್ಯವು ನಿಗದಿಪಡಿಸಲ್ಪಡಬೇಕು. ಒಂದು ಹೆಚ್ಚಿನ ಪಾಲನ್ನು ಹೊಂದಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಕೆಲವರು ಶಾಲೆಯನಂತರ ಸೇವೆಗಾಗಿ ಕೂಡಲು ಬಯಸಬಹುದು.
7 ಪ್ರಚಾರಕರು ಮತ್ತು ಪಯನೀಯರರು ಪ್ರತಿ ದಿನ ಶುಶ್ರೂಷೆಯನ್ನು ಬೇಗನೇ ಆರಂಭಿಸಲಾಗುವಂತೆ ಕ್ಷೇತ್ರ ಸೇವೆಗಾಗಿ ಕೂಟಗಳು ಏರ್ಪಡಿಸಲ್ಪಡಬೇಕು. ಈ ಕೂಟಗಳು ಸಂಕ್ಷಿಪ್ತವಾಗಿರಬೇಕು. ಪ್ರತಿಯೊಂದು ಕೂಟವು ರಾಜ್ಯ ವಾರ್ತೆಯ ಒಂದು ಸರಳ ನಿರೂಪಣೆಗೆ ಹೆಚ್ಚು ಪ್ರಾಧಾನ್ಯಕೊಡಬೇಕು. ಮಧ್ಯಾಹ್ನದ ಸೇವೆಗಾಗಿ ಕೂಟಗಳು ರಾಜ್ಯ ವಾರ್ತೆ ಯನ್ನು ಸ್ವೀಕರಿಸಿದವರಿಗೆ ಪುನರ್ಭೇಟಿಗಳನ್ನು ಮಾಡಲು ಒಂದೆರಡು ಸಲಹೆಗಳನ್ನು ಒಳಗೊಂಡಿರಬಹುದು. ಆದಾಗಲೂ, ಕೆಲವು ಪ್ರಚಾರಕರು ಬೆಳಗ್ಗೆ ಮತ್ತು ಮಧ್ಯಾಹ್ನದ ಎರಡೂ ಸಮಯದಲ್ಲಿ ಹಂಚುವಿಕೆಯಲ್ಲಿ ತೊಡಗಲು ಇಷ್ಟಪಡಬಹುದು. ಆ ಉದ್ದೇಶಕ್ಕಾಗಿ, ಸೇವಾ ಮೇಲ್ವಿಚಾರಕನು ಸಾಕಷ್ಟು ಟೆರಿಟೊರಿ ಲಭ್ಯವಿದೆಯೆಂಬದನ್ನು ಖಚಿತಪಡಿಸಿಕೊಳ್ಳಬೇಕು. ಆಸಕ್ತಿಯನ್ನು ತೋರಿಸುವ ಪ್ರತಿಯೊಬ್ಬರ ಹೆಸರು ಮತ್ತು ವಿಳಾಸವು ಒಂದು ಮನೆ ಮನೆಯ ರೆಕಾರ್ಡಿನಲ್ಲಿ ಬರೆಯಲ್ಪಡಬೇಕು. ಸಂಕ್ಷಿಪ್ತ ಚರ್ಚೆಯ ಮುಖ್ಯ ವಿಷಯಗಳನ್ನು ರಿಮಾರ್ಕ್ಸ್ ಕಾಲಮ್ನಲ್ಲಿ ಸೇರಿಸಬಹುದು. ಇದು ಆ ವಾರದಲ್ಲಿ ಅಥವಾ ತಿಂಗಳಲ್ಲಿ ಇನ್ನೊಂದು ಸಮಯದಲ್ಲಿ ಒಂದು ಪುನರ್ಭೇಟಿಗಾಗಿ ಮಾರ್ಗವನ್ನು ಸಿದ್ಧಪಡಿಸುವುದು.
8 ಒಂದು ಸಭೆಯು ಇನ್ನೊಂದು ಸಭೆಗೆ ತನ್ನ ಟೆರಿಟೊರಿಯನ್ನು ಆವರಿಸಲು ಸಹಾಯಮಾಡಿದರೆ, ಆಸಕ್ತ ವ್ಯಕ್ತಿಗಳ ಹೆಸರುಗಳು ಮತ್ತು ವಿಳಾಸಗಳನ್ನು ಆ ಟೆರಿಟೊರಿಯ ಜಾಗ್ರತೆವಹಿಸಲು ಜವಾಬ್ದಾರವಾಗಿರುವ ಸಭೆಗೆ ಕೊಡಬೇಕು.
9 ಹೆತ್ತವರೇ, ನಿಮ್ಮ ಮಕ್ಕಳು ಅಸ್ನಾನಿತ ಪ್ರಚಾರಕರಾಗುವುದರ ಕಡೆಗೆ ಪ್ರಯತ್ನವನ್ನು ಮಾಡುತ್ತಿದ್ದಾರೋ? ಕೆಲವು ಸಭೆಗಳಲ್ಲಿ, ಒಳ್ಳೆ ನಡತೆಯ ಮಕ್ಕಳು ಹಲವಾರು ವರ್ಷಗಳಿಂದ ತಮ್ಮ ಸಮರ್ಪಿತ ಹೆತ್ತವರೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವುದನ್ನು ಗಮನಿಸಲಾಗಿದೆ, ಮತ್ತು ಅವರು ಇನ್ನೂ ಸುವಾರ್ತೆಯ ಪ್ರಚಾರಕರಾಗಿರದಿದ್ದರೂ ಆ ಮಕ್ಕಳು ಪರಿಣಾಮಕಾರಿಗಳಾಗಿರುತ್ತಾರೆ. ತಮ್ಮ ಮಕ್ಕಳು ಈ ಸುಯೋಗಕ್ಕೆ ನಿಜವಾಗಿಯೂ ಅರ್ಹರಾಗುತ್ತಾರೋ ಎಂಬದನ್ನು ಹೆತ್ತವರು ಪರಿಗಣಿಸಬೇಕಾಗಿದೆ. ಹಿರಿಯರಲ್ಲಿ ಇಬ್ಬರು ಕುಟುಂಬದ ತಲೆಯೊಂದಿಗೆ ಎಲ್ಲಾ ಅಂಶಗಳನ್ನು ಚರ್ಚಿಸಬಹುದು ಮತ್ತು ಮಗು ಒಬ್ಬ ಅಸ್ನಾನಿತ ಪ್ರಚಾರಕನಾಗಿ ಎಣಿಸಲ್ಪಡಬಹುದೋ ಎಂಬದನ್ನು ನಿರ್ಧರಿಸಬಹುದು.—ಒಎಮ್ ಪು. 99-100.
10 ನಿಮ್ಮ ಸಭೆಯ ಟೆರಿಟೊರಿಯಲ್ಲಿ, ಯೆಹೋವನಿಗೆ ಸುತ್ತಿಯ ಯಜ್ಞವನ್ನು ಅರ್ಪಿಸುವುದರಲ್ಲಿ ಈಗ ಸಕ್ರಿಯರಾಗಿರದ ಪ್ರಚಾರಕರಿದ್ದಾರೋ? (ಇಬ್ರಿ. 13:15) ನಿಷ್ಕ್ರಿಯರಾಗಿರುವ ಕೆಲವರು ಬೈಬಲಿನ ನೈತಿಕ ಮಟ್ಟಗಳಿಗೆ ಇನ್ನೂ ಅಂಟಿಕೊಂಡಿರುವುದಾದರೂ, ನಿರುತ್ಸಾಹ ಅಥವಾ ಜೀವನದ ಚಿಂತೆಗಳಿಂದ ಸೋತುಹೋಗಿರಬಹುದು. ಹಿರಿಯರಲ್ಲಿ ಒಬ್ಬನಿಂದ ಒಂದು ಸ್ನೇಹಮಯ ಭೇಟಿಯು, ಸಭೆಯೊಂದಿಗೆ ಕ್ರಮವಾದ ಸಹವಾಸಕ್ಕೆ ಮತ್ತು ಒಂದು ತಕ್ಕದಾದ ಸಮಯದಲ್ಲಿ ಶುಶ್ರೂಷೆಯಲ್ಲಿ ನವೀಕರಿಸಲ್ಪಟ್ಟ ಚಟುವಟಿಕೆಗೆ ಪ್ರಚೋದಿಸಬಹುದು.
11 ಈ ಆನಂದಕರ ಕೆಲಸದಲ್ಲಿ ಅರ್ಹರಾಗುವವರೆಲ್ಲರೂ ಭಾಗವಹಿಸಬಹುದು: ಮಕ್ಕಳಲ್ಲಿ ಅಥವಾ ಹದಿವಯಸ್ಕರಲ್ಲಿ ಕೆಲವರಾಗಿರುವ ನೀವು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ಕಷ್ಟಕರವಾಗಿ ಕಾಣುತ್ತೀರೋ? ಸಾರುವ ಕೆಲಸದಲ್ಲಿ ಸೀಮಿತ ಅನುಭವವಿರುವ ಹೊಸಬರಾಗಿರುವವರಾದ ನಿಮ್ಮ ಕುರಿತಾಗಿ ಏನು? ಈ ವಿಶೇಷ ರಾಜ್ಯ ವಾರ್ತೆಯೊಂದಿಗೆ ಕೆಲಸ ಮಾಡುವದನ್ನು ನೀವು ಅತೀ ಆನಂದಕರವಾಗಿ ಕಂಡುಹಿಡಿಯುವಿರಿ! ಕೇವಲ ಒಂದು ಸರಳ ನಿರೂಪಣೆಯು ಅಗತ್ಯವಾಗಿದೆ.
ನೀವು ಹೀಗೇನನ್ನಾದರೂ ಹೇಳಬಹುದು:
▪ “ಈ ತಿಂಗಳು ನಾವು ಲೋಕದಲ್ಲೆಲ್ಲಾ 232 ದೇಶಗಳಲ್ಲಿ ಒಂದು ಪ್ರಾಮುಖ್ಯ ಸಂದೇಶವನ್ನು ಹಂಚುತ್ತಿದ್ದೇವೆ. ಈ ಸಂದೇಶವು ಪ್ರಾಮುಖ್ಯವಾಗಿದೆ ಯಾಕಂದರೆ, ನಾವಿಂದು ಎದುರಿಸುವ ಸಮಸ್ಯೆಗಳಿಗೆ ಒಂದು ಪರಿಹಾರವಿದೆಯೆಂದು ನಂಬಲು ಅದು ನಮಗೆ ಘನವಾದ ಕಾರಣಗಳನ್ನು ಕೊಡುತ್ತದೆ. ನೀವು ನಿಮ್ಮ ಸ್ವಂತ ಪ್ರತಿಯನ್ನು ಪಡೆಯಬೇಕೆಂದು ನಾವು ಇಷ್ಟಪಡುತ್ತೇವೆ.”
ಅಥವಾ ನೀವು ಇದನ್ನು ಪ್ರಯತ್ನಿಸಬಹುದು:
▪ “ಈ ತಿಂಗಳು ಸುಮಾರು ಐವತ್ತು ಲಕ್ಷ ಸ್ವಯಂಸೇವಕರು ಹಲವಾರು ಭಾಷೆಗಳಲ್ಲಿ ಒಂದು ಪ್ರಾಮುಖ್ಯ ಸಂದೇಶವನ್ನು ಹಂಚುತ್ತಿದ್ದಾರೆ. ನಾವಿಂದು ಎದುರಿಸುತ್ತಿರುವ ಸಮಸ್ಯೆಗಳ ಒಂದು ಅಂತ್ಯವನ್ನು ನೋಡಲು ಬಯಸುವ ಜನರಿಗಾಗಿ ಅದು ತಯಾರಿಸಲ್ಪಟ್ಟಿದೆ. ಇದು ನಿಮ್ಮ ವೈಯಕ್ತಿಕ ಪ್ರತಿಯಾಗಿದೆ.”
ಈ ಸರಳ ನಿರೂಪಣೆಯು ನಿಮಗೆ ಯಥೋಚಿತವಾಗಿರಬಹುದು:
▪ “[ರಾಜ್ಯ ವಾರ್ತೆಯ ಶಿರೋನಾಮವನ್ನು ಓದಿರಿ] ಎಂಬ ಶಿರೋನಾಮವಿರುವ ಈ ಪ್ರಾಮುಖ್ಯ ಸಂದೇಶವನ್ನು ಓದುವಂತೆ ನಾವೆಲ್ಲರನ್ನು ಉತ್ತೇಜಿಸುತ್ತಿದ್ದೇವೆ. . . . ಗಳಂತಹ ವೃದ್ಧಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಪುಟ 2 ಇಲ್ಲಿ ಏನು ತಿಳಿಸುತ್ತದೆಂದು ಗಮನಿಸಿರಿ [ರಾಜ್ಯ ವಾರ್ತೆ ಯಿಂದ ಆಯ್ದ ವಾಕ್ಸರಣಿಯನ್ನು ಓದಿರಿ]. ಈ ಸಮಯೋಚಿತ ಸಂದೇಶದ ಉಳಿದ ಭಾಗದ ಓದುವಿಕೆಯನ್ನು ನೀವು ಆನಂದಿಸುವಿರೆಂದು ನಮಗೆ ನಿಶ್ಚಯವಿದೆ. ಇದು ನಿಮ್ಮ ಪ್ರತಿ.”
12 ರಾಜ್ಯ ವಾರ್ತೆ ಯನ್ನು ಸ್ವೀಕರಿಸುವ ಪ್ರತಿಯೊಬ್ಬನಲ್ಲಿ ಒಂದು ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳಿರಿ. ನಿಧಾನವಾಗಿ ಮತ್ತು ಸ್ಪಷ್ಟವಾಗಿಗಿ ಮಾತಾಡಿರಿ; ನಿಮ್ಮ ನಿರೂಪಣೆಯೊಂದಿಗೆ ಅವಸರಿಸುವ ಅಗತ್ಯವಿಲ್ಲ. ನಮ್ಮ ಟೆರಿಟೊರಿಯನ್ನು ಆವರಿಸುವುದರಲ್ಲಿ ನಾವು ಸಂಪೂರ್ಣರಾಗಿರಲು ಮತ್ತು ರಾಜ್ಯ ವಾರ್ತೆ ಯನ್ನು ಓದಲು ಆಸಕ್ತಿಯನ್ನು ವ್ಯಕ್ತಪಡಿಸುವವರೆಲ್ಲರಿಗೆ ಒಂದು ವೈಯಕ್ತಿಕ ಪ್ರತಿಯು ಕೊಡಲ್ಪಡುವಂತೆ ನೋಡಿಕೊಳ್ಳಲು ನಾವು ಬಯಸುತ್ತೇವೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ, ಒಂದು ತಕ್ಕದಾದ್ದ ಸಮಯದಲ್ಲಿ ಹಿಂದಿರುಗಿ ಹೋಗಿ ಮನೆಯವನಿಗೆ ರಾಜ್ಯ ವಾರ್ತೆ ಯನ್ನು ನೀಡಲಾಗುವಂತೆ ನಿಮ್ಮ ಮನೆ ಮನೆಯ ರೆಕಾರ್ಡಿನಲ್ಲಿ ಎಚ್ಚರಿಕೆಯಿಂದ ಗುರುತಿಸಿಕೊಳ್ಳಿರಿ. ಈ ರಾಜ್ಯ ವಾರ್ತೆ ಯು, ಬೀದಿ ಸಾಕ್ಷಿಯಲ್ಲಿ ಒಬ್ಬ ವ್ಯಕ್ತಿಯು ವಿಷಯವನ್ನು ಓದಲು ಆಸಕ್ತಿಯನ್ನು ತೋರಿಸಿದಾಗ ಉಪಯೋಗಿಸಲ್ಪಡಬಹುದು. ಪ್ರತಿಗಳನ್ನು ಕರಪತ್ರಗಳಂತೆ ಗೊತ್ತುಗುರಿಯಿಲ್ಲದೆ ಹಂಚಬಾರದು. ಬದಲಿಗೆ, ದಾರಿಹೋಕರನ್ನು ಸಮೀಪಿಸಿರಿ, ಮತ್ತು ಪ್ರದರ್ಶಿಸಲ್ಪಟ್ಟಿರುವ ಸಂದೇಶದ ಪ್ರಮುಖತೆಯನ್ನು ವಿವರಿಸಿರಿ. ರಾಜ್ಯ ವಾರ್ತೆ ಯನ್ನು, ಪ್ರಯಾಣಿಸುವಾಗ, ಅಥವಾ ನಿಮ್ಮ ಊಟದ ವಿರಾಮವೇಳೆಯಲ್ಲಿ ಸಹೋದ್ಯೋಗಿಗಳಿಗೆ ಸಾಕ್ಷಿಕೊಡುವಾಗ, ಇಂತಹ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಉಪಯೋಗಿಸಿರಿ. ಅಶಕ್ತರು ಅಥವಾ ಅಸ್ವಸ್ಥರಾಗಿರುವವರು ಅದನ್ನು ಸಂದರ್ಶಕರಿಗೆ, ವೈದ್ಯರು ಮತ್ತು ದಾದಿಯರಿಗೆ, ಸೇಲ್ಸ್ಮೆನ್ಗಳಿಗೆ, ಮತ್ತು ತಮ್ಮ ಮನೆಗೆ ಬರುವ ಇತರರಿಗೆ ಅವುಗಳನ್ನು ನೀಡಬಹುದು.
13 ಕ್ಯಾಂಪೇನಿನ ಸಮಯದಲ್ಲಿ ನೀವು ಎಷ್ಟು ಪುನರ್ಭೇಟಿಗಳನ್ನು ಮಾಡುವಿರಿ? ರಾಜ್ಯ ವಾರ್ತೆ ಯಲ್ಲಿ ಆಸಕ್ತಿಯನ್ನು ತೋರಿಸುವವರೆಲ್ಲರಿಗೆ ಪುನರ್ಭೇಟಿಮಾಡಬೇಕಾದದರಿಂದ, ಬಹಳಷ್ಟನ್ನು ಮಾಡುವಿರಿ ಎಂಬುದು ನಿಸ್ಸಂದೇಹ. ಪ್ರಥಮ ಭೇಟಿಯಲ್ಲಿ, ಕೇವಲ ರಾಜ್ಯ ವಾರ್ತೆ ಯನ್ನು ನೀಡುವುದು ಉತ್ತಮ. ಅನಂತರ, ನೀವು ಪುನಃ ಹೋಗುವಾಗ ರಾಜ್ಯ ವಾರ್ತೆ ಯಲ್ಲಿರುವ ಸಂದೇಶದ ಸಮಯೋಚಿತತೆಯ ಕುರಿತಾಗಿ ಕೆಲವು ಹೇಳಿಕೆಗಳನ್ನು ಮಾಡಿರಿ. ಅವನೇನನ್ನು ಓದಿದ್ದಾನೋ ಅದರ ಮೇಲೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವಾಗ ಮನೆಯವರನ್ನು ಜಾಗ್ರತೆಯಿಂದ ಆಲಿಸಿರಿ. ಇತ್ತೀಚೆಗಿನ ಪತ್ರಿಕೆಗಳಲ್ಲಿ ಏನನ್ನು ನೀಡಬೇಕು ಮತ್ತು ಪ್ರಾಯಶಃ ಮುಂದಿನ ಚರ್ಚೆಗಳಿಗೆ ಹೇಗೆ ತಯಾರಿಸಬೇಕೆಂದು ಅವನ ಹೇಳಿಕೆಗಳು ನಿಮಗೆ ಸಹಾಯ ಮಾಡುವವು. ಪುನರ್ಭೇಟಿಯಲ್ಲಿ ನಿಮಗೊಂದು ಪ್ರಸನ್ನಕರವಾದ ಪ್ರತಿಕ್ರಿಯೆ ದೊರಕುವಲ್ಲಿ, ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ಪ್ರಯತ್ನಿಸಿರಿ.—1 ಕೊರಿಂ. 3:6, 7.
14 “ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲ” ವಾಗುವುದಿಲ್ಲ: ಈ ಎಲ್ಲಾ ಕೆಲಸವು ಸಾರ್ಥಕವಾಗಿರುವುದೋ? ಪೌಲನು ಕೊರಿಂಥದವರಿಗೆ ಆಶ್ವಾಸನೆ ನೀಡಿದ್ದು: “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲ.” (1 ಕೊರಿಂ. 15:58) ವರ್ಷಗಳಲ್ಲೆಲ್ಲಾ, ರಾಜ್ಯದ ವಾರ್ತೆ ಯನ್ನು ಹಂಚಲು ನಾವು ಮಾಡಿರುವ ಪ್ರಯತ್ನಗಳು ಮಹತ್ತಾಗಿ ಆಶೀರ್ವದಿಸಲ್ಪಟ್ಟಿವೆ. ಒಂದು ಖಾಲಿಯಾಗಿದ್ದ ವಾಸದಕೋಣೆಗೆ ಸ್ಥಳಾಂತರಿಸುತ್ತಿದ್ದ ಗಂಡಹೆಂಡಿರು ರಾಜ್ಯ ವಾರ್ತೆ ಯ ಒಂದು ಹಳೆಯ ಪ್ರತಿಯನ್ನು ಒಂದು ಡ್ರಾಅರಿನಲ್ಲಿ ಕಂಡುಹಿಡಿದರು. ಇಡೀ ವಾಸದಕೋಣೆಯಲ್ಲಿ ಬಿಡಲ್ಪಟ್ಟಿದ್ದ ಒಂದೇ ವಸ್ತು ಅದಾಗಿತ್ತು. ಅದನ್ನು ಓದಿದ ನಂತರ, ಅವರು ಸ್ಥಳಿಕ ಸಭೆಯನ್ನು ಸಂಪರ್ಕಿಸಿದರು ಮತ್ತು ಒಂದು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿದರು. ಅವರು ಎಲ್ಲಾ ಕೂಟಗಳನ್ನು ಹಾಜರಾಗಲು ಆರಂಭಿಸಿದರು ಮತ್ತು ಅನಂತರ ದೀಕ್ಷಾಸ್ನಾನ ಹೊಂದುವ ಆಶೆಯನ್ನು ವ್ಯಕ್ತಪಡಿಸಿದರು. ನೀವು ಬಿಟ್ಟುಬರುವ ಒಂದು ಪ್ರತಿಯು ಪ್ರಾಯಶಃ ತದ್ರೀತಿಯ ಫಲಿತಾಂಶಗಳನ್ನು ತರುವುದು!—ಕೆಎಮ್ 12⁄74 ಪು. 1; ನವಂಬರ 8, 1976ರ ಅವೇಕ್!, ಪುಟ 15ನ್ನು ಸಹ ನೋಡಿರಿ.
15 ನಮ್ಮ ಮುಂದೆ ಒಂದು ಮಹತ್ತರವಾದ ಕೆಲಸವಿದೆ. ಮೇ 14ರ ತನಕ ಅಥವಾ ರಾಜ್ಯ ವಾರ್ತೆಯ ಹಂಚುವಿಕೆಗಾಗಿ ಸಮಯವನ್ನು ವಿಸ್ತರಿಸುವ ಅಗತ್ಯವಿದ್ದಲ್ಲಿ ತಿಂಗಳ ಅಂತ್ಯದೊಳಗೆ ಪ್ರತಿ ಸಭೆಯು ತನ್ನ ಟೆರಿಟೊರಿಯ ನೇಮಕವನ್ನು ಆವರಿಸುವುದು ನಮ್ಮ ಲಕ್ಷ್ಯವಾಗಿದೆ. ಪಯನೀಯರರಿಗೆ ರಾಜ್ಯ ವಾರ್ತೆಯ 250 ಪ್ರತಿಗಳನ್ನು ಪಡೆಯಲಾಗುವಂತೆ ಅವುಗಳನ್ನು ರವಾನಿಸಲಾಗಿದೆ. ಸಭೆಯ ಪ್ರತಿ ಪ್ರಚಾರಕನಿಗೆ 50 ರಷ್ಟು ಪ್ರತಿಗಳು ಸಿಗುವವು. ಇವುಗಳನ್ನು ಲಿಟರೇಚರ್ ಕೌಂಟರ್ನಲ್ಲಿ ಪ್ರಚಾರಕರಿಗೂ ಪಯನೀಯರರಿಗೂ ಒಂದು ಕಿರುಹೊತ್ತಿಗೆ ಹತ್ತು ಪೈಸೆಯಾಗಿ ದೊರಕಿಸಬೇಕು, ಆದರೆ ಸಾರ್ವಜನಿಕರಿಗೆ ಅದು ಉಚಿತವಾಗಿ ಹಂಚಲ್ಪಡುವುದು. ಪ್ರಚಾರಕರು ಮತ್ತು ಪಯನೀಯರರು ತಾವು ಹಂಚಲು ಶಕ್ತರಾಗುವಷ್ಟು ಪ್ರತಿಗಳನ್ನು ಮಾತ್ರ ತೆಗೆದುಕೊಳ್ಳಬೇಕು, ಹೀಗೆ ಉಳಿದಂತಹ ಕಿರುಹೊತ್ತಗೆಗಳನ್ನು ಇತರರು ಉಪಯೋಗಿಸುವಂತಾಗುವುದು. ಈ ವಿಷಯದಲ್ಲಿ ಒಳ್ಳೇ ಸಹಕಾರವು ಈ ಪ್ರಾಮುಖ್ಯ ಸಂದೇಶದ ಅತೀ ವ್ಯಾಪಕವಾದ ವಿತರಣೆಯನ್ನು ಸಾಧ್ಯಮಾಡುವುದು. ಬಹು ದೊಡ್ಡದಾದ್ದ ಟೆರಿಟೊರಿ ನೇಮಕದಿಂದಾಗಿ ಕೆಲವು ಸಭೆಗಳು ತಮ್ಮ ಟೆರಿಟೊರಿಯನ್ನು ಮೇ ತಿಂಗಳ ಮಧ್ಯಭಾಗದಲ್ಲಿ ಆವರಿಸದಿದ್ದಲ್ಲಿ ಮತ್ತು ಪ್ರತಿಗಳು ಇನ್ನೂ ಲಭ್ಯವಿರುವಲ್ಲಿ, ಹತ್ತಿರದ ಸಭೆಗಳು ಸಹಾಯಮಾಡುವಂತೆ ಆಮಂತ್ರಿಸುವುದು ವ್ಯಾವಹಾರಿಕವಾಗಿರುವುದು. ಇತರ ಸಭೆಗಳಲ್ಲಿ, ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವ ಮೂಲಕ ಅಥವಾ ಶುಶ್ರೂಷೆಯಲ್ಲಿ ಹೆಚ್ಚು ಸಲ ತೊಡಗುವ ಮೂಲಕ ಅಗತ್ಯವನ್ನು ಸ್ಥಳಿಕವಾಗಿ ತುಂಬಿಸಬಹುದು.
16 ನಾವು ನಮ್ಮ ಕೆಲಸವನ್ನು ಪೂರೈಸಬೇಕಾಗಿರುವಲ್ಲಿ ಯೆಹೋವನಿಗೆ ಪೂರ್ಣ ಹೃದಯದ ಭಕ್ತಿಯು ಆವಶ್ಯಕವಾಗಿದೆ. (ಕೊಲೊ. 3:23) ಜೀವಗಳು ಒಳಗೊಂಡಿವೆ. ಇಂದಿನ ಲೋಕದ ಪರಿಸ್ಥಿತಿಗಳ ಅರ್ಥವನ್ನು ಜನರು ಅಲಕ್ಷಿಸಲಾರರು. ಸಮಯವು ಕೊನೆಗೊಳ್ಳುತ್ತಾ ಇದೆ. ಈ ಲೋಕದ ಸಮಸ್ಯೆಗಳಿಗೆ ಮನುಷ್ಯನ ಬಳಿ ಪರಿಹಾರವಿಲ್ಲವೆಂಬ ವಾಸ್ತವಾಂಶವನ್ನು ಅವರು ಎದುರಿಸಲೇ ಬೇಕು. ದೇವರ ಬಳಿ ಪರಿಹಾರವಿದೆ. ದೇವರ ಆಶೀರ್ವಾದವನ್ನು ಪಡೆಯಲು ಬಯಸುವವರು ನಿರ್ಣಯಾತ್ಮಕವಾಗಿ, ತಡವಿಲ್ಲದೆ, ಆತನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಕಾರ್ಯವೆಸಗಬೇಕು.
17 ಮೇ 14 ರಂದು ವಿಶೇಷ ಕ್ಯಾಂಪೇನಿನ ಸಮಾಪ್ತಿಯಲ್ಲಿ, ನಾವು ನಮ್ಮ ಚಟುವಟಿಕೆಯನ್ನು ಕಡಿಮೆಗೊಳಿಸುವೆವೊ? ಇಲ್ಲ! ಪೌಲನ ಪ್ರೇರಿತ ಸಲಹೆಗೆ ಹೊಂದಿಕೆಯಲ್ಲಿ ನಾವು ಕಾರ್ಯಮಗ್ನರಾಗಿರುವದನ್ನು ಮುಂದುವರಿಸುವೆವು.