ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ
1 ಯೆಹೋವನ ಸಾಕ್ಷಿಗಳೋಪಾದಿ ನಾವು ಯೆಹೋವನ ಹೆಸರಿಗೆ ಘನತೆಯನ್ನು ತರಲು ಬಯಸುತ್ತೇವೆ. ನಮ್ಮ ನಡತೆ, ಮಾತು, ಕೇಶಶೈಲಿ ಮತ್ತು ಉಡುಪು ಧರಿಸುವಿಕೆಯು, ಇತರರು ಸತ್ಯಾರಾಧನೆಯನ್ನು ಹೇಗೆ ದೃಷ್ಟಿಸುತ್ತಾರೆಂಬುದರ ಮೇಲೆ ಪ್ರಭಾವವನ್ನು ಬೀರಬಲ್ಲದು ಎಂದು ನಮಗೆ ತಿಳಿದಿದೆ. ನಾವು ನಮ್ಮ ಕೂಟಗಳಲ್ಲಿರುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ಕೂಟಗಳಲ್ಲಿ ಹೇಳಲ್ಪಡುವ ಮತ್ತು ಮಾಡಲ್ಪಡುವ ಎಲ್ಲ ವಿಷಯವು, ಸುವಾರ್ತೆಗೆ ಯೋಗ್ಯವಾಗಿದೆ ಮತ್ತು ಯೆಹೋವನಿಗೆ ಘನತೆಯನ್ನು ತರುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ.—ಫಿಲಿ. 2:4.
2 ಉಡುಪು ಮತ್ತು ಕೇಶಶೈಲಿಗಾಗಿರುವ ಲೋಕದ ಮಟ್ಟಗಳಲ್ಲಿ ಅನೇಕವು ಕ್ರೈಸ್ತರಿಗೆ ಅಸ್ವೀಕರಣೀಯವಾಗಿವೆ. ಸುವಾರ್ತೆಯ ಶುಶ್ರೂಷಕರಿಂದ ಜಾಗರೂಕವಾದ ಗಮನವು ಕೊಡಲ್ಪಡಬೇಕಾದ ಒಂದು ವಿಷಯವು ಇದಾಗಿದೆ. 1989, ಜೂನ್ 1ರ ವಾಚ್ಟವರ್ ಪತ್ರಿಕೆಯ 20ನೆಯ ಪುಟವು ಹೇಳಿದ್ದು: “ನಮ್ಮ ಉಡುಪು ದುಬಾರಿಯದ್ದಾಗಿರಬೇಕಾದ ಅಗತ್ಯವಿಲ್ಲ, ಬದಲಿಗೆ ಅದು ಸ್ವಚ್ಛವೂ, ಸುಸಂಸ್ಕೃತವೂ, ಸಭ್ಯವಾದದ್ದೂ ಆಗಿರಬೇಕು. ನಮ್ಮ ಪಾದರಕ್ಷೆಗಳು ಸಹ ಸುಸ್ಥಿತಿಯಲ್ಲಿರಬೇಕು ಮತ್ತು ಒಳ್ಳೆಯ ತೋರಿಕೆಯುಳ್ಳವುಗಳಾಗಿರಬೇಕು. ತದ್ರೀತಿಯಲ್ಲಿ, ಸಭಾ ಪುಸ್ತಕ ಅಭ್ಯಾಸವನ್ನು ಒಳಗೊಂಡು ಎಲ್ಲ ಕೂಟಗಳಲ್ಲಿ, ನಮ್ಮ ದೇಹಗಳು ಸ್ವಚ್ಛವಾಗಿರಬೇಕು ಮತ್ತು ನಾವು ನೀಟಾಗಿಯೂ ಯೋಗ್ಯವಾಗಿಯೂ ಉಡುಪು ಧರಿಸಿದವರಾಗಿರಬೇಕು.”
3 ಕಾಲನಿಷ್ಠೆಯು, ಪ್ರೀತಿಯ ಪರಿಗಣನೆ ಮತ್ತು ವಿಚಾರಪರತೆಯ ಒಂದು ಗುರುತಾಗಿದೆ. ಆಗಿಂದಾಗ್ಗೆ, ವರ್ಜಿಸಲಸಾಧ್ಯವಾದ ಸನ್ನಿವೇಶಗಳು ನಮ್ಮನ್ನು ಒಂದು ಕೂಟಕ್ಕೆ ಸರಿಯಾದ ಸಮಯಕ್ಕೆ ಆಗಮಿಸುವುದರಿಂದ ತಡೆಯಬಹುದು. ಆದರೆ ವಾಡಿಕೆಯಾಗಿ ತಡವಾಗಿ ಆಗಮಿಸುವುದು, ಕೂಟಗಳ ಪವಿತ್ರ ಉದ್ದೇಶಕ್ಕೆ ಗೌರವದ ಕೊರತೆಯನ್ನು ಮತ್ತು ಇತರರಿಗೆ ತೊಂದರೆಯನ್ನುಂಟುಮಾಡುವುದನ್ನು ವರ್ಜಿಸುವ ನಮ್ಮ ಜವಾಬ್ದಾರಿಯನ್ನು ಗಣ್ಯಮಾಡಲು ತಪ್ಪಿಹೋಗುವುದನ್ನು ಪ್ರದರ್ಶಿಸಬಹುದು. ತಡವಾಗಿ ಬರುವವರು ಅನೇಕವೇಳೆ ಇತರರನ್ನು ಅಪಕರ್ಷಿಸುತ್ತಾರೆ ಮತ್ತು ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಅವರನ್ನು ತಡೆಯುತ್ತಾರೆ. ಕಾಲನಿಷ್ಠೆಯು, ಹಾಜರಿಯಲ್ಲಿರುವವರೆಲ್ಲರ ಭಾವನೆಗಳು ಮತ್ತು ಅಭಿರುಚಿಗಳಿಗೆ ಗೌರವವನ್ನು ತೋರಿಸುತ್ತದೆ.
4 ನಮ್ಮ ನೆರೆಯವರಿಗಾಗಿರುವ ಪ್ರೀತಿಯು, ನಮ್ಮನ್ನು ಕೂಟಗಳ ಸಮಯದಲ್ಲಿ ಅಪಕರ್ಷಣೆಗಳನ್ನು ಉಂಟುಮಾಡುವುದನ್ನು ವರ್ಜಿಸುವಂತೆ ಜಾಗರೂಕರನ್ನಾಗಿ ಮಾಡಬೇಕು. ಪಿಸುಗುಟ್ಟುವುದು, ತಿನ್ನುವುದು, ಚ್ಯೂಯಿಂಗ್ ಗಮ್ ತಿನ್ನುವುದು, ಪೇಪರಿನ ರಟರಟ ಸದ್ದುಮಾಡುವುದು, ಅನಗತ್ಯವಾಗಿ ಶೌಚಗೃಹಕ್ಕೆ ಸಂಚಾರಗಳನ್ನು ಮಾಡುತ್ತಿರುವುದು, ಇತರರ ಏಕಾಗ್ರತೆಗೆ ಭಂಗತರಬಹುದು ಮತ್ತು ಯೆಹೋವನ ಆರಾಧನಾ ಸ್ಥಳಕ್ಕೆ ಸಲ್ಲತಕ್ಕ ಘನತೆಯಿಂದ ಅವರನ್ನು ಅಪಕರ್ಷಿಸಬಹುದು. ಸಹೋದರರನ್ನು ಅವರ ಆಸನಗಳಿಂದ ಎದ್ದು ಹೋಗುವಂತೆ ಅಗತ್ಯಪಡಿಸುವ ಯಾವುದಾದರೂ ಜರೂರಿಯಿರುವ ಹೊರತು, ಸಭೆಯ ವ್ಯವಹಾರವನ್ನು ನಿರ್ವಹಿಸುತ್ತಿರುವುದು ಅಥವಾ ಇತರರೊಂದಿಗೆ ಸಂಭಾಷಿಸುತ್ತಿರುವುದು ಯಾರಿಗಾದರೂ ಅಸಂಗತವಾಗಿದೆ. ಇಲ್ಲದಿದ್ದರೆ, ಸ್ವತಃ ಅವರು ಹಾಗೂ ಅವರ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುವಂತೆ, ಎಲ್ಲರೂ ಕುಳಿತುಕೊಂಡು ಕಾರ್ಯಕ್ರಮಕ್ಕೆ ಕಿವಿಗೊಡುತ್ತಿರಬೇಕು. ರಾಜ್ಯ ಸಭಾಗೃಹದಲ್ಲಿ ನ್ಯೂನ ವರ್ತನೆಗಳು ಅನುಚಿತವಾಗಿವೆ, ಏಕೆಂದರೆ “ಪ್ರೀತಿ . . . ಮರ್ಯಾದೆಗೆಟ್ಟು ನಡೆಯುವದಿಲ್ಲ.”—1 ಕೊರಿಂ. 13:4, 5; ಗಲಾ. 6:10.
5 ಕೂಟಗಳಲ್ಲಿ ನಮ್ಮ ಮಕ್ಕಳ ಸುನಡತೆಯು ಸಹ, ಯೆಹೋವನ ಹೆಸರಿಗೆ ಸುತ್ತಿ ಮತ್ತು ಘನತೆಯನ್ನು ತರುತ್ತದೆ. ಹೆತ್ತವರಿಂದ ಕಟ್ಟುನಿಟ್ಟಿನ ಮೇಲ್ವಿಚಾರಣೆಯು ಅತ್ಯಾವಶ್ಯಕವಾಗಿದೆ. ಕಿವಿಗೊಡುವಂತೆ ಮತ್ತು ಭಾಗವಹಿಸುವಂತೆ ಮಕ್ಕಳು ಉತ್ತೇಜಿಸಲ್ಪಡಬೇಕು. ಎಳೆಯ ಮಕ್ಕಳಿರುವ ಅನೇಕ ಹೆತ್ತವರು, ಇತರರನ್ನು ಅನುಚಿತವಾಗಿ ಅಪಕರ್ಷಿಸದೆ ತಮ್ಮ ಎಳೆಯ ಮಕ್ಕಳ ಅಗತ್ಯಗಳ ಕಾಳಜಿವಹಿಸಲು ಮತ್ತು ಸುಲಭವಾಗಿ ಹೊರಗೆ ಹೋಗಲು ಸಾಧ್ಯವಿರುವಂತಹ ಒಂದು ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ಆಯ್ದುಕೊಳ್ಳುತ್ತಾರೆ.
6 ಪೌಲನು ಬುದ್ಧಿವಾದ ಕೊಟ್ಟದ್ದು: “ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ.” (ಫಿಲಿ. 1:27) ಆದುದರಿಂದ, ನಾವು ಕೂಟಗಳಿಗೆ ಹಾಜರಾಗುವಾಗ, ಸುನಡತೆಯುಳ್ಳವರಾಗಿರಲು ಮತ್ತು ಇತರರ ಕುರಿತು ಪರಿಗಣನೆಯುಳ್ಳವರಾಗಿರಲು ಶ್ರಮಿಸೋಣ. ಎಲ್ಲರಿಂದ ಕೊಡಲ್ಪಡುವ ಸಹಕಾರವು, “ಪ್ರತಿಯೊಬ್ಬನೂ ಮತ್ತೊಬ್ಬನ ನಂಬಿಕೆಯ ಮೂಲಕ ಪಡೆದುಕೊಳ್ಳುವ . . . ಪ್ರೋತ್ಸಾಹನೆಯ ಪರಸ್ಪರ ವಿನಿಮಯ ಮಾಡಿಕೊಳ್ಳುವಿಕೆ”ಯನ್ನು ನಿಶ್ಚಯಪಡಿಸುವುದು.—ರೋಮಾ. 1:12, NW.