ಸಭಾ ಕೂಟಗಳಿಗಾಗಿ ತಯಾರಿಸಿರಿ ಮತ್ತು ಆನಂದಿಸಿರಿ
1 ಸಹೋದರರ ಒಂದು ಸಹವಾಸದೋಪಾದಿ, ನಾವು ವಿವೇಕಯುತವಾಗಿ ನಮ್ಮ ವಾರದ ಕೂಟಗಳಿಗಾಗಿ ಕ್ರಮವಾಗಿ ಒಟ್ಟುಗೂಡುತ್ತೇವೆ. (1 ತಿಮೊ. 4:15, 16) ನಾವು ಅವುಗಳಲ್ಲಿ ಆನಂದಿಸಿ, ಅವುಗಳಿಂದ ಅತ್ಯಧಿಕ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಲ್ಲೆವು?
2 ಕೂಟಗಳಿಗಾಗಿ ತಯಾರಿಸಲು ಕ್ರಮವಾಗಿ ಸಮಯವು ಬದಿಗಿರಿಸಲ್ಪಡಬೇಕು. ಕೆಲವರು ತಯಾರಿಯಲ್ಲಿ ಇತರರಿಗಿಂತಲೂ ಹೆಚ್ಚಿನ ಸಮಯವನ್ನು ವ್ಯಯಿಸಲು ಶಕ್ತರಾಗಿರಬಹುದು. ಆದಾಗಲೂ, ನಾವು ಎಷ್ಟೇ ಕಾರ್ಯಮಗ್ನರಾಗಿರಲಿ ಕೂಟಗಳಿಗಾಗಿ ತಯಾರಿಸಲು ಸ್ವಲ್ಪ ಸಮಯವನ್ನು ಕಂಡುಕೊಳ್ಳುವುದು ವಿವೇಕಯುತವಾಗಿದೆ. ಒಂದು ಕುಟುಂಬದೋಪಾದಿ ಒಟ್ಟಿಗೆ ತಯಾರಿಸುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.—ಎಫೆ. 5:15, 16.
3 ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ: ವಾರದ ಬೈಬಲ್ ವಾಚನ ಕಾರ್ಯತಖ್ತೆಯೊಂದಿಗೆ ಸಮವಾಗಿ ಮುಂದುವರಿಯಲು ಶ್ರಮಿಸಿರಿ. (ಯೆಹೋ. 1:8) ಆವರಿಸಲ್ಪಡಲಿರುವ ವಿಷಯವನ್ನು ಪುನರ್ವಿಮರ್ಶಿಸಿರಿ, ಮತ್ತು ಭಾಷಣಕಾರರೊಂದಿಗೆ ನೀವು ಅನುಸರಿಸಿಕೊಂಡು ಹೋಗಲು ಸಾಧ್ಯವಾಗುವಂತೆ ಅಗತ್ಯವಿರುವ ಪ್ರಕಾಶನಗಳನ್ನು ತನ್ನಿರಿ. ನಿಮ್ಮ ಶುಶ್ರೂಷೆಯಲ್ಲಿ ನೀವು ಈ ಸಮಾಚಾರವನ್ನು ಉಪಯೋಗಿಸಸಾಧ್ಯವಿರುವ ವಿಧಾನಗಳ ಕುರಿತು ಆಲೋಚಿಸಿರಿ.
4 ಸೇವಾ ಕೂಟಕ್ಕಾಗಿ: ನಮ್ಮ ರಾಜ್ಯದ ಸೇವೆಯಲ್ಲಿ ರೇಖಿಸಲ್ಪಟ್ಟಿರುವ ಕಾರ್ಯಕ್ರಮವನ್ನು ಒಂದೊಂದಾಗಿ ಪರೀಕ್ಷಿಸಿರಿ. ಚರ್ಚಿಸಲ್ಪಡಲಿರುವ ಲೇಖನಗಳನ್ನು ಓದಿರಿ. ಒಂದು ಕಾವಲಿನಬುರುಜು ಪತ್ರಿಕೆಯ ಲೇಖನದಿಂದ ಅಥವಾ ಇನ್ನಿತರ ಪ್ರಕಾಶನದಿಂದ ತೆಗೆಯಲ್ಪಟ್ಟ ವಿಷಯವು ಪರಿಗಣಿಸಲ್ಪಡಲಿರುವುದಾದರೆ, ಅದನ್ನು ಹುಡುಕಿ ನೋಡಿರಿ ಮತ್ತು ಅದನ್ನೂ ಓದಿರಿ. ಕ್ಷೇತ್ರ ಸೇವೆಯ ನಿರೂಪಣೆಗಳು ಪ್ರತ್ಯಕ್ಷಾಭಿನಯಿಸಲ್ಪಡಲಿರುವುದಾದರೆ, ನೀವು ಅವುಗಳನ್ನು ನಿಮ್ಮ ಶುಶ್ರೂಷೆಯಲ್ಲಿ ಉಪಯೋಗಿಸಲಿಕ್ಕಾಗಿ ಸಿದ್ಧರಾಗುವಂತೆ ಇವುಗಳನ್ನು ಮುಂಚಿತವಾಗಿ ಪುನರ್ವಿಮರ್ಶಿಸಿರಿ.
5 ಕಾವಲಿನಬುರುಜು ಅಭ್ಯಾಸಕ್ಕಾಗಿ: ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುತ್ತಾ, ಪಾಠವನ್ನು ಮುಂಚಿತವಾಗಿ ಓದಿರಿ. ಉಲ್ಲೇಖಿಸಲ್ಪಟ್ಟ ಶಾಸ್ತ್ರವಚನಗಳನ್ನು ನೋಡುವುದು, ಹೆಚ್ಚು ಉತ್ತಮವಾದ ಗ್ರಹಿಕೆಯನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡುವುದು. ನೀವು ಈಗಾಗಲೇ ತಿಳಿದುಕೊಂಡಿರುವ ವಿಷಯದೊಂದಿಗೆ ಈ ಪಾಠವು ಹೇಗೆ ಹೊಂದಿಕೆಯಲ್ಲಿದೆ ಎಂಬುದರ ಕುರಿತಾಗಿ ಮನನ ಮಾಡುವುದು, ನಿಮ್ಮ ಜ್ಞಾನವನ್ನು ವಿಸ್ತರಿಸುವುದು. ಕಡಿಮೆಪಕ್ಷ ಒಂದು ಅಥವಾ ಎರಡು ಪ್ಯಾರಗ್ರಾಫ್ಗಳ ಮೇಲೆ ಸಂಕ್ಷಿಪ್ತವಾದ ಹೇಳಿಕೆಗಳನ್ನು ತಯಾರಿಸುವ ಮೂಲಕ, ಅಭ್ಯಾಸದ ಸಮಯದಲ್ಲಿ ಭಾಗವಹಿಸಲು ಯೋಜಿಸಿರಿ. “ನಮ್ಮ ನಿರೀಕ್ಷೆಯ ಸಾರ್ವಜನಿಕ ಘೋಷಣೆ”ಯನ್ನು ಮಾಡಲು ಇದು ಒಂದು ಪ್ರಮುಖ ವಿಧಾನವಾಗಿದೆ.—ಇಬ್ರಿ. 10:23, NW.
6 ಸಭಾ ಪುಸ್ತಕ ಅಭ್ಯಾಸಕ್ಕಾಗಿ: ಪ್ರಥಮವಾಗಿ, ವಿಷಯವನ್ನು ಪರಿಶೀಲಿಸಿರಿ; ಅಧ್ಯಾಯ ಶಿರೋನಾಮವನ್ನು ಮತ್ತು ಉಪಶಿರೋನಾಮಗಳನ್ನು ಪರಿಗಣಿಸಿರಿ. ತದನಂತರ, ನೀವು ಓದುತ್ತಿರುವ ಹಾಗೆ, ಪ್ರಮುಖ ವಿಚಾರಗಳನ್ನು ಅವಲೋಕಿಸಿರಿ. ಆಧಾರ ಕೊಡುವ ಬೈಬಲ್ ವಚನಗಳನ್ನು ಪುನರ್ವಿಮರ್ಶಿಸಿರಿ. ಪ್ರಶ್ನೆಗಳಿಗೆ ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರವನ್ನು ಕೊಡಲು ಪ್ರಯತ್ನಿಸಿರಿ. ನೀವು ಪಾಠವನ್ನು ತಯಾರಿಸಿರುವಾಗ, ಅದನ್ನು ನಿಮ್ಮ ಮನಸ್ಸಿನಲ್ಲಿ ಪುನರ್ವಿಮರ್ಶಿಸಿರಿ. ಮುಖ್ಯ ಅಂಶಗಳನ್ನು ಮತ್ತು ತರ್ಕಬದ್ಧವಾದ ಸಾಲುಗಳನ್ನು ಪುನಃ ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ.—2 ತಿಮೊ. 2:15.
7 ಕೂಟಗಳಲ್ಲಿ ಆನಂದಿಸಿರಿ: ಕೂಟಗಳಲ್ಲಿ ಸಮಗ್ರವಾಗಿ ಆನಂದಿಸಲು, ಯೆಹೋವನ ಆತ್ಮಕ್ಕಾಗಿ ಬೇಡಿಕೊಳ್ಳುತ್ತಾ ಆರಂಭದ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಸಮಯಕ್ಕೆ ಸರಿಯಾಗಿ ಹಾಜರಿರುವುದು ಪ್ರಾಮುಖ್ಯವಾಗಿದೆ. ಚೈತನ್ಯದಾಯಕವಾದ ರಾಜ್ಯ ಸಂಗೀತಗಳಿಂದ ಸಹ ನೀವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ಸಭಾಗೃಹದ ಹಿಂಭಾಗದಲ್ಲಿ ಕುಳಿತುಕೊಳ್ಳಲಿಕ್ಕಾಗಿ ನಿಮಗೆ ಎಳೆಯ ಮಕ್ಕಳಿಲ್ಲದಿರುವುದಾದರೆ ಅಥವಾ ಇನ್ನಿತರ ಕಾರಣವಿಲ್ಲದಿರುವುದಾದರೆ, ನೀವು ಮುಂಭಾಗದಲ್ಲಿ ಕುಳಿತುಕೊಳ್ಳುವಲ್ಲಿ ಕಡಿಮೆ ಅಪಕರ್ಷಣೆಗಳಿರುವವೆಂದು ಮತ್ತು ಕಾರ್ಯಕ್ರಮದಿಂದ ಹೆಚ್ಚು ಮಹತ್ತರವಾದ ಪ್ರಯೋಜನವನ್ನು ಪಡೆದುಕೊಳ್ಳುವಿರೆಂದು ನೀವು ಕಂಡುಕೊಳ್ಳುವುದು ಸಂಭವನೀಯ. ಕೂಟದ ಸಮಯದಲ್ಲಿ ಹೊರಗೆ ಕೊಂಡೊಯ್ಯಬೇಕಾಗಿರಬಹುದಾದ ಎಳೆಯ ಮಕ್ಕಳಿರುವ ಹೆತ್ತವರು, ನಡುದಾರಿಗೆ ಸಮೀಪವಾಗಿ ಮತ್ತು ತೀರ ಹಿಂಭಾಗದಲ್ಲಿ ಕುಳಿತುಕೊಳ್ಳುವ ಮೂಲಕ ಅಪಕರ್ಷಣೆಯನ್ನು ಕಡಿಮೆಗೊಳಿಸಬಲ್ಲರು.
8 ಓದಲ್ಪಡುವ ಶಾಸ್ತ್ರವಚನಗಳನ್ನು ತೆರೆದು ನೋಡಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿರಿ. ನೀವು ಕೇಳುವಂತಹ ವಿಷಯವನ್ನು ಜ್ಞಾಪಕದಲ್ಲಿಡುವಂತೆ ಇದು ನಿಮಗೆ ಸಹಾಯ ಮಾಡುವುದು. ನೀವು ಕಲಿಯುವಂತಹ ವಿಷಯದ ಕುರಿತು ನಿಮ್ಮ ಕುಟುಂಬದೊಂದಿಗೆ ಮತ್ತು ಸ್ನೇಹಿತರೊಂದಿಗೆ ಮಾತಾಡುವುದು, ನಿಮ್ಮ ಮನಸ್ಸಿನ ಮೇಲೆ ಸಮಾಚಾರವನ್ನು ಅಚೊತ್ಚುವ್ತಂತೆ ಮಾಡುವುದು. ಈ ಸಲಹೆಗಳನ್ನು ಅನ್ವಯಿಸುವುದು, ಕೂಟಗಳನ್ನು ಹೆಚ್ಚು ಅರ್ಥಭರಿತವಾಗಿಯೂ ಆನಂದದಾಯಕವಾಗಿಯೂ ಮಾಡುವುದು, ಮತ್ತು ಅವು ನಿಜವಾಗಿಯೂ “ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳಿಗೆ [ನಮ್ಮನ್ನು] ಹುರಿದುಂಬಿಸು”ವವು.—ಇಬ್ರಿ. 10:24, 25, NW.