1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 1
1 “1996ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್”ನೊಂದಿಗೆ ಒದಗಿಸಲ್ಪಟ್ಟಿರುವ ಸೂಚನೆಗಳನ್ನು ನೀವು ಓದಿದ್ದೀರೊ? ಕೆಲವು ಬದಲಾವಣೆಗಳನ್ನು ನೀವು ಗಮನಿಸಿದಿರೊ? ಇಂಗ್ಲಿಷ್ ಭಾಷೆಯ ಶೆಡ್ಯೂಲ್ನಲ್ಲಿ, ಜನವರಿ ತಿಂಗಳಿನಿಂದ ಎಪ್ರಿಲ್ ತಿಂಗಳಿನ ವರೆಗೆ, ನೇಮಕ ನಂಬ್ರ 3 ರೀಸನಿಂಗ್ ಪುಸ್ತಕದ ಮೇಲೂ (ದೇಶೀಯ ಭಾಷೆಯ ಶೆಡ್ಯೂಲ್ಗಳಲ್ಲಿ, ಚರ್ಚೆಗಾಗಿ ಬೈಬಲ್ ವಿಷಯಗಳು) ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳಿನ ವರೆಗೆ, ಅದು ಹೊಸದಾಗಿ ಬಿಡುಗಡೆಮಾಡಲ್ಪಟ್ಟಿರುವ ಜ್ಞಾನ ಪುಸ್ತಕದ ಮೇಲೂ ಆಧಾರಿತವಾಗಿದೆ. ಇಂಗ್ಲಿಷ್ ಭಾಷೆಯ ಶೆಡ್ಯೂಲ್, ನೇಮಕ ನಂಬ್ರ 4ನ್ನು, ಪ್ರತಿ ವಾರ ಬೈಬಲಿನ ವಿಭಿನ್ನ ವ್ಯಕ್ತಿಯ ಕುರಿತಾದ ಒಂದು ಭಾಷಣದೋಪಾದಿ ಪಟ್ಟಿಮಾಡುತ್ತದೆ, ಆದರೆ ಇತರ ಭಾಷೆಗಳಿಗೆ ಈ ನೇಮಕವು ರೀಸನಿಂಗ್ ಪುಸ್ತಕದಿಂದ ಶೆಡ್ಯೂಲ್ ಮಾಡಲ್ಪಟ್ಟಿದೆ.
2 ವಿದ್ಯಾರ್ಥಿ ನೇಮಕಗಳು: ನೇಮಕ ನಂಬ್ರ 3 ಒಬ್ಬ ಸಹೋದರಿಗೆ ಕೊಡಲ್ಪಡುತ್ತದೆ. ಅದು ವಿಷಯಗಳು ಪುಸ್ತಿಕೆ ಅಥವಾ ರೀಸನಿಂಗ್ ಪುಸ್ತಕದ ಮೇಲಾಧಾರಿತವಾಗಿರುವಾಗ, ಸನ್ನಿವೇಶವು (ಸೆಟಿಂಗ್) ಮನೆಯಿಂದ ಮನೆಯ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯವನ್ನೊಳಗೊಳ್ಳಬೇಕು. ಜ್ಞಾನ ಪುಸ್ತಕದ ಮೇಲಾಧಾರಿತವಾಗಿರುವಾಗ, ಅದು ಒಂದು ಪುನರ್ಭೇಟಿಯೋಪಾದಿ ಅಥವಾ ಒಂದು ಮನೆ ಬೈಬಲ್ ಅಭ್ಯಾಸದೋಪಾದಿ ಪ್ರದರ್ಶಿಸಲ್ಪಡಬೇಕು. ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಲಿಕ್ಕಾಗಿ ಜ್ಞಾನ ಪುಸ್ತಕವು ವ್ಯಾಪಕವಾಗಿ ಉಪಯೋಗಿಸಲ್ಪಡಲಿರುವುದರಿಂದ, ಇದು ಹೆಚ್ಚು ಸಹಾಯಕಾರಿಯಾಗಿ ಪರಿಣಮಿಸಬೇಕು.
3 ಸನ್ನಿವೇಶವು ಒಂದು ಮನೆ ಬೈಬಲ್ ಅಭ್ಯಾಸವಾಗಿರುವುದಾದರೆ, ಇಬ್ಬರೂ ಸಹೋದರಿಯರು ಕುಳಿತುಕೊಂಡಿರಸಾಧ್ಯವಿದೆ. ಸಂಕ್ಷಿಪ್ತವಾದ ಪೀಠಿಕಾ ಹೇಳಿಕೆಗಳನ್ನು ಮಾಡುವ ಮೂಲಕ, ನೇರವಾಗಿ ಅಭ್ಯಾಸವನ್ನು ಆರಂಭಿಸಿರಿ ಮತ್ತು ತದನಂತರ ಮುದ್ರಿತ ಪ್ರಶ್ನೆಯನ್ನು ಕೇಳಿರಿ. ಮನೆಯವರ ಪಾತ್ರವು ನೈಜವಾಗಿ ನಿರ್ವಹಿಸಲ್ಪಡತಕ್ಕದ್ದು. ಸಮಯವು ಅನುಮತಿಸಿದಂತೆ, ಉದಾಹರಿಸಲ್ಪಟ್ಟ ಶಾಸ್ತ್ರವಚನಗಳನ್ನು ತೆರೆದುನೋಡಸಾಧ್ಯವಿದೆ ಮತ್ತು ಓದಸಾಧ್ಯವಿದೆ. ಪ್ರಶ್ನೆಗಳಿಂದ ಮನೆಯವರನ್ನು ಮಾತಾಡುವಂತೆ ಮಾಡುವ ಮೂಲಕ ಹಾಗೂ ಉಪಯೋಗಿಸಲ್ಪಟ್ಟ ಶಾಸ್ತ್ರವಚನಗಳ ಮೇಲೆ ತರ್ಕಿಸುವ ಮೂಲಕ, ಆ ಸಹೋದರಿಯು ಬೋಧಿಸುವ ಕಲೆಯನ್ನು ಪ್ರಯೋಗಿಸಬೇಕು.
4 ರೀಸನಿಂಗ್ ಅಥವಾ ಜ್ಞಾನ ಪುಸ್ತಕಗಳ ನೇಮಿತ ಭಾಗದಲ್ಲಿ, ಐದು ನಿಮಿಷಗಳಲ್ಲಿ ಚರ್ಚಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚು ಶಾಸ್ತ್ರವಚನಗಳು ಉದಾಹರಿಸಲ್ಪಟ್ಟಿರುವುದಾದರೆ, ಏನು ಮಾಡಲ್ಪಡಬೇಕು? ಮುಖ್ಯಾಂಶಗಳನ್ನು ಎತ್ತಿತೋರಿಸುವ ಪ್ರಮುಖ ವಚನಗಳನ್ನು ಆರಿಸಿಕೊಳ್ಳಿರಿ. ಕೇವಲ ಕೆಲವೇ ಶಾಸ್ತ್ರವಚನಗಳು ಇರುವುದಾದರೆ, ಆ ಪಾಠದಲ್ಲಿರುವ ಪ್ರಧಾನ ಅಂಶಗಳನ್ನು ಹೆಚ್ಚು ವಿಸ್ತಾರವಾಗಿ ಚರ್ಚಿಸಬಹುದಾಗಿದೆ. ಸಾಂದರ್ಭಿಕವಾಗಿ, ಪುಸ್ತಕದಿಂದ ಒಂದು ಪ್ಯಾರಗ್ರಾಫನ್ನು ಅಥವಾ ಒಂದು ವಾಕ್ಯವನ್ನು ಓದಿ, ಬಳಿಕ ಮನೆಯವಳೊಂದಿಗೆ ಚರ್ಚಿಸಬಹುದು. ವಿಷಯಗಳು ಪುಸ್ತಿಕೆಯಿಂದ ಭಾಷಣವೊಂದನ್ನು ತಯಾರಿಸುವಾಗ, ಪ್ರತಿಯೊಂದು ಅಂಶದಿಂದ ಕಡಿಮೆಪಕ್ಷ ಒಂದು ಶಾಸ್ತ್ರವಚನವನ್ನು ಉಪಯೋಗಿಸುವುದು ಅತ್ಯುತ್ತಮವಾಗಿದೆ.
5 ಜ್ಞಾನ ಪುಸ್ತಕದ ಪ್ರತಿಯೊಂದು ಅಧ್ಯಾಯದ ಕೊನೆಯ ಭಾಗದಲ್ಲಿ ಕಂಡುಬರುವ, “ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ” ಎಂಬ ಶಿರೋನಾಮವಿರುವ ರೇಖಾಚೌಕವು, ಯಾರ ನೇಮಕವು ಅಧ್ಯಾಯದ ಅಂತಿಮ ಪ್ಯಾರಗ್ರಾಫನ್ನು ಆವರಿಸುತ್ತದೋ, ಆ ಪ್ರಚಾರಕಳಿಂದ ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಲ್ಪಡಬಹುದು. ಸಮಯವು ಅನುಮತಿಸಿದಂತೆ, ನೇಮಿತ ಪ್ಯಾರಗ್ರಾಫ್ಗಳೊಳಗೆ ಬರುವ ಮಾಹಿತಿ ರೇಖಾಚೌಕಗಳನ್ನು ಸಹ ಚರ್ಚಿಸಬಹುದಾಗಿದೆ. ಒಂದು ಮಾಹಿತಿ ರೇಖಾಚೌಕವು ಎರಡು ನೇಮಕಗಳ ನಡುವೆ ಬರುವುದಾದರೆ, ಮೊದಲನೆಯ ನೇಮಕವನ್ನು ನಿರ್ವಹಿಸುತ್ತಿರುವ ಸಹೋದರಿಯು ಅದನ್ನು ಪರಿಗಣಿಸಬಹುದು. ಪುಸ್ತಕದಲ್ಲಿರುವ ಚಿತ್ರಗಳು—ಪರಿಗಣನೆಯ ಕೆಳಗಿರುವ ವಸ್ತುವಿಷಯಕ್ಕೆ ಎಲ್ಲಿ ಅನ್ವಯವಾಗುತ್ತವೋ ಅಲ್ಲಿ ಅವುಗಳ ಕುರಿತು ಹೇಳಿಕೆ ನೀಡಬಹುದು.
6 ನೇಮಕ ನಂಬ್ರ 4 ಹೆಚ್ಚು ಆಸಕ್ತಿದಾಯಕವೂ ಪ್ರಾಯೋಗಿಕವೂ ಆಗಿರಬೇಕು. ನಿಮ್ಮ ಸಭೆಯು ಇಂಗ್ಲಿಷ್ ಭಾಷೆಯ ಶೆಡ್ಯೂಲ್ ಅನ್ನು ಅನುಸರಿಸುತ್ತಿರುವುದಾದರೆ, ನೇಮಿತ ಬೈಬಲ್ ವ್ಯಕ್ತಿಯ ಕುರಿತಾಗಿ ಒಳನೋಟ (ಇಂಗ್ಲಿಷ್), ಸಂಪುಟ 1ಕ್ಕೆ, ಯಾವ ವಿಷಯವನ್ನು ಹೇಳಲಿಕ್ಕಿದೆ ಎಂಬುದನ್ನು ಜಾಗರೂಕತೆಯಿಂದ ಅಭ್ಯಾಸಿಸಿರಿ. ಭಾಷಣವನ್ನು ಮುಖ್ಯ ವಿಷಯಕ್ಕನುಗುಣವಾಗಿ ವಿಕಸಿಸಿರಿ, ಮತ್ತು ವಾಸ್ತವ ಜೀವನದ ಬೈಬಲ್ ವ್ಯಕ್ತಿ ಹಾಗೂ ನಾವು ಅನುಕರಿಸಲು ಅಥವಾ ತಿರಸ್ಕರಿಸಲು ಬಯಸುವಂತಹ ವೈಲಕ್ಷಣ್ಯಗಳು, ಗುಣಗಳು, ಅಥವಾ ಪ್ರವೃತ್ತಿಗಳನ್ನು ಒಳಗೊಂಡು, ಅವನ ವ್ಯಕ್ತಿತ್ವದ ಮೇಲೆ ಕೇಂದ್ರೀಕರಿಸುವಂತೆ ಸಭಿಕರಿಗೆ ಸಹಾಯ ಮಾಡುವ, ಬೈಬಲಿನ ಮುಖ್ಯ ವಚನಗಳನ್ನು ಆರಿಸಿಕೊಳ್ಳಿರಿ. ಬೈಬಲ್ ವ್ಯಕ್ತಿಗೆ ನೇರವಾಗಿ ಸಂಬಂಧಿಸಿರದ ಶಾಸ್ತ್ರವಚನಗಳು, ಕೆಲವು ಒಳ್ಳೆಯ ಅಥವಾ ಕೆಟ್ಟ ಗುಣಗಳನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಎತ್ತಿತೋರಿಸುವುದಾದರೆ, ಅಥವಾ ಅವು ಭಾಷಣದ ಮುಖ್ಯ ವಿಷಯಕ್ಕೆ ಸಂಬಂಧಿಸಿರುವುದಾದರೆ, ಅವುಗಳನ್ನು ಒಳಗೂಡಿಸಬಹುದಾಗಿದೆ. ಈ ಭಾಷಣವು ರೀಸನಿಂಗ್ ಪುಸ್ತಕದಿಂದ ಕೊಡಲ್ಪಡುವಾಗ, ಕ್ಷೇತ್ರದಲ್ಲಿ ಉಪಯೋಗಿಸಲಿಕ್ಕಾಗಿರುವ ಪ್ರಾಯೋಗಿಕ ಅಂಶಗಳನ್ನು ಒತ್ತಿಹೇಳತಕ್ಕದ್ದು.
7 ಈ ಶಾಲೆಯಲ್ಲಿ ಒದಗಿಸಲ್ಪಡುವ ತರಬೇತಿಯ ಪೂರ್ಣ ಲಾಭವನ್ನು ನಾವು ತೆಗೆದುಕೊಳ್ಳುವುದಾದರೆ, ಅತ್ಯುತ್ತಮವಾದ “ಬೋಧಿಸುವ ಕಲೆ”ಯನ್ನು ಪ್ರದರ್ಶಿಸುವಂತಹ ಒಂದು ರೀತಿಯಲ್ಲಿ ನಾವು “ವಾಕ್ಯವನ್ನು ಸಾರ”ಲು ಹೆಚ್ಚು ಉತ್ತಮವಾಗಿ ಶಕ್ತರಾಗಿರುವೆವು.—2 ತಿಮೊ. 4:2, NW.