ನೀವು ತೀರ ಕಾರ್ಯಮಗ್ನರಾಗಿದ್ದೀರೋ?
1 ನಮಗೆ ‘ಕರ್ತನ ಕೆಲಸದಲ್ಲಿ ಯಾವಾಗಲೂ ಮಾಡಲು ಬೇಕಾದಷ್ಟಿರಬೇಕು’ ಎಂದು ಪೌಲನು ಪ್ರೋತ್ಸಾಹಿಸಿದನು. (1 ಕೊರಿಂ. 15:58, NW) ವೈಯಕ್ತಿಕ ಅಧ್ಯಯನಕ್ಕಾಗಿ, ಶುಶ್ರೂಷೆಯಲ್ಲಿನ ಕ್ರಮವಾದ ಪಾಲು ತೆಗೆದುಕೊಳ್ಳುವಿಕೆಗಾಗಿ, ನಂಬಿಗಸ್ತಿಕೆಯಿಂದ ಕೂಟಗಳನ್ನು ಹಾಜರಾಗುವುದಕ್ಕಾಗಿ, ಮತ್ತು ಶ್ರದ್ಧಾಪೂರ್ವಕವಾಗಿ ಸಭಾ ನೇಮಕಗಳನ್ನು ನೋಡಿಕೊಳ್ಳಲಿಕ್ಕಾಗಿ ಒಂದು ದೈನಂದಿನ ಕ್ರಮವನ್ನು ಕಾಪಾಡಿಕೊಳ್ಳುವಂತೆ ನಾವು ಪ್ರೇರಿಸಲ್ಪಟ್ಟಿದ್ದೇವೆ. ಅದಕ್ಕೆ ಕೂಡಿಸಿ, ನಮ್ಮ ಸಹಾಯದ ಅಗತ್ಯವಿರುವ ಇತರರಿಗೆ ನಾವು ನೆರವಾಗತಕ್ಕದ್ದು. ಇಷ್ಟೊಂದು ಕೆಲಸವನ್ನು ಮಾಡಲಿಕ್ಕಿರುವುದರಿಂದ, ನಮ್ಮ ಕೆಲಸದ ಹೊರೆಯನ್ನು ಕಡಿಮೆಗೊಳಿಸುವ ಮಾರ್ಗಗಳಿಗಾಗಿ ನಾವು ಹುಡುಕಬೇಕಾಗಿದೆ ಎಂದು ಆಲೋಚಿಸುತ್ತಾ, ಕೆಲವೊಮ್ಮೆ ನಾವು ಮುಳುಗಿಹೋಗಿರುವಂಥ ಅನಿಸಿಕೆ ನಮಗಾಗಬಹುದು.
2 ನಿರ್ದಿಷ್ಟ ಚಟುವಟಿಕೆಗಳನ್ನು ತೆಗೆದುಹಾಕುವುದನ್ನು ಅಥವಾ ಅವುಗಳ ಪರಿಮಾಣವನ್ನು ಕಡಿಮೆಗೊಳಿಸುವುದನ್ನು, ವಿವೇಕಯುತವೂ ಸಮಂಜಸವೂ ಆದದ್ದಾಗಿ ಮಾಡಬಹುದಾದ ಸನ್ನಿವೇಶಗಳಿರುತ್ತವೆ. ಇತರರಿಂದ ಕೇಳಿಕೊಳ್ಳಲ್ಪಡುವ ಪ್ರತಿಯೊಂದು ವಿಷಯವು ತಮ್ಮಿಂದ ಮಾಡಲ್ಪಡುವಂತೆ ನಿರೀಕ್ಷಿಸಲ್ಪಡುತ್ತದೆ ಎಂಬುದಾಗಿ ಕೆಲವು ವ್ಯಕ್ತಿಗಳು ಭಾವಿಸುತ್ತಾರೆ. ಈ ಸಂಬಂಧದಲ್ಲಿನ ಸಮತೆಯ ಕೊರತೆಯು, ಕಟ್ಟಕಡೆಗೆ ವಿಧ್ವಂಸಕವಾಗಿ ಪರಿಣಮಿಸಬಲ್ಲ ಒತ್ತಡ ಮತ್ತು ಪ್ರಯಾಸವನ್ನು ಉತ್ಪಾದಿಸಬಲ್ಲದು.
3 ಸಮತೆಯುಳ್ಳವರಾಗಿರಿ: “ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಖಚಿತಪಡಿಸಿ”ಕೊಳ್ಳುವುದಕ್ಕಿರುವ ಪೌಲನ ಸಲಹೆಯನ್ನು ಅನ್ವಯಿಸುವುದರಲ್ಲಿ, ಸಮತೆಯ ಕೀಲಿ ಕೈ ಇದೆ. (ಫಿಲಿ. 1:10, NW) ಅಂದರೆ ಇದು ಸರಳವಾಗಿ, ನಾವು ನಿಜವಾಗಿಯೂ ಪ್ರಾಮುಖ್ಯವಾದ ವಿಷಯಗಳ ಮೇಲೆ ಕೇಂದ್ರೀಕರಿಸುವುದನ್ನು ಮತ್ತು ಸಮಯ ಹಾಗೂ ಸಂದರ್ಭಗಳು ಅನುಮತಿಸುವಲ್ಲಿ, ಕಡಿಮೆ ಪ್ರಮುಖತೆಯಿರುವ ಕೆಲವು ವಿಷಯಗಳಿಗಾಗಿ ಕಾಳಜಿವಹಿಸುವುದನ್ನು ಅರ್ಥೈಸುತ್ತದೆ. ಪ್ರಮುಖವಾಗಿರುವ ಆ ವಿಷಯಗಳಲ್ಲಿ ನಿಶ್ಚಯವಾಗಿಯೂ, ಕುಟುಂಬ ಹಂಗುಗಳು ಉಚ್ಚಮಟ್ಟದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ನಿರ್ದಿಷ್ಟವಾದ ಐಹಿಕ ಜವಾಬ್ದಾರಿಗಳು ನಿರ್ವಹಿಸಲ್ಪಡಬೇಕು. ಹಾಗಿದ್ದರೂ, ನಾವು ಮೊದಲಾಗಿ ರಾಜ್ಯವನ್ನು ಹುಡುಕುತ್ತೇವೆಂಬ ತತ್ತ್ವದ ಮೇಲೆ ನಮ್ಮ ಆದ್ಯತೆಗಳು ಆಧರಿತವಾಗಿರಬೇಕೆಂದು ಯೇಸು ಕಲಿಸಿದನು. ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ನೆರವೇರಿಸಲು ನಮ್ಮನ್ನು ಅನುಮತಿಸುವ ವಿಷಯಗಳನ್ನು ನಾವು ಮೊದಲು ಮಾಡಬೇಕು.—ಮತ್ತಾ. 5:3; 6:33.
4 ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಅನಗತ್ಯವಾದ ಯಾವುದೇ ವೈಯಕ್ತಿಕ ಬೆನ್ನಟ್ಟುವಿಕೆಗಳು, ಅತಿರೇಕವಾದ ಮನೋರಂಜನಾ ಚಟುವಟಿಕೆಗಳು, ಮತ್ತು ಇತರರಿಗೆ ಅಮುಖ್ಯವಾದ ಬದ್ಧತೆಗಳನ್ನು ಮಾಡುವುದರ ನಮ್ಮ ಕಾರ್ಯಮಗ್ನ ಕಾಲತಖ್ತೆಯನ್ನು ನಾವು ಕಡಿಮೆಗೊಳಿಸಲು ಖಚಿತಪಡಿಸಿಕೊಳ್ಳುವೆವು. ಪ್ರತಿ ವಾರಕ್ಕಾಗಿರುವ ನಮ್ಮ ಚಟುವಟಿಕೆಯನ್ನು ಯೋಜಿಸುವುದರಲ್ಲಿ, ಸಾಕಷ್ಟು ವೈಯಕ್ತಿಕ ಅಧ್ಯಯನ, ಸೇವೆಯಲ್ಲಿನ ಸಮಂಜಸವಾದೊಂದು ಪಾಲುತೆಗೆದುಕೊಳ್ಳುವಿಕೆ, ಕೂಟಗಳಲ್ಲಿನ ಹಾಜರಿ, ಮತ್ತು ನಮ್ಮ ಆರಾಧನೆಯೊಂದಿಗೆ ಅತಿ ನಿಕಟವಾಗಿ ಸಂಬಂಧಿಸಿರುವ ಇತರ ಯಾವುದೇ ವಿಷಯಗಳಿಗಾಗಿ ನಾವು ಸಮಯವನ್ನು ಬದಿಗಿರಿಸುವೆವು. ಉಳಿದ ಸಮಯವು—ರಾಜ್ಯವನ್ನು ಪ್ರಥಮವಾಗಿಡುವ ಸಮತೆಯುಳ್ಳ ಕ್ರೈಸ್ತರಾಗಿರುತ್ತಾ, ನಮ್ಮ ಪ್ರಾಥಮಿಕ ಗುರಿಯನ್ನು ಪಡೆಯುವುದರೆಡೆಗೆ ಅವು ಎಷ್ಟರ ಮಟ್ಟಿಗೆ ನೆರವಾಗುತ್ತವೆಂಬುದರ ಮೇಲೆ ಆಧರಿಸುತ್ತಾ—ಇತರ ಬೆನ್ನಟ್ಟುವಿಕೆಗಳ ನಡುವೆ ವಿಭಜಿಸಲ್ಪಡಬಹುದು.
5 ಹಾಗಿದ್ದರೂ, ನಮ್ಮ ಹೊರೆಯು ಇನ್ನೂ ಭಾರಾಧಿಕ್ಯವಾಗಿದೆ ಎಂದು ನಮಗೆ ಅನಿಸಬಹುದು. ಹಾಗಿದ್ದಲ್ಲಿ, ನಾವು ಯೇಸುವಿನ ಆಮಂತ್ರಣಕ್ಕೆ ಪ್ರತಿಕ್ರಿಯಿಸುವ ಅಗತ್ಯವಿದೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” (ಮತ್ತಾ. 11:28) ಹಾಗೂ “ಅನುದಿನವೂ ನಮ್ಮ ಭಾರವನ್ನು ಹೊರುವ” ಮತ್ತು ಬಳಲಿಹೋದವರಿಗೆ ಶಕ್ತಿಯನ್ನು ಕೊಡುವ ಯೆಹೋವನ ಕಡೆಗೆ ನೋಡಿರಿ. ನೀತಿವಂತನು ಕದಲುವಂತೆ ತಾನೆಂದೂ ಅನುಮತಿಸೆನೆಂದು ಆತನು ವಾಗ್ದಾನಿಸುತ್ತಾನೆ. (ಕೀರ್ತ. 55:22; 68:19; ಯೆಶಾ. 40:29) ದೇವಪ್ರಭುತ್ವ ಚಟುವಟಿಕೆಯ ಒಂದು ಸಕ್ರಿಯ ಜೀವನದಲ್ಲಿ ಪಟ್ಟುಹಿಡಿಯಲು ನಮ್ಮನ್ನು ಸಾಧ್ಯವನ್ನಾಗಿ ಮಾಡುತ್ತಾ, ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವವೆಂಬುದಾಗಿ ನಾವು ಖಾತ್ರಿಯಿಂದಿರಬಲ್ಲೆವು.
6 ಸಾರ್ಥಕವಾದ ರಾಜ್ಯ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲಿ ಕಾರ್ಯಮಗ್ನರಾಗಿರಲು ನಾವು ನಿಶ್ಚಿತರಾಗಿರುವಾಗ, ಕರ್ತನೊಂದಿಗಿನ ಸಂಬಂಧದಲ್ಲಿ ನಮ್ಮ ಕೆಲಸವು ವ್ಯರ್ಥವಾಗಿಲ್ಲವೆಂಬುದನ್ನು ತಿಳಿಯುವುದರಲ್ಲಿ ನಾವು ಹರ್ಷಿಸಬಲ್ಲೆವು.—1 ಕೊರಿಂ. 15:58.