ಅವರ ನಂಬಿಕೆಯನ್ನು ಅನುಕರಿಸಿರಿ
1 ಅಪೊಸ್ತಲ ಪೌಲನು ನಂಬಿಕೆಯನ್ನು “ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ” ಆಗಿ ಅರ್ಥ ನಿರೂಪಿಸಿದನು. “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ” ಎಂದು ಅವನು ಕೂಡಿಸಿದನು. (ಇಬ್ರಿ. 11:1, 6) ನಂಬಿಕೆಯನ್ನಿಡಲು, ಅದರೊಂದಿಗೆ ಸಮೃದ್ಧವಾಗಲು, ಮತ್ತು ಅದನ್ನು ಬೆನ್ನಟ್ಟಲು ಪೌಲನು ನಮ್ಮನ್ನು ಪ್ರಚೋದಿಸಿದನು.—2 ಕೊರಿಂ. 4:13; ಕೊಲೊ. 2:7; 2 ತಿಮೊ. 2:22.
2 ಬೈಬಲಿನಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿರುವ ನಂಬಿಕೆಯ ಅನೇಕ ಗಮನಾರ್ಹವಾದ ಮಾದರಿಗಳಿವೆ. ಇಬ್ರಿಯ 11ನೇ ಅಧ್ಯಾಯದಲ್ಲಿ ಪೌಲನು ಮುರಿಯಲಸಾಧ್ಯವಾದ ನಂಬಿಕೆಯನ್ನು ಪ್ರದರ್ಶಿಸಿದ ಸಾಕ್ಷಿಗಳ ಒಂದು ಉದ್ದವಾದ ಪಟ್ಟಿಯನ್ನು ನೀಡುತ್ತಾನೆ. ಈ ಪಟ್ಟಿಯಲ್ಲಿ, ತನ್ನ ನಂಬಿಕೆಗಾಗಿ ಪ್ರಥಮವಾಗಿ ಧರ್ಮಬಲಿಯಾದ ಹೇಬೆಲನೂ ಸೇರಿದ್ದಾನೆ. ನೋಹನು ಪಟ್ಟಿಯಲ್ಲಿದ್ದಾನೆ ಏಕೆಂದರೆ, ಅವನು ತನ್ನ ಮನೆವಾರ್ತೆಯವರನ್ನು ರಕ್ಷಿಸಲು ಅಗತ್ಯವಾಗಿದ್ದ ದೇವಭಯವನ್ನು ತನ್ನ ನಂಬಿಕೆಯ ಮೂಲಕ ತೋರಿಸಿದನು. ಅಬ್ರಹಾಮನು ತನ್ನ ನಂಬಿಕೆ ಮತ್ತು ವಿಧೇಯತೆಗಾಗಿ ಪ್ರಶಂಸಿಸಲ್ಪಡುತ್ತಾನೆ. ಮೋಶೆ, ಅದೃಶ್ಯನಾಗಿರುವವನನ್ನು ನೋಡುತ್ತಿರುವವನೋಪಾದಿ ತನ್ನ ನಂಬಿಕೆಯ ಮೂಲಕ ನಿಶ್ಚಲನಾಗಿ ಮುಂದುವರಿದ ಕಾರಣ ಶ್ಲಾಘಿಸಲ್ಪಡುತ್ತಾನೆ. ಮಾದರಿಗಳ ಪಟ್ಟಿಯು ಎಷ್ಟು ಉದ್ದವಾಗಿತ್ತೆಂದರೆ, ತಾನು ಅವರೆಲ್ಲರನ್ನು ಉಲ್ಲೇಖಿಸುತ್ತಾ ಹೋಗುವುದಾದರೆ ಸಮಯವು ಸಾಲದೆಂದು ಪೌಲನು ಹೇಳಿದನು. ಅವರ “ನಡವಳಿಕೆಯ ಪವಿತ್ರ ಕ್ರಿಯೆಗಳ ಮತ್ತು ದೇವಭಕ್ತಿಯ ಕಾರ್ಯಗಳ”ನ್ನು ಪುನರ್ವಿಮರ್ಶಿಸುವ ಮೂಲಕ, ನಾವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬಲ್ಲೆವು ಎಂಬುದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿದ್ದೇವೆ!—2 ಪೇತ್ರ 3:11, NW.
3 ಪ್ರಥಮ ಶತಮಾನದಲ್ಲಿ, ಯೇಸು, “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” ಎಂಬ ಪ್ರಶ್ನೆಯನ್ನು ಮುಂದಿಟ್ಟನು. (ಲೂಕ 18:8) ಒಳ್ಳೆಯದು, ಹಾಗಾದರೆ, ಇಂದು ನಮ್ಮ ನಡುವೆ ನಂಬಿಕೆಯ ಜೀವಂತ ಮಾದರಿಗಳನ್ನು ನಾವು ಪಡೆದಿದ್ದೇವೋ? ಬೈಬಲ್ ಸಮಯಗಳಲ್ಲಿ ದೇವಜನರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಯೆಹೋವನಲ್ಲಿ ನಿಶ್ಚಲವಾದ ನಂಬಿಕೆಯನ್ನು ವ್ಯಕ್ತಪಡಿಸುತ್ತಿರುವ ಪುರುಷರನ್ನು ಮತ್ತು ಸ್ತ್ರೀಯರನ್ನು, ಯೌವನಸ್ಥರನ್ನು ಮತ್ತು ವೃದ್ಧರನ್ನು ನಾವು ನೋಡುತ್ತೇವೋ?
4 ನಂಬಿಕೆಯ ಆಧುನಿಕ ದಿನದ ಮಾದರಿಗಳು: ನಂಬಿಕೆಯ ಗಮನಾರ್ಹವಾದ ಮಾದರಿಗಳು ನಮ್ಮ ಸುತ್ತಲೂ ಕಂಡುಬರುತ್ತವೆ! ನಮ್ಮ ನಡುವೆ ಮುಂದಾಳುತ್ವವನ್ನು ತೆಗೆದುಕೊಳ್ಳುತ್ತಿರುವ ಮೇಲ್ವಿಚಾರಕರ ನಂಬಿಕೆಯು ಅನುಕರಿಸಲು ಯೋಗ್ಯವಾಗಿದೆ. (ಇಬ್ರಿ. 13:7) ಆದರೆ ನಂಬಿಕೆಯಲ್ಲಿನ ಆದರ್ಶಪ್ರಾಯರು ಇವರು ಮಾತ್ರವೇ ಆಗಿರುವುದಿಲ್ಲ. ಪ್ರತಿಯೊಂದು ಸಭೆಯೊಂದಿಗೆ ಜೊತೆಗೂಡಿರುವ, ಯೆಹೋವನಿಗೆ ನಂಬಿಗಸ್ತಿಕೆಯ ಸೇವೆಯನ್ನು ಸಲ್ಲಿಸಿರುವ ದೀರ್ಘಕಾಲಾವಧಿಯ ದಾಖಲೆಯಿರುವ ನಿಷ್ಠಾವಂತರಿದ್ದಾರೆ—ಅನೇಕ ವೇಳೆ ಅದನ್ನು ವಿಪರೀತ ಕಷ್ಟಕರವಾದ ಪರಿಸ್ಥಿತಿಗಳ ಕೆಳಗೆ ನಿರ್ವಹಿಸಿದ್ದಾರೆ.
5 ವಿರೋಧಿಸುತ್ತಿರುವ ಪತಿಗಳಿಂದ ಬರುತ್ತಿರುವ ವಿರೋಧವನ್ನು ವರ್ಷಾನುಗಟ್ಟಲೆ ಸಹಿಸಿಕೊಂಡಿರುವ, ನಮ್ಮ ನಂಬಿಗಸ್ತ ಸಹೋದರಿಯರನ್ನು ನಾವು ಮೆಚ್ಚತಕ್ಕದ್ದು. ಒಂಟಿ ಹೆತ್ತವರಿಗೆ ಒಬ್ಬೊಂಟಿಗರಾಗಿ ಮಕ್ಕಳನ್ನು ಬೆಳೆಸುವ ಪಂಥಾಹ್ವಾನವನ್ನು ಎದುರಿಸಲಿಕ್ಕಿದ್ದಿರುತ್ತದೆ. ತಮ್ಮನ್ನು ಉತ್ತೇಜಿಸಲಿಕ್ಕಾಗಿ ಯಾವುದೇ ಕುಟುಂಬ ಸದಸ್ಯರು ಇರದಿದ್ದರೂ, ಸಭಾ ಚಟುವಟಿಕೆಗಳಿಂದ ಎಂದೂ ತಪ್ಪಿಸಿಕೊಳ್ಳದೆ ಇರುವ ವೃದ್ಧ ವಿಧವೆಯರು ನಮ್ಮ ನಡುವೆ ಇದ್ದಾರೆ. (ಲೂಕ 2:37ನ್ನು ಹೋಲಿಸಿರಿ.) ಅಸ್ಥಿಗತ ಆರೋಗ್ಯ ಸಮಸ್ಯೆಗಳನ್ನು ಸಹಿಸಿಕೊಳ್ಳುವವರ ನಂಬಿಕೆಯನ್ನು ನೋಡಿ ನಾವು ಆಶ್ಚರ್ಯಪಡುತ್ತೇವೆ. ಸೇವೆಯ ಅಧಿಕ ಸುಯೋಗಗಳು ನೇಮಿಸಲ್ಪಡುವುದರಿಂದ ತಮ್ಮನ್ನು ತಡೆಯುವ ದೌರ್ಬಲ್ಯಗಳನ್ನು ಪಡೆದಿರುವುದಾದರೂ, ಅನೇಕರು ನಿಷ್ಠಾವಂತರಾಗಿ ಸೇವೆಸಲ್ಲಿಸುವುದನ್ನು ಮುಂದುವರಿಸುತ್ತಾರೆ. ಶಾಲೆಯಲ್ಲಿನ ವಿರೋಧದ ಹೊರತೂ ಧೈರ್ಯವಾಗಿ ನಂಬಿಕೆಯನ್ನು ಪ್ರದರ್ಶಿಸಿರುವ ಎಳೆಯ ಸಾಕ್ಷಿಗಳಿದ್ದಾರೆ. ಅಗಣಿತ ಸಮಸ್ಯೆಗಳ ಎದುರಲ್ಲಿ ವರ್ಷಗಟ್ಟಲೆ ಪಟ್ಟುಹಿಡಿಯುವ ನಂಬಿಗಸ್ತ ಪಯನೀಯರರನ್ನು ನಾವು ಅವಲೋಕಿಸಿದಂತೆ, ನಮ್ಮ ದೇವಭಕ್ತಿಯು ಅತ್ಯಂತ ಬಲವಾಗಿ ಬೆಳೆಯುತ್ತದೆ. ಪೌಲನಂತೆ, ರಾಜ್ಯ ಸೇವೆಯಲ್ಲಿನ ಎಲ್ಲ ಅನುಭವಗಳನ್ನು ಮತ್ತು ಈ ಸಹೋದರ ಸಹೋದರಿಯರಿಂದ ಮಾಡಲ್ಪಟ್ಟಿರುವ ನಂಬಿಕೆಯ ಕ್ರಿಯೆಗಳನ್ನು ಉಲ್ಲೇಖಿಸಲು ನಾವು ಪ್ರಯತ್ನಿಸುವುದಾದರೆ ಸಮಯವು ಸಾಕಾಗದಿರುವುದು!
6 ನಂಬಿಗಸ್ತ ಜನರ ಈ ಮಾದರಿಗಳು ನಮಗೆ ಸಾಂತ್ವನವನ್ನೂ ಉತ್ತೇಜನವನ್ನೂ ನೀಡುತ್ತವೆ. (1 ಥೆಸ. 3:7, 8) ಅವರ ನಂಬಿಕೆಯನ್ನು ಅನುಕರಿಸುವುದರಲ್ಲಿ ನಾವು ಉತ್ತಮವಾಗಿ ಕಾರ್ಯಮಾಡುತ್ತೇವೆ, ಏಕೆಂದರೆ “ನಂಬಿಗಸ್ತಿಕೆಯಲ್ಲಿ ಕ್ರಿಯೆಗೈಯುತ್ತಿರುವವರು [ಯೆಹೋವ]ನಿಗೆ ಆನಂದಕರ.”—ಜ್ಞಾನೋ. 12:22, NW.