ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
1 “ಯೆಹೋವನಿಂದ ಶಿಕ್ಷಿತರಾಗಿರುವ ವ್ಯಕ್ತಿಗಳಾಗಿರಿ.” ಇದು, ಈ ತಿಂಗಳು ಆರಂಭವಾಗಲಿರುವ ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯ ಶೀರ್ಷಿಕೆಯಾಗಿದೆ. (ಯೋಹಾ. 6:45) ಯೆಹೋವನಿಂದ ಬರುವ ದೈವಿಕ ಬೋಧನೆಯು, ನಾವು ತೃಪ್ತಿದಾಯಕವಾದ ಜೀವಿತಗಳನ್ನು ನಡಿಸಲು ನಮಗೆ ನಿಜವಾಗಿಯೂ ಸಹಾಯ ಮಾಡುತ್ತದೆ. ನಮ್ಮ ಆತ್ಮಿಕ ಪರಂಪರೆಗಾಗಿ ಅದು ನಮ್ಮೊಳಗೆ ಒಂದು ತೀವ್ರವಾದ ಗಣ್ಯತೆಯನ್ನು ವಿಕಸಿಸುತ್ತದೆ. ಇತರರು ಸುವಾರ್ತೆಯನ್ನು ಕೇಳುವಂತೆ ನಾವು ಮಾಡುವ ಪ್ರಯತ್ನಗಳು, ನಮ್ಮನ್ನು ಸಮಾಜದ ಉಪಯುಕ್ತ ಸದಸ್ಯರನ್ನಾಗಿ ಮಾಡುತ್ತವೆ. ಈ ವಿಶೇಷ ಸಮ್ಮೇಳನ ದಿನವು, ಯೆಹೋವನಿಂದ ಶಿಕ್ಷಿತರಾಗಿರುವ ವ್ಯಕ್ತಿಗಳಿಂದ ಅನುಭವಿಸಲ್ಪಡುವ ಆಶೀರ್ವಾದಗಳನ್ನು ಎತ್ತಿಹೇಳುವುದು.
2 ಈ ಕಾರ್ಯಕ್ರಮವು, ಲೌಕಿಕ ಕಲಿಯುವಿಕೆಯ ಅಪಾಯಗಳೊಂದಿಗೆ ದೈವಿಕ ಬೋಧನೆಯ ಪ್ರಯೋಜನಗಳನ್ನು ಹೋಲಿಸುವುದು. ಯೆಹೋವನು ಶಿಕ್ಷಣ—ಆತನ ವಾಕ್ಯವಾದ ಬೈಬಲಿನ ಮೇಲೆ ಆಧಾರಿತವಾದ ಶಿಕ್ಷಣ—ದ ಅತಿ ಉಚ್ಚವಾದ ರೂಪವನ್ನು ಒದಗಿಸುವ ವಿಧವನ್ನು ನಾವು ಹೆಚ್ಚು ಸ್ಪಷ್ಟವಾಗಿ ನೋಡಲಿರುವೆವು. ದೇವರಿಂದ ಕಲಿಸಲ್ಪಡುವಾಗ ನಾವು ಹರ್ಷವನ್ನು ಅನುಭವಿಸುವ ಆರಾಧನೆಯ ಮೂರು ಕ್ಷೇತ್ರಗಳ ಮೇಲೆ ಒತ್ತನ್ನು ಹಾಕಲಾಗುವುದು. ಇದಕ್ಕೆ ಕೂಡಿಸಿ, ದಾವೀದ ಮತ್ತು ತಿಮೊಥೆಯರಂತಹ ಗಮನಾರ್ಹ ಬೈಬಲ್ ಮಾದರಿಗಳನ್ನು ಅನುಕರಿಸಿ, ಆತ್ಮಿಕ ಚಟುವಟಿಕೆಗಳ ಸುತ್ತಲೂ ತಮ್ಮ ಜೀವಿತಗಳನ್ನು ಕಟ್ಟಲು ಯುವ ಜನರು ಪ್ರೋತ್ಸಾಹಿಸಲ್ಪಡುವರು. ಹಿರಿಯ ವ್ಯಕ್ತಿಗಳ ನಿಷ್ಠೆಯು ಎತ್ತಿತೋರಿಸಲ್ಪಡುವಾಗಲೂ, ನಮ್ಮ ನಂಬಿಕೆಯು ಬಲಗೊಳಿಸಲ್ಪಡುವುದು. ಹೊಸದಾಗಿ ಸಮರ್ಪಿತರಾದ ಅರ್ಹ ವ್ಯಕ್ತಿಗಳು ದೀಕ್ಷಾಸ್ನಾನ ಪಡೆದುಕೊಳ್ಳಲು ಶಕ್ತರಾಗಿರುವರು. ಸಮ್ಮೇಳನದ ದಿನಕ್ಕೆ ಸಾಕಷ್ಟು ಮುಂಚೆಯೇ, ಆ ಬಯಕೆಯ ಕುರಿತಾಗಿ ಅವರು ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸಬೇಕು.
3 ವಿಶೇಷ ಸಮ್ಮೇಳನ ದಿನದ ಮುಖ್ಯ ಭಾಷಣಕ್ಕೆ “ಯೆಹೋವನ ಚಿತ್ತವನ್ನು ಮಾಡಲು ಆತನಿಂದ ಕಲಿಸಲ್ಪಡುವುದು” ಎಂಬ ಶೀರ್ಷಿಕೆಯಿದೆ. ನಾವೆಲ್ಲರೂ ಕಲಿಯುತ್ತಾ, ನಂಬಿಕೆಯಲ್ಲಿ ಸದೃಢರಾಗುತ್ತಾ, ಪ್ರಗತಿಯನ್ನು ಮಾಡುತ್ತಾ ಮುಂದುವರಿಯುವ ಅಗತ್ಯ ಏಕೆ ಇದೆಯೆಂಬುದರ ಕಾರಣಗಳನ್ನು ಅದು ಒತ್ತಿಹೇಳುವುದು. ನಿತ್ಯಜೀವಕ್ಕೆ ನಡಿಸುವ ಸತ್ಯವನ್ನು ಇತರರಿಗೆ ಕಲಿಸುವ ಮೂಲಕ ಯೆಹೋವನನ್ನು ಅನುಕರಿಸುವಂತೆ ನಾವು ಉತ್ತೇಜಿಸಲ್ಪಡುವೆವು. ಸೊಸೈಟಿಯ ಪ್ರಕಾಶನಗಳು ಅನೇಕರಿಗೆ ಯೆಹೋವನಿಂದ ಶಿಕ್ಷಿತರಾಗಲು ಸಹಾಯ ಮಾಡಿರುವ ವಿಧವನ್ನು ತೋರಿಸಲಿಕ್ಕಾಗಿ, ಭಕ್ತಿವರ್ಧಕ ಅನುಭವಗಳು ಸೇರಿಸಲ್ಪಡುವವು. ಯೆಹೋವನ ಭೌಗೋಲಿಕ ಕಲಿಸುವಿಕೆಯ ಕಾರ್ಯಕ್ರಮದ ಸಕಾರಾತ್ಮಕ ಸಾಧನೆಗಳು ಎತ್ತಿತೋರಿಸಲ್ಪಡುವವು.
4 ಹಾಜರಾಗಲಿಕ್ಕಾಗಿ ಖಡಾಖಂಡಿತವಾದ ಯೋಜನೆಗಳನ್ನು ಮಾಡಿರಿ. ಎಲ್ಲಾ ಆಸಕ್ತ ವ್ಯಕ್ತಿಗಳನ್ನು ಉಪಸ್ಥಿತರಿರುವಂತೆ ಪ್ರೋತ್ಸಾಹಿಸಿರಿ. ನಮ್ಮ ಮಹಾ ಉಪದೇಶಕನಿಂದ ಅನೇಕ ಸುವಿಷಯಗಳು ಕಲಿಸಲ್ಪಡುವುದಕ್ಕಾಗಿ ಎದುರುನೋಡಿರಿ.—ಯೆಶಾ. 30:20.