ಪ್ರಶ್ನಾ ರೇಖಾಚೌಕ
◼ ಜ್ಞಾನ ಪುಸ್ತಕದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಎಷ್ಟು ಸಮಯದ ವರೆಗೆ ಒಂದು ವಿಧಿರೂಪದ ಅಧ್ಯಯನವು ನಡೆಸಲ್ಪಡಬೇಕು?
ಯೆಹೋವನು ಇಂದು ತನ್ನ ಸಂಸ್ಥೆಯನ್ನು ಆಶೀರ್ವದಿಸುತ್ತಿದ್ದಾನೆ. ಪ್ರತಿ ವರ್ಷ ಸಾವಿರಾರು ಹೊಸಬರು ಸತ್ಯದ ಪರವಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳುವಾಗ, ನಾವು ಇದರ ರುಜುವಾತನ್ನು ನೋಡುತ್ತೇವೆ. ಇದನ್ನು ಪೂರೈಸುವುದರಲ್ಲಿ ಜ್ಞಾನ ಪುಸ್ತಕವು ಒಂದು ಪರಿಣಾಮಕಾರಿಯಾದ ಉಪಕರಣವಾಗಿ ಪರಿಣಮಿಸುತ್ತಿದೆ. ಈ ಪುಸ್ತಕವು ಒಬ್ಬ ಬೈಬಲ್ ವಿದ್ಯಾರ್ಥಿಯು ಸಾಧಾರಣಮಟ್ಟಿಗೆ ಕ್ಷಿಪ್ರವಾಗಿ, ಪ್ರಾಯಶಃ ಕೆಲವೇ ತಿಂಗಳುಗಳೊಳಗೆ ದೀಕ್ಷಾಸ್ನಾನದ ಹಂತವನ್ನು ತಲಪುವಷ್ಟರ ವರೆಗೆ, ಆತ್ಮಿಕ ಪ್ರಗತಿಯನ್ನು ಮಾಡಲಿಕ್ಕಾಗಿ ಸಹಾಯ ಮಾಡಲು ವಿನ್ಯಾಸಿಸಲ್ಪಟ್ಟಿದೆ ಎಂದು ಕಾವಲಿನಬುರುಜು ಪತ್ರಿಕೆಯ ಜನವರಿ 15, 1996ರ ಸಂಚಿಕೆಯು ಹೇಳಿತು.
ಇದೇ ಕಾರಣಕ್ಕಾಗಿ, ಅದೇ ಕಾವಲಿನಬುರುಜು ಪತ್ರಿಕೆಯು, ಪುಟ 17ರಲ್ಲಿ ಸಲಹೆ ನೀಡಿದ್ದು: “ಜ್ಞಾನ ಪುಸ್ತಕದಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಬಲ್ ಅಧ್ಯಯನವನ್ನು ಮುಗಿಸಿ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ, . . . ಎರಡನೆಯ ಪುಸ್ತಕವನ್ನು ಅವನೊಂದಿಗೆ ವಿಧಿರೂಪವಾಗಿ ಅಧ್ಯಯನಿಸುವ ಅಗತ್ಯವಿಲ್ಲದಿರಬಹುದು.”
ಜ್ಞಾನ ಪುಸ್ತಕವನ್ನು ಪೂರ್ಣಗೊಳಿಸಿದ ನಂತರವೂ ದೀಕ್ಷಾಸ್ನಾನ ಪಡೆಯದ ಒಬ್ಬ ವ್ಯಕ್ತಿಯ ಕುರಿತಾಗಿ ಏನು? ಜ್ಞಾನ ಪುಸ್ತಕವನ್ನು ಪೂರ್ಣಗೊಳಿಸಿದ ನಂತರ ಅದೇ ವಿದ್ಯಾರ್ಥಿಯೊಂದಿಗೆ ಹೆಚ್ಚಿನ ಪುಸ್ತಕಗಳನ್ನು ಅಭ್ಯಾಸಿಸದಿರುವ ಕುರಿತಾಗಿ ಕಾವಲಿನಬುರುಜು ಪತ್ರಿಕೆಯಲ್ಲಿ ಹೇಳಲ್ಪಟ್ಟಿರುವ ವಿಷಯವನ್ನು, ಜೂನ್ 1996ರ ನಮ್ಮ ರಾಜ್ಯದ ಸೇವೆಯು, ಪುಟ 6, ಪ್ಯಾರಗ್ರಾಫ್ 23ರಲ್ಲಿ ನಮಗೆ ಜ್ಞಾಪಿಸಿತು. ಈ ಹಂತಕ್ಕೂ ಮೀರಿ ಒಬ್ಬ ಬೈಬಲ್ ವಿದ್ಯಾರ್ಥಿಗೆ ಸಹಾಯ ಮಾಡಲು ನಾವು ಆಸಕ್ತರಾಗಿಲ್ಲವೆಂಬುದನ್ನು ಇದು ಅರ್ಥೈಸುತ್ತದೊ? ಇಲ್ಲ. ಸತ್ಯದ ಕುರಿತಾದ ಮೂಲಭೂತವಾದ ಜ್ಞಾನವನ್ನು ಜನರು ಪಡೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆದರೂ, ಸಂಬಂಧಿತವಾಗಿ ಒಂದು ಸ್ವಲ್ಪ ಸಮಯಾವಧಿಯೊಳಗೆ, ಒಬ್ಬ ಪರಿಣಾಮಕಾರಿಯಾದ ಶಿಕ್ಷಕನು, ಪ್ರಾಮಾಣಿಕನಾದ ಸಾಮಾನ್ಯ ವಿದ್ಯಾರ್ಥಿಗೆ, ಯೆಹೋವನನ್ನು ಸೇವಿಸಲು ಒಂದು ಬುದ್ಧಿಮತ್ತೆಯ ನಿರ್ಣಯವನ್ನು ಮಾಡಲು ಸಾಕಾಗುವಷ್ಟು ಜ್ಞಾನವನ್ನು ಗಳಿಸಲಿಕ್ಕಾಗಿ ನೆರವು ನೀಡಲು ಶಕ್ತನಾಗಿರುವನೆಂದು ನಿರೀಕ್ಷಿಸಲಾಗುತ್ತದೆ. ತಮ್ಮ ವೈಯಕ್ತಿಕ ಪರಿಸ್ಥಿತಿಗಳ ಕಾರಣದಿಂದಾಗಿ, ಕೆಲವು ಬೈಬಲ್ ವಿದ್ಯಾರ್ಥಿಗಳು ಒಂದು ವಾರದಲ್ಲಿ ಒಂದಕ್ಕಿಂತ ಹೆಚ್ಚು ಸಲ ಅಭ್ಯಾಸಿಸಲು ಆಶಿಸಲೂಬಹುದು.
ಕೆಲವು ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚು ನಿಧಾನವಾಗಿ ಪ್ರಗತಿಮಾಡುವರೆಂಬುದು ಒಪ್ಪತಕ್ಕ ವಿಷಯ. ಆದರೆ, ಸಾಮಾನ್ಯವಾದುದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದು, ಜ್ಞಾನ ಪುಸ್ತಕವನ್ನು ಅಭ್ಯಾಸಿಸಿದ ನಂತರ, ಆ ವ್ಯಕ್ತಿಯು ಸಭೆಯೊಂದಿಗೆ ಸಹವಾಸಿಸಲು ಬಯಸುತ್ತಾನೆಂಬುದನ್ನು ನಿರ್ಣಯಿಸದಿರುವಲ್ಲಿ, ಪ್ರಚಾರಕನು ಆ ಸನ್ನಿವೇಶವನ್ನು ಸಭಾ ಸೇವಾ ಕಮಿಟಿಯೊಂದಿಗೆ ಚರ್ಚಿಸುವುದು ಉತ್ತಮವಾಗಿರುವುದು. ಆಧಿಕ್ಯಕಮ್ಮಿಯ ಅಥವಾ ಅಸಾಮಾನ್ಯವಾದ ಪರಿಸ್ಥಿತಿಗಳು ಒಳಗೂಡಿರುವಲ್ಲಿ, ಸ್ವಲ್ಪ ಹೆಚ್ಚಿನ ಸಹಾಯವು ಕೊಡಲ್ಪಡಬಹುದು. ಇದು, ಜನವರಿ 15, 1996ರ ಕಾವಲಿನಬುರುಜು ಪತ್ರಿಕೆಯ ಪುಟ 17ರಲ್ಲಿರುವ ಪ್ಯಾರಗ್ರಾಫ್ 11 ಮತ್ತು 12ರಲ್ಲಿ ಏನು ತಿಳಿಸಲ್ಪಟ್ಟಿದೆಯೊ ಆ ತತ್ವಕ್ಕೆ ಹೊಂದಿಕೆಯಲ್ಲಿದೆ.
ಸತ್ಯದ ಒಂದು ಮೂಲಭೂತವಾದ ಜ್ಞಾನವನ್ನೂ ಪಡೆಯಲಿಕ್ಕಾಗಿರುವ ಗಣ್ಯತೆಯು, ವಿದ್ಯಾರ್ಥಿಯನ್ನು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಪ್ರಚೋದಿಸತಕ್ಕದ್ದು. ಯೆಹೋವನನ್ನು ಸೇವಿಸಲಿಕ್ಕಾಗಿ ತನ್ನ ಅಭಿಲಾಷೆಯ ಯಾವುದೊ ಸ್ಪಷ್ಟವಾದ ರುಜುವಾತನ್ನು ಕೊಡುವಂತೆ ಇದು ವಿದ್ಯಾರ್ಥಿಯನ್ನು ನಡೆಸಸಾಧ್ಯವಿದೆ. ಜ್ಞಾನ ಪುಸ್ತಕದಲ್ಲಿನ ಅಭ್ಯಾಸವು ಒಂದು ವಿಸ್ತೃತವಾದ ಅವಧಿಯ ವರೆಗೆ ನಡೆಸಲ್ಪಟ್ಟ ನಂತರ, ಅಂತಹ ಆತ್ಮಿಕ ಗಣ್ಯತೆಯು ವ್ಯಕ್ತವಾಗದಿರುವಲ್ಲಿ, ಅಭ್ಯಾಸವನ್ನು ನಿಲ್ಲಿಸುವುದು ಸೂಕ್ತವಾಗಿರಬಹುದು.