“ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?”
1 ಸುಂದರ, ಸ್ಫೂರ್ತಿದಾಯಕ ಹಾಗೂ ಹೃದಯೋಲ್ಲಾಸದ ಒಂದು ಸಂದೇಶವು ಲೋಕವ್ಯಾಪಕವಾಗಿ 169 ಭಾಷೆಗಳಲ್ಲಿ ಘೋಷಿಸಲ್ಪಡಲಿದೆ. ಈ ಸಂದೇಶವು ಏನಾಗಿದೆ? ಮತ್ತು ಅದು ಹೇಗೆ ತಲಪಿಸಲ್ಪಡುವುದು?
2 ಈ ಸಂದೇಶವು ನೆರೆಯವರ ಕಡೆಗಿನ ಪ್ರೀತಿಯ ಕುರಿತಾಗಿದೆ. ಇದನ್ನು “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬ ಶೀರ್ಷಿಕೆಯುಳ್ಳ ರಾಜ್ಯ ವಾರ್ತೆ ನಂ. 35ರಲ್ಲಿ ಕಂಡುಕೊಳ್ಳಲಾಗುವುದು. ಇಷ್ಟೊಂದು ಮನೋವ್ಯಥೆ ಹಾಗೂ ನೋವಿನ ಮೂಲಕಾರಣವು, ಜನರ ನಡುವಿನ ಪ್ರೀತಿಯ ಕೊರತೆಯೇ ಎಂಬುದನ್ನು ತೋರಿಸುತ್ತಾ, ಈ ರಾಜ್ಯ ವಾರ್ತೆಯು ಲೋಕದಾದ್ಯಂತ ಈಗಿರುವ ಸಂಗತಿಗಳನ್ನು ಸಂಕ್ಷಿಪ್ತವಾಗಿ ಪರೀಕ್ಷಿಸುತ್ತದೆ. ನಮ್ಮ ದಿನದಲ್ಲಿ ನೆರೆಯವರ ಕಡೆಗಿನ ಪ್ರೀತಿಯು ಏಕೆ ತಣ್ಣಗಾಗಿಹೋಗಿದೆ ಹಾಗೂ ಇದು ಭವಿಷ್ಯತ್ತಿಗಾಗಿ ಏನನ್ನು ಅರ್ಥೈಸುತ್ತದೆ ಎಂಬುದನ್ನು ಇದು ವಿಶೇಷವಾಗಿ ವಿವರಿಸುತ್ತದೆ.
3 ಅದೇ ಸಮಯದಲ್ಲಿ, ಇಂದಿನ ಲೋಕದಲ್ಲಿ ಜೀವಿಸುತ್ತಿರುವ ಲಕ್ಷಾಂತರ ಜನರ ಮಧ್ಯೆ, ನೆರೆಯವರ ಕಡೆಗಿನ ನಿಜ ಪ್ರೀತಿ ಅಸ್ತಿತ್ವದಲ್ಲಿದೆ ಎಂಬುದನ್ನು ರಾಜ್ಯ ವಾರ್ತೆ ನಂ. 35 ತೋರಿಸುತ್ತದೆ. ಪ್ರಾಚೀನ ಕ್ರೈಸ್ತತ್ವದ—ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ನೆರೆಯವರ ಕಡೆಗಿನ ಪ್ರೀತಿಯಿಂದ ಗುರುತಿಸಲ್ಪಟ್ಟಿದ್ದ ಪ್ರಥಮ ಶತಮಾನದ ಆರಾಧನೆಯ—ಪುನರುಜ್ಜೀವನದಲ್ಲಿ ಪಾಲ್ಗೊಳ್ಳುತ್ತಿರುವವರನ್ನು ಇದು ಗುರುತಿಸುತ್ತದೆ.—ಲೂಕ 10:25-37.
4 ಕ್ರಿಸ್ತನ ಮೂಲಕ ದೇವರ ರಾಜ್ಯದ ಆಡಳಿತದ ಕೆಳಗೆ ಮಾನವಕುಲದ ಇಡೀ ಲೋಕವು ಹೇಗೆ ಶೀಘ್ರದಲ್ಲೇ ನೆರೆಯವರ ಕಡೆಗಿನ ಪ್ರೀತಿಯನ್ನು ತೋರಿಸುತ್ತಿರುವುದು ಎಂಬುದರ ವಿವರಣೆಯೊಂದಿಗೆ ರಾಜ್ಯ ವಾರ್ತೆ ನಂ. 35 ಮುಕ್ತಾಯಗೊಳ್ಳುತ್ತದೆ. ಈ ಸಂದೇಶವನ್ನು ಓದುತ್ತಿರುವವರು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಪಡೆದುಕೊಳ್ಳುವಂತೆ ಹಾಗೂ ದೇವರ ವಾಕ್ಯದಲ್ಲಿ ಸವಿವರವಾಗಿ ವರ್ಣಿಸಲ್ಪಟ್ಟಿರುವ ಈ ಭೂವ್ಯಾಪಕವಾದ ಪ್ರೀತಿಪರ ಏರ್ಪಾಡಿನ ಒಂದು ಭಾಗವಾಗುವ ವಿಧವನ್ನು ಕಲಿತುಕೊಳ್ಳುವಂತೆ ಉತ್ತೇಜಿಸಲ್ಪಡುತ್ತಾರೆ.
5 ಈ ಸಂದೇಶವನ್ನು ಯಾರು ತಲಪಿಸುವರು? ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ, ತಮ್ಮ ಪರಿಚಯಸ್ಥರು, ನೆರೆಯವರು, ಹಾಗೂ ಸಂಬಂಧಿಕರೊಂದಿಗೆ ಈ ನೆರೆಯವರ ಕಡೆಗಿನ ಪ್ರೀತಿಯ ಸಂದೇಶವನ್ನು ಹಂಚಿಕೊಳ್ಳುವರು. ಅರ್ಹರಾದವರೆಲ್ಲರೂ ರಾಜ್ಯ ವಾರ್ತೆ ನಂ. 35ರ ಬಹಿರಂಗ ವಿತರಣೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲ್ಪಡುತ್ತಾರೆ.
6 ಈ ಕಾರ್ಯಾಚರಣೆಯ ಮೂಲಭೂತ ಗುರಿಯು, ಅಪೇಕ್ಷಿಸು ಬ್ರೋಷರ್ ಇಲ್ಲವೇ ಜ್ಞಾನ ಪುಸ್ತಕದಲ್ಲಿ ಒಂದು ಬೈಬಲ್ ಅಭ್ಯಾಸವನ್ನು ಪಡೆದುಕೊಳ್ಳುವುದರಲ್ಲಿ ಜನರ ಆಸಕ್ತಿಯನ್ನು ಪ್ರಚೋದಿಸುವುದೇ ಆಗಿದೆ. ಇನ್ನೂ ಹೆಚ್ಚಾಗಿ, ಯೆಹೋವನ ಸೇವಕರಲ್ಲಿ ಪ್ರತಿಯೊಬ್ಬರ ವತಿಯಿಂದ ಮಾಡಲ್ಪಡುವ ಪೂರ್ಣಹೃದಯದ ಪ್ರಯತ್ನವು, ಪ್ರೀತಿಪರ ದೇವರಾದ ಯೆಹೋವ ಹಾಗೂ ಆತನ ಮಗನಾದ ಯೇಸು ಕ್ರಿಸ್ತನಿಗೆ ಭವ್ಯವಾದೊಂದು ಸಾಕ್ಷಿಯಲ್ಲಿ ಫಲಿಸುವುದು.