ಕೂಟಗಳಲ್ಲಿ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಿರಿ
1 ಪ್ರೀತಿಸಲು ಮತ್ತು ಸತ್ಕಾರ್ಯಮಾಡಲಿಕ್ಕಾಗಿ ಒಬ್ಬರನ್ನೊಬ್ಬರನ್ನು ಪ್ರೇರೇಪಿಸುವಂತೆ’ ನಮಗೆ ಇಬ್ರಿಯ 10:24ರಲ್ಲಿ ಬುದ್ಧಿವಾದವು ಕೊಡಲ್ಪಟ್ಟಿದೆ. ಇದು, ಸಭಾ ಕೂಟಗಳಲ್ಲಿ ಅರ್ಥಪೂರ್ಣ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸುವುದನ್ನು ಒಳಗೊಳ್ಳುತ್ತದೆ. ನಾವು ಏಕೆ ಉತ್ತರಗಳನ್ನು ಕೊಡಬೇಕು? ಇದನ್ನು ನಾವು ಹೇಗೆ ಮಾಡಸಾಧ್ಯವಿದೆ? ಇದರಿಂದ ಯಾರಿಗೆ ಪ್ರಯೋಜನವಾಗುವುದು?
2 ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿ, ನಿಮ್ಮ ಆತ್ಮಿಕತೆಯನ್ನು ಬಲಪಡಿಸುವಂತಹ ರೀತಿಯಲ್ಲಿ, ಸರಳವೂ ಸ್ಪಷ್ಟವೂ ಆದಂತಹ ಉತ್ತರಗಳನ್ನು ಇತರರು ಕೊಡುವಾಗ, ನಿಮಗಾದ ಪ್ರಯೋಜನವನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿರಿ. ಅವರಿಗೂ ತದ್ರೀತಿಯಲ್ಲಿ ಪ್ರಯೋಜನವಾಗುವಂತೆ ಉತ್ತರಗಳನ್ನು ಕೊಡುವ ಸುಯೋಗ ನಿಮಗಿದೆ. ನೀವು ಕೂಟಗಳಲ್ಲಿ ಭಾಗವಹಿಸುವಾಗ, ಹಾಜರಾಗಿರುವವರೆಲ್ಲರನ್ನು ಉತ್ತೇಜಿಸಲಿಕ್ಕಾಗಿ, ‘ಆತ್ಮಿಕ ವರದಾನವನ್ನು ನೀಡಲಿಕ್ಕೆ’ ನಿಮಗಿರುವ ಅಭಿಲಾಷೆಯನ್ನು ನೀವು ತೋರಿಸುತ್ತೀರಿ.–ರೋಮ. 1:11, 12,NW.
3 ಒಳ್ಳೆಯ ಉತ್ತರಗಳನ್ನು ಬೇಗೆ ಕೊಡುವುದು?: ಪ್ಯಾರಗ್ರಾಫ್ನ್ನಲ್ಲಿರುವ ಪ್ರತಿಯೊಂದು ವಿಷಯಗಳನ್ನು ಆವರಿಸುತ್ತಾ, ತುಂಬ ಉದ್ದವಾದ ಉತ್ತರಗಳನ್ನು ಕೊಡಬೇಡಿ. ಉದ್ದವಾದ ಉತ್ತರಗಳು, ಸಾಮಾನ್ಯವಾಗಿ ಸ್ಪಷ್ಟವಾದ ಉತ್ತರವನ್ನು ಎತ್ತಿತೋರಿಸಲು ತಪ್ಪಿಹೋಗುತ್ತವೆ. ಮತ್ತು ಇದು ಇತರರನ್ನು ಆ ಉತ್ತರದಲ್ಲಿ ಪಾಲ್ಗೊಳ್ಳುವುದರಿಂದ ನಿರುತ್ತೇಜಿಸಬಹುದು. ಒಂದು ಪ್ಯಾರಾಗ್ರಾಫ್ನ ಉತ್ತರವನ್ನು ನೀಡುವಾಗ, ಮೊದಲನೆಯ ಉತ್ತರವೂ ಸಂಕ್ಷಿಪ್ತವೂ, ಮುದ್ರಿತ ಪ್ರಶ್ನೆಗೆ ನೇರವಾದ ಉತ್ತರವೂ ಆಗಿರತಕ್ಕದು. ಅದಕ್ಕೆ ಕೂಡಿಸಿ ಹೆಚ್ಚಿನ ಉತ್ತರಗಳನ್ನು ಕೊಡುವವರು, ವಿಷಯವನ್ನು ವೈಯಕ್ತಿಕವಾಗಿ ಅನ್ವಯಿಸುವ ರೀತಿ ಇಲ್ಲವೇ ಶಾಸ್ತ್ರವಚನಗಳು ಅದಕ್ಕೆ ಹೇಗೆ ಸಂಬಂಧಿಸುತ್ತವೆ ಎಂಬುದನ್ನು ತೋರಿಸಸಾಧ್ಯವಿದೆ. ಸ್ಕೂಲ್ ಗೈಡ್ಬುಕ್, 90-2 ಪುಟಗಳನ್ನು ನೋಡಿರಿ.
4 ಉತ್ತರಗಳನ್ನು ಕೊಡುವ ಯೋಚನೆಯೇ ನಿಮಗೆ ಗಾಬರಿಯನ್ನು ಉಂಟುಮಾಡುವುದಾದರೆ, ಮೊದಲೆ ಒಂದು ಸಂಕ್ಷಿಪ್ತ ಉತ್ತರಗಳನ್ನು ತಯಾರಿಸಿ, ಆ ಪ್ಯಾರಗ್ರಾಫ್ನ ಪ್ರಶ್ನೆಯನ್ನು ನಿಮಗೆ ಕೇಳುವಂತೆ ಅದರ ನಿರ್ವಾಹಕನಿಗೆ ಹೇಳಿರಿ. ಹೀಗೆ ಕೆಲವೊಂದು ಕೂಟಗಳಲ್ಲಿ ಮಾಡಿದ ಬಳಿಕ, ನಿಮಗೆ ಭಾಗವಹಿಸುವುದಕ್ಕೆ ಹೆಚ್ಚು ಸುಲಭವಾಗುವುದು. ಎಲ್ಲರ ಮುಂದೆ ಮಾತಾಡಲು ತಮಗಿರುವ ಸಾಮರ್ಥ್ಯದಲ್ಲಿ ಭರವಸೆಯ ಕೊರತೆಯನ್ನು ಮೋಶೆ ಮತ್ತು ಯೆರೆಮೀಯರು ವ್ಯಕ್ತಪಡಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. (ವಿಮೋ. 4:10; ಯೆರೆ 1:6) ಆದರೆ, ಯೆಹೋವನು ಅವನಿಗೆ ತನ್ನ ಪರವಾಗಿ ಮಾತಾಡಲು ಸಹಾಯಮಾಡಿದನು ಮತ್ತು ಅದೇ ರೀತಿಯಲ್ಲಿ ಆತನು ನಿಮಗೆ ಸಹ ಸಹಾಯಮಾಡುವನು.
5 ನಿಮ್ಮ ಉತ್ತರಗಳಿಂದ ಯಾರಿಗೆ ಪ್ರಯೋಜನವಾಗುವುದು? ನೀವೇ ಸ್ವತಃ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನೀವು ಕೊಡುವ ಉತ್ತರಗಳು, ಸತ್ಯವನ್ನು ನಿಮ್ಮ ಹೃದಮನಗಳಲ್ಲಿ ಇನ್ನೂ ಹೆಚ್ಚು ದೃಢವಾಗಿ ಅಚ್ಚೊತ್ತುವುದು. ಇದು ನಿಮಗೆ ಮುಂದೆ ಎಂದಾದರೂ ಆ ವಿಷಯವನ್ನು ಜ್ಞಾಪಿಸಿಕೊಳ್ಳಲು ಸುಲಭವನ್ನಾಗಿ ಮಾಡುವುದು. ಅಷ್ಟುಮಾತ್ರವಲ್ಲದೇ, ನೀವು ಕೊಡುವ ಪ್ರೋತ್ಸಾಹಕರ ಉತ್ತರಗಳನ್ನು ಕೇಳಿಸಿಕೊಳ್ಳುವುದರಿಂದ ಇತರರರು ಸಹ ಪ್ರಯೋಜನವನ್ನು ಪಡೆದುಕೊಳ್ಳುವರು. ಅನುಭವಸ್ಥರಾಗಿರಲಿ, ಯುವಕರಾಗಿರಲಿ, ನಾಚಿಕೆಸ್ವಭಾವದವರಾಗಿರಲಿ ಇಲ್ಲವೇ ಹೊಸಬರೇ ಆಗಿರಲಿ, ಎಲ್ಲರೂ ಸಭಾ ಕೂಟಗಳಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸಲು ಪ್ರಯತ್ನವನ್ನು ಮಾಡುವಾಗ, ಅದರಿಂದ ನಾವು ಉತ್ತೇಜಿಸಲ್ಪಡುತ್ತೇವೆ.
6 ಕೂಟಗಳಲ್ಲಿ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಲಿಕ್ಕೋಸ್ಕರ ಮಾತುಗಳನ್ನಾಡುವಾಗ, ‘ಸಮಯೋಚಿತವಾದ ಮಾತು ಸ್ವಾರಸ್ಯಕರ’ ಎಂಬುದು ನಿಜವಾಗಿರುವುದನ್ನು ನಾವು ಕಂಡುಕೊಳ್ಳುವುದು ಖಂಡಿತ.–ಜ್ಞಾನೋ. 15:23, NW.